Friday, April 18, 2025

💐💐ನವ ದುರ್ಗೆಯರು🙏🙏

 1. ವನದುರ್ಗಾ - ಅಗಸ್ತ್ಯರು ವನದಲ್ಲಿ ಕುಳಿತು ತಪಸ್ಸು ಮಾಡಿದಾಗ ವನದೇವಿಯು ಅವರಿಗೆ ಶಕ್ತಿಯನ್ನು ಕೊಟ್ಟಿದ್ದಳು.

2. ಶೂಲಿನೀದುರ್ಗಾ - ತ್ರಿಪುರಾಸುರನ ಸಂಹಾರ ಮಾಡಲು, ಪಾರ್ವತಿಯು ಶಿವನ ಶೂಲದಲ್ಲಿ ಶಕ್ತಿಯನ್ನು ತುಂಬಿದ್ದಳು.

3. ಜಾತವೇದ ದುರ್ಗಾ - ತಾರಕಾಸುರನ ಸಂಹಾರಕ್ಕಾಗಿ, ಶಿವನ ಕೋಪವನ್ನು ಹೋಗಲಾಡಿಸಲು ಪಾರ್ವತಿಯು ಅಗ್ನಿರೂಪವನ್ನು ಧರಿಸಿದ್ದಳು.

4. ಶಾಂತಿದುರ್ಗಾ - ದಕ್ಷಬ್ರಹ್ಮನ ಯಜ್ಞವನ್ನು ಧ್ವಂಸ ಮಾಡುತ್ತಿದ್ದ ಶಿವನ ಗಣಗಳಿಗೆ ಸಮಾಧಾನ ಪಡಿಸಲು, ಶಾಂತ ವಾತಾವರಣವನ್ನುಂಟು ಮಾಡಿದ್ದಳು.

5. ಶಬರೀದುರ್ಗಾ - ಅರ್ಜುನನು ಪರಶಿವನನ್ನು ಕುರಿತು ತಪಸ್ಸು ಮಾಡಿ ಪಾಶುಪತಾಸ್ತ್ರವನ್ನು ಪಡೆಯಲಿದ್ದಾಗ, ಅವನನ್ನು ಪರೀಕ್ಷಿಸಿ ಅನುಗ್ರಹಿಸಲು ಪಾರ್ವತಿಯು ಶಬರೀ (ಬೇಡತಿ) ರೂಪವನ್ನು ಧರಿಸಿದ್ದಳು.

6. ಜ್ವಾಲಾದುರ್ಗಾ - ಲಲಿತಾಂಬಿಕೆಗೂ, ಭಂಡಾಸುರನಿಗೆ ಘೋರವಾದ ಯುದ್ಧ ನಡೆಯುತ್ತಿದ್ದಾಗ, ಲಲಿತಾಂಬಿಕೆಯ ಕೋರಿಕೆಯಂತೆ ಭಯಂಕರವಾದ ರಾತ್ರಿಯಲ್ಲಿ ಅಪಾಯದಿಂದ ಪಾರು ಮಾಡಲು ಪಾರ್ವತಿಯು ಜ್ವಾಲಾಮಾಲಿನಿಯಾಗಿ ಅಗ್ನಿಕೋಟೆ ನಿರ್ಮಿಸಿ, ಭಂಡಾಸುರನ ಮಾಯಾಯುದ್ಧದಿಂದ ಲಲಿತಾಂಬೆಯನ್ನು ರಕ್ಷಿಸಿದ್ದಳು.

7. ಲವಣದುರ್ಗಾ - ಲಕ್ಷ್ಮಣನು ಲವಣಾಸುರನನ್ನು ಕೊಂದು ಕ್ಷೇಮವಾಗಿ ಬರಲೆಂದು ಶ್ರೀರಾಮನು ದೇವಿಯನ್ನು ಪ್ರಾರ್ಥಿಸಿದಾಗ, ದೇವಿಯು ಅಭಯವನ್ನು ಕೊಟ್ಟಿದ್ದಳು.

8. ದೀಪದುರ್ಗಾ - ಯೋಗಸಾಧನೆಯಲ್ಲಿರುವ ಯೋಗಿಗಳಿಗೆ ಯಾವ ಮಾಯೆಯೂ ಪೀಡಿಸದಂತೆ ದೇವಿಯು ದೀಪದುರ್ಗೆಯಾಗಿ ರಕ್ಷಿಸಿದ್ದಳು.

9. ಅಸುರೀ ದುರ್ಗಾ - ಅಮೃತ ಮಥನ ಸಮಯದಲ್ಲಿ ಮೋಹಿನಿಯು ದೇವತೆಗಳಿಗೆ ಮಾತ್ರ ಅಮೃತ ನೀಡುವುದಕ್ಕೆ ದೇವಿಯು ಸಹಾಯಕಳಾಗಿದ್ದಳು.

ʼಶ್ರೀ ಚಕ್ರಂʼ ಪುಸ್ತಕದಿಂದ