Showing posts with label BMS. Show all posts
Showing posts with label BMS. Show all posts

Saturday, February 15, 2025

ಯಾರಿಗೆ ಕನ್ನಡದ ಕಣ್ವ ಎಂಬ ಹೆಸರಿದೆ?

 ಬಿ ಎಂ ಶ್ರೀ (ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ) (ಜನವರಿ ೩, ೧೮೮೪ - ಜನವರಿ ೫, ೧೯೪೬) ಕನ್ನಡ ಸಾಹಿತ್ಯ ಇತಿಹಾಸದಲ್ಲಿ ಕನ್ನಡದ ಕಣ್ವ ಎಂದು ಪ್ರಖ್ಯಾತರು.

ಇದಕ್ಕೆ ಕಾರಣ ಬಿಎಂ ಶ್ರೀಕಂಠಯ್ಯ ಓದಿದ್ದು ಇಂಗ್ಲೀಷ್ ಸಾಹಿತ್ಯ ಬೋಧಿಸಿದ್ದು ಇಂಗ್ಲೀಷ್ ಆಧ್ಯಾಪಕರಾಗಿ. ಇಂಗ್ಲಿಷ್ ಬೋಧನೆ ಅವರ ಜೀವನದ ರಹದಾರಿ. ಅವರು ಇಂಗ್ಲಿಷ್ (ಇಂಗ್ಲೀಷ್ ಗೀತೆಗಳು) ಹಾಗೂ ಗ್ರೀಕ್( ಅಶ್ವತ್ಥಾಮನ್)ನ ಪ್ರಮುಖ ಸಾಹಿತ್ಯವನ್ನು ಕನ್ನಡಕ್ಕೆ ತಂದರು. ಇಂಗ್ಲಿಷ್ ಗೀತೆಗಳು ಕನ್ನಡದಲ್ಲಿ ಆಗಿನ ಕುವೆಂಪು ದರಾ ಬೇಂದ್ರೆ ಮುಂತಾದ ಕವಿಗಳಿಗೆ ಕವಿಗಳಿಗೆ ಮಾರ್ಗದರ್ಶಿಯಾಗಿ ನವೋದಯ ಸಾಹಿತ್ಯದ (ಪ್ರಕೃತಿಯಲ್ಲಿ ಆಧ್ಯಾತ್ಮವನ್ನು ಅರಸುವ ಕಾವ್ಯ) ಉಗಮಕ್ಕೆ ಕಾರಣವಾಯಿತು.

ಕಣ್ವ ಮಹರ್ಷಿಗಳು ಶಾಕುಂತಲೆಯನ್ನು ಸಾಕು ತಂದೆಯಾಗಿ ಪೋಷಿಸಿ ಬೆಳೆಸಿದಂತೆ ಇಂಗ್ಲಿಷ್ ಆಧ್ಯಾಪಕರಾದ ಬಿಎಂಶ್ರೀ ಕನ್ನಡದ ಸಾಕು ತಂದೆಯಾಗಿ ಕನ್ನಡ ಸಾಹಿತ್ಯವನ್ನು ಪೋಷಿಸಿ ಬೆಳೆಸಿದ ಕಾರಣಕ್ಕೆ ಅವರನ್ನು ಕನ್ನಡದ ಕಣ್ವ ಎಂದು ಕರೆಯಲಾಗುತ್ತದೆ.