ಪಿಸುಗುಟ್ಟಿದ.. ಹಸಿ ತುಟಿಗಳ ಕಚಗುಳಿ ..:
ಖಾಲಿ
ಖಾಲಿ ಏಕಾಂತ.....
ಈ
ನನ್ನ...
ಮೌನಗಳು
ಮಾತನಾಡುವ ನಿರೀಕ್ಷೆಗಳು...
ಅಂದು
ನಸುನಕ್ಕು
ಪಿಸುಗುಟ್ಟಿದ..
ಹಸಿ
ತುಟಿಗಳ
ಕಚಗುಳಿ ಇನ್ನೂ.. ನನ್ನೆದೆಯಲ್ಲಿದೆ ....
ಹೇಯ್..
ಹುಡುಗಾ....
ನಾ
ಒಂಟಿ
ಒಬ್ಬಂಟಿಯಲ್ಲ ಕಣೊ... ..
ನೀ
ಬಿಟ್ಟು ಹೋದ
ನಿನ್ನ ..
ಬೇಡಗಳು
ಜೊತೆಯಲ್ಲೇ ....
ಇವೆ
ಜೊತೆಯಾಗಿವೆ...
(ರೂಪದರ್ಶಿ : ಭಾರತಿ ಶಂಕರ್
ಗೋವಾ.. )