Showing posts with label actor. Show all posts
Showing posts with label actor. Show all posts

Saturday, June 7, 2025

What's the most difficult movie scene a child actor has ever done?

 I am going to talk about an Indian film that is vastly underrated despite the presence of an actor who later became superstar and a narrative which was India's official entry to the Oscars.

The film is called Aakhiri Khat (The last letter) starting a debutante Rajesh Khanna, Indrani Mukherjee and a 15 month old child.

This 15 month old child was the centre of the narrative.

A young man meets a village girl, falls in love with her, and gets her impregnated. But he gets a scholarship as an artist and has to leave. The girl gives birth to the child and comes to city searching for her beloved but couldn't find him in his given address. She leaves her “last letter” on the door of the house and keeps waiting for him to come. Exasperated by hunger and thirst, she dies on the street leaving the child alone.

Now the rest of the film is about the toddler roaming on the streets while the man after receiving the letter, goes into the search of the child.

For giving a realistic touch to the film, the director Chetan Anand put the toddler on streets recording him with hand held camera. So a lot of things that the child does in the film are real shots (not all, there are rehearsed shots as well). The toddler was barely aware of what he was doing and it took a lot of efforts to edit out content relevant for the film. I don't know how ethical it is to place a child on street all by himself for a film (I hope there was some guidance).

Master Bunty has worked in more than 20 films in his career but nothing was as significant as his debut film. But that experience must have been a unforgettable if he remembers anything out of it..

Saturday, December 28, 2024

ವಜ್ರಮುನಿ ಜೀವನಚರಿತ್ರೆ

 ಕನ್ನಡ ಚಿತ್ರರಂಗದಲ್ಲಿ ನಟಭೈರವ, ನಟಭಯಂಕರನೆಂದೇ ಖ್ಯಾತಿಯಾಗಿರುವ ವಜ್ರಮುನಿಯವರ ಮೂಲ ಹೆಸರು ಸದಾನಂದ್ ಸಾಗರ್. ತಮ್ಮ ಕಂಚಿನ ಕಂಠ ಮತ್ತು ಆರ್ಭಟದಿಂದ ಒಂದು ಕ್ಷಣ ಪ್ರೇಕ್ಷಕರೆದೆಯಲ್ಲೂ ಭಯ ಮೂಡಿಸುತ್ತಿದ್ದ ವಜ್ರಮುನಿ ಕನ್ನಡ ಕಲಾಲೋಕ ಕಂಡ ದೈತ್ಯ ಪ್ರತಿಭೆ.

1944 ಮೇ 11 ರಂದು ಬೆಂಗಳೂರಿನ ಕನಕನಪಾಳ್ಯದಲ್ಲಿ ಜನಿಸಿದರು. ಸದಾನಂದ ಎಂಬ ಮೂಲ ಹೆಸರಿದ್ದರೂ ಜನಿಸಿದಾಗ ತಮ್ಮ ಕುಲದೈವ `ವಜ್ರಮುನೇಶ್ವರ' ದೇವರ ಹೆಸರಿನ್ನಿಡಲಾಗಿತ್ತು.ಇವರ ತಂದೆ ವಜ್ರಪ್ಪ ಬೆಂಗಳೂರು ಮುನಿಸಿಪಾಲಿಟಿಯ ಕಾರ್ಪೋರೇಟ್ ಆಗಿದ್ದರು. ಕಾಲೇಜು ತೊರೆದು ಚಲನಚಿತ್ರ ಛಾಯಾಗ್ರಹಣ (ಸಿನಿಮ್ಯಾಟೋಗ್ರಫಿ)ಯಲ್ಲಿ ಪದವಿ ಪಡೆದು ನೀನಾಸಂದಲ್ಲಿ ನಟನೆ ಕಲಿತರು.

ನಂತರ ಚಿತ್ರದ ಆಡಿಷನ್ ಗಾಗಿ ಮುಂಬೈಗೆ ಹೋದ ವಜ್ರಮುನಿ ಅಲ್ಲಿ ಕುಣಿಗಲ್ ಪ್ರಭಾಕರ್‌ರವರ `ಪ್ರಚಂಡ ರಾವಣ' ನಾಟಕದ ರಾವಣ ಪಾತ್ರ ಮಾಡಿ ಪುಟ್ಟಣ್ಣ ಕಣಗಾಲ್‌ರನ್ನು ಮೆಚ್ಚಿಸಿದರು. ಪುಟ್ಟಣ್ಣನವರು ತಮ್ಮ ಸಾವಿರ ಮೆಟ್ಟಿಲು ಚಿತ್ರದಲ್ಲಿ ವಜ್ರಮುನಿಯವರಿಗೆ ಅವಕಾಶಕೊಟ್ಟರೂ , ಆ ಚಿತ್ರ ಅರ್ಧಕ್ಕೆ ನಿಂತು ಹೋಯಿತು. ನಂತರ ಕಣಗಾಲ್ ರ `ಮಲ್ಲಮ್ಮನ ಪವಾಡ' ಚಿತ್ರದ ಮೂಲಕ ಕನ್ನಡ ಸಿನಿರಂಗ ಪ್ರವೇಶಸಿದರು.

ನಂತರ ಸಂಪತ್ತಿಗೆ ಸವಾಲ್, ಪ್ರೇಮದ ಕಾಣಿಕೆ, ಗಿರಿಕನ್ನೆ ,ಆಕಸ್ಮಿಕ ಮುಂತಾದ ಚಿತ್ರಗಳಲ್ಲಿ ನಟಿಸಿ ಬಹಳಷ್ಟು ಪ್ರಖ್ಯಾತಿ ಪಡೆದರು. ಡಾ.ರಾಜಕುಮಾರ್ ರವರ ಬಹುತೇಕ ಚಿತ್ರಗಳಲ್ಲಿ ವಜ್ರಮುನಿ ಖಳನಾಯಕನಾಗಿ ನಟಿಸಿದ್ದಾರೆ.ಕರ್ನಾಟಕ ಸರ್ಕಾರದ ಜೀವಮಾನ ಸಾಧನೆ ಪ್ರಶಸ್ತಿ ಪಡೆದಿದ್ದಾರೆ. ರಾಜಕುಮಾರ್ ಜೊತೆ ಕೊನೆಯ ಬಾರಿ ಆಕಸ್ಮಿಕ ಚಿತ್ರದಲ್ಲಿ ನಟಿಸಿದರು. 1998 ರಲ್ಲಿ ತೆರೆಗೆ ಬಂದ ದಾಯಾದಿ ಚಿತ್ರ ವಜ್ರಮುನಿ ನಟಿಸಿದ ಕೊನೆಯ ಚಿತ್ರ.

ರಾಜಕೀಯ ಕುಟುಂಬದಿಂದ ಬಂದಿದ್ದ ಕಾರಣ 1994 ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಫರ್ಧಿಸಿ ಸೋಲನ್ನುಭವಿಸಿದರು.

ಮೂರು ದಶಕಗಳ ತಮ್ಮ ಸಿನಿಜೀವನದಲ್ಲಿ ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು 2006, ಜನೇವರಿ 5 ರಂದು ಮೂತ್ರಪಿಂಡ ವೈಪಲ್ಯದಿಂದ ನಿಧನರಾದರು.

ಆಸಕ್ತಿಕರ ಸಂಗತಿಗಳು

1. ಒಮ್ಮೆ ವಿಧಾನಸಭೆ ಚುಣಾವಣೆ ಪ್ರಚಾರಕ್ಕೆಂದು ವಜ್ರಮುನಿ ಒಂದು ಹಳ್ಳಿಗೆ ಹೋಗಿದ್ದಾಗ, ಅಲ್ಲಿನ ಹೆಣ್ಣು ಮಕ್ಕಳು ವಜ್ರಮುನಿಯವರನ್ನು ನೋಡಿ ಹೆದರಿ ಮನೆ ಬಾಗಿಲು ಹಾಕಿಕೊಂಡಿದ್ದುಂಟು. ಅಷ್ಟರಮಟ್ಟಿಗೆ ಅವರ ಪಾತ್ರಗಳು ಪ್ರಭಾವ ಬೀರಿದ್ದವು.

2. ಮೃದು ಸ್ವಭಾವದವಾರಿಗಿದ್ದ ವಜ್ರಮುನಿ ಚಿತ್ರಗಳ ರೇಪ್ ಸೀನಗಳಲ್ಲಿ ನಟಿಸುವ ಮುನ್ನ, ಆ ಸೀನನಲ್ಲಿ ನಟಿಸುವ ಯುವತಿಯ ಕಾಲಿಗೆ ನಮಸ್ಕಾರ ಮಾಡಿ `ಇದು ನನ್ನ ವೃತ್ತಿಧರ್ಮ, ದಯವಿಟ್ಟು ಕ್ಷಮಿಸಿ' ಎಂದು ಕೇಳಿಕೊಳ್ಳುತ್ತಿದ್ದರು.

Thursday, December 26, 2024

ಉದಯ್ ಕುಮಾರ್




ಕಲಾಕೇಸರಿ ಉದಯ್ ಕುಮಾರ್ ಕನ್ನಡ ಚಲನಚಿತ್ರರಂಗದ ಅಪ್ರತಿಮ ಕಲಾವಿದರಲ್ಲಿ ಒಬ್ಬರು.

ಉದಯ್ ಕುಮಾರ್ 1935ರ ಮಾರ್ಚ್ 5ರಂದು ಜನಿಸಿದರು. ಅವರ ತಂದೆ ಶ್ರೀನಿವಾಸ ಶಾಸ್ತ್ರಿಗಳು ಆನೇಕಲ್ಲಿನಲ್ಲಿ ಶಾನುಭೋಗರಾಗಿದ್ದರು. ಉದಯ್ ಕುಮಾರ್ ಅವರ ಮೂಲ ಹೆಸರು ಸೂರ್ಯನಾರಾಯಣ ಶಾಸ್ತ್ರಿ. ವ್ಯಾಯಾಮ ಶಿಕ್ಷಣ ನೀಡುತ್ತಿದ್ದ ಉದಯ್ ಕುಮಾರ್ ಆಕಸ್ಮಿಕವಾಗಿ ಗುಬ್ಬಿ ಕಂಪನಿಯ ಮೂಲಕ ರಂಗಭೂಮಿ ಸೇರಿ, ‘ಭಾಗ್ಯೋದಯ’ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು.  

‘ರತ್ನಗಿರಿ ರಹಸ್ಯ’ ಚಿತ್ರದ ಟಾರ್ಜಾನ್ ಮಾದರಿಯ ಪಾತ್ರ ಉದಯ್ ಕುಮಾರ್ ಅವರಿಗೆ ಅಪಾರ ಜನಪ್ರಿಯತೆ ತಂದಿತು. ಅಂದಿನ ದಿನಗಳಲ್ಲಿ ಕನ್ನಡ ಚಲನಚಿತ್ರರಂಗದಲ್ಲಿನ ಜನಪ್ರಿಯತೆಯ ಜೊತೆಗೆ ತಮಿಳು, ತೆಲುಗು ಮತ್ತು ಹಲವು ಹಿಂದಿ ಚಲನಚಿತ್ರಗಳಲ್ಲೂ ಅಭಿನಯಿಸಿ ಎಲ್ಲೆಡೆ ಜನಪ್ರಿಯರಾಗಿದ್ದರು. ಅವರು ನಟಿಸಿದ್ದ ಚಿತ್ರಗಳ ಸಂಖ್ಯೆ ಇನ್ನೂರಕ್ಕೂ ಹೆಚ್ಚಿನದು. ಭಾಗ್ಯೋದಯ, ರತ್ನಗಿರಿ ರಹಸ್ಯ, ಚಂದವಳ್ಳಿಯ ತೋಟ, ವೀರಕೇಸರಿ, ಬೆಟ್ಟದ ಹುಲಿ, ಚಂದ್ರಕುಮಾರ, ವಿಜಯನಗರದ ವೀರಪುತ್ರ, ಶ್ರೀ ರಾಮಾಂಜನೇಯ ಯುದ್ಧ, ಸರ್ವಜ್ಞ, ಸ್ಕೂಲ್ ಮಾಸ್ಟರ್, ಮಿಸ್ ಲೀಲಾವತಿ, ಮಧುಮಾಲತಿ, ಸತ್ಯ ಹರಿಶ್ಚಂದ್ರ, ತ್ರಿವೇಣಿ, ಕಲಾವತಿ, ಹೇಮಾವತಿ ಮುಂತಾದವು ಅವರ ಕುರಿತಾದ ನೆನಪಿನಲ್ಲಿ ಮೂಡುವ ಕೆಲವು ಚಿತ್ರಗಳು.  

ಚಲನಚಿತ್ರರಂಗದ ಏಳು ಬೀಳುಗಳಲ್ಲಿ ಪ್ರಖ್ಯಾತ ನಾಯಕನಟ, ಪೋಷಕನಟ, ಖಳನಟ ಹೀಗೆ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ ಉದಯ್ ಕುಮಾರ್ ತಮ್ಮ ಅಭಿನಯದಲ್ಲಿದ್ದ ತನ್ಮಯತೆಯಿಂದ ಚಿತ್ರಪ್ರೇಮಿಗಳ ಕಣ್ಮಣಿಯಾಗಿದ್ದರು. ಅದರಲ್ಲೂ ಬಿರುಸು ಮಾತಿನ ನಿಷ್ಠುರವಾದಿ ಪಾತ್ರಗಳಿಗೆ ಅವರಂತಹ ಕಲಾವಿದ ಅಪರೂಪ ಎಂದರೂ ಸರಿಯೇ. ವಿಶ್ವಾಮಿತ್ರನ ಪಾತ್ರಧಾರಿಯಾಗಿ ಅವರು ನಟಿಸಿದ್ದ ‘ಸತ್ಯ ಹರಿಶ್ಚಂದ್ರ’ದ ಪಾತ್ರ ಅವಿಸ್ಮರಣೀಯವಾದದ್ದು. ಸಂಧ್ಯಾರಾಗದಲ್ಲಿ ರಾಜ್ ಕುಮಾರ್ ಅಣ್ಣನಾಗಿ ನಿಷ್ಠುರಗುಣದ ವ್ಯಕ್ತಿಯಾಗಿ ನಟಿಸಿದ ಅವರ ಪಾತ್ರ ಕೂಡ ಮನಸ್ಸಿನಲ್ಲಿ ಉಳಿಯುವಂತದ್ದು. ರಾಮಾಂಜನೇಯ ಯುದ್ಧ ಚಿತ್ರದಲ್ಲಿ ಹನುಮನ ಪ್ರಾಣ ಹಾಡಿನಲ್ಲಿ ಚಿತ್ರಣ ಮುಗಿದ ಎಷ್ಟೋ ಸಮಯವಾದರೂ ಅವರು ತಮ್ಮ ಪಾತ್ರದಲ್ಲಿ ಪೂರ್ಣ ತನ್ಮಯರಾಗಿಬಿಟ್ಟಿದ್ದರೆಂದು ಅಂದಿನ ದಿನಗಳಲ್ಲಿ ಡಾ. ರಾಜ್ ಕುಮಾರ್ ಅವರು ಸ್ಮರಿಸುತ್ತಿದ್ದರು.      

ಮುಂದೆ ಹೇಮಾವತಿ ಚಿತ್ರದಲ್ಲಿನ ಪ್ರಧಾನ ಪಾತ್ರ ಮತ್ತು ಬಿಳಿ ಹೆಂಡ್ತಿ ಚಿತ್ರದ ಸಣ್ಣ ಪೋಷಕ ಪಾತ್ರಗಳಲ್ಲಿ ಅವರು ನೀಡಿದ ಅಮೋಘ ಅಭಿನಯ ಅಮರವಾದದ್ದು.   

1965ರಲ್ಲಿ ಇದೇ ಮಹಾಸುದಿನ ಎಂಬ ಚಿತ್ರ ನಿರ್ಮಿಸಿದ್ದರು. ಸ್ವತಃ ಬರಹಗಾರರಾದ ಉದಯಕುಮಾರ್‌ರವರು ದ್ವಿಪದಿಗಳು, ನಾಟಕಗಳು ಹಾಗೂ ಚಿತ್ರಗೀತೆಗಳನ್ನು ಸಹಾ ರಚಿಸಿದ್ದರು. ಸಿನಿಮಾ ಮತ್ತು ರಂಗತರಬೇತಿಗಾಗಿ ಕಲಾ ಶಾಲೆಯನ್ನು ಕೂಡಾ ತೆರೆದಿದ್ದರು. ರಂಗತಂಡವನ್ನು ಕಟ್ಟಿ ಬೆಳೆಸಿದ್ದರು

ಒಂದು ಕಾಲದಲ್ಲಿ ಅಪಾರ ವೈಭವದಿಂದ ಬದುಕಿ ಚಿತ್ರರಂಗದ ಬೇಡಿಕೆಯ ಶೃಂಗದಲ್ಲಿದ್ಧ ಉದಯ್ ಕುಮಾರ್ ಇಳಿಮುಖದ ರೇಖೆಯಲ್ಲಿ ಸಣ್ಣಪುಟ್ಟ ಪಾತ್ರಗಳ ಮೊರೆಹೊಗುವಂತಹ ಸ್ಥಿತಿಯಲ್ಲಿ ತಮ್ಮ ಕೊನೆಯ ವರ್ಷಗಳನ್ನು ಕಳೆದರು.  

ಉದಯಕುಮಾರ್ ತಮ್ಮ ಸಾವಿನ ಹಿಂದಿನ ದಿನ ಒಂದು ಕಾಗದದ ಚೂರಿನ ಮೇಲೆ ಬರೆದಿದ್ದರಂತೆ – “ಭಗವಂತ ಎತ್ತಿಕೊಂಡಿರುವ ಕೂಸು ನಾನು; ನನ್ನ ಭವಿಷ್ಯ ಏನು ಎಂಬುದು ಅವನಿಗೊಬ್ಬನಿಗೇ ಗೊತ್ತಿದೆ.” ವೈದ್ಯರು ವಿಶ್ರಾಂತಿಗೆ ಸಲಹೆ ಮಾಡಿದಾಗ ಉದಯಕುಮಾರ್ ವ್ಯಕ್ತಮಾಡಿದ ಪ್ರತಿಕ್ರಿಯೆ: “ಕಲಾವಿದನ ಬಾಳ ಬವಣೆ ಏನು ಎಂಬುದು ವೈದ್ಯರಿಗೇನು ಗೊತ್ತು? ನನ್ನ ಬದುಕು ನಿತ್ಯ ಸಂಗ್ರಾಮವಾಗಿರುವಾಗ ಒಂದು ಕ್ಷಣವಾದರೂ ಪುರುಸೊತ್ತು ಹೇಗೆ ತಾನೇ ಸಾಧ್ಯ?”. ಉದಯಕುಮಾರ್ ಅವರಿಗೆ ಶ್ರದ್ಧಾಂಜಲಿ ಹೇಳುತ್ತಾ ಡಾ. ಹಾ. ಮಾ. ನಾಯಕ್ ಬರೆದಿದ್ದಾರೆ “ಇದು ನಾವು ನಮ್ಮ ಕಲಾವಿದರನ್ನು ನೋಡಿಕೊಳ್ಳುವ ಬಗೆಗೊಂದು ವ್ಯಾಖ್ಯಾನ. ಕೆಲವು ಅತಿರೇಕಗಳನ್ನುಳಿದರೆ ಉದಯಕುಮಾರ್ ಒಬ್ಬ ಶ್ರೇಷ್ಠ ನಟ. ಅವರಿಗೆ ಬದುಕು ಸಂಗ್ರಾಮ! ರಾಜಕೀಯವಿಲ್ಲದೆ ಜನರು ಕಲಾವಿದರನ್ನು ಕಾಣಬೇಕು; ಕಲಾವಿದರೂ ತಮ್ಮ ಬದುಕನ್ನು ಒಂದು ಶಿಸ್ತಿಗೆ ಒಳಪಡಿಸಬೇಕು. ಇದು ಉದಯಕುಮಾರರ ಜೀವನ ಕಲಿಸುವ ಒಂದು ಪಾಠ.”

ಉದಯಕುಮಾರ್ ಕನ್ನಡದ ಕಟ್ಟಾಭಿಮಾನಿ. ಜನರನ್ನು ಉದ್ರೇಕಿಸುವಂತೆ, ನಿರಭಿಮಾನಕ್ಕಾಗಿ ನಾಚುವಂತೆ ಮಾಡಬಲ್ಲ ಮಾತುಗಾರಿಕೆ ಅವರಲ್ಲಿತ್ತು.  

ತಮ್ಮ ಐವತ್ತು ವರ್ಷಗಳ ಬದುಕಿನ ಆಸುಪಾಸಿನಲ್ಲಿ 1985ರ ಡಿಸೆಂಬರ್ 26ರಂದು ನಿಧನರಾದ ಉದಯ್ ಕುಮಾರ್ ಕನ್ನಡ ಚಿತ್ರರಂಗದ ಸ್ಮರಣೀಯ ಗಣ್ಯರಲ್ಲಿ ಪ್ರಮುಖರಾಗಿ ನಿಲ್ಲುವವರು ಎಂಬುದು ನಿರ್ವಿವಾದ.

ಕೃಪೆ : ಕನ್ನಡ ಸಂಪದ (Kannada Sampada) ಫೇಸ್ಬುಕ್ ಪೇಜ್ 

Sunday, December 22, 2024

ಅವಿನಾಶ್


 
ಕನ್ನಡ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ಕೇಳಿ ಬರುತ್ತಿರುವ ಪ್ರಮುಖ ಹೆಸರುಗಳಲ್ಲಿ ಅವಿನಾಶ್ ಒಬ್ಬರು.  ಬಹುಶಃ ಅವರು ಇಲ್ಲದ ಚಿತ್ರಗಳೇ ಇಲ್ಲ ಎನ್ನುವಷ್ಟು ಅವರು ಪ್ರಮುಖರು.  ಪೋಷಕ ಪಾತ್ರಗಳು, ಖಳ ನಟ ಪಾತ್ರಗಳಲ್ಲಿ ಒಂದು ರೀತಿಯ ಹೊಸ ಭಾಷ್ಯ ಬರೆದು ತಮ್ಮ ಹೊಸ ರೀತಿಯ ಅಭಿನಯ, ಶಿಸ್ತು, ಸೌಜನ್ಯ, ಅತ್ಮೀಯತೆಗಳಿಂದ ಚಿತ್ರರಂಗದಲ್ಲಿನ ಉದ್ಯಮಿಗಳು, ಸಹೋದ್ಯೋಗಿಗಳು, ಜೊತೆಗೆ ಪ್ರೇಕ್ಷಕರು ಎಲ್ಲರಿಗೂ ಮೆಚ್ಚಿನವರಾಗಿ ಚಿತ್ರರಂಗದಲ್ಲಿ ಅಪಾರ ಬೇಡಿಕೆಯ ನಟರಾಗಿದ್ದಾರೆ.  ವ್ಯಾಪಾರೀ ಮತ್ತು ಕಲಾತ್ಮಕ ಚಿತ್ರಗಳೆರಡೂ ವಿಭಾಗಗಳಲ್ಲೂ ಅವರು ಗಣನೀಯ ಸಾಧನೆ ಮಾಡಿದ್ದಾರೆ. 

ಅವಿನಾಶ್ 1959ರ ಡಿಸೆಂಬರ್ 22ರಂದು ಮೈಸೂರು ಜಿಲ್ಲೆಯ ಯಳಂದೂರಿನಲ್ಲಿ  ಜನಿಸಿದರು.   ತಂದೆ ಬಿ.ಕೆ ನಾರಾಯಣ ರಾವ್ ಅವರು  ವಕೀಲರಾಗಿದ್ದರು.  ತಾಯಿ ಇಂದಿರಾ ಅವರು.  ಮೈಸೂರಿನ ಹಾರ್ಡ್ವಿಕ್ ಶಾಲೆಯಲ್ಲಿ ಓದಿದ ಅವಿನಾಶ್ ಮುಂದೆ ಮಾನಸ ಗಂಗೋತ್ರಿಯಲ್ಲಿ  ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.  ಅವರು ಓದುತ್ತಿದ್ದ ದಿನಗಳಲ್ಲಿ ಡಾ. ಯು. ಆರ್. ಅನಂತಮೂರ್ತಿ ಮುಂತಾದ ಗಣ್ಯರು ಅವರ ಗುರುಗಳಾಗಿದ್ದರು.  ಓದಿನ ನಂತರದಲ್ಲಿ ಹಲವು ಕಾಲ ಮೈಸೂರಿನ ಶಾರದಾ ವಿಲಾಸ್ ಕಾಲೇಜು, ಬೆಂಗಳೂರಿನ ಬಿ.ಇ.ಎಸ್ ಕಾಲೇಜು, ಬಿ.ಇ.ಎಲ್ ಕಾಲೇಜು, ಎಂ.ಇ.ಎಸ್ ಕಾಲೇಜು ಮುಂತಾದೆಡೆ ಅಧ್ಯಾಪಕ ವೃತ್ತಿ ನಡೆಸಿದರು. 

ತಾವು ವ್ಯಾಸಂಗದಲ್ಲಿದ್ದ ಯುವ ವಯಸ್ಸಿನಲ್ಲೇ ಮೈಸೂರಿನಲ್ಲಿ  ರಂಗ ಚಟುವಟಿಕೆಗಳಿಂದ  ಆಕರ್ಷಿತರಾಗಿದ್ದ ಅವಿನಾಶ್ ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಅದಕ್ಕೆ ಮತ್ತಷ್ಟು ವ್ಯಾಪಕತೆ ಕಂಡುಕೊಂಡರು.  ಹೀಗೆ ಹೆಚ್ಚು ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರಿಂದ ಅವರು ತಮ್ಮ ಅಧ್ಯಾಪಕ ವೃತ್ತಿಗೇ ವಿದಾಯ ಹೇಳಬೇಕಾಗಿ ಬಂತು.  ಬಿ. ಜಯಶ್ರೀ ಅವರ ಸ್ಪಂದನ, ಶಂಕರನಾಗ್ ಅವರ ಸಂಕೇತ್, ಪ್ರಸನ್ನರ ಜನಪದ ಮುಂತಾದ ಪ್ರಖ್ಯಾತ ನಾಟಕ ತಂಡಗಳಲ್ಲಿ ಅವರು ಸಕ್ರಿಯರಾಗಿ ಭಾಗವಹಿಸಿದ್ದರು. 

ಶಂಕರನಾಗ್ ಅವರ ಸಂಕೇತ್ ತಂಡದಲ್ಲಿದ್ದಾಗ ಒಮ್ಮೆ ತ್ರಿಶೂಲ ಎಂಬ ಚಿತ್ರದಲ್ಲಿ ಒಂದು ಪಾತ್ರ ವಹಿಸಿದರು.  ಆ ಚಿತ್ರ ಬಿಡುಗಡೆ ಕಾಣದಿದ್ದರೂ ಕೆ.ವಿ. ರಾಜು ಅವರು ತಮ್ಮ ಹಲವಾರು ಚಿತ್ರಗಳಲ್ಲಿ ಅವಿನಾಶ್ ಅವರಿಗೆ ಅವಕಾಶಗಳನ್ನು ನೀಡಿದರು.  ನಂತರದಲ್ಲಿ ನಿರಂತರವಾಗಿ ಅವರಿಗೆ ಅವಕಾಶಗಳು ಹರಿದು ಬರಲಾರಂಭಿಸಿದವು.  ಅವರ ಪ್ರಾರಂಭಿಕ ಚಿತ್ರಗಳಲ್ಲಿ ಜಿ.ವಿ. ಅಯ್ಯರ್ ಅವರ ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳಲ್ಲಿ ಹೆಸರು ಮಾಡಿದ  ಮಧ್ವಾಚಾರ್ಯ ಚಿತ್ರವೂ ಒಂದು.  

ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಗಿರೀಶ್ ಕಾಸರವಳ್ಳಿ ಅವರ, ಸ್ವರ್ಣಕಮಲ ಪ್ರಶಸ್ತಿ ವಿಜೇತ ‘ದ್ವೀಪ’ ಮತ್ತು ಟಿ. ಎಸ್. ನಾಗಾಭರಣ ಅವರ 'ಸಿಂಗಾರೆವ್ವ' ಚಿತ್ರಗಳಲ್ಲಿನ ಅವಿನಾಶ್ ಅಭಿನಯ ರಾಷ್ಟ್ರೀಯ ಚಲನಚಿತ್ರ ಆಯ್ಕೆ ಜ್ಯೂರಿಯ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.  ಟಿ. ಎನ್. ಸೀತಾರಾಮ್ ಅವರ 'ಮತದಾನ' ಚಿತ್ರದಲ್ಲಿನ ಅಭಿನಯಕ್ಕಾಗಿ ಕರ್ನಾಟಕ  ರಾಜ್ಯ ಸರ್ಕಾರದ ಶ್ರೇಷ್ಠ ಪೋಷಕ ನಟ  ಪ್ರಶಸ್ತಿ ಅವರಿಗೆ  ಸಂದಿತು.  ಆಪ್ತರಕ್ಷಕ ಚಿತ್ರದಲ್ಲಿನ ಪಾತ್ರ ಅವರಿಗೆ ಫಿಲಂ ಫೇರ್  ಶ್ರೇಷ್ಠ ಪೋಷಕ ನಟ ಪ್ರಶಸ್ತಿ ತಂದುಕೊಟ್ಟಿತು.   ಈ ಪ್ರಶಸ್ತಿಗಳೇ ಅಲ್ಲದೆ ತಮ್ಮ ವಿವಿಧ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಹಲವು ಮಾಧ್ಯಮ, ಸಂಘಟನೆಗಳ ವಿವಿಧ ಪ್ರಶಸ್ತಿ ಪಡೆದಿರುವ  ಅವಿನಾಶ್ ಅವರಿಗೆ  ಬೆಂಗಳೂರು ಮಹಾನಗರ ಪಾಲಿಕೆಯ ಕೆಂಪೇಗೌಡ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಗಳೂ ಸಂದಿವೆ.  

ಯಶಸ್ವೀ ಚಿತ್ರಗಳಾದ ‘ಆಪ್ತಮಿತ್ರ’ ಮತ್ತು ‘ಆಪ್ತರಕ್ಷಕ’ ಪಾತ್ರಗಳಲ್ಲಿ ಅವಿನಾಶ್ ಅವರು ಅಭಿನಯಿಸಿದ ರಾಮಚಂದ್ರ ಆಚಾರ್ಯರ ಪಾತ್ರ ಬಹಳಷ್ಟು ಜನಪ್ರಿಯತೆ ಗಳಿಸಿತು.  ಇವರ ‘ಆಪ್ತಮಿತ್ರ’ ಚಿತ್ರದಲ್ಲಿನ ಅಭಿನಯ ಕಂಡ ರಜನೀಕಾಂತ್ ಅವರು ಆ ಚಿತ್ರದ ತಮಿಳು ಅವತರಣಿಕೆಯಾದ ‘ಚಂದ್ರಮುಖಿ’ಯಲ್ಲೂ ಅವರೇ ಇರಬೇಕೆಂದು ಬಯಸಿದರು.  ಅವಿನಾಶ್ ಅವರು ದಕ್ಷಿಣ ಭಾರತದ ಪ್ರಖ್ಯಾತ ನಿರ್ದೇಶಕರುಗಳಾದ  ಗಿರೀಶ್ ಕಾಸರವಳ್ಳಿ, ನಾಗಾಭರಣ, ಸೀತಾರಾಂ ಅವರುಗಳ ಜೊತೆಗೆ,   ಕೆ.ಬಾಲಚಂದರ್, ಎ. ಆರ್. ಮುರುಗದಾಸ್, ಪುರಿ ಜಗನ್ನಾಥ್, ಪಿ. ವಾಸು, ವೆಟ್ರೀ ಮಾರನ್, ಯೋಗರಾಜ್ ಭಟ್, ಸೂರಿ, ಗೌತಮ್ ಮೆನನ್ ಮುಂತಾದ  ಅನೇಕ  ಪ್ರಖ್ಯಾತ ನಿರ್ದೇಶಕರ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.  ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಕೆಲವೊಂದು ಹಿಂದಿ,  ಇಂಗ್ಲಿಷ್ ಭಾಷೆಗಳಲ್ಲಿ ಸೇರಿ  500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.

ದೂರದರ್ಶನದಲ್ಲಿ ಟಿ.ಎನ್.  ಸೀತಾರಾಂ ಅವರ ಪ್ರಖ್ಯಾತ ಧಾರವಾಹಿ ‘ಮಾಯಾಮೃಗ’ದಲ್ಲಿ ನಟಿಸಿದ್ದ ಅವಿನಾಶ್, ಆ ಧಾರವಾಹಿಯಲ್ಲಿ ತಮ್ಮ ಪತ್ನಿ ಪಾತ್ರ ವಹಿಸಿದ್ದ ಮಾಳವಿಕ ಅವರನ್ನು ನಿಜ ಜೀವನದಲ್ಲೂ ವರಿಸಿದ್ದಾರೆ.  ಮಾಳವಿಕ ಕೂಡ ಕನ್ನಡ ಚಿತ್ರರಂಗ ಮತ್ತು  ಕನ್ನಡ ಕಿರುತೆರೆಗಳಲ್ಲಲ್ಲದೆ ದಕ್ಷಿಣ ಭಾರತದ ವಿವಿಧ ಭಾಷೆಯ ಪ್ರಖ್ಯಾತ ಧಾರವಾಹಿಗಳಲ್ಲಿ ಮತ್ತು ಚಲನಚಿತ್ರಗಳಲ್ಲಿ  ನಟಿಸಿ  ಹೆಸರು ಮಾಡಿದ್ದಾರೆ.

ಸಿನಿಮಾದಲ್ಲಿ ಖಳ ಪಾತ್ರ, ಪೋಷಕ ಪಾತ್ರ ಅಂದರೆ ಹೇಗಿದ್ದರೂ ನಡೆಯುತ್ತದೆ ಎಂಬ ಕಾಲವಲ್ಲ ಇದು.  ಅವಿನಾಶ್ ಅಂಗಸೌಷ್ಟವ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರಿಸಲು ದಿನಕ್ಕೆ ಐದಾರು ಕಿಲೋ ಮೀಟರ್ ಓಡುವುದಲ್ಲದೆ ಸಾಕಷ್ಟು ದೈಹಿಕ ವ್ಯಾಯಾಮ ಮಾಡುತ್ತಾರೆ. ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ರಜನೀಕಾಂತ್, ಮಮ್ಮೂಟಿ, ನಾಗಾರ್ಜುನ, ವೆಂಕಟೇಶ್ ಅಂತಹ ಪ್ರಸಿದ್ಧರ ಜೊತೆಯಲ್ಲಷ್ಟೇ ಅಲ್ಲದೆ  ನಂತರದ ವಿವಿಧ ಪೀಳಿಗೆಗಳ ನಟರುಗಳೊಡನೆಯೂ ನಿರಂತರವಾಗಿ ನಟಿಸುತ್ತಾ ಮುಂದೆ ಸಾಗುತ್ತಿದ್ದಾರೆ. 

ಅವಿನಾಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  

ಕೃಪೆ : ಕನ್ನಡ ಸಂಪದ  Kannada Sampada facebook post

Friday, November 8, 2024

Agar tum mil jao - Zeher Lyrics

 


Movie Name : ZEHER

Song Name : Agar Tum Mil Jao Jamana Chod Denge Hum

Agar tum mil jao

Zamana chod denge hum
Agar tum mil jao
Zamana chod denge hum
Agar tum mil jao
Zamana chod denge hum
Tumhe paa kar zamane bhar se rishta tod denge hum
Agar tum mil jao
Zamana chod denge hum
Agar tum mil jao
Zamana chod denge hum

Bina tere koyi dilkash nazara hum na dekheinge
Bina tere koyi dilkash nazara hum na dekheinge
Tumhe na ho pasand usko dobara hum na dekheinge
Teri soorat na ho jis mein
Teri soorat na ho jis mein
Woh sheesha tod denge hum
Agar tum mil jao
Zamana chod denge hum

Tere dil mein raheinge tujhko apna ghar bana lenge
Tere dil mein raheinge tujhko apna ghar bana lenge

Tere khwaabon ko beheno ki tarah khud par saja lenge
Kasam teri kasam
Kasam teri kasam
Taqdeer ka roog mod denge hum
Agar tum mil jao
Zamana chod denge hum

Tumhe hum apne jism-o-jaan mein kuch aise basa lenge
Tumhe hum apne jism-o-jaan mein kuch aise basa lenge
Teri khushboo apne jism ki khushboo bana lenge
Khuda se bhi na jo toote
Khuda se bhi na jo toote
Woh rishta jod lenge hum
Agar tum mil jao
Zamana chod denge hum
Tumhe paa kar zamane bhar se rishta tod denge hum
Agar tum mil jao
Zamana chod denge hum
Agar tum mil jao
Zamana chod denge hum

Wednesday, May 21, 2014

ಪ್ರಸಿದ್ಧ ನಟ-ನಟಿಯರ ಪ್ರಥಮ ಚಲನಚಿತ್ರಗಳು

ಹಳೆ ನಟರು

ಜಿ.ವಿ.ಅಯ್ಯರ್ - ರಾಧಾರಮಣ ( 1943 )

ನರಸಿಂಹರಾಜು - ಬೇಡರ ಕಣ್ಣಪ್ಪ ( 1954 )

ಬಾಲಕೃಷ್ಣ - ರಾಧಾರಮಣ ( 1943 )

ಅಶ್ವಥ್ - ಸ್ತ್ರೀ ರತ್ನ

ರಾಜಕುಮಾರ್ - ಶ್ರೀನಿವಾಸ ಕಲ್ಯಾಣ

ತೂಗುದೀಪ ಶ್ರೀನಿವಾಸ - ತೂಗುದೀಪ

ಶ್ರೀನಾಥ್ - ಮಧುರ ಮಿಲನ

ಗಂಗಾಧರ್ - ಚೌಕದ ದೀಪ

ಮುಸುರಿ ಕೃಷ್ಣಮೂರ್ತಿ - ವಾಣಿ

ರಾಜೇಶ್ - ನಮ್ಮ ಊರು

ಚಂದ್ರಶೇಖರ್ - ಎಡಕಲ್ಲು ಗುಡ್ಡದ ಮೇಲೆ

ಲೋಕೇಶ್ - ಭೂತಯ್ಯನ ಮಗ ಅಯ್ಯು

ಸುದರ್ಶನ್ - ವಿಜಯನಗರದ ವೀರಪುತ್ರ

ಕಲ್ಯಾಣ್ ಕುಮಾರ್ - ನಟಶೇಖರ

ಉದಯಕುಮಾರ್ - ಭಾಗ್ಯೋದಯ 

ಎಂ.ಪಿ.ಶಂಕರ್ - ರತ್ನಮಂಜರಿ

ವಜ್ರಮುನಿ - ಮಲ್ಲಮ್ಮನ ಪವಾಡ

ವಿಷ್ಣುವರ್ಧನ್ - ನಾಗರಹಾವು

ಅಂಬರೀಷ್ - ನಾಗರಹಾವು

ಅನಂತನಾಗ್ - ಸಂಕಲ್ಪ

ಶ್ರೀಧರ್ - ಅಮೃತ ಘಳಿಗೆ

ರಾಮಕೃಷ್ಣ - ಬಬ್ರುವಾಹನ

ಅಶೋಕ್ - ವಿಜಯವಾಣಿ

ಮಾನು - ತಬ್ಬಲಿಯು ನೀನಾದೆ ಮಗನೆ

ಶಂಕರನಾಗ್ - ಒಂದಾನೊಂದು ಕಾಲದಲ್ಲಿ 

ಹಳೆ ನಟಿಯರು 

ಪಂಢರಿಬಾಯಿ - ವಾಣಿ

ಮಂಜುಳ - ಮನೆ ಕಟ್ಟಿ ನೋಡು

ಎಂ.ವಿ.ರಾಜಮ್ಮ - ಮೊದಲ ತೇದಿ

ಹರಿಣಿ - ಜಗನ್ಮೋಹಿನಿ

ಸಾಹುಕಾರ್ ಜಾನಕಿ - ದೇವ ಕನ್ನಿಕೆ 

ಬಿ.ಸರೋಜಾದೇವಿ - ಶ್ರೀರಾಮ ಪೂಜಾ

ಕಲ್ಪನಾ - ಸಾಕು ಮಗಳು

ಭಾರತಿ - ಲವ್ ಇನ್ ಬ್ಯಾಂಗಲೋರ್

ಹೊಸ ನಟರು

ರಾಘವೇಂದ್ರ ರಾಜಕುಮಾರ್ - ಶ್ರೀ ಶ್ರೀನಿವಾಸ ಕಲ್ಯಾಣ ( ೧೯೭೪ ) ಬಾಲನಟ ಚಿರಂಜೀವಿ ಸುಧಾಕರ

ಪುನೀತ್ ರಾಜಕುಮಾರ್ - ಪ್ರೇಮದ ಕಾಣಿಕೆ ( 1976 )  / ಅಪ್ಪು ( 2002 )

ಶಿವರಾಜ್ ಕುಮಾರ್ - ಆನಂದ್ ( 1986 )

ಜೈಜಗದೀಶ್ - ಫಲಿತಾಂಶ

ವಿನೋದ್ ರಾಜ್ - ಡ್ಯಾನ್ಸ್ ರಾಜಾ ಡ್ಯಾನ್ಸ್

ಕಾಶೀನಾಥ್ - ಅನುಭವ

ಸುನಿಲ್ - ಶೃತಿ ( 1990 )

ರಮೇಶ್ - ಸುಂದರ ಸ್ವಪ್ನಗಳು

ಪ್ರಭಾಕರ್ - ಕಾಡಿನ ರಹಸ್ಯ

ದೇವರಾಜ್ - ಆಗಂತುಕ

ಶಶಿಕುಮಾರ್ - ಚಿರಂಜೀವಿ ಸುಧಾಕರ

ಜಗ್ಗೇಶ್ - ಭಂಡ ನನ್ ಗಂಡ

ರವಿಚಂದ್ರನ್ - ಖದೀಮ ಕಳ್ಳರು ( 1982 )

ಕುಮಾರ್ ಬಂಗಾರಪ್ಪ - ವಿಜಯೋತ್ಸವ

ಹೊಸ ನಟಿಯರು

ಸುಧಾರಾಣಿ - [ಕಿಲಾಡಿ ಕಿಟ್ಟು-ಬಾಲ ನಟಿಆನಂದ್ ( 1986 )

ಉಮಾಶ್ರೀ - ಅನುಭವ ( 1987 )

ವಿನಯಾ ಪ್ರಸಾದ್ - ಮಧ್ವಾಚಾರ್ಯ ( 1988 )

ಮಾಲಾಶ್ರೀ - ನಂಜುಂಡಿ ಕಲ್ಯಾಣ ( 1989)

ಸುಮನ್ ರಂಗನಾಥನ್ - ಸಿ.ಬಿ.ಐ.ಶಂಕರ್ ( 1989 )

ಶೃತಿ - ಶೃತಿ ( 1990 ) 

ಭವ್ಯ - ಪ್ರೇಮಪರ್ವ

ಅನು ಪ್ರಭಾಕರ್ - ಚಪಲ ಚನ್ನಿಗರಾಯ ( ಬಾಲ ಕಲಾವಿದೆ ) ಹೃದಯಾ ಹೃದಯಾ ( 1999)

ಹೊಚ್ಚ ಹೊಸ ನಟರು

ವಿಜಯ್ ರಾಘವೇಂದ್ರ - ಚಿನ್ನಾರಿ ಮುತ್ತಾ ( 1993 )

ಉಪೇಂದ್ರ - ಎ ( 1998 )

ಸುದೀಪ್ - ತಾಯವ್ವ ( ಬಿಡುಗಡೆ ಆಗಲಿಲ್ಲ ) ಪ್ರತ್ಯರ್ಥ ( 1999 )

ದರ್ಶನ್ - ಮೆಜೆಸ್ಟಿಕ್ ( 2000 )

ಕೋಮಲ್ - ಕಿಲಾಡಿ ( 2000 ) 

ಅನಿರುದ್ಧ - ಚಿಟ್ಟೆ ( 2001 )

ಧ್ಯಾನ್ - ನನ್ನ ಪ್ರೀತಿಯ ಹುಡುಗಿ ( 2001) 

ಪ್ರೇಮ್ - ನೆನಪಿರಲಿ ( 2005 )

ದುನಿಯಾ ವಿಜಯ್ - ಚಪ್ಪಾಳೆ ( 2005 )  

ಗಣೇಶ್ - ಗುಟ್ಟು / ಚೆಲ್ಲಾಟ ( 2006 )

ದಿಗಂತ್ - ಮಿಸ್ ಕ್ಯಾಲಿಫೋರ್ನಿಯಾ ( 2006 )

ಚೇತನ್ - ಆ ದಿನಗಳು ( 2007 ) 

ಪ್ರಜ್ವಲ್ ದೇವರಾಜ್ - ಗೆಳೆಯ ( 2007 ) 

ಶ್ರೀನಗರ ಕಿಟ್ಟಿ - ಇಂತಿ ನಿನ್ನ ಪ್ರೀತಿಯ ( 2008 )

 ಹೊಚ್ಚ ಹೊಸ ನಟಿಯರು

ರಶ್ಮಿ - ಮೆಲ್ಲುಸಿರೇ ಸವಿಗಾನ (2004 )

ಪೂಜಾ ಗಾಂಧಿ - ಮುಂಗಾರು ಮಳೆ (2006 )

ಶುಭಾ ಪೂಂಜಾ - ಜಾಕ್ ಪಾಟ್ ( 2006 ) 

ಶರ್ಮಿಳಾ ಮಾಂಡ್ರೆ - ಸಜನಿ ( 2007 )

ಐಂದ್ರಿತಾ ರೇ - ಮೆರವಣಿಗೆ ( 2008 )

ರಾಧಿಕಾ ಪಂಡಿತ್ - ಮೊಗ್ಗಿನ ಮನಸು ( 2008 )

ಸೋನು - ಇಂತಿ ನಿನ್ನ ಪ್ರೀತಿಯ ( 2008 )