"ಸ್ನೇಹ ಸಂಬಂಧ "

SANTOSH KULKARNI
By -
0
"ಸ್ನೇಹ ಸಂಬಂಧ ": ಪ್ರಣಯ ಪಕ್ಷಿಗಳಲ್ಲ
ಸೋತ ಪ್ರೇಮಿಗಳೂ ಅಲ್ಲ ,
ಒಲವ ಝೇ೦ಕಾರವಿದೆ
ನಮ್ಮೊಳಗೆ
ಹೃದಯ ತುಡಿತವಿದೆ
ಮಾತೊಳಗೆ ,
ನಕ್ಕು ನಗಿಸುವ ಮನಸು
ಮಾತು ಮುಗಿಸದ ಕವಿತೆ
ಇನ್ನೇನೋ ಹೇಳುವ
ಕನಸು ನಾಳೆಯಲಿ
ಜೊತೆಯಲೇ ಇರಬೇಕು
ಘಂಟೆ ಘಳಿಗೆ !
ಪ್ರೀತಿಸುವ ಬಗೆಯಿದೆ

ಪ್ರೇಮಿಗಳೂ ಅಲ್ಲ ,
ನಲ್ಲ ನಲ್ಲೆಗೂ ಹೆಚ್ಚು
ಆ ಜೀವ ಧಾತನೆ ಬಲ್ಲ ..
ಅದು ನಾನು - ನೀನು !
ನೀ ನನ್ನ ಜೀವಕೆ ಗೆಳೆಯ
ನಾ ನಿನ್ನ ಭಾವಕೆ ಗೆಳತಿ..

Post a Comment

0Comments

Please Select Embedded Mode To show the Comment System.*