A series of haunting poems (ನಿರಂತರ ಕಾಡುವ ಕವಿತೆಗಳ ಸರಣಿ)

SANTOSH KULKARNI
By -
ನೀ ಇರದ ಬಾಳಿನಲ್ಲಿ - ಭಾವಗೀತೆ 

ದನಿ ಇರದ ಬಾಳಿನಲ್ಲಿ
ಕೊಳಲಾದೆ ನೀನು
ನಿನ್ನೊಲುಮೆ ರಾಗವ ನುಡಿಸಿ
ಮರುಳಾದೆ ನಾನು
ಕನಸಿನಲೂ ನಿನ್ನದೆ ರೂಪು
ಶೃಂಗಾರ ಸುಮವಾಗಿ
ಬಯಕೆ ಶ್ರುತಿ ಭಾವಗಳಲ್ಲಿ
ಸಂಬಂಧ ಇನಿದಾಗಿ
ಸಂಗೀತ ಎದೆಯೊಳು ತುಂಬಿ
ನಾನಾದೆ ನಾದದ ದುಂಬಿ
ಗಂಧರ್ವ ಗಾನ ಗಂಗೆ
ತವರೂರು ನೀನಾಗಿ
ಸಂಗೀತ ಗಾಯನ ಹರಿಸೋ
ನಿಜ ರಸಿಕ ನಾನಾಗಿ
ಆಲಾಪದೇರಿಳಿತದಲಿ
ನಾ ಮಿಡಿದೆ ಮೋಹನ ಮುರಲಿ