ವಿಟಮಿನ್‌ಗಳೆಂದರೇನು?

SANTOSH KULKARNI
By -
1 minute read
0


ನಾವು ತಿನ್ನುವ ಆಹಾರದಲ್ಲಿ ಇರುವ ಅಂಶಗಳಲ್ಲಿ ವಿಟಮಿನ್‌ಗಳೂ ಸೇರಿವೆ. ಅವು ದೇಹಕ್ಕೆ ಅಗತ್ಯವಿರುವ ಸಾಮರ್ಥ್ಯ ನೀಡುತ್ತವೆ.

* ‘ವಿಟಮಿನ್ ಬಿ1’ ಅನ್ವೇಷಣೆಗೆ ಕಾರಣವಾದ ಪ್ರಯೋಗ ಯಾವುದು?
 1896ರಲ್ಲಿ ಡಚ್ ರೋಗತಜ್ಞ ಡಾ.ಕ್ರಿಸ್ಟಿಯನ್ ಈಜಿಕ್‌ಮನ್‌ ಜಾವಾದಲ್ಲಿ ‘ಬೆರಿಬೆರಿ’ ಎಂಬ ನರರೋಗದಿಂದ ನರಳುತ್ತಿದ್ದವರಿಗೆ ಚಿಕಿತ್ಸೆ ನೀಡುತ್ತಿದ್ದರು. ಆ ರೋಗಿಗಳಂತೆಯೇ ಕೆಲವು ಕೋಳಿಗಳು ಕುಂಟುವುದನ್ನು ಅವರು ಗಮನಿಸಿದರು. ಹಾಗೆ ಕುಂಟುತ್ತಿದ್ದ ಕೋಳಿಗಳಿಗೆ ಅವರು ಪಾಲಿಷ್ ಮಾಡಿದ ಅಕ್ಕಿ ತಿನ್ನಿಸಿದ್ದರು. ಪಾಲಿಷ್ ಮಾಡದ ಅಕ್ಕಿಯನ್ನು ತಿಂದಿದ್ದ ಕೋಳಿಗಳು ಆರೋಗ್ಯವಾಗಿಯೇ ಇದ್ದವು. ಪಾಲಿಷ್ ಮಾಡದ ಅಕ್ಕಿಯಲ್ಲಿ ಇದ್ದ, ಪೋಷಣೆಗೆ ಕಾರಣವಾಗುವ ಅಂಶವೇ ‘ವಿಟಮಿನ್ ಬಿ1’ ಅಥವಾ ‘ಥಯಮಿನ್’ ಎಂದು ಗೊತ್ತಾದದ್ದು ಕ್ರಿಸ್ಟಿಯನ್ ಪ್ರಯೋಗ ಮಾಡಿದ 30 ವರ್ಷಗಳ ನಂತರ.

* ಬ್ರಿಟಿಷ್ ಹಡಗುಗಳ ನಾವಿಕರನ್ನು ‘ಲೈಮೀಸ್’ ಎಂದೇಕೆ ಕರೆಯುತ್ತಿದ್ದರು?
 ಯಾಕೆಂದರೆ, ಅವರಿಗೆ ಕುಡಿಯಲು ಲಿಂಬು ಪಾನಿ ಕೊಡುತ್ತಿದ್ದರು. ಲಿಂಬು ಪಾನಿ ಅಥವಾ ನಿಂಬೆರಸವನ್ನು ಪ್ರತಿದಿನ ಸೇವಿಸುವುದರಿಂದ ‘ವಿಟಮಿನ್ ಸಿ’ ದೊರೆಯುತ್ತದೆ. ಇದರಿಂದ ರಕ್ತಪಿತ್ತ ವ್ಯಾಧಿ ಬಾರದು.

* ‘ಫಾಲಿಕ್ ಆಸಿಡ್’ ಕಂಡುಹಿಡಿದದ್ದು ಯಾರು?
 ಡಾ.ಯಲ್ಲಪ್ರಗಾದ ಸುಬ್ಬರಾವ್ ಹಾಗೂ ಅಮೆರಿಕದಲ್ಲಿನ ಅವರ ನೇತೃತ್ವದ ವಿಜ್ಞಾನಿಗಳ ತಂಡ ಕಂಡುಹಿಡಿಯಿತು.

* ‘ವಿಟಮಿನ್ ಡಿ’ ಅನ್ವೇಷಣೆಯಾದದ್ದು ಯಾವಾಗ?
 ಮಕ್ಕಳಿಗೆ ಮೆದುಮೂಳೆ ರೋಗ ಬರದೇ ಇರಲು ಪ್ರತಿದಿನ ಕಾಡ್ ಲಿವರ್ ಆಯಿಲ್ ಕುಡಿಯುವಂತೆ ಒತ್ತಾಯಿಸಲಾಗುತ್ತಿತ್ತು. 1919ರಲ್ಲಿ ಸರ್ ಎಡ್ವರ್ಡ್ ಮೆಲ್ಲಾನಿಬಿ ಕಾಡ್ ಲಿವರ್ ಆಯಿಲ್‌ನಲ್ಲಿ ಮೂಳೆ ಗಟ್ಟಿಯಾಗಲು ಇರುವ ಅಂಶವನ್ನು 1931ರಲ್ಲಿ ಪತ್ತೆಮಾಡಿದರು. ಅದೇ ‘ವಿಟಮಿನ್ ಡಿ’.

Post a Comment

0Comments

Post a Comment (0)