ಭಾಗವತದ_ಮಹಿಮೆ

SANTOSH KULKARNI
By -
0

 ಪೂರ್ವ ದಲ್ಲಿ ತುಂಗಾತೀರದಲ್ಲಿ ಒಂದು ಪಟ್ಟಣ.ಅಲ್ಲಿ ವೇದ ಶಾಸ್ತ್ರ ಪಂಡಿತನಾದ ಆತ್ಮದೇವ ಎನ್ನುವ ಬ್ರಾಹ್ಮಣ ಇದ್ದನು.ಬಹಳಷ್ಟು ಸಂಪತ್ತು ಇದ್ದರು ಸಂತಾನ ಇದ್ದಿಲ್ಲ ಅವನಿಗೆ.

ಒಂದು ದಿನ ಅವರಿಗೆ ಅಡವಿಗೆ ಹೋದಾಗ ಅಲ್ಲಿ ಒಬ್ಬ ಯತಿಗಳ ಭೇಟಿ ಆಗುತ್ತದೆ. ಅವರ ಕಾಲಿಗೆ ಬಿದ್ದು ತನ್ನ ಚಿಂತೆಯನ್ನು ಹೇಳಿ ಗೋಳಾಡುತ್ತಾನೆ.ಅವರಿಗೆ ಅವನ ಹಣೆ ಬರಹ ನೋಡಿ ಹೇಳುತ್ತಾರೆ.
ನಿನಗೆ ಸಂತಾನ ಭಾಗ್ಯ ಏಳು ಜನ್ಮಕಳೆದರು ಸಹ ಇಲ್ಲ ಅಂತ..

    ಅವನ ದುಃಖ ನೋಡಲಾಗದೇ ಅವರು ಒಂದು ಹಣ್ಣು ಮಂತ್ರಿಸಿಕೊಟ್ಟು ನಿನ್ನ ಪತ್ನಿಗೆ ಇದನ್ನು ಕೊಡು,ಇದನ್ನು ಸೇವಿಸಲು ನಿಮಗೆ ಒಳ್ಳೆಯ ಪುತ್ರ ಜನನವಾಗುವದು ಅಂತ ಹೇಳುತ್ತಾರೆ.
ಆ ಬ್ರಾಹ್ಮಣ ಅದನ್ನು ತಂದು ತನ್ನ ಪತ್ನಿ ಗೆ ಕೊಟ್ಟು ತಾನು ಬೇರೆ ಕಾರ್ಯ ನಿಮಿತ್ತ ಬೇರೆ ಊರಿಗೆ ಹೋಗುವ. ಅವಾಗ ಅವಳು ಅದರ ಮೇಲೆ ನಂಬಿಕೆ ಇಲ್ಲದೇ ಆ ಹಣ್ಣನ್ನು ತನ್ನ ಮನೆಯಲ್ಲಿ ಇದ್ದ ಹಸುವಿಗೆ ಹಾಕುತ್ತಾಳೆ ಮತ್ತು ತನ್ನ ತಂಗಿ ಗರ್ಭಿಣಿ ಆಗಿದ್ದು ಕಂಡು ಅವಳ ಮಗುವನ್ನು ತನಗೆ ಕೊಡಲು ಒಪ್ಪಂದ ಮಾಡಿಕೊಂಡು ದೂರದ ಊರಿಗೆ ಹೋಗಿದ್ದ ಗಂಡನಿಗೆ ಗರ್ಭಿಣಿ ಎಂದು ಸುಳ್ಳು ಹೇಳುತ್ತಾಳೆ.

    ಕಾಲಕ್ರಮೇಣ ತನ್ನ ತಂಗಿಗೆ ಜನನವಾದ ಗಂಡು ಮಗುವನ್ನು ತನ್ನ ಮಗುವೆಂದು ಹೇಳಿ ಎಲ್ಲಾ ರಿಗು ನಂಬಿಕೆ ಬರುವ ಹಾಗೆ ಮಾಡುತ್ತಾಳೆ.ಮತ್ತು ಆ ಮಗುವಿಗೆ ದುಂದುಕಾರಿ ಅಂತ ಹೆಸರನ್ನು ಇಡುತ್ತಾರೆ.
ಇತ್ತ ಕೊಟ್ಟಿಗೆಯಲ್ಲಿ ಇದ್ದ ಹಸು ಆ ಹಣ್ಣು ತಿಂದು ಒಂದು ಗಂಡು ಮಗುವಿಗೆ ಜನ್ಮ ನೀಡುತ್ತದೆ. ಅದರ ಕಿವಿ ಆಕಳ ಹಾಗೇ ಇದ್ದ ಕಾರಣ ಅವನಿಗೆ ಗೋಕರ್ಣ ಅಂತ ನಾಮಕರಣ ಮಾಡುತ್ತಾರೆ.

ಕಾಲ ಕ್ರಮೇಣ ಇಬ್ಬರು ಬೆಳೆದು,ದೊಡ್ಡವರಾಗಿ ದುಂದುಕಾರಿ ದುಷ್ಟ ಪ್ರವೃತ್ತಿ ಉಳ್ಳವನಾಗಿ ಲೋಕ ಕಂಟಕನಾಗುತ್ತಾನೆ. ಗೋಕರ್ಣ ಒಳ್ಳೆಯ ಪಂಡಿತ ನಾಗುತ್ತಾನೆ.ತನ್ನ ಮಗನ ದುಷ್ಟ ಕಾರ್ಯಗಳನ್ನು ನೋಡಿ ಮನಸ್ಸು ಬೇಸರವಾಗಿ ಆ ಬ್ರಾಹ್ಮಣ ವಾನಪ್ರಸ್ಥಶ್ರಾಮ ಹೋಗಿ ಭಾಗವತ ದಶಮ ಸ್ಕಂದ ಪಾರಾಯಣ ಮಾಡುತ್ತಾ ದೇಹತ್ಯಾಗ ಮಾಡಿ ಸದ್ಗತಿ ಪಡೆಯುತ್ತಾನೆ.ಇವನ ದುಷ್ಟ ಕೃತ್ಯಗಳನ್ನು ಕಂಡು ಅವನ ತಾಯಿಯು ಸಹ ಪ್ರಾಣತ್ಯಾಗ ಮಾಡುವಳು. ನಂತರ ಅವನು ೫ ಜನ ವೇಶ್ಯೆ ಯರ ಸಹವಾಸ ಮಾಡಿ ಅವರಿಗೆ ನಿತ್ಯ ಪೋಷಣೆ ಮಾಡಲು ಕಳ್ಳತನ ಮಾಡುತ್ತಾ ಇದ್ದನು.ಇದನ್ನು ಕಂಡ ಅವರು ನಮ್ಮ ಮೇಲೆ ಅಪವಾದ ಬರುತ್ತದೆ ಅಂತ ವಿಚಾರಿಸಿ ಅವನನ್ನು ಕೊಂದು ಅವನ ಬಳಿ ಇದ್ದ ಸಂಪತ್ತು ತೆಗೆದುಕೊಂಡು ಅವನನ್ನು ಒಂದು ಕಡೆ ಹೂತು ಹಾಕುತ್ತಾರೆ.

    ಆ ನಂತರ ಅವನಿಗೆ ಪ್ರೇತ ಜನ್ಮ ಬರುತ್ತದೆ. ಅದರಿಂದ ಬಹಳ ಭಾದಿತನಾಗಿ ತನ್ನ ಮನೆಗೆ ಬಂದು ತನ್ನ ಸಹೋದರ ನಾದ ಗೋಕರ್ಣನ ಮುಂದೆ ಕಾಣಿಸಿಕೊಂಡು ಹಿಂದೆ ಮಾಡಿದ ಪಾಪ ಕೃತ್ಯಗಳಿಂದ ಈ ಜನ್ಮ ಬಂದಿದೆ.ಬಹಳ ಕಷ್ಟ ವಾಗಿದೆ. ನನಗೆ ಇದರಿಂದ ಮುಕ್ತಿ ಕೊಡಿಸು ಎಂದು ಕೇಳಿಕೊಂಡ. ಅದಕ್ಕೆ ಗೋಕರ್ಣ ನಿನ್ನ ಶ್ರಾದ್ಧ ಕರ್ಮಗಳು ಎಲ್ಲಾ ಮಾಡಿದ್ದೇನೆ.ಗಯಾ ಶ್ರಾದ್ಧ ಸಹ ಆಗಿದೆ ಆದರು ನಿಮಗೆ ಈ ಜನುಮ ಹೋಗಿಲ್ಲ ಅಂದರೆ ವಿಚಾರ ಮಾಡಿ ಹೇಳುವೆ ಅಂತ ಹೇಳಿ ಬಲ್ಲವರನ್ನು ಕೇಳಲು ಎಲ್ಲರು ಸೂರ್ಯದೇವನನ್ನು ಕೇಳು ಅಂತ ಹೇಳುತ್ತಾರೆ ,ಆಗ ಸೂರ್ಯದೇವನ ಕುರಿತು ಗೋಕರ್ಣ ಪ್ರಾರ್ಥನೆ ಮಾಡಿ ನನ್ನ ಅಣ್ಣ ನ ಪ್ರೇತ ಜನ್ಮ ನಿವಾರಣೆ ಬಗ್ಗೆ ಹೇಳಬೇಕು ಅಂತ ಕೇಳಿದಾಗ *ಭಾಗವತ ಸಪ್ತಾಹ ಮಾಡಲು ಸೂರ್ಯದೇವನ ಆಜ್ಞೆ ಆಗುತ್ತದೆ

    ಅದರಂತೆ ತನ್ನ ಮನೆಯ ಹತ್ತಿರ ತುಂಗಭದ್ರಾ ತೀರದಲ್ಲಿ ಸಪ್ತಾಹ ಮಾಡುತ್ತಾನೆ. ಎಲ್ಲಾ ಜನರು, ಭಾಗವತ ಕೇಳುವುದಕ್ಕೆ ಬರುತ್ತಾರೆ. ದುಂದುಕಾರಿ ಪ್ರೇತ ಜನ್ಮ ಇದ್ದ ಕಾರಣ ಕೂಡಲು ಆಗದೇ ಗಾಳಿಯ ರೂಪದಲ್ಲಿ ಬಂದು ಅಲ್ಲಿ ಇದ್ದ ಬಿದಿರುನ ಕೋಲಿನಲ್ಲಿ ಕುಳಿತು ನಿತ್ಯ ಭಾಗವತ ಕೇಳುತ್ತಾ ಇತ್ತು.
ಆ ಬಿದಿರಿಗೆ ಏಳು ಗಂಟುಗಳು ಇದ್ದವು. ಒಂದೊಂದು ದಿನ ಭಾಗವತ ಕೇಳಿದಾಗ ಅದರಲ್ಲಿ ಇದ್ದ ಪ್ರತಿ ಗಂಟು ಆ ದಿನ ದೊಡ್ಡ ಶಬ್ದ ಮಾಡಿ ಒಡೆಯುತ್ತಾ ಇತ್ತು. ಏಳನೆಯ ದಿನ ಸಪ್ತಾಹ ಮುಗಿದಾಗ ಏಳನೆಯ ಗಂಟು ಒಡೆದು ತನ್ನ ಪ್ರೇತ ಜನ್ಮವನ್ನು ಕಳೆದುಕೊಂಡು ಸುಂದರವಾದ ದಿವ್ಯ ರೂಪದಿಂದ, ತುಳಸಿ ಮಾಲೆಯನ್ನು ಧರಿಸಿ, ಪೀತಾಂಬರದಾರಿಯಾಗಿ ಆಭರಣಗಳನ್ನು ಧರಿಸಿದ ದುಂದುಕಾರಿ ಹೊರಬಂದುಎಲ್ಲಾ ರಿಗು ನಮಸ್ಕರಿಸಿ 🙏

    ಭಾಗವತ ಶ್ರವಣದಿಂದ ನನ್ನ ಎಲ್ಲಾ ಪಾಪಗಳು, ಪ್ರೇತ ಜನ್ಮ ಹೋಯಿತು ಅಂತ ಹೇಳಿ ಇದರ ಮಹಿಮೆಯನ್ನು ವರ್ಣಿಸುತ್ತಾನೆ ಮತ್ತು ವಿಷ್ಣು ಲೋಕವನ್ನು ಸೇರುತ್ತಾನೆ. ಈ ರೀತಿ ಭಾಗವತ ಶ್ರವಣದಿಂದ ಅಜ್ಞಾನ ದ ಗಂಟು ಒಡೆದು ಹೃದಯದ ಸಂಶಯ ಪರಿಹಾರವಾಗಿ ಸಕಲ ಪಾಪಕರ್ಮಗಳು ಛೇದನ ವಾಗಿ ಹೋಗುತ್ತದೆ ಇದೇ ಭಾಗವತದ ಮಹಿಮೆ.

🙏ಶ್ರೀ ಕೃಷ್ಣಾರ್ಪಣ ಮಸ್ತು🙏
ಹಾಳು ಹರಟೆಯಾಡಿ ಮನವ |
|ಬೀಳು ಮಾಡಿ ಕೊಳ್ಳಲು ಬೇಡಿ|
|ಏಳು ದಿನದ ಕಥೆಯು ಕೇಳಿ|
|ಏಳಿರೋ ವೈಕುಂಠಕೆ|
ದೋಷಗಳು ಇದ್ದರೆ ತಿದ್ದುಪಡಿ ಮಾಡಿ.
🙏ಅ.ವಿಜಯ ವಿಠ್ಠಲ🙏

Post a Comment

0Comments

Please Select Embedded Mode To show the Comment System.*