"ಯುವೈ ಸ್ಕುಟಿ" (UY SCUTI) ನಕ್ಷತ್ರದ ಬಗೆಗಿನ ಮಾಹಿತಿಗಳು ಮನಸ್ಸಿಗೆ ಮುದ ಕೊಡುತ್ತವೆಯೋ, ಮನಸ್ಸನ್ನ ತಲ್ಲಣ ಗೊಳಿಸುತ್ತವೆಯೋ ಅಥವಾ ತಲೆಯೊಳಗಿರುವೆ ಬಿಟ್ಟಂತಾಗುತ್ತದೆಯೋ ನನಗೆ ಗೊತ್ತಿಲ್ಲ.
ಆದರದು ನಮ್ಮ ಊಹೆಗಿಂತ ಬಹಳ ದೂರವೇ ಇದೆ ಅನ್ನುವುದಂತೂ ಸತ್ಯ.
ಈ ನಕ್ಷತ್ರದ ಬಗೆಗಿನ ಒಂದು ರಾಶಿ ಮಾಹಿತಿಗಳು ಅಂತರ್ಜಾಲದ ಪುಟದೊಳಗಿವೆ. ಅವುಗಳಲ್ಲಿ ಕೆಲವನ್ನ ತಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಅವುಗಳ ಸತ್ಯಾಸತ್ಯತೆಗಳ ಬಗ್ಗೆ ನನಗರಿವಿಲ್ಲ. ಆದಷ್ಟೂ ನಿಖರವಾದ ಮಾಹಿತಿಯನ್ನೇ ಕೊಟ್ಟಿದ್ದೇನೆಂಬುದು ನನ್ನ ನಂಬಿಕೆ.
ಓದಿ ನೋಡಿ.
- ಈ ನಕ್ಷತ್ರ ಮೊದಲು ಪತ್ತೆಯಾಗಿದ್ದು ೧೮೬೦ ರಲ್ಲಿ, ಜರ್ಮನಿಯ ವಿಜ್ಞಾನಿಗಳು ಇದರ ಮಾಹಿತಿದಾರರು.
- ಆದರೂ ಅದರ ಬಗೆಗಿನ ಸ್ವಲ್ಪ ನಿಖರವಾದ ಮತ್ತು ಹೆಚ್ಚು ಸ್ಪಷ್ಟವಾದ ಮಾಹಿತಿ ದೊರಕಿದ್ದು ೨೦೧೨ ರಿಂದೀಚೆಗೆ.
ನಮ್ಮ ಭೂಮಿ ಮತ್ತು ಸೂರ್ಯನ ನಡುವಿನ ಹೋಲಿಕೆಯನ್ನ ತಲೆಯೊಳಗಿಟ್ಟುಕೊಂಡು ಅದರ ಜೊತೆ "ಯುವೈ ಸ್ಕುಟಿ" ಯನ್ನ ಹೋಲಿಕೆ ಮಾಡಿಕೊಂಡರೆ ಸ್ವಲ್ಪ ಲೆಕ್ಕಾಚಾರ ತಲೆಗಿಳಿದೀತು.
- "ಯುವೈ ಸ್ಕುಟಿ" ಯು ನಾವಂದುಕೊಂಡ ಅತಿ ದೊಡ್ಡ ನಕ್ಷತ್ರ ಸೂರ್ಯನಿಗಿಂತ ಹತ್ತು ಪಟ್ಟು ಭಾರವಾಗಿದೆ.
- ಅದರ ವ್ಯಾಸ ಸೂರ್ಯನ ವ್ಯಾಸಕ್ಕಿಂತ ೧೭೦೦ ಪಟ್ಟು ದೊಡ್ಡದು.
- ಸುತ್ತಲೂ ಅನಿಲಗಳಿಂದಲೇ ತುಂಬಿರುವ ಇದು ಸದಾ ಅಲ್ಲಾಡುತ್ತಲೇ ಇರುವುದರಿಂದ ಅದರ ಗಾತ್ರ ವ್ಯತ್ಯಾಸವಾಗುತ್ತಲೇ ಇರುತ್ತದೆ.
- ಅದರ ವ್ಯಾಸವನ್ನ ಕಿಲೋಮಿಟರ್ ನಲ್ಲಿ ಹೇಳುವುದಾದರೆ ಅದು ಎರಡು ನೂರು ಕೋಟಿ ಕಿ.ಮಿ. ಗಿಂತ ಹೆಚ್ಚು!
- ಭೂಮಿಯ ವ್ಯಾಸ ೧೨೭೫೦ ಕಿ.ಮಿ.
- ಸೂರ್ಯನ ವ್ಯಾಸ ೧೪ ಲಕ್ಷ ಕಿ.ಮಿ.
- ಈ ರಾಕ್ಷಸ ಗಾತ್ರದ ನಕ್ಷತ್ರ "ಯುವೈ ಸ್ಕುಟಿ" ಯೊಳಗೆ ನಮ್ಮ ೩೭೦ ಕೋಟಿ ಸೂರ್ಯರನ್ನ ತುಂಬಬಹುದು.
- ಸೂರ್ಯನಲ್ಲಿ ಹತ್ತುಲಕ್ಷ ಭೂಮಿಯನ್ನ ತುಂಬಬಹುದು.
- ಬೆಳಕಿನ ವೇಗದಲ್ಲಿ ಇದರ ಸುತ್ತ ಒಂದು ಬಾರಿ ಸುತ್ತಲು ಏಳು ಗಂಟೆ ಬೇಕು.
- ಅದೇ ವೇಗದಲ್ಲಿ ಸೂರ್ಯನನ್ನ ಸುತ್ತಲು ಕೇವಲ ೧೪.೫ ಸೆಕೆಂಡ್ ಸಾಕು! ಅದರ ಸುತ್ತಳತೆಯ ಅರಿವು ಆಯಿತಲ್ಲ!
- ಬೆಳಕಿನ ಚೇಗ ಸೆಕೆಂಡಿಗೆ ೩ ಲಕ್ಷ ಕಿ.ಮಿ.
- ಸಾಮಾನ್ಯ ವೇಗದ ವಿಮಾನದಲ್ಲಿ "ಯುವೈ ಸ್ಕುಟಿ" ಯನ್ನ ಸುತ್ತಲು ಸುಮಾರು ೧೦೮೬ ವರ್ಷಗಳು ಬೇಕಾಗಬಹುದು!
- ಸೂರ್ಯನನ್ನ ಸುತ್ತಲು ಅದೇ ವಿಮಾನ ಸುಮಾರು ೨೦೫ ದಿನಗಳನ್ನ ತೆಗೆದುಕೊಳ್ಳುತ್ತದೆ.
- ಅದೇ ವೇಗದ ವಿಮಾನದಲ್ಲಿ ಭೂಮಿಯನ್ನ ಸುತ್ತಲು ಸುಮಾರು ಎರಡು ದಿನ ಬೇಕು.
ಒಂದುವೇಳೆ ನಡೆದುಕೊಂಡು ಸುತ್ತುವ ಆಸೆಯಿದ್ದರೆ,
- ಯುವೈ ಸ್ಕುಟಿ ಯನ್ನ ಒಂದು ಬಾರಿ ಸುತ್ತಲು ೩೨೦೦೦೦(೩.೨ಲಕ್ಷ) ವರ್ಷಗಳು ಬೇಕು.
- ಭೂಮಿಯಯನ್ನ ಸುತ್ತಲು ೧.೫ ವರ್ಷ ಬೇಕು.
- ಸೂರ್ಯನನ್ನ ಸುತ್ತಲು ೧೫೪ ವರ್ಷ ಬೇಕು.
ಯುವೈ ಸ್ಕುಟಿಯನ್ನ ತಲುಪಲು ಬೇಕಾಗುವ ಸಮಯ ಎಷ್ಟು?
- ಭೂಮಿಯಿಂದ ಸೂರ್ಯನ ದೂರ ಸುಮಾರು ೧೫ ಕೋಟಿ ಕಿ.ಮಿ. ಅಥವಾ, ಅದನ್ನ ೮ ಜ್ಯೋತಿರ್ನಿಮಿಷ ಅನ್ನಬಹುದು.
- ಅದೇ ಯುವೈ ಸ್ಕುಟಿಯ ದೂರ ೫.೨೧ ಜ್ಯೋತಿರ್ವರ್ಷ ಕಿ.ಮಿ. ಅಂದರೆ ೫೦ ಟ್ರಿಲ್ಲಿಯನ್ ಕಿ.ಮಿ ಗಿಂತ ಹೆಚ್ಚು.
- ಬೆಳಕು ಪ್ರತಿ ಸೆಕೆಂಡಿಗೆ ಮೂರು ಲಕ್ಷ ಕಿ.ಮಿ ಚಲಿಸುತ್ತದೆ. ಅದೇ ಬೆಳಕು ಒಂದು ವರ್ಷದಲ್ಲಿ ಚಲಿಸುವ ದೂರವನ್ನ ಒಂದು ಜ್ಯೋತಿರ್ವರ್ಷ ಅನ್ನುತ್ತಾರೆ.
- ಅದರ ಅತಿಯಾದ ಹೊಳಪು ಮತ್ತು ಶಾಖದ ಪ್ರಖರತೆಗೆ ಅದರ ಸುತ್ತಲೂ ಯಾವುದೇ ಗ್ರಹಗಳಿಗೂ ಉಳಿಗಾಲವಿಲ್ಲ.
- ನಮ್ಮ ಸೌರಮಂಡಲದಂತೆ ಅದು ಇಲ್ಲ. ಅದು ಅಲ್ಲಿಯ ಏಕಮೇವ ಚಕ್ರಾಧಿಪತಿ.