Showing posts with label COMPITATIVE EXAMS. Show all posts
Showing posts with label COMPITATIVE EXAMS. Show all posts

Friday, December 20, 2024

ಕನ್ನಡ ಸಾಹಿತ್ಯದ ಬಗೆಗಿನ ಪ್ರಶ್ನೋತ್ತರಗಳು

1) ಕನ್ನಡದ ಕಾವ್ಯ ಪಿತಾಮಹ ಯಾರು.?
☑️ ಪಂಪ

2) ರನ್ನನ ನಾಟಕೀಯ ಕಾವ್ಯ ಯಾವುದು,?
☑️ ಗದಾಯುದ್ಧ

3) ನಾಡೋಜ ಪಂಪ ಕೃತಿಯ ಕರ್ತೃ ಯಾರು.?
☑️ ಮುಳಿಯ ತಿಮ್ಮಪ್ಪಯ್ಯ

4) ಪಂಪನ ಲೌಕಿಕ ಕಾವ್ಯ ಯಾವುದು.?
☑️ ವಿಕ್ರಮಾರ್ಜುನ ವಿಜಯ

5) ಪಂಪ ಭಾರತದಲ್ಲಿ ವರ್ಣಿತವಾಗಿರುವ ಸರೋವರ ಯಾವುದು.?
☑️ ವೈಶಂಪಾಯನ

6) ಪಂಪಭಾರತದಲ್ಲಿ " ನೆತ್ತಮನಾಡಿ ,ಭಾನುಮತಿ ಸೋಲ್ತೋಡೆ
...ಮುತ್ತಿನ ಕೇಡನೆ ನೋಡಿ ನೋಡಿ ಬಳುತ್ತಿವೆ.," ಈ ಮಾತು ಯಾರ
ಸ್ನೇಹದ ಸಂಕೇತವಾಗಿದೆ..?
☑️ ಕರ್ಣ -ದುರ್ಯೋಧನ

7) ಹಿತಮಿತ ಮೃದು ವಚನ ,ಪ್ರಸನ್ನ
ಗಂಭೀರವದನ ರಚನ ಚತುರ '' ಯಾರ ಶೈಲಿಯಾಗಿದೆ..?
☑️ ಪಂಪ

8) ಪಂಪ ಭಾರತದಲ್ಲಿ ಕೊನೆಯಲ್ಲಿ
ಅರ್ಜುನನೊಡನೆ ಪಟ್ಟಕ್ಕೇರುವಳು ಯಾರು,?
☑️ ಸುಭದ್ರೆ

9) " ಬೆಳಗುವೆನಿಲ್ಲಿ ಲೌಕಿಕವನಲ್ಲಿ ಜಿನಾಗಮಂ " ಎಂಬ ಉಕ್ತಿ ಬರುವ ಕಾವ್ಯ,?
☑️ ಪಂಪ ಭಾರತ

10) " ಕರ್ಣರಸಾಯನ ಮಲ್ತೆ ಭಾರತಂ " ಎಂಬ ಉಕ್ತಿ ಬರುವ ಕಾವ್ಯ ಯಾವುದು..?
☑️ ಪಂಪ ಭಾರತ

11) ಪಂಪ ಭಾರತದಲ್ಲಿ ಬರುವ
"ಅತ್ಯುನ್ನತಿಯೊಳಮಂ ಸಿಂಧೂದ್ಭವಮಂ " ಎಂದರೆ ಯಾರನ್ನು
ಕರೆಯುತ್ತಾರೆ .?
☑️ ಭೀಷ್ಮ

12) " ಭೇದಿಸಲೆಂದು ದಲ್ ನುಡಿದರೆನ್ನದಿರೊಯ್ಯನೆ " ಎಂಬ ಕೃಷ್ಣ ಯಾರ ಕುರಿತು ಹೇಳಿದ್ದಾನೆ..?
☑️ ಕರ್ಣ

13) " ಪಿಡಿಯೆಂ ಚಕ್ರವನೆಂಬ ಚಕ್ರಯ
ನಿಳಾಚಕ್ರಂ ಭಯಂಗೊಳ್ವಿನಂ "
ಎಂದು ತನ್ನ ಕಾರ್ಯ ತಿಳಿಸಿದವರು ಯಾರು,?
☑️ ಭೀಷ್ಮ

14) " ಪಗೆವರ ನಿಟ್ಟೆಲ್ವಂ ಮುರಿವೊಡೆಗೆ
ಪಟ್ಟಂಗಟ್ಟಾ " ಎಂದು ಹೇಳಿದವರು..?
☑️ ಕರ್ಣ

15) ಪಂಪನ ಯಾವ ಕೃತಿ ಮೂರು ತಿಂಗಳಲ್ಲಿ ರಚನೆಯಾಗಿದೆ,?
☑️ ಪಂಪ ಭಾರತ

16) " ಕತೆ ಪಿರಿದಾದೊಡಂ ಕತೆಯ
ಮೆಯ್ಗಿಡಲೀಯದೆ " ರಚಿತವಾದ ಪಂಪನ ಕಾವ್ಯ ಯಾವುದು,?
☑️ ಪಂಪ ಭಾರತ

17) ಪಂಪ ಭಾರತದಲ್ಲಿರುವ ಒಟ್ಟು ಆಶ್ವಾಸಗಳು .?
☑️ 14 ಆಶ್ವಾಸಗಳು

18) " ಪಂಪ ಕನ್ನಡ ಕಾಳಿದಾಸ " ಎಂದು ಹೇಳಿದವರು,?
☑️ ತಿ.ನಂ.ಶ್ರೀ

19) ಸೂಲ್ ಪಡೆಯಲಪ್ಪುದು ಕಾಣ
ಮಹಾಜಿರಂಗದೊಳ್ ಎಂಬ ವಾಕ್ಯ
ಪಂಪನ ಯಾವ ಕಾವ್ಯದಲ್ಲಿದೆ ,?
☑️ ಪಂಪ ಭಾರತ

20) " ಸಂಸ್ಕೃತ ಸಾಹಿತ್ಯಕ್ಕೆ ಆದಿಕವಿ ವಾಲ್ಮೀಕಿ ಆದಂತೆ ಕನ್ನಡ ಆದಿಕವಿ ಪಂಪ " ಈ ಮಾತನ್ನು ಹೇಳಿದವರು ಯಾರು.?
☑️ ಟಿ.ಎಸ್.ವೆಂಕಣಯ್ಯ

21) " ಓಲೈಸಿ ಬಾಳುವುದೇ ಕಷ್ಟಂ ಇಳಾಧಿನಾಧರಂ " ಈ ಮಾತನ್ನು ಹೇಳಿದ ಕವಿ ಯಾರು.?
☑️ ಪಂಪ

22) ವಿಕ್ರಮಾರ್ಜುನ ವಿಜಯದ ಮೂಲ ಆಕರ ಗ್ರಂಥ ಯಾವುದು.?
☑️ ವ್ಯಾಸ ಭಾರತ

23) ರನ್ನನನ್ನು ಶಕ್ತಿ ಕವಿ ಎಂದು ಕರೆದವರು ಯಾರು.?
☑️ ಕುವೆಂಪು

24) " ನಿನ್ನಂ ಪೆತ್ತಳ್ ವೊಲೆವೊತ್ತಳೆ
ವೀರ ಜನನಿವೆಸಂ ವೆತ್ತಳ್ " ಎಂಬ
ಕಾವ್ಯವನ್ನು ದುರ್ಯೋಧನ ಯಾರನ್ನು ಕುರಿತು ಹೇಳಿದ್ದಾನೆ,?
☑️ ಕರ್ಣ

25) ರನ್ನ ತನ್ನ ಗದಾಯುದ್ಧವನ್ನು ಯಾರನ್ನು ಸಮೀಕರಿಸಿ ಹೇಳಿದ್ದಾನೆ,?
☑️ ಸತ್ಯಾಶ್ರಯ ಇರಿವ ಬೆಡಂಗ