Monday, April 15, 2013

ಡಾ. ರಾಜ್ ನೆನಪಿನಲಿ !


ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿಯನ್ನು ಹೇಗೆ ಬಾಳಿಸಿ ಬೆಳಗಬೇಕು ಎಂಬುದನ್ನು ತೋರಿಸಿಕೊಟ್ಟ ಡಾ. ರಾಜ್ ಅನ್ನು ಸ್ಮರಿಸೋಣ ! ಹೀಗೊಂದು ಡಾ. ರಾಜ್ ಸ್ಮರಣ !! ನಮನ !!!
ಕನ್ನಡದ ಕಂದಾ, ನೀ ಕರುನಾಡ ಅಣ್ಣನಾದೆ,
ಕನ್ನಡಿಗರ ಹೃದಯದಲಿ ಕನ್ನಡದ ಉಸಿರಾದೆ,
ಕರುನಾಡು ಬೆಳೆಸಿದ ಮಂದಾರ ಮರವಾದೆ,
ಕೋಟಿ ಕನ್ನಡಿಗರಿಗೆ ಕನ್ನಡದ ಕಣ್ಮಣಿಯಾದೆ.!!!
ಸೌಜನ್ಯ, ಸಭ್ಯತೆಯ ಸೂಸುತ್ತಾ ನಿಂದೆ,
ಸೌರಭವ, ಉತ್ಸಾಹ ಉಕ್ಕಿಸುತ್ತಾ ನಡೆದೆ,
ಸೊಗವ, ಸೊಬಗನು ಸ್ಮರಿಸುತ್ತಾ ಸಾಗಿದೆ,
ಸೋಲು ಕನ್ನಡಕ್ಕಿಲ್ಲ, ಎಂದು ಕೂಗುತ್ತಾ ಕರೆದೆ.!!!
ಇದು ನೆನಪೆಂದರೆ ಬರೀ “ತಪ್ಪು”,
ಇದು ಅಮರ,  ಮಧುರ  ಮುತ್ತಿನ “ಪಪ್ಪು”,
ಇದು ಮಾನವತೆಗೆ  ಸರಿಸಾಟಿಯಾದ “ಒಪ್ಪು”,
ಇದು ಎಂದಿಗೂ, ಎಂದೆಂದಿಗೂ, ಕನ್ನಡಿಗರ “ತೀರ್ಪು”.!!!
ನೀನ್ ಇಟ್ಟ ಸವಿನೆನಪುಗಳ ನೆನಪಿನಲಿ,
ನಾವ್ ಕಟ್ಟ ಬೇಕು ಸುಸಂಸ್ಕೃತಿಯ ಬಾಳ ಸರಪಳಿ,
ನಿನ್ನ ಕನಸದು ಸಹೃದಯ ಸುಂದರ ಬಣ್ಣಗಳಲಿ,
ನಮಗದು, ಆರದ “ದಾರಿದೀಪ” ಕಣ್ ಮನಗಳಲಿ.!!!!!


No comments: