ಏನೆಂದು ನಾ ಹೇಳಲಿ ನಿನಗೆ

SANTOSH KULKARNI
By -
0 minute read
0
ದಾರಿಯಲಿ ಕಂಡರೆ ನೀನು ಕುಶಲವ ಕೇಳುವೆ ನಾನು
ಆದರೆ ನನ್ನ ಪ್ರೀತಿಯ ಹೇಳಲಾರೆನು ...


ಏಕೆ ಎಂದು ನೀ ಕೇಳಿದರೆ ಏನೆಂದು ನಾ ಹೇಳಲಿ 
ಗೊತ್ತಿಲ್ಲವೇ ಕಾರಣವು ನಿನಗೆ ...


ನನ್ನ ಕನಸಿನ ತುಂಬಾ ನೀನೆ ಇದ್ದರೂ
ನಿನ್ನ ಜೀವನ ಹಾಲಿಗೆ ನಾ ಹುಳಿಯ ಹಿಂಡಲಾರೆ
 ನಿನ್ನ ಪಾಲಿನ ನಾಯಕ ನಾನಾಗದಿದ್ದರೂ
ನಿನ್ನ ಬಾಳಿಗೆ ಖಳನಾಯಕ ನಾನಾಗಲಾರೆ...


ನೀ ಕಂಡರೆ ನನಗೆ ಹುಣ್ಣಿಮೆಯ ಪೂರ್ಣ ಚಂದಿರನ ನೋಡಿದಂತೆ 
ನೀ ಕಾಣದಿದ್ದರೆ ನನಗೆ ಅಮಾವಾಸ್ಸೆಯ  ಕತ್ತಲಂತೆ ನನಗೆ ....  


ನೀ ಮರಳಿ ಬರೆಬೇಡ ನನ್ನ ಜೀವನದಲ್ಲಿ 
ನಾ ಸುಖವಗಿರುವೇನು ನಿನ್ನ ನೆನಪಿನಲ್ಲಿ
ನೀ ಮರಳಿ ಬಂದರೆ ನಾ ಹೇಗೆ ಮರಳಿ ಪ್ರೀತಿಸಲಿ ನಿನ್ನ .....

Post a Comment

0Comments

Post a Comment (0)
Today | 24, February 2025