Friday, July 21, 2023

ಆಪರೇಟಿಂಗ್ ಸಿಸ್ಟಮ್ ಎಂದರೇನು?

 ಆಪರೇಟಿಂಗ್ ಸಿಸ್ಟಮ್ (ಓಎಸ್) ಏನು ಎಂದು ಅರ್ಥ ಮಾಡಿಕೊಳ್ಳಲು ಮೊಬೈಲಿನ ಆಂಡ್ರಾಯ್ಡ್ ಅಥವಾ ಐಓಎಸ್ ಆಪರೇಟಿಂಗ್ ಸಿಸ್ಟಮ್ ಅನ್ನು ಅರ್ಥ ಮಾಡಿಕೊಂಡರೆ ಅನುಕೂಲ.

ಒಂದು ಹೊಸ ಮೊಬೈಲಿನಲ್ಲಿ ಯಾವುದೇ ಆಪ್ ಡೌನ್ಲೋಡ್ ಮಾಡದೆ ಏನೇನು ಕೆಲಸಗಳನ್ನು ಮಾಡಬಹುದೋ ಅವೆಲ್ಲವೂ ಆಪರೇಟಿಂಗ್ ಸಿಸ್ಟಮ್ ಎಂದು ಕರೆಯಲ್ಪಡುವ ಸಾಫ್ಟ್ವೇರ್ ಮಾಡುವ ಕೆಲಸಗಳು.

ಅಷ್ಟೇ ಅಲ್ಲ, ಆಪ್ ಡೌನ್ಲೋಡ್ ಮಾಡಲು ಆಮೇಲೆ ಅವುಗಳನ್ನು ನಡೆಸಲು ಸಹಾಯ ಮಾಡುವುದೂ ಕೂಡಾ ಇದೇ ಓಎಸ್.

ಮೊಬೈಲ್ ಓಎಸ್ ಏನೆಲ್ಲಾ ಮಾಡುತ್ತದೆ ನೋಡೋಣ:

  1. ಓಎಸ್ ಎಂಬುದು ಮೊಬೈಲ್ ಮತ್ತು ಬಳಕೆದಾರನ ಮಧ್ಯೆ ಇರುವ ಏಜೆಂಟ್. ಒಂದು ಲಾಡ್ಜ್ ಗೆ ಹೋದರೆ ರಿಸೆಪ್ಷನಿಸ್ಟ್ ಸ್ವಾಗತ ಮಾಡುತ್ತಾಳೆ. ನಿಮ್ಮ ವಿವರಗಳನ್ನು ಮತ್ತು ಅಗತ್ಯಗಳನ್ನು ತಿಳಿದುಕೊಂಡು ರೂಂ ಮತ್ತು ಊಟದ ವ್ಯವಸ್ಥೆ ಮಾಡುತ್ತಾಳೆ. ಓ ಎಸ್ ಕೂಡ ಡಿವೈಸಿನ ಸ್ಕ್ರೀನನ್ನು ಬಳಕೆದಾರನಿಗೆ ಆಕರ್ಷಕವಾಗಿ ಮತ್ತು ಅನುಕೂಲಕರವಾಗಿ ಇಡುತ್ತದೆ.
  2. ಎಸ್ ಎಂ ಎಸ್, ಎಂ ಎಂ ಎಸ್ ಗಳನ್ನು ಕಳಿಸುವ ಮತ್ತು ಸ್ವೀಕರಿಸುವ ಕೆಲಸವನ್ನು ಓಎಸ್ ಮಾಡುತ್ತದೆ.
  3. ಇಂಟರ್ನೆಟ್ ಜಾಲಾಡಲು ವೆಬ್ ಬ್ರೌಸರುಗಳನ್ನು ಉಪಯೋಗಿಸಲು ಓಎಸ್ ಅನುವು ಮಾಡುತ್ತದೆ.
  4. ಇತರ ಮೊಬೈಲು ಅಥವಾ ಟಿವಿ ಅಥವಾ ಕಂಪ್ಯೂಟರ್ ಗಳ ಜತೆ ಸಂಪರ್ಕ ಸಾಧಿಸಲು ಬ್ಲೂಟೂತ್, ವೈಫೈ ಮುಂತಾದ ಸೇವೆಗಳನ್ನು ಓಎಸ್ ದೊರಕಿಸುತ್ತದೆ.
  5. ಮೆಸೇಜುಗಳನ್ನು, ಹಾಡುಗಳನ್ನು, ಬರಹಗಳನ್ನು, ಪುಸ್ತಕಗಳನ್ನು ಸಂಗ್ರಹ ಮಾಡಲು ಓಎಸ್ ಒಬ್ಬ ಮ್ಯಾನೇಜರ್ ಕೆಲಸ ಮಾಡುತ್ತದೆ.
  6. ಒಟ್ಟಿಗೆ ಎರಡು ಮೂರು ಕೆಲಸಗಳನ್ನು ಮಾಡಲೂ ಓಎಸ್ ಬೇಕು.
  7. ಹಲವು ಭಾಷೆಗಳಲ್ಲಿ ಸಂವಹನ ನಡೆಸಲು ಓ ಎಸ್ ಸಹಾಯ ಮಾಡುತ್ತದೆ.
  8. ಇವಲ್ಲದೆ ನೂರಾರು ತರಹದ ಆಪ್ ಗಳನ್ನು ನಡೆಸಲು ಓಎಸ್ ಬೇಕೇ ಬೇಕು.

ಕಂಪ್ಯೂಟರ್ ಗಳ ಓ ಎಸ್ ಕೂಡ ಹೀಗೆಯೇ ಹಾರ್ಡ್ವೇರ್ ಮತ್ತು ಬಳಕೆದಾರರ ಮಧ್ಯೆ ಇರುವ ಅತ್ಯಾವಶ್ಯಕ ಸಾಫ್ಟ್ವೇರ್.

ಪ್ರಮುಖವಾದ ಪರ್ಸನಲ್ ಕಂಪ್ಯೂಟರ್ ಗಳ ಓಎಸ್ ಯಾವುವೆಂದರೆ ಮೈಕ್ರೋಸಾಫ್ಟ್ ವಿಂಡೋಸ್, ಆಪಲ್ ಮ್ಯಾಕ್ ಓಎಸ್, ಗೂಗಲ್ ನ ಕ್ರೋಂ ಓಎಸ್ ಮತ್ತು ಲೀನಕ್ಸ್.

ಒಂದು ಕಂಪ್ಯೂಟರ್ ಆಗಲೀ, ಮೊಬೈಲ್ ಆಗಲೀ, ಸರ್ವರ್ ಆಗಲೀ ಓ ಎಸ್ ಅನ್ನು ಈ ಕೆಳಗಿನ ಚಿತ್ರದಂತೆ ತೋರಿಸಬಹುದು.

No comments:

ಚರ್ಮದ ತುರಿಕೆ? ಹಾಗಾದರೆ ಈ 6 ಮನೆಮದ್ದುಗಳನ್ನು ಪ್ರಯತ್ನಿಸಿ

  ಚರ್ಮದ ತುರಿಕೆ ತುಂಬಾ ಕಿರಿಕಿರಿ ಉಂಟುಮಾಡುತ್ತದೆ. ನೀವು ಹೆಚ್ಚು ಕೆರೆದುಕೊಂಡರೆ ಮಾಡಿದರೆ, ಅದು ಹೆಚ್ಚು ತುರಿಕೆಯಾಗುತ್ತದೆ. ಅತಿಯಾದ ಕೆರೆಯುವಿಕೆ ಚರ್ಮವನ್ನು ಹಾನಿಗ...