ಸರ್ ಮುದ್ರಾ ಲೋನ್ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಮತ್ತು ಅದನ ಯಾವ ರೀತಿ ಪಡೆಯಬಹುದು?

SANTOSH KULKARNI
By -
1 minute read
0

 

ಪ್ರಧಾನ ಮಂತ್ರಿ ಮುದ್ರ ಸಾಲ. ನನ್ನ ಅಭಿಪ್ರಾಯದಲ್ಲಿ ಸರಿಯಾಗಿ ಸಾಲ ಮರುಪಾವತಿ ಮಾಡುವವರಿಗೆ ಉತ್ತಮ ಯೋಜನೆ.

೦೮/೦೪/೨೦೧೫ ರಂದು ಮುದ್ರಾ ಸಾಲ ಯೋಜನೆ ಯನ್ನು ಪ್ರಧಾನ ಮಂತ್ರಿ ಯವರು ಉದ್ಘಾಟಿಸಿದರು

MUDRA : ಮೈಕ್ರೋ ಯುನಿಟ್ಸ್ ಡೆವಲಪ್ಮೆಂಟ್ ಮತ್ತು ರಿಫೈನಾನ್ಸ್ ಏಜೆನ್ಸಿ ಲಿಮಿಟೆಡ್ ಭಾರತ ಸರ್ಕಾರವು ಸ್ಥಾಪಿಸಿದ ಹೊಸ ‌ಸಂಸ್ಥೆ.

ಕೃಷಿಯೇತರ ಮತ್ತು ಕಾರ್ಪೊರೇಟ್ ಅಲ್ಲದೆ ಕಿರು ಮತ್ತು ಸಣ್ಣ ಉದ್ದಿಮೆಗಳಿಗೆ (ಸೇವಾ ಕ್ಷೇತ್ರ ಮತ್ತು ಉತ್ಪಾದನಾ ವಲಯ) ಸಾಲ ಸುಲಭವಾಗಿ ದೊರಕುವಂತೆ ಮಾಡಿದೆ ಯೋಜನೆ ಪ್ರಧಾನ ಮಂತ್ರಿ ಮುದ್ರ ಯೋಜನೆ.(PMMY)

ಮುದ್ರಾ ಸಾಲದಲ್ಲಿ ಮೂರು ವಿಭಾಗಗಳಾಗಿ ವಿಂಗಡಿಸಿದ್ದಾರೆ.

೧. ಶಿಶು : ೫೦೦೦೦- ವರೆಗಿನ ಸಾಲ.

೨. ಕಿಶೋರ: ೫೦೦೦೧- ರಿಂದ ಐದು ಲಕ್ಷದವರೆಗಿನ ಸಾಲ

೩. ತರುಣ: ಐದು ಲಕ್ಷ ಕ್ಕಿಂತ ಮೇಲೆ ಮತ್ತು ಹತ್ತು ಲಕ್ಷ ದೊಳಗಿನ ಸಾಲ.

ಬೇರೆ ಸಾಲಗಳಿಗಿಂತ ಶೇಕಡ ೧ ಬಡ್ಡಿ ಕಡಿಮೆ.(1%) ಮತ್ತೆ ಮೇಲಾಧಾರ ಭದ್ರತೆಗೆ (collateral security) ಬಲವಂತ ಮಾಡುವ ಮತ್ತು ಜಾಮೀನು ಅಗತ್ಯವಿಲ್ಲ/(Coobligant) ಕೇಳುವಂತಿಲ್ಲ.. ಸಾಲದ ಮೊತ್ತವನ್ನು CGTMSC( Credit Guarantee Fund Trust for Micro & Small Enterprises) ಯಲ್ಲಿ ವಿಮೆ ಮಾಡಿಸಬೇಕು. ಮುದ್ರಾ ಸಾಲ ಯೋಜನೆ ಯಲ್ಲಿ ಸಹಾಯಧನ ಇರುವುದಿಲ್ಲ

ಮುದ್ರಾ ಸಂಸ್ಥೆಯು ನೆರವಾಗಿ ಸಾಲವನ್ನು ನೀಡುವುದಿಲ್ಲ. ಬ್ಯಾಂಕ್ ಗಳು(Banks) ಯಂ ಎಫ್ ಐ, (MFI) ಎನ್ ಬಿಎಫ್ ಸಿ( NBFC) ಈ ಸಂಸ್ಥೆ ಗಳಲ್ಲಿ ಸಾಲವನ್ನು ಕೇಳಿ ಪಡೆಯಬಹುದು.

ಶಿಶು ವಿಭಾಗದಲ್ಲಿ ಸಣ್ಣ ಮೊತ್ತದ ಸಾಲ. ಸೇವಾ ವಲಯ ಮತ್ತು ಉತ್ಪಾದನಾ ವಲಯ. ಹಣ್ಣಿನ ವ್ಯಾಪಾರ. ಬೀಡಾ ಶಾಪ್, ತರಕಾರಿ ವ್ಯಾಪಾರ, ಪಂಚರ್ ಶಾಪ್ ಇತರೆ.

ಕಿಶೋರ: ಹೇರ್ ಕಟಿಂಗ್ ಸಲೂನ್. ವಾ‌ಹನ ರಿಪೇರಿ ಶಾಪ್ . ವಾಹನ ತೊಳೆಯುವ ಶಾಪ್. ಕಂಪ್ಯೂಟರ್ ಸೇವಾ ಕೇಂದ್ರ.ಹಿಟ್ಟಿನ ಗಿರಣಿ , ಬ್ಯೂಟಿಪಾರ್ಲರ್ , ದರ್ಶಿನಿ ಗಳು. ಲಾಂಡ್ರಿಗಳು, ಪಾನಿ ಪುರಿ ಶಾಪ್, ರಸ್ತೆಬದಿ ಕಾರಮಂಡಕ್ಕಿ ಅಂಗಡಿಗಳು ಇತರೆ.

ತರುಣ ವಿಭಾಗದಲ್ಲಿ ಸಣ್ಣ ಉದ್ಯಮ ಉತ್ಪಾದನೆ ಸ್ಥಾಪನೆ ಮಂಡಕ್ಕಿ ಬಟ್ಟಿ. ಐಸ್ ಕ್ರೀಮ್ ಉತ್ಪಾದನೆ, ಅಲ್ಯುಮಿನಿಯಂ ಕಿಟಕಿ ಬಾಗಿಲುಗಳು ಸೇವಾ ವಲಯ., ಕಬ್ಬಿಣದ ಬಾಗಿಲು ಮತ್ತು ಬೀರುಗಳು , ದರ್ಶಿನಿ ಗಳು. ಸ್ಪಾಗಳು ಇತರೆ.

2023–24 ನೇ ಆಯ ವ್ಯಯದಲ್ಲಿ ವಿತ್ತ ಸಚಿವರು ಮುದ್ರಾ ಯೋಜನೆ ಯಲ್ಲಿ ಹತ್ತು ಲಕ್ಷ ರೂಪಾಯಿ ಯಿಂದ ಇಪ್ಪತ್ತು ಲಕ್ಷ ದೊಳಗಿನ ಸಾಲ ಹೆಚ್ಚಿಸಿದ್ದಾರೆ. ಇದಕ್ಕೆ ತರುಣ ಪ್ಲಸ್ ಅಂತ ವಿಭಾಗ ಮಾಡಿದ್ದಾರೆ. ಸರಿಯಾಗಿ ಸಾಲ ಮರುಪಾವತಿ ಮಾಡುವವರಿಗೆ ರೂಪಾಯಿ ೧೦ ಲಕ್ಷದಿಂದ ರೂಪಾಯಿ ೨೦ಲಕ್ಷದವರಿಗೆ ಸಾಲ ಉದ್ದಿಮೆ ಉನ್ನತಿಗೆ ಮತ್ತು ವಿಸ್ತರಣಾಗೆ ಸಾಲ ಪಡೆಯಬಹುದು.

ಮುದ್ರಾ ಸಾಲದ ಅರ್ಜಿಗಳನ್ನು ಉದ್ಯಮಿಮಿತ್ರ ಪೋರ್ಟಲ್ ಆನ್ಲೈನ್ ಮುಖಾಂತರ ಸಲ್ಲಿಸಬಹುದು.

ಈ ಕೆಳಗಿನ ಕರಪತ್ರ ನನ್ನು ವೀಕ್ಷಿಸಿ.

Tags:

Post a Comment

0Comments

Post a Comment (0)
Today | 13, April 2025