ಕರ್ನಾಟಕ ರಾಜ್ಯದ ಕರಾವಳಿ ತೀರ 320 ಕಿಲೋಮೀಟರ್ ಉದ್ದವಿದ್ದು ದಕ್ಷಿಣ ಕನ್ನಡ ಜಿಲ್ಲೆ 62 ಕಿಲೋಮೀಟರ್, ಉಡುಪಿ ಜಿಲ್ಲೆ 98ಕಿಲೋಮೀಟರ್, ಮತ್ತು ಉತ್ತರ ಕನ್ನಡ ಜಿಲ್ಲೆ 160 ಕಿಲೋಮೀಟರ್ ಸಮುದ್ರ ತೀರ ಹೊಂದಿದೆ.
Wednesday, February 19, 2025
Saturday, January 25, 2025
ಉಡುಪಿ ಜಿಲ್ಲೆಗೆ ಉಡುಪಿ ಎಂಬ ಹೆಸರು ಹೇಗೆ ಬಂತು ಮತ್ತು ಈ ಜಿಲ್ಲೆಯ ವಿಶೇಷತೆಗಳೇನು?
ಭಾರತ ದೇಶದ ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಶುದ್ಧವಾದ ವೈಷ್ಣವ ಮಠ ಪ್ರತಿಪಾದಿಸಿದ ತ್ರೈಲೋಕಾಚಾರ್ಯರಾದ ಶ್ರೀ ಮಧ್ವಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಕೃಷ್ಣ ಮಂದಿರ ಇರುವುದು ಉಡುಪಿಯಲ್ಲಿ.
ಉಡುಪಿ ಜಿಲ್ಲೆ ಅಗಸ್ಟ್ 1997 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಉಡುಪಿ ಹೆಸರನ್ನು ತುಳು ಹೆಸರು "ಒಡಿಪು" ನಿಂದ ಪಡೆಯಲಾಗಿದೆ ಎಂದು ನಂಬಲಾಗಿದೆ. ಒಡಿಪು ಎಂಬ ಪದ ಬರಲು ಮಲ್ಪೆ ಕಡಲ ತೀರದಲ್ಲಿರುವ ಒಡಬಾಂಡೇಶ್ವರ ದೇವಸ್ಥಾನವೇ ಕಾರಣ ಎಂದು ಕೆಲವರು ಹೇಳುತ್ತಾರೆ. ಇದಲ್ಲದೆ ಉಡುಪಿ ಎಂಬ ಪದವು ಸಂಸ್ಕೃತ ಭಾಷೆಯ "ಉಡು" ಹಾಗೂ "ಪ" ಅಂದರೆ ನಕ್ಷತ್ರ ಹಾಗೂ ದೇವರು ಪದದಿಂದ ಹುಟ್ಟಿದ್ದು ಎಂಬ ಬಗ್ಗೆ ಕಥೆಗಳಲ್ಲಿ ಉಲ್ಲೇಖವಿದೆ.
ಉಡುಪಿಯು ಮಂಗಳೂರಿನ ಶೈಕ್ಷಣಿಕ, ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರದಿಂದ 55 ಕಿ.ಮೀ ಮತ್ತು ರಸ್ತೆಯ ಮೂಲಕ ರಾಜ್ಯ ರಾಜಧಾನಿ ಬೆಂಗಳೂರಿನ ಪಶ್ಚಿಮಕ್ಕೆ ಸುಮಾರು 422 ಕಿ. ಮೀ ದೂರದಲ್ಲಿದೆ.
ಇದು ಉಡುಪಿ ಜಿಲ್ಲೆಯ ಆಡಳಿತ ಕೇಂದ್ರವಾಗಿದೆ ಮತ್ತು ಕರ್ನಾಟಕದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರದಲ್ಲಿ ಒಂದು. ಉಡುಪಿಯು ಕರ್ನಾಟಕದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ ಮತ್ತು ವಿವಿಧ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. ಇದನ್ನು ದೇವಾಲಯಗಳ ನಗರ ಎಂದು ಕರೆಯಲಾಗುತ್ತದೆ.ಇಲ್ಲಿ ಅತ್ಯಂತ ಜನಪ್ರಿಯವಾದ ಪಾಕ ಪದ್ಧತಿ ಇದೆ. ಹಾಗೆಯೇ ಇದನ್ನು ಪರಶುರಾಮ ಕ್ಷೇತ್ರ ಎಂದು ಕರೆಯಲಾಗುತ್ತದೆ.
ಇಲ್ಲಿನ ಪ್ರಮುಖ ಕಡಲತೀರಗಳು:
ಮಲ್ಪೆ ಕಡಲತೀರ ಮತ್ತು ಸಂತ ಮೇರಿಯ ದ್ವೀಪ
ಮರವಂತೆ ಕಡಲತೀರ
ಒತ್ತಿನೆಣೆ ಕಡಲತೀರ
ಕಾಪು ಕಡಲತೀರ
ಉದ್ಯಾಯವರ ಕಡಲತೀರ
ಪಡುಬಿದ್ರಿ ಕಡಲತೀರ
ಕೋಡಿ ಕಡಲತೀರ
ಪ್ರವಾಸಿ ಆಕಷಣೆಗಳು:
ಸೀತಾನದಿಯಲ್ಲಿ ವಾಟರ್ ರಾಪ್ಟಿಂಗ್
ಕುಡ್ಲು ತೀರ್ಥ
ಹಸ್ತ ಶಿಲ್ಪಾ ಹೆರಿಟೇಜ್ ವಿಲೇಜ್
ಮಣಿಪಾಲ ಮ್ಯೂಸಿಯಂ
ಎಂಡ್ ಪಾಯಿಂಟ್ ಮಣಿಪಾಲ
ಡಾ.ಕೋಟ ಶಿವರಾಮ ಕಾರಂತ ಥೀಮ್ ಪಾರ್ಕ್
ಕ್ಷವಿಜ ನೇಸರ ಧಾಮ
ಬೇಳಕಲ್ ತೀರ್ಥ
ಬಾರ್ಕೂರು
ಕೊಡಚಾದ್ರಿ
ಧಾರ್ಮಿಕ ಕ್ಷೇತ್ರಗಳು:
ಉಡುಪಿ ಶ್ರೀ ಕೃಷ್ಣ ದೇವಸ್ಥಾನ
ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವಸ್ಥಾನ
ಕೊಲ್ಲೂರು ಮೂಕಾಂಬಿಕ ದೇವಸ್ಥಾನ
ಚತುರ್ಮುಖ ಬಸದಿ
ಕಾರ್ಕಳ ಗೋಮಟೇಶ್ವರ
ವರಂಗ
ಮೌಂಟ್ ರೋಸರಿ ಚರ್ಚ್
ಆನೆಗುಡ್ಡೆ
ಮಕ್ಕೇಕಟ್ಟು
ಪ್ರಕೃತಿ ಮತ್ತು ವನ್ಯಜೀವಿಗಳು:
ಸೋಮೇಶ್ವರ ವನ್ಯಜೀವಿ ಅಭಯಾರಣ್ಯ
ಮೂಕಾಂಬಿಕ ವನ್ಯಜೀವಿ ಅಭಯಾರಣ್ಯ
ಕಲೆ ಮತ್ತು ಹಬ್ಬಗಳು:
ಯಕ್ಷಗಾನ
ಹುಲಿ ವೇಷ
ವಿಟ್ಲಪಿಂಡಿ
ನಾಗಮಂಡಲ
ಮಾರಣಕಟ್ಟೆ ಉತ್ಸವ
ಪರ್ಯಾಯ ಉತ್ಸವ
ಕಂಬಳ
ಪಾಕ ವೈವಿಧ್ಯತೆ:
ಪತ್ರೊಡೆ
ನೀರ್ ದೋಸೆ
ಬಾಳೆ ಹಣ್ಣಿನ ಬನ್ಸ್
ಕೋಳಿ ಸಾರು
ಮಂಡಕ್ಕಿ ಉಪ್ಕರಿ
ಗಡ್ಬಡ್ ಐಸ್ ಕ್ರೀಮ್