🌸 ಬಾಗಲಕೋಟೆ ಜಿಲ್ಲೆಯ ವಿಜಯಪುರ ಜಿಲ್ಲೆಯಿಂದ 1997 ರಲ್ಲಿ ಪ್ರತ್ಯೇಕವಾಯಿತು
🌸 ಭಾರತದ 50ನೇಯ ಸ್ವಾತಂತ್ರ್ಯ ವರ್ಷಾಚರಣೆಯ ಸಂದರ್ಭದಲ್ಲಿ ಅಂದರೆ 1997 ರಲ್ಲಿ ಹೊಸ ಜಿಲ್ಲೆಯಾಗಿ ಅಸ್ಥಿತ್ವಕ್ಕೆ ಬಂದಿತು
🌸 1865 ರಲ್ಲಿ ಪುರಸಭೆಯಾಗಿ ಅಸ್ಥಿತ್ವಕ್ಕೆ ಬಂದಿತು. ಬಾಗಲಕೋಟೆಯು "ಸ್ವಾತಂತ್ರ್ಯ ಚಳುವಳಿ" ಮತ್ತು "ಕರ್ನಾಟಕ ಏಕೀಕರಣ ಚಳುವಳಿ"ಗಳಿಗೆ ಕೇಂದ್ರವಾಗಿತ್ತು
🌸 ಜಿಲ್ಲೆಯ ಹನಗುಂದ ತಾಲ್ಲೂಕಿನ ಐಹೊಳೆ ಗ್ರಾಮದ ಮೇಗುತಿ ಎಂಬ ದೇವಾಲಯದಲ್ಲಿ ಇಮ್ಮಡಿ ಪುಲಿಕೇಶಿಯ ಆಸ್ಥಾನ ಕವಿ ರವಿಕೀರ್ತಿಯ 'ಐಹೊಳೆ ಶಾಸನ' ( ಸಂಸ್ಕೃತ ಭಾಷೆಯಲ್ಲಿ) ಇದೆ. ಈ ಶಾಸನವು 'ನರ್ಮದಾ ನದಿ' ಕದನಕ್ಕೆ ಸಂಬಂಧಿಸಿದೆ . ನರ್ಮದಾ ನದಿ ಕದನವು :- 'ಇಮ್ಮಡಿ ಪುಲಕೇಶಿ' ಮತ್ತು 'ಹರ್ಷವರ್ಧನ' ನಡುವೆ ನಡೆಯಿತು
🌸 ಜಿಲ್ಲೆಯಲ್ಲಿ "ಕಪ್ಪೆ ಆರ್ಭಟ್ಟನ" ಶಾಸನವು ತ್ರಿಪದಿಯಲ್ಲಿದೆ ಈ ಶಾಸನದಲ್ಲಿ ಕನ್ನಡದ ಮೊಟ್ಟಮೂದಲ ತ್ರಿಪದಿಗಳು ದೊರೆಯುತ್ತವೆ. ತ್ರಿಪದಿ ಅಂದರೆ ಮೂರು ಸಾಲಿನ ಪದ್ಯ , ಇದು ಅಚ್ಚಕನ್ನಡದೇಸೀಮಟ್ಟಿನ ಛಂದಸ್ಸಾಗಿದೆ.
🌸 ಜಿಲ್ಲೆಯ "ಇಳಕಲ್" ಸ್ಥಳವು ಪಿಂಕ್ ಗ್ರಾನೆಟ್ ಮತ್ತು ಸೀರೆಗಳಿಗೆ ಹೆಸರುವಾಸಿಯಾಗಿದೆ
🌸 ಮುಧೋಳ ತಾಲ್ಲೂಕಿನ ಹಗಲಿಗೆ ( ಊರಿ)ನಲ್ಲಿ 1857ರಲ್ಲಿ "ಬೇಡರ ಸಶಸ್ತ್ರ" ದಂಗೆ ನಡೆಯಿತು
🌸 ಮುಧೋಳದಲ್ಲಿ ಹುಂಡ್ಸ್ ಎಂಬ ನಾಯಿಯ ತಳಿಯು ಪ್ರಸಿದ್ಧಿ ಮತ್ತು ಇಲ್ಲಿ ರನ್ನ ಉತ್ಸವ ನಡೆಯುತ್ತದೆ
🌸 ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಎಂಬ ಹಳ್ಳಿಯ ಹೆಸರಾಂತ ವ್ಯಕ್ತಿ ಬಿ.ಡಿ.ಜತ್ತಿ ಅಥವಾ "ಬಸಪ್ಪ ದಾನಪ್ಪ ಜತ್ತಿ"
> ಇವರು ಉಪರಾಷ್ಟ್ರಪತಿಯಾದ ಏಕೈಕ ಕನ್ನಡಿಗರು
> ಹಂಗಾಮಿ ರಾಷ್ಟ್ರಪತಿಯಾದ ಏಕೈಕ ಕನ್ನಡಿಗರು
> ಒಡಿಸ್ಸಾ ರಾಜ್ಯದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ.
🌸 ಈ ಜಿಲ್ಲೆಯ 'ನವನಗರ' ಕರ್ನಾಟಕದ ಮೊದಲ ಯೋಜಿತ ನಗರವಾಗಿದೆ
🌸 ಬಾಗಲಕೋಟೆ ಜಿಲ್ಲೆಯ ಬಾದಾಮಿಯು ಚಾಲುಕ್ಯರು ರಾಜಧಾನಿಯಾಗಿತ್ತು, ಇಲ್ಲಿ "ಚಾಲುಕ್ಯ ಉತ್ಸವ" ನಡೆಯುತ್ತದೆ
🌸 ಈ ಜಿಲ್ಲೆಯಲ್ಲಿ ಕೃಷ್ಣ ಮತ್ತು ಮಲಪ್ರಭಾ ನದಿ ದಂಡೆಗಳ ಮೇಲೆ "ಕೂಡಲಸಂಗಮ" ಇದೆ
🌸 ಬಾದಾಮಿಯು ನವಶಿಲಾಯುಗದ ತಾಣವಾಗಿದ್ದು, ಪಟ್ಟದಕಲ್ಲಿನ ದೇವಾಲಯವು ಭಾರತದ ಸಂಸತ್ತಿನ( ಪಾರ್ಲಿಮೆಂಟ್) ಆಕಾರವನ್ನು ಹೊಂದಿದೆ.
🌸 ಬಾದಾಮಿ ಹಳೆಯ ಹೆಸರು :- ವಾತಾಪಿ
🌸 ಯಡಹಳ್ಳಿ ವನ್ಯಜೀವಿ ಧಾಮವು ಜಿಂಕಾರ ( ಇಂಡಿಯನ್ ಗೆಝೆಲ್ ) ಜಿಂಕೆಗಳಿಗೆ ಪ್ರಸಿದ್ಧಿಯಾಗಿದೆ. ಯಡಹಳ್ಳಿ ಚಿಂಕಾರ ವನ್ಯಧಾಮವಾಗಿ ರಾಜ್ಯ ಸರ್ಕಾರ 2015ರಲ್ಲಿ ಘೋಷಿಸಿತ್ತು
🌸 ಬಾಗಲಕೋಟೆ ಜಿಲ್ಲೆಯ "ಪಟ್ಟದಕಲ್ಲು" 1987 ರಲ್ಲಿ ವಿಶ್ವಪರಂಪರೆ ಪಟ್ಟಿಗೆ ಸೇರಿದೆ