- ಬಂಕಿಮಚಂದ್ರ ಚಟರ್ಜಿ ರಚಿಸಿದ ವಂದೇ ಮಾತರಂ ಭಾರತದ ರಾಷ್ಟ್ರೀಯ ಹಾಡು... ೧೯೫೦ರ ಜನವರಿ ೨೪ ರಂದು ಸಂವಿಧಾನ ರಚನಾ ಸಭೆ ಇದನ್ನು ರಾಷ್ಟ್ರೀಯ ಹಾಡನ್ನಾಗಿ ಅಂಗೀಕರಿಸಿತು. ಇದು ರಾಷ್ಟ್ರಗೀತೆಗೆ ಸರಿಸಮನಾದ ಸ್ಥಾನಮಾನ ಹೊಂದಿದೆ. ೧೮೯೬ರಲ್ಲಿ ವಂದೇ ಮಾತರಂ ಹಾಡನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲ ಬಾರಿ ಹಾಡಲಾಗಿತ್ತು. ವಂದೇ ಮಾತರಂ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ದೇಶಭಕ್ತರಿಗೆ ಹೆಚ್ಚಿನ ಸ್ಫೂರ್ತಿಯನ್ನು ತುಂಬಿದ ಹಾಡು..
ಬ್ರಿಟಿಷರಿಂದ ಗಲ್ಲಿಗೇರಿಸಲ್ಪಟ್ಟ ಕ್ರಾಂತಿಕಾರರ ಕೊನೆಯ ಉಸಿರಿನ ಘೋಷಣೆ ವಂದೇ ಮಾತರಂ ಆಗಿರುತ್ತಿತ್ತು.. ವಂದೇ ಮಾತರಂ ಹಾಡನ್ನು ಬಂಕಿಮಚಂದ್ರ ಚಟರ್ಜಿಯವರ " ಆನಂದ ಮಠ " ಕಾದಂಬರಿಯಿಂದ ಆಯ್ದುಕೊಳ್ಳಲಾಗಿದೆ .. ಆನಂದ ಮಠ ಕಾದಂಬರಿ ೧೮೮೨ ರಲ್ಲಿ ಪ್ರಕಟವಾಯಿತು .. ಬಂಕಿಮಚಂದ್ರ ಚಟರ್ಜಿಯವರು ಸಂಸ್ಕೃತದಲ್ಲಿ ವಂದೇ ಮಾತರಂ ಬರೆದಿದ್ದರು .. ಇದನ್ನು ಇಂಗ್ಲಿಷಿಗೆ ಅನುವಾದ ಮಾಡಿದವರು ಶ್ರೀ ಅರವಿಂದೊ.. ವಂದೇ ಮಾತರಂ ಗೀತೆಯ ಮಟ್ಟನ್ನು ರಚಿಸಿದವರುವ ಖ್ಯಾತ ಸಂಗೀತಜ್ಞ ವಿಷ್ಣು ದಿಗಂಬರ ಪಲೂಸ್ಕರ್.. ಇಂದಿಗೂ ಸಮಾರಂಭಗಳ ಪ್ರಾರಂಭದಲ್ಲಿ ವಂದೇ ಮಾತರಂ ಪ್ರಾರ್ಥನೆ ಹಾಡುತ್ತಾರೆ
- ಈ ಗೀತೆಯನ್ನು ಮೊದಲ ಬಾರಿಗೆ 1896 ಕಲ್ಕಕತ್ತದ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು.