Sunday, May 23, 2021

ಚಂಡಮಾರುತದ ವಿಧಗಳು

🌷 ಚಂಡಮಾರುತಗಳನ್ನು ಎಂಟು ವಿಧಗಳನ್ನಾಗಿ ವರ್ಗೀಕರಿಸಲಾಗಿದೆ...

- ಕಡಿಮೆ ಒತ್ತಡದ ಪ್ರದೇಶ (Low-pressure area): ಇಲ್ಲಿ ಗಾಳಿಯ ವೇಗವು ಗಂಟೆಗೆ 31 ಕಿ.ಮೀಗಿಂತ ಕಡಿಮೆ ಇರುತ್ತದೆ.

- ವಾಯುಭಾರ ಕುಸಿತ(Depression): ಕಡಿಮೆ ವೇಗದ ಬಿರುಗಾಳಿಗೆ ಈ ರೀತಿ ಕರೆಯುತ್ತಾರೆ. ಇಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 31ರಿಂದ 49 ಕಿ.ಮೀ ವರೆಗೆ ಇರುತ್ತದೆ.

- ತೀವ್ರ ವಾಯುಭಾರ ಕುಸಿತ(Deep depression): ವಾಯುಭಾರ ಕುಸಿತ ತೀವ್ರಗೊಂಡಾಗಿನ ಸ್ಥಿತಿ. ಈ ಸ್ಥಿತಿಯಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 50ರಿಂದ 61 ಕಿ.ಮೀ ಕಿ.ಮೀನಷ್ಟಿರುತ್ತದೆ.

- ಚಂಡಮಾರುತ(Cyclonic storm): ತೀವ್ರ ವಾಯುಭಾರ ಕುಸಿತವು ಬಿರುಗಾಳಿಯಾಗಿ ಬದಲಾಗುತ್ತದೆ. ಇಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 62ರಿಂದ 88 ಕಿ.ಮೀ ವರೆಗೆ ಇರುತ್ತದೆ.

- ತೀವ್ರ ಚಂಡಮಾರುತ(Severe cyclonic storm): ಗಾಳಿಯ ವೇಗ ಪ್ರತಿ ಗಂಟೆಗೆ 89ರಿಂದ117 ಕಿ.ಮೀನಷ್ಟಿರುತ್ತದೆ.

- ಉಗ್ರ ಚಂಡಮಾರುತ(Very Severe cyclonic storm): ಪ್ರತಿ ಗಂಟೆಗೆ ಗಾಳಿಯ ವೇಗ 118ರಿಂದ 167 ಕಿ.ಮೀವರೆಗೆ ಇರುತ್ತದೆ.

- ಅತ್ಯುಗ್ರ ಚಂಡಮಾರುತ(Extremely severe cyclonic storm): ಇಲ್ಲಿ ಗಾಳಿಯು ಪ್ರತಿ ಗಂಟೆಗೆ 168ರಿಂದ 221ಕಿ.ಮೀ ವೇಗದಲ್ಲಿ ಬೀಸುತ್ತದೆ.

- ಸೂಪರ್‌ ಚಂಡಮಾರುತ(Super cyclonic storm): ಚಂಡಮಾರುತಗಳ ವರ್ಗೀಕರಣದಲ್ಲಿ ಇದು ಕೊನೆಯ ವಿಧ. ಪ್ರತಿ ಗಂಟೆಗೆ 222 ಕಿ.ಮೀಗಿಂತ ಹೆಚ್ಚು ವೇಗದ ಚಂಡಮಾರುತ ಈ ವರ್ಗಕ್ಕೆ ಸೇರುತ್ತದೆ.

No comments:

ಚರ್ಮದ ತುರಿಕೆ? ಹಾಗಾದರೆ ಈ 6 ಮನೆಮದ್ದುಗಳನ್ನು ಪ್ರಯತ್ನಿಸಿ

  ಚರ್ಮದ ತುರಿಕೆ ತುಂಬಾ ಕಿರಿಕಿರಿ ಉಂಟುಮಾಡುತ್ತದೆ. ನೀವು ಹೆಚ್ಚು ಕೆರೆದುಕೊಂಡರೆ ಮಾಡಿದರೆ, ಅದು ಹೆಚ್ಚು ತುರಿಕೆಯಾಗುತ್ತದೆ. ಅತಿಯಾದ ಕೆರೆಯುವಿಕೆ ಚರ್ಮವನ್ನು ಹಾನಿಗ...