Sunday, October 25, 2020

ಪ್ರಚಲಿತ ವಿದ್ಯಮಾನ

🌷 ವೀಕ್ಷಣೆಗೆ ಲಭ್ಯ ವಿಶ್ವದ ಬೃಹತ್ ಗ್ರಹ : 'ಗುರು'ವನ್ನೇ ಮೀರಿಸಿದ ಈ ಗ್ರಹ ಇರುವುದಾದರೂ ಎಲ್ಲಿ?
================
ನಕ್ಷತ್ರಗಳ ಮಡಿಲಲ್ಲಿ ನೆಲೆ ಕಂಡುಕೊಳ್ಳುವ ಗ್ರಹಗಳು, ಒಂದು ನಿರ್ದಿಷ್ಟ ಪಥದಲ್ಲಿ ತನ್ನ ಮಾತೃ ನಕ್ಷತ್ರವನ್ನು ಸುತ್ತುತ್ತಿರುತ್ತವೆ. ತನ್ನ ಮಾತೃ ನಕ್ಷತ್ರದಿಂದ ಇರುವ ದೂರವನ್ನು ಆಧರಿಸಿ ಈ ಗ್ರಹಗಳ ರಚನೆ, ವಾತಾವರಣಗಳು ನಿರ್ಧಾರವಾಗುತ್ತವೆ ಅದರಂತೆ ಬ್ರಹ್ಮಾಂಡ ದಲ್ಲಿ ಲೆಕ್ಕಕ್ಕೂ ಸಿಗದಷ್ಟು ಗ್ರಹಕಾಯಗಳಿವೆ.
=============
ಇಂತಹ ಕೋಟ್ಯಂತರ ಗ್ರಹಗಳ ಪೈಕಿ ನಮ್ಮ ಭೂಮಿಯೂ ಒಂದು. ಸೂರ್ಯನಿಂದ ನಿರ್ದಿಷ್ಟ ದೂರಲದಲ್ಲಿರುವ ಭೂಮಿ, ಇದುವರೆಗೂ ನಮಗೆ ಗೊತ್ತಿರುವ ಜೀವಸಂಕುಲವನ್ನು ಹೊಂದಿರುವ ಏಕೈಕ ಗ್ರಹ.
=====
ಈ ಮೊದಲೇ ಹೇಳಿದಂತೆ ವೀಕ್ಷಣೆಗೆ ಲಭ್ಯ ವಿಶ್ವದಲ್ಲಿ ಕೋಟ್ಯಂತರ ಗ್ರಹಗಳಿವೆ. ಇವುಗಳ ಪೈಕಿ ಭೂಮಿಯನ್ನು ಹೊರತುಪಡಿಸಿ ಮತ್ತೊಂದು ಗ್ರಹದಲ್ಲಿ ಜೀವಸಂಕುಲ ಇರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
=====
ಗಾತ್ರ, ರಚನೆ, ಆಕಾರಗಳಲ್ಲಿ ಭಿನ್ನವಾಗಿರುವ ಈ ಗ್ರಹಗಳು ನಮ್ಮ ಭೂಮಿಗಿಂತಲೂ ಹಲವು ಪಟ್ಟು ದೊಡ್ಡದಿರುವುನ್ನೂ ಕೂಡ ನಾವು ಕಂಡುಕೊಂಡ ಸಂಗತಿ. ಅದರಂತೆ ವೀಕ್ಷಣೆಗೆ ಲಭ್ಯ ವಿಶ್ವದ ಅತ್ಯಂತ ಬೃಹತ್ ಗ್ರಹ ದ ಕುರಿತು ನಾವಬು ಮಾಹಿತಿ ಪಡೆಯೋಣ.
=====
👉 TrES-4b
======
2006ರಲ್ಲಿ ಮೊದಲ ಬಾರಿಗೆ ಪತ್ತೆಯಾದ  TrEs-4b ಗ್ರಹ,ಸೌರಮಂಡಲದಾಚೆ(ಎಕ್ಸೋಪ್ಲ್ಯಾನೆಟ್) ನಾವು ಇದುವರೆಗೂ ಕಂಡುಹಿಡಿದಿರುವ ಅತ್ಯಂತ ದೊಡ್ಡ ಗ್ರಹ 2007ರಲ್ಲಿ ಇದರ ಅಸ್ತಿತ್ವವನ್ನು ಅಧಿಕೃತವಾಗಿ ಘೋಷಣೆ ಮಾಡಲಾಯಿತು
=========
ಟ್ರಾನ್ಸ್-ಅಟ್ಲಾಂಟಿಕ್ ಎಕ್ಸೋಪ್ಲಾನೆಟ್ ಸಮೀಕ್ಷೆಯ ಸಹಾಯದಿಂದ TrES-4b ಗ್ರಹವನ್ನು ಪತ್ತೆ ಮಾಡಲಾಯಿತು GSC 02620-00648 ಎಂಬ ನಕ್ಷತ್ರ ವನ್ನು ಸುತ್ತುತ್ತಿರುವ ಈ ಗ್ರಹ ಭೂಮಿಯಿಂದ ಬರೋಬ್ಬರಿ 1,400 ಜ್ಯೋತಿರ್ವರ್ಷ ದೂರದಲ್ಲಿದೆ.
=======
TrES-4b ಗ್ರಹ ತನ್ನ ಮಾತೃ ನಕ್ಷತ್ರವನ್ನು ಪ್ರತಿ 3.543 ದಿನಗಳಿಗೊಮ್ಮೆ ಒಂದು ಸುತ್ತು ಸುತ್ತುತ್ತದೆ ನಮ್ಮ ಭೂಮಿ ಸೂರ್ಯನನ್ನು ಒಂದು ಸುತ್ತಲು ಕೇವಲ 365 ದಿನಗಳನ್ನು ತೆಗೆದುಕೊಳ್ಳುತ್ತದೆ
======
👉 ಗ್ರಹ ರಚನೆ
======
TrES-4b ಗ್ರಹ ನಮ್ಮ ಸೌರಮಂಡಲದ ಅತ್ಯಂತ ದೊಡ್ಡ ಗ್ರಹವಾದ ಗುರುಗ್ರಹಕ್ಕಿಂತ 0.919 ಪಟ್ಟು ದೊಡ್ಡದಾಗಿದೆ. ಅಲ್ಲದೇ ಗುರುಗ್ರಹಕ್ಕಿಂತ ಒಟ್ಟು ವ್ಯಾಸದ 1.799 ಪಟ್ಟು ಹೆಚ್ಚು ವ್ಯಾಸವನ್ನು ಹೊಂದಿದೆ.
=======
TrES-4b ಗ್ರಹದ ಮೇಲ್ಮೈ ಉಷ್ಣಾಂಶ 1,782 ಕೆಲ್ವಿನ್‌ ನಷ್ಟಿದ್ದು, ತನ್ನ ಪೋಷಕ ನಕ್ಷತ್ರವಾದ GSC 02620-00648 ಸೂರ್ಯನಿಗಿಂತ 3-4 ಪಟ್ಟು ಹೆಚ್ಚು ಸಮೀಪ ದಲ್ಲಿರುವುದರಿಂದ ಈ ಗ್ರಹದಲ್ಲಿ ಇಷ್ಟೊಂದು ಉಷ್ಣಾಂಶ ಇದೆ ಎಂದು ಅಂದಾಜಿಸಲಾಗಿದೆ.
==========
👉 ಬ್ರಹ್ಮಾಂಡದ ಇತ ದೈತ್ಯ ಗ್ರಹಗಳು
=======
> WASP-12b
> WASP-17b
> GQ Lupi b
==========
ಗ್ರಹಗಳು ಎರಡು ಬಗೆಯವು. 
> ಒಂದು ಘನ ಮೇಲ್ಮೈ(ರಾಕಿ ಪ್ಲ್ಯಾನೆಟ್ಸ್)ಯನ್ನು ಹೊಂದಿರುವ ಗ್ರಹಗಳಾಗಿದ್ದರೆ
> ಅನಿಲ ಮೋಡಗಳಿಂದ(ಗ್ಯಾಸ್ ಜೈಂಟ್ಸ್) ರಚನೆಯಾಗಿರುತ್ತವೆ
========
👉 TOI-849b
========
TOI-849b ನಾವು ಇದುವರೆಗೂ ಕಂಡುಹಿಡಿದ ವೀಕ್ಷಣೆಗೆ ಲಭ್ಯ ವಿಶ್ವದ ಅತ್ಯಂತ ಬೃಹತ್ ರಾಕಿ ಪ್ಲ್ಯಾನೆಟ್ ಎಂಬುದು ವಿಶೇಷ. ಈ ಗ್ರಹ ನಮ್ಮ ಭೂಮಿಗಿಂತ ಬರೋಬ್ಬರಿ 40 ಪಟ್ಟು ಹೆಚ್ಚು ಗಾತ್ರವನ್ನು ಹೊಂದಿದೆ. TOI-849b ಗ್ರಹ ಭುಮಿಯಿಂದ ಕೇವಲ 730 ಜ್ಯೋತಿರ್ವರ್ಷ ದೂರದಲ್ಲಿದೆ
========

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...