ಕನ್ನಡ ಚುಟುಕಗಳು

SANTOSH KULKARNI
By -
0
1. ಹೂವಿಗೆ ಹೇಳಬೇಡ ನಿನ್ನ ಹೆಸರು
   
ದುಂಬಿಗೂ ಹೇಳಬೇಡ ನಿನ್ನ ಹೆಸರು
   
ಏಕೆಂದರೆ ನಿನ್ನ ಹೆಸರು ಹೇಳುತ್ತಲೇ
ಹೋಗುವುದು ಅವುಗಳ ಉಸಿರು
2. ಕತ್ತಲಲಿ ಕಣ್ಣಾದವಳು ನೀನು ತಾನೇ
   
ಬೆಳಕಾಗಿ ಕೈ ಹಿಡಿದುದು ನೀನು ತಾನೇ
   
ಅಂದರೆ ನೀನು ಟಾರ್ಚ್ ಅಲ್ಲವೇನೆ
3. ನೀ ಕೈಗೆಟುಕದಿದ್ದರೆ ಇಲ್ಲ ಆನಂದ
   
ನೀ ಕೈಗೆಟುಕಿದರೆ ಆತ್ಮಾನಂದಬ್ರಹ್ಮಾನಂದ
  
ಹಾಗಾದರೆ ನೀನು– ರಮ್ಮಾನಂದ (Rum + ಆನಂದ)
4.  ನನ್ನ ಮನದನ್ನೆ
ನೀ ಮಾಡಿದ್ದಕ್ಕೆ ಕಣ್ಸನ್ನೆ
ಟೆಸ್ಟಲ್ಲಿ ನಾ ತೆಗೆದದ್ದು
ಎರಡು ಸೊನ್ನೆ
5. ಪ್ರೇಯಸಿ ಎಂದರೆ ಕೇಳು
ಪ್ರೇಮಿಗೆ ಯಶ ತರುವ ಸಿಂಗಾರಿ
ಆದರೆ ಈಗೀಗ ‘ಪೇ ಅಂಡ್ ಪ್ರೇಮಾಡಿದರೆ ‘ಯಸ್ಇಲ್ಲದಿದ್ದರೆ ‘ಸಾರೀ’
6. ಅಂಧಕಾರವೆಂದರೇನು ಎಂದು
ತಿಳಿಯ ಬಯಸಿ ಹುಡುಕುತ ಹೊರಟೆ
ಕಂಡುಕಂಡವರ ಕೇಳಿದೆ
ಬುಕ್ಕುಅಂತರ್ಜಾಲವ ತಡಕಾಡಿದೆ
ಆದರೆ ನನಗೆ ತಿಳಿಯದೇ ಹೋಯಿತು
ನನ್ನ ಕಣ್ಣಿಗೆ ಪೊರೆ ಬಂದಿದೆಯೆಂದು
7. ನಾನಾದರೂ ಯಾರಿಗಾಗಿ ಬರೆಯಲಿ
ಎಂದು ಬರೆದಿದ್ದ ಕಾಗದ ತೆಗೆದು ಎಸೆದಿದ್ದೆ
ನನಗೆ ತಿಳಿಯದೇ ನೀನು ತೆಗೆದೊಯ್ದು
ಓದಿ ನೀ ಅಳುತ ಕುಳಿತಿದ್ದೆ
Tags:

Post a Comment

0Comments

Please Select Embedded Mode To show the Comment System.*