ಇಂದುವದನೆಯೇ ನಿನ್ನ ಮಂದಹಾಸವ ಕಂಡು
ಮುಂಗುರುಳು ಬಾಗಿ ಬಾಗಿ ಮುತ್ತಿಕ್ಕುತಿದೆಬೆಳದಿಂಗಳ ರಾತ್ರಿಯಲಿ ಒಮ್ಮೆಲೇ ಬೆರಗಾದೆ
ಬೆಳ್ಳಿ ಚಂದಿರನು ಧರೆಗಿಳಿದು ಬಂದನೇ ಎಂದು!
ಕ್ಷಣ ಕೂಡ ಬಿಡಲಾರೆ ಹೊತ್ತು ತಿರುಗಲೇ ನಿನ್ನ
ಮೆತ್ತನೆಯ ಕರಗಳಿವು ಮುತ್ತಿಡಲೇ ಚಿನ್ನ !
ಮೌನದೀ ಬಂಗಾರ , ಮಾತಂತೂ ಮುತ್ತು
ಆ ದೇವ ಕೊಟ್ಟ ನನಗಾಗಿ ಈ ಚೆಲುವೆಯನ್ನ !
ನಯನಗಳೋ ಅವು ! ಅಲ್ಲ ! ವಜ್ರಗಳ ಬುತ್ತಿ
ನೋಟವೋ ಚಂದ ಅದು ನಶೆಗಿಂತ ಮತ್ತು
ಎಂತಾಗಿ ಇಂತಾಗಿ ಹಾಡಿ ಹೊಗಳಿ
ಗಂಧ ಗಾಳಿಯೇ ಇಲ್ಲದ ನನ್ನವನು
ಕಾವ್ಯಧಾರೆಯ ಹರಿಸಿದ ಹಾಗೇ
ನಿನ್ನೇ ರಾತ್ರೀ ನನಗೊಂದು ಕನಸು ಬಿತ್ತು !!! :(