Showing posts with label DAILY. Show all posts
Showing posts with label DAILY. Show all posts

Monday, February 10, 2025

ನಾವು ದೈನಂದಿನ ಜೀವನದಲ್ಲಿ ಬಳಸುವ ತರಕಾರಿಗಳಲ್ಲಿ ಯಾವುದು ಭಾರತದ ಮೂಲದವು ಮತ್ತು ಯಾವುದು ಹೊರಗಿನ ದೇಶದ ಮೂಲದವುಗಳು?

 

ನಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳಲು ನಿಸರ್ಗವು ಬೇಕಾದದ್ದನ್ನೆಲ್ಲ ಕೊಟ್ಟಿದೆ.
ಅದನ್ನ ನಾವು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕಷ್ಟೆ.

ಇದರಲ್ಲಿ ಒಂದು ಮುಖ್ಯವಾದುದೆಂದರೆ ಸೀಸನ್.

  • ಆಯಾ ಕಾಲಗಳಲ್ಲಿ ಸಿಗುವ ಹಣ್ಣು ತರಕಾರಿಗಳನ್ನ ತಿನ್ನುವುದು. ಹೀಗೆ ಮಾಡುವುದರಿಂದ ಆಯಾ ಕಾಲಗಳಲ್ಲಿ ಬರುವ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಯಿಂದ ದೂರವಿರಬಹುದು.

ಇಲ್ಲೊಂದು ವಿಚಾರವೇನೆಂದರೆ,

  • ಬಹಳಷ್ಟು ಹಣ್ಣು ತರಕಾರಿಗಳು ವರ್ಷ ಪೂರ್ತಿ ಮತ್ತು ಎಲ್ಲೆಡೆ ದೊರೆಯುತ್ತದಾದರೂ ಅವುಗಳಲ್ಲಿನ ಜೀವಸತ್ವಗಳ ಪ್ರಮಾಣ ಹೆಚ್ಚಿರುವುದು ಅವುಗಳು ಬೆಳೆಯುವ ಕಾಲದಲ್ಲಿ ಮತ್ತು ಅವುಗಳು ಬೆಳೆಯುವ ಪ್ರದೇಶಗಳಲ್ಲಿ ಮಾತ್ರ.
  • ಎಲ್ಲೋ ಬೆಳೆದದ್ದನ್ನ ಇನ್ನೆಲ್ಲಿಯೋ ತಿನ್ನುವುದು ಮತ್ತು ಯಾವುದೋ ಕಾಲದ್ದನ್ನ ಇನ್ನವುದೋ ಕಾಲದಲ್ಲಿ ಉಪಯೋಗಿಸುವುದರಿಂದ ಅವುಗಳಿಂದಾಗುವ ಪ್ರಯೋಜನದ ಪ್ರಮಾಣ ಕಡಿಮೆ.

ಇಲ್ಲಿ ಕೆಲವು ತರಕಾರಿಗಳ ಮೂಲವನ್ನ ಪಟ್ಟಿಮಾಡಿದ್ದೇನೆ. ಬಹಳಷ್ಟು ತರಕಾರಿಗಳ ಮೂಲದ ಬಗ್ಗೆ ಸರಿಯಾದ ಇತಿಹಾಸದ ದಾಖಲೆಗಳು ಸಿಗುವುದಿಲ್ಲ. ಲಭ್ಯವಿರುವ ಮಾಹಿತಿಯ ಅನುಸಾರ ಬರೆದಿದ್ದೇನೆ.

  • ಬದನೆ ಕಾಯಿ.

ಇದು ತರಕಾರಿಗಳ ರಾಜ. ಇದರ ಹುಟ್ಟುಸ್ಥಳ ದಕ್ಷಿಣ ಭಾರತ.

  • ಹಾಗಲಕಾಯಿ.

ಸ್ವಲ್ಪ ದೂರವೇ ಉಳಿಯುವ ರುಚಿಕರ ಮತ್ತು ಆರೋಗ್ಯದ ಕಣಜವಾದ ಬುಹೂಪಯೋಗಿ ಹಾಗಲ ಹುಟ್ಟಿದ್ದು ಭಾರತದಲ್ಲಿ. ಇಂದು ಹೆಚ್ಚಾಗಿ ಔಷಧ ರೂಪದಲ್ಲಿ ಕೂಡಾ ಉಪಯೋಗವಾಗುತ್ತದೆ.

  • ಮಾವಿನಕಾಯಿ.

ಹಣ್ಣುಗಳ ರಾಜ ಮಾವು, ಹಣ್ಣಾಗುವ ಮೊದಲು ತರಕಾರಿಯೂ ಆಗುತ್ತಾನೆ. ಇವನ ಹುಟ್ಟುಸ್ಥಳ ಭಾರತ.

  • ಪಾಲಾಕ್ ಸೊಪ್ಪು.

ಇದರ ಮೂಲ ಉತ್ತರ ಭಾರತ. ಅತ್ಯಂತ ಆರೋಗ್ಯದಾಯಕ ಸೊಪ್ಪು.

  • ಕ್ಯಾರೆಟ್.

ಕೆಂಪು, ಕಿತ್ತಳೆ, ಹಳದಿ ಮುಂತಾದ ಬಣ್ಣಗಳಲ್ಲಿ ಸಿಗುವ ಇದರ ಮೂಲ ಪರ್ಷಿಯ. ಅಲ್ಲಿ ಇದರ ಕಾಡು ಜಾತಿಯನ್ನ ಬೆಳೆಯುತ್ತಿದ್ದರು.

ಇದನ್ನ ಭಾರತದಲ್ಲಿ ಕೂಡಾ ಬಹಳ ಮೊದಲಿನಿಂದ ಬೆಳೆಯುತ್ತಿದ್ದರು ಅನ್ನುವ ದಾಖಲೆ ಇದೆ.

  • ಮೂಲಂಗಿ.

ಕಾಡು ಜಾತಿಯ ಮೂಲಂಗಿಯನ್ನ ಮೊದಲು ಚೈನಾದಲ್ಲಿ ಬೆಳೆದ ಮಾಹಿತಿ ಇದೆ. ಇಂದು ನಾವು ಉಪಯೋಗಿಸುವ ಮೂಲಂಗಿಯ ಮೂಲ ಭಾರತ.

  • ಬೂದುಗುಂಬಳ(ಕುಂಬಳಕಾಯಿ)

ಇದರ ಹುಟ್ಟು ಕೋಲಂಬಿಯಾ ಅಥವಾ ಅಮೆರಿಕಾ ಇರಬಹುದು. ಆದರೆ ಹಿಂದೂ ಧರ್ಮದಲ್ಲಿ ಇದಕ್ಕೆ ಒಂದು ವಿಶೇಷ ಸ್ಥಾನವಿರುವುದರಿಂದ ಇದರ ಮೂಲ ಭಾರತ ಎನ್ನುವುದನ್ನ ಅಲ್ಲಗಳೆಯಲಾಗದು. ಇದೊಂದು ಔಷಧಿಯ ಕಣಜ.

  • ಹೀರೆಕಾಯಿ,

ಬಹೂಪಯೋಗಿ ಹೀರೆಕಾಯಿಯ ಜನ್ಮ ಸ್ಥಳ ಭಾರತ.

  • ಮಗೆಕಾಯಿ ಮತ್ತು ಸವತಿಯ ಕಾಯಿ (ಸವತೆ ಕಾಯಿ)

ಇವುಗಳು ಭಾರತದ ಮೂಲದ ಸವತಿಯರು. ಇವಕ್ಕೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ.

  • ಟೊಮೆಟೊ.

ಇದು ದಕ್ಷಿಣ ಅಮೆರಿಕಾದಿಂದ ಬಂದ ತರಕಾರಿ ಹಣ್ಣು. ಅತ್ಯಂತ ಹೆಚ್ಚು ಉಪಯೋಗವಾಗುವ ತರಕಾರಿ.

  • ಕ್ಯಾಬೆಜ್, ಎಲೆಕೋಸು.

ಸುಮಾರು ಆರು ಸಾವಿರ ವರ್ಷಗಳಿಂದ ಇದನ್ನ ಚೈನಾದವರು ಬೆಳೆಯತ್ತಿದ್ದರಂತೆ.

  • ಹೂಕೋಸು

ಲೆಬನಾನ್ ಮತ್ತು ಸಿರಿಯಾದಲ್ಲಿ ಮೊದಲು ಇದನ್ನ ಬೆಳೆಯುತ್ತಿದ್ದರು. ಇಟಲಿಯ ಜನ ಇದನ್ನ ಮೊತ್ತಮೊದಲು ತಿನ್ನುವ ಸಾಹಸ ಮಾಡಿದರು. ಇದು ಇಂದು ಪ್ರಪಂಚದಾದ್ಯಂತ ಜನಜನಿತವಾಗಿದೆ.

  • ಬೀಟ್ರೂಟ್

ಹೆಚ್ಚಾಗಿ ಔಷಧಕ್ಕಾಗಿಯೇ ಉಪಯೋಗುವಾಗುತ್ತಿದ್ದ ಇದರ ಮೂಲ ಯುರೋಪ್, ಆಫ್ರಿಕಾ ಮತ್ತು ಏಷ್ಯಾದ ಭಾಗಗಳಿರಬಹುದು. ಇದನ್ನ ತರಕಾರಿಯಾಗಿ ಉಪಯೋಗಿಸಲು ಪ್ರಾರಂಭಿಸಿದ್ದು ಫ್ರಾನ್ಸ್ ನಲ್ಲಿ ಹದಿನೆಂಟನೇ ಶತಮಾನದಿಂದೀಚೆಗೆ.

  • ಡೊಳ್ಳು ಮೆಣಸಿನಕಾಯಿ.

ದಕ್ಷಿಣ ಅಮೆರಿಕಾದ ಇದು ಅತ್ಯಂತ ರುಚಿಕರ ಮತ್ತು ಆರೋಗ್ಯಕರ ಕೂಡಾ.

  • ಬೆಂಡೆಕಾಯಿ,

ಇಥಿಯೋಪಿಯಾದಲ್ಲಿ ಸುಮಾರು ಹತ್ತು ಸಾವಿರ ವರ್ಷಗಳ ಹಿಂದೆ ಇದನ್ನ ಬೆಳೆದ ಮಾಹಿತಿ ಇದೆ. ಇದರ ಒಣಗಿದ ಬೀಜದ ಪುಡಿಯನ್ನ ಕಾಫಿಗೆ ಪರ್ಯಾಯವಾಗಿ ಉಪಯೋಗಿಸುತ್ತಿದ್ದ ಮಾಹಿತಿ ಇದೆ. ಈಗ ಕೂಡಾ ಇದರ ಕಾಫಿ ಮಾಡುತ್ತಾರೆ.

  • ಬೀನ್ಸ್.

ಮೆಕ್ಸಿಕೋ ಮೂಲದ ಬೀನ್ಸ್ ಅಥವಾ ಅವರೆ ಕಾಯಿ ಜಾತಿಯ ತರಕಾರಿಗೆ ಹದಿನೈದು ಸಾವಿರ ವರ್ಷಗಳ ಇತಿಹಾಸವಿದೆ.

  • ಹಸಿರು ಬಟಾಣಿ

ಬಟಾಣಿಯು ಗ್ರೀಸ್,ಸಿರಿಯಾ ಅಥವಾ ಟರ್ಕಿಯಿಂದ ಬಂದಿರಬಹುದು. ಈಜಿಪ್ಟ್ ನ ನೈಲ್ ನದಿ ಪ್ರದೇಶದಲ್ಲಿ ಕೂಡಾ ಆರುಸಾವಿ ವರ್ಷಗಳ ಹಿದೆ ಇದನ್ನ ಬೆಳೆದ ಉದಾಹರಣೆ ಇದೆ.

  • ಆಲೂಗಡ್ಡೆ,

ಅತ್ಯಂತ ಜನಪ್ರಿಯ ಆಲೂ ಗಡ್ಡೆಯ ಜನನ ಹತ್ತು ಸಾವಿರ ವರ್ಷಗಳ ಹಿಂದೆ ಪೆರು ಅಥವಾ ಬೊಲಿವಿಯಾ ಇರಬಹುದು.

  • ಈರುಳ್ಳಿ

ಈರುಳ್ಳಿಯ ಮೂಲ ಹುಡುಕುತ್ತ ಹೋದರೆ ಕಣ್ಣಿನಲ್ಲಿ ನೀರು ಬರುವುದು ಗ್ಯಾರೆಂಟಿ.

ಚೈನಾ, ಇಂದಿನ ಪಾಕಿಸ್ತಾನದ ಪ್ರದೇಶಗಳು ಅಥವಾ ಈಜಿಪ್ಟಿನ ಪ್ರದೇಶಗಳು, ಹೀಗೆ ಒಮ್ಮತದ ಅಭಿಪ್ರಾಯ ಸಿಗಲಾರದು.

ಎಲ್ಲಾ ವಿಧವಾಗಿಯೂ ಕಣ್ಣೀರ ತರಕಾರಿಯಾಗಿಬಿಟ್ಟಿದೆ.

  • ಬೆಳ್ಳುಳ್ಳಿ,

ಈಜಿಪ್ಟಿನಲ್ಲಿ ಮಮ್ಮಿಗಳನ್ನ ಮಾಡುವಾಗ ಬೆಳ್ಳುಳ್ಳಿಯ ಎಣ್ಣೆ ಉಪಯೋಗಿಸಿದ ಮಾಹಿತಿ ಇದೆ. ಅದಕ್ಕಿಂತ ಮೊದಲಿನಿಂದಲೂ ಅಲ್ಲಿ ಇದನ್ನ ಬೆಳೆದ ಮಾಹಿತಿ ಸಿಗುತ್ತದೆ.

ಇವನ್ನ ಬಿಟ್ಟು ಇನ್ನೂ ಬಹಳಷ್ಟು ತರಕಾರಿಗಳನ್ನ ಬಿಟ್ಟುಬಿಟ್ಟಿದ್ದೇನೆ.

ಚಿತ್ರಗಳ ಮತ್ತು ವಿಷಯಗಳ ಸಂಗ್ರಹ: ಗೂಗಲ್.

Thursday, January 23, 2025

Most Used Social Media Platform With Daily Uploading

 1. Facebook

Headquarter - Menlo Park, California, US 🇺🇲

Monthly Active Users (MAU): Over 2.9 billion

Daily Active Users (DAU): Over 2 billion

🛑 Approximately 300 million photos and videos uploaded daily

2. YouTube

Headquarter - San Bruno, California, US 🇺🇲

Monthly active user : Over 2.5 billion

Daily active user : Around 1 billion

🛑 Over 500 hours of video content uploaded every minute, translating to about 720,000 hours daily

3. WhatsApp

Headquarter - Menlo Park, California, US 🇺🇲

Monthly active user: Over 2 billion

Daily active user : Over 1 billion

🛑 Users share over 4.5 billion photos and 1 billion videos daily (including direct messages).

4.Instagram

Headquarter - Menlo Park, California, US 🇺🇲

Monthly active user: Over 2 billion

Daily active user : Over 1 billion

🛑 Around 95 million photos and videos uploaded daily

5. WeChat

Headquarter - Singapore 🇸🇬

Monthly active user: Over 1.3 billion

Daily active user : Over 700 million

🛑 Over 6 billion photos shared daily, including in chat groups

6. TikTok

Headquarter - Haidian, Beijing, China 🇨🇳

Monthly active user: Over 1 billion

Daily active user : Over 800 million

🛑 Around 1 billion videos uploaded daily

7. Facebook Messenger

Headquarter - Menlo Park, California, US 🇺🇲

Monthly active user: Over 950 million

Daily active user : Over 700 million

🛑 While precise numbers are not officially released by facebook massenger, it's estimated that users share several hundred million media files daily.

8. Telegram

Headquarter - Business Central Towers, Dubai, UAE 🇦🇪

Monthly active user: Over 800 million

Daily active user : Over 400 million

🛑 While precise numbers are not officially released by Telegram, it's estimated that users share several hundred million media files daily.

9. Snapchat

Headquarter - Santa Monica, California, US 🇺🇲

Monthly active user: Over 750 million

Daily active user : Over 375 million

🛑 More than 3.5 billion Snaps (photos and videos) are sent daily

10. X (formerly Twitter)

Headquarter - San Francisco, California, US 🇺🇲

Monthly active user : Over 500 million

Daily active user : Over 230 million

🛑 Roughly 500 million tweets per day, with a significant portion including photos and videos.

Tuesday, December 31, 2024

ದಿನನಿತ್ಯದ ಪ್ರಾರ್ಥನೆಗಳು

 ಪ್ರಾತ: ಕಾಲದಲ್ಲಿ ಹೇಳಬೇಕಾದ ಮಂತ್ರಗಳು

ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೆ ಸರಸ್ವತೀ |
ಕರಮೂಲೇ ಸ್ಥಿತಾ ಗೌರೀ ಪ್ರಭಾತೇ ಕರದರ್ಶನಮ್ ||

ಸ್ನಾನ ಕಾಲದಲ್ಲಿ ಹೇಳಬೇಕಾದ ಮಂತ್ರಗಳು

ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರಿ ಜಲೇಽಸ್ಮಿನ್ ಸನ್ನಿಧಿಂ ಕುರು ||

ತೀರ್ಥ ಪ್ರಾಶನೆ ಮಾಡುವಾಗ

ಅಕಾಲಮೃತ್ಯುಹರಣಂ ಸರ್ವವ್ಯಾಧಿನಿವಾರಣಮ್ |
ಸಮಸ್ತ ಪಾಪಶಮನಂ ವಿಷ್ಣು ಪಾದೋದಕಂ ಶುಭಮ್ ||

ಪ್ರದಕ್ಷಿಣೆ ಹಾಕುವಾಗ

ಪ್ರದಕ್ಷಿಣತ್ರಯಂ ಕೃತ್ವಾ ನಮಸ್ಕಾರಾಂಶ್ಚ ಪಂಚ ಚ |
ಪುನಃ ಪ್ರದಕ್ಷಿಣಂ ಕೃತ್ವಾ ಪುನರ್ಜನ್ಮ ನ ವಿದ್ಯತೇ ||

ಭೋಜನವನ್ನು(ಊಟ)ಮಾಡುವಾಗ

ಅನ್ನಪೂರ್ಣೆ ಸದಾಪೂರ್ಣೆ ಶಂಕರಪ್ರಾಣವಲ್ಲ ಭೇ |
ಜ್ಞಾನವೈರಾಗ್ಯಸಿದ್ಧರ್ಥ೦ ಭಿಕ್ಷಾಂ ದೇಹಿ ಚ ಪಾರ್ವತಿ ॥
ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ |
ಪ್ರಾಣಾಪಾನಸಮಾಯುಕ್ತಃ ಪಚಾಮ್ಯನ್ನ೦ ಚತುರ್ವಿಧಂ |

ಸಂಕಷ್ಟಗಳ ನಿವಾರಣೆಯನ್ನು ಪರಿಹರಿಸಲು

ದರಿದ್ರ ವಿಪ್ರ ಗೇಹೇಯಃ ಶಾಕಂ ಭುಕೊಲ್ವುತ್ತ ಮಾಂ ಪ್ರಿಯಮ್ |
ದದೌ ಶ್ರೀ ದತ್ತ ದೇವಃ ಸಃ ದಾರಿದ್ರಾ ಚ್ಛೀ ಪ್ರದೋಭವತು ||

ದು:ಸ್ವಪ್ನ ನಿವಾರಣೆಗೆ(ಕೆಟ್ಟ ಕನಸುಗಳು ಬಂದರೆ)

ರಾಮಂ ಸ್ಕಂದಂ ಹನೂಮಂತಂ ವೈನತೇಯಂ ವೃಕೋದರಮ್ |
ಶಯನೇ ಯಃಸ್ಮರೇನ್ನಿತ್ಯಂ ದುಃಸ್ವಪ್ನ೦ತಸ್ಯ ನಶ್ಯತಿ ||

ದೀಪವನ್ನು ಪ್ರಜ್ವಾಲನೆ ಮಾಡುವಾಗ

ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಃ |
ಶತ್ರು ಬುದ್ಧಿ ವಿನಾಶಾಯ ದೀಪಜ್ಯೋತಿರ್ನಮೋSಸ್ತುತೇ ||
ದೀಪಜ್ಯೋತಿಃ ಪರಂಬ್ರಹ್ಮ ದೀಪಜ್ಯೋತಿರ್ಜನಾರ್ದನ: |
ದೀಪೋ ಹರತಿ ಪಾಪಾನಿ ಸಂಧ್ಯಾದೀಪ ನೋSಸ್ತು ತೇ ||

ಅಶ್ವತ್ಥ ವೃಕ್ಷಕ್ಕೆ ವಂದಿಸುವಾಗ

ಮೂಲತೋ ಬ್ರಹ್ಮರೂಪಾಯ ಮಧ್ಯತೋ ವಿಷ್ಣು ರೂಪಿಣೇ |
ಅಗ್ರತಃ ಶಿವರೂಪಾಯ ವೃಕ್ಷರಾಜಾಯ ತೇ ನಮಃ ||