"ನಿಮಗಿದು ತಿಳಿದಿರಲಿ"

SANTOSH KULKARNI
By -
0
 ನ.1ರಿಂದ ಬದಲಾಗುತ್ತಿದೆ ಎಲ್‌ಪಿಜಿ ಹೋಮ್‌ ಡೆಲಿವರಿ ವಿಧಾನ: ಏನಿದು ಹೊಸ ವ್ಯವಸ್ಥೆ?
================
ಮುಂದಿನ ತಿಂಗಳಿಂದ ಎಲ್‌ಪಿಜಿ ಸಿಲಿಂಡರ್‌ ಹೋಮ್‌ ಡೆಲಿವರಿಗೆ ಸಂಬಂಧಿಸಿದಂತೆ ನಿಯಮಗಳು ಬದಲಾಗಲಿವೆ. ಹೊಸ ನಿಯಮಗಳು ನವೆಂಬರ್ 1 ರಿಂದಲೇ ಜಾರಿಗೆ ಬರಲಿದ್ದು, ಹೊಸದಾಗಿ ಗ್ಯಾಸ್‌ ಸಿಲಿಂಡರ್ ಬುಕ್‌ ಮಾಡುವವರು ಹೊಸ ನಿಯಮಗಳ ಕುರಿತು ತಿಳಿಯುವುದು ಅವಶ್ಯವಾಗಿದೆ.
===============
ಎಲ್‌ಪಿಜಿ ಸಿಲಿಂಡರ್ ಹೋಮ್ ಡೆಲಿವರಿಯ (Home Delivery) ವ್ಯವಸ್ಥೆಯು ಈಗ ಸಂಪೂರ್ಣವಾಗಿ ಬದಲಾಗಲಿದೆ. ಸರಕಾರಿ ತೈಲ ಕಂಪನಿಗಳು ಈಗಾಗಲೇ ಈ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಂಡಿವೆ. ನವೆಂಬರ್‌ 1ರಿಂದಲೇ ಹೊಸ ವಿತರಣ ವ್ಯವಸ್ಥೆ ಜಾರಿಗೆ ಬರಲಿದೆ. ಎಲ್‌ಪಿಜಿ ಸಿಲಿಂಡರ್‌ ಹೋಮ್‌ ಡೆಲಿವರಿ ಕುರಿತಂತೆ ಯಾವೆಲ್ಲ ಬದಲಾವಣೆಗಳಾಗಲಿವೆ? ಇನ್ಮುಂದೆ ಸಿಲಿಂಡರ್‌ ಪಡೆಯಲು ಯಾವೆಲ್ಲ ವಿಧಾನ ಅನುಸರಿಸಬೇಕು? ಈ ಕುರಿತ ಮಾಹಿತಿ ಇಲ್ಲಿದೆ.
======
👉 ಡೆಲಿವರಿ ವ್ಯವಸ್ಥೆ ಬದಲಾವಣೆಯ ಉದ್ದೇಶವೇನು?
==========
ಸಿಲಿಂಡರ್‌ನಿಂದ ಅನಿಲ ಕದಿಯುವುದನ್ನು ತಡೆಯಲು ಮತ್ತು ಸರಿಯಾದ ಗ್ರಾಹಕರನ್ನು ಗುರುತಿಸುವ ಮುಖ್ಯ ಉದ್ದೇಶಗಳೊಂದಿಗೆ ಸಿಲಿಂಡರ್ ಹೋಂ ಡೆಲಿವರಿಯಲ್ಲಿ ಹೊಸ ವ್ಯವಸ್ಥೆ ಪರಿಚಯಿಸಲಾಗುತ್ತಿದೆ. ತೈಲ ಕಂಪನಿಗಳು ಎಲ್‌ಪಿಜಿ (LPG) ಸಿಲಿಂಡರ್‌ಗಳ ಹೊಸ ವಿತರಣಾ ವ್ಯವಸ್ಥೆ ಜಾರಿ ಮಾಡಿದ ನಂತರ, ಸಿಲಿಂಡರ್‌ ಪಡೆಯಲು ಕೇವಲ ಗ್ಯಾಸ್‌ ಬುಕ್‌ ಮಾಡಿದರಷ್ಟೇ ಸಾಲದು. ಸಿಲಿಂಡರ್‌ ಪಡೆಯುವಾಗಲೂ ಕೆಲವು ನಿಯಮಗಳನ್ನು ಅನುಸರಿಸಬೇಕು.
==========
👉ಏನಿದು ಹೊಸ ವ್ಯವಸ್ಥೆ?
====
ಹೊಸ ಡೆಲಿವರಿ ವ್ಯವಸ್ಥೆಯನ್ನು ಆರಂಭಿಕವಾಗಿ ದೇಶದ 100 ಸ್ಮಾರ್ಟ್‌ ಸಿಟಿಗಳಲ್ಲಿ ಜಾರಿಗೆ ತರಲಾಗುತ್ತಿದೆ. ಈಗಾಗಲೇ ರಾಜಸ್ಥಾನದ ಜೈಪುರದಲ್ಲಿ ಪ್ರಾಯೋಗಿಕವಾಗಿ ಜಾರಿಯಾಗಿದೆ. ಹೊಸ ವ್ಯವಸ್ಥೆಯಲ್ಲಿ 'ವಿತರಣಾ ದೃಢೀಕರಣ ಕೋಡ್ (ಡಿಎಸಿ) ವಿಧಾನವನ್ನು ಪರಿಚಯಿಸಿದೆ. ಅಂದರೆ ಸಿಲಿಂಡರ್ ಸಿಲಿಂಡರ್‌ ಬುಕ್‌ ಮಾಡಿದ ನಂತರ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಂದು ಕೋಡ್ ಅನ್ನು ರವಾನಿಸಲಾಗುತ್ತದೆ. ಸಿಲಿಂಡರ್ ವಿತರಣೆಯ ಸಮಯದಲ್ಲಿ ಈ ಕೋಡ್ ಅನ್ನು ಡೆಲಿವರಿ ಹುಡುಗನಿಗೆ ನೀಡಬೇಕಾಗುತ್ತದೆ. ಈ ಕೋಡ್ ಅನ್ನು ತೋರಿಸದ ಹೊರತು ವಿತರಣೆಯು ಪೂರ್ಣಗೊಳ್ಳುವುದಿಲ್ಲ ಮತ್ತು ಸಿಲಿಂಡರ್‌ ಡೆಲಿವರಿ ಸ್ಟೇಟಸ್ ಬಾಕಿ ಉಳಿಯುತ್ತದೆ.
===============
👉 ಮೊಬೈಲ್ ಸಂಖ್ಯೆ ನವೀಕರಿಸಬಹುದು
======
ನೀವು ಪ್ರಸ್ತುತ ಬಳಸುತ್ತಿರುವ ಮೊಬೈಲ್‌ ಸಂಖ್ಯೆ ಹಾಗೂ ಗ್ಯಾಸ್‌ ಏಜೆನ್ಸಿಗೆ ನೀಡಿರುವ ಮೊಬೈಲ್‌ ಸಂಖ್ಯೆಯಲ್ಲಿ ವ್ಯತ್ಯಾಸವಾಗಿದ್ದರೆ, ನಿಮ್ಮ ಮೊಬೈಲ್ ಸಂಖ್ಯೆಯನ್ನು ವಿತರಣೆಯ ಸಮಯದಲ್ಲಿ ನವೀಕರಿಸಲು ಸಾಧ್ಯವಿದೆ. ಇದಕ್ಕಾಗಿ ಡೆಲಿವರಿ ಹುಡುಗನಿಗೆ ಅಪ್ಲಿಕೇಶನ್ ಒದಗಿಸಲಾಗುವುದು. ವಿತರಣೆಯ ಸಮಯದಲ್ಲಿ ಆ ಅಪ್ಲಿಕೇಶನ್‌ನ ಸಹಾಯದಿಂದ ನಿಮ್ಮ ಮೊಬೈಲ್ ಸಂಖ್ಯೆಯನ್ನು ಡೆಲಿವರಿ ಬಾಯ್ ಬಳಿ ನವೀಕರಿಸಬಹುದು. ಅಪ್ಲಿಕೇಶನ್ ಮೂಲಕ ಮೊಬೈಲ್ ಸಂಖ್ಯೆಯನ್ನು ರಿಯಲ್‌ ಟೈಮ್‌ ಆಧಾರದಲ್ಲಿ ನವೀಕರಿಸಲಾಗುತ್ತದೆ. ಇದರ ನಂತರ ಒಂದೇ ಸಂಖ್ಯೆಯಿಂದ ಕೋಡ್ ಅನ್ನು ರಚಿಸುವ ಸೌಲಭ್ಯವಿರುತ್ತದೆ. ಒಂದು ವೇಳೆ ನೀವು ತಪ್ಪು ವಿಳಾಸ ಹಾಗೂ ಮೊಬೈಲ್‌ ಸಂಖ್ಯೆ ನೀಡಿದ್ದರೆ, ನಿಮ್ಮ ಸಿಲಿಂಡರ್‌ ಅನ್ನು ತಡೆಹಿಡಿಯಲಾಗುವುದು.
==============
👉 ಆರಂಭಿಕವಾಗಿ ಸ್ಮಾರ್ಟ್ ಸಿಟಿಗಳಲ್ಲಿ ಜಾರಿ
=======
ತೈಲ ಕಂಪನಿಗಳು ಮೊದಲು 100 ಸ್ಮಾರ್ಟ್ ಸಿಟಿಗಳಲ್ಲಿ ಈ ಹೊಸ ವಿತರಣಾ ವ್ಯವಸ್ಥೆಯನ್ನು ಜಾರಿಗೆ ತರಲಿವೆ. ಇದನ್ನು ಪ್ರಾಯೋಗಿಕ ಯೋಜನೆಯಾಗಿ ಮಾಡಲಾಗುತ್ತದೆ. ಕ್ರಮೇಣ ಅದೇ ವ್ಯವಸ್ಥೆಯನ್ನು ದೇಶದ ಇತರ ಭಾಗಗಳಲ್ಲಿ ಜಾರಿಗೆ ತರಲಾಗುವುದು.
========
ಪ್ರಸ್ತುತ ಈ ವ್ಯವಸ್ಥೆಯು ಎರಡು ನಗರಗಳಲ್ಲಿ ಪ್ರಾಯೋಗಿಕ ಯೋಜನೆಯಾಗಿ ಕಾರ್ಯನಿರ್ವಹಿಸುತ್ತಿದೆ. ಹೊಸ ವ್ಯವಸ್ಥೆಯು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ವಾಣಿಜ್ಯ ಸಿಲಿಂಡರ್‌ಗಳನ್ನು ಹೊಸ ವ್ಯವಸ್ಥೆಯಿಂದ ಹೊರಗಿಡಲಾಗಿದೆ.
========

Post a Comment

0Comments

Please Select Embedded Mode To show the Comment System.*