Showing posts with label Bangalore. Show all posts
Showing posts with label Bangalore. Show all posts

Tuesday, February 18, 2025

ಬೆಂಗಳೂರನ್ನೇ ಕರ್ನಾಟಕದ ರಾಜಧಾನಿಯನ್ನಾಗಿ ಮಾಡಲು ಕಾರಣಗಳು ಯಾವುವು?

 


ಮೈಸೂರು ರಾಜರ ಆಳ್ವಿಕೆಯಲ್ಲಿದ್ದಾಗಲೂ, ಮೈಸೂರು ಆಡಳಿತ ಮತ್ತು ಸಾಂಸ್ಕೃತಿಕ ರಾಜಧಾನಿಯಾಗಿತ್ತು.

  1. ಮೈಸೂರು ರಾಜರು ಬೆಂಗಳೂರಿನಲ್ಲಿ ಉದ್ಯಮವನ್ನು ಅಭಿವೃದ್ಧಿಪಡಿಸಿದರು.
  2. ಅವರು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ನಿರ್ಮಿಸಿದರು.
  3. ಅವರು ಮಾರುಕಟ್ಟೆಗಳು, ಆಸ್ಪತ್ರೆಗಳು, ಉತ್ತಮವಾದ ಬಡಾವಣೆಗಳನ್ನು (ಮಲ್ಲೇಶ್ವರ, ಬಸವನಗುಡಿ, ಚಾಮರಾಜಪೇಟೆ, ಇತ್ಯಾದಿ) ನಿರ್ಮಿಸಿದರು.
  4. ಕೃಷಿ ವಿಜ್ಞಾನ ವಿಶ್ವವಿದ್ಯಾಲಯವನ್ನು ನಿರ್ಮಿಸಿದರು. (UAS )
  5. ಭಾರತೀಯ ವಿಜ್ಞಾನ ಸಂಸ್ಥೆ (IISC ) ಯನ್ನು ನಿರ್ಮಿಸಿದರು.
  6. ರಸ್ತೆಗಳು ಮತ್ತು ರೈಲ್ವೆಗಳನ್ನು ಅಭಿವೃದ್ಧಿಪಡಿಸಲಾಯಿತು.
  7. ಭಾರತದಲ್ಲಿ ವಿದ್ಯುತ್ ಪಡೆದ ಮೊದಲ ನಗರ ಬೆಂಗಳೂರು.
  8. ಟಿಪ್ಪು ಸುಲ್ತಾನ್ರ ಮರಣದ ನಂತರ, ಕಂಟೋನ್ಮೆಂಟ್ ಪ್ರದೇಶ ಎಂದು ಕರೆಯಲ್ಪಡುವ ಬೆಂಗಳೂರಿನ ಭಾಗವು ಬ್ರಿಟಿಷ್ ನಿಯಂತ್ರಣಕ್ಕೆ ಬಂದಿತು.
  9. ಬ್ರಿಟಿಷರು ಈ ಪ್ರದೇಶವನ್ನು ಇಷ್ಟಪಟ್ಟರು ಮತ್ತು ಅಭಿವೃದ್ಧಿಪಡಿಸಿದರು, ಅವರು ಕಾನ್ವೆಂಟ್‌ಗಳು, ಚರ್ಚುಗಳು, ಮಿಲಿಟರಿ ಶಾಲೆಗಳು, ಆಸ್ಪತ್ರೆ ಮತ್ತು ಮುಂತಾದವುಗಳನ್ನು ನಿರ್ಮಿಸಿದರು.
  10. ಸ್ವಾತಂತ್ರ್ಯದ ನಂತರ, ಭಾರತ ಸರ್ಕಾರವು ಕಂಟೋನ್ಮೆಂಟ್ ಪ್ರದೇಶವನ್ನು ರಕ್ಷಣಾ ಮತ್ತು ಸೈನ್ಯಕ್ಕಾಗಿ ಬಳಸಿಕೊಂಡಿತು.
  11. ಭಾರತ ಸರ್ಕಾರವು ಎಚ್‌ಎಎಲ್, ಎನ್‌ಎಎಲ್, ಡಿಆರ್‌ಡಿಒ, ಮುಂತಾದ ಕಂಪನಿಗಳನ್ನು ನಿರ್ಮಿಸಿದೆ.
  12. ಬೆಂಗಳೂರು 3000 ಅಡಿಎತ್ತರದಲ್ಲಿದೆ ಮತ್ತು ಅದ್ಭುತ, ತಂಪಾದ ವಾತಾವರಣವನ್ನು ಹೊಂದಿದೆ. ಇಲ್ಲಿ ಸಾಕಷ್ಟು ಮರಗಳು ಮತ್ತು ಗಿಡಗಳಿವೆ.
  13. ಕೆಆರ್ಎಸ್ ಅಣೆಕಟ್ಟು ನಗರಕ್ಕೆ ಕಾವೇರಿ ಕುಡಿಯುವ ನೀರನ್ನು ಪೂರೈಸುತ್ತದೆ.

ಆದ್ದರಿಂದ, ಕರ್ನಾಟಕ ರಾಜ್ಯ ರಚನೆಯಾದ ನಂತರ ಬೆಂಗಳೂರು ರಾಜಧಾನಿಯಾಗಿ ಆಯ್ಕೆಯಾಯಿತು.

ದಾವಣಗೆರೆಯನ್ನು ಮೂಲತಃ ರಾಜಧಾನಿಯಾಗಿ ಆಯ್ಕೆ ಮಾಡಲಾಗಿತ್ತು, ಇದು ಕರ್ನಾಟಕದ ಹೃದಯಭಾಗದಲ್ಲಿದೆ.

ಆದರೆ, ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ಬೆಂಗಳೂರಿನಲ್ಲಿ ವಿಧಾನ ಸೌಧ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದರು.

ನಿರ್ಮಾಣವು 1956 ರಲ್ಲಿ ಪೂರ್ಣಗೊಂಡಿತು ಮತ್ತು ಬಳಕೆಗೆ ತೆರೆಯಲ್ಪಟ್ಟಿತು.

ಆದ್ದರಿಂದ, ಏಕೀಕೃತ ಕರ್ನಾಟಕದ ರಾಜಧಾನಿಯಾಗಿ ಬೆಂಗಳೂರನ್ನು ಆಯ್ಕೆ ಮಾಡಲಾಯಿತು.

Saturday, January 25, 2025

ಬೆಂಗಳೂರಿನ ಕಡಲೆಕಾಯಿ ಪರಿಷೆಯ ಇತಿಹಾಸ ಏನು?

 ಕಡಲೆಕಾಯಿ ಪರಿಷೆ ಬೆಂಗಳೂರಿನ ಪಾರಂಪರಿಕ ಹಬ್ಬ ಮತ್ತು ಜಾತ್ರೆ, ಇದು ಈ ಊರಿನ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಉತ್ಸವ ಎಂದರೆ ತಪ್ಪಾಗಲಾರದು.

ಇದು ನಡೆಯುವುದು ಬೆಂಗಳೂರಿನ ಬಸವನಗುಡಿಯಲ್ಲಿ. ದೊಡ್ಡ ಗಣೇಶ ಮತ್ತು ಬಸವನ ದೇವಸ್ಥಾನದ ಮುಂದೆ ಇರುವ ರಸ್ತೆಯಲ್ಲಿ ಇದನ್ನು ಮಾಡಲಾಗುತ್ತದೆ. ಪ್ರತಿ ವರ್ಷ ಕಾರ್ತಿಕ ಮಾಸದ ಕಡೆಯ ಸೋಮವಾರದಂದು ಪರಿಷೆ ನಡೆಯುತ್ತೆ, ಇಡೀ ವಾರ ಹಬ್ಬದ ವಾತಾವರಣ.

ಎಲ್ಲೆಲ್ಲೂ ಕಡಲೆಕಾಯಿಯ ರಾಶಿ, ಬತ್ತಾಸು, ಕಡಲೆಪುರಿ, ಇನ್ನಿತಿರ ತಿಂಡಿ ತಿನಿಸುಗಳ ಮಾರಾಟ. ದೂರ ಊರುಗಳಿಂದ ರೈತರು ಇಲ್ಲಿಗೆ ಬಂದು ತಾವು ಬೆಳೆದ ಬೆಳೆಯನ್ನು ದೇವರಿಗೆ, ಅಂದರೆ ಗಣಪತಿಗೆ ಮತ್ತು ಬಸವನಿಗೆ ಅರ್ಪಿಸಿ ಅದನ್ನು ಮಾರುತ್ತಾರೆ.

ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ, ಚಿಕ್ಕಬಳ್ಳಾಪುರ, ಮಾಗಡಿ, ಮಂಡ್ಯ, ಮೈಸೂರು, ತುಮಕೂರು, ಕುಣಿಗಲ್ ಹೀಗೆ ನಾನಾ ಭಾಗಗಳಿಂದ ಕಾಯಿಗಳನ್ನು ಹೊತ್ತು ರೈತರು ತರುತ್ತಾರೆ. ಅಷ್ಟೇ ಅಲ್ಲದೆ, ನೆರೆಯ ಆಂಧ್ರಪ್ರದೇಶ, ತಮಿಳುನಾಡಿನ ರೈತರು ಹಾಗೂ ವ್ಯಾಪಾರಿಗಳು ಕೂಡ ಪರಿಷೆಯಲ್ಲಿ ಭಾಗವಹಿಸುತ್ತಾರೆ. ಹೊರಗಿನ ಮಾರುಕಟ್ಟೆಗೆ ಹೋಲಿಸಿದರೆ ಕಡಲೆಕಾಯಿ ಪರಿಷೆಯಲ್ಲಿ ಮಾರಾಟವಾಗುವ ಕಡಲೆಕಾಯಿಗೆ ಬೆಲೆ ತುಸು ಹೆಚ್ಚಾಗಿಯೇ ಇರುತ್ತದೆ. ಆದರೆ ಇದು ನಮ್ಮ ಸಂಸ್ಕೃತಿಯ ಭಾಗವಾಗಿರುವುದರಿಂದ ಬಂದಿರುವ ಭಕ್ತರು ಕನಿಷ್ಠ ಒಂದು ಸೇರು ಕಡಲೆಕಾಯಿಯನ್ನಾದರೂ ಖರೀದಿಸಿ ಮನೆಗೆ ಒಯ್ಯುತ್ತಾರೆ. ಇದರಿಂದ ರೈತರಿಗೆ ಉತ್ತಮ ವ್ಯಾಪಾರಕ್ಕೆ ಮಾರುಕಟ್ಟೆ ದೊರೆಯುತ್ತದೆ.

ರಾಮಕೃಷ್ಣ ಆಶ್ರಮ ಸರ್ಕಲ್‌ನಿಂದ ಬಿಎಂಎಸ್ ಕಾಲೇಜುವರೆಗೂ ಕಡಲೆಕಾಯಿ, ಕಳ್ಳೆಪುರಿ, ತಿಂಡಿ-ತಿನಿಸು, ಆಟಿಕೆ ಸಾಮಾನುಗಳು, ಗೃಹಾಲಂಕಾರ ವಸ್ತುಗಳು, ಬಲೂನ್ ಅಂಗಡಿಗಳು ಇರುತ್ತವೆ.

ಹಸಿ ಕಡಲೆಕಾಯಿ, ಹುರಿದ, ಬೇಯಿಸಿದ ಕಡಲೆಕಾಯಿ, ಖಾರ- ಮಂಡಕ್ಕಿ, ಬಾಂಬೆ ಮಿಠಾಯಿ ತಿನಿಸುಗಳು ರಸ್ತೆ ತುಂಬಾ ಸಿಗುತ್ತವೆ. ಕೊಲಂಬಸ್, ಜಯಂಟ್ ವ್ಹೀಲ್, ಮಕ್ಕಳಿಗಾಗಿ ಜೋಕಾಲಿ, ಪುಟಾಣಿ ರೈಲು ಮನರಂಜನೆ ನೀಡುತ್ತವೆ. ಬೆಂಗಳೂರಿನ ಹೃದಯ ಭಾಗದಲ್ಲಿ ಹಳ್ಳಿ ಸೊಗಡು ತಲೆ ಎತ್ತಿದ ಹಾಗೆ ಕಾಣುತ್ತದೆ.

ಪೌರಾಣಿಕ ಹಿನ್ನೆಲೆ

ಬೆಂಗಳೂರಿನ ಬಸವನಗುಡಿ ಬಡಾವಣೆಗೆ ಹಿಂದೆ ಸುಂಕೇನಹಳ್ಳಿ ಎಂಬ ಹೆಸರಿತ್ತು. ಇದರ ಸುತ್ತಮುತ್ತ ಹೊಸಕೆರೆ ಹಳ್ಳಿ, ಗುಟ್ಟಹಳ್ಳಿ, ಮಾವಳ್ಳಿ, ದಾಸರಹಳ್ಳಿ, ಮೊದಲಾದ ಹಳ್ಳಿಗಳಿದ್ದವು. ಈ ಎಲ್ಲ ಪ್ರದೇಶಗಳಲ್ಲೂ ಕಡಲೆಕಾಯಿ ಬೆಳೆಯುತ್ತಿದ್ದರು. ಪ್ರತಿ ಪೂರ್ಣಿಮೆಯಂದು ಬಸವ ಬಂದು ರೈತರು ಕಷ್ಟಪಟ್ಟು ಬೆಳೆಸಿದ ಕಡಲೆಕಾಯಿಯನ್ನು ತಿಂದುಕೊಂಡು ಹೋಗುತ್ತಿತ್ತು. ಒಂದು ದಿನ ಕಾವಲಿದ್ದ ರೈತರು ಈ ಬಸವನನ್ನು ಹಿಡಿಯಲು ಪ್ರಯತ್ನ ಪಟ್ಟರು. ಆ ಬಸವ ಬಹಳ ವೇಗವಾಗಿ ಓಡಿ ಒಂದು ಗುಡ್ಡ ಏರಿ ಮಾಯವಾಯಿತು. ಹಿಂಬಾಲಿಸಿ ಬಂದ ರೈತರು ಈ ಬಸವ ಗುಡ್ಡದಲ್ಲಿ ಮಾಯವಾದದ್ದನ್ನು ಕಂಡರು. ಅವರು ಈ ಬಸವ ಆ ಗುಡ್ಡದಲ್ಲಿ ಕಲ್ಲಾಗಿ ನಿಂತಿದ್ದನ್ನು ಕಂಡು ಆಶ್ಚರ್ಯ ಪಟ್ಟರು. ಅಷ್ಟೇ ಅಲ್ಲ ಆ ಕಲ್ಲಿನ ಬಸವ ಬೃಹದಾಕಾರವಾಗಿ ಬೆಳೆದ. ಇದೇ ಕಲ್ಲಿನ ಬಸವ ಈಗ ಇಲ್ಲಿರುವ ದೊಡ್ಡ ಬಸವಣ್ಣ. ಅಸ್ತ್ರಗಳೊಡನೆ ಬಂದಿದ್ದ ಜನ, ಈ ಕಲ್ಲು ಬಸವನನ್ನು ನೋಡಿ ದಂಗಾದರು. ಈಶ್ವರನ ವಾಹನವಾದ ನಂದಿಯೇ ಆ ಬಸವನೆಂದು ತಿಳಿದು ಭಕ್ತಿಯಿಂದ ಅಡ್ಡ ಬಿದ್ದರು. ಈಶ್ವರನೇ ತಮ್ಮ ರಕ್ಷಣೆಗೆ ತನ್ನ ವಾಹನವನ್ನು ಕಳಿಸಿದ್ದಾನೆಂದು ತಿಳಿದರು. ಅವನನ್ನು ಪೂಜಿಸಲು ಪ್ರಾರಂಭಿಸಿದರು. ಬಸವನಿಗೆ ಪ್ರಿಯವಾದ ಕಡಲೆಕಾಯಿಯನ್ನು ತಿನ್ನುತ್ತಿದ್ದನೆಂದು ತಿಳಿದು, ಅದನ್ನು ತಪ್ಪಿಸಿದಕ್ಕಾಗಿ ಪಶ್ಚಾತ್ತಾಪ ಪಟ್ಟರು. ಅದಕ್ಕಾಗಿ ಸುಂಕ ಕಟ್ಟಲು ಪ್ರಾರಂಭಿಸಿದರು. ತಾವು ಬೆಳೆಯುವ ಕಡಲೇಕಾಯಿ ಬೆಳೆಗೆ ಅವನೇ ಕಾವಲುಗಾರನೆಂದು ಆತನಿಗೆ ಎಲ್ಲ ಜವಾಬ್ದಾರಿ ವಹಿಸಿದರು. ಅಲ್ಲಿ ಅವನಿಗೆ ಒಂದು ಚಿಕ್ಕ ದೇವಸ್ಥಾನ ಕಟ್ಟಿಸಿದರು. ನಂತರ ಬೆಂಗಳೂರಿನ ನಿರ್ಮಾತರಾದ ಕೆಂಪೇಗೌಡರು ದಕ್ಷಿಣ ಶೈಲಿಯಲ್ಲಿರುವ ಈಗಿನ ದೇವಸ್ಥಾನ ಕಟ್ಟಿಸಿದರು. ಅದಕ್ಕಾಗಿ ಪ್ರತಿ ವರ್ಷ ಕಾರ್ತಿಕಮಾಸದ ಕಡೇ ಸೋಮವಾರ ತಾವು ಬೆಳೆದ ಕಡಲೇಕಾಯಿಯನ್ನು ಇಲ್ಲಿ ರಾಶಿ ಹಾಕುತ್ತಾರೆ ಮತ್ತು ಬಸವಣ್ಣನನ್ನು ಮನಸೋಯಿಚ್ಛೆ ತಿನ್ನೆಂದು ಪ್ರಾರ್ಥಿಸುತ್ತಾರೆ. ಈ ಸಂಪ್ರದಾಯ ಬಹಳ ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಅಂದು ಅಲ್ಲಿಗೆ ಬರುವ ಭಕ್ತರು ಸಹ ಕಡಲೆಕಾಯಿಯನ್ನು ಕೊಂಡು ಬಸವಣ್ಣನಿಗೆ ಅರ್ಪಿಸುತ್ತಾರೆ. ಆಗ ಕಲ್ಲಾದ ಬಸವ ಬೆಳೆಯುತ್ತಲೇ ಹೋದ. ಆತ ಇನ್ನು ಬೆಳೆದರೆ ಪೂಜಿಸಲು ಆಗುವುದಿಲ್ಲವೆಂದು ಆತನ ತಲೆಮೇಲೆ ದೊಡ್ಡ ಮೊಳೆ ಹೊಡೆದಿದ್ದಾರೆ. ಅಂದಿನಿಂದ ಅವನ ಬೆಳವಣಿಗೆ ನಿಂತಿದೆ. ಆ ಮೊಳೆ ತ್ರಿಶೂಲದ ರೂಪದಲ್ಲಿ ಇದೆ

Thursday, December 26, 2024

ಬೆಂಗಳೂರು-ಮೈಸೂರು ಮಾರ್ಗದ ರೈಲುಗಳ ಸಂಪೂರ್ಣ ಮಾಹಿತಿ

ಭಾರತೀಯ ರೈಲ್ವೆಯು ಸಾರಿಗೆ ವಿಭಾಗಗಳಲ್ಲಿ ಅತ್ಯಂತ ದೊಡ್ಡ ಸಾರಿಗೆಯಾಗಿದೆ. ರೈಲುಗಳಲ್ಲಿ ಪ್ರತಿನಿತ್ಯವೂ ಕೊಟ್ಯಂತರ ಪ್ರಯಾಣಿಕರು ಒಂದೆಡೆಯಿಂದ ಮತ್ತೊಂದೆಡೆಗೆ ಪ್ರಯಾಣಿಸುತ್ತಾರೆ. ಸುರಕ್ಷತೆ ಮತ್ತು ಟಿಕೆಟ್‌ ದರಗಳು ಕಡಿಮೆ ಇರುವ ಹಿನ್ನೆಲೆ ಈ ಸಾರಿಗೆಯಲ್ಲಿ ಹೆಚ್ಚಿನ ಜನರು ಪ್ರಯಾಣ ಮಾಡಲು ಬಯಸುತ್ತಾರೆ. ಹಾಗಾದರೆ ಬೆಂಗಳೂರು-ಮೈಸೂರು ನಡುವೆ ಯಾವೆಲ್ಲ ರೈಲುಗಳು ಸಂಚಾರ ಮಾಡುತ್ತವೆ ಹಾಗೂ ಸಮಯಗಳ ವಿವರನ್ನು ಇಲ್ಲಿ ನೀಡಲಾಗಿದೆ ಗಮನಿಸಿ.


ಬೆಂಗಳೂರು-ಮೈಸೂರು ಮಾರ್ಗದಲ್ಲಿ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ವಿವಿಧ ರೀತಿಯ ರೈಲುಗಳ ಸೇವೆಯನ್ನು ನೀಡಲಾಗಿದೆ. ಈ ಮಾರ್ಗದಲ್ಲಿ ಒಟ್ಟು 20 ರೈಲುಗಳು ಕಾರ್ಯನಿರ್ವಹಿಸುತ್ತವೆ. ಅಲ್ಲದೆ ಪ್ರಯಾಣಿಕರ ಬೇಡಿಕೆ ಮೇರೆಗೆ ಆಗಾಗ ವಿಶೇಷ ರೈಲುಗಳನ್ನು ಸಹ ಬಿಡುತ್ತಲೇ ಇರುತ್ತದೆ. ಇನ್ನು ಈ ಮಾರ್ಗದ 20 ರೈಲುಗಳಲ್ಲಿ ಹೆಚ್ಚಿನವು ಎಕ್ಸ್‌ಪ್ರೆಸ್ ರೈಲುಗಳಾಗಿವೆ

ಇವುಗಳಲ್ಲಿ ಈ ಮಾರ್ಗದಲ್ಲಿ 10 ರೈಲುಗಳು ವಿಶ್ವಾಸಾರ್ಹ ಮತ್ತು ಆರಾಮದಾಯಕ ಪ್ರಯಾಣವನ್ನು ಒದಗಿಸುತ್ತವೆ. 5 ಸೂಪರ್‌ಫಾಸ್ಟ್ ರೈಲುಗಳಿವೆ. 2 ಮೆಮು ರೈಲುಗಳಿದ್ದು, ಇವು ಕಡಿಮೆ ದೂರ ಪ್ರಯಾಣಕ್ಕೆ ಸೂಕ್ತವಾಗಿದೆ. ಇನ್ನು 1 ಶತಾಬ್ದಿ ರೈಲು ಸೇವೆ ನೀಡುತ್ತಿದ್ದು, ಇದು ಅತ್ಯಂತ ವೇಗದ ರೈಲಾಗಿದೆ. ಹಾಗೆಯೇ 2 ವಂದೇ ಭಾರತ್ ಐಸ್ಪೀಡ್‌ ರೈಲುಗಳು ಸಂಚರಿಸುತ್ತವೆ.

ಬೆಂಗಳೂರು-ಮೈಸೂರು ರೈಲುಗಳ ವಿವರ
1. ರೈಲು ನಂಬರ್ 16218 ಸಾಯಿನಗರ ಶಿರಡಿ-ಮೈಸೂರು ಎಕ್ಸ್‌ಪ್ರೆಸ್‌ ಪ್ರತಿದಿನ ಬೆಂಗಳೂರಿನಿಂದ ರಾತ್ರಿ 12:55ಕ್ಕೆ ಹೊರಟು ಮೈಸೂರನ್ನು ಬೆಳಗ್ಗೆ 03:20ಕ್ ತಲುಪಲಿದೆ.

2. ರೈಲು ನಂಬರ್ 16021 ಕಾವೇರಿ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 04 ಗಂಟೆಗೆ ಹೊರಟು ಮೈಸೂರನ್ನು 6:55ಕ್ಕೆ ತಲುಪಲಿದೆ.

3. ರೈಲು ನಂಬರ್ 16220 ತಿರುಪತಿ - ಚಾಮರಾಜನಗರ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 04:30ಕ್ಕೆ ಹೊರಟು ಮೈಸೂರನ್ನು 7:25ಕ್ಕೆ ತಲುಪಲಿದೆ.

4. ರೈಲು ನಂಬರ್ 16228 ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 05:05ಕ್ಕೆ ಹೊರಟು ಮೈಸೂರನ್ನು 8:20ಕ್ಕೆ ತಲುಪಲಿದೆ.

4. ರೈಲು ನಂಬರ್ 16228 ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 05:05ಕ್ಕೆ ಹೊರಟು ಮೈಸೂರನ್ನು 8:20ಕ್ಕೆ ತಲುಪಲಿದೆ.

ಈ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ ರೈಲಿಗೆ ಚಿಕ್ಕಬಾಣಾವರ ರೈಲ್ವೆ ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆಗೆ ಅವಕಾಶ
ಈ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ ರೈಲಿಗೆ ಚಿಕ್ಕಬಾಣಾವರ ರೈಲ್ವೆ ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆಗೆ ಅವಕಾಶ.

5. ರೈಲು ನಂಬರ್ 22682 ಚೆನ್ನೈ ಸೆಂಟ್ರಲ್ - ಮೈಸೂರು ಸೂಪರ್ ಫಾಸ್ಟ್‌ ಎಕ್ಸ್‌ಪ್ರೆಸ್ ವಾರಕ್ಕೆ ಒಮ್ಮೆ ಅಂದರೆ ಶುಕ್ರವಾರ ಬೆಂಗಳೂರಿನಿಂದ ಬೆಳಗ್ಗೆ 05:25ಕ್ಕೆ ಹೊರಟು ಮೈಸೂರನ್ನು 8:35ಕ್ಕೆ ತಲುಪುತ್ತದೆ.

6. ರೈಲು ನಂಬರ್ 16231 ಮೈಲಾಡುತುರೈ - ಮೈಸೂರು ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 04:45ಕ್ಕೆ ಹೊರಟು ಮೈಸೂರನ್ನು 8:00 ಗಂಟೆಗೆ ತಲುಪುತ್ತದೆ.

7. ರೈಲು ನಂಬರ್ 16591 ಹಂಪಿ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 06ಕ್ಕೆ ಹೊರಟು ಮೈಸೂರನ್ನು 9 ಗಂಟೆಗೆ ತಲುಪುತ್ತದೆ.

8. ರೈಲು ನಂಬರ್ 12785 ಕಾಚೇಗೌಡ - ಮೈಸೂರು ಸೂಪರ್ ಫಾಸ್ಟ್‌ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 06:35ಕ್ಕೆ ಹೊರಟು ಮೈಸೂರನ್ನು 9:55 ಗಂಟೆಗೆ ತಲುಪುತ್ತದೆ.

9. ರೈಲು ನಂಬರ್ 16235 ಟುಟಿಕೋರಿನ್ - ಮೈಸೂರು ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 07:15ಕ್ಕೆ ಹೊರಟು ಮೈಸೂರನ್ನು 10:45 ಗಂಟೆಗೆ ತಲುಪುತ್ತದೆ.

10. ರೈಲು ನಂಬರ್ 16536 ಗೋಲ್‌ಗುಂಬಜ್ ಎಕ್ಸ್‌ಪ್ರೆಸ್‌ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 08:00ಕ್ಕೆ ಹೊರಟು ಮೈಸೂರನ್ನು 11:15 ಗಂಟೆಗೆ ತಲುಪುತ್ತದೆ.

11. ರೈಲು ನಂಬರ್ 17308 ಬಸವ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 08:20ಕ್ಕೆ ಹೊರಟು ಮೈಸೂರನ್ನು 11:40 ಗಂಟೆಗೆ ತಲುಪುತ್ತದೆ.

12. ರೈಲು ನಂಬರ್ 16316 ಕೊಚುವೇಲಿ - ಮೈಸೂರು ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 08:35ಕ್ಕೆ ಹೊರಟು ಮೈಸೂರನ್ನು ಮಧ್ಯಾಹ್ನ 12 ಗಂಟೆಗೆ ತಲುಪುತ್ತದೆ.

13. ರೈಲು ನಂಬರ್ 20607 ಎಂಜಿಆರ್ ಚೆನ್ನೈ ಸೆಂಟ್ರಲ್ - ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಭಾನುವಾರ, ಸೋಮವಾರ, ಮಂಗಳವಾರ, ಗುರುವಾರ, ಶುಕ್ರವಾರ, ಶನಿವಾರ ಬೆಂಗಳೂರಿನಿಂದ ಬೆಳಗ್ಗೆ 10:15ಕ್ಕೆ ಹೊರಟು ಮೈಸೂರನ್ನು ಮಧ್ಯಾಹ್ನ 12:20 ಗಂಟೆಗೆ ತಲುಪುತ್ತದೆ.

14. ರೈಲು ನಂಬರ್ 12007 ಶತಾಬ್ದಿ ಎಕ್ಸ್‌ಪ್ರೆಸ್ ಬುಧವಾರ ಹೊರತುಪಡಿಸಿ ಪ್ರತಿದಿನವೂ ಬೆಂಗಳೂರಿನಿಂದ ಬೆಳಗ್ಗೆ 10:45ಕ್ಕೆ ಹೊರಟು ಮೈಸೂರನ್ನು ಮಧ್ಯಾಹ್ನ 1 ಗಂಟೆಗೆ ತಲುಪುತ್ತದೆ

15. ರೈಲು ನಂಬರ್ 20660 ರಾಜ್ಯ ರಾಣಿ ಎಸ್ಎಫ್ ಎಕ್ಸ್‌ಪ್ರೆಸ್‌ ಪ್ರತಿದಿನ ಬೆಂಗಳೂರಿನಿಂದ ಬೆಳಗ್ಗೆ 11:30ಕ್ಕೆ ಹೊರಟು ಮೈಸೂರನ್ನು ಮಧ್ಯಾಹ್ನ 2 ಗಂಟೆಗೆ ತಲುಪುತ್ತದೆ.

16. ರೈಲು ನಂಬರ್ 12976 ಜೈಪುರ - ಮೈಸೂರು ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್ ಬುಧವಾರ ಹಾಗೂ ಶುಕ್ರವಾರ ಬೆಂಗಳೂರಿನಿಂದ ಮಧ್ಯಾಹ್ನ 1:15ಕ್ಕೆ ಹೊರಟು ಮೈಸೂರನ್ನು ಸಂಜೆ 4 ಗಂಟೆಗೆ ತಲುಪುತ್ತದೆ.

17. ರೈಲು ನಂಬರ್ 20624 ಮಾಲ್ಗುಡಿ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಮಧ್ಯಾಹ್ನ 1:50ಕ್ಕೆ ಹೊರಟು ಮೈಸೂರನ್ನು ಸಂಜೆ 4:20 ಗಂಟೆಗೆ ತಲುಪುತ್ತದೆ.

18. ರೈಲು ನಂಬರ್ 12614 ಒಡೆಯರ್ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಮಧ್ಯಾಹ್ನ 3:15ಕ್ಕೆ ಹೊರಟು ಮೈಸೂರನ್ನು ಸಂಜೆ 5:45 ಗಂಟೆಗೆ ತಲುಪುತ್ತದೆ.

19. ರೈಲು ನಂಬರ್ 17325 ವಿಶ್ವಮಾನವ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಸಂಜೆ 5:45ಕ್ಕೆ ಹೊರಟು ಮೈಸೂರನ್ನು ರಾತ್ರಿ 08:40 ಗಂಟೆಗೆ ತಲುಪುತ್ತದೆ.

20. ರೈಲು ನಂಬರ್ 16216 ಚಾಮುಂಡಿ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ಸಂಜೆ 6:15ಕ್ಕೆ ಹೊರಟು ಮೈಸೂರನ್ನು ರಾತ್ರಿ 9 ಗಂಟೆಗೆ ತಲುಪುತ್ತದೆ.

21. ರೈಲು ನಂಬರ್ 01662 RKMP-ಮೈಸೂರು ವಿಶೇಷ ರೈಲು ಶುಕ್ರವಾರ ಬೆಂಗಳೂರಿನಿಂದ ಸಂಜೆ 6:35ಕ್ಕೆ ಹೊರಟು ಮೈಸೂರನ್ನು ರಾತ್ರಿ 9:40 ಗಂಟೆಗೆ ತಲುಪುತ್ತದೆ.

22. ರೈಲು ನಂಬರ್ 12609 ಮೈಸೂರು ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ರಾತ್ರಿ 8ಕ್ಕೆ ಹೊರಟು ಮೈಸೂರನ್ನು ರಾತ್ರಿ 22:50 ಗಂಟೆಗೆ ತಲುಪುತ್ತದೆ.

23. ರೈಲು ನಂಬರ್ 16585 SMVT ಬೆಂಗಳೂರು - ಮುರ್ಡೇಶ್ವರ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ರಾತ್ರಿ 9ಕ್ಕೆ ಹೊರಟು ಮೈಸೂರನ್ನು ರಾತ್ರಿ 12:10 ಗಂಟೆಗೆ ತಲುಪುತ್ತದೆ.

24. ರೈಲು ನಂಬರ್ 20664 SMVT ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರತಿದಿನ ಬೆಂಗಳೂರಿನಿಂದ ರಾತ್ರಿ 9:30ಕ್ಕೆ ಹೊರಟು ಮೈಸೂರನ್ನು ರಾತ್ರಿ 11:55 ಗಂಟೆಗೆ ತಲುಪುತ್ತದೆ.

ಒಟ್ಟಿನಲ್ಲಿ ಈ ರೈಲುಗಳು ಬೆಂಗಳೂರು-ಮೈಸೂರು ನಡುವೆ ಪ್ರಯಾಣ ಬೆಳೆಸುವ ಸಾಮಾನ್ಯ ಪ್ರಯಾಣಿಕರಿಗೆ ಅಷ್ಟೇ ಅಲ್ಲದೆ, ಈ ಎರಡು ನಗರಗಳಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ತುಂಬಾ ಸಹಾಯಕವಾಗಲಿವೆ.