ಮಾನವ ದೇಹದ ಜಾಯಿಂಟ್ಗಳ್ಲಲಿ ಅಂದರೆ ಮೊಣಕಾಲು, ಮೊಣಕೈ, ಸೊಂಟ, ಕೈ ಕಾಲು ಬೆರಳುಗಳ್ಳಲ್ಲಿ ಊತ, ಉರಿ, ಬಿಗಿತ,ಏಳುವುದಕ್ಕೆ ಆಗದೆ ನಡೆದರೆ ವಿಪರೀತ ನೋವು ಇದ್ದರೆ ಸಂಧಿವಾತ ಎಂದು ಹೇಳಲಾಗುವುದು…
ಈ ಕಾಯಿಲೆ ಸಾಮಾನ್ಯವಾಗಿ ಚಳಿ ಕಾಲದಲ್ಲಿ ಬರುವುದು. ತಣ್ಣೀರು ಸ್ನಾನ ಮಾಡುವುದು., ಚಳಿಯಲ್ಲಿ ತಿರುಗಾಡುವುದು ಒಂದು ಕಾರಣ..
ಅಜೀರ್ಣವು ಎರಡನೆಯ ಕಾರಣ. ತಿಂದ ಆಹಾರ ಸಕಾಲದಲ್ಲಿ ಜೀರ್ಣವಾಗದೆ ಗ್ಯಾಸ್ ಉತ್ಪಾದನೆ ಆಗಿ ರಕ್ತಪರಿಚಲನೆ ಆಗದೆ ಆಮವಾತ, ಪಾರ್ಶ್ವವಾಯು ಬರುವ ಸಾಧ್ಯತೆ ಹೆಚ್ಚಾಗುವುದು..
ಎಲ್ಲಾ ತರಹದ ವಾತ ರೋಗ ಪೀಡಿತರು ಈ ರೀತಿ ಆಚರಣೆ ಮಾಡಬಹುದು.
- ಬಿಸಿನೀರು ಸ್ನಾನ ಮಾಡಬೇಕು. ನೀರಲ್ಲಿ ಉಪ್ಪು, ನೀರಗುಂಡಿ ಸೊಪ್ಪು ಹಾಕಿ ಕುದಿಸಿ ಈ ನೀರಲ್ಲಿ ಸ್ನಾನ ಮಾಡಿದರೆ ನೋವು ತ್ವರಿತವಾಗಿ ಶಮನವಾಗುವುದು..
- ಬಿಸಿನೀರು, ತಣ್ಣೀರು alternate ಆಗಿ ಶಾಖಾ ಕೊಡಬೇಕು.ಹರಳುಪ್ಪುನೊಂದಿಗೆ fomentation ಮಾಡಬಹುದು..
- ನೋಯುತ್ತಿ ರುವ ಜಾಗದಲ್ಲಿ ಮುಲ್ತಾನಿ ಮಣ್ಣಿನ ಪಟ್ಟಿ ಹಾಕಬೇಕು. ನೂಲು ಬಟ್ಟೆಯಲ್ಲಿ ಮುಲ್ತಾನಿ ಮಣ್ಣಿನ ಪೇಸ್ಟ್ ಹಾಕಿ, ಮಡಿಚಿ,ನೋಯುತಿರುವ ಜಾಗದಲ್ಲಿ ಹಾಕಿ 30 ನಿಮಿಷಗಳ ನಂತರ ತೆಗೆಯಬಹುದು. ದಿನಕ್ಕೆ 2 ಸಲ ಮಾಡಬೇಕು. ಒಂದು ಸಲ ಉಪಯೋಗಿಸಿದ ಮಣ್ಣು ಮತ್ತೆ ಬಳಿ ಸಬಾರದು..
- ಕಾಲುಗಳು ಚಲನೆರಹಿತವಾಗಿದ್ದರೆ :ಹೊಂಗೆ ಮರದ ಬೇರು ತಂದು ಚೆನ್ನಾಗಿ ತೊಳೆದು ಸ್ವಲ್ಪ ನೀರು ಬೆರೆಸಿ ರಸವನ್ನು ತೆಗೆದು, ಸಮತೂಕದ ಹರಳೆಣ್ಣೆ ಬೆರೆಸಿ ಒಲೆಮೇಲಿಟ್ಟು ಕುದಿಸಬೇಕು.ನೀರೆಲ್ಲಾ evaporate ಆಗಿ ಎಣ್ಣೆ ಮಾತ್ರ ಉಳಿದಿರಬೇಕು.. ಈ ತೈಲ ಒಂದು bottle ಅಲ್ಲಿ store ಮಾಡಿ. ಪ್ರಧಿನಿತ್ಯ ಈ ತೈಲ ಕಾಲುಗಳಿಗೆ 40 ದಿನ ಚೆನ್ನಾಗಿ ಮರ್ದನ ಬೇಕು.
2.ಹಸಿರಾಗಿ ಇರುವ ಎಕ್ಕದೆಲೆಗಳು, ಹರಳೆ ಎಳೆಗಳು,ಬಿಳಿ ನೆಕ್ಕಿ (ಸಂಸ್ಕೃತದಲ್ಲಿ ಸಿಂಧುವಾರಪತ್ರ ) ನುಗ್ಗೆ ಸೊಪ್ಪು, ಕರಿಮೆಣಸು, ಹಿಪ್ಪಳಿ, ಎಲ್ಲವೂ ಎಳ್ಳೆಣ್ಣೆಲಿ ಹಾಕಿ ಕುದಿಸಿ, ಸೋಸಿ, ನಂತರ ಕರ್ಪೂರ ಸೇರಿಬೇಕು.
ಸಿಂಧುವಾರಪತ್ರ. ಬಿಳಿನೆಕ್ಕಿ ಸೊಪ್ಪು.
ಈ ಎಣ್ಣೆ ಸ್ವಲ್ಪ ಬಿಸಿ ಮಾಡಿ ಪ್ರತಿದಿನ ಚಲನೆರಹಿತ ಕಾಲಿನಮೇಲೆ ಮರ್ದನ ಮಾಡಿದರೆ, ನೋವು ಶಮನವಾಗಿ ಚೆನ್ನಾಗಿ ನಡೆಯಬಲ್ಲರು.
ಗುಲಗಂಜಿ
ಹಿಪ್ಪಳಿ
4. ಕೆಂಪು ಗುಲಗಂಜಿ 20 ಗ್ರಾಂ ನೀರಿನಲ್ಲಿ ನೆನೆಸಿದ ನಂತರ ಕಾಯಿಸಿ ಕಷಾಯ ಮಾಡಬೇಕು. ಇದರಲ್ಲಿ 40ಗ್ರಾಂ ಎಳ್ಳೆಣ್ಣೆ ಹಾಕಿ ,ಎಣ್ಣೆ ಮಾತ್ರ ಉಳಿವುವಂತೆ ಮತ್ತೊಂದುಸಲ ಕುದಿಸಿ, ಸೋಸಿ ಈ ತೈಲವು ಪ್ರತಿದಿನ ಕೀಲುಗಳಿಗೆ ಮರ್ದನ ಮಾಡಿದರೆ ಎಲ್ಲಾ ತರಹದ ವಾತ ನೋವು, ಉರಿ ನಿವಾರಣೆಯಾಗುವುದು..
5. ಅಮೃತ ಬಳ್ಳಿಯ ರಸದಲ್ಲಿ ಶುಂಠಿ ಪುಡಿ ಸೇರಿಸಿ ಸೇವಿಸಿದರೆ ದೀರ್ಘಕಾಲಿಕ ವಾತರೋಗವು ನಿವಾರಣೆಯಾಗುವುದು..
6. ಕೀಲಿಗಳ ಲ್ಲಿ ನೋವು.
ಹೊಂಗೆ ಬೀಜದ ತೈಲ ಸ್ವಲ್ಪ ಬಿಸಿಮಾಡಿ ನಿಂಬೆ ರಸಬೆರೆಸಿ ಕೀಲುಗಳಮೇಲೆ ಮರ್ದನ ಮಾಡಬೇಕು.
1ಆಲದ ಮರ
ಆಲದ ಎಳೆ ಎಲೆಗಳು ಒಣಗಿಸಿ ಚೂರ್ಣಮಾಡಿ ಎರಡು ಹೊತ್ತು ನೀರಿನೊಂದಿಗೆ ಸ್ವಲ್ಪ ಚೂರ್ಣವು ಸೇವಿಸಿದರೆ ಅದ್ಭುತವಾಗಿ ಕೀಲುಗಳಲ್ಲಿ ನೋವು ಶಮನವಾಗುವುದು..
ಕೀಳುಗಳ ನೋವು.:ನಿವಾರಣೆಯ ಮಾರ್ಗಗಳು:
- ಮೆಂತ್ಯದ ಕಾಳು ಚೆನ್ನಾಗಿ ಹುರಿದು ಪುಡಿಮಾಡಿ ಎರಡು ಹೊತ್ತು 1 ಚಮಚದಷ್ಟು ಪುಡಿ ಜೇನುತುಪ್ಪದೊಂದಿಗೆ ಸೇವಿಸಬೇಕು
- ಅಳಲೆ ಕಾಯಿ ಪುಡಿ 100ಗ್ರಾಂ, ಸೋನಾಮುಖಿ ಪುಡಿ 120ಗ್ರಾಂ, ಹುರಿದ ಶುಂಠಿಪುಡಿ 50ಗ್ರಾಂ, ಕರಿಮೆಣಸಿನ ಪುಡಿ 50ಗ್ರಾಂ, ಮತ್ತು ಸೈನ್ಧವ ಲವಣ 50ಗ್ರಾಂ ಸೇರಿಸಿ ಬಾಟಲಿ ಯಲ್ಲಿ store ಮಾಡಿ.ಊಟಕ್ಕೆ ಮುನ್ನ 3ಗ್ರಾಂ ಅಷ್ಟು ಈ ಚೂರ್ಣವು ಬಿಸಿನೀರಿನೊಂದಿಗೆ ಸೇವಿಸಿದರೆ ಎಲ್ಲಾ ತರಹದ ನೋವು, ಊತ,ಮಲಬದ್ಧತೆ ನಿವಾರಿಸಬಹುದು.
- ನಿಂಬೆ ರಸ, ಬೆಳ್ಳುಳ್ಳಿ ಎಸಳು, ಎಳ್ಳೆಣ್ಣೆ ಸೇರಿಸಿ ಕುದಿಸಿ, ಸೋಸಿ -ಈ ತೈಲವು ಸ್ವಲ್ಪ ಮರ್ದನ ಮಾಡಿದರೆ ನೋವು ಶಮನವಾಗುವುದು
ಆಮವಾತದಿಂದ ಕೀಲು ಊದಿ ನಡೆಯಲಾಗದ ಸಮಸ್ಯೆಗೆ ಪರಿಷ್ಕಾರ :
- ಹರಳೆ ಬೀಜ ಸಿಪ್ಪೆ ಒಡೆದು ಒಳಗಿನ ಬೆಳ್ಳಗಿರುವ ಬೀಜ 100ಗ್ರಾಂ, ಶುಂಠಿ ಪುಡಿ 100ಗ್ರಾಂ ಸೇರಿಸಿ ಕುಟ್ಟಿ ಪೇಸ್ಟ್ ನಂತೆ ಮಾಡಿ ಪ್ರತಿದಿನ ಎರಡು ಹೊತ್ತು 5ಗ್ರಾಂ ಅಷ್ಟು ಉಗುರುಬೆಚ್ಚಗಿನ ನೀರಿನೊಂದಿಗೆ ಸೇವಿಸಿದರೆ ಕ್ರಮೇಣವಾಗಿ ನೋವು ನಿವಾರಣೆಯಾಗುವುದು…
- ಅಂಗಡಿಯಲ್ಲಿ ಸಿಗುವ ಏರಂಡ ತೈಲ, ನೀರಗುಂಡಿ ತೈಲ ಬಳಸಬಹುದು.ಪ್ರತಿದಿನ ಈ ತೈಲವು ಹಚ್ಚಿ ಮರ್ದನ ಮಾಡಿದರೆ ಕಿಲುನೀವು, ಊತ, ಜುಮ್ಮು ನಿವಾರಣೆಯಾಗುವುದು
- .ಸವಿದ ಕೀಲುಗಳಿಗೆ :ಹುಣಿಸೆಬೀಜ ಮನೆಮದ್ದು:
- ಹುಣಿಸೆ ಬೀಜ ಹುರಿದು ಎರಡು ದಿನ ನೀರಿನಲ್ಲಿ ನೆನೆಹಾಕಿ, ನಂತರ ಸಿಪ್ಪೆ ಒಡೆದು ಒಳಗಿನ ಬೀಜ ಚೂರು ಮಾಡಿ ಒಣಗಿಸಬೇಕು.
- ಮತ್ತೊಂದು ಸಲ ಹುರಿದು ಪುಡಿಮಾಡಬೇಕು.ದಿನಕ್ಕೆ ಎರಡು ಸಲ ಅಥವಾ ಮೂರು ಸಲ ಈ ಪುಡಿಯೊಂದಿಗೆ ಕಲ್ಲುಸಕ್ಕರೆ ಸೇರಿಸಿ ಸೇವಿಸಬೇಕು. ಬಳಿಕ ನೀರು ಕುಡಿಯಬೇಕು. ಈ ರೀತಿ ಮಾಡುವುದರಿಂದ ಸವಿದ ಕೀಲುಗಳ್ಳಲ್ಲಿ ತಿರುಗಿ ಮಜ್ಜೆ, ರಸ, ರಕ್ತ ಧಾತುಗಳು ಉತ್ಪಾದನೆಯಾಗಿ ರೋಗ ಪೀಡಿತರು ಚೆನ್ನಾಗಿ ಜಿಗಿದು ಓಡಬಲ್ಲರು…
ಬಹು ಕಂಪವಾತ :
ಹಗಲು ರಾತ್ರಿ ಸದಾ ನೋಯುತ್ತಾ, ನಡುಗುತ್ತಾ ನಡೆಯಲಾರದೆ ಇದ್ದರೆ ಇದು ಬಹುಕಾಂಪವಾತ.
ಹರಳೆ ಗಿಡದ ಬೇರುಗಳು ತಂದು, ತೊಳೆದು ಚೂರು ಮಾಡಿ ಒಣಗಿಸಸಿ ಪುಡಿ ಮಾಡಬೇಕು..
ಈ ಪುಡಿ 40 ದಿನಗಳು ಎರಡು ಹೊತ್ತು ನಿರಿನಿನೊಂದಿಗೆ ಸೇವಿಸಿದರೆ 80 ತರಹದ ವಾತ ವ್ಯಾದಿಗಳು ನಿವಾರಣೆಯಾಗುವವು.