ಬದುಕು (ಜೀವನ) ಎಂದರೇನು?

SANTOSH KULKARNI
By -
0


“ಯದ್ಭಾವಂ ತದ್ಭವತಿ’

ಬುದ್ಧ ಹೇಳುತ್ತಾನೆ, "ಪ್ರೀತಿ ಮತ್ತು ಶಾಂತಿ".

ದುರ್ಯೋಧನ ಹೇಳುತ್ತಾನೆ, "ಹಠ ಮತ್ತು ಛಲ".

ಏಕಲವ್ಯ ಹೇಳುತ್ತಾನೆ, "ಗುರಿ".

ಯುಧಿಷ್ಠಿರ ಹೇಳುತ್ತಾನೆ, "ಧರ್ಮ".

ಭೀಷ್ಮ ಹೇಳುತ್ತಾನೆ, "ಪ್ರತಿಜ್ಞೆ".

ಒಬ್ಬ ಸಂತ ಹೇಳುತ್ತಾನೆ, "ಭಕ್ತಿ".

ಒಬ್ಬ ಸನ್ಯಾಸಿ ಹೇಳುತ್ತಾನೆ, "ವೈರಾಗ್ಯ".

ಅಲೆಕ್ಸಾಂಡರ್ ಹೇಳುತ್ತಾನೆ, "ಯುದ್ಧ".

ಶ್ರೀಮಂತ ಹೇಳುತ್ತಾನೆ, "ಮೋಜು ಮತ್ತು ಮಸ್ತಿ".

ಮಧ್ಯಮ ವರ್ಗದವನು ಹೇಳುತ್ತಾನೆ, "ಉದ್ಯೋಗ".

ಹಸಿದವನು ಹೇಳುತ್ತಾನೆ, "ತನ್ನ ಪಾಲಿನ ಅರ್ಧ ರೊಟ್ಟಿ".

ಹೀಗೆ ಒಬ್ಬೊಬರಿಗೆ ಒಂದೊಂದು ರೀತಿ ಬದುಕು ಕಾಣುತ್ತದೆ. ಅವರವರ ಆಲೋಚನೆಯಂತೆ ಅವರವರು  ಬದುಕನ್ನು ಸಮರ್ಥಿಸುತ್ತಾರೆ.

ಬದುಕೆನ್ನುವುದು  ಸುಂದರವಾದ ಅನುಭವ.  ಪ್ರತಿದಿನ, ಪ್ರತಿ ಗಂಟೆ, ಪ್ರತಿ ನಿಮಿಷ  ಎಲ್ಲವೂ ಅಮೂಲ್ಯ.  ಈ ಯಾವುದೂ ಹಿಂತಿರುಗಿ ಬರುವುದಿಲ್ಲ.  ಒಮ್ಮೆ ಕಳೆದರೆ ಮುಗಿಯಿತು .  ಆದ್ದರಿಂದಲೇ ಪ್ರತಿ ಕ್ಷಣದ ಬದುಕು ನವ ನವೀನ.  ಹೀಗೆಯೇ  ನಮ್ಮ ಬದುಕು  ಅನಿಶ್ಚಿತ ಕೂಡಾ.  ಮುಂದಿನ ಕ್ಷಣ ಏನೆಂದು ಯಾರಿಗೂ  ತಿಳಿಯದು.  ಈ ಕ್ಷಣವೇ ಪರಮ ಪವಿತ್ರ.  ಈ ಕ್ಷಣವನ್ನು ಸಂಪೂರ್ಣ  ಅನುಭವಿಸುವುದೇ  ಬದುಕು.     ಸಂಘರ್ಷ, ಮನಸ್ತಾಪ, ಕೋಪ, ದ್ವೇಷ  ಇವುಗಳನ್ನು ಕಡಿಮೆ ಮಾಡುತ್ತಾ  ಪ್ರೀತಿ, ಸೌಹಾರ್ದ, ಸಹಾಯ, ಕಾರುಣ್ಯ, ಮತ್ತು ಹಸನ್ಮುಖದ ನಡುವೆ ಬದುಕುವುದೇ ಸಾರ್ಥಕ ಜೀವನ.    ನಮ್ಮ ಚಿಂತನೆ ಸಕಾರಾತ್ಮಕವಾಗಿದ್ದರೆ ಆ ಕ್ಷಣದಲ್ಲಿ ಒಂದಷ್ಟು ಚೈತನ್ಯ ಮೂಡುತ್ತದೆ. ಇಲ್ಲವಾದರೆ ನಿರಾಸೆ ನಮ್ಮದಾಗುತ್ತದೆ.

ಕಷ್ಟ, ನೋವು, ನಿರಾಸೆ, ದುಃಖ ಎಲ್ಲವು ಎಲ್ಲರಿಗೂ ಇದೆ. ಆದರೆ, ಅವುಗಳ  ಮಧ್ಯೆ ಸಂತೋಷದಿಂದ , ತೃಪ್ತಿಯಿಂದ  ಬದುಕುವುದೇ  ಜೀವನ.  ಧನ್ಯವಾದಗಳು

Post a Comment

0Comments

Please Select Embedded Mode To show the Comment System.*