🌹ಕಫದ ಸಮಸ್ಯೆಯಿದ್ದರೆ ಬಿಸಿ ನೀರಲ್ಲಿ ಉಪ್ಪು ಹಾಕಿ ದಿನಕ್ಕೆ ಎರಡು-ಮೂರು ಬಾರಿ ಬಾಯಿ ಮುಕ್ಕಳಿಸಿ, ಇದರಿಂದ ಗಂಟಲಿನ ಕಫ ಕರಗುತ್ತದೆ.
🌹ನಿರಂತರ ಕಫದ ಸಮಸ್ಯೆ ಕಾಡುತ್ತಿದ್ದರೆ ನಿಂಬೆ ಹಣ್ಣಿನ ರಸಕ್ಕೆ ಕಪ್ಪು ಉಪ್ಪು ಅಥವಾ ಸೈಂಧವ ಉಪ್ಪು ಸೇರಿಸಿ. ಅದರೊಂದಿಗೆ ಕರಿಮೆಣಸಿನ ಪುಡಿ ಮಿಶ್ರಣ ಮಾಡಿ ಆ ರಸವನ್ನು ಸೇವಿಸಿದ್ರೆ ಕಫದ ಸಮಸ್ಯೆ ನಿವಾರಣೆಯಾಗುತ್ತದೆ.
🌹ಕಫ ಕರಗಲು ಹಸಿ ಶುಂಠಿ ಕಷಾಯ ಮಾಡಿ ಅದಕ್ಕೆ ಜೇನುತುಪ್ಪ ಸೇರಿಸಿ ದಿನಕ್ಕೆ 3 - 4 ಬಾರಿ ಸೇವಿಸಿ. ಇದರಿಂದ ಕಫ ಕರಗುವುದು.
🌹ಅರಿಶಿನ ಪುಡಿಯನ್ನು ಬಿಸಿ ನೀರಿನಲ್ಲಿ ಕಲಸಿ ಕುಡಿಯುತ್ತಿರುವುದರಿಂದ ಕೂಡ ಕಫದ ಸಮಸ್ಯೆ ಶಮನವಾಗುತ್ತದೆ.
🌹ಹಸಿ ಶುಂಠಿಯನ್ನು ಕುದಿಸಿ ಅದಕ್ಕೆ ಚಕ್ಕೆ ಸೇರಿಸಿ ಕಷಾಯ ಮಾಡಿ ದಿನಕ್ಕೆ 2-3 ಬಾರಿ ಕುಡಿಯುವುದರಿಂದ ಸಹ ಕಫದ ಸಮಸ್ಯೆ ನಿವಾರಣೆಯಾಗುತ್ತದೆ.
🌹ಜೇನುತುಪ್ಪಕ್ಕೆ ಕರಿಮೆಣಸಿನ ಪುಡಿ ಮಿಶ್ರ ಮಾಡಿ ದಿನಕ್ಕೆ 3-4 ಬಾರಿ ಸೇವಿಸುವುದರಿಂದ ಸಹ ಗಂಟಲ ಕಫ ಕರಗುತ್ತದೆ.
🌹ಹಸಿ ಕ್ಯಾರೆಟ್ನ್ನು ಗಟ್ಟಿ ಜ್ಯೂಸ್ ಆಗಿಸಿ ಅದಕ್ಕೆ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಸಹ ಗಂಟಲಿನ ಕಫ ನಿವಾರಣೆಯಾಗುತ್ತದೆ.
🌹ಒಣ ಶುಂಠಿ, ಕರಿಮೆಣಸು ಹಾಗೂ ಬೆಲ್ಲ ಸೇರಿಸಿ ಕಷಾಯ ಮಾಡಿ ಕುಡಿಯುವುದರಿಂದ ಸಹ ಕಫ ಸಮಸ್ಯೆಗೆ ಪರಿಹಾರ ಕಾಣಬಹುದು.
🌹ಬೆಳ್ಳುಳ್ಳಿ ಮತ್ತು ಜೇನು ಮಿಕ್ಸ್ ಮಾಡಿ ತಿನ್ನಿ
ಹೀಗೆ ಮಾಡುತ್ತಾ ಬಂದರೆ ಕೆಮ್ಮು ಕಡಿಮೆಯಾಗುವುದು. ಒಂದು ವೇಳೆ 3 ವಾರವಾದರೂ ಕೆಮ್ಮು ಕಡಿಮೆಯಾಗದಿದ್ದರೆ ವೈದ್ಯರ ಭೇಟಿ ಮಾಡಿ.
🌹ಮೂಗು ಕಟ್ಟಿದ್ದರೆ ಹಬೆ ತೆಗೆದುಕೊಳ್ಳಿ
ದಿನಕ್ಕೆ ಎರಡು ಬಾರಿ ಬಿಸಿ ನೀರಿನ ಹಬೆ ತೆಗೆದುಕೊಂಡರೆ ಕೆಮ್ಮು ಶೀತ ಕಡಿಮೆಯಾಗುವುದು. ಹೀಗೆ ಹಬೆ ತೆಗೆದುಕೊಳ್ಳುವಾಗ 2 ಹನಿ ನೀಲಗಿರಿ ಎಣ್ಣೆ ಹಾಕಿದರೆ ಒಳ್ಳೆಯದು.
No comments:
Post a Comment