Showing posts with label compitetive exams. Show all posts
Showing posts with label compitetive exams. Show all posts

Wednesday, January 1, 2025

ವಿವಿಧ ವರ್ಷಗಳಲ್ಲಿ PSI ಪರೀಕ್ಷಯಲ್ಲಿ ಕೇಳಿರುವ ಇತಿಹಾಸ ವಿಭಾಗದ ಪ್ರಶ್ನೋತ್ತರಗಳು



 1) ನರ್ಮದಾ ನದಿಯ ದಂಡೆಯ ಮೇಲೆ ನಡೆದ ಕದನದಲ್ಲಿ ರಾಜ ಹರ್ಷವರ್ಧನನನ್ನು ಸೋಲಿಸಿದ ಚಾಲುಕ್ಯ ದೊರೆ ಯಾರು?

🔹 ಇಮ್ಮಡಿ ಪುಲಿಕೇಶಿ

2) ಕರ್ನಾಟಕ ರಾಜ್ಯ( ಮೈಸೂರು) ದ ಪ್ರಥಮ ಮುಖ್ಯಮಂತ್ರಿ ಯಾರು?
🔸 ಕೆಸಿ ರೆಡ್ಡಿ

3) ಪ್ರಥಮ ಕನ್ನಡ ಶಾಸನ?
🔹 ಹಲ್ಮಿಡಿ ಶಾಸನ

4) "ಇಲ್ಬರ್ಟ್ ಬಿಲ್' ವಿವಾದಕ್ಕೆ ಸಂಬಂಧಿಸಿದ ವೈಸರಾಯರು?
🔸 ಲಾರ್ಡ್ ರಿಪ್ಪನ್

5) ಯಾವ ಕ್ರಾಂತಿಕಾರಿ ಓರ್ವ ತತ್ವಜ್ಞಾನಿಯಾಗಿ ಬದಲಾದರು?
🔹 ಅರವಿಂದ್ ಘೋಷ್

6) 1922 ಫೆಬ್ರವರಿ 5ರಂದು ನಡೆದ ಚೌರಾ ಚೌರಿ ಘಟನೆ ನಡೆದ ಸ್ಥಳ?
🔸 ಉತ್ತರಪ್ರದೇಶದ ಗೋರ್ಖಪೂರ್

7)---ಯನ್ನು ಅನೇಕ ವೇಳೆ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಉಲ್ಲೇಖಿಸಲಾಗಿದೆ?
🔹 1857

8) ಗಡಿನಾಡಿನ ಗಾಂಧಿ ಎಂದು ಜನಪ್ರಿಯರಾದವರು ಯಾರು?
🔸 ಖಾನ್ ಅಬ್ದುಲ್ ಗಫಾರ್ ಖಾನ್

9) ಚಿತ್ರಾಂಗ ಶಸ್ತ್ರಗಾರ ದಾಳಿಯ ಹಿಂದಿದ್ದ ಆಲೋಚನೆಯ ಕೂಸು ಯಾವುದಾಗಿತ್ತು?
🔹 ಸೂರ್ಯ ಸೇನಾ

10)1929 ರ ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ಯವನ್ನು ಘೋಷಿಸಿದವರು?
🔹 ಜವಾಹರಲಾಲ್ ನೆಹರು

11) ವಿಜಯಪುರದ ಆದಿಲ್ ಶಾಹಿ ವಂಶ ಸ್ಥಾಪಕ?
🔸 ಯೂಸುಫ್ ಆದಿಲ್ ಶಾ

12) ಶಂಕರಾಚಾರ್ಯರು ಜನಪ್ರಿಯ ತತ್ವ?
🔹 ಅದ್ವೈತವ

13) ಶ್ರೇಷ್ಠ ದೊರೆ ಕೃಷ್ಣದೇವರಾಯ ವಿಜಯನಗರ ಸಾಮ್ರಾಜ್ಯ ಆಳಿದ ಕಾಲ?
🔸 1509-1529

14) ಬ್ರಿಟಿಷರು ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ನಿರ್ಮಾಣಮಾಡಿದ ಮೊದಲ ಕೋಟೆ ಯಾವುದು?
🔹 ಫೋರ್ಟ್ ಸೇಂಟ್ ಜಾರ್ಜ್

15) ಭಾರತದ ನವೋದಯ ಜನಕ ಎಂದು ಯಾರನ್ನು ಕರೆಯುತ್ತಾರೆ?
🔸 ರಾಜಾರಾಮ್ ಮೋಹನ್ ರಾಯ್

16) ಕರ್ನಾಟಕದ ಶ್ರವಣಬೆಳಗೊಳದ ಪಟ್ಟಣದಲ್ಲಿ ನಡೆದ ಮಹಾಮಸ್ತಾಭಿಷೇಕ ಕಾರ್ಯಕ್ರಮ ಸಂಬಂಧಿಸಿರುವುದು?
🔸 ಬಾಹುಬಲಿ

17) 1954 ರಲ್ಲಿ ಪಾಂಡಿಚೇರಿಯ ಸ್ವತಂತ್ರವಾಗುವ ಮೊದಲು ಯಾವ ಯುರೋಪಿಯನರ ಅಧಿಕಾರವು ಅದನ್ನು ಆಕ್ರಮಿಸಿಕೊಂಡಿತ್ತು?
🔹 ಫ್ರೆಂಚರು

18) ಯಾವ ವೇದಗಳಲ್ಲಿ ಮಾಂತ್ರಿಕ ಯಂತ್ರಗಳ( ಮಾಟ ಮಂತ್ರ) ಬಗ್ಗೆ ಹೇಳುತ್ತದೆ?
🔸 ಅಥರ್ವಣ ವೇದ

19) ಔರಂಗಜೇಬನಿಂದ ಮರಣದಂಡನೆಗೆ ಒಳಗಾದ ಸಿಖರ ಗುರು ಯಾರು?
🔹 ತೇಜ್ ಬಹದ್ದೂರ್

20) ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಮೊದಲ ಮಹಿಳಾ ಅಧ್ಯಕ್ಷೆ ಯಾರು?
🔸 ಅನಿಬೆಸೆಂಟ್

21) ಒಬ್ಬಂಟಿಯಾಗಿ ಸತ್ಯಾಗ್ರಹ ಮಾಡುವುದಕ್ಕೆ ಆಯ್ಕೆಯಾದ ಮೊದಲ ಸತ್ಯಾಗ್ರಹಿ ಯಾರು?
🔹 ವಿನೋಬ ಬಾವೆ

22) 1857 ರಲ್ಲಿ ನಡೆದ ದಂಗೆಯಲ್ಲಿ ನಾನಾ ಸಾಹೇಬರು ಕೆಳಕಂಡ ಯಾವ ಸ್ಥಳದಿಂದ ಬಂದವರಾಗಿರುತ್ತಾರೆ?
🔸 ಕಾನ್ಪುರ್

23) ಗೀತಗೋವಿಂದ ಪುಸ್ತಕವನ್ನು ಬರೆದವರು?
🔹 ಜಯದೇವ

24) ಪಟ್ಟದಕಲ್ಲು ಮತ್ತು ಐಹೊಳೆ ಸುಂದರ ದೇಗುಲಗಳು ನಿರ್ಮಿಸಿದವರು ಯಾರು
🔹 ಬಾದಾಮಿ ಚಾಲುಕ್ಯರು (DAR-2020)

25) ಕಲ್ಯಾಣಿ ಚಾಲುಕ್ಯರಲ್ಲಿ "ಜಗದೇಕ ಮಲ್ಲ" ಎಂಬ ಬಿರುದು ಪಡೆದವರು?
🔸 ಜಯಸಿಂಹ=2

26) 1857 ರ ಪ್ರಥಮ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಭಾರತದ ಗವರ್ನರ್ ಜನರಲ್ ಯಾರಾಗಿದ್ದರು?
🔹 ಲಾರ್ಡ್ ಕ್ಯಾನಿಂಗ್

27) ಸಂಗಮ ಸಾಹಿತ್ಯವು--- ಆಗಿದೆ?
🔸 ದಕ್ಷಿಣ ಭಾರತದ ಪ್ರಾಚೀನ ಇತಿಹಾಸದ ಗುಣ ಲಕ್ಷಗಳನ್ನು ಹೇಳುವ ಮುಂಚಿನ ತಮಿಳು ಸಾಹಿತ್ಯ

28) ಬಾರ್ಡೋಲಿ ಸತ್ಯಾಗ್ರಹದ(1928) ನಾಯಕ ಯಾರಾಗಿದ್ದರು?
🔹 ಸರ್ದಾರ್ ವಲ್ಲಬಾಯ್ ಪಟೇಲ್

29) ಅಜಂತಾ ಗುಹೆಗಳು ಎಲ್ಲಿವೆ?
🔸 ಮಹಾರಾಷ್ಟ್ರ

30) 1946 ರಲ್ಲಿ ಭಾರತಕ್ಕೆ ಆಗಮಿಸಿದ ಕ್ಯಾಬಿನೆಟ್ ಮಿಷನ್ ಯಾರ ಮುಂದಾಳತ್ವದಲ್ಲಿ ಇತ್ತು?
🔹 ಲಾರ್ಡ್ ಫೆಥಿಕ್ ಲಾರೆನ್ಸ್

31) ಗ್ರಾಂಡ್ ಟ್ರಂಕ್ ರಸ್ತೆ ಯನ್ನು ಯಾವ ಅಧಿಕಾರಿಯ ಆಳ್ವಿಕೆಯಲ್ಲಿ ನಿರ್ಮಿಸಲ್ಪಟ್ಟಿತು?
🔸 ಶೇರ್ ಷಾ ಸೂರಿ

32) ಮರಾಠ ಸಾಮ್ರಾಜ್ಯ ದಲ್ಲಿ ಮಂತ್ರಿಮಂಡಲದಲ್ಲಿ "ಪ್ರಧಾನಮಂತ್ರಿಯನ್ನು" ಎಂದು ಕರೆಯುತ್ತಿದ್ದರು?
🔹 ಪೇಶ್ವೆಗಳು

33) ಬೀದರಿನಲ್ಲಿ ಪ್ರಸಿದ್ಧವಾದ "ಮದರಸ" ಸ್ಥಾಪಿಸಿದವರು?
🔸 ಮಹಮ್ಮದ್ ಗವಾನ್

34) ಯಾರ ಅರಸರ ಕಾಲದಲ್ಲಿ ಚೀನಾದ ಬೌದ್ಧ ಯಾತ್ರಿಕ "ಹುಯೆನ್ ತ್ಸಾಂಗ್" ಕರ್ನಾಟಕ ಭೇಟಿ ನೀಡಿದ?
🔹 ಚಾಲುಕ್ಯರ ಸಾಮ್ರಾಜ್ಯದ ಎರಡನೇ ಪುಲಿಕೇಶಿ

35) "ಮೃಚ್ಛಕಟಿಕ" ಅಥವಾ ಲಿಟ್ಟಲ ಕ್ಲೇ ಕಾರ್ಟ್ ಅನ್ನು ಬರೆದ ಕವಿ?
🔸 ಶೂದ್ರಕ

36) ಉತ್ತರ ಭಾರತದಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯ ದೊಡನೆ ಸ್ಪರ್ಧಿಸಲು ಮತ್ತು ಪ್ರಬಲವಾಗಿದ್ದವರು?
🔹 ಪಾಲರು ಮತ್ತು ಪ್ರತಿಹಾರರು

37) ಚಿತ್ತೋಡದ ಪ್ರಖ್ಯಾತ ವಿಜಯಸ್ಥಂಬ ಯಾರ ಕಾಲದಲ್ಲಿ ನಿರ್ಮಾಣವಾಯಿತು?
🔹 ಗುಹಿಲರು (TET-2020)

38) "ಮಾಡು ಇಲ್ಲವೇ ಮಡಿ" ಎಂಬ ಸ್ಲೋಗನ್ ಹಿಡಿದವರು?
🔸 ಮಹಾತ್ಮ ಗಾಂಧೀಜಿ

39) ಹರಪ್ಪದ ಯಾವ ಸ್ಥಳದಲ್ಲಿ ಅಕ್ಕಿಯ ಉಳಿಮೆ ಇತ್ತು?
🔹 ಲೋಥಾಲ್

40) ಕಾಳಿದಾಸನು ಯಾವ ರಾಜನ ಆಸ್ಥಾನದಲ್ಲಿದ್ದನು?
🔸 ಎರಡನೇ ಚಂದ್ರಗುಪ್ತ

41) ಬ್ರಿಟಿಷರ ಭೂಕಂದಾಯ ನೀತಿಗಳಿಂದ ಭಾರತದ ರೈತರು "ಸಾಲದಲ್ಲೇ ಹುಟ್ಟಿ ಸಾಲದಲ್ಲೇ ಬದುಕಿ ಸಾಲದಲ್ಲಿ ಸತ್ತರು" ಎಂದು ಹೇಳಿದವರು?
🔹 ಚಾರ್ಲ್ಸ್ ಮೇಕಾಪ್ (TET-2020)

42) ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಅಶೋಕನ ಶಾಸನವನ್ನು ಪತ್ತೆ ಮಾಡಿದವರು?
🔸 ಚಾಲ್ಸ್ ಬೇಡನ್ (TET-2020)

43) ಮೊದಲೇ ಕರ್ನಾಟಿಕ್ ಯುದ್ಧ ಯಾವ ಒಪ್ಪಂದ ಮೂಲಕ ಕೊನೆಗೊಂಡಿತ್ತು?
🔹 ಎಕ್ಸ-ಲಾ-ಚಾಪೆಲ್ (TET-2020)

44) ರೈತವಾರಿ ಪದ್ಧತಿಯನ್ನು "ಬಾರಾಮಹಲ್" ಪ್ರಾಂತ್ಯದಲ್ಲಿ ಮೊದಲಿಗೆ ಜಾರಿಗೊಳಿಸಿದವರು?
🔸 ಅಲೆಗ್ಸಾಂಡರ್ ರೀಡ್ (TET-2020)

45)1893 ರಲ್ಲಿ ಮಹಾತ್ಮ ಗಾಂಧೀಜಿ ದಕ್ಷಿಣ ಆಫ್ರಿಕಾದ ನಟಾಲಿಗೆ ಹೋಗಲು ಕಾರಣ?
🔹 ದಾದಾ ಅಬ್ದುಲ್ ಮತ್ತು ಕಂಪನಿಯ ವಕಾಲತ್ತು ವಹಿಸಲು (TET-2020)