Showing posts with label Chakravyuha. Show all posts
Showing posts with label Chakravyuha. Show all posts

Tuesday, April 1, 2025

ಚಕ್ರವ್ಯೂಹ

 


ನಿಸ್ಸಂದೇಹವಾಗಿ, ದ್ವಾಪರ ಯುಗದ ಕಾಲದಲ್ಲಿ 48 × 120 ಕಿಲೋಮೀಟರ್ ಪ್ರದೇಶದ ಕುರುಕ್ಷೇತ್ರದ ರಣ ಭೂಮಿಯಲ್ಲಿ ನಡೆದ ಮಹಾಭಾರತದ ಭೀಕರ ಯುದ್ಧವು ವಿಶ್ವದ ಅತೀ ದೊಡ್ಡ ಯುದ್ಧವಾಗಿತ್ತು. ಇದರಲ್ಲಿ ಭಾಗವಹಿಸಿದ ಸೈನಿಕರ ಸಂಖ್ಯೆ 1.8 ಕೋಟಿ ಆಗಿತ್ತು.

ಪರಮಾಣು ಶಸ್ತ್ರಾಸ್ತ್ರಗಳನ್ನು ಒಳಗೊಂಡಂತೆ ಇಂತಹ ಭೀಕರ ಯುದ್ಧವು ಇತಿಹಾಸದಲ್ಲಿ ಒಮ್ಮೆ ಮಾತ್ರ ಸಂಭವಿಸುತ್ತದೆ ಮತ್ತು ಅದರಲ್ಲಿ ರಚಿಸಲಾದ ಅತ್ಯಂತ ಭಯಾನಕ ತಂತ್ರವೆಂದರೆ 'ಚಕ್ರವ್ಯೂಹ'
ಚಕ್ರ ಎಂದರೆ ತಿಗರಿ (ಗಾಲಿ) ಮತ್ತು ‘ವ್ಯೂಹ ಎಂದರೆ ರಚನೆ’. ಚಕ್ರದಂತೆ ನಿರಂತರವಾಗಿ ತಿರುಗುವ ಸೈನಿಕರ ರಚನೆಯನ್ನು ಚಕ್ರವ್ಯೂಹ ಎಂದು ಕರೆಯಲಾಗುತ್ತದೆ ಮತ್ತು ಮಹಾಭಾರತದ ಭೀಕರ ಯುದ್ಧದ ಅತ್ಯಂತ ಅಪಾಯಕಾರಿ ಯುದ್ಧ ವ್ಯವಸ್ಥೆಯು ಈ ಚಕ್ರವ್ಯೂಹವಾಗಿತ್ತು.
ಇಂದಿನ ಆಧುನಿಕ ಜಗತ್ತಿಗೆ ಚಕ್ರವ್ಯೂಹದಂತಹ ಯುದ್ಧ ರಚನೆಯ ವ್ಯವಸ್ಥೆಯ ಬಗ್ಗೆ ತಿಳಿದಿಲ್ಲ. ಚಕ್ರವ್ಯೂಹ ಅಥವಾ ಪದ್ಮವ್ಯೂಹವನ್ನು ಭೇದಿಸುವುದು ಅಸಾಧ್ಯವಾಗಿತ್ತು. ದ್ವಾಪರ ಯುಗದ ಕಾಲದಲ್ಲಿ ಕೇವಲ ಏಳು ಜನರಿಗೆ ಮಾತ್ರ (ಶ್ರೀಕೃಷ್ಣ, ಅರ್ಜುನ, ಭೀಷ್ಮ, ದ್ರೋಣಾಚಾರ್ಯ, ಕರ್ಣ, ಅಶ್ವತ್ಥಾಮ ಮತ್ತು ಶ್ರೀಕೃಷ್ಣನ ಮಗ ಪ್ರದ್ಯುಮ್ನ) ಈ ವ್ಯೂಹವನ್ನು ಹೇಗೆ ಭೇದಿಸಬೇಕೆಂದು ತಿಳಿದಿತ್ತು. ಅಭಿಮನ್ಯುವಿಗೆ ಚಕ್ರವ್ಯೂಹದೊಳಗೆ ಹೇಗೆ ಪ್ರವೇಶಿಸಬೇಕೆಂದು ಮಾತ್ರ ತಿಳಿದಿತ್ತೇ ಹೊರತು ಚಕ್ರವ್ಯೂಹದೊಳಗಿನಿಂದ ಹೊರಗೆ ಬರುವುದು ತಿಳಿದಿರಲಿಲ್ಲ.
ಚಕ್ರವ್ಯೂಹದ ರಚನೆಯು ತುಂಬಾ ಜಟಿಲವಾಗಿರುತ್ತದೆ. ಅದರಲ್ಲಿ ಶತ್ರುಗಳು ಒಮ್ಮೆ ಸಿಕ್ಕಿಬಿದ್ದರೆ, ಘನಘೋರವಾಗಿ ಸಾಯುತ್ತಾನೆ. ಚಕ್ರವ್ಯೂಹದಲ್ಲಿ, ಪ್ರತಿಯೊಂದು ಪದರದ ಸೈನ್ಯವು ಗಡಿಯಾರದ ಮುಳ್ಳುಗಳಂತೆ ಪ್ರತಿ ಕ್ಷಣವೂ ತಿರುಗುತ್ತಲೇ ಇರುತ್ತದೆ. ಈ ಕಾರಣದಿಂದಾಗಿ, ಚಕ್ರವ್ಯೂಹ ರಚನೆಯನ್ನು ಪ್ರವೇಶಿಸುವ ವ್ಯಕ್ತಿಯು ಒಳಗೇ ದಿಕ್ಕುತಪ್ಪಿ ತಬ್ಬಿಬ್ಬಾಗಿ ದಾರಿ ಕಾಣದಂತಾಗಿ ಎತ್ತ ಸಾಗಬೇಕೆಂದು ತಿಳಿಯದಂತಾಗುತ್ತಾನೆ. ಮತ್ತು ಹೊರಬರುವ ಮಾರ್ಗವನ್ನು ಮರೆತುಬಿಡುತ್ತಾನೆ.
ಚಕ್ರವ್ಯೂಹವನ್ನು ತಿರುಗುವ ಸಾವಿನ ಚಕ್ರ ಎಂದೂ ಕರೆಯುತ್ತಾರೆ. ಏಕೆಂದರೆ ಒಮ್ಮೆ ಈ ವ್ಯೂಹದೊಳಗೆ ಹೋದರೆ, ಅವನು ಹೊರಗೆ ಬರಲು ಸಾಧ್ಯವೇ ಇಲ್ಲ. ಭೂಮಿಯಂತೆ ಅದು ತನ್ನದೇ ಪರಿಧಿಯಲ್ಲಿ ತಿರುಗುತ್ತಲೇ ಇರುತ್ತದೆ.
ಏಳು ಪದರಗಳುಳ್ಳ ಚಕ್ರವ್ಯೂಹದ ಒಳ ಪದರದಲ್ಲಿ ವೀರ ಸೈನಿಕರನ್ನು ನಿಯೋಜಿಸಲಾಗಿರುತ್ತದೆ. ಹೊರಗಿನ ಪದರದ ಸೈನಿಕರಿಗಿಂತಲೂ ಒಳಗಿನ ಪದರದ ಸೈನಿಕರು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಲಶಾಲಿಯಾಗಿರುವ ರೀತಿಯಲ್ಲಿ ಈ ಚಕ್ರವ್ಯೂಹದ ಪದರವನ್ನು ರಚಿಸಲಾಗಿರುತ್ತದೆ. ಹೊರಗಿನ ಪದರದಲ್ಲಿ ಪದಾತಿ ಸೈನ್ಯದ ಸೈನಿಕರನ್ನು ನಿಯೋಜಿಸಲಾಗಿರುತ್ತದೆ. ಒಳ ಪದರದಲ್ಲಿ ಆಯುಧಗಳಿಂದ ಕೂಡಿದ ರಥ, ಕುದುರೆ, ಆನೆಗಳ ಸೈನ್ಯವಿರುತ್ತದೆ.
ಮಹಾಭಾರತದಲ್ಲಿ ಗುರು ದ್ರೋಣಾಚಾರ್ಯರು ಮಾತ್ರ ಇಂತಹಾ ವ್ಯೂಹವನ್ನು ರಚಿಸುತ್ತಿದ್ದರು. ಚಕ್ರವ್ಯೂಹವನ್ನು ಆ ಯುಗದ ಅತ್ಯುತ್ತಮ ಮಿಲಿಟರಿ ಯುದ್ಧಭೂಮಿ ಎಂದು ಪರಿಗಣಿಸಲಾಗಿತ್ತು. ಪಾಂಡವರಲ್ಲಿ ಜೇಷ್ಠನಾದ ಯುಧಿಷ್ಠಿರನನ್ನು ಸೆರೆಹಿಡಿಯಲೆಂದೇ ಈ ವ್ಯೂಹ ಶ್ರೇಣಿಯನ್ನು ರಚಿಸಲಾಗಿತ್ತು.
ಚಕ್ರವ್ಯೂಹದ ಪ್ರತಿ ಪದರವು ಏಕಕಾಲದಲ್ಲಿ ತಿರುಗುವುದರಿಂದ, ನಿರ್ಗಮನದ ದ್ವಾರವು ಕ್ಷಣ ಕ್ಷಣಕ್ಕೂ ನಿರಂತರವಾಗಿ ವಿಭಿನ್ನ ದಿಕ್ಕಿನಲ್ಲಿ ಬದಲಾಗುತ್ತಿತ್ತು. ಇದು ಶತ್ರುವೀಣೆ ಮನಸ್ಥಿತಿಯನ್ನು ಗೊಂದಲಕ್ಕೀಡುಮಾಡುತ್ತಿತ್ತು. ಅದ್ಭುತವಾದ ಮತ್ತು ಊಹಿಸಲಾಗದ ಯುದ್ಧ ವ್ಯವಸ್ಥೆಯೆಂದರೆ 'ಚಕ್ರವ್ಯೂಹ' ಆಗಿತ್ತು.
ಇಂದಿನ ಜಗತ್ತು, ಎಷ್ಟು ಆಧುನಿಕವಾಗಿದ್ದರೂ, ಇಂತಹಾ ಅಸಾಮಾನ್ಯ ಜಟಿಲ ಯುದ್ಧ ತಂತ್ರವನ್ನು ಅಳವಡಿಸಿಕೊಳ್ಳಲು ಸಾಧ್ಯವಿಲ್ಲ.