ಭೂಮಿಯ ಬಗ್ಗೆ ಒಂದಿಷ್ಟು ಮಾಹಿತಿ

SANTOSH KULKARNI
By -
0
ಸಾಮಾನ್ಯವಾಗಿ ಪ್ರತಿಯೊಂದೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭೂಮಿ ಅಥವಾ ಭೂಮಿಗೆ ಸಂಬಂಧಿಸಿದಂತೆ ಯಾವುದೇ ರೂಪದಲ್ಲಿ ಒಂದಾದಾದರೂ ಪ್ರಶ್ನೆ ಎದುರಾಗುವುದು ಖಚಿತ, ಇದೆ ಕಾರಣದಿಂದ ಭೂಮಿಗೆ ಸಂಭಂದಿಸಿದಂತೆ ಸಾಕಷ್ಟು ಮಾಹಿತಿಯನ್ನು ಈ ಕೆಳಗೆ ಸಂಗ್ರಹಿಸಲಾಗಿದೆ.

★ ಪ್ರತಿವರ್ಷ ವಿಶ್ವ ಭೂಮಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
- ಏಪ್ರಿಲ್ 22

# 2020 ರ ಸಾಲಿನ ವಿಶ್ವ ಭೂಮಿ ದಿನದ ವಿಷಯ (Theme ) - "ಹವಮಾನ ಕ್ರಿಯೆ"

# ಭೂಮಿಯ ಮೇಲ್ಮೆ ವಿಸ್ತೀರ್ಣ - 510 ದಶಲಕ್ಷ ಚದರ ಕಿ. ಮೀ.
# ಭೂಮಿಯ ಮೇಲಿನ ಜಲಭಾಗದ ವಿಸ್ತೀರ್ಣ - 362 ದಶಲಕ್ಷ ಚದರ ಕಿ. ಮೀ.
# ಜಲ ಭಾಗದಿಂದ ಆವೃತ್ತ ಭಾಗ - ಶೇ. 71.78%
# ಭೂಮಿಯ ಮೇಲಿನ ಭೂಭಾಗದ ವಿಸ್ತೀರ್ಣ - 149 ದಶಲಕ್ಷ ಚದರ ಕಿ. ಮೀ.
# ಭೂ ಭಾಗದಿಂದ ಆವೃತ್ತ ಭಾಗ - ಶೇ 29.22%
# ಭೂಮಿಯ ಸಮಭಾಜಕ ವೃತ್ತದ ವಿಸ್ತೀರ್ಣ - 40,076 ಕಿ.ಮೀ
# ಭೂಮಿಯ  ಧೃವೀಯ ವಿಸ್ತೀರ್ಣ - 40,008 ಕಿ.ಮೀ
# ಭೂಮಿಯ ಸಮಭಾಜಕ ವೃತ್ತದ ವ್ಯಾಸ - 12.756 ಕಿ.ಮೀ
# ಭೂಮಿಯ ಧೃವೀಯ ವ್ಯಾಸ - 12,713 ಕಿ.ಮೀ
# ಭೂಮಿಯ ವಯಸ್ಸು - 4550 ಮಿಲಿಯನ್ ವರ್ಷ
# ಭೂಪಥದ ಉದ್ದ - 928000000 ಕಿ.ಮೀ
# ಭೂಮಿ ಸೂರ್ಯರ ನಡುವಿನ ಅಂತರ - 148 ದಶಲಕ್ಷ ಕಿ.ಮೀ
# ನೀಚ ಸ್ಥಾನದಲ್ಲಿ ಭೂಮಿ ಸೂರ್ಯನ ನಡುವಿನ ಅಂತರ - 146 ದಶಲಕ್ಷ ಕಿ.ಮೀ
# ಉಚ್ಚ ಸ್ಥಾನದಲ್ಲಿ ಭೂಮಿ ಸೂರ್ಯರ ನಡುವಿನ ಅಂತರ - 151 ದಶಲಕ್ಷ ಕಿ.ಮೀ
# ಭೂಮಿಯ ಚಲನಾ ವೇಗ(ಪ್ರತಿ ಸೆಕೆಂಡಿಗೆ) - 2906 ಕಿ.ಮೀ
# ಭೂ ಪಥದಲ್ಲಿ ಭೂಮಿಯ ಚಲನಾ ವೇಗ(ಪ್ರತಿ ಗಂಟೆಗೆ) - 1062.00 ಕಿ.ಮೀ
# ಭೂ ಮಧ್ಯ ರೇಖೆಯ ಬಳಿ ದೈನಿಕ ಚಲನಾ ವೇಗ ಪ್ರತಿ ಗಂಟೆಗೆ - 1600 ಕಿ.ಮೀ
# ಭೂಮಿ ತನ್ನ ಅಕ್ಷದ ಮೇಲೆ ಪರಿಭ್ರಮಿಸುವ ಅವಧಿ - 23 ಗಂಟೆ 56 ನಿ 4 ಸೆಂ
# ಭೂಮಿಯ ಅತಿ ಆಳವಾದ ಭಾಗ - ಮರಿಯಾನ ಕಂದರ ಫೆಸಿಫಿಕ್ ಸಾಗರ (11.033 ಮೀಟರ್)
# ಭೂಮಿಯ ಅತಿ ಎತ್ತರ ಪ್ರದೇಶ : ಮೌಂಟ್ ಎವರೆಸ್ಟ್ ಶಿಖರ -8848 ಮೀ
# ಭೂಮಿಯ ಅತಿ ಆಳವಾದ ಪ್ರದೇಶ - ಮೃತ ಸಮುದ್ರ 756 ಮೀಟರ್ (ಸಮುದ್ರ ಮಟ್ಟಕ್ಕಿಂತ)
# ಭೂ ಸಮಭಾಜಕ ವಾತಾವರಣ ಉಷ್ಣಾಂಶ - 14 ಸೆ.
# ಸೂರ್ಯನಿಂದ ಅತಿ ದೂರ - ಜುಲೈ 2 ಮತ್ತು 5 ಸುಮಾರು 152 ಮಿಲಿಯನ್ ಕಿ.ಮೀ
# ಅತಿ ಕಡಿಮೆ ದೂರ - ಜನವರಿ 4 ಮತ್ತು 5 ಸುಮಾರು 147 ಮಿಲಿಯನ್ ಕಿ.ಮೀ

★ ಉಷ್ಣಾಂಶ :-

# ಅತಿ ಹೆಚ್ಚು ಉಷ್ಣಾಂಶ ದಾಖಲು - ಅಲ್‍ಜಜೀಯಾ, ಲಿಬಿಯಾ (58 ಸೆ.)
# ಅತಿ ಕಡಿಮೆ ಉಷ್ಣಾಂಶ ದಾಖಲು - ಅಂಟಾರ್ಟಿಕ (– 89.6 ಸೆ.)
# ವಾತಾವರಣದಲ್ಲಿರುವ ಅನಿಲಗಳು :-
* ಸಾರಜನಕ(ನೈಟ್ರೋಜನ್) 78%,
* ಆಮ್ಲಜನಕ: 21%,
* ಇತರೆ: 1%

★ ಭುಮಿಯ ವಿವಿಧ ಪ್ರದೇಶಗಳ ಶೇಕಡವಾರು ಹಂಚಿಕೆ :-

1. ಮೈದಾನ ಪ್ರದೇಶ - 43.3% 
2. ಪರ್ವತ ಪ್ರದೇಶ - 29.3%
3. ಪ್ರಸ್ಥಭೂಮಿ - 27.4%

★ ಭೂ ಭಾಗವನ್ನು ವಿವಿಧ ಉದ್ದೇಶಗಳಿಗಾಗಿ ಬಳಕೆ:-

1. ನಿವ್ಹಳ ಸಾಗುವಳಿ ಪ್ರದೇಶ 46%
2. ಅರಣ್ಯ ಪ್ರದೇಶ 22%
3. ಬೀಳು ಭೂಮಿ 10%
4. ಸಾಗುವಳಿ ಯೋಗ್ಯವಲ್ಲದ ಪ್ರದೇಶ 5%
5. ಕೃಷಿಯೇತರ ಬಳಕೆ 5%
6.ಮರಗಳು ಮತ್ತು ಹಸಿರು ಹುಲ್ಲುಗಾವಲು 12%

# ಅಂತರಿಕ್ಷದ ಭೂಮಿ ಗ್ರಹ ನೀಲಿ ಬಣ್ಣದಾಗಿ ಕಾಣತ್ತದೆ ಇದಕ್ಕೆ ಕಾರಣ ಭೂ ಗ್ರಹ ಭಾಗ (ಶೇ.71%) ನೀರಿನಿಂದ ಆವೃತ್ತವಾಗಿರುವುದು. ಆದ್ದರಿಂದ ಕೆಲವೊಮ್ಮೆ ನೀಲಗ್ರಹ ಎಂದು ಕರೆಯಲಾಗಿದೆ.

# ಅಂತರಿಕ್ಷದಿಂದ ನೋಡಿದರೆ ಪೃಥ್ವಿ ಸಂಪೂರ್ಣವಾಗಿ ಗೋಳಾಕಾರವಾಗಿ ಕಾಣುತ್ತದೆ. ಆದರೆ ಅದು ವಾಸ್ತಕವಿಲ್ಲ. ಭೂ ಗ್ರಹ ಸಮಭಾಜಕ ವೃತ್ತದ ಬಳಿ ಉಬ್ಬಾಗಿದ್ದು ಧೃವ ಪ್ರದೇಶಗಳಲ್ಲಿ ಚಪ್ಪಟೆಯಾಗಿದೆ.
# ಅಂತರಿಕ್ಷದಿಂದ ಭೂಮಿಯ ಛಾಯಚಿತ್ರ ತೆಗೆದಾಗ ಅಲ್ಲಲ್ಲಿ ಕಂದು ಕಲೆಗಳು ಕಾಣಿಸುತ್ತವೆ. ಆ ಕಲೆಗಳು ಭೂ ಭಾಗಗಳಾಗಿ ಹಾಗೆ ಛಾಯಚಿತ್ರದಲ್ಲಿ ಕಾಣುವ ಗಾಢ ಕಪ್ಪು ಹಾಗೂ ನೀಲಿ ಪ್ರದೇಶಗಳು ಸಾಗರ ಕಂದರಗಳಾಗಿವೆ. ಹಾಗೆ ಕಂದು ಭಾಗಗಳ ಮೇಲಿನ ಮಸುಕು ಪಟ್ಟಿಗಳು ಪರ್ವತ ಶ್ರೇಣಿಗಳಾಗಿವೆ.
# ಪೃಥ್ವಿಯ ವಾಯುಮಂಡಲದ ರಚನೆ ಶುಕ್ರಗ್ರಹ ರಚನೆಯನ್ನು ಹೋಲುವುದಾದರೂ ವೃಶಿಷ್ಟತೆಯಿಂದ ಕೂಡಿದೆ ಸೂರ್ಯನಿಂದ ಹೊರ ಬಂದ ಕಿರಣಗಳು ಹಾದುಹೋಗುವ ತೆಳುವಾಗ ಪೊರೆ ಹೊಂದಿದೆ. ಆದರೆ ಸೂರ್ಯನ ಅಪಾಯ ಕಿರಣಗಳನ್ನು ತಡೆಯುವ ಸಾಮಥ್ರ್ಯವಿದೆ. ನೀಲರೋಹಾತೀತದಂತಹ ಅಪಾಯ ಕಿರಣಗಳನ್ನು ತಡೆದು ಭುಮಿಯನ್ನು ಜೀವಪೋಷಕ ಗ್ರಹವಾಗಿಸಿದೆ. ಹಾಗೆ ಅಂತರಿಕ್ಷದಿಂದ ಬೀಳುವ ಉಲ್ಕೆಗಳ ವೇಗವನ್ನು ವಾಯು ಮಂಡಲ ತಡೆದು ಉಲ್ಕೆ ಎಂದು ಬೀಳುವಂತೆ ಮಾಡುತ್ತದೆ. ಅಲ್ಲದೆ ನಮಗೆ ಉಸಿರಾಡಲು ಬೇಕಾದ ಆಮ್ಲಜನಕವನ್ನು ಒದಗಿಸುತ್ತದೆ.
# ಸುಮಾರು 460 ದಶಲಕ್ಷ ವರ್ಷಗಳ ಹಿಂದೆ ಪೃಥ್ವಿಯು ಕರಗಿದ ಪದಾರ್ಥದ ಚೆಂಡಿನಂತಿತ್ತು. ಪೃಥ್ವಿಯ ಮೇಲೆ ಆಮ್ಲಜನಕವಿಲ್ಲದೆ ಜೀವಿಸುತ್ತಿದ್ದ ಮೊದಲ ಜೀವ ರೂಪವು 350 ದಶಲಕ್ಷ ವರ್ಷಗಳ ಹಿಂದೆ ಅಸ್ಥಿತ್ವದಲ್ಲಿತ್ತು.
Tags:

Post a Comment

0Comments

Please Select Embedded Mode To show the Comment System.*