Thursday, April 17, 2025

ಬ್ಯಾಟರಿಯನ್ನು ಕಂಡುಹಿಡಿದವರು ಯಾರು?

 ಬ್ಯಾಟರಿಯನ್ನು (Battery) ಅಲೆಸಾಂಡ್ರೊ ವೋಲ್ಟಾ (Alessandro Volta) ಎಂಬ ಇಟಾಲಿಯನ್ ವಿಜ್ಞಾನಿ 1800ರಲ್ಲಿ ಕಂಡುಹಿಡಿದರು.

ಬ್ಯಾಟರಿ ಎನ್ನುವುದು ವಿದ್ಯುತ್ ಶಕ್ತಿಯನ್ನು ರಾಸಾಯನಿಕ ಶಕ್ತಿಯಾಗಿ ಸಂಗ್ರಹಿಸಿ, ಅಗತ್ಯವಿರುವಾಗ ವಿದ್ಯುತ್ ರೂಪದಲ್ಲಿ ಹೊರಸೂಸುವ ಸಾಧನವಾಗಿದೆ.

ಇವರು ವೋಲ್ಟಾಯಿಕ್ ಪೈಲ್ (Voltaic Pile) ಎಂಬ ಸಾಧನವನ್ನು ನಿರ್ಮಿಸಿದರು, ಇದು ನಿರಂತರ ವಿದ್ಯುತ್ ಪ್ರವಾಹ ಒದಗಿಸುವ ಮೊದಲ ಬ್ಯಾಟರಿ ಆಗಿತ್ತು. ಈ ಸಾಧನವು ಜಿಂಕ್ ಮತ್ತು ತಾಮ್ರದ ಹಾಳೆಗಳನ್ನು ಪರ್ಯಾಯವಾಗಿ ರಚಿಸಿ, ಅವುಗಳ ನಡುವೆ ಲವಣದ ದ್ರಾವಣವನ್ನು ಬಳಸುವ ಮೂಲಕ ಕಾರ್ಯನಿರ್ವಹಿಸುತ್ತಿತ್ತು.

ಈ ಆವಿಷ್ಕಾರವೇ ಈ ದಿನದ ಆಧುನಿಕ ಬ್ಯಾಟರಿಗಳಿಗೆ ಬುನಾದಿ ಇರಿಸಿದೆ. ಹೀಗಾಗಿ, ವೋಲ್ಟೇಜ್ (Voltage) ಎಂಬ ಪದ ವೋಲ್ಟಾ ಅವರ ಗೌರವಾರ್ಥವಾಗಿ ನಾಮಕರಣಗೊಂಡಿದೆ.

ಇಟಲಿಯ ಕೊಮೊದಲ್ಲಿ(Como) 1745 ರಲ್ಲಿ ಜನಿಸಿದ ವೋಲ್ಟಾ, ಭೌತಶಾಸ್ತ್ರಜ್ಞರಾಗಿದ್ದರು. ಅವರ ಆರಂಭಿಕ ದಿನಗಳಲ್ಲಿ 1775 ರಲ್ಲಿ ಎಲೆಕ್ಟ್ರೋಫೋರಸ್ ಅನ್ನು ಇನ್ನೂ ಉತ್ತಮ ಮಾಡಿದ್ದರು. ಅವರು 1778 ರಲ್ಲಿ ಮೀಥೇನ್ ಅನಿಲವನ್ನು ಸಹ ಕಂಡುಹಿಡಿದರು.

ವೋಲ್ಟಾ 1779 ರಲ್ಲಿ ಪಾವಿಯಾ(Pavia) ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದರು. ಆ ಸಮಯದಲ್ಲಿ ವಿದ್ಯುತ್ ಸರಿಯಾಗಿ ಅರ್ಥವಾಗದ ವಿದ್ಯಮಾನವಾಗಿತ್ತು, ಇಟಲಿಯ ಮತ್ತೊಬ್ಬ ವಿಜ್ಞಾನಿ ಲುಯೋಜಿ ಗಾಲ್ವಾನಿ/Luigi Galvani ಕಪ್ಪೆ ಗಳಿಗೆ ಸಿಡಿಲಿನ ಸಮಯದಲ್ಲಿ ಲೋಹದಿಂದ ಮುಟ್ಟಿದರೆ ಜೀವಬಂದಂತೆ ಅಲ್ಲಾಡುತ್ತದೆ ಎಂದು ಆಕಸ್ಮಿಕ ವಾಗಿ ಕಂಡು ಹಿಡಿದಿದ್ದರು. ಇದನ್ನು "ಪ್ರಾಣಿ ವಿದ್ಯುತ್" ಎಂದು ಕರೆದರು, ವಿದ್ಯುತ್ ಕಪ್ಪೆಗಳಿಂದ ಬಂದಿದೆ ಎಂದು ಭಾವಿಸಿದ್ದರು. ಆದರೆ ವೋಲ್ಟಾ ಕಪ್ಪೆಗಳು ಕೇವಲ ವಾಹಕಗಳೆಂದು ಹೇಳಿದರು ಅಂದರೆ ಹೊರಗಿನ ವಿದ್ಯುತ್ ಬಲದ( external electrical force) ಕಾರಣದಿಂದ ಕಪ್ಪೆಯ ಕಾಲು ಅಲುಗಾಡುತ್ತಿದೆ ಎಂದು ಹೇಳಿದರು. ಇದೆ ಅವರಿಗೆ ವೊಲ್ಟಾಯಿಕ್ ಪೈಲ್ ನಿರ್ಮಾಣ ಮಾಡಲು ಸ್ಪೂರ್ತಿ ಆಯಿತು.

ವೊಲ್ಟಾಯಿಕ್ ಪೈಲ್ ಮೂಲಭೂತವಾಗಿ ಪರ್ಯಾಯ ಲೋಹದ ಡಿಸ್ಕ್‌ಗಳ ರಾಶಿಯಾಗಿದ್ದು ಪ್ರತಿಯೊಂದೂ ಜಿಂಕ್ ಮತ್ತು ತಾಮ್ರದ ನಡುವೆ ಉಪ್ಪುನೀರಿನಲ್ಲಿ ನೆನೆಸಿದ ಬಟ್ಟೆ ಇಟ್ಟಿದ್ದರು.

ಇಲ್ಲಿ ಜಿಂಕ್ ತಾಮ್ರ ಕ್ಕಿಂತ ಹೆಚ್ಚು reactive/ರೀಯಾಕ್ಟಿವ್, ಆದ್ದರಿಂದ ಜಿಂಕ್ (anode/ಆನೋಡ್) electron/ಎಲೆಕ್ಟ್ರಾನ್ ಅನ್ನು ಬಿಟ್ಟು ಕೊಡುತ್ತದೆ, ಉಪ್ಪು ನೀರು/ಲವಣದ ದ್ರಾವಣ electrolyte/ಎಲೆಕ್ಟ್ರೋಲೈಟ್ ಆಗಿ ಕೆಲಸ ಮಾಡಿ, ಇದರ ಮೂಲಕ ಎಲೆಕ್ಟ್ರಾನ್ ಗಳು ತಾಮ್ರದ(ಕ್ಯಾಥೋಡ್/Cathode) ತನಕ ತಲುಪುತ್ತದೆ. ಇದರಿಂದ ವಿದ್ಯುತ್ ಉತ್ಪಾದನೆ ಆಗುತ್ತದೆ.

ಆ ಸಮಯದಲ್ಲಿ, ಇದು ತುಂಬಾ ಹೊಸ ಕಲ್ಪನೆಯಾಗಿದ್ದರಿಂದ ವೋಲ್ಟಾ ಇದನ್ನು "ಕೃತಕ ವಿದ್ಯುತ್ ಅಂಗ"/ artificial electric organ ಎಂದು ಕರೆದರು. ಇದರಿಂದ ವಿದ್ಯುತ್ ಉತ್ಪಾದನೆ ಅರ್ಥವಾಯಿತು, ಪ್ರಾಣಿ ದೇಹ ಕೇವಲ ವಾಹಕ ಎನ್ನುವುದು ಕೂಡ ಸ್ಪಷ್ಟ ಆಯಿತು.

ವೋಲ್ಟಾಯಿಕ್ ಪೈಲ್ ಸಾಕಷ್ಟು ಸರಳವಾಗಿದ್ದು, ನೀವು ಅದನ್ನು ಕೆಲವು ನಾಣ್ಯಗಳನ್ನು ಬಳಸಿಕೊಂಡು ನಿಮ್ಮ ಸ್ವಂತ ಬ್ಯಾಟರಿಯನ್ನು ತಯಾರಿಸಲು ಬಳಸಬಹುದು. ಕೊನೆಯಲ್ಲಿ ವಿಡಿಯೋ ಇದೆ ನೋಡಿ.

ಇವರ ಆವಿಷ್ಕಾರ ಎಷ್ಟು ಪ್ರಸಿದ್ಧಿ ಪಡೆಯಿತು ಎಂದರೆ ನೆಪೋಲಿಯನ್ ಸ್ವತಃ ವೋಲ್ಟಾ ಅವರನ್ನು ಆಮಂತ್ರಿಸಿ, ನೆಪೋಲಿಯನ್ ಎದುರು ವೋಲ್ಟಾಯಿಕ್ ಪೈಲ್ ಪ್ರದರ್ಶನ ಆಗುತ್ತದೆ.