ಸಕ್ಕರೆ ಬದಲಿಗೆ ಬಳಸಬಹುದಾದ 7 ನೈಸರ್ಗಿಕ ಸಿಹಿ ಪದಾರ್ಥಗಳು

SANTOSH KULKARNI
By -
0
ಸಕ್ಕರೆ ಬಾಯಿಗೆ ತುಂಬಾ ಸಿಹಿ ಆದರೆ ಆರೋಗ್ಯಕ್ಕಲ್ಲ, ಸಕ್ಕರೆ ತಿನ್ನದೇ ಇದ್ದಷ್ಟೂ ಆರೋಗ್ಯಕ್ಕೆ ಒಳ್ಳೆಯದು, ಆದರೆ ಟೀ , ಕಾಫಿ, ಜ್ಯೂಸ್ ಇವುಗಳನ್ನು ಸೇವಿಸುವಾಗ ಸಪ್ಪೆ ಇದ್ದರೆ ಇಷ್ಟವಾಗಲ್ಲ, ನಾಲಗೆಗೆ ಸಿಹಿ ತಾಗಿದರೆ ಮಾತ್ರ ರುಚಿ ಅನಿಸುವುದು.

ಸಕ್ಕರೆ ಹೆಚ್ಚಾಗಿ ತಿನ್ನುವುದರಿಂದ ಒಬೆಸಿಟಿ (ಸ್ಥೂಲಕಾಯ), ಅತ್ಯಧಿಕ ರಕ್ತದೊತ್ತಡ, ಮಧುಮೇಹವಿದ್ದವರ ಆರೋಗ್ಯದಲ್ಲಿ ಏರುಪೇರು, ಲಿವರ್‌ಗೆ ಸಂಬಂಧಿಸಿದ ಕಾಯಿಲೆ ಹೀಗೆ ಮುಂತಾದ ಸಮಸ್ಯೆ ಕಾಡುವುದು.

ಸಕ್ಕರೆ ಬದಲಿಗೆ ಇಲ್ಲಿ ನಾವು ಹೇಳಿರುವ ಸಿಹಿ ವಸ್ತುಗಳನ್ನು ಬಳಸಿದರೆ ಬಾಯಿಗೂ ಸಿಹಿ, ಆರೋಗ್ಯವೂ ಚೆನ್ನಾಗಿರುತ್ತದೆ.
ತೂಕ ನಿಯಂತ್ರಣದಲ್ಲಿರಬೇಕೆಂದರೆ ಈ ವಿಧಾನಗಳನ್ನು ಅನುಸರಿಸುವುದು ಒಳ್ಳೆಯದು:

1. ಜೇನು
ಜೇನು ನೈಸರ್ಗಿಕವಾದ ಸಿಹಿ ಪದಾರ್ಥವಾಗಿದೆ. ಇದು ಸಿಹಿಯಾಗಿರುವುದು ಮಾತ್ರವಲ್ಲ ಕಾರ್ಬ್ಸ್, ವಿಟಮಿನ್ಸ್, ಖನಿಜಾಣಶಗಳು, ಅಮೈನೋ ಆಮ್ಲ ಮುಂತಾದ ವಸ್ತುಗಳನ್ನು ಒಳಗೊಂಡಿರುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಇದು ಮಧುಮೇಹ, ಉಸಿರಾಟದ ತೊಂದರೆ, ಹೃದಯ ಸಂಬಂಧಿ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.
ಜೇನನ್ನು ಟೀ, ಓಟ್ಸ್ ಇವುಗಳ ಜೊತೆ ಹಾಕಿ ಸವಿಯ ಬಹುದು. ಜೇನು ಬಿಸಿ ಮಾಡಬಾರದು, ಬಿಸಿ ಮಾಡಿದರೆ ಅದರ ಸತ್ವ ಹಾಳಾಗುವುದು.

2. ಮೇಪಲ್ ಸಿರಪ್
ಮೇಪಲ್ ಸಿರಪ್ ಕೂಡ ಸಕ್ಕರೆ ಬದಲಿಗೆ ಬಳಸಬಹುದಾದ ನೈಸರ್ಗಿಕವಾದ ಸಿಹಿಯಾಗಿದೆ. ಮೇಪಲೆ ಸಿರಪ್‌ನಲ್ಲಿ ಸುಕ್ರೋಸ್, ಪಾಲಿಸ್ಯಾಚರೈಡ್ಸ್, ಸಾವಯವ ಆಮ್ಲ, ಅಮೈನೋ ಆಮ್ಲ, ವಿಟಮಿನ್ಸ್ ಹಾಗೂ ಖನಿಜಾಂಶಗಳಿವೆ. ಇದು ಕ್ಯಾನ್ಸರ್, ಉರಿಯೂತ ಮುಂತಾದ ಸಮಸ್ಯೆಗಳನ್ನು ತಡೆಗಟ್ಟುತ್ತದೆ.
ಬಳಸುವುದು ಹೇಗೆ? ನೀವು ಸಿಹಿ ಪದಾರ್ಥಗಳನ್ನು ಮಾಡುವಾಗ ಪ್ಯಾನ್‌ಕೇಕ್, ಓಟ್ಸ್, ಸಲಾಡ್‌ ಡ್ರೆಸ್ಸಿಂಗ್‌, ಮೊಸರು, ಟೀ, ಕಾಫಿ, ಕೇಕ್‌ ಇವುಗಳಲ್ಲಿ ಬಳಸಬಹುದು.

3. ತೆಂಗಿನಕಾಯಿಯ ಸಕ್ಕರೆ
ತೆಂಗಿನಕಾಯಿಯಿಂದ ತಯಾರಿಸಿದ ಸಕ್ಕರೆ ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್ಸ್, ಖನಿಜಾಂಶ, ಆ್ಯಂಟಿ ಆಕ್ಸಿಡೆಂಟ್, ಅತ್ಯಧಿಕ ಫ್ರಕ್ಟೋಸ್ ಹಾಗೂ ಗ್ಲೋಕೋಸ್ ಹಾಗೂ ಕಡಿಮೆ ಪ್ರಮಾಣದಲ್ಲಿ ಸುಕ್ರೋಸ್‌ ಅಂಶವಿದೆ.
ಇದನ್ನು ಬಳಸುವುದು ಹೇಗೆ: ಎಲ್ಲಾ ರೀತಿಯ ಸಿಹಿ ಪದಾರ್ಥಗಳಲ್ಲಿ ಬಳಸಬಹುದು.


4. ಖರ್ಜೂರ
ಖರ್ಜೂರದಲ್ಲಿ ಕೂಡ ಸಿಹಿ ಅಂಶವಿದೆ. ಇದರಲ್ಲಿ ವಿಟಮಿನ್ ಸಿ, ವಿಮಟಿನ್ ಬಿ ಕಾಂಪ್ಲೆಕ್ಸ್, ಸೆಲೆನಿಯಮ್, ಪೊಟಾಷ್ಯಿಯಂ, ಸತು, ಮೆಗ್ನಿಷ್ಯಿಯಂ ಅಂದವಿದ್ದು ನಾರಿನಂಶ ಕೂಡ ಇದೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಹೆಚ್ಚಿದ್ದು, ಕಡಿಮೆ ಪ್ರಮಾಣ ಕೊಬ್ಬು ಹಾಗೂ ಪ್ರೊಟೀನ್ ಅಂಶವಿದೆ.
ಬಳಸುವುದು ಹೇಗೆ:ಇದನ್ನು ಪಾಯಸ ಮುಂತಾದ ಸಿಹಿ ಪದಾರ್ಥಗಳನ್ನು ಮಾಡುವಾಗ, ಸ್ಮೂತಿ ತಯಾರಿಸುವಾಗ ಅಲ್ಲದೆ ಸಿಹಿ ಪದಾರ್ಥಗಳನ್ನು ಮಾಡುವಾಗ ಬಳಸಬಹುದು. ಖರ್ಜೂರದ ಸಿರಪ್ ಮಾಡಿ ಸಕ್ಕರೆ ಬದಲಿಗೆ ಬಳಸಬಹುದು.

5. ಬಾಳೆಹಣ್ಣಿನ ರಸ
ಸಕ್ಕರೆ ಬದಲಿಗೆ ಬಳಸಬಹುದಾದ ಮತ್ತೊಂದು ಸಿಹಿ ಪದಾರ್ಥವೆಂದರೆ ಬಾಳೆಹಣ್ಣಿನ ರಸ. ಇದರಲ್ಲಿ ಪೊಟಾಷ್ಯಿಯಂ, ವಿಟಮಿನ್ ಸಿ, ಮೆಗ್ನಿಷ್ಯಿಯಂ, ನಾರಿನಂಶ, ವಿಟಮಿನ್ ಬಿ6, ತಾಮ್ರ ಹಾಗೂ ಮ್ಯಾಂಗನೀಸ್ ಅಂಶವಿದ್ದು ಇದನ್ನು ಕೂಡ ಸಕ್ಕರೆ ಬದಲಿಗೆ ಬಳಸಬಹುದು.
ಬಳಸುವುದು ಹೇಗೆ?
ಹಣ್ಣಾದ ಬಾಳೆಹಣ್ಣನ್ನು ಪೇಸ್ಟ್ ಮಾಡಿ ಅದನ್ನು ಚಪಾತಿ ಮತ್ತಿತರ ವಸ್ತುಗಳ ಜೊತೆ ಬಳಸಬಹುದು.

6. ಜೋನಿ ಬೆಲ್ಲ
ಕಬ್ಬಿನ ರಸವನ್ನು ಮೊದಲ ಬಾರಿಗೆ ಕುದಿಸಿದಾಗ ಅದರಿಂದ ಪಾಕ ತಯಾರಾಗುತ್ತದೆ, ಇದನ್ನು 3 ಬಾರಿ ಕುದಿಸಿದಾಗ ಕಪ್ಪು ಬಣ್ಣದ ಪಾಕ ತಯಾರಾಗುವುದು, ಇದೇ ಜೋನಿ ಬೆಲ್ಲ, ಈ ಪಾಕವನ್ನು ಸಕ್ಕರೆ ಬದಲಿಗೆ ಬಳಸುವುದು ಒಳ್ಳೆಯದು. ಇದನ್ನು ಬಳಸುವುದರಿಂದ ವಿಟಮಿನ್ ಬಿ ಕಾಂಪ್ಲೆಕ್ಸ್, ಕಬ್ಬಿಣದಂಶ, ಸತು, ಸೆಲೆನಿಯಮಂ, ಮೆಗ್ನಿಷ್ಯಿಯಂ, ಪೊಟಾಷ್ಯಿಯಂ ಅಂಶ ದೊರೆಯುತ್ತದೆ.
ಬಳಸುವುದು ಹೇಗೆ: ಈ ಜೋನಿ ಬೆಲ್ಲವನ್ನು ಟೀ, ಕಾಫಿ ಹಾಗೂ ಇತರ ಪದಾರ್ಥಗಳ ಜೊತೆ ಹಾಕಿ ಸವಿಯಬಹುದು.

7. ಫ್ರೂಟ್‌ ಜಾಮ್
ವಿವಿಧ ಹಣ್ಣುಗಳನ್ನು ಹಾಕಿ ಫ್ರೂಟ್‌ ಜಾಮ್ ಮಾಡಿ ತಿನ್ನುವುದರಿಂದ ಬಾಯಿ ಸಿಹಿ ಮಾತ್ರವಲ್ಲ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು.
ಮಕ್ಕಳಿಗೆ ಸಕ್ಕರೆ ಕೊಡುವ ಬದಲು ಮಕ್ಕಳಿಗೆ ಹಣ್ಣುಗಳಿಂದ ಮಾಡಿದ ಫ್ರೂಟ್‌ ಜಾಮ್ ಕೊಡಿ (ಫ್ರೂಟ್‌ ಜಾಮ್ ನೀವೇ ಮಾಡಿ ಕೊಡುವುದು ಉತ್ತಮ ಆಯ್ಕೆ).
Tags:

Post a Comment

0Comments

Please Select Embedded Mode To show the Comment System.*