ಕವಿತೆ ಕವಿತೆ (Gaalipata)

SANTOSH KULKARNI
By -
0 minute read
0
ಕವಿತೆ ಕವಿತೆ ನೀನೇಕೆ ಪದಗಳಲಿ ಕುಳಿತೆ ?
ಕವಿತೆ ಕವಿತೆ ನೀನೇಕೆ ರಾಗದಲಿ ಬೆರೆತೆ ? ||
ನನ್ನೆದೆಯ ಗೂಡಲ್ಲಿ ಕವಿತೆಗಳ ಸಂತೆ
ಓ! ಒಲವೆ ನೀ ತಂದ ಹಾಡಿಗೆ ನಾ ಸೋತೆ

ಅವಳು ಬರಲು ಮನದಲ್ಲಿ ಪದಗಳದೇ ಚಿಲುಮೆ
ಮನದ ಕಡಲ ದಡದಾಟೊ ಅಲೆಗಳಲು ನಲುಮೆ
ಹೊಮ್ಮುತಿದೆ ರಾಗದಲಿ ಸ್ವರ ಮೀರೋ ತಿಮಿರು
ಚಿಮ್ಮುತಿದೆ ಸುಳ್ಳಾಡುವ ಕವಿಯಾದ ಪೊಗರು

ಮುಗಿಲ ಹೆಗಲ ಮೇಲೇರಿ ತೇಲುತಿದೆ ಹೃದಯ
ಮಡಿಲ ಹುಡುಕಿ ಎದೆ ಬಾಗಿಲಿಗೆ ಬಂತೋ ಪ್ರಣಯ
ಉನ್ಮಾದ ತಾನಾಗಿ ಹಾಡಗೋ ಸಮಯ
ಏಕಾಂತ ಕಲ್ಲನ್ನು ಮಾಡುವುದೋ ಕವಿಯ

- ಹೃದಯ ಶಿವ (ಗಾಳಿಪಟ )

Post a Comment

0Comments

Post a Comment (0)