General Knowledge

SANTOSH KULKARNI
By -
0
 1) ನ್ಯೂಟನ್ ನ ಮೊದಲನೆಯ ನಿಯಮ:
★ ಒಂದು ಕಾಯದ ಮೇಲೆ ಬಲ ಪ್ರಯೋಗವಾದಾಗ ಮಾತ್ರ ಅದು ತನ್ನ ಸ್ಥಾನವನ್ನು ಬದಲಿಸುತ್ತದೆ. ಇಲ್ಲದಿದ್ದರೆ, ಅದು ತಾನಿದ್ದ ಸ್ಥಾನದಲ್ಲಿಯೂ ಇರುತ್ತದೆ.
— ಅನ್ವಯಗಳು: 
*.ರತ್ನಗಂಬಳಿಯನ್ನು ತೂರಿದಾಗ ಧೂಳಿನ ಕಣಗಳು ಹೊರ ಬರುವದು.
*.ಚಲಿಸುತ್ತಿರುವ ಬಸ್ಸಲ್ಲಿ ಕುಳಿತಾಗ ಬ್ರೇಕ್ ಹಾಕಿದಾಗ, ಮುಂದಕ್ಕೆ ಚಲಿಸುವುದು.
★ ನ್ಯೂಟನ್ ನ ಮೊದಲನೆಯ ನಿಯಮವನ್ನು 'ಜಡತ್ವ ನಿಯಮ' ಎಂದು ಕರೆಯಲಾಗುತ್ತದೆ.

 2) ನ್ಯೂಟನ್ ನ ಎರಡನೇಯ ನಿಯಮ:
★ ಒಂದು ಕಾಯದ ವೇಗೋತ್ಕರ್ಷವು ಬಲಕ್ಕೆ ನೇರ ಅನುಪಾತದಲ್ಲಿ ಹಾಗೂ ರಾಶಿಗೆ ವಿಲೋಮ ಅನುಪಾತದಲ್ಲಿ ಇರುತ್ತದೆ.
— ಅನ್ವಯಗಳು:
*.ಗ್ರಹಗಳ ಚಲನೆಯಲ್ಲಿ, ಕ್ರಿಕೇಟ್ ಆಟದಲ್ಲಿ, ಬಾವಿಯಿಂದ ನೀರು ಎತ್ತುವಾಗ.

3) ನ್ಯೂಟನ್ ನ ಮೂರನೇಯ ನಿಯಮ:
★ ಪ್ರತಿಯೊಂದು ಕ್ರಿಯೆಗೆ ಅದಕ್ಕ ಸಮನಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇದ್ದೇ ಇರುತ್ತದೆ.
— ಅನ್ವಯಗಳು:
ರಾಕೆಟ್ ಉಡಾವಣೆಯಲ್ಲಿ, ಮಾನವನ ಚಲನೆಯಲ್ಲಿ, ದೋಣಿಗಳ ಚಲನೆಯಲ್ಲಿ.

- ಚಂದ್ರವಳ್ಳಿಯ ಬಳಿ ಕೆರೆಯನ್ನು ನಿರ್ಮಿಸಿದ ಕದಂಬ ದೊರೆ - ಮಯೂರವರ್ಮ
- ಮಯೂರವರ್ಮನ ಸೈನಿಕ ಸಾಧನೆಯನ್ನು ತಿಳಿಸುವ ಶಾಸನ - ಚಂದ್ರವಳ್ಳಿ ಶಾಸನ .
- ಕರ್ನಾಟಕದ ಪ್ರಥಮ ಚಕ್ರವರ್ತಿ ಎಂಬ ಹೆಗ್ಗಳಿಕೆಗೆ ಪಾತ್ರನಾದ ಅರಸ - ಮಯೂರವರ್ಮ

- ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಎದ್ದುಕಾಣುವ ಹೆಸರು ಭಾರತ ಮತ್ತು ಬ್ರಿಟನ್​ನದ್ದು. 

- ಎರಡೂ ದೇಶಗಳು ‘ದ್ವಿ-ಸದನಿಕ’ ಶಾಸನಸಭೆಗಳನ್ನು ಹೊಂದಿದ್ದು, ಭಾರತದಲ್ಲಿ ‘ಲೋಕಸಭೆ’ ಮತ್ತು ‘ರಾಜ್ಯಸಭೆ’ ಎಂದು ಹೆಸರಿನಿಂದ ಕರೆಯಲ್ಪಟ್ಟರೆ, ಬ್ರಿಟನ್​ನಲ್ಲಿ ‘ಹೌಸ್ ಆಫ್ ಕಾಮನ್ಸ್’ ಮತ್ತು ‘ಹೌಸ್ ಆಫ್ ಲಾರ್ಡ್ಸ್’ ಎನ್ನಲಾಗುತ್ತದೆ. 

— ಜಿಎಸ್‌ ತೆರಿಗೆ, ಮೌಲ್ಯ ವರ್ಧಿತ ತೆರಿಗೆಯ ತತ್ವದ ಮೇಲೆ ನಿಂತಿದೆ. ಮೌಲ್ಯ ವರ್ಧಿತ ತೆರಿಗೆ ಅಥವಾ ವಾಲ್ಯೂ ಆಡ್ಡೆಡ್‌ ಟಾಕ್ಸ್‌ ಅಂದರೆ ಪ್ರತಿಯೊಂದು ಹಂತದಲ್ಲಿಯೂ ಮೌಲ್ಯ ವರ್ಧನೆಯಾದ (ಬೆಲೆ ಹೆಚ್ಚಳ) ಮೊತ್ತದ ಮೇಲೆ ಮಾತ್ರವೇ ಕರ ಬೀಳುತ್ತದೆ. 

— 1948, ಜುಲೈ 19 ನೆಯ ತಾರೀಖಿಗಿಂತ ಮುಂಚಿತವಾಗಿ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದ ಸಂದರ್ಭದಲ್ಲಿ,  ತಾನು ವಲಸೆ ಬಂದ ತಾರೀಖಿನಿಂದ ಭಾರತದ ಭೂಪ್ರದೇಶದಲ್ಲಿ ವಾಸಿಸುತ್ತಿದ್ದರೆ,  ಅವನು ಸಂವಿಧಾನದ ಪ್ರಾರಂಭವಾದಾಗಿನಿಂದ ಪೌರತ್ವ ಹೊಂದುತ್ತಾನೆ. (ಸಂವಿಧಾನದ 6 ನೆಯ ವಿಧಿ)

— 1947, ಮಾರ್ಚ್ 1 ರ ನಂತರ ಯಾವುದೇ ವ್ಯಕ್ತಿ ಭಾರತದ ಭೂಪ್ರದೇಶದಿಂದ ಪಾಕಿಸ್ತಾನಕ್ಕೆ ಸೇರುವ ಭೂಪ್ರದೇಶಕ್ಕೆ ವಲಸೆ ಹೋದರೆ ಅವನು ಭಾರತದ ನಾಗರಿಕತ್ವವನ್ನು ಪಡೆಯುವುದಿಲ್ಲ ಎಂದು ಸಂವಿಧಾನದ 7 ನೆಯ ವಿಧಿ ತಿಳಿಸುತ್ತದೆ.

— ಪಾಕೆಟ್ ವೀಟೊ ಎಂದರೆ, ಸಂಸತ್ತಿನಲ್ಲಿ ಅಂಗೀಕಾರವಾದ ಮಸೂದೆಯ ಬಗ್ಗೆ  ಹೆಚ್ಚು ಕಾಳಜಿ ವಹಿಸದೆ, ತಮ್ಮಲ್ಲೆ ಇಟ್ಟುಕೊಂಡು ಕಾಲವನ್ನು ತಳ್ಳುವುದಕ್ಕೆ ಪಾಕೆಟ್ ವೀಟೊ ಎನ್ನುತ್ತಾರೆ.

— ಸೂಪರ್ ವೀಟೊ ಎಂದರೆ ಸಂಸತ್ತಿನಲ್ಲಿ ಅಂಗೀಕರಿಸದೆ ಮಸೂದೆಯನ್ನು ರಾಷ್ಟ್ರಪತಿಯವರ ಸಹಿ ಬಂದಾಗ ಅದನ್ನು ಮರು ಪರಿಶೀಲನೆಗೆ ಕಳುಹಿಸುವ ಅಧಿಕಾರವನ್ನು ಸೂಪರ್ ವೀಟೊ ಎನ್ನುತ್ತಾರೆ.

— ಲೇಮ್ ಡುಕ್ ಅಧಿವೇಶನ ಎಂದರೆ ಅಸ್ತಿತ್ವದಲ್ಲಿರುವ ಲೋಕಸಭೆಯ ಕೊನೆಯ ಅಧಿವೇಶನ. ಲೋಕಸಭೆಯ ಯಾವ ಸದಸ್ಯರು ಮರು ನೇಮಕವಾಗಿ ಹೊಸ ಲೋಕಸಭೆ ಬರುವುದಿಲ್ಲವೊ ಅವರನ್ನು ಲೇಮ್ - ಡುಕ್ ಎನ್ನುವರು.

— ಸಂಸತ್ತಿನ ಶೂನ್ಯ ವೇಳೆ  (Zero Hour) ಎಂದರೆ ಸಂಸತ್ತಿನ ಎರಡೂ ಸದನಗಳಲ್ಲಿ ಪ್ರಶ್ನೋತ್ತರ ಅವಧಿ (ಮೊದಲ ಒಂದು ಗಂಟೆ) ಅಂದರೆ 11 ರಿಂದ 12 ಗಂಟೆ ಮುಗಿದ ತಕ್ಷಣದ ಅವಧಿಯನ್ನು ಶೂನ್ಯ ವೇಳೆ ಎನ್ನುವರು.

ರೂಪಾಯಿ ವಿನಿಮಯ ಮೌಲ್ಯವು ದೇಶದ ಆರ್ಥಿಕತೆಯ ಸಾಮರ್ಥ್ಯದ ದ್ಯೋತಕವಾಗಿದೆ. ಅದರ ಮೌಲ್ಯದಲ್ಲಿನ ಭಾರಿ ಏರಿಳಿತವು ಅರ್ಥ ವ್ಯವಸ್ಥೆಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದೇ ಧ್ವನಿಸುತ್ತದೆ. ಅಧಿಕ ಮೌಲ್ಯದ ನೋಟು ರದ್ದತಿ ಹಾಗೂ ಜಿಎಸ್‌ಟಿ ಆತುರದ ಅನುಷ್ಠಾನದಿಂದ ಆರ್ಥಿಕ ರಂಗದಲ್ಲಾದ ತಳಮಳ ಈಗ ಚೇತರಿಕೆಯ ಹಾದಿಗೆ ಮರಳಿತ್ತು. ಆದರೆ ಈಗ ವಿದೇಶಿ ಸಾಂಸ್ಥಿಕ ಹೂಡಿಕೆಯ ಹೊರ ಹರಿವನ್ನು ನಿಯಂತ್ರಿಸಲು ವಿಫಲವಾದರೆ ಅದು ರೂಪಾಯಿ ವಿನಿಮಯ ದರದ ಮೇಲೆ ಇನ್ನಷ್ಟು ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಒಟ್ಟು ಆಂತರಿಕ ಉತ್ಪನ್ನದಲ್ಲಿನ ಚಾಲ್ತಿ ಖಾತೆ ಕೊರತೆ ಹೆಚ್ಚಾದಷ್ಟೂ ರೂಪಾಯಿ ಬೆಲೆ ಮೇಲೆ ಒತ್ತಡ ಹೆಚ್ಚುತ್ತದೆ.

ಬೆಲೆಗಳ ಚಲನವಲನ ದಾಖಲಿಸಲು ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಮತ್ತು ಗ್ರಾಹಕರ ಬೆಲೆ ಸೂಚ್ಯಂಕಗಳನ್ನು (ಸಿಪಿಐ)  ಬಳಸಲಾಗುತ್ತಿದೆ.

ಸಗಟು ಮಾರುಕಟ್ಟೆಯಲ್ಲಿನ ಬೆಲೆ ಏರಿಳಿತವನ್ನು ‘ಡಬ್ಲ್ಯುಪಿಐ’ ಮತ್ತು ಸರಕುಗಳ ಚಿಲ್ಲರೆ ಮಾರಾಟ ಹಂತದಲ್ಲಿನ ಬೆಲೆ ವ್ಯತ್ಯಾಸವನ್ನು ಮತ್ತು ಕೆಲ ಸೇವೆಗಳನ್ನು ‘ಸಿಪಿಐ’ ಪ್ರತಿನಿಧಿಸುತ್ತದೆ.

ಪ್ರಮುಖ ನೀತಿ ದರಗಳನ್ನು ನಿರ್ಧರಿಸುವಾಗ ಚಿಲ್ಲರೆ ಹಣದುಬ್ಬರವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪರಿಗಣಿಸುತ್ತದೆ.

Post a Comment

0Comments

Please Select Embedded Mode To show the Comment System.*