ದಿನಾ ಅಶ್ವಗಂಧ ಚಹಾ, ಕುಡಿದ್ರೆ, ರೋಗ ನಿರೋಧಕ ಶಕ್ತಿ ಹೆಚ್ಚುವುದು

SANTOSH KULKARNI
By -
0
ಹುಟ್ಟಿನಿಂದ ಸಾಯುವವರೆಗೂ ಮನುಷ್ಯನಿಗೆ ರೋಗ ನಿರೋಧಕ ವ್ಯವಸ್ಥೆ ಬಲವಾಗಿದ್ದರೆ ಆತ ದೀರ್ಘಾಯುಷಿ ಆಗಿ ಬಾಳಬಲ್ಲ ಎಂಬ ಮಾತಿದೆ. ಹಲವಾರು ಆಹಾರಗಳು ನೈಸರ್ಗಿಕವಾಗಿ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ತಮ್ಮ ಹೆಸರು ಉಳಿಸಿಕೊಂಡಿವೆ.
ದಿನಾ ಅಶ್ವಗಂಧ ಚಹಾ, ಕುಡಿದ್ರೆ, ರೋಗ ನಿರೋಧಕ ಶಕ್ತಿ ಹೆಚ್ಚುವುದು
   

ಮನುಷ್ಯನಿಗೆ ರೋಗ ನಿರೋಧಕ ವ್ಯವಸ್ಥೆ ಎನ್ನುವುದು ದೇಶ ಕಾಯುವ ಯೋಧ ಇದ್ದಂತೆ. ಯೋಧರು ಹೊರಗಿನ ಶತ್ರುಗಳನ್ನು ದೇಶದ ಗಡಿಯೊಳಗೆ ಬಿಡದೆ ಹೇಗೆ ತಮ್ಮ ಪ್ರಾಣ ಪಣಕ್ಕಿಟ್ಟು ನಮ್ಮನ್ನೆಲ್ಲಾ ಕಾಪಾಡುತ್ತಾರೋ, ಅದೇ ರೀತಿ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ದೇಹದ ಒಳಗಿನ ಅಂಗಾಂಗಗಳನ್ನು ಮತ್ತು ನಮ್ಮ ಆರೋಗ್ಯವನ್ನು ಯಾವುದೇ ಕಣ್ಣಿಗೆ ಕಾಣದ ಬ್ಯಾಕ್ಟೀರಿಯಾ ಅಥವಾ ವೈರಸ್ ಸೋಂಕಿನಿಂದ ರಕ್ಷಣೆ ಮಾಡುತ್ತದೆ. ಹುಟ್ಟಿನಿಂದ ಸಾಯುವವರೆಗೂ ಮನುಷ್ಯನಿಗೆ ರೋಗ ನಿರೋಧಕ ವ್ಯವಸ್ಥೆ ಬಲವಾಗಿದ್ದರೆ ಆತ ದೀರ್ಘಾಯುಷಿ ಆಗಿ ಬಾಳಬಲ್ಲ ಎಂಬ ಮಾತಿದೆ.

ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ

ಹಲವಾರು ಆಹಾರಗಳು ನೈಸರ್ಗಿಕವಾಗಿ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ತಮ್ಮ ಹೆಸರು ಉಳಿಸಿಕೊಂಡಿವೆ. ಅದರಲ್ಲಿ ಪುರಾತನ ಕಾಲದಿಂದ ನಮ್ಮ ಆಯುರ್ವೇದ ಪದ್ಧತಿಯಲ್ಲಿ ಸಾಕಷ್ಟು ಬಗೆಯ ಆರೋಗ್ಯ ಸಮಸ್ಯೆಗಳನ್ನು ಇನ್ನಿಲ್ಲದಂತೆ ಪರಿಹಾರ ಮಾಡಿರುವ ಅಶ್ವಗಂಧ ಕೂಡ ಒಂದು.

ಈಗಂತೂ ಅಂಗಡಿಗಳಲ್ಲಿ ಯಾವುದೇ ಬಗೆಯ ಗಿಡಮೂಲಿಕೆಗಳ ಬೇರುಗಳು ಪುಡಿ ಅಥವಾ ದ್ರವದ ರೂಪದಲ್ಲಿ ಸುಲಭವಾಗಿ ಲಭ್ಯವಾಗುತ್ತದೆ. ಹಿಂದಿನ ಕಾಲದ ರೀತಿ ಗಿಡದ ಬೇರುಗಳಿಗೆ ಕಾಡು ಮೇಡು ಅಲೆಯುವ ಅಗತ್ಯವಿಲ್ಲ.

ಅಶ್ವಗಂಧದ ಪುಡಿ

ಅಶ್ವಗಂಧ ಸಹ ಮರದ ಬೇರು ಎಂದು ಹೇಳಲಾಗುತ್ತದೆ. ಮಾರುಕಟ್ಟೆಯಲ್ಲಿ ಸುಲಭವಾಗಿ ನಮಗೆ ಇದು ಪುಡಿಯ ರೂಪದಲ್ಲಿ ಸಿಗುತ್ತದೆ. ಅಶ್ವಗಂಧ ಪುಡಿಯನ್ನು ಮನೆಗೆ ತಂದು ಚಹಾ ತಯಾರಿಸಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಕ್ರಮೇಣವಾಗಿ ದೇಹದ ರೋಗ ನಿರೋಧಕ ವ್ಯವಸ್ಥೆ ಬಲಗೊಳ್ಳುತ್ತಾ ಬರುತ್ತದೆ.

ಇದರಿಂದ ಹೊಸ ಬಗೆಯ ಸೋಂಕುಗಳ ವಿರುದ್ಧ ಹೋರಾಡುವ ಗುಣ ಲಕ್ಷಣದ ಜೊತೆಗೆ ಈಗಾಗಲೇ ದೇಹದಲ್ಲಿ ಸೇರಿರುವ ಹಲವಾರು ಬಗೆಯ ಸಣ್ಣ ಪುಟ್ಟ ಕಾಯಿಲೆಗಳು ನಿಧಾನವಾಗಿ ವಾಸಿಯಾಗುತ್ತಾ ಬರುತ್ತವೆ.

ಅಶ್ವಗಂಧದ ಆರೋಗ್ಯ ಪ್ರಯೋಜನಗಳು

ಅಶ್ವಗಂಧ ಕೇವಲ ರೋಗ ನಿರೋಧಕ ವ್ಯವಸ್ಥೆಯನ್ನು ಮಾತ್ರ ಉತ್ತಮ ಪಡಿಸಲು ಇರುವ ಒಂದು ಗಿಡ ಮೂಲಿಕೆ ಎಂದು ನೀವು ತಿಳಿದುಕೊಂಡರೆ, ಅದು ನಿಮ್ಮ ತಪ್ಪು ಭಾವನೆಯಲ್ಲದೆ ಮತ್ತೇನಲ್ಲ. ಮನುಷ್ಯನ ದೇಹಕ್ಕೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಅಶ್ವಗಂಧ ನೀಡುತ್ತದೆ. ಅದರಲ್ಲಿ ಪ್ರಮುಖವಾಗಿ ಈ ಕೆಳಗಿನ ವಿಚಾರಗಳಲ್ಲಿ ಸಹಾಯ ಮಾಡುತ್ತದೆ.

ದೇಹದ ತೂಕ ಕಡಿಮೆಮಾಡುವಲ್ಲ
ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡುವಲ್ಲ
ಮಾನಸಿಕ ಒತ್ತಡವನ್ನು ನಿವಾರಣೆ ಮಾಡುವಲ್ಲ
ಮಹಿಳೆಯರಲ್ಲಿ ಫಲವತ್ತತೆಯ ಪ್ರಯೋಜನವನ್ನು ತಂದುಕೊಡುವಲ್ಲ
ಕಬ್ಬಿಣದ ಅಂಶ ಕಡಿಮೆ ಇರುವ ವ್ಯಕ್ತಿಗಳಲ್ಲಿ ಅನಿಮಿಯ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ
ಇವು ಅಶ್ವಗಂಧ ಉಂಟು ಮಾಡುವ ಪ್ರಯೋಜನಗಳಲ್ಲಿ ಕೇವಲ ಕೆಲವು ಮಾತ್ರ. ಇದರಂತೆ ಇನ್ನು ಹತ್ತಾರು ಆರೋಗ್ಯ ಸಮಸ್ಯೆಗಳಿಗೆ ಅಶ್ವಗಂಧದಲ್ಲಿ ಉತ್ತರವಿದೆ. ಅಶ್ವಗಂಧವನ್ನು ನೇರವಾಗಿ ತಿನ್ನಲು ನಿಮಗೆ ಕಷ್ಟ ಎನಿಸಿದರೆ ಅಶ್ವಗಂಧ ಚಹಾ ಮಾಡಿ ಸೇವಿಸಬಹುದು
ಅಶ್ವಗಂಧವನ್ನು ನೇರವಾಗಿ ತಿನ್ನಲು ನಿಮಗೆ ಕಷ್ಟ ಎನಿಸಿದರೆ ಅಶ್ವಗಂಧ ಚಹಾ ಮಾಡಿ ಸೇವಿಸಬಹುದು

ಅಶ್ವಗಂಧ ಚಹಾ ತಯಾರಿಸುವುದು ಹೇಗೆ?

ಮೊದಲಿಗೆ ಅಶ್ವಗಂಧ ಟೀ ಬ್ಯಾಗ್ ಅನ್ನು ಬಿಸಿ ನೀರಿನಲ್ಲಿ ಕೆಲವು ನಿಮಿಷಗಳ ಕಾಲ ಅದ್ದಿರಿ. ನಂತರ ಇದು ಸ್ವಲ್ಪ ಬಿಸಿ ಇರುವಾಗಲೇ ಅಶ್ವಗಂಧ ಚಹಾ ಕುಡಿಯಿರಿ.

ಆದರೆ ತಾಜಾ ಅಶ್ವಗಂಧ ಬೇರು ತಂದು ಮಾಡುವ ಚಹಾಗೆ ಹೋಲಿಸಿದರೆ ಅಶ್ವಗಂಧ ಪುಡಿ ಬಳಕೆಯಿಂದ ಮಾಡಿದ ಚಹಾ ಅಷ್ಟಾಗಿ ಪರಿಣಾಮ ಬೀರುವುದಿಲ್ಲ ಎಂದು ಹೇಳುತ್ತಾರೆ.ಅಶ್ವಗಂಧ ಚಹಾ ತಯಾರು ಮಾಡಲು ಈ ಕೆಳಗಿನ ಆಹಾರ ಪದಾರ್ಥಗಳು ನಿಮ್ಮ ಬಳಿ ಇದ್ದರೆ ಸಾಕು ತಾಜಾ ಅಶ್ವಗಂಧ ಬೇರು ಅಥವಾ ಪುಡಿ ಜೇನುತುಪ್ಪ ತಾಜಾ ನಿಂಬೆಹಣ್ಣು

ಮೊದಲಿಗೆ ಒಂದು ಪ್ಯಾನ್ ನಲ್ಲಿ ಒಂದು ಗ್ಲಾಸ್ ನೀರು ತೆಗೆದುಕೊಂಡು ಚೆನ್ನಾಗಿ ಕುದಿಸಿ ಒಂದರಿಂದ ಎರಡು ಅಶ್ವಗಂಧ ಬೇರುಗಳನ್ನು ಹಾಕಿ ಸುಮಾರು 6 ರಿಂದ 8 ನಿಮಿಷಗಳು ಚೆನ್ನಾಗಿ ಕುದಿಯಲು ಬಿಡಬೇಕು.ಈಗ ಕುದಿಸಿದ ಅಶ್ವಗಂಧದ ನೀರನ್ನು ಉಗುರು ಬೆಚ್ಚಗಿನ ತಾಪಮಾನಕ್ಕೆ ಬರುವವರೆಗೂ ಚೆನ್ನಾಗಿ ಆರಿಸಿ.
ಅದಕ್ಕೆ ಸ್ವಲ್ಪ ತಾಜಾ ನಿಂಬೆ ಹಣ್ಣಿನ ರಸ ಮತ್ತು ಹಸಿ ಜೇನುತುಪ್ಪವನ್ನು ಹಾಕಿ ರುಚಿ ಹೆಚ್ಚಿಸಿಕೊಳ್ಳಿ. ಬೇಕೆಂದರೆ ಸ್ವಲ್ಪ ಬೆಲ್ಲವನ್ನೂ ಸೇರಿಸಿಕೊಳ್ಳಬಹುದು. ಈಗ ನಿಮ್ಮ ರೋಗನಿರೋಧಕ ವ್ಯವಸ್ಥೆಗೆ ಸ್ನೇಹಿಯಾಗಿರುವ ಅಶ್ವಗಂಧ ಚಹಾ ತಯಾರಾಗಿದೆ.

ಪ್ರತಿ ದಿನ ಎರಡು ಬಾರಿ ಅಂದರೆ ಬೆಳಗಿನ ಮತ್ತು ಸಂಜೆಯ ವೇಳೆ ಅಶ್ವಗಂಧ ಚಹಾ ಕುಡಿಯುವ ಅಭ್ಯಾಸ ಇಟ್ಟುಕೊಳ್ಳಬೇಕು. ಅಶ್ವಗಂಧ ಸಹ ಚಹಾ ನಿಜಕ್ಕೂ ರೋಗ ನಿರೋಧಕ ವ್ಯವಸ್ಥೆಯನ್ನು ಬಲ ಪಡಿಸುತ್ತದೆಯೇ ?
ಸಾಮಾನ್ಯವಾಗಿ ಆರೋಗ್ಯ ತಜ್ಞರ ಪ್ರಕಾರ ಈ ಕೆಳಗಿನ ಮೂರು ವಸ್ತುಗಳು ಮನುಷ್ಯನ ದೇಹದಲ್ಲಿ ರೋಗ ನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತವೆ ಎಂದು ಹೇಳುತ್ತಾರೆ ಮತ್ತು ಅಂತಹ ಮೂರು ಪದಾರ್ಥಗಳನ್ನು ಅಶ್ವಗಂಧ ಚಹಾ ತಯಾರಿಕೆಯಲ್ಲಿ ಈಗಾಗಲೇ ಬಳಕೆ ಮಾಡಲಾಗಿದೆ.

ಮನುಷ್ಯನ ಮಾನಸಿಕ ಒತ್ತಡ, ಆತಂಕ ಮತ್ತು ಉರಿಯೂತವನ್ನು ದೂರ ಮಾಡಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸುತ್ತದೆ ಮತ್ತು ದೇಹವನ್ನು ಯಾವುದೇ ಬಗೆಯ ಸೋಂಕುಗಳ ವಿರುದ್ಧ ಹೋರಾಡಲು ಸಜ್ಜುಗೊಳಿಸುತ್ತದೆ.

ನಿಂಬೆ ಹಣ್ಣಿನಲ್ಲಿ ಅತಿ ಮುಖ್ಯವಾಗಿ ವಿಟಮಿನ್ ' ಸಿ ' ಅಂಶ ಇದ್ದು, ಇದು ಬಹಳ ಹೇರಳವಾಗಿದೆ ಎಂದು ಹೇಳಬಹುದು. ಇದು ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಹೆಚ್ಚು ಮಾಡುವುದರಲ್ಲಿ ಸಾರ್ಥಕತೆ ಮೆರೆಯುತ್ತದೆ.

ಇದರ ಜೊತೆಗೆ ನಿಂಬೆ ಹಣ್ಣಿನಲ್ಲಿ ಆಂಟಿ - ಆಕ್ಸಿಡೆಂಟ್ ಮತ್ತು ಆಂಟಿ - ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳಿಂದ, ಇದು ದೇಹದ ಸಂಪೂರ್ಣ ಆರೋಗ್ಯ ರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳುತ್ತ

ಜೇನು ತುಪ್ಪ ನೈಸರ್ಗಿಕವಾದ ಒಂದು ಸಿಹಿ ಪದಾರ್ಥ ಆಗಿದ್ದು, ಇದರಲ್ಲಿರುವ ಆಂಟಿ - ಆಕ್ಸಿಡೆಂಟ್ ಮತ್ತು ಆಂಟಿ - ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳು, ಮನುಷ್ಯನ ದೇಹಕ್ಕೆ ರೋಗ ನಿರೋಧಕ ವ್ಯವಸ್ಥೆಯನ್ನು ಹೆಚ್ಚು ಮಾಡುವಲ್ಲಿ ಮುಂದಾಳತ್ವ ವಹಿಸಿ ಸಹಾಯ ಮಾಡುತ್ತವೆ.
Tags:

Post a Comment

0Comments

Please Select Embedded Mode To show the Comment System.*