Showing posts with label redmi. Show all posts
Showing posts with label redmi. Show all posts

Tuesday, January 7, 2025

ಭಾರತದಲ್ಲಿ Redmi 14C 5G ಬಿಡುಗಡೆಯಾಗಿದೆ!



ಭಾರತದಲ್ಲಿ Redmi 14C 5G ಫೋನ್ 50MP ಕ್ಯಾಮೆರಾದೊಂದಿಗೆ ಬಿಡುಗಡೆಯಾಗಿದೆ
Redmi 14C 5G ಸ್ಮಾರ್ಟ್ ಫೋನ್ ಅನ್ನು ಅಧಿಕೃತವಾಗಿ ಗ್ಲಾಸ್ ಬ್ಯಾಕ್‌ನೊಂದಿಗೆ ಅನಾವರಣಗೊಂಡಿದೆ.
Redmi 14C 5G ಸ್ಮಾರ್ಟ್ ಫೋನ್ ಆರಂಭಿಕ 64GB ಸ್ಟೋರೇಜ್ ಕೇವಲ ₹9,999 ರೂಗಳಿಗೆ ಬಿಡುಗಡೆಗೊಳಿಸಿದೆ.

ಭಾರತದಲ್ಲಿ ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ಬ್ರಾಂಡ್ ರೆಡ್ಮಿ (Redmi) ಇಂದು 6ನೇ ಜನವರಿ 2025 ರಂದು ತನ್ನ ಲೇಟೆಸ್ಟ್ Redmi 14C 5G ಸ್ಮಾರ್ಟ್ ಫೋನ್ ಅನ್ನು ಅಧಿಕೃತವಾಗಿ ಗ್ಲಾಸ್ ಬ್ಯಾಕ್‌ನೊಂದಿಗೆ 3 ಬಣ್ಣದ ಆಯ್ಕೆಗಳಲ್ಲಿ ಅನಾವರಣಗೊಳಿಸಿದೆ. ಈ Redmi 14C 5G ಸ್ಮಾರ್ಟ್ ಫೋನ್ 120Hz ರೆಸಲ್ಯೂಶನ್‌ನೊಂದಿಗೆ 6.88 ಇಂಚಿನ ಡಿಸ್‌ಪ್ಲೇ ಮತ್ತು ಸ್ನಾಪ್‌ಡ್ರಾಗನ್ 4 Gen 2 ಚಿಪ್‌ಸೆಟ್‌ನೊಂದಿಗೆ ಬರುತ್ತದೆ. ಇದರ ಆರಂಭಿಕ ಕೇವಲ ₹9,999 ರೂಗಳಿಗೆ ನಿಗದಿಪಡಿಸಿದ್ದು ಇದರ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ಪಡೆಯಿರಿ.

ಭಾರತದಲ್ಲಿ Redmi 14C 5G ಬೆಲೆ ಮತ್ತು ಆಫರ್‌ಗಳೇನು?

ಇಂದು ಬಿಡುಗಡೆಯಾಗಿರುವ Redmi 14C 5G ಬೆಲೆಯ ಬಗ್ಗೆ ಮಾತನಾಡುವುದಾದರೆ ಇದರ ಆರಂಭಿಕ 4GB RAM ಮತ್ತು 64GB ಸ್ಟೋರೇಜ್ ಆಯ್ಕೆಗೆ ₹9,999 ರೂಗಳಾಗಿದ್ದು ಇದರ ಮತ್ತೊಂದು 4GB RAM ಮತ್ತು 128GB ಸ್ಟೋರೇಜ್ ಆಯ್ಕೆಗೆ ₹10,999 ರೂಗಳಾಗಿದೆ.

ಇದರ ಕೊನೆಯ ರೂಪಾಂತರ 6GB RAM ಮತ್ತು 128GB ಸ್ಟೋರೇಜ್ ಆಯ್ಕೆಗೆ ₹11,999 ರೂಗಳಾಗಿದೆ ಬಿಡುಗಡೆಯಾಗಿದೆ. ಈ ಫೋನ್ ಸ್ಟಾರ್‌ಲೈಟ್ ಬ್ಲೂ, ಸ್ಟಾರ್‌ಡಸ್ಟ್ ಪರ್ಪಲ್ ಮತ್ತು ಸ್ಟಾರ್‌ಗೇಜ್ ಕಪ್ಪು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಅಲ್ಲದೆ ಈ Redmi 14C 5G ಮೊದಲ ಮಾರಾಟವನ್ನು Amazon, Flipkart, Mi.com ಮತ್ತು Xiaomi ಸ್ಟೋರ್ಗಳ ಮೂಲಕ 10ನೇ ಜನವರಿ 2025 ರಿಂದ ಮಧ್ಯಾಹ್ನ 12:00 IST ಕ್ಕೆ ಪ್ರಾರಂಭವಾಗಲಿದೆ.

Redmi 14C 5G ವಿಶೇಷಣ ಮತ್ತು ಫೀಚರ್ಗಳೇನು?

ಈ ಲೇಟೆಸ್ಟ್ Redmi 14C 5G ಸ್ಮಾರ್ಟ್ಫೋನ್ 120Hz ರಿಫ್ರೆಶ್ ದರದೊಂದಿಗೆ 6.88 ಇಂಚಿನ HD+ (720×1640 ಪಿಕ್ಸೆಲ್‌ಗಳು) LCD ಅನ್ನು ಹೊಂದಿದೆ. ಫೋಟೋಗಳು ಮತ್ತು ವೀಡಿಯೊಗಳಿಗಾಗಿ, Redmi 14C 5G ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು f/1.8 ಅಪಾರ್ಚರ್‌ನೊಂದಿಗೆ 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ಒಳಗೊಂಡಿದೆ. ಮುಂಭಾಗದಲ್ಲಿ ಹ್ಯಾಂಡ್ಸೆಟ್ 8MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದು ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP52 ರೇಟಿಂಗ್ ಅನ್ನು ಹೊಂದಿದೆ.

Redmi 14C 5G ಸ್ಮಾರ್ಟ್ಫೋನ್ 4nm Snapdragon 4 Gen 2 ಹೊಂದಿದ್ದು LPDDR4X RAM ನೊಂದಿಗೆ ಜೋಡಿಸಲಾಗಿದೆ. ಇದರಲ್ಲಿ ಆನ್‌ಬೋರ್ಡ್ RAM ಅನ್ನು ವಾಸ್ತವಿಕವಾಗಿ 12GB ವರೆಗೆ ವಿಸ್ತರಿಸಬಹುದು. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, ಜಿಪಿಎಸ್, ಗ್ಲೋನಾಸ್, ಗೆಲಿಲಿಯೋ, ಬೀಡೌ, ವೈ-ಫೈ, 3.5 ಎಂಎಂ ಆಡಿಯೊ ಜ್ಯಾಕ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಸೇರಿವೆ. ಇದರಲ್ಲಿ 5160mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವುದರೊಂದಿಗೆ 33W ಇನ್‌ಬಾಕ್ಸ್ ಚಾರ್ಜರ್ ಸಹ ನೀಡುತ್ತಿದೆ.