Wednesday, November 20, 2024

ಸಮುದ್ರ ಆಳದ ಬಿಂದುಗಳನ್ನು ಸೇರಿಸುವ ರೇಖೆ

 ■.ಐಸೋಥರ್ಮ ━━━━━━━► ️️ಸಮಾನ ಪ್ರಮಾಣದ ಉಷ್ಣತೆಯ ಬಿಂದುಗಳನ್ನು ಸೇರಿಸುವ ರೇಖೆ


■.ಐಸೊಕೇಮ್ ━━━━━━━► ಸಮಾನ ಪ್ರಮಾಣದ ಚಳಿಗಾಲದ ಸರಾಸರಿ ಉಷ್ಣಾಂಶದ ಬಿಂದುಗಳನ್ನು ಸೇರಿಸುವ ರೇಖೆ

■.ಐಸೊನೆಫ್️ ━━━━━━━► ಸಮಾನ ಪ್ರಮಾಣದ ಮೋಡಗಳ ಬಿಂದುಗಳನ್ನು ಸೇರಿಸುವ ರೇಖೆ

■.ಐಸೋಐಪ್️ ━━━━━━━► ️ಸಮಾನ ಪ್ರಮಾಣದ ಸಮುದ್ರ ಮಟ್ಟದಿಂದ ಎತ್ತರದ ಬಿಂದುಗಳನ್ನು ಸೇರಿಸುವ ರೇಖೆ

■.ಐಸೋಗೋನಿಕ್️ ━━━━━━━► ️ಕಾಂತೀಯ ಕೋನವು ಸಮಾನವಾಗಿರುವ ಸ್ಥಳಗಳ ಬಿಂದುಗಳನ್ನು ಸೇರಿಸುವ ರೇಖೆ

■.ಐಸೋಹೆಲನ್ ━━━━━━━► ️ಸಮಾನ ಪ್ರಮಾಣದ ಸಮುದ್ರ ಲವಣಾಂಶದ ಬಿಂದುಗಳನ್ನು ಸೇರಿಸುವ ರೇಖೆ

■.ಐಸೊಬ್ರಾಂಡ್ಸ್ ━━━━━━━► ️ಗುಡುಗು ಸಿಡಿಲು ಸಮೇತ ಮಳೆಯಾಗುವ ಪ್ರದೇಶದ ಬಿಂದುಗಳನ್ನು ಸೇರಿಸುವ ರೇಖೆ.

■.ಐಸೋ ಹೆಲ್ ━━━━━━━► ️ಸಮಾನ ಪ್ರಮಾಣದ ಸೌರ ಪ್ರಕಾಶ / ️ಬಿಸಿಲಿನ ಅವಧಿಯ ಬಿಂದುಗಳನ್ನು ಸೇರಿಸುವ ರೇಖೆ

■.ಐಸೋಬಾರ್ ━━━━━━━► ಸಮಾನ ಪ್ರಮಾಣದ ವಾತಾವರಣದ ಒತ್ತಡದ ಬಿಂದುಗಳನ್ನು ಸೇರಿಸುವ ರೇಖೆ

■.ಐಸೋದೇರ್ ━━━━━━━► ಸಮಾನ ಪ್ರಮಾಣದ ️ಬೇಸಿಗೆಯ ಸರಾಸರಿ ಉಷ್ಣಾಂಶದ ಬಿಂದುಗಳನ್ನು ಸೇರಿಸುವ ರೇಖೆ

■.ಐಸೋಟ್ಯಾಚ್️ ━━━━━━━► ️ಸಮಾನ ಪ್ರಮಾಣದ ಗಾಳಿ / ಮಾರುತಗಳ ವೇಗದ ಬಿಂದುಗಳನ್ನು ಸೇರಿಸುವ ರೇಖೆ

■.ಐಸೊಹೈಟ್️ ━━━━━━━► ಸಮಾನ ಪ್ರಮಾಣದ ಮಳೆಯ ಪ್ರಮಾಣದ ಬಿಂದುಗಳನ್ನು ಸೇರಿಸುವ ರೇಖೆ

■.ಐಸೋ ನಿಫ್ ━━━━━━━► ️ಸಮಾನ ಪ್ರಮಾಣದ ಹಿಮದ ಪ್ರಮಾಣದ ಬಿಂದುಗಳನ್ನು ಸೇರಿಸುವ ರೇಖೆ

■.ಐಸೊಸಿಸ್ಮಲ್ ━━━━━━━► ️️ಭೂಕಂಪನ ತೀವ್ರತೆಯ ಬಿಂದುಗಳನ್ನು ಸೇರಿಸುವ ರೇಖೆ.

■.ಐಸೋರೈಮ್️ ━━━━━━━► ️ಸಮಾನ ಪ್ರಮಾಣದ ಹಿಮಗಡ್ಡೆಯ ಪ್ರಮಾಣ/ಮಂಜು ಬಿಂದುಗಳನ್ನು ಸೇರಿಸುವ ರೇಖೆ

Tuesday, November 19, 2024

ಚಂದಿರ ನಿಲ್ಲದ ಆ ಬಾನಿನಲ್ಲಿ lyrics

 ಚಂದಿರ ನಿಲ್ಲದ ಆ ಬಾನಿನಲ್ಲಿ


ಬೆಳದಿಂಗಳ ಹುಡುಕುವ ಒಬ್ಬ ಕುರುಡನು ನಾನಿಲ್ಲಿ

ಚಂದಿರ ನಿಲ್ಲದ ಆ ಬಾನಿನಲ್ಲಿ
ಬೆಳದಿಂಗಳ ಹುಡುಕುವ ಒಬ್ಬ ಕುರುಡನು ನಾನಿಲ್ಲಿ

ಕಂಡಿದ್ದು ಸುಳ್ಳು ... ಕಾಣದ್ದು ಸುಳ್ಳು
ನಿಜ ಹೇಳಲು ಬಾಯಿಲ್ಲ. ನನಗಿಲ್ಲಿ.ಈ ಈ ಈ

ದಿಕ್ಕಿಲ್ಲ ದೆಸೆಯಿಲ್ಲ ಅಳುವ
ಕಣ್ಣಿಗೆ ರೆಪ್ಪೆ ಗಳಿಲ್ಲ

ಚಂದಿರ ನಿಲ್ಲದ ಆ ಬಾನಿನಲ್ಲಿ
ಬೆಳದಿಂಗಳ ಹುಡುಕುವ ಒಬ್ಬ ಕುರುಡನು ನಾನಿಲ್ಲಿ


ರಾತ್ರಿಗಳೆಲ್ಲ ಸುಖದ ಕನಸುಗಳಾಗಿ
ಮತ್ತೆ ಹಗಲು ಗಳೆಲ್ಲ ದುಃಖ ದ ನೆನಪುಗಳಾಗಿ

ಪಾಪದ ಎತ್ತಿನ ಬಂ.ಡಿಯ ಚಕ್ಕಡಿಯಾಗಿ
ಈ ಕಾಲವೆಂಬ ಕೈಯಲಿ ತಕ್ಕಡಿಯಾಗಿ
ಬಾಳೋದೆ.ಏ ಏ ಏ.

ಇಲ್ಲಿ ದಿನದಿನಕು ಕಥೆಗಳಾಗಿ ಕಾಣುತ್ತಮ್ಮ‌
ಮನುಷ್ಯನಾಸೆಗಳೆ ವ್ಯಥೆಗಳಾಗಿ ಉಳಿಯುತ್ತಮ್ಮ

ವಿಧಿಯಾ..ಟ ..... ಹುಡುಗಾಟ
ಹೆತ್ತವನೆದೆಯಲಿ ಬೆಂಕಿಯ ಊಟ

ಚಂದಿರ ನಿಲ್ಲದ ಆ ಬಾನಿನಲ್ಲಿ

ಬೆಳದಿಂಗಳ ಹುಡುಕುವ ಒಬ್ಬ ಕುರುಡನು ನಾನಿಲ್ಲಿ

ಅರ್ಥವಿಲ್ಲದಿರುವ ಲೋಕ ನಮ್ಮದು
ಇಲ್ಲಿ ಸ್ವಾರ್ಥವೊಂದೆ ಬಡವನ ಆಳುವಂತದು

ಎಲ್ಲ ಇಲ್ಲಿ ಒಳ್ಳೆಯದು ಎಲ್ಲಾ ಕೆಟ್ಟದು
ಬಂದ ಹಾಗೆ ಪಡೆಯೋದೆ ಆ ದೇವರು ಕೊಟ್ಟದ್ದು
ನಂಬಿಕೆಯೆ ಏ ಏ ಏ ಏ ಏ

ಇಂತ ಊರು ಬಿಟ್ಟವರ ಕಾಯೋ ಊರುಗೋಲು
ಆದರೆ ಮೂರು ಬಿಟ್ಟವರ ಮುಂದೆ ಬುಡಮೇಲು
ಅದು ಯಾರೋ ಬರೆದೋರು
ಗಾಯದ ಮೇಲೆ ಬರೆ ಎಳೆದೋರು


ಚಂದಿರ ನಿಲ್ಲದ ಆ ಬಾನಿನಲ್ಲಿ

ಬೆಳದಿಂಗಳ ಹುಡುಕುವ ಒಬ್ಬ ಕುರುಡನು ನಾನಿಲ್ಲಿ

ಚಂದಿರ ನಿಲ್ಲದ ಆ ಬಾನಿನಲ್ಲಿ
ಬೆಳದಿಂಗಳ ಹುಡುಕುವ ಒಬ್ಬ ಕುರುಡನು ನಾನಿಲ್ಲಿ

ಕಂಡಿದ್ದು ಸುಳ್ಳು ... ಕಾಣದ್ದು ಸುಳ್ಳು
ನಿಜ ಹೇಳಲು ಬಾಯಿಲ್ಲ. ನನಗಿಲ್ಲಿ.....ಈ

ದಿಕ್ಕಿಲ್ಲ ದೆಸೆಯಿಲ್ಲ ಅಳುವ ಕಣ್ಣಿಗೆ
ರೆಪ್ಪೆ ಗಳಿಲ್ಲ


ಚಂದಿರ ನಿಲ್ಲದ ಆ ಬಾನಿನಲ್ಲಿ
ಬೆಳದಿಂಗಳ ಹುಡುಕುವ ಒಬ್ಬ ಕುರುಡನು ನಾನಿಲ್ಲಿ

ಪ್ರಮುಖ ರಾಸಾಯನಿಕಗಳು ಮತ್ತು ಅವುಗಳ ಬಳಕೆ

 * ಈಥಲಿನ್ - ಕಾಯಿಗಳನ್ನು ಹಣ್ಣು ಮಾಡಲು

* ಈಥನಾಲ್ - ಆಲ್ಕೊಹಾಲ್ ತಯಾರಿಸಲು

* ಗಂಧಕ - ರಬ್ಬರ್ ಗಟ್ಟಿಗೊಳಿಸಲು (ವಲ್ಕನೀಕರಣ ಕ್ಕೆ)

* ಸಲ್ಫೂರಿಕ್ ಆಮ್ಲ - ಬ್ಯಾಟರಿಗಳಲ್ಲಿ ಬಳಸುವರು

* ಕಾರ್ಬೋನಿಕ್ ಆಮ್ಲ - ತಂಪುಪಾನೀಯ ತಯಾರಿಕೆ

* ಇಂಗಾಲದ ಡೈ ಆಕ್ಸೈಡ್ - ಅಗ್ನಿ ಶಾಮಕ ಯಂತ್ರಗಳಲ್ಲಿ

* ಆರ್ಗಾನ್ ಮತ್ತು ನಿಯಾನ್ - ವಿದ್ಯುದ್ದೀಪ ಮತ್ತು ಜಾಹೀರಾತು ದೀಪಗಳಲ್ಲಿ

* ದ್ರವ ಸಾರಜನಕ - ಆಹಾರ ಸಂರಕ್ಷಣೆ

* ಅಮೋನಿಯಾ - ರಸಗೊಬ್ಬರಗಳಲ್ಲಿ

* ಬ್ಯೂಟೇನ್ - ಎಲ್ ಪಿ ಜಿ ಗ್ಯಾಸ್ ಗಳಲ್ಲಿ

* ಯುರೇನಿಯಂ 235 - ಪರಮಾಣು ಕ್ರಿಯಾಕಾರಿಗಳಲ್ಲಿ

* ಆಕ್ಸಿ ಅಸಿಟಿಲೀನ್ - ಲೋಹಗಳ ಬೆಸುಗೆ ಹಾಕಲು.

ಏಷ್ಯಾ ಖಂಡ

 🔰ಪ್ರಪಂಚದಲ್ಲಿ ಅತಿ ದೊಡ್ಡ ಖಂಡ.

🔰ಏಷ್ಯ ಖಂಡದಲ್ಲಿ ಒಟ್ಟು 48 ದೇಶಗಳಿವೆ.

🔰ಪ್ರಪಂಚದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಖಂಡ – ಏಷ್ಯಾ

🔰ಪ್ರಪಂಚದ ಆಳವಾದ ಸರೋವರವಾದ ಬೈಕಲ್‌ ಸರೋವರವಿದೆ.

🔰ಏಷ್ಯಾ ಖಂಡದ ಅತಿ ದೊಡ್ಡ ಮರುಭೂಮಿ ಗೋಬಿ ಮರುಭೂಮಿ.

🔰ಗೋಬಿ ಮರಭೂಮಿ ಮಂಗೋಲಿಯಾ ಮತ್ತು ಚೀನಾ ದೇಶದಲ್ಲಿದೆ.

🔰ಏಷ್ಯಾ ಅತಿ ದೊಡ್ಡ ನದಿ – ಯಾಂಗ್‌ ಟ್ಜೆ

🔰ಏಷ್ಯಾದ ಅತಿ ಎತ್ತರದ ಆಣೆಕಟ್ಟು – ತೆಹರಿ ಆಣೆಕಟ್ಟು

🔰ತೆಹರಿ ಆಣೆಕಟ್ಟನ್ನು ಭಾಗೀರಥಿ ನದಿಗೆ ಕಟ್ಟಲಾಗಿದೆ.

🔰ಏಷ್ಯಾದ ಅತಿ ಉದ್ದದ ಆಣೆಕಟ್ಟು ಹಿರಾಕುಡ್‌ ಆಣೆಕಟ್ಟು.

🔰ಏಷ್ಯಾದ ಮೊದಲ ಜಲವಿದ್ಯುತ್‌ ಉತ್ಪಾದನಾ ಕೇಂದ್ರ ಶಿವನ ಸಮುದ್ರ ಜಲವಿದ್ಯುತ್‌ ಉತ್ಪಾದನಾ ಕೇಂದ್ರ.

🔰ವಿಪರೀತ ವಾತಾವರಣ, ಮಳೆಯ ಅಭಾವ ಮತ್ತು ಅಲೆಮಾರಿ ದನಗಾಹಿ ಜನ ಈ ಹೇಳಿಕೆ ಮಧ್ಯ ಏಷ್ಯಾದ ಸ್ಟೆಪ್ಪೆಗೆ ಸಂಬಂಧಿಸಿದೆ.

🔰ಏಷ್ಯಾ ಖಂಡದ ಅತ್ಯಂತ ಎತ್ತರವಾದ ಬಿಂದು – ಮೌಂಟ್‌ ಎವರೆಸ್ಟ್‌

🔰ಏಷ್ಯಾದ ಅತ್ಯಂತ ಕೆಳ ಮಟ್ಟದ ಬಿಂದು – ಮೃತ ಸಮುದ್ರ

🔰ಏಷ್ಯಾ ಖಂಡವನ್ನು ವೈಪರೀತ್ಯಗಳ ಖಂಡ ಎನ್ನುವರು.

🔰 ಕ್ಷೇತ್ರ ಮತ್ತು ಜನಸಂಖ್ಯೆ ಎರಡರಲ್ಲೂ ಏಷ್ಯಾದ ಚಿಕ್ಕ ದೇಶ – ಮಾಲ್ಡೀವ್ಸ

ವಿವೇಕ ಚೂಡಾಮಣಿ

*ದುರ್ವಾರಸಂಸಾರದವಾಗ್ನಿತಪ್ತಂ*

*ದೋಧೂಯಮಾನಂ ದುರದೃಷ್ಟವಾತೈಃ .*

*ಭೀತಂ ಪ್ರಪನ್ನಂ ಪರಿಪಾಹಿ ಮೃತ್ಯೋಃ*

*ಶರಣ್ಯಮನ್ಯದ್ಯದಹಂ ನ ಜಾನೇ .........*

"ಪರಿಹರಿಸಲಾಗದ ಈ ಸಂಸಾರವೆಂಬ ಅಗ್ನಿಯಲ್ಲಿ ಬೆಂದಿದ್ದೇನೆ. ದುರಾದ್ರಷ್ಟವೆಂಬ ಸುಂಟರಗಾಳಿಯಲ್ಲಿ ಸಿಲಿಕಿ ನಡುಗುತ್ತಿದ್ದೇನೆ. ಭಯಭೀತನಾಗಿದ್ದೇನೆ. ನನ್ನನ್ನು ಮೃತ್ಯುವಿನಿಂದ ಕಾಪಾಡು. ಇನ್ಯಾರೂ ರಕ್ಷಿಸುವರನ್ನು ನಾನರಿಯೆ."

Monday, November 11, 2024

ಪ್ರತಿನಿತ್ಯ_ಮಕ್ಕಳಿಗೆ_ಹೇಳಿಕೊಡುವ_ಸ್ತೋತ್ರಗಳು

 ಪ್ರತಿನಿತ್ಯ ಮಕ್ಕಳಿಗೆ ಇಷ್ಟು ಮಂತ್ರಗಳನ್ನು ಹೇಳಿಕೊಡಿ ಸಾಕು ಮಕ್ಕಳವಾಕ್ಶುದ್ಧಿ ,ನೆನಪಿನ ಶಕ್ತಿ ,ವಿದ್ವತ್ ಎಲ್ಲವೂ ತಾನಾಗಿಯೇ ಮಕ್ಕಳಲ್ಲಿ ಹೆಚ್ಚುತ್ತದೆ , ಮಕ್ಕಳು ಸುಸಂಸ್ಕೃತರಾಗಿ ಒಳ್ಳೆಯ ಮಾರ್ಗ ಹಿಡಿಯುತ್ತಾರೆ...

ಇದೆ ಮಂತ್ರಶಕ್ತಿ ನಮ್ಮ ಪೂರ್ವಜರು ನಮಗೆ ಭೋದಿಸಿದರು ...

#ಬೆಳಿಗ್ಗೆ_ಎದ್ದ_ತಕ್ಷಣ_ಹೇಳುವ_ಮಂತ್ರ

ಕರಾಗ್ರೇ ವಸತೇ ಲಕ್ಷ್ಮೀ | ಕರ ಮಧ್ಯೆ ಸರಸ್ವತಿ |
ಕರಮೂಲೇ ಸ್ಥಿತೇ ಗೌರಿ ಪ್ರಭಾತೇ ಕರದರ್ಶನಂ ||

ಬೆಳಿಗ್ಗೆ ಎದ್ದ ಕೂಡಲೇ ನೆಲ ಮುಟ್ಟುವಾಗ ಹೇಳುವ ಮಂತ್ರ* :

ಸಮುದ್ರ ವಸನೇ ದೇವಿ ಪರ್ವತ ಸ್ತನಮಂಡಲೇ l
ವಿಷ್ನುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ ll

#ಸ್ನಾನದ_ನೀರನ್ನು_ಮುಟ್ಟಿ_ಹೇಳುವ_ಮಂತ್ರ* :
ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||

#ಸ್ನಾನ_ಮಾಡುವಾಗ:
ಅಪವಿತ್ರ ಪವಿತ್ರೋವಾ ಸರ್ವಾವಸ್ತಾಂ ಗತೋಪಿವಾl
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭಂತರಂ ಶುಚಿಃll

#ಪ್ರದಕ್ಷಿಣೆ_ನಮಸ್ಕಾರ_ಹೇಳುವ_ಮಂತ್ರ
ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿಚl
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇಪದೇll

#ದೇವರಿಗೆನಮಸ್ಕಾರ_ಹೇಳುವ_ಮಂತ್ರ* : ‌ ‌
ತ್ವಮೇವ ಮಾತಾಚl ಪಿತಾ ತ್ವಮೇವl ತ್ವಮೇವ ಬಂಧುl ಸಖಾ ತ್ವಮೇವl ತ್ವಮೇವ ವಿದ್ಯಾಶ್ಚl ದ್ರವಿಣಂ ತ್ವಮೇವl ತ್ವಮೇವ ಸರ್ವಂ ಮಮ ದೇವ ದೇವll


#ತೀರ್ಥ_ಸೇವನೆ_ಸಮಯದಲ್ಲಿ_ಹೇಳುವ_ಮಂತ್ರ* :
ಅಕಾಲ ಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂl
ಸಮಸ್ತ ದುರಿತೋಪಶಮನಂ ವಿಷ್ಣು ಪಾದೋದಕಂ ಶುಭಂll
ಶರೀರೆ ಜರ್ಜರೀ ಭೂತೆ ವ್ಯಾಧಿಗ್ರಸ್ತೇ ಕಳೇಬರೇl
ಔಷಧಂ ಜಾಹ್ನವಿ ತೋಯಂ ವೈದ್ಯೋ ನಾರಾಯಣೋ ಹರೀಃll

#ಸಂಕಷ್ಟದಲ್ಲಿರುವಾಗ_ಪ್ರಾರ್ಥನೆ*:
ಕಾರ್ಕೋಟಕಸ್ಯ ನಾಗಸ್ಯ ದಮಯಂತ್ಯಾ ನಲಸ್ಯಚl
ಋತುಪರ್ಣಸ್ಯ ರಾಜರ್ಷೆ ಕೀರ್ತನಂ ಕಲಿ ನಾಶನಂll

#ದೇವರಿಗೆ_ಕ್ಷಮಾಪಣೆಗೆ_ಹೇಳುವ_ಮಂತ್ರ* :
ಅಪರಾಧ ಸಹಸ್ರಾಣಿ ಕ್ರಿಯಂತೆ ಅಹರ್ನಿಶಂl
ದಾಸೋ ಆಯಮಿಥಿಮಾಂ ಮತ್ವ ಕ್ಷಮಸ್ವ ಪರಮೇಶ್ವರll
ಪಾಪೋಹಂ ಪಾಪಕರ್ಮಾಹಂ ಪಾಪಾತ್ಮ ಪಾಪ ಸಂಭವಃl
ತ್ರಾಹಿಮಾಂ ಕೃಪಯಾ ದೇವಶರಣಾಗತ ವತ್ಸಲll
ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮl
ತಸ್ಮಾತ್ ಕಾರುಣ್ಯ ಭಾವೇನ ರಕ್ಷ ರಕ್ಷ ಜನಾರ್ಧನಃll

#ಆರತಿ_ತೆಗೆದು_ಕೊಳ್ಳುವಾಗ_ಹೇಳುವ_ಮಂತ್ರ*:
ಶ್ರದ್ಧಾಂ ಮೇಧಾಂ ಯಶಃ ಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರೀಯಂ ಬಲಂl ಆಯುಷ್ಯಂ ತೇಜಃ ಆರೋಗ್ಯಂ ದೇಹಿ ಮೇ ಹವ್ಯವಾಹನll

#ಸಂಜೆದೀಪಹಚ್ಚುವಾಗ
ದೀಪಂ ಜ್ಯೋತಿ ಪರಬ್ರಹ್ಮ ದೀಪೇನ ಸರ್ವತಮೋಪಃl
ದೀಪೇನ ಸಾಧ್ಯತೇ ದೀಪಂ ಸಂಧ್ಯಾ ದೀಪಂ ನಮೋಸ್ತುತೇll

#ಶುಭ_ಪ್ರಯಾಣಕ್ಕೆ_ಹೇಳುವ_ಮಂತ್ರ* :
ಕುಂಕುಮಾಂಕಿತ ವರ್ಣಾಯ ಕುಂದೇಂದು ಧವಲಾಯಚl
ವಿಷ್ಣುವಾಹ ನಮಸ್ತುಭ್ಯಂ ಪಕ್ಷಿರಾಜಾಯತೇ ನಮಃll

#ಚಿರಂಜೀವಿಗಳ_ಸ್ಮರಿಸುವಿಕೆ* :
ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಚ ವಿಭೀಷಣಃl
ಕೃಪಃ ಪರುಶುರಾಮಚ ಸಪ್ತೈತೆ ಚಿರಜೀವಿನಃll
l
#ಅಶ್ವತ್ಥ_ಪ್ರದಕ್ಷಿಣೆ_ಸ್ತೋತ್ರ

ಮೂಲತೋ ಬ್ರಹ್ಮರೂಪಾಯl ಮಧ್ಯತೋ ವಿಷ್ಣುರೂಪಿಣೇl ಅಗ್ರತಃ ಶಿವರೂಪಾಯl ಅಶ್ವತ್ಥಾಯ ನಮೋ ನಮಃll
*
#ಮಲಗುವಾಗ_ಹೇಳುವ_ಮಂತ್ರ
ರಾಮಂ ಸ್ಕಂದಂ ಹನೂಮನ್ತಂ ವೈನತೇಯಂ ವೃಕೋದರಂl
ಶಯನೇಯಃ ಸ್ಮರೇನಿತ್ಯಂ ದುಸ್ವಪ್ನಂ ತಸ್ಯ ನಸ್ಯತಿಃll
ಪ್ರತಿ ದಿನ ಬೆಳಿಗ್ಗೆ ಮತ್ತು ರಾತ್ರಿ ಊಟದ ನಂತರ ಪಠಿಸಿ, ಶುಭವಾಗಲಿ

ನಿರಂತರ ಕೆಮ್ಮಿನಿಂದ ಎದೆನೋವೆ? ಕಫ ಕಡಿಮೆಯಾಗುತ್ತಿಲ್ಲವೇ? ಈ ಮನೆಮದ್ದುಗಳನ್ನು ಮಾಡಿ -ಕಫ ಬೇಗ ಕಡಿಮೆಯಾಗುತ್ತದೆ

 ಅನೇಕ ಜನರು ಕೆಮ್ಮಿನಿಂದ ಬಳಲುತ್ತಿದ್ದಾರೆ. ಅದಕ್ಕಾಗಿಯೇ ಜನರು ಒಣ ಕೆಮ್ಮಿಗೆ ಮನೆಮದ್ದುಗಳನ್ನು ಹುಡುಕುತ್ತಾರೆ. ನೀವು ಸಹ ಕೆಮ್ಮಿನ ಲಕ್ಷಣಗಳನ್ನು ಅನುಭವಿಸುತ್ತಿದ್ದರೆ, ನೀವು ಪ್ರಯತ್ನಿಸಬಹುದಾದ ಕೆಲವು ಪರಿಹಾರಗಳಿವೆ. ಕೆಮ್ಮಿಗೆ ಮನೆಮದ್ದುಗಳು ಯಾವುವು ಎಂದು ನೋಡೋಣ. ಪದೆ ಪದೆ ಔಷಧೋಪಚಾರಕ್ಕೆ ಮೊರೆಹೋಗುವ ಬದಲು ಕೆಲವು ಮನೆಮದ್ದುಗಳಿಂದ ಕೆಮ್ಮಿನಿಂದ ಮುಕ್ತಿ ಪಡೆಯಬಹುದು.


*ಕೆಮ್ಮು ಮತ್ತು ನೋವು ನಿವಾರಣೆಗೆ ಶುಂಠಿ ಪ್ರಯೋಜನಕಾರಿ...*
ಕಫ ಮತ್ತು ಕೆಮ್ಮನ್ನು ತಡೆಯಲು ನೀವು ಶುಂಠಿಯ ರಸವನ್ನು ಕುಡಿಯಬಹುದು.  ಶುಂಠಿಯು ಜೈವಿಕ ಸಕ್ರಿಯ ಸಂಯುಕ್ತಗಳನ್ನು ಹೊಂದಿರುತ್ತದೆ. ಇದು ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಇದರ ಜೈವಿಕ ಸಕ್ರಿಯ ಸಂಯುಕ್ತಗಳು ಆರೋಗ್ಯಕ್ಕೆ ಪ್ರಯೋಜನಕಾರಿ. ಇತ್ತೀಚಿನ ಅಧ್ಯಯನಗಳು ಶುಂಠಿಯು ಉರಿಯೂತ ರೋಧಕ ಗುಣಲಕ್ಷಣಗಳನ್ನು ಹೊಂದಿದ್ದು ರೋಗಗಳ ಅಪಾಯವನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ತೋರಿಸಿದೆ.  ಶುಂಠಿಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಿಂದಾಗಿ, ಇದು ಗಂಟಲಿನ ಸಮಸ್ಯೆಗಳನ್ನು ನಿವಾರಿಸುತ್ತದೆ. ಜೇನುತುಪ್ಪ ಮತ್ತು ಶುಂಠಿ ನೀರನ್ನು ಕುಡಿಯುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ.  ಒಂದು ಲೋಟ ಬೆಚ್ಚಗಿನ ನೀರು, ಜೇನುತುಪ್ಪ ಮತ್ತು ನಿಂಬೆಯೊಂದಿಗೆ ಕುಡಿಯಿರಿ.

*ಕೆಮ್ಮಿನಿಂದ ಪರಿಹಾರ ಪಡೆಯಲು ಬಿಸಿ ನೀರು ಮತ್ತು ಉಪ್ಪನ್ನು ಬಳಸಬಹುದು. ಇದಕ್ಕಾಗಿ, ಬಿಸಿ ನೀರಿಗೆ ಚಿಟಿಕೆ ಉಪ್ಪು ಸೇರಿಸಿ ಮತ್ತು ಗಂಟಲು ಮುಕ್ಕಳಿಸಿ. ಹೀಗೆ ಮಾಡುವುದರಿಂದ ಗಂಟಲಿನ ತೊಂದರೆ, ಕೆಮ್ಮು ನಿವಾರಣೆಯಾಗುತ್ತದೆ.

ನೆಲ್ಲಿಕಾಯಿ ಕೆಮ್ಮಿಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಆಮ್ಲಾ ವಿಟಮಿನ್ ಸಿ ಅನ್ನು ಹೊಂದಿರುತ್ತದೆ. ಇದರಿಂದಾಗಿ ರಕ್ತ ಪರಿಚಲನೆ ಉತ್ತಮವಾಗಿರುತ್ತದೆ. ನಿಮ್ಮ ಆಹಾರದಲ್ಲಿ ನೆಲ್ಲಿಕಾಯಿಯನ್ನು ಸೇರಿಸಿಕೊಳ್ಳಬಹುದು. ಇದು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಇದು ಉತ್ತಮ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಅರ್ಧ ಚಮಚ ಜೇನುತುಪ್ಪದಲ್ಲಿ ಒಂದು ಚಿಟಿಕೆ ಏಲಕ್ಕಿ ಮತ್ತು ನಿಂಬೆ ರಸ ಸೇರಿಸಿ. ಈ ಮಿಶ್ರಣವನ್ನು ದಿನಕ್ಕೆ 2 ರಿಂದ 3 ಬಾರಿ ಸೇವಿಸಿ. ಈ ಮನೆಮದ್ದು ಮಾಡಿದರೆ ಕೆಮ್ಮು ನಿವಾರಣೆಯಾಗುತ್ತದೆ.

ದಾಳಿಂಬೆ ರಸವೂ ಕೆಮ್ಮು ನಿವಾರಣೆಗೆ ಪ್ರಯೋಜನಕಾರಿ. ಇದಕ್ಕಾಗಿ ನೀವು ದಾಳಿಂಬೆ ರಸಕ್ಕೆ ಶುಂಠಿ ರಸವನ್ನು ಸೇರಿಸಬೇಕು.

ಕೆಮ್ಮು ನಿವಾರಣೆಗೆ ಬೆಳ್ಳುಳ್ಳಿ ಕೂಡ ಪ್ರಯೋಜನಕಾರಿ. ಬೆಳ್ಳುಳ್ಳಿಯನ್ನು ತುಪ್ಪದಲ್ಲಿ ಹುರಿದು ತಿನ್ನಬಹುದು.

ಸಮುದ್ರ ಆಳದ ಬಿಂದುಗಳನ್ನು ಸೇರಿಸುವ ರೇಖೆ

  ■.ಐಸೋಥರ್ಮ ━━━━━━━► ️️ಸಮಾನ ಪ್ರಮಾಣದ ಉಷ್ಣತೆಯ ಬಿಂದುಗಳನ್ನು ಸೇರಿಸುವ ರೇಖೆ ■.ಐಸೊಕೇಮ್ ━━━━━━━► ಸಮಾನ ಪ್ರಮಾಣದ ಚಳಿಗಾಲದ ಸರಾಸರಿ ಉಷ್ಣಾಂಶದ ಬಿಂದುಗಳನ್ನು ಸೇ...