ಭಾರತದ ಚಿನ್ಹೆಗಳು

SANTOSH KULKARNI
By -
0

 1] ರಾಷ್ಟ್ರಧ್ವಜ :

ಭಾರತದ ರಾಷ್ಟ್ರ ಧ್ವಜದ ಉದ್ದ & ಅಗಲದ ಅನುಪಾತ 3:2.

ಭಾರತದ ರಾಷ್ಟ್ರಧ್ವಜವು ಕೇಸರಿ, ಬಿಳಿ ಮತ್ತುಹಸಿರು ಬಣ್ಣಗಳನ್ನು ಹೊಂದಿದೆ.

ಭಾರತದ ರಾಷ್ಟ್ರಧ್ವಜದ ಮಧ್ಯಭಾಗದಲ್ಲಿ 24ಕಡ್ಡಿಗಳನ್ನು ಹೊಂದಿದ್ದು ನೀಲಿ ಬಣ್ಣದಿಂದ ಕೂಡಿದೆ.ಇದನ್ನು ಸಾರನಾಥದ ಅಶೋಕನ ಸ್ಥಂಭದಿಂದಆರಿಸಿಕೊಳ್ಳಲಾಗಿದೆ.

ಭಾರತದ ಸಂವಿಧಾನ ರಚನಾ ಸಭೆಯು 22 ಜುಲೈ1947 ರಲ್ಲಿ ರಾಷ್ಟ್ರಧ್ವಜವನ್ನು ಅಳವಡಿಸಿಕೊಂಡಿತು.ಭಾರತದ ಧ್ವಜಸಂಹಿತೆ 26 ಜನವರಿ 2002 ರಂದುಜಾರಿಗೆ ಬಂದಿತು.

ಭಾರತದ ಪ್ರತಿಯೊಬ್ಬ ರಾಷ್ಟ್ರಧ್ವಜ ಹಾರಿಸುವುದುಮೂಲಭೂತ ಹಕ್ಕು ಎಂದು ಕಲಂ 19(i)ವಿವರಿಸುವುದು.

ಭಾರತದ ತ್ರಿವರ್ಣ ಧ್ವಜವನ್ನು ಮೊಟ್ಟಮೊದಲಿಗೆತಯಾರಿಸಿದವರು ಮೇಡಂ ಭೀಕಾಜಿ ಕಾಮಾ.

ಭಾರತದ ಧ್ವಜವನ್ನು ಮೊದಲಿಗೆ ಲಾಹೋರದ ರಾವಿನದಿಯ ದಂಡೆ ಮೇಲೆ 1928 ರ ಕಾಂಗ್ರೆಸ್ಸ್ಅಧಿವೇಶನದಲ್ಲಿ ಜವಾಹರಲಾಲ ನೆಹರೂಹಾರಿಸಿದರು.

ಕೆಂಪು ಕೋಟೆಯ ಮೇಲೆ ಪ್ರತಿ ವರ್ಷ ರಾಷ್ಟ್ರೀಯಧ್ವಜ ಹಾರಿಸುವವರು ಪ್ರಧಾನಮಂತ್ರಿಗಳು.ತ್ರಿ

ವರ್ಣ ಧ್ವಜದ ವಿನ್ಯಾಸಗೊಳಿಸಿದವರು ಪಿಂಗಾಳಿವೆಂಕಯ್ಯ.

ರಾಷ್ಟ್ರ ಧ್ವಜ ಕರ್ನಾಟಕದಲ್ಲಿ ಧಾರವಾಡ ಜಿಲ್ಲೆಯಗರಗ ಗ್ರಾಮದಲ್ಲಿ ತಯಾರಿಸಲಾಗುತ್ತದೆ.

2] ರಾಷ್ಟ್ರೀಯ ಚಿನ್ಹೆ :

ಭಾರತದ ರಾಷ್ಟ್ರೀಯ ಚಿನ್ಹೆಯನ್ನು ಉತ್ತರಪ್ರದೇಶದಲ್ಲಿ ಅಶೋಕನು ಹೊರಡಿಸಿರುವಸಾರನಾಥದ ಸ್ಥಂಭದಿಂದ ಪಡೆಯಲಾಗಿದೆ.ಇದರಲ್ಲಿ ನಾಲ್ಕು ಸಿಂಹಗಳು, ನೆಗೆಯುತ್ತಿರುವ ಕುದುರೆ,ಗೂಳಿ ಮತ್ತು ಆನೆಗಳಿವೆ. ಮಧ್ಯದಲ್ಲಿ ಧರ್ಮಚಕ್ರವಿದೆ.ಭಾರತ ಸರ್ಕಾರವು ಇದನ್ನು 26 ಜನವರಿ 1950 ರಂದುಅಳವಡಿಸಿಕೊಂಡಿತು.ಇದರ ಕೆಳಗೆ ಮಂಡಕೋಪನಿಷತ್ತಿನಿಂದ ಪಡೆದಿರುವಸತ್ಯಮೇವ ಜಯತೇ ಯನ್ನು ದೇವನಾಗರಿ ಲಿಪಿಯಲ್ಲಿಬರೆಯಲಾಗಿದೆ.

3] ‎ರಾಷ್ಟ್ರೀಯ ಹೂವು :

ಭಾರತದ ಪುಷ್ಪ - ಕಮಲದ ಹೂವು.ಕಮಲದ ವೈಜ್ಞಾನಿಕ ಹೆಸರು - ನೆಲುಂಬೊ ನ್ಯುಸಿಫೆರಾ(Nelumbo nucifera)

4] ‎ರಾಷ್ಟ್ರಗೀತೆ :

ಭಾರತದ ರಾಷ್ಟ್ರಗೀತೆ 'ಜನಗಣಮನ".ಮೂಲತಃ ಇದು ಬಂಗಾಳಿ ಭಾಷೆಯಲ್ಲಿದ್ದು ಇದನ್ನುರಚಿಸಿದವರು ರವೀಂದ್ರನಾಥ ಟ್ಯಾಗೋರ್.ಸಂವಿಧಾನ ರಚನಾ ಸಭೆಯು ಹಿಂದಿ ಭಾಷಾಂತರದರಾಷ್ಟ್ರಗೀತೆಯನ್ನು 24 ಜನವರಿ 1950 ರಂದುರಾಷ್ಟ್ರಗೀತೆಯಾಗಿಅಳವಡಿಸಿಕೊಂಡಿತು.ಈ ಗೀತೆಯನ್ನು ಮೊದಲಿಗೆ 1911 ರ ಕಲ್ಕತ್ತಾ ಕಾಂಗ್ರೆಸ್ಅಧಿವೇಶನದಲ್ಲಿ ಹಾಡಲಾಯಿತು.ಭಾರತದ ರಾಷ್ಟ್ರಗೀತೆಯಲ್ಲಿ ಒಟ್ಟು 13 ಸಾಲುಗಳಿವೆ.ರಾಷ್ಟ್ರಗೀತೆಯನ್ನು 48 ಸೆಕೆಂಡುಗಳಿಗೆ ಕಡಿಮೆಇಲ್ಲದಂತೆ ಹಾಗೂ 52 ಸೆಕೆಂಡುಗಳು ಮೀರದಂತೆಹಾಡುವ ನಿಯಮವಿದೆ.

5] ‎ರಾಷ್ಟ್ರೀಯ ಹಾಡು :

ಸಂಸ್ಕ್ರತದಲ್ಲಿರುವ ವಂದೇ ಮಾತರಂ ಈ ಗೀತೆಯನ್ನುಭಾರತದ ಸಂವಿಧಾನ ರಚನಾ ಸಭೆಯು ಜನವರಿ 24,1950 ರಂದು ಅಳವಡಿಸಿಕೊಂಡಿತು.ಈ ಗೀತೆಯನ್ನು ಬಂಕೀಮಚಂದ್ರ ಚಟರ್ಜಿಚಟ್ಟೋಪಾಧ್ಯಾಯರು 1882 ರಲ್ಲಿ ರಚಿಸಿದ'ಆನಂದಮಠ' ಕಾದಂಬರಿಯಿಂದಆಯ್ದುಕ್ಕೊಳ್ಳಲಾಗಿದೆ.ಈ ಗೀತೆಯನ್ನು ಮೊಟ್ಟಮೊದಲಿಗೆ 1896 ರ ಕಲ್ಕತ್ತಾದಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು.ಈ ಗೀತೆಯನ್ನು 1920 ರಲ್ಲಿ ಇಂಗ್ಲೀಷ ಭಾಷೆಗೆಭಾಷಾಂತರಿಸಿದವರು ಶ್ರೀಅರವಿಂದೋ ಘೋಷ್.

6] ರಾಷ್ಟ್ರೀಯ ಪಂಚಾಂಗ:

ರಾಷ್ಟ್ರೀಯ ಪಂಚಾಂಗವು ಶಕ ವರ್ಷವನ್ನು ಆಧರಿಸಿದಗ್ರೇಗೋರಿಯನ್ನ ಪಂಚಾಂಗವನ್ನು ಹೋಲುತ್ತದೆ.ಇದನ್ನು ಮಾರ್ಚ 22, 1957 ರಂದುಅವಡಿಸಿಕ್ಕೊಳಲಾಗಿದೆ.

ಭಾರತದ ರಾಷ್ಟ್ರೀಯ ಪಂಚಾಂಗದ ಪ್ರಕಾರಮೊದಲನೇ ತಿಂಗಳು - ಚೈತ್ರ.ಕೊನೆಯ ತಿಂಗಳು - ಫಾಲ್ಗುಣ.

ರಾಷ್ಟ್ರೀಯ ಪಂಚಾಂಗದ ತಿಂಗಳುಗಳು:ಚೈತ್ರ, ವೈಶಾಖ, ಜೇಷ್ಟ, ಆಷಾಢ, ಶ್ರಾವಣ, ಭಾದ್ರಪದ,ಅಶ್ವಿನ, ಕಾರ್ತಿಕ, ಮೃಗಶಿರ, ಪುಷ್ಯ, ಮಾಘ, ಫಾಲ್ಗುಣ.

7] ರಾಷ್ಟ್ರೀಯ ಕ್ರೀಡೆ :

ಭಾರತದ ರಾಷ್ಟ್ರೀಯ ಕ್ರೀಡೆ - ಹಾಕಿ.ಹಾಕಿ ಕ್ರೀಡೆಯಲ್ಲಿ ಒಂದು ತಂಡದಲ್ಲಿ ಒಟ್ಟು 11ಆಟಗಾರರಿರುತ್ತಾರೆ.

ಭಾರತದ ಹಾಕಿಯ ಮಾಂತ್ರಿಕ - ಧ್ಯಾನಚಂದ್.ಧ್ಯಾನಚಂದರವರ ಹುಟ್ಟು ಹಬ್ಬದ ದಿನವಾದ ಆಗಸ್ಟ್-29 ನ್ನು ಪ್ರತಿವರ್ಷ ಭಾರತದಲ್ಲಿ ರಾಷ್ಟ್ರೀಯಕ್ರೀಡಾ ದಿನವಾಗಿ ಆಚರಿಸುವರು.

ಇಂದಿರಾಗಾಂಧಿ ಗೋಲ್ಡ್ ಕಪ್ ಭಾರತದ ಪ್ರಮುಖಹಾಕಿ ಕ್ರೀಡೆಯ ಟ್ರೋಫಿಯಾಗಿದೆ.

ಅಂತರರಾಷ್ಟ್ರೀಯ ಹಾಕಿ ಪಂದ್ಯವೊಂದರ ಅವಧಿ -70 ನಿಮಿಷಗಳು.

8] ರಾಷ್ಟ್ರೀಯ ನದಿ :

ಭಾರತದ ರಾಷ್ಟ್ರೀಯ ನದಿ - ಗಂಗಾನದಿ.

ನವೆಂಬರ್ 04, 2008 ರಂದು ಗಂಗಾನದಿಯನ್ನುಭಾರತದ ರಾಷ್ಟ್ರೀಯ ನದಿಯನ್ನು ಪ್ರಧಾನಮಂತ್ರಿಗಳುಘೋಷಿಸಿದರು.

ಭಾರತದಲ್ಲಿ ಹರಿಯುವ ನದಿಗಳಲ್ಲಿ ಗಂಗಾ ನದಿ ಅತಿಉದ್ದವಾಗಿದೆ(2510km).

ಗಂಗಾ ನದಿ ಪ್ರಾಧಿಕಾರ ಸಂಸ್ಥೆ ಇರುವುದು ಬಿಹಾರದಪಾಟ್ನಾದಲ್ಲಿ.

9] ರಾಷ್ಟ್ರೀಯ ಜಲಪ್ರಾಣಿ :

ಭಾರತ ಸರ್ಕಾರವು ಅಕ್ಟೋಬರ್ 05, 2009 ರಂದುಗಂಗಾ ನದಿಯ ಡಾಲ್ಫಿನ್ ಭಾರತದ ರಾಷ್ಟ್ರೀಯಜಲಪ್ರಾಣಿ ಎಂದು ಘೋಷಿಸಿದೆ.

ಡಾಲ್ಫಿನದ ವೈಜ್ಞಾನಿಕ ಹೆಸರು - ಪ್ಲಾಂಟಾನಿಷ್ಟಾಗ್ಯಾಂಗ್ಯಾಟಿಕಾ(Platanista gangetica).

10] ರಾಷ್ಟ್ರೀಯ ಪಕ್ಷಿ :

ಭಾರತದ ರಾಷ್ಟ್ರೀಯ ಪಕ್ಷಿ - ನವಿಲು.

ಮಂಡ್ಯ ಜಿಲ್ಲೆ ಆದಿಚುಂಚನಗಿರಿ ಹಾಗೂ ಹಾವೇರಿಜಿಲ್ಲೆಯ ಬಂಕಾಪೂರದಲ್ಲಿ ನವಿಲುವನ್ಯಧಾಮಗಳಿವೆ.

ನವಿಲಿನ ವೈಜ್ಞಾನಿಕ ಹೆಸರು - ಪಾವೋ ಕ್ರಿಸ್ಟಾಟಸ್

Post a Comment

0Comments

Please Select Embedded Mode To show the Comment System.*