ಕಪ್ಪು vs ಹಸಿರು ಏಲಕ್ಕಿ, ಆರೋಗ್ಯದ ವಿಷಯದಲ್ಲಿ ಎರಡೂ ಎತ್ತಿದ ಕೈ

SANTOSH KULKARNI
By -
0
ಏಲಕ್ಕಿಯು ತುಂಬಾ ರುಚಿ ಹಾಗೂ ಸುವಾಸನೆ ಹೊಂದಿರುವ ಸಾಂಬಾರ ಪದಾರ್ಥ. ಇದು ಎರಡು ವಿಧದಲ್ಲಿ ಲಭ್ಯ. ಇದರ ಬಳಕೆಯಿಂದ ಯಾವ ಲಾಭಗಳಿವೆ ತಿಳಿಯಿರಿ.

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಮಾತಿದೆ. ಇದೇ ಮಾತು ಏಲಕ್ಕಿ ಅನ್ವಯ ವಾಗುವುದು. ಏಲಕ್ಕಿಯು ನೋಡಲು ತುಂಬಾ ಸಣ್ಣದಾದರೂ ಅದರ ರುಚಿ ಹಾಗೂ ಸುವಾಸನೆಗೆ ಸಾಟಿಯಿಲ್ಲ. ಇಂತಹ ಏಲಕ್ಕಿಯಲ್ಲಿ ಹಲವಾರು ವಿಧದ ಆರೋಗ್ಯ ಲಾಭಗಳು ಕೂಡ ಇವೆ. ಏಲಕ್ಕಿಯನ್ನು ಸಾಮಾನ್ಯವಾಗಿ ಚಾದಿಂದ ಹಿಡಿದು ಬಿರಿಯಾನಿ ತನಕ ಹೆಚ್ಚಿನ ಖಾದ್ಯಗಳಿಗೆ ಬಳಕೆ ಮಾಡಲಾಗುತ್ತದೆ.
ಈ ಸಾಂಬಾರ ಪದಾರ್ಥವು ಅತ್ಯಧಿಕ ರುಚಿ ಹಾಗೂ ಸುವಾಸನೆ ಹೊಂದಿದೆ. ಇಂತಹ ಏಲಕ್ಕಿಯಲ್ಲಿ ಎರಡು ವಿಧವಿದೆ. ಒಂದು ಕಪ್ಪು ಏಲಕ್ಕಿ ಮತ್ತು ಹಸಿರು ಏಲಕ್ಕಿ. ಇದೆರಡು ಏಲಕ್ಕಿಯೇ ಆದರೂ ಇದರ ಗುಣಗಳು ಹಾಗೂ ಆರೋಗ್ಯ ಲಾಭಗಳು ತುಂಬಾ ಭಿನ್ನವಾಗಿದೆ. ಕಪ್ಪು ಏಲಕ್ಕಿಯನ್ನು ಹೆಚ್ಚಾಗಿ ಸಿಕ್ಕಿಂ, ಪೂರ್ವ ನೇಪಾಳ ಮತ್ತು ಪಶ್ವಿಮ ಬಂಗಾಳದಲ್ಲಿ ಬೆಳೆಯಲಾಗುತ್ತದೆ.
ಏಲಕ್ಕಿ ನೋಡಲು ಚಿಕ್ಕದಾದರೂ, ಕಾರುಬಾರು ಮಾತ್ರ ದೊಡ್ಡದು!
ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು, ನಾರಿನಾಂಶ ಮತ್ತು ಎಣ್ಣೆಯಂಶವಿದೆ. ಇದನ್ನು ಹಲವಾರು ಕಾಯಿಲೆಗಳನ್ನು ನಿವಾರಣೆ ಮಾಡಲು ಬಳಸಲಾಗುತ್ತದೆ. ಕಪ್ಪು ಏಲಕ್ಕಿಯನ್ನು ನಿಯಮಿತವಾಗಿ ಸೇವಿಸಿದರೆ ಅದರಿಂದ ಆರೋಗ್ಯವು ಸುಧಾರಣೆ ಆಗುವುದು.

ಇದರಲ್ಲಿ ಉನ್ನತ ಮಟ್ಟದ ಆಂಟಿಆಕ್ಸಿಡೆಂಟ್, ವಿಟಮಿನ್ ಸಿ ಮತ್ತು ಪೊಟಾಶಿಯಂ ಇದೆ. ಈ ಎಲ್ಲಾ ಅಂಶಗಳು ದೇಹದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಹೊರಗೆ ಹಾಕುವುದು ಮತ್ತು ರಕ್ತ ಸಂಚಾರವು ಸುಗಮವಾಗುವಂತೆ ಮಾಡುವುದು. ಏಲಕ್ಕಿಯ ಪ್ರಮುಖ ಗುಣವೆಂದರೆ ಇದು ಚರ್ಮಕ್ಕೆ ತುಂಬಾ ಸಹಕಾರಿ ಆಗಿರುವುದು.

*ಕಪ್ಪು ಏಲಕ್ಕಿಯ ಲಾಭಗಳು*
ಕಪ್ಪು ಏಲಕ್ಕಿಯು ಹಲವಾರು ರೀತಿಯ ಉಸಿರಾಟದ ಸಮಸ್ಯೆಗೆ ನೆರವಾಗುವುದು. ಅಸ್ತಮಾ, ಶ್ವಾಸಕೋಶ ಕಟ್ಟುವಿಕೆ ಸಮಸ್ಯೆ ಇದ್ದರೆ ಆಗ ನೀವು ಕಪ್ಪು ಏಲಕ್ಕಿ ತಿಂದರೆ ತುಂಬಾ ಲಾಭಕಾರಿ ಆಗಿರುವುದು. ಇದು ಶೀತ ಮತ್ತು ಕೆಮ್ಮನ್ನು ನಿವಾರಣೆ ಮಾಡುವುದು.
ಕಪ್ಪು ಏಲಕ್ಕಿಯು ದೇಹದಿಂದ ವಿಷವನ್ನು ಹೊರಗೆ ಹಾಕುವುದು. ಬಾಯಿ ದುರ್ವಾಸನೆ ಬರುತ್ತಲಿದ್ದರೆ ಆಗ ನೀವು ಒಂದು ಕಪ್ಪು ಏಲಕ್ಕಿ ಜಗಿದರೆ ಸಾಕು. ಬಾಯಿಯಲ್ಲಿ ಹುಣ್ಣು ಮೂಡುತ್ತಲಿದ್ದರೂ ಇದನ್ನು ಬಳಸಬಹುದು. ಪದೇ ಪದೇ ತಲೆನೋವು ಕಂಡುಬರುತ್ತಲಿದ್ದರೆ ಆಗ ಕಪ್ಪು ಏಲಕ್ಕಿಯಿಂದ ಮಸಾಜ್ ಮಾಡಿದರೆ ಅದು ತುಂಬಾ ನೆರವಾಗಲಿದೆ.
ಕಪ್ಪು ಏಲಕ್ಕಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ. ಇದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವುದು. ಇದರಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಕ್ಯಾನ್ಸರ್ ಕೋಶಗಳು ಬೆಳೆಯದಂತೆ ತಡೆಯುವುದು.

*ಕಪ್ಪು ಏಲಕ್ಕಿ ಬಳಕೆ ಎಲ್ಲಿ ಮಾಡಲಾಗುವುದು?*
ತರಕಾರಿ, ಬಿರಿಯಾನಿ ಇತ್ಯಾದಿಗಳಲ್ಲಿ ಕಪ್ಪು ಏಲಕ್ಕಿಯನ್ನು ಬಳಸುವರು. ಕಪ್ಪು ಏಲಕ್ಕಿಯನ್ನು ಹೆಚ್ಚಾಗಿ ಗರಂ ಮಸಾಲಗಳಲ್ಲಿ ಬಳಕೆ ಮಾಡುವರು. ಇದರಲ್ಲಿ ಇರುವಂತಹ ಕೆಲವೊಂದು ಅಂಶಗಳು ಆರೋಗ್ಯಕ್ಕೆ ತುಮಬಾ ಒಳ್ಳೆಯದು.
ಕಪ್ಪು ಮತ್ತು ಹಸಿರು ಏಲಕ್ಕಿಯನ್ನು ಹಲವಾರು ಮನೆಮದ್ದುಗಳಲ್ಲಿ ಬಳಕೆ ಮಾಡುವರು. ಇದನ್ನು ಆಹಾರದ ರುಚಿ ಹೆಚ್ಚಿಸಲು ಬಳಸುವುದು ಮಾತ್ರವಲ್ಲದೆ, ಶೀತ, ಕೆಮ್ಮು ಮತ್ತು ಬಾಯಿಯ ದುರ್ವಾಸನೆ ನಿವಾರಣೆ ಮಾಡಲು ಬಳಸುವರು. ಕಪ್ಪು ಮತ್ತು ಹಸಿರು ಏಲಕ್ಕಿಯು ತುಂಬಾ ಲಾಭಕಾರಿ. ಅದರಲ್ಲೂ ಕಪ್ಪು ಏಲಕ್ಕಿಯು ಹೆಚ್ಚು ಲಾಭಕಾರಿ ಆಗಿದೆ.

ಹಸಿರು ಮತ್ತು ಕಪ್ಪು ಏಲಕ್ಕಿ ರುಚಿ
ಹಸಿರು ಏಲಕ್ಕಿಯನ್ನು ಕಪ್ಪು ಏಲಕ್ಕಿಗಿಂತ ಹೆಚ್ಚು ಬಳಕೆ ಮಾಡಲಾಗುತ್ತದೆ. ಆದರೆ ಕಪ್ಪು ಏಲಕ್ಕಿಯನ್ನು ಔಷಧಿ ಮತ್ತು ಅಡುಗೆಗೆ ಎರಡಕ್ಕೂ ಬಳಕೆ ಮಾಡುವರು. ಇದರಿಂದ ಆಹಾರಕ್ಕೆ ಒಳ್ಳೆಯ ಸುವಾಸನೆ ಮತ್ತು ರುಚಿ ಸಿಗುವುದು. ಕಪ್ಪು ಏಲಕ್ಕಿಯು ಮಿತ ಸುವಾಸನೆ ಹೊಂದಿದ್ದರೆ, ಹಸಿರು ಏಲಕ್ಕಿಯು ತೀವ್ರ ಸುವಾಸನೆ ಹೊಂದಿದೆ.

*ಹಸಿರು ಏಲಕ್ಕಿಯ ಲಾಭಗಳು*
ಹಸಿರು ಏಲಕ್ಕಿಯು ಶೀತ ಮತ್ತು ಶ್ವಾಸಕೋಶದ ಸಮಸ್ಯೆ ನಿವಾರಣೆ ಮಾಡಲು ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಹಸಿರು ಏಲಕ್ಕಿಯು ಗ್ಯಾಸ್, ಅಸಿಡಿಟಿ ಮತ್ತು ಹೊಟ್ಟೆಯ ಸಮಸ್ಯೆಗೆ ತುಂಬಾ ಪರಿಣಾಮಕಾರಿ.

ಹಸಿರು ಏಲಕ್ಕಿಯನ್ನು ಪ್ರತಿಯೊಬ್ಬರು ಬಳಕೆ ಮಾಡುವರು ಮತ್ತು ಇದು ಸಣ್ಣ ಏಲಕ್ಕಿಯ ಹೆಸರು ಎಂದು ಹೆಚ್ಚಿನವರಿಗೆ ತಿಳಿದಿದೆ. ಹಸಿರು ಏಲಕ್ಕಿಯನ್ನು ಉಪ್ಪು ಮತ್ತು ಸಿಹಿ ಎರಡರಲ್ಲೂ ಬಳಕೆ ಮಾಡುವರು. ಹಾಲಿನ ಖಾದ್ಯಗಳಿರುವಂತಹ ಪಾಯಸ, ಸಿಹಿ ತಿಂಡಿಗಳಲ್ಲಿ ಬಳಸುವರು. ಹಸಿರು ಏಲಕ್ಕಿಯನ್ನು ಟೀ ತಯಾರಿಕೆಗೂ ಬಳಕೆ ಮಾಡುವರು.
Tags:

Post a Comment

0Comments

Please Select Embedded Mode To show the Comment System.*