ಪಿ ಬಿ ಶ್ರೀನಿವಾಸ್

SANTOSH KULKARNI
By -
0




ನೆನಪಿನಲ್ಲಿ ಅಚ್ಚು ಉಳಿಯುವ ಧ್ವನಿ ಪಿ ಬಿ ಶ್ರೀನಿವಾಸರದ್ದು. ಅವರ ಹಾಡಿನ ದಾಟಿಯನ್ನು ಹಲವು ಸಂಗೀತಗಾರರು ಅನುಕರಣೆ ಮಾಡಲು ಪ್ರಯತ್ನ ಮಾಡುವಷ್ಟು legacy ಅವರ ಧ್ವನಿಯದ್ದು. ಗಣಪತಿ ಹಬ್ಬದ ಸಮಯ ಪೆಂಡಾಲುಗಳಲ್ಲಿ ಈಗಲೂ ಅವರು ಹಾಡಿದ ಹಾಡುಗಳಿಂದಲೇ ಎಲ್ಲವೂ ಪ್ರಾರಂಭ. ನಿಜಕ್ಕೂ ಸರಸ್ವತಿಯ ಕೃಪೆಯೆಂಬಂತೆ ನಾಲ್ಕೈದು ಭಾಷೆಗಳಲ್ಲಿ ಅದೇ ಭಾಷೆಯವರು ಹಾಡುವದಕ್ಕಿಂತಲೂ ಉತ್ತಮವಾಗಿ ತುಂಬು ಹೃದಯದ ನುಡಿಯಲ್ಲಿ ಹಾಡಿದ ಕೆಲವೇ ಕೆಲವರ ಪಟ್ಟಿಗೆ ಪಿ ಬಿ ಶ್ರೀನಿವಾಸ್ ಸೇರುತ್ತಾರೆ.
ಸ್ಕೂಲಿನಲ್ಲಿದ್ದಾಗ ಆಕಾಶವಾಣಿ, ದೂರದರ್ಶನದಲ್ಲಿ ಇವರ ಹಾಡುಗಳನ್ನು ಕೇಳಿದ್ದ ನನಗೆ ಇವರು ತೆಲುಗು, ತಮಿಳು ಹಾಗು ಇನ್ನುಳಿದ ಭಾಷೆಗಳಲ್ಲೂ ಹಾಡುತ್ತಿದ್ದರು ಎಂಬುದು ತಿಳಿದಿರಲೇ ಇಲ್ಲ. ಕಾಲೇಜಿನಲ್ಲಿದ್ದಾಗ ಒಮ್ಮೆ ಪಿ ಬಿ ಎಸ್ ಧ್ವನಿಯಲ್ಲೇ ಒಂದು ತಮಿಳು ಹಾಡು ಕೇಳಿ - "ಅರೆರೆ, ನಮ್ಮ ಕನ್ನಡದವರು ಇಷ್ಟು ಚೆನ್ನಾಗಿ ತಮಿಳು ಹಾಡನ್ನೂ ಹೇಳಿದ್ದಾರಲ್ಲ" ಎಂದನಿಸಿತ್ತು. ಆ ಲೆಕ್ಕಕ್ಕೆ ಪಿ ಬಿ ಎಸ್ ಈಗಲೂ ನಮಗೆಲ್ಲ ಕನ್ನಡದವರೇ. 

Post a Comment

0Comments

Please Select Embedded Mode To show the Comment System.*