ಚಂದಿರನ ಮೇಲೆ ಕುಳಿತ ರಾಣಿಯು ನೀನು
ಹೃದಯ ತುಂಬಿ ಪ್ರೀತಿಯ ಕೊಡಲು ನಿಂತ ಪ್ರೇಮಿಯು ನಾನು
ಅತ್ತಿತ್ತ ನೀ ನೋಡದಿರು ನನ್ನ ಕಂಗಳ ಬಿಟ್ಟು
ಚಂದಿರನನ್ನೇ ಮರೆತೆ ನಿನ್ನ ಕಂಗಳ ಹೊಳಪನ್ನು ಕಂಡು
ಜಗವನ್ನೇ ಸುತ್ತುವ ಆಸೆ ನಿನಗೆ, ಕೈ ಹಿಡಿದು ನಡೆಸುವಾಸೆ ನನಗೆ
ಮಗುವಿನಂತೆ ನೋಡು ನೀ ನನ್ನ
ನಿರ್ಮಲವಾದ ಪ್ರೀತಿಯ ಕೊಡುವೆ ನಾ ಚಿನ್ನ
ಬಯಸುವೆ ನನ್ನ ಜೀವನದ ಹಾದಿಯುದ್ದಕ್ಕೂ ನಿನ್ನ
ಎಂದೂ ಉಸಿರ ಕಟ್ಟಿಸದಿರು ಮರೆತು ನೀ ನನ್ನ
ಮನಸಿನಲ್ಲಿಟ್ಟು ನಿನ್ನ ನೋಡಿದರೆ ನಾನು
ಜಗತ್ತೇ ಸುಂದರೆವೆನುಸುತ್ತಿದೆ ಇನ್ನು
ನೋವಲ್ಲೂ ನಾನಿರುವೆ , ನಲಿವಲ್ಲೂ ನಾ ಬರುವೆ
ಜೊತೆಜೊತೆಯಾಗಿ ನಡೆದು ಸೇರುವ ನಾವಿಬ್ಬರೂ ಈ ಜೀವನವೆಂಬ ದಡವನ್ನು
ನಡುದಾರಿಯಲ್ಲಿ ಎಂದೂ ಕೈ ಬಿಡದಿರು ನನ್ನ ಗೆಳತಿ ....