ಮಕ್ಕಳು, ಹೆಂಡತಿ, ಮಿತ್ರರು ಮತ್ತು ಧನಗಳಲ್ಲಿ ಅತ್ಯಂತ ವ್ಯಾಮೋಹವನ್ನಿಡಬಾರದು. ಅವರ ಅಗಲಿಕೆ ನಿಶ್ಚಿತ. - ರಾಮಾಯಣ...
ಕಾಮವು ವಿಷಯಭೋಗದಿಂದ ಎಂದಿಗೂ ಶಾಂತವಾಗುವುದಿಲ್ಲ. ತುಪ್ಪದ ಹವಿಸ್ಸಿನಿಂದ ಬೆಂಕಿಯು ಹೆಚ್ಚುವಂತೆ ಅದು ಇನ್ನು ಪ್ರಭಲವಾಗುತ್ತದೆ . - ಮಹಾಭಾರತ ಆದಿಪರ್ವ...
ಸಾವಿರಾರು ತಂದೆ ತಾಯಿಗಳು , ನೂರಾರು ಹೆಂಡರು ಮಕ್ಕಳು ಈ ಸಂಸಾರದಲ್ಲಿ ಆಗಿಹೋದರು.ಹೀಗಿರುವಾಗ ಅವರು ಯಾರ ಸಂಬಂಧಿಗಳು. ? ನಾವು ಯಾರ ಸಂಬಂಧಿಗಳು ? - ಮಹಾಭಾರತ ಶಾಂತಿ ಪರ್ವ ...
ಬೆಳಿಗ್ಗೆ ಮಾಡಿದ ಅಡಿಗೆ ಮತ್ತು ಆಹಾರವು ಹಳಸಿಹೋಗುತ್ತದೆ. ಹೀಗಿರುವಾಗ , ಅದೇ ಅನ್ನರಸದಿಂದ ಬೆಳೆದು ಬಂದ ಈ ಶರೀರ ಹೇಗೆ ನಿತ್ಯವಾದೀತು. - ಗರುಡ ಪುರಾಣ ...
ತಾಳವಿಲ್ಲದ ರಾಗ ಹೇಗೋ, ಮಾನವಿಲ್ಲದ ರಾಜ ಹೇಗೋ, ಮದೋದಕವಿಲ್ಲದ ಆನೆ ಹೇಗೋ, ಹಾಗೆ ಜ್ಞಾನವಿಲ್ಲದ ಯತಿ. - ರಾಮಾಯಣ ...
ಸರ್ಪವು ಜೀರ್ಣವಾದ ಪೊರೆಯನ್ನು ಬಿಡುವಂತೆ , ಯಾವನು ತಾಳ್ಮೆಯಿಂದ ಕೋಪವನ್ನು ದೂರಮಾಡುವನೋ ಅವನೇ ಮನುಷ್ಯ. - ರಾಮಾಯಣ ಸುಂದರ ಕಾಂಡ ...
ಸುಖ ಸಾಧನಗಳಾದ ಪ್ರಿಯ ವಿಷಯಗಳು ಈ ಮೂರುಲೋಕದಲ್ಲಿ ಎಷ್ಟಿವಿಯೋ ಅವೆಲ್ಲವೂ ಸೇರಿದರು, ಇಂದ್ರಿಯಯಗಳ ಸೆಳೆತಕ್ಕೆ ಒಳಗಾದವನನ್ನು ತೃಪ್ತಿಪಡಿಸಲಾರವು. - ಭಾಗವತ ...
ಗಾಳಿಯನ್ನು ಸುತ್ತಿ ಬಂಧಿಸಬಹುದು. ಆಕಾಶವನ್ನಾದರೂ ಕತ್ತರಿಸಬಹುದು. ಅಲೆಗಳನ್ನು ಪೋಣಿಸಬಹುದು. ಆದರೆ ಆಯುಸ್ಸಿನಲ್ಲಿ ನಂಬಿಕೆ ಇಡುವುದಕ್ಕಾಗುವುದಿಲ್ಲ. - ಗರುಡ ಪುರಾಣ ...
ಕಲಿಯುಗದಲ್ಲಿ ಯಾರು ಹರಿಸ್ಮರಣೆ ಮಾಡುತ್ತಾರೋ, ಅಥವಾ ಮಾಡಿಸುತ್ತಾರೆಯೋ, ಅವರೇ ಭಾಗ್ಯಶಾಲಿಗಳು ಹಾಗು ಕೃತಾರ್ಥರು. - ಭಾಗವತ ...
No comments:
Post a Comment