Tuesday, September 29, 2020

ಕಲ್ಲು ಸಕ್ಕರೆ ಮಹತ್ವ

ಮೂತ್ರ ಜಾಗದಲ್ಲಿ ಇರುವ ಕಲ್ಲು ಕರಗಿಸುವ ಮತ್ತು ದೃಷ್ಟಿ ಹೆಚ್ಚಿಸುವ ಕಲ್ಲು ಸಕ್ಕರೆ ಈ ಎಂಟು ರೋಗಗಳನ್ನು ಹೋಗಲಾಡಿಸುತ್ತೆ..!

ಕಲ್ಲು ಸಕ್ಕರೆ ಆಯುರ್ವೇದಲ್ಲಿ ಬಳಸುತ್ತಾರೆ ಮತ್ತು ಇದೊಂದು ಮನೆ ಮದ್ದು ಸಹ ಇದು ನಿಮ್ಮಲ್ಲಿ ಇರುವ ಹಲವು ಕಾಯಿಲೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತೆ.

ಕಣ್ಣುಗಳಲ್ಲಿ ಉರಿ ಮತ್ತು ಕೆಂಪಾಗಿದ್ದರೆ ಕಲ್ಲು ಸಕ್ಕರೆಯನ್ನು ನೀರಲ್ಲಿ ಕಲಸಿ ಆ ನೀರಲ್ಲಿ ಹತ್ತಿ ನೆನೆಸಿ ಕಣ್ಣುಗಳ ಮೇಲೆ ಇಟ್ಟರೆ ಉರಿ ಮತ್ತು ಕೆಂಪಾಗಿರುವುದು ಶಮನವಾಗುತ್ತದೆ. ಈರುಳ್ಳಿ ರಸಕ್ಕೆ ಕಲ್ಲು ಸಕ್ಕರೆ ಬೆರೆಸಿ ಸೇವಿಸಿದರೆ ಮೂತ್ರ ಮಾರ್ಗದಲ್ಲಿ ಕಲ್ಲು ಇದ್ದರೆ ಕರಗುತ್ತದೆ.

50 ಗ್ರಾಂ ಬಾದಾಮಿ, 50 ಗ್ರಾಂ ಕಲ್ಲು ಸಕ್ಕರೆ, 25 ಗ್ರಾಂ ಸೋಂಪು ಮತ್ತು 10 ಗ್ರಾಂ ಕರಿಮೆಣಸಿನ ಕಾಳುಗಳನ್ನು ಹಾಕಿ ಮಾಡಿದ ಒಂದು ಚಮಚ ಪುಡಿಯನ್ನು ಹಾಲಿಗೆ ಸೇರಿಸಿ ಪ್ರತಿ ದಿನ ರಾತ್ರಿ ಮಲಗುವ ಮುನ್ನ ಕುಡಿದರೆ ದೃಷ್ಟಿ ಹೆಚ್ಚುತ್ತದೆ.

ಹೊಟ್ಟೆ ನೋವು ಹೆಚ್ಚಿದ್ದರೆ ಬೇವಿನ ಚಿಗುರನ್ನು ಕಲ್ಲು ಸಕ್ಕರೆ ಜತೆ ತಿಂದರೆ ನೋವು ಬೇಗ ಶಮನವಾಗುತ್ತದೆ. ಕಪ್ಪು ಎಳ್ಳನ್ನು ಪುಡಿ ಮಾಡಿ ಕಲ್ಲು ಸಕ್ಕರೆ ಜತೆ ಬಾಣಂತಿಯರಿಗೆ ಕೊಟ್ಟರೆ ಎದೆ ಹಾಲು ಹೆಚ್ಚುತ್ತದೆ.

ಪದೇ ಪದೆ ಬಾಯಿ ಹುಣ್ಣಾಗುತ್ತಿದ್ದರೆ ಏಲಕ್ಕಿ ಮತ್ತು ಕಲ್ಲು ಸಕ್ಕರೆ ಪೇಸ್ಟ್‌ ಮಾಡಿ ಲೇಪ ಮಾಡಿದರೆ ಹುಣ್ಣು ನಿವಾರಣೆಯಾಗುತ್ತದೆ. ಕಲ್ಲು ಸಕ್ಕರೆಯನ್ನು ಸೋಂಪು ಜತೆ ಬಾಯಿಗೆ ಹಾಕಿ ಅಗಿದರೆ ಬಾಯಿ ವಾಸನೆ ದೂರಾಗುತ್ತದೆ.

Sunday, September 27, 2020

ತುಪ್ಪದ ಮಹತ್ವ

🍯ಖಾಲಿ ಹೊಟ್ಟೆಯಲ್ಲಿ ‘ತುಪ್ಪ’ ತಿಂದರೆ ಏನಾಗುತ್ತದೆ ಗೊತ್ತೇ? ತುಪ್ಪದ ಬಗ್ಗೆ ಇರುವ ಮಹತ್ವ ತಿಳಿಯಿರಿ..

🍯ಒಂದು ನಿಮಿಷ ಸುಮ್ಮನೆ ಕುಳಿತುಕೊಳ್ಳಿ. ಜೊತೆಗೆ ಮುಂಜಾನೆ ಎದ್ದ ತಕ್ಷಣ ಏನು ಮಾಡುತ್ತೀರಾ?ಎನ್ನುವುದನ್ನು ಮೆಲುಕುಹಾಕಿ. ಸಾಮಾನ್ಯವಾಗಿ ಎಲ್ಲರ ಉತ್ತರ ಒಂದೇ ಆಗಿರಬಹುದು. ನೀರು ಕುಡಿಯುತ್ತೇವೆ, ಹಲ್ಲುಜ್ಜುತ್ತೇವೆ, ವ್ಯಾಯಾಮ ಮಾಡುತ್ತೇವೆ ಎನ್ನುವುದಾಗಿರಬಹುದು.

🍯ಅದೇ ಯಾರಾದರೂ ತುಪ್ಪವನ್ನು ತಿನ್ನುತ್ತೇವೆ ಎಂದರೆ ನಿಮ್ಮ ಪ್ರತಿಕ್ರಿಯೆ ಹೇಗಿರಬಹುದು? ತುಪ್ಪ ಎಂದರೆ ಸಾಮಾನ್ಯವಾಗಿ ಎಲ್ಲರ ಮನಸ್ಸಿಗೆ ಬರುವುದು.ಜಿಡ್ಡಿನ ಪದಾರ್ಥ, ಅತಿಯಾದ ಕೊಬ್ಬನ್ನು ಹೊಂದಿರುತ್ತದೆ,ಅದನ್ನು ಮಿತವಾಗಿ ಸೇವಿಸಬೇಕು,ಅತಿಯಾಗಿ ತಿಂದರೆ ಆರೋಗ್ಯ ಹಾಳಾಗುವುದು,ತೂಕ ಹೆಚ್ಚುವುದು ಸೇರಿದಂತೆ ಇನ್ನಿತರ ವಿಚಾರ ಮನಸ್ಸಿಗೆ ಬರಬಹುದು ಅಲ್ಲವೇ?

🍯ಬರೀ ಒಂದೆರಡು ಚಮಚ ತುಪ್ಪದಲ್ಲಿದೆ ಹತ್ತಾರು ಲಾಭ ಆದರೆ ಈ ಲೇಖನದಲ್ಲಿ ತುಪ್ಪ ತಿಂದರೆ ಯಾವೆಲ್ಲಾ ರೋಗವನ್ನು ನಿವಾರಿಸಬಹುದು ಎನ್ನುವ ವಿವರಣೆಯನ್ನು ನೀಡಲಾಗಿದೆ.ಹೌದು, ತುಪ್ಪ ಎಂದರೆ ಅದು ಕೇವಲ ಕೊಬ್ಬಿನ ಪದಾರ್ಥ ಎನ್ನುವುದಕ್ಕೆ ಸೀಮಿತವಾಗಿಲ್ಲ.ಆಯುರ್ವೇದದಲ್ಲಿ ತುಪ್ಪಕ್ಕೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ.

🍯ಅಲ್ಲದೆ ಅದೊಂದು ಔಷಧೀಯ ಪದಾರ್ಥವೂ ಹೌದು. ನಿತ್ಯ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ತಿಂದರೆ ನಾವು ಊಹಿಸಲೂ ಅಸಾಧ್ಯವಾಗುವಂತಹ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

🍯ಈ ವಿಚಾರ ನಿಮಗೆ ಆಶ್ಚರ್ಯವನ್ನು ಉಂಟುಮಾಡಬಹುದು. ಆದರೆ ಇದು ಸತ್ಯ.ತುಪ್ಪದ ಸೇವನೆಯಿಂದ ಯಾವೆಲ್ಲಾ ಸಮಸ್ಯೆಗಳಿಂದ ದೂರ ಇರಬಹುದು ಎನ್ನುವುದನ್ನು ತಿಳಿದುಕೊಳ್ಳಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ…

🍯ಜೀವಕೋಶದ ಚಟುವಟಿಕೆ ಹೆಚ್ಚುವುದು ಆಯುರ್ವೇದದ ಪ್ರಕಾರ ಖಾಳಿ ಹೊಟ್ಟೆಯಲ್ಲಿ ತುಪ್ಪವನ್ನು ಸೇವಿಸಿದರೆ ದೇಹದ ಎಲ್ಲಾ ಜೀವಕೋಶಗಳಿಗೂ ಪೋಷಕಾಂಶ ದೊರೆಯುವುದು.ಜೀವಕೋಶವನ್ನು ಪುನಃ ಶ್ಚೇತನಗೊಳಿಸಬೇಕು ಎಂದಾದರೆ ತುಪ್ಪವನ್ನು ಸೇವಿಸಬೇಕು.

🍯ಅಲ್ಲದೆ ದೇಹಕ್ಕೆ ಉತ್ತಮವಾದ ಆರೈಕೆಯನ್ನು ನೀಡುವುದು.ಚರ್ಮದ ಕಾಂತಿ ಹೆಚ್ಚುವುದು ತುಪ್ಪ ಜೀವಕೋಶಗಳ ಪೋಷಣೆ ಮತ್ತು ಪುನರುಜ್ಜೀವನ ಗೊಳಿಸುವುದರಿಂದ ಚರ್ಮವು ನೈಸರ್ಗಿಕವಾಗಿಯೇ ಆರೋಗ್ಯವನ್ನು ಪಡೆದುಕೊಳ್ಳುತ್ತದೆ.

🍯ತ್ವಚೆಯಲ್ಲಿರುವ ಶುಷ್ಕತೆಯನ್ನು ಹೋಗಲಾಡಿಸಿ,ಸದಾ ಕಾಂತಿ ಹಾಗೂ ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ. ಸೋರಿಯಾಸಿಸ್‍ನಂತಹ ಚರ್ಮ ರೋಗಗಳನ್ನು ಇದು ತಡೆಯುವುದು.ಸಂಧಿವಾತವನ್ನು ತಡೆಯುತ್ತದೆ ತುಪ್ಪ ನೈಸರ್ಗಿಕವಾದ ಲುಬ್ರಿಕೆಂಟ್ ಮತ್ತು ಓಮೆಗಾ-3 ಕೊಬ್ಬಿನಾಮ್ಲವನ್ನು ಒಳಗೊಂಡಿದೆ.

🍯ಹಾಗಾಗಿ ಇದನ್ನು ಕೀಲುಗಳಿಗೆ ಉತ್ತಮ ಆರೈಕೆ ಮಾಡುವುದು.ಸಂಧುಗಳ ನೋವಿಗೆ ಹಾಗೂ ಇನ್ನಿತರ ಮೂಳೆ ಸಂಬಂಧಿತ ಅನಾರೋಗ್ಯಕ್ಕೆ ತುಪ್ಪದ ಲೇಪನವನ್ನು ಮಾಡಬಹುದು. ತುಪ್ಪದ ಸೇವನೆಯಿಂದ ಆಸ್ಟಿಯೊಪೊರೋಸಿಸ್ ಸೇರಿದಂತೆ ಅನೇಕ ಮೂಳೆ ಸಮಸ್ಯೆಗಳನ್ನು ನಿವಾರಿಸುತ್ತದೆ.

🍯ಮಿದುಳಿನ ಕಾರ್ಯ ಚಟುವಟಿಕೆಯನ್ನು ಹೆಚ್ಚಿಸುತ್ತದೆ ಖಾಲಿ ಹೊಟ್ಟೆಯಲ್ಲಿ ತುಪ್ಪದ ಸೇವನೆ ಮಾಡುವುದರಿಂದ ಮೆದುಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ನಿವಾರಣೆ ಹೊಂದುತ್ತವೆ. ಜೊತೆಗೆ ನೆನಪಿನ ಶಕ್ತಿ,ಕಲಿಕೆ,ಜ್ಞಾನ ಗ್ರಹಣ,ಕಾರ್ಯಚಟುವಟಿಕೆಗಳನ್ನು ಸುಧಾರಿಸುತ್ತದೆ.

🍯ಅಲ್ಲದೆ ಬುದ್ಧಿಮಾಂಧ್ಯತೆ ಅಲ್ಝಮೈರ್ ನಂತಹ ಕಾಯಿಲೆ ಬರದಂತೆ ತಡೆಯುವುದು.ತೂಕ ಇಳಿಸುವುದು ಸಾಮಾನ್ಯವಾಗಿ ತೂಕ ಹೆಚ್ಚಿಸಲು ತುಪ್ಪ ಸೇವಿಸಬೇಕು ಎನ್ನುವುದನ್ನು ಕೇಳಿರುತ್ತೀರಿ.ಅದೇ ನೀವು ಮುಂಜಾನೆ ಖಾಲಿ ಹೊಟ್ಟೆಯಲ್ಲಿ 5-10 ಮಿಲಿಯಷ್ಟು ತುಪ್ಪವನ್ನು ಸೇವಿಸಿದರೆ ನಿಮ್ಮ ಚಯಾಪಚಯ ಕ್ರಿಯೆ ಸುಧಾರಣೆ ಕಾಣುತ್ತದೆ.

🍯ಅಲ್ಲದೆ ಗಣನೀಯವಾದ ತೂಕ ಇಳಿಕೆಯನ್ನು ನೀವು ನಿರೀಕ್ಷಿಸಬಹುದು.ಕೂದಲು ಉದುರುವಿಕೆಯನ್ನು ತಡೆಯುತ್ತದೆ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವಿಸುವುದರಿಂದ ಅದು ಕೇಶರಾಶಿಯ ಸಂರಕ್ಷಣೆಗೆ ಸಹಾಯವಾಗುತ್ತದೆ.ಕೂದಲಿನ ಫೋಲಿಸೆಲ್ಸ್ ಗಳು ಆರೋಗ್ಯವಾಗಿರುವಂತೆ ಮಾಡುತ್ತದೆ.

🍯ಇದರಿಂದ ಹೊಳಪಿನಿಂದ ಕೂಡಿರುವ ದಟ್ಟವಾದ ಕೂದಲನ್ನು ನೀವು ಹೊಂದಬಹುದು. ಲ್ಯಾಕ್ಟೋಸ್‍ಗಳನ್ನು ಸುಧಾರಿಸುತ್ತದೆ ಕೆಲವರಿಗೆ ಹಾಲು ಅಥವಾ ಹಾಲಿನಿಂದ ತಯಾರಿಸಿರುವ ಉತ್ಪನ್ನಗಳನ್ನು ಸೇವಿಸದಾಗ ಸೂಕ್ತ ರೀತಿಯ ಜೀರ್ಣಕ್ರಿಯೆ ಉಂಟಾಗುವುದಿಲ್ಲ.

🍯ಅದೇ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಸ್ವೀಕರಿಸಿದರೆ ಲ್ಯಾಕ್ಟೋಸ್ ಸಮಸ್ಯೆಯು ಸುಧಾರಣೆ ಕಾಣುತ್ತದೆ.ಜೀರ್ಣ ಕ್ರಿಯೆಯೂ ಉತ್ತಮವಾಗಿ ನೆರವೇರುವುದು.ಕ್ಯಾನ್ಸರ್ ನಿಂದ ದೂರ ಇಡುವುದು ನೈಸರ್ಗಿಕವಾದ ತುಪ್ಪವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅನೇಕ ಬಗೆಯ ಕ್ಯಾನ್ಸರ್ ಕಾಯಿಲೆಯಿಂದ ದೂರ ಇರಬಹುದು.

🍯ಆಯುರ್ವೇದದ ಪ್ರಕಾರ ತುಪ್ಪ ಕ್ಯಾನ್ಸರ್ ವಿರೋಧಿ ಲಕ್ಷಣವನ್ನು ಒಳಗೊಂಡಿದೆ ಎಂದು ಹೇಳಲಾಗುತ್ತದೆ.ತುಪ್ಪದ ಇನ್ನಷ್ಟು ಪ್ರಯೋಜನಗಳನ್ನು ತಿಳಿಯಿರಿ.ದೇಹದ ತೇವಕಾರಕ ಎಣ್ಣೆಯಾಗಿ ಒಂದು ವೇಳೆ ನಿಮ್ಮ ಚರ್ಮ ವಿಪರೀತ ಒಣದಾಗಿದ್ದರೆ ಈ ವಿಧಾನವನ್ನು ಅನುಸರಿಸಿ

🍯ಎರಡು ದೊಡ್ಡ ಚಮಚ ಅಪ್ಪಟ ತುಪ್ಪವನ್ನು ಕರಗುವಷ್ಟು ಬಿಸಿಮಾಡಿ. ಬಳಿಕ ಉಗುರುಬೆಚ್ಚನೆಯ ತಾಪಮಾನಕ್ಕೆ ಬರುವಷ್ಟು ತಣಿಸಿ. ಬಳಿಕ ಈ ತುಪ್ಪವನ್ನು ತೆಳುವಾಗಿ ಒಣಚರ್ಮದ ಮೇಲೆಲ್ಲಾ ನಯವಾಗಿ ಮಸಾಜ್ ಮಾಡುತ್ತಾ ಸವರಿಕೊಳ್ಳಿ.

🍯ಸುಮಾರು ಒಂದು ಘಂಟೆ ಬಿಟ್ಟು ಸ್ನಾನ ಮಾಡಿ.ಮುಖದ ಕಾಂತಿಗೆ ಒಂದು ದೊಡ್ಡ ಚಮಚ ಕಡ್ಲೆಹಿಟ್ಟು, ಒಂದು ದೊಡ್ಡ ಚಮಚ ಅಪ್ಪಟ ತುಪ್ಪ ಹಾಗೂ ಅಗತ್ಯವಿರುವಷ್ಟು ನೀರು ಬೆರೆಸಿ ಚೆನ್ನಾಗಿ ಬೆರೆಸಿ ಲೇಪನ ತಯಾರಿಸಿ. ಈ ಲೇಪನವನ್ನು ಈಗ ತಾನೇ ತಣ್ಣೀರಿನಿಂದ ತೊಳೆದುಕೊಂಡ ಮುಖಕ್ಕೆ ತೆಳುವಾಗಿ ಹಚ್ಚಿಕೊಳ್ಳಿ.

🍯ಇದನ್ನು ಪೂರ್ಣವಾಗಿ ಒಣಗಲು ಬಿಡಿ.ಒಣಗಿದ ಬಳಿಕ ಈ ಲೇಪನ ಬಿರಿಬಿಡಲು ಪ್ರಾರಂಭಿಸುತ್ತದೆ. ಈಗ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ.

🍯ಸೋಪು ಬಳಸಬೇಡಿ. ಬಾಡಿ ಲೋಷನ್ ರೂಪದಲ್ಲಿ ದೇಹದ ತ್ವಚೆಯನ್ನು ಇಡಿಯ ದಿನ ಕೋಮಲ ಮತ್ತು ಮೃದುವಾಗಿಸಲು ತುಪ್ಪವೂ ಸಮರ್ಥವಾಗಿದೆ.

🍯ಇದಕ್ಕಾಗಿ ಸಮಪ್ರಮಾಣದಲ್ಲಿ ತುಪ್ಪ ಮತ್ತು ಕೊಬ್ಬರಿ ಎಣ್ಣೆಯನ್ನು ಬೆರೆಸಿ ಕೊಂಚ ಲ್ಯಾವೆಂಡರ್ ಎಣ್ಣೆಯ ಹನಿಗಳನ್ನು ಸೇರಿಸಿ ನಯವಾದ ಲೇಪನ ತಯಾರಿಸಿ.ಸ್ನಾನದ ಬಳಿಕ ಈ ಲೇಪನವನ್ನು ತೆಳುವಾಗಿ ಕೊಂಚ ಮಸಾಜ್ ಮೂಲಕ ಸೂಕ್ಷ್ಮಭಾಗಗಳನ್ನು ಬಿಟ್ಟು ಉಳಿದೆಲ್ಲಾ ಭಾಗಗಳಿಗೆ ಹಚ್ಚಿಕೊಳ್ಳಿ.ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸುತ್ತದೆ

🍯ಉತ್ತರ ಭಾರತದಲ್ಲಿ ಹೃದಯಸಂಬಂಧಿ ಕಾಯಿಲೆಗಳು ಇತರ ಭಾಗಗಳಿಗೆ ಹೋಲಿಸಿದರೆ ಕಡಿಮೆ ಇದೆ.ಇದರ ಮೂಲ ಕಾರಣವೇನೆಂದರೆ ಉತ್ತರ ಭಾರತದ ಜನರು ಎಣ್ಣೆಗೆ ಬದಲಾಗಿ ಹೆಚ್ಚಾಗಿ ತುಪ್ಪವನ್ನೇ ಸೇವಿಸುತ್ತಾರೆ.

🍯ಈ ಅಭ್ಯಾಸದಿಂದ ದೇಹದ ರಕ್ತನಾಳಗಳ ಒಳಗೆ ಸಂಗ್ರಹಗೊಂಡಿದ್ದ ಕೆಟ್ಟಕೊಲೆಸ್ಟ್ರಾಲ್ ( LDL (low-density lipoprotein)) ಸಡಿಲಗೊಂಡು ನಿವಾರಣೆಯಾಗಲು ಸಾಧ್ಯವಾಗುತ್ತದೆ. ಇದು ಹೃದಯದ ಮೇಲಿನ ಹೊರೆಯನ್ನು ತಗ್ಗಿಸಿ ಹೃದಯ ಸಂಬಂಧಿ ತೊಂದರೆಗಳ ಸಾಧ್ಯತೆಯನ್ನು ಅಪಾರವಾಗಿ ಕಡಿಮೆಗೊಳಿಸುತ್ತದೆ.

ನದಿಗಳಲ್ಲೊಬ್ಬಳು ಗಂಡುಬೀರಿ

*ಅಮೆಜಾನ್ - ಪ್ರಪಂಚದ ಅತ್ಯಂತ ವಿಶಾಲವಾದ ನದಿ, ಎಷ್ಟು ವಿಶಾಲವೆಂದರೆ ಇಂಗ್ಲೆಂಡ್ ಮತ್ತು ಐರ್‌ಲ್ಯಾಂಡ್‌ ದೇಶಗಳನ್ನು 17 ಬಾರಿ ಈ ಒಂದೇ ನದಿಯೊಳಗೆ ಜೋಡಿಸಬಹುದು; ಅಷ್ಟು ದೊಡ್ಡದು!!*

*ಪೆರುವಿನ ತನ್ನ ಉಗಮ ಸ್ಥಾನದಿಂದ ಕೇವಲ 300 ಕಿಲೋಮೀಟರ್ ಪಶ್ಚಿಮಕ್ಕೆ ಬಂದರೆ ಅನಾಯಾಸವಾಗಿ ಫೆಸಿಫಿಕ್ ಸಾಗರವನ್ನು ಸೇರಬಹುದು. ಆದರೆ ಅದು ಅಮೆಜಾನ್‌ನಂತಹ ಗಂಡುಬೀರಿಗೆ ಸಾಧ್ಯವೇ ಇಲ್ಲ!! ಆಕೆ ಈಶಾನ್ಯಕ್ಕೆ 6,400 ಕಿಲೋಮೀಟರುಗಳಷ್ಟು ನೆಲಸೀಳಿಕೊಂಡು ಅಟ್ಲಾಂಟಿಕ್ ಸಾಗರವನ್ನು ಸೇರುತ್ತಾಳೆ! ಹೀಗೆ ಸೇರುವ ಮಾರ್ಗದಲ್ಲಿ ಆಕೆಯೊಂದಿಗೆ ಸೇರಿಕೊಳ್ಳುವ ಉಪನದಿಗಳ ಸಂಖ್ಯೆಯೇ ಒಂದು ಸಾವಿರದ ನೂರು!! ಪ್ರಪಂಚದ ಅನೇಕ ದೇಶಗಳ ದೊಡ್ಡ ನದಿಗಳೇ ಈ ಉಪನದಿಗಳಷ್ಟೂ ದೊಡ್ಡದಾಗಿಲ್ಲ ಎಂದರೆ, ಅಮೆಜಾನ್ ನದಿಯ ವೈಶಾಲ್ಯತೆ ಅರ್ಥವಾದೀತು!!*

 *ಇಡೀ ಭೂಮಿಯಲ್ಲಿ ಇರುವ ಐದನೇ ಒಂದರಷ್ಟು ಸಿಹಿ ನೀರು ಈ ಒಂದೇ ನದಿಯಲ್ಲಿ ಹರಿಯುತ್ತದೆ! ಹೆಚ್ಚೇಕೆ, ಅಮೆಜಾನ್ ನದಿಯ ಮೂಲಕ ಹರಿಯುವ ನೀರಿನ ಪ್ರಮಾಣವೇ ಪ್ರತೀ ಸೆಕೆಂಡ್‌ಗೆ ಎರಡು ಲಕ್ಷದ ಒಂಭತ್ತು ಸಾವಿರ ಕ್ಯೂಬಿಕ್ ಮೀಟರ್!! ಅನೇಕ ಕಡೆ ಈ ನದಿಯ ಅಗಲವೇ 190 ಕಿಲೋಮೀಟರ್‌ಗಳು!! ಸಾಗರ ಸೇರಿದ ಮೇಲೂ ಈ ನದಿ ಸುಮಾರು ನೂರು ಕಿಲೋಮೀಟರ್ ವರೆಗೂ ಸಮುದ್ರದ ಉಪ್ಪುನೀರಿನಲ್ಲಿ ಬೆರೆಯುವುದೇ ಇಲ್ಲ!*

*ವಿಚಿತ್ರವೆಂದರೆ, ಇಂದಿನವರೆಗೂ ಅಮೆಜಾನ್‌ಗೆ ಒಂದೇ ಒಂದು ಸೇತುವೆ ಕಟ್ಟಲಾಗಿಲ್ಲ! ಇವೆಲ್ಲಕ್ಕೆ ಕಿರೀಟವಿಟ್ಟಂತೆ, ಈ ನದಿಗೆ ಸಮನಾಂತರವಾಗಿ, ಸುಮಾರು ನಾಲ್ಕು ಕಿ.ಮೀ. ಆಳದ ಭೂಮಿಯೊಳಗೆ ಇದರ 4 ಪಟ್ಟು ದೊಡ್ಡದಾದ ನದಿ (2011ರ ಸಂಶೋಧನೆ) ಹರಿಯುತ್ತಿದ್ದು, ಅದನ್ನು 'ಹಂಜಾ಼ ನದಿ' ಎನ್ನುತ್ತಿದ್ದಾರೆ!*

*ತಾನು ಹರಿವ ಸ್ಥಳದಲ್ಲಿ 40ಸಾವಿರ ಜಾತಿಯ ಮರಗಿಡಗಳು!, 1,300 ಪ್ರಬೇಧದ ಪಕ್ಷಿಗಳು, 3000 ಜಾತಿಯ ಮೀನುಗಳು, 430 ಜಾತಿಯ ಸ್ತನಿಗಳು, ಎರಡೂವರೆ ಮಿಲಿಯನ್ ಜಾತಿಯ ಕೀಟಗಳಿಗೆ ಆಶ್ರಯ ನೀಡುತ್ತಾಳೆ!! ಭಯಾನಕ ಇಲೆಕ್ಟ್ರಿಕ್ ಈಲ್‌ಗಳು, ಕೆಂಪಿರುವೆ, ಟೊರಾಂಟುಲಾಗಳು, ಭೀಕರ ಪಯಾರಾ ಮೀನುಗಳು, ಅನಕೊಂಡಾಗಳು, ಖೇಮ್ಯಾನ್‌ಗಳು, ವಿಚಿತ್ರ ಕ್ಯಾಂಡಿರೂ ಮೀನುಗಳು!! ನೀರಿಗಳಿದ ಯಾವುದನ್ನೇ ಆಗಲಿ ನಿಮಿಷದೊಳಗೆ ಅಸ್ಥಿಪಂಜರ ಮಾಡಿಬಿಡುವ ರಕ್ತಪಿಪಾಸು ಫಿರಾನ್ಹಾ ಗುಂಪುಗಳು.. ಒಂದೇ ಎರಡೇ?! ಇವೆಲ್ಲಕ್ಕೆ ಕಲಶವಿಟ್ಟಂತೆ ಆಧುನಿಕ ಪ್ರಪಂಚದ ಗಂಧವೇ ಇಲ್ಲದೆ ಪ್ರಕೃತಿಯೊಳಗೆ ಲೀನವಾಗಿರುವ ಕಾಡುಜನರ ಆಲಯವಿದು! ಇಂತಹಾ ಸ್ವರ್ಗಸದೃಶ ಪ್ರಕೃತಿಗೆ ನಾವು ದೂರದಿಂದಲೇ ನಮಿಸೋಣ!*

Saturday, September 26, 2020

ವಚನಕಾರರು ಮತ್ತು ಅಂಕಿತನಾಮ

ವಚನಕಾರರು
ಅಂಕಿತನಾಮಗಳು
ಅಕ್ಕಮಹಾದೇವಿ
ಚೆನ್ನಮಲ್ಲಿಕಾರ್ಜುನ
ಸಿದ್ದರಾಮ
ಕಪಿಲಸಿದ್ಧ ಮಲ್ಲಿಕಾರ್ಜುನ
ಚೆನ್ನಬಸವಣ್ಣ
ಶ್ರೀ ಚೆನ್ನ ಕೂಡಲಸಂಗಮದೇವ
ಮಡಿವಾಳ ಮಾಚಯ್ಯ
ಕಲಿದೇವರ ದೇವ
ಅಜಗಣ್ಣ
ಮಹಾಘನ ಸೋಮೇಶ್ವರ
ಸಕಲೇಶ ಮಾದರಸ
ಸಬಲೇಶ್ವರ ದೇವ
ಕನಕದಾಸ
ಕಾಗಿನೆಲೆಯಾದಿ ಕೇಶವ
ಶ್ರೀಪಾದರಾಜ
ಶ್ರೀರಂಗ ವಿಠಲ
ವ್ಯಾಸರಾಯ
ಶ್ರೀಕೃಷ್ಣ
ಮಹಿಪಾತಿದಾಸ
ತರಳ ಮಹಿಪತಿ
ಹರಪ್ಪನಹಳ್ಳಿ ಭೀಮಪ್ಪ
ಭೀಮೇಶ ಕೃಷ್ಣ
ಆದಯ್ಯ
ಸೌರಾಷ್ಟ್ರ ಸೋಮೇಶ್ವರ
ಆಯ್ದಕ್ಕಿ ಮಾರಯ್ಯ
ಅಮರೇಶ್ವರ ಲಿಂಗ
ಹಾವಿನಾಲ ಕಲ್ಲಯ್ಯ
ಮಹಾಲಿಂಗ ಕಲ್ಲೇಶ್ವರ
ನಗರದ ಬೊಮ್ಮಣ್ಣ
ಸಂಗಮೇಶ್ವರ ಲಿಂಗ
ಸುಂಕದ ಬಂಕಣ್ಣ
ಬಂಕಲೇಶ್ವರ ಲಿಂಗ
ಮಾದರದ ಚೆನ್ನಯ್ಯ
ನಿಜಾತ್ಮ ರಾಮರಾಯ
ಜೇಡರ ದಾಸಿಮಯ್ಯ
ರಾಮನಾಥ
ಅಲ್ಲಮ ಪ್ರಭು
ಗುಹೇಶ್ವರ
ಬಸವಣ್ಣ
ಕೂಡಲಸಂಗಮದಾಸ
ಪುರಂದರ ದಾಸರು
ಪುರಂದರ ವಿಠಲ
ಮುಕ್ತಾಯಕ್ಕ
ಅಜಗಣ್ಣ ತಂದೆ
ಪುಲಿಗೆರೆ ಸೋಮನಾಥ
ಹರಿಹರ ಶ್ರೀ ಚೆನ್ನ ಸೋಮೇಶ್ವರ
ಗೊಲ್ಲಾಳ
ವೀರ ಬೀರೇಶ್ವರ
ಅಕ್ಕನಾಗಮ್ಮ
ಸಂಗನ ಬಸವಣ್ಣ
ನರಹರಿ ತೀರ್ಥ
ನರಹರಿ
ವಾದಿರಾಜ
ಹಯವದನ
ಅಮುಗೆ ರಾಮಯ್ಯ
ಅಮುಗೇಶ್ವರ ಲಿಂಗ
ಚಂದಿಮರಸ
ಸಿಮ್ಮಲಿಗೆಯ ಚೆನ್ನರಾಯ
ಒಕ್ಕಲು ಮುದ್ದಯ್ಯ
ಕಾಮಭೀಮ ಜೀವನದೊಡೆಯ
ಏಕಾಂತ ಮಾರಯ್ಯ
ಚೆನ್ನರಾಯ
ರಾಯಸದ ಮಂಚಣ್ಣ
ಅಮುಗೇಶ್ವರ
ಗಣೇಶ ಮಸಣಯ್ಯ
ಮಹಾಲಿಂಗ ಗಜೇಶ್ವರ
ಮೋಳಿಗೆ ಮಾರಯ್ಯ
ನಿ:ಕಳಂಕ ಮಲ್ಲಿಕಾರ್ಜುನ
ಎಸ್.ವಿ.ಪರಮೇಶ್ವರ ಭಟ್
ಸದಾಶಿವ ಗುರು
ಷಣ್ಮುಖ ಸ್ವಾಮಿ
ಅಖಂಡಶ್ವರ
ಲಕ್ಕಮ್ಮ
ಮಾರಯ್ಯ ಪ್ರಿಯ ಅಮರೇಶ್ವರ ಲಿಂಗ
ಢಕ್ಕೆಯ ಬೊಮ್ಮಣ
ಕಲಾಂತಕ ಭೀಮೇಶ್ವರಲಿಂಗ
ಹೆಂಡದ ಮಾರಯ್ಯ
ಧರ್ಮೇಶ್ವರ

ಮಂಕುತಿಮ್ಮನ ಕಗ್ಗ -1

 ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಾಲೋಲ | ದೇವ ಸರ್ವೇಶ ಪರಬೊಮ್ಮನೆಂದು ಜನಂ || ಆವುದನು ಕಾಣದೊಡಮಳ್ತಿಯಿಂ ನಂಬಿಹುದೋ | ಆ ವಿಚಿತ್ರಕೆ ನಮಿಸೊ-ಮಂಕುತಿಮ್ಮ ||

ಪದಗಳ ವಿಸ್ತರಣೆ

ವಿಶ್ವಾದಿಮೂಲ=ವಿಶ್ವ+ಆದಿಮೂಲ, ಕಾಣದೊಡಮಳ್ತಿಯಿಂ=ಕಾಣದೊಡಂ+ಅಳ್ತಿಯಿಂ.

ಪದಗಳ ತಾತ್ಪರ್ಯ

ಪರಬೊಮ್ಮ=ಪರಬ್ರಹ್ಮ, ಕಾಣದೊಡಂ=ಕಾಣದಿದ್ದರೂ, ಅಳ್ತಿಯಿಂ=ಪ್ರೀತಿಯಿಂದ.

ಪದ್ಯದ ಪೂರ್ತಿ ವಿವರಣೆ

ಶ್ರೀವಿಷ್ಣು, ವಿಶ್ವಕ್ಕೆ ಮೂಲ, ಮಾಯಾಲೋಲ, ದೇವ, ಸರ್ವಕ್ಕೂ ಒಡೆಯನಾದ ಪರಬ್ರಹ್ಮ ಎಂದು ಹತ್ತು ಹಲವಾರು ಹೆಸರುಗಳಿಂದ ಯಾವುದನ್ನು ಜನರು ಕಾಣದಿದ್ದರೂ ಪ್ರೀತಿ ಮತ್ತು ಭಕ್ತಿಯಿಂದ ನಂಬಿರುವರೋ ಆ ವಿಚಿತ್ರಕ್ಕೆ ನಮಿಸು ಎಂದು ಹೇಳುತ್ತಾರೆ ಶ್ರೀ ಗುಂಡಪ್ಪನವರು. ನಾವೆಲ್ಲಾ ಆತ್ಮಗಳಾದರೆ ನಮ್ಮನ್ನು ಆಳುವವನು ಪರಮಾತ್ಮ. ಅದನ್ನು ನಿಯಾಮಕ, ನಿಯಂತ್ರಕ, ದೇವರು ಎಂದೆಲ್ಲ ಕರೆಯುತ್ತಾರೆ. ಯಾರು ಏನೇ ಹೆಸರಿಟ್ಟು ಕರೆದರೂ ಅದು ಪರಮ ಶಕ್ತಿ. ಇಡೀ ಜಗತ್ತನ್ನು ಸೃಷ್ಟಿಸಿ ನಿಯಂತ್ರಿಸುವ ಒಂದು ಪರಮ ಶಕ್ತಿ. ಇದನ್ನು ಹಲವಾರು ಸದ್ಭಕ್ತರು ತಮ್ಮ ತಮ್ಮದೇ ರೀತಿಯಲ್ಲಿ ತಮ್ಮ ಅಂತರಂಗದಲ್ಲಿ ಕಂಡುಕೊಂಡು ಅನುಭವಿಸಿದ್ದಾರೆ. ಯಾರು ಹೇಗೆ ಅನುಭವಿಸಿದರೋ ಅವರಿಗೆ ಹಾಗೆ ಕಂಡಿದೆ. ನಾವಿರುವ ಭೂಮಿಯಂತಹ 9.80 ಲಕ್ಷ ಭೂಮಿಗಳನ್ನು ನಮ್ಮ ಸೌರವ್ಯೂಹದ ಸೂರ್ಯನೊಳಕ್ಕೆ ಹಾಕಿಬಿಡಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ. ನಮ್ಮ ಸೌರಮಂಡಲವೂ ಸೇರಿದಂತೆ ಲಕ್ಷಾಂತರ ಸೌರಮಂಡಲಗಳಿರುವ ನಮ್ಮ ಕ್ಷೀರಪಥ. ನಮ್ಮ ಕ್ಷೀರಪಥವೂ ಸೇರಿದಂತೆ ಲಕ್ಷಾಂತರ ಕ್ಷೀರಪಥಗಳಿರುವ ಆಕಾಶಗಂಗೆ, ನಮ್ಮ ಆಕಾಶಗಂಗೆಯೂ ಸೇರಿದಂತೆ ಲಕ್ಷಾಂತರ ಆಕಾಶಗಂಗೆಗಳಿರುವ ಈ ವಿಶ್ವ. ಇಡೀ ವಿಶ್ವವನ್ನು ಒಂದು ಸೂತ್ರದಲ್ಲಿ ನಡೆಸುತ್ತಿರುವ ಒಂದು ಶಕ್ತಿ. ಅದನ್ನೇ ಬೇರೆ ಬೇರೆಯವರು ಬೇರೆ ಹೆಸರುಗಳಿಂದ ಕರೆಯುತ್ತಾರೆಂದು ಈ ಮುಕ್ತಕದ ಆಂತರ್ಯ. ವಿಶ್ವದ ಒಂದು ಅಣುವಷ್ಟೂ ಅಲ್ಲದ ನಾವು, ಕಾಣದಿದ್ದರೂ ಆ ಶಕ್ತಿಯ ಅಧೀನದಲ್ಲಿರುವುದರಿಂದ, ಅದಕ್ಕೆ ಭಕ್ತಿಯಿಂದ, ಪ್ರೀತಿಯಿಂದ ನಮಿಸಬೇಕು ಎಂದು ಒಂದು ಆದೇಶ. ಅದನ್ನು ಕಂಡವರಿಲ್ಲ. ಅದರ ಲೀಲೆಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲೂ ಸಾಧ್ಯವಿಲ್ಲ. ಪ್ರತಿಯೊಬ್ಬರೂ ಅವರವರದೇ ರೀತಿಯಲ್ಲಿ ವ್ಯಾಖ್ಯಾನ ಮಾಡಬಹುದಾದಂತಹ ಒಂದು ಪರಮ ವಸ್ತು. ಮಾನ್ಯ ಗುಂಡಪ್ಪನವರು ಅದನ್ನು "ವಿಚಿತ್ರ" ಎಂದು ಕರೆದು ಅದಕ್ಕೆ ನಮಿಸು ಎಂದು ಒಂದು ಆದೇಶವನ್ನು ಕೊಟ್ಟಿದ್ದಾರೆ. ನಾವೂ ಸಹ ನಮ್ಮ ನಮ್ಮ ಮನಸ್ಸುಗಳಲ್ಲಿ ನಮ್ಮದೇ ರೀತಿಯಲ್ಲಿ ಆ ಪರಮಾತ್ಮನೆಂಬ ವಸ್ತುವನ್ನು ಭಾವಿಸಿ ಅನುಭವಿಸಬೇಕು. ಹೃದಯದಲ್ಲಿ ತುಂಬಿಕೊಳ್ಳಬೇಕು.

Friday, September 25, 2020

ಕರ್ನಾಟಕದ ರಾಜಮನೆತನಗಳು

 

ರಾಷ್ಟ್ರಕೂಟ

ರಾಷ್ಟ್ರಕೂಟರು ಕ್ರಿ.ಶ. ೮ ರಿಂದ ೧೦ನೇ ಶತಮಾನದವರೆಗೆ ಆಳಿದ ರಾಜವಂಶ. ದಂತಿದುರ್ಗನು ಚಾಲುಕ್ಯರ  ಕೀರ್ತಿವರ್ಮನನ್ನು ಸೋಲಿಸಿ ಗುಲ್ಬರ್ಗ ವನ್ನು ಕೇಂದ್ರವಾಗಿಸಿ ಈ ಸಾಮ್ರಾಜ್ಯವನ್ನು ಸ್ಥಾಪಿಸಿದನು. ದಂತಿದುರ್ಗನು ತನ್ನ ಮಾವ, ಪಲ್ಲವ ರಾಜ ನಂದಿವರ್ಮನನಿಗೆ ಕಂಚಿಯನ್ನು ಚಾಲುಕ್ಯರಿಂದ ಪುನಃ ಪಡೆಯಲು ಸಹಾಯ ಮಾಡುತ್ತಾ, ಗುರ್ಜರ, ಕಳಿಂಗ,ಕೋಸಲ ಮತ್ತು ಶ್ರೀ ಶೈಲ ರಾಜರುಗಳನ್ನು ಸೊಲಿಸಿದನು. ಧ್ರುವನ  ಮೂರನೇ ಮಗನಾದ ಗೋವಿಂದ -೩ ನ ಸಿಂಹಾಸನಾರೋಹಣ ದೊಂದಿಗೆ ಯಶಸ್ಸಿನ ಒಂದು ಯುಗವೇ ಶುರುವಾಯಿತು. ಆತನ ರಣರಂಗದ ಸಾಧನೆಗಳನ್ನು ಮಹಾಭಾರತದ ಅರ್ಜುನ ಮತ್ತು ಅಲೆಕ್ಸಂಡೆರ್ ಗೆ ಹೊಲಿಸಲಾಗಿದೆ. ಈತನ ಉತ್ತರಾಧಿಕಾರಿಯಾದ ಅಮೋಘ ವರ್ಷ ನೃಪತುಂಗ ಮಾನ್ಯಖೇಟ ಅಥವಾ ಮಳಖೇಡ ವನ್ನು ರಾಜಧಾನಿಯಾಗಿಸಿ ಕನ್ನಡಿಗರ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಆಳ್ವಿಕೆ ಮಾಡಿದ ರಾಜನೆಂದು ಹೇಳಬಹುದು. ಅವರ ಆಳ್ವಿಕೆಯಲ್ಲಿ  ಕಲೆ, ಸಾಹಿತ್ಯ ಮತ್ತು ಧರ್ಮಗಳನ್ನು ಸಮೃದ್ಧಗೊಳಿಸಿದ ಕಾಲವೆಂದು ಪರಿಗಣಿಸಲಾಗಿದೆ. ರಾಷ್ಟ್ರಕೂಟರಲ್ಲೆ ಪ್ರಸಿದ್ಧನೆನಿಸಿದ ಅಮೋಘ ವರ್ಷ ನೃಪತುಂಗ ಕನ್ನಡ ಮತ್ತು ಸಂಸ್ಕೃತದಲ್ಲಿ ಸ್ವತಃ ನಿಪುಣ ವಿದ್ವಾಂಸನಾಗಿದ್ದನು. ಅವರು ಬರೆದ ಕನ್ನಡದ ಕವಿರಾಜಮಾರ್ಗ ಮತ್ತು ಸಂಸ್ಕೃತದ ಪ್ರಶ್ನೋತ್ತರ ಶತಮಾಲಿಕೆ ಒಂದು ಮೈಲುಗಲ್ಲಾಗಿದ್ದು ಇದನ್ನು ಟಿಬೆಟಿಯನ್ ಭಾಷೆಗೂ ಭಾಷಾಂತರಿಸಲಾಗಿದೆ. ಇವರ ಧರ್ಮ ಸಹಿಷ್ಣುಸತೆ, ಕಲೆ ಮತ್ತು ಸಾಹಿತ್ಯದಲ್ಲಿನ ಒಲವು, ಶಾಂತಿ ಪ್ರಿಯ ಪ್ರವೃತ್ತಿಯನ್ನು ಕಂಡು ಇವರನ್ನು ದಕ್ಷಿಣದ ಅಶೋಕ (ಅಶೋಕ ಚಕ್ರವರ್ತಿ) ಎಂದೂ ಕರೆಯುತ್ತಾರೆ.

ರಾಷ್ಟ್ರಕೂಟರ ಪ್ರಭಾವ ಸಂಪೂರ್ಣ  ಭಾರತದ ಮೇಲಾಗಿತ್ತು. ಸುಲೈಮಾನ್, ಅಲ್ ಮಸೂದಿ  ಮುಂತಾದವರು ಸಮಕಾಲೀನ ಭಾರತದ ಅತಿ ದೊಡ್ಡ ಸಾಮ್ರಾಜ್ಯವೆಂದು ಹೇಳಿದರಲ್ಲದೆ ಸುಲೈಮಾನ್ ಇವರನ್ನು ವಿಶ್ವದ ೪ ಪ್ರಮುಖ ಸಾಮ್ರಾಜ್ಯಗಳಲ್ಲಿ ಒಂದು ಎಂದು ಹೇಳಿದ್ದಾರೆ. ಇತಿಹಾಸ ತಜ್ಞ್ಯರು ಈ ಕಾಲವನ್ನು “ಕನ್ನೌಜ್ ಚಕ್ರಾಧಿಪತ್ಯದ ಸಮಯ” ವೆಂದು ಕರೆಯುತ್ತಾರೆ. ಮತ್ತು ರಾಷ್ಟ್ರಕೂಟರು ಉತ್ತರ ಭಾರತವನ್ನು ವಶಪಡಿಸಿಕೊಂಡು ತಮ್ಮನ್ನು ದೊರೆಗಳೆಂದು ರುಜುವಾತುಪಡಿಸಿದ್ದರಿಂದ ಇದನ್ನು “ಕರ್ನಾಟಕ ಚಕ್ರಾಧಿಪತ್ಯದ ಸಮಯ” ವೆಂದೂ ಕರೆಯುತ್ತಾರೆ. ಸಾಮ್ರಾಜ್ಯವನ್ನು ಮಂಡಳ ಮತ್ತು ರಾಷ್ಟ್ರಗಳಾಗಿ ವಿಂಗಡಿಸಲಾಗಿದ್ದು , ರಾಷ್ಟ್ರವನ್ನು ಆಳುವವನನ್ನು ರಾಷ್ಟ್ರಪತಿ (ಚಕ್ರವರ್ತಿ) ಎಂದು ಕರೆಯಲಾಗುತ್ತಿತ್ತು. ಅಮೊಘವರ್ಶನ ಸಾಮ್ರಾಜ್ಯದಲ್ಲಿ ೧೬ ರಾಷ್ಟ್ರಗಳಿದ್ದವು. ರಾಷ್ಟ್ರವು ವಿಷಯಗಳಾಗಿ (ವಿಷಯಪತಿ) ಮತ್ತು ವಿಷಯವು ನಾಡು (ನಾಡುಗೌಡ) ಗಳಾಗಿ ವಿಂಗಡಿಸಲಾಗಿತ್ತು. ವಿಂಗಡನೆಯಲ್ಲಿ ಕೊನೆಯ ಹಂತ ಗ್ರಾಮ (ಗ್ರಾಮಪತಿ) ಆಗಿತ್ತು.

ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಕನ್ನಡವು ಸಾಹಿತ್ಯಕ ಭಾಷೆಯಾಗಿ ಪ್ರಾಮುಖ್ಯತೆ ಪಡೆಯಿತು. ಕವಿರಾಜಮಾರ್ಗ ಇತರ ಕವಿಗಳಿಗೆ ಮಾರ್ಗದರ್ಶಿ ಆಯಿತು. ದೊರೆ ಅಮೋಘವರ್ಷ ನೃಪತುಂಗನ ಕಾಲದ ಕವಿರಾಜಮಾರ್ಗ ಗ್ರಂಥದಲ್ಲಿ ” ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣಿತ ಮಲೆಗಳ್ ” ಅರ್ಥಾತ್  ಕುಳಿತು ಅಭ್ಯಾಸ ಮಾಡದ ಜನತೆಯೂ ಕಾವ್ಯ ಪ್ರಯೋಗಗಳಲ್ಲಿ ಪರಿಣತೆಯನ್ನು ಹೊಂದಿದ್ದರು ಎಂದು ಕನ್ನಡಿಗರ ಸಾಹಿತ್ಯಾಸಕ್ತಿಯ ಬಗ್ಗೆ  ವರ್ಣಿಸಿದ್ದಾನೆ. ಆದಿ ಕವಿ ಪಂಪ, ಕನ್ನಡದ ಪ್ರಖ್ಯಾತ ಕವಿ ಎಂದು ಪರಿಗಣಿಸಲಾಗಿದ್ದು, ಚಂಪು ಶೈಲಿಯಲ್ಲಿ ಬರೆದ ಆದಿ ಪುರಾಣ (ಜೈನ ತೀರ್ಥಂಕರ ಋಷಭದೇವನ ಚರಿತ್ರೆ) ದಿಂದ ಪ್ರಖ್ಯಾತಿಯನ್ನು ಪಡೆಡಿದೆ. ಉಭಯ ಚಕ್ರವರ್ತಿ (ಎರಡು ಭಾಷೆಗಳಲ್ಲಿ ಸರ್ವೋಚ್ಚ ಕವಿ) ಎಂದು ಹೆಸರು ಪಡೆದ ಶ್ರೀ ಪೊನ್ನ, ರಾಜ  ಕೃಷ್ಣ -೩ ನ ಆಶ್ರಯದಲ್ಲಿದ್ದಾಗ ಶಾಂತಿಪುರಾಣ ಬರೆದು ಪ್ರಖ್ಯಾತನಾದನು. ಕಲೆ ಮತ್ತು ವಾಸ್ತುಶಿಲ್ಪದಲ್ಲಿ ರಾಷ್ಟ್ರಕೂಟರ ಕೊಡುಗೆಯನ್ನು ಎಲ್ಲೋರ ಮತ್ತು ಎಲಿಫೆಂಟಾ ಬಂಡೆಗಲ್ಲಿನ ಗುಹಾ ದೇವಾಲಯಗಳಲ್ಲಿ ಕಾಣಬಹುದು (ಈಗಿನ ಮಹಾರಾಷ್ಟ್ರ ರಾಜ್ಯದಲ್ಲಿ ಇದೆ) . ಅತ್ಯಂತ ಪ್ರಖ್ಯಾತಿಯನ್ನು ಪಡೆದ ಏಕಶಿಲೆಯ ಕೈಲಾಸನಾಥ ದೇವಾಲಯ (ಎಲ್ಲೋರಾ) ರಾಷ್ಟ್ರಕೂಟರ ಕೊಡುಗೆ. ದೇವಾಲಯದ ಗೋಡೆಗಳಲ್ಲಿ  ಅದ್ಭುತವಾದ ಶಿಲ್ಪಕಲೆಗಳಿದ್ದು (ಶಿವ, ಪಾರ್ವತಿ, ರಾವಣ) ಛಾವಣಿಗಳು ವರ್ಣಚಿತ್ರಗಳು ಹೊಂದಿರುತ್ತವೆ.  ಇತಿಹಾಸ ತಜ್ಞ  ವಿನ್ಸೆಂಟ್ ಸ್ಮಿತ್ ಪ್ರಕಾರ ಏಕಶಿಲೆಯ ಕೈಲಾಸನಾಥ ದೇವಾಲಯ ಪ್ರಪಂಚದ ಅದ್ಭುತಗಳಲ್ಲಿ ಒಂದು ಎಂದು ಪರಿಗಣಿಸಲು  ಅರ್ಹವಾಗಿದೆ.

ಬಾದಾಮಿ ಚಾಲುಕ್ಯರು

ಬಾದಾಮಿ ಚಾಲುಕ್ಯರ (ಕ್ರಿ.ಶ ೩೫೦ – ೯೯೯) ಮೂಲ ಪುರುಷ ಜಯಸಿಂಹ. ಇವರ ರಾಜಲಾಂಛನ ವರಾಹ, ರಾಜಧಾನಿ ಬಾದಮಿ. (ಇದರ ಪ್ರಾಚೀನ ಹೆಸರು ವಾತಾಪಿ). ಒಂದನೇ ಪುಲಕೇಶಿಯನ್ನು ಚಾಲುಕ್ಯವಂಶದ ನಿಜವಾದ ಸ್ಥಾಪಕನೆಂದು ಹೇಳಲಾಗಿದೆ. ಈ ಸಾಮ್ರಾಜ್ಯವು ಕಾವೇರಿ ಮತ್ತು ನರ್ಮದಾ ನದಿಗಳ ಮಧ್ಯದ ಜಾಗವನ್ನು ಏಕೀಕೃತಗೊಳಿಸಿ ರಾಜ್ಯಭಾರ ನಡೆಸಿತು. ಇಮ್ಮಡಿ ಪುಲಕೇಶಿ ಈ ಮನೆತನದ ಪ್ರಸಿದ್ಧ  ಅರಸ. ಈತ  ನರ್ಮದಾ ನದಿ ಕಾಳಗದಲ್ಲಿ ಉತ್ತರ ಪಥೇಶ್ವರನೆಂದು ಪ್ರಸಿದ್ಧನಾದ ಹರ್ಷವರ್ಧನನ್ನು ಸೋಲಿಸಿದನು. ಆಸ್ಥಾನ ಕವಿ ರವಿಕೀರ್ತಿ ಐಹೊಳೆಯ ಮೇಗುತಿ ದೇವಾಲಯದ ಗೋಡೆಯ ಮೇಲೆ ಸಂಸ್ಕೃತ ಶಾಸನವನ್ನು ಕೆತ್ತಿಸಿದನು. ೬೪೧ ರಲ್ಲಿ ಹೂಯನತ್ಸಾಂಗ ಪುಲಕೇಶಿಯ ಆಸ್ಥಾನಕ್ಕೆ ಭೇಟಿಕೊಟ್ಟಿದ್ದನು. ಚಾಲುಕ್ಯರ ಕಲೆ ಮತ್ತು ವಾಸ್ತುಶಿಲ್ಪವನ್ನು ಐಹೊಳೆ, ಪಟ್ಟದಕಲ್ಲು, ಬಾದಾಮಿಯಲ್ಲಿ ಕಾಣಬಹುದು. ಐಹೊಳೆಯನ್ನು ಭಾರತೀಯ ದೇವಾಲಯಗಳ ವಾಸ್ತುಶಿಲ್ಪದ ತೊಟ್ಟಿಲು” ಎಂದು ಪೆರ್ಸಿಬ್ರೌನರು ಕರೆದಿದ್ದಾರೆ. ಇವರ ಸೈನ್ಯವನ್ನು “ಕರ್ನಾಟಕ ಬಲ” ಎಂದು ಕರೆಯುತ್ತಿದ್ದರು.

ಚಾಲುಕ್ಯರ ಆಳ್ವಿಕೆಯು ದಕ್ಷಿಣ ಭಾರತದ ಇತಿಹಾಸದಲ್ಲಿ ಒಂದು ಪ್ರಮುಖವಾದ ಮೈಲುಗಲ್ಲಾಗಿದ್ದು ಕರ್ನಾಟಕದ ಇತಿಹಾಸದಲ್ಲಿ ಸುವರ್ಣ ಯುಗವೆಂದು ಇತಿಹಾಸ ತಜ್ಞರು ಪರಿಗಣಿಸಿದ್ದಾರೆ. ಇವರ ಪ್ರಾಬಲ್ಯದಿಂದ ದಕ್ಷಿಣ  ಭಾರತವು ಸಣ್ಣ ರಾಜ್ಯಗಳಿಂದ ದೊಡ್ಡ ಸಾಮ್ರಾಜ್ಯದತ್ತ   ಹೆಜ್ಜೆ ಹಾಕಿತು. ಈ ಸಾಮ್ರಾಜ್ಯದ ಉದಯದೊಂದಿಗೆ ದಕ್ಷ ಆಡಳಿತ,ಸಾಗರೋತ್ತರ ವ್ಯಾಪಾರ ಮತ್ತು ವಾಣಿಜ್ಯ ಹಾಗು  “ಚಾಲುಕ್ಯರ ವಾಸ್ತುಶಿಲ್ಪ” ಎಂಬ ವಾಸ್ತುಶಿಲ್ಪ ಕಲೆಯು ಹುಟ್ಟಿಕೊಂಡಿತು. ಇವರ ಆಳ್ವಿಕೆಯಲ್ಲಿ ಸಂಸ್ಕೃತದೊಂದಿಗೆ ಕನ್ನಡವು ಒಂದು ಪ್ರಮುಖ ಭಾಷೆಯಾಗಿ ಹೊಮ್ಮಿಬಂತು. ದೊರೆತ ಹಲವಾರು ನಾಣ್ಯಗಳಲ್ಲಿ ಕನ್ನಡ ಲಿಪಿಯಿದ್ದು ಕನ್ನಡವು ಈ ಕಾಲದಲ್ಲಿ ವಿಜೃಂಭಿಸಿದ ಸಾಕ್ಷಿಗಳಾಗಿವೆ. ಐಹೊಳೆ ದಾಖಲೆಯ ಪ್ರಕಾರ ಪುಲಕೇಶಿ II ತನ್ನ ಸಾಮ್ರಾಜ್ಯವನ್ನು ೩  ಪ್ರಮುಖ ಪ್ರಾಂತ್ಯಗಳಾಗಿ (ಪ್ರತಿಯೊಂದರಲ್ಲಿ  99,000 ಹಳ್ಳಿಗಳು) ವಿಂಗಡಿಸಿದ್ದನು ಮತ್ತು ಇವು ಈಗಿನ ಕರ್ನಾಟಕ, ಮಹಾರಾಷ್ಟ್ರ ಮತ್ತು ಕರಾವಳಿ ಕೊಂಕಣ್ ಪ್ರದೇಶಗಳೆಂದು ನಂಬಲಾಗಿದೆ.

ಶಾಸನಗಳಲ್ಲಿ ಕನ್ನಡವನ್ನು  “ನೈಸರ್ಗಿಕ ಭಾಷೆ ” ಎಂದು ಪರಿಗಣಿಸಲಾಗಿದ್ದರೂ ಬಹಳಷ್ಟು ದಾಖಲೆಗಳು ಉಳಿದುಕೊಂಡಿಲ್ಲ. ಕಪ್ಪೆ ಆರಬಟ್ಟರ ದಾಖಲೆಯಲ್ಲಿ  ದೊರೆತ ತ್ರಿಪದಿಗಳು(700) ಕನ್ನಡ ಕಾವ್ಯಮೀಮಾಂಸೆಯಲ್ಲಿ ಮೊದಲಿನದು ಎಂದು ಪರಿಗಣಿಸಲಾಗಿದೆ. ಪಶ್ಚಿಮ ಚಾಲುಕ್ಯರ ಕಾಲದ ಪ್ರಮುಖ ಪಂಡಿತ ವಿಜ್ಞಾನೇಶ್ವರ ಮಿತಾಕ್ಷರ, (ಹಿಂದು ಕಾನೂನಿನ ಪುಸ್ತಕ) ಮತ್ತು ಸೋಮೇಶ್ವರ ೩, ಎಲ್ಲಾ ಕಲೆ ಮತ್ತು ವಿಜ್ಞಾನಗಳ ಸಂಕಲನ, ಮಾನಸೋಲ್ಲಾಸ ಎಂಬ ವಿಶ್ವಕೋಶ ಬರೆದು ಖ್ಯಾತಿಯನ್ನು ಪಡೆದರು. ಪಶ್ಚಿಮ ಮತ್ತು ಪೂರ್ವ ಚಾಲುಕ್ಯರ ಆಳ್ವಿಕೆಯು ಕನ್ನಡ ಮತ್ತು ತೆಲುಗು ಸಾಹಿತ್ಯದ ಪ್ರಮುಖ ಘಟ್ಟವೆಂದು ನಂಬಲಾಗಿದೆ. ೯ ಮತ್ತು ೧೦ ನೆ ಶತಮಾನದ ಹೊತ್ತಿಗೆ ಕನ್ನಡ ಭಾಷೆಯು ಹಲವಾರು ಪ್ರಮುಖ ಬರಹಗಾರರನ್ನು ಕಂಡಿತ್ತು ಮತ್ತು ಕನ್ನಡದ ಮೂರು ರತ್ನಗಳಾದ ಆದಿಕವಿ ಪಂಪ, ಪೊನ್ನ ಮತ್ತು ರನ್ನ ಈ ಅವಧಿಯವರಾಗಿದ್ದರು.

ಗಂಗರು

ಗಂಗರು ಸುಮಾರು ೪ನೇ ಶತಮಾನದಿಂದ ೧೦ನೇ ಶತಮಾನದವರೆಗೆ ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡಿನ ಉತ್ತರಭಾಗಗಳನ್ನು ಆಳಿದ ಒಂದು ರಾಜಮನೆತನ. ಇವರ ಸಮಕಾಲೀನರಾದ ಚಾಲುಕ್ಯ, ರಾಷ್ಟ್ರಕೂಟರಷ್ಟು ಪ್ರಬಲರಲ್ಲದಿದ್ದರೂ ಅವರೊಂದಿಗೆ ಸಂಬಂಧಗಳನ್ನು ಬೆಳಸಿ ಸ್ವತಂತ್ರರಾಗಿ ಆಳ್ವಿಕೆ ನಡೆಸಿದರು. ಗಂಗರ ರಾಜಧಾನಿ ಮೊದಲು ಕುವಲಾಳದಲ್ಲಿದ್ದಿತು (ಇಂದಿನ ಕೋಲಾರ). ೮ನೆಯ ಶತಮಾನದ ದೊರೆ ಶ್ರೀಪುರುಷ ತಲಕಾಡಿನಿಂದ ಆಳಲು ತೊಡಗಿದನು. ಇದಲ್ಲದೆ ಮಾನ್ಯಪುರದಲ್ಲಿ (ಇಂದಿನ ನೆಲಮಂಗಲ ತಾಲೂಕಿನ ಮಣ್ಣೆ) ರಾಜನಿವಾಸ ಏರ್ಪಟ್ಟಿತ್ತು. ನಂದಿಬೆಟ್ಟ ಗಂಗರಾಜ್ಯದಲ್ಲಿದ್ದ ಪ್ರಮುಖ ಗಿರಿದುರ್ಗ. ಗಂಗರ ಮನೆತನದ ಮೊದಲ ಅರಸನಾದ ಕೊಂಗಣಿವರ್ಮ ಮಾಧವನು ಕೋಲಾರವನ್ನು ತನ್ನ ಮೊದಲ ರಾಜಧಾನಿಯಾಗಿ ಮಾಡಿ ೨೦ ವರುಷ ರಾಜ್ಯವನ್ನು ಆಳಿದನು. ಅವರ ನಿಯಂತ್ರಣದಲ್ಲಿದ್ದ ಪ್ರದೇಶವನ್ನು ಗಂಗಾವತಿ ಎಂದು ಕರೆಯಲಾಗಿದ್ದು ಈಗಿನ ಮೈಸೂರು, ಹಾಸನ, ಚಾಮರಾಜನಗರ, ತುಮಕೂರು, ಕೋಲಾರ, ಮಂಡ್ಯ ಹಾಗು ಬೆಂಗಳೂರನ್ನು ಆವರಿಸಿತ್ತು. ಗಂಗರು ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಕೆಲ ಪ್ರದೇಶಗಳಿಗೆ ರಾಜ್ಯವನ್ನು ವಿಸ್ತರಿಸಿದ್ದರು.

ಹರಿವರ್ಮನು (ಕ್ರಿ.ಶ 390) ತಲಕಾಡನ್ನು ರಾಜಧಾನಿಯಾಗಿ ಮಾಡಿದನು. ಗಂಗರ ಪ್ರಸಿದ್ದ ಅರಸ ದುರ್ವಿನಿತ (555-605) ಸಂಗೀತ, ನೃತ್ಯ, ಆಯುರ್ವೇದ ಮತ್ತು ಆನೆಗಳ ಪಳಗಿಸುವಿಕೆಯಲ್ಲಿ ಪಾರಂಗತನಾಗಿದ್ದನು. ಬುದ್ಧಿವಂತಿಕೆ ಮತ್ತು ಸಮಾನತೆಗೆ ಹೆಸರುವಾಸಿಯಾದ ಯುಧಿಷ್ಠಿರ ಮತ್ತು ಮನು ಚಕ್ರವರ್ತಿಗಳಿಗೆ ಇವರನ್ನು ಹೋಲಿಸಿ ಕಾವ್ಯಗಳನ್ನು ರಚಿಸಿದ್ದಾರೆ. ಇವರಿಗೆ ಅಹೀತ ಅನೀತ, ಧರ್ಮ ಮಹಾರಾಜಾಧಿರಾಜ, ಅವನೀತಸಾರ ಪ್ರಜಾಲಯ, ಕಮಲೋಧರ ಎಂಬ ಬಿರುದುಗಳಿದ್ದವು. ತಲಕಾಡಿನ ಗಂಗರ ಆಡಳಿತವು ಅರ್ಥಶಾಸ್ತ್ರದ ತತ್ವಗಳಿಂದ ಪ್ರಭಾವಿತವಾಗಿದ್ದು ರಾಜ್ಯವನ್ನು ರಾಷ್ಟ್ರ, ವಿಷಯ (1000 ಹಳ್ಳಿಗಳಿಂದ ಕೂಡಿದ್ದು) ಮತ್ತು ದೇಶ ವಾಗಿ ವಿಂಗಡಿಸಲಾಗಿತ್ತು. ೮ ನೆ ಶತಮಾನದಲ್ಲಿ ಸಂಸ್ಕೃತದ “ವಿಷಯ” ಪದವನ್ನು ಕನ್ನಡದ “ನಾಡು” ಪದಕ್ಕೆ ಬದಲಿಸಲಾಯಿತು.ಶಾಸನಗಳು ಪ್ರಮುಖ ಆಡಳಿತ ಅಂಕಿತಗಳಾದ  ಸರ್ವಾಧಿಕಾರಿ, ಶ್ರೀಭಂಡಾರಿ, ಸಂಧಿವಿರ್ಗ್ರಹಿ, ಮಹಾಪ್ರಧಾನ ಮತ್ತು ದಂಡನಾಯಕ ಬಗೆಗೆ ಬೆಳಕು ಚೆಲ್ಲುತ್ತವೆ.

ತಲಕಾಡಿನ ಗಂಗರು ಅವರ ಕಾಲದ ಎಲ್ಲ ಪ್ರಮುಖ ಧರ್ಮಗಳಿಗೆ (ಜೈನ ಧರ್ಮ, ಹಿಂದೂ ಪಂಥಗಳಾದ ಶೈವ, ವೈದಿಕ ಬ್ರಾಹ್ಮಣ, ಶೈವ) ಪ್ರೋತ್ಸಾಹ ನೀಡಿದರು. ಜೈನ ಧರ್ಮವು ೮ ನೆ ಶತಮಾನದಲ್ಲಿ ರಾಜ ಶಿವಮಾರ-೧ ನ ಆಳ್ವಿಕೆಯಲ್ಲಿ ಬಹಳ ಪ್ರಸಿದ್ದಿ ಗಳಿಸಿದ್ದು ರಾಜನು ಅಸಂಖ್ಯಾತ ಜೈನ ಬಸದಿಗಳನ್ನು ಕಟ್ಟಿಸಿರುವುದಕ್ಕೆ ಸಾಕ್ಷಿಯಾಗಿದೆ. ಮಹಾರಾಜ ೨ನೇ ಬುಟುಗ ಮತ್ತು ಚಾವುಂಡರಾಯರು ಕಟ್ಟಾ ಜೈನರು ಎಂದೆನ್ನಲು ಅವರು ಕಟ್ಟಿಸಿದ ಗೊಮ್ಮಟೇಶ್ವರ  ಏಕಶಿಲೆಯೇ ಸಾಕ್ಷಿ. ಈ ಸಾಮ್ರಾಜ್ಯದ ಆರಂಭಿಕ ಬರಹಗಾರ ರಾಜ ದುರ್ವಿನಿತ ಎಂದು ಕವಿರಾಜಮಾರ್ಗ (ಕ್ರಿ.ಶ 850) ಹೇಳುತ್ತದೆ.  ಚಾವುಂಡರಾಯರು ಕನ್ನಡದ ಮಹಾ ಕವಿ “ರನ್ನ” ನನ್ನು  ಆರಂಭಿಕ ಸಾಹಿತ್ಯದ ದಿನಗಳಲ್ಲಿ  ಪೋಷಿಸಿದರು. ಗಜಾಷ್ಟಕ (ಆನೆಗಳು ಕುರಿತು ನೂರು ಪದ್ಯಗಳು), ಕನ್ನಡದಲ್ಲಿ ಆನೆ ನಿರ್ವಹಣೆಗಳ ಕುರಿತಾದ ಅಪರೂಪದ ಒಂದು ಪುಸ್ತಕವಾಗಿದ್ದು  (ರಾಜ ಶಿವಮಾರ -೨ ಕ್ರಿ.ಶ 800 ಬರೆದ ಪುಸ್ತಕ ) ಈಗ ಕಳೆದುಹೋಗಿದೆ ಎಂದು ನಂಬಲಾಗಿದೆ.

ಕದಂಬ

ಕದಂಬ ಸಾಮ್ರಾಜ್ಯವನ್ನು ಕಂಚಿಯ ಪಲ್ಲವರನ್ನು ಸೋಲಿಸುವುದರೊಂದಿಗೆ ಮಯೂರವರ್ಮನು ಕ್ರಿ.ಶ ೩೪೫ ಸ್ಥಾಪಿಸಿದನು. ಬನವಾಸಿ ಇವರ ರಾಜಧಾನಿ. ಕಾಕುಸ್ಥವರ್ಮನ ಆಳ್ವಿಕೆಯಲ್ಲಿ ಕದಂಬರ ಕೀರ್ತಿಯು ಉತ್ತುಂಗಕ್ಕೆ ಏರಿತಲ್ಲದೆ ರಾಜನ ಮಿತ್ರತ್ವ ಬಯಸಿ ಉತ್ತರ ಭಾರತದ ಪ್ರಭಲ ದೊರೆಗಳಾದ ಗುಪ್ತರು ಮದುವೆ ಸಂಬಂಧಳನ್ನು ಬೆಳೆಸಿದ್ದರು. ಕದಂಬ ಕುಲಭೂಷಣ, ಕದಂಬ ಅನರ್ಘ್ಯರತ್ನ, ಧರ್ಮರಾಜ, ಧರ್ಮಗಜರಾಜ ಬಿರುದುಗಳನ್ನು ಗಳಿಸಿದ್ದನು . ಕದಂಬ ಇತಿಹಾಸವನ್ನು ಸಂಸ್ಕೃತ ಮತ್ತು ಕನ್ನಡ ಕೃತಿಗಳಲ್ಲಿ ಕಾಣಬಹುದು. ತಾಳಗುಂದ, ಗುಂಡನುರ್, ಚಂದ್ರವಳ್ಳಿ, ಹಲಸಿ ಮತ್ತು ಹಲ್ಮಿಡಿ ಶಾಸನಗಳು ಈ ರಾಜಮನೆತನದ ಬಗ್ಗೆ ಬೆಳಕು ಚೆಲ್ಲುತ್ತವೆ.

ಕನ್ನಡವನ್ನು ಆಡಳಿತಾತ್ಮಕ ಭಾಷೆಯಾಗಿ ಉಪಯೋಗಿಸಿದ ಮೊದಲ ರಾಜರು ಕದಂಬರೆನ್ನಲು ದೊರಕಿದ ಹಲವಾರು ನಾಣ್ಯಗಳೇ ಸಾಕ್ಷಿ. ಸತಾರ ಜಿಲ್ಲೆಯಲ್ಲಿ ದೊರಕಿದ ನಾಣ್ಯದಲ್ಲಿ ವೀರ ಮತ್ತು ಸ್ಕಂಧ ಲಿಪಿಗಳಿದ್ದು ಭಗೀರತ ರಾಜನ ಬಂಗಾರದ ನಾಣ್ಯದಲ್ಲಿ ಶ್ರೀ ಮತ್ತು ಭಾಗಿ ಲಿಪಿಗಳನ್ನು ಕಾಣಬಹುದಾಗಿದೆ. ಇತ್ತೀಚೆಗೆ ದೊರಕಿದ ೫ ನೆ ಶತಮಾನದ ತಾಮ್ರದ ನಾಣ್ಯದಲ್ಲಿ ಕನ್ನಡ ಲಿಪಿಯನ್ನು ನೋಡಬಹುದಾಗಿದೆ. ಕಾಕುತ್ಸವರ್ಮನ ಆಳ್ವಿಕೆಯ ಸಮಯದಲ್ಲಿ  ಹಲ್ಮಿಡಿಯಲ್ಲಿ ದೊರೆತ (ಕ್ರಿ.ಶ ೪೫೦) ಕಲ್ಲಿನ ಬರಹವನ್ನು ಕನ್ನಡದ ಮೊಟ್ಟ ಮೊದಲನೆಯ ಶಾಸನವೆಂದು ಪರಿಗಣಿಸಲಾಗಿದೆ.

ಕದಂಬ ಶಿಖರ (ಗೋಪುರಾಕೃತಿಯ ಕಟ್ಟಡದಲ್ಲಿ ಮೆಟ್ಟಿಲುಗಳೊಂದಿಗೆ ಏರುತ್ತ ಕಲಶವನ್ನು ಮೇಲೆ ಹೊಂದಿರುತ್ತದೆ) ಇವರ ವಾಸ್ತು ವೈಶಿಷ್ಟ್ಯ.  ಇಂತಹ ಶಿಖರಗಳನ್ನು ದೊಡ್ದಗದ್ದವಲ್ಲಿ ಹೊಯ್ಸಳ ಮತ್ತು ಹಂಪಿಯ ಮಹಾಕೂಟ ದೇವಸ್ಥಾನಗಳಲ್ಲಿ ಕಾಣಬಹುದು. ಹತ್ತನೇ ಶತಮಾನದಲ್ಲಿ ಕಟ್ಟಿಸಿದ ಶಿವನ ದೇವಸ್ಥಾನ (ಮಧುಕೇಶ್ವರ) ಬನವಾಸಿಯಲ್ಲಿ ಇಂದಿಗೂ ಇದೆ. ಅತ್ಯದ್ಭುತ ಕೆತ್ತನೆಗಳುಳ್ಳ ಕಲ್ಲಿನ ಮಂಚ ಪ್ರವಾಸಿಗರ ಪ್ರಮುಖ ಆಕರ್ಷಣೆಗಳಲ್ಲೊಂದಾಗಿದೆ. ಕದಂಬ ಸಾಮ್ರಾಜ್ಯಕ್ಕೆ ಗೌರವವನ್ನು ಸೂಚಿಸುತ್ತ ಕರ್ನಾಟಕ ಸರ್ಕಾರವು ಪ್ರತಿ ವರ್ಷವು  ಕದಂಬೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತದೆ. ಕದಂಬ ಸಾಮ್ರಾಜ್ಯದ ನೆನಪಿನ ಪ್ರಯುಕ್ತ ಕಾರವಾರದಲ್ಲಿ ಭಾರತದ ಅತ್ಯಂತ ಮುಂದುವರೆದ ಸೇನಾ ನೌಕ ತುಕಡಿಯನ್ನು INS Kadamba ವೆಂದು ಹೆಸರಿಸಿ ೩೧ ನೆ ಮೇ ೨೦೦೫ ರಲ್ಲಿ ಅಂದಿನ ಭಾರತದ ರಕ್ಷಣಾ ಮಂತ್ರಿ ಪ್ರಣಬ್ ಮುಖರ್ಜಿ ಉದ್ಘಾಟಿಸಿದರು.

ಬಿಜಾಪುರದ ಆದಿಲ್ ಶಾಹಿಗಳು

ಬಿಜಾಪುರದ ಆದಿಲ್ ಶಾಹಿಗಳು (೧೪೮೯ – ೧೬೮೬): ಆದಿಲ್ ಶಾಹಿ ಸಾಮ್ರಾಜ್ಯದ ಸ್ಥಾಪಕ, ಯೂಸುಫ್ ಆದಿಲ್ ಶಾಹಿ, ಪ್ರಾಯಶಃ ಬಹಮನಿ ಮೂಲದವರು. ಯೂಸುಫ್ ಒಬ್ಬ ಸಾಂಸ್ಕೃತಿಕ ವ್ಯಕ್ತಿ. ಅವರು ಕವಿಗಳನ್ನು  ಮತ್ತು ಕುಶಲಕರ್ಮಿಗಳನ್ನು ಪರ್ಷಿಯಾ, ಟರ್ಕಿ, ಮತ್ತು ರೋಮ್ ನಿಂದ ಆಹ್ವಾನಿಸಿದ್ದರು. ಇಬ್ರಾಹಿಂ-೨  ತನ್ನ ಶೌರ್ಯ, ಗುಪ್ತಚರ ಮತ್ತು ಹಿಂದೂ ಸಂಗೀತ ಮತ್ತು ತತ್ವಶಾಸ್ತ್ರದ ಕಡೆಗಿನ ಒಲವಿಗೆ ಹೆಸರುವಾಸಿಯಾಗಿದ್ದ. ಇವರ  ಆಶ್ರಯದಲ್ಲಿ ಬಿಜಾಪುರ ಚಿತ್ರಕಲೆ ಶಾಲೆಯು  ಉತ್ತುಂಗ ತಲುಪಿತು. ಮುಹಮ್ಮದ್ ಆದಿಲ್ ಷಾ ಅವರು ತಂದೆ ಇಬ್ರಾಹಿಂ-೨ ನಂತರ ಆಳ್ವಿಕೆಗೆ ಬಂದರು. ಅವರು ಬಿಜಾಪುರದ  ಭವ್ಯ ರಚನೆ, ಗೋಲ್ ಗುಂಬಜ್ , ವಿಶ್ವದ ಅತಿದೊಡ್ಡ ಗುಮ್ಮಟ( ಇದರಲ್ಲಿ ಪ್ರತಿಯೊಂದು ಸಣ್ಣ ಪಿಸುಮಾತು ೭ ಸರಿ ಪ್ರತಿದ್ವನಿಸುತ್ತದೆ)   ಕಟ್ಟಿಸಿ  ಪ್ರಸಿದ್ಧರಾಗಿದ್ದಾರೆ.

ಬಿಜಾಪುರದ ಸೂಫಿ ಗಳನ್ನು ೩ ಗುಂಪುಗಳಲ್ಲಿ ವಿಂಗಡಿಸಬಹುದು. ಒಂದು ಬಹಮನಿ ಸಾಮ್ರಾಜ್ಯದವರು, ಎರಡು ಆದಿಲ್ ಶಾಹಿ ಸಮಯದವರು ಮತ್ತು ಮೂರು ಆದಿಲ್ ಶಾಹಿ ಸಾಮ್ರಾಜ್ಯದ ನಂತರದವರು. ಇನ್ನೊಂದು ವಿಂಗಡಣೆಯ ಪ್ರಕಾರ ಸಮಾಜ ಯೋಧರು, ಸುಧಾರಕರು, ವಿದ್ವಾಂಸರು, ಕವಿಗಳು ಮತ್ತು ಬರಹಗಾರ ಸೂಫಿ ಪಂಥಪಾಲಕರೆಂದೆನ್ನಬಹುದು.

ಬಿಜಾಪುರ ಭಾರತದ ಹೆಸರಾಂತ ನಗರಗಳಲ್ಲಿ ಒಂದು ಪ್ರಮುಖ ಸ್ಥಾನವನ್ನು ಗಳಿಸಿ ಸಂಸ್ಕೃತಿ, ವ್ಯಾಪಾರ ಮತ್ತು ವಾಣಿಜ್ಯ, ಶಿಕ್ಷಣ ಮತ್ತು ಕಲಿಕೆ ಇತ್ಯಾದಿಗಳಿಗೆ  ಒಂದು ದೊಡ್ಡ ಕೇಂದ್ರವಾಗಿತ್ತು. ಇವರ ಸಂಸ್ಕೃತಿಯನ್ನು ಬಿಜಾಪುರ ಸಂಸ್ಕೃತಿ ಎನ್ನಲಾಗಿದ್ದು ಹಲವು ವಿಷಯಗಳಲ್ಲಿ ದಿಲ್ಲಿ ಮತ್ತು ಆಗ್ರ ವನ್ನು ಮೀರಿಸಿತ್ತು. ಇವರ ಜಾತ್ಯತೀತ ಪ್ರಕೃತಿ ಮತ್ತು ಉದಾರ ಪ್ರಾಯೋಜಕತ್ವ ದಿಂದಾಗಿ ವಿದ್ವಾಂಸರು, ಕವಿಗಳು, ಚಿತ್ರಕಾರರು, ನೃತ್ಯಗಾರರು, ಬರಹಗಾರರು, ಸಂಗೀತಗಾರರು, ಸೂಫಿ ಸಂತರು ಇತರ ಕಲೆಗಾರರು ಬಿಜಾಪುರಕ್ಕೆ ವಲಸೆ ಬಂದರು.

ಆದಿಲ್ ಶಾಹಿ ಸುಲ್ತಾನರು ಬಿಜಾಪುರದ ಜನರಿಗೆ ಮತ್ತು ಉಪನಗರಗಳಲ್ಲಿ ಶುದ್ಧ ಮತ್ತು ಆರೋಗ್ಯಕರ ನೀರಿನ ವಿಸ್ತಾರವಾದ ವ್ಯವಸ್ಥೆ ಮಾಡಿದರು. ತೋರ್ವಿಯಲ್ಲಿ  ಒಂದು ಕಲ್ಲಿನ ಅಣೆಕಟ್ಟು ನಿರ್ಮಿಸಲಾಯಿತು. ತೋರ್ವಿ ಕಾಲುವೆ ಆದಿಲ್ ಶಾಹಿಗಳ  ಅತ್ಯಂತ ವಿಶ್ವಾಸಾರ್ಹ ಎಂಜಿನಿಯರಿಂಗ್ ಸಾಧನೆಯಾಗಿದೆ ಎಂದು ನಂಬಲಾಗಿದೆ. ನಗರದಲ್ಲಿನ  ಪ್ರಸ್ತುತ ನೀರು ಸರಬರಾಜನ್ನು ವೃದ್ಧಿಸಲುಮುಹಮ್ಮದ್ ಆದಿಲ್ ಶಾಹ ನವರು ಬಿಜಾಪುರದ ದಕ್ಷಿಣ ಭಾಗದಲ್ಲಿ ಬೇಗಂ ತಾಲಾಬ್ ನಿರ್ಮಿಸಿದರು. ೧೮೧೯ ರಲ್ಲಿ ಬಿಜಪುರಕ್ಕೆ ಭೇಟಿ ಕೊಟ್ಟ ಕ್ಯಾಪ್ಟನ್ ಸೈಕ್ಸ್ ನವರು ಬಿಜಾಪುರದಲ್ಲಿ ೭೦೦ ಮೆಟ್ಟಿಲಿರುವಂತ ಮತ್ತು ೩೦೦ ಮೆಟ್ಟಿಲಿಲ್ಲದ ಬಾವಿಗಳಿದ್ದ ಬಗ್ಗೆ ದಾಖಲಿಸಿದ್ದಾರೆ. ರಂಗರೆಜ್ ತಾಲಾಬ್, ಖಾಸಿಂ ತಾಲಾಬ್, ಫತೆಹಪುರ್ ತಾಲಾಬ್ ಮತ್ತು ಅಲ್ಲಾಹಪುರ್ ತಾಲಾಬಿನ ಅವಶೇಷಗಳನ್ನು ಬಿಜಾಪುರದ ಸುತ್ತಮುತ್ತಲು ಕಾಣಬಹುದಾಗಿದೆ.

ಮುಸಲ್ಮಾನರ  ಆಳ್ವಿಕೆಯ ಮೊದಲು ಬಿಜಾಪುರವು ದಕ್ಷಿಣ ಭಾರತದ ಕಲಿಕೆಯ ಭವ್ಯ ಕೇಂದ್ರವಾಗಿತ್ತು. ದ್ವಿಭಾಷಾ ಮರಾಠಿ ಸಂಸ್ಕೃತ ಶಾಸನ ಕರೀಮುದ್ದೀನ್  ಮಸೀದಿಯ ಪರ್ಷಿಯನ್  ಕೆತ್ತನೆಯಿಂದ ತಿಳಿದುಬಂದ ವಿಚಾರವೆಂದರೆ ಬಿಜಾಪುರಕ್ಕೆ ದಕ್ಷಿಣ ಭಾರತದ ಬನರಾಸ್ ಎಂದು ಬಿರುದನ್ನು ನೀಡಲಾಗಿತ್ತೆಂದು ತಿಳಿದು  ಬರುತ್ತದೆ. ಬಿಜಾಪುರದ ಖೈಜಿ ರಾಜ್ಯಪಾಲ ಮಲ್ಲಿಕ್ ಕರಿಮುದ್ದಿನ್ ರು ದಕ್ಷಿಣ ಭಾರತದ ಬನಾರಸ್ ಎಂದು ನಾಮಕರಣ ಮಾಡಿದರು. ಅಲ್ಲದೆ ವಿಶ್ವದಲ್ಲಿನ ಇಸ್ಲಾಮಿಕ್  ತಾರ್ಕಿಕ ಚಟುವಟಿಕೆಗಳಿಂದಾಗಿ ಇದನ್ನು ಎರಡನೆಯ ಬಾಗ್ದಾದೆಂದು ಕರೆಯಲಾಗಿತ್ತು. ಇಬ್ರಾಹಿಂ ಆದಿಲ್ ಶಾಹ್- ೨ ಇದರ ಪ್ರಖ್ಯಾತಿಯನ್ನು ಕಂಡು ವಿದ್ಯಾಪುರವೆಂದು ಕರೆದರು. ಅಲಿ ಆದಿಲ್ ಷಾ-೧  ಧರ್ಮ, ತರ್ಕ, ವಿಜ್ಞಾನ, ವಾಕ್ಯರಚನೆ, ವ್ಯುತ್ಪತ್ತಿ ಮತ್ತು ವ್ಯಾಕರಣ ಪಾರಂಗತರಾಗಿದ್ದರು. ಅವರಿಗೆ ಓದುವುದು ಎಷ್ಟು ಇಷ್ಟೆಂದರೆ ಪ್ರಯಾಣದಲ್ಲಿ ಕೂಡ ಪುಸ್ತಗಳನ್ನು ಕೊಂಡೊಯುತ್ತಿದ್ದರು. ಮಸೀದಿಗಳು ಮಕ್ತಬ್ಸ್ (ಪ್ರಾಥಮಿಕ ಶಾಲೆಗಳು)ನ್ನು  ಹೊಂದಿದ್ದು ಅಲ್ಲಿ ಅರೇಬಿಕ್ ಮತ್ತು ಪರ್ಷಿಯನ್ ಅಧ್ಯಯನಗಳು ಕಲಿಸಲಾಗುತ್ತಿತ್ತು. ರಾಜ್ಯವು ಪುಸ್ತಕಗಳನ್ನು ಉಚಿತವಾಗಿ ನೀಡುತ್ತಿತ್ತು. ರಾಜ್ಯದ ಪ್ರಾಯೋಜಕತ್ವ ಪರಿಣಾಮವಾಗಿ, ಅರೇಬಿಕ್, ಪರ್ಷಿಯನ್ ಮತ್ತು ದಖಾಣಿ ಉರ್ದು ಸಾಹಿತ್ಯಗಳು ಬೆಳೆದುಕೊಂಡವಲ್ಲದೆ ಜೊತೆಗೆ, ಸಂಸ್ಕೃತ, ಮರಾಠಿ ಮತ್ತು ಕನ್ನಡ ಭಾಷೆಗಳು ಏಳಿಗೆ ಕಂಡವು. ಪಂಡಿತ್ ನರಹರಿ , ಇಬ್ರಾಹಿಂ ಆದಿಲ್ ಷಾ-೨ ನ ನ್ಯಾಯಾಲಯದ ಕವಿ , ತನ್ನ ರಾಜನ ಕುರಿತು ಕಾವ್ಯದ ಶ್ರೇಷ್ಠತೆಯೆಂದು ಪರಿಗಣಿಸಲಾಗಿರುವ   ‘ನೌರಸ್ ಮನ್ ಜ್ಯರ್ಫ್ ‘ ಸಂಯೋಜಿಸಿದರು.

ರಾಜ್ಯದಲ್ಲಿನ ವೈದ್ಯರು ಯುನಾನಿ, ಆಯುರ್ವೇದ,ಇರಾನಿ ಮತ್ತು ಯುರೋಪಿಯನ್ ಔಷಧ ವ್ಯವಸ್ಥೆಗಳನ್ನು ಉಪಯೋಗಿಸುತ್ತಿದರು.ಮಹಾನ್ ಇತಿಹಾಸಕಾರ ಫರಿಶ್ತಾ ಪರಿಣಿತ ಆಯುರ್ವೇದಿಕ್ ವೈದ್ಯರಾಗಿದ್ದರು. ಅವರು, ಸಂಸ್ಕೃತ  ಜ್ಞಾನ ಹೊಂದಿದ್ದರಿಂದ ಅನೇಕ ಆಯುರ್ವೇದ ಪುಸ್ತಕಗಳನ್ನು ಅಧ್ಯಯನ  ಮಾಡಿದ್ದರು.

ಸಂಗೀತ ಇಬ್ರಾಹಿಂ ಆದಿಲ್ ಷಾ-೨ ಅಡಿಯಲ್ಲಿ ಹೆಚ್ಚಿನ ಉತ್ತೇಜನ ಪಡೆಯಿತು. ಖುದ್ದು ಅವರೇ ಆ  ಸಮಯದ ಮಹಾನ್ ಸಂಗೀತಗಾರರಾಗಿದ್ದರು.ಅವರು ಕವಿ,  ಹಾಡುಗಾರ ಮತ್ತು ಸಂಗೀತಗಾರರ ದೊಡ್ಡ ಸಂಖ್ಯೆಯ ಗುಂಪುಗಳನ್ನು (ಲಷ್ಕರ್-ಎ-ನೌರಸ್) ಪೋಷಿಸುತ್ತಿದ್ದರು. ಹಲವಾರು ವರ್ಣಚಿತ್ರಗಳಲ್ಲಿ  ಇಬ್ರಾಹಿಂ ಆದಿಲ್ ಷಾ -೨ ಅವರನ್ನು ” ತಂಬೂರಿ ”,” ಸಿತಾರ್”,” ವೀಣಾ” ಮತ್ತು” ಗಿಟಾರ್” ಗಳನ್ನೂ ನುಡಿಸುತ್ತಿರುವಂತೆ  ಚಿತ್ರಿಸಲಾಗಿದೆ.

ವಿಜಯನಗರ ಸಾಮ್ರಾಜ್ಯ

ವಿಜಯನಗರ ಸಾಮ್ರಾಜ್ಯ (೧೩೩೬-೧೬೪೬): ವಿಜಯನಗರ ಸಾಮ್ರಾಜ್ಯ ೧೩೩೬ ರಲ್ಲಿ ಹಕ್ಕ (ನಂತರ ಹರಿಹರ) ಮತ್ತು ಬುಕ್ಕ (ನಂತರ ಬುಕ್ಕ ರಾಯ) ಎಂಬ ಅಣ್ಣತಮ್ಮಂದಿರಿಂದ ಸ್ಥಾಪಿಸಲ್ಪಟ್ಟಿತ್ತು. ಈ ಸಾಮ್ರಾಜ್ಯದ ಹೆಸರು  ಅದರ ರಾಜಧಾನಿ ವಿಜಯನಗರದಿಂದ ಬಂದಿದ್ದು ಅವಶೇಷಗಳನ್ನು ಇಂದಿನ ಹಂಪಿಯಲ್ಲಿ (ಭಾರತದಲ್ಲಿನ  ಒಂದು ವಿಶ್ವ ಪರಂಪರೆಯ ತಾಣ ) ಕಾಣಬಹುದಾಗಿದೆ. ಸಾಮ್ರಾಜ್ಯ ಸ್ಥಾಪಿಸಿದ  ನಂತರದ  ಮೊದಲ ಎರಡು ದಶಕಗಳಲ್ಲಿ, ಹರಿಹರ ತುಂಗಭದ್ರ ನದಿ ಪ್ರದೇಶದ ದಕ್ಷಿಣ ತುದಿಯವರೆಗು  ನಿಯಂತ್ರಣ ಪಡೆದಿದ್ದುದರಿಂದ ಅವರನ್ನು ಪೂರ್ವಪಶ್ಚಿಮ ಸಮುದ್ರಾದೇಶ್ವರ ಎಂದು ಕರೆಯುತ್ತಿದ್ದರು. ವಿಜಯನಗರ ಸಾಮ್ರಾಜ್ಯದ ಚಕ್ರಾಧಿಪತ್ಯದೊಂದಿಗೆ ಹರಿಹರ-೨ ಕೃಷ್ಣ ನದಿಯನ್ನು  ಮೀರಿ ರಾಜ್ಯವನ್ನು ವಿಸ್ತರಿಸಿ ಸಂಪೂರ್ಣ ದಕ್ಷಿಣ ಭಾರತವನ್ನು ವಿಜಯನಗರದ ಆಳ್ವಿಕೆಗೆ ಒಳಪಡಿಸಿದರು.

ವಿಜಯನಗರದ ಸೈನ್ಯವು ಸ್ಥಿರವಾಗಿ ವಿಜಯವನ್ನು ಸಾಧಿಸುತ್ತಾ  ಕೃಷ್ಣದೇವರಾಯರ ಆಳ್ವಿಕೆಯಲ್ಲಿ  ಉತ್ತುಂಗವನ್ನು  ತಲುಪಿತು. ಸುಲ್ತಾನರ ಆಳ್ವಿಕೆಯಲ್ಲಿ ಇದ್ದ ಪ್ರಾಂತ್ಯಗಳನ್ನು ಮರುವಶಪಡಿಸಿಕೊಂಡರಲ್ಲದೆ (ಕಳಿಂಗ ಪ್ರಾಂತ್ಯವನ್ನು ಕೂಡ) ದಕ್ಷಿಣದಲ್ಲಿ ಅವರ ಅಧೀನದಲ್ಲಿದ್ದವರ ಮೇಲೆ ನಿಯಂತ್ರಣ ಕಾಪಾಡಿಕೊಂಡು ಬಂದರು. ೧೫೬೫ ರಲ್ಲಿ ನಡೆದ ತಾಳಿಕೋಟೆಯಲ್ಲಿ ನಡೆದ ಕದನದಲ್ಲಿ ಬಹುಮನಿ ಸುಲ್ತಾನರ ಕೈ ಮೇಲಾಯಿತು. ವಿಜಯನಗರದ ರಾಮರಾಯ ಸೋತನು

ಸುಲ್ತಾನರ ಸೈನ್ಯವು ಕೊನೆಯಲ್ಲಿ ಹಂಪಿಯನ್ನು ಲೂಟಿ ಮಾಡಿ ಎಷ್ಟು ಧ್ವಂಸ ಮಾಡಿದರೆಂದರೆ ಇದು ಮತ್ತೆ ವಾಸಮಾಡಲು ಯೋಗ್ಯವಾಗಿ ಉಳಿಯಲಿಲ್ಲ. ತಿರುಮಲದೇವರಾಯ (ರಾಮರಾಯರ ತಮ್ಮ), ಬದುಕುಳಿದ ಏಕೈಕ ನಾಯಕ, ವಿಜಯನಗರವನ್ನು ಬಿಟ್ಟು ಪೆನುಕೊಂಡಕ್ಕೆ ತೆರಳುವಾಗ ೧೫೦೦ ಆನೆಗಳ ಮೇಲೆ ಅಪಾರ ಸಂಪತ್ತನ್ನು ಹೊತ್ತುಕೊಂಡು ಹೋದರು.

ವಿಜಯನಗರ ಸಾಮ್ರಾಜ್ಯದ ರಾಜರು ತಮ್ಮ ಹಿಂದಿನ ರಾಜರುಗಳಾದ ಹೊಯ್ಸಳ, ಕಾಕತೀಯ, ಪಾಂಡ್ಯರಿಂದ ಅಭಿವೃದ್ದಿ ಪಡಿಸಿದ ಆಡಳಿತಾತ್ಮಕ ವಿಧಾನಗಳನ್ನು ಅನುಸರಿಸಿ ಅಲ್ಲಲ್ಲಿ ತಮಗೆ ಹೊಂದುವಂತೆ ಬದಲಾವಣೆಗಳನ್ನು ಮಾಡಿಕೊಂಡರು. ರಾಜನು ಸರ್ವಾಧಿಕಾರಿಯಾಗಿದ್ದು ಅವರಿಗೆ ನೆರವಾಗಲು ಪ್ರಧಾನರು ಮತ್ತು ಮಹಾಪ್ರಧಾನರಿದ್ದರು. ಇತರ ಪ್ರಮುಖರೆಂದರೆ ಕಾರ್ಯಕರ್ತ ಅಥವ ರಾಯಸ್ವಾಮಿ ಮತ್ತು ಅಧಿಕಾರಿಗಳು. ಸಾಮ್ರಾಜ್ಯವನ್ನು ೫ ರಾಜ್ಯಗಳಾಗಿ ವಿಂಗಡಿಸಲಾಗಿದ್ದು ಪ್ರತಿಯೊಂದು ರಾಜ್ಯವನ್ನು ದಂಡನಾಯಕ (ದಂಡ ನಾಥ) ಮತ್ತು ರಾಜವಂಶದ ಒಬ್ಬರು ಸೇರಿ ಸ್ಥಳೀಯ ಭಾಷೆಯನ್ನು ಉಪಯೋಗಿಸಿ ಆಡಳಿತವನ್ನು ನಡೆಸುತ್ತಿದ್ದರು. ಪ್ರತಿ ರಾಜ್ಯವನ್ನು ವಿಷಯ , ಸೀಮೆ (ನಾಡು) ಹಾಗು ಕಂಪನ (ಸ್ಥಳ) ಗಳಾಗಿ ವಿಂಗಡಿಸಲಾಗಿತ್ತು.

ರಾಜ ಕೃಷ್ಣದೇವರಾಯ ವೈಯಕ್ತಿಕ ಸೇನೆಯಲ್ಲಿ ೧,೦೦,೦೦೦ ಕಾಲಾಳುಗಳಪಡೆ,೨೦,೦೦೦ ಅಶ್ವಗಳು ಮತ್ತು ೯೦೦  ಆನೆಗಳಿದ್ದವು. ಇದು ಎರಡು ಲಕ್ಷ ಸೈನಿಕರ ( ನಾವಿಗಡಪ್ರಭುವಿನ ಆಳ್ವಿಕೆಯಲ್ಲಿ ಇದ್ದ ನೌಕ ತುಕಡಿಯನ್ನು ಸೇರಿಸಿ) ಸೈನ್ಯದ ಒಂದು ಭಾಗವಾಗಿತ್ತು. ರಾಜ ಕೃಷ್ಣದೇವರಾಯರಿಗೆ ವ್ಯಾಸತೀರ್ಥ (ವಾದಿರಾಜತೀರ್ಥರ ಗುರು/ಶಿಕ್ಷಕ), ವಾದಿರಾಜತೀರ್ಥ, ಪುರಂದರ ಗುರು (ಶಿಕ್ಷಕ) (ಕರ್ನಾಟಕ ಸಂಗೀತ ಪಿತಾಮಹ ಮತ್ತು ಕನಕದಾಸರ ಮೇಲೆ ಅಪಾರ ಭಕ್ತಿ ಇದ್ದು ಸಂತರನ್ನು ತಮ್ಮ ಕುಲದೇವತರೆಂದು ತಮ್ಮ ಬರಹಗಳಲ್ಲಿ ಗೌರವಿಸಿದ್ದಾರೆ. ಇದೆ ಸಮಯದಲ್ಲಿ ಅಣ್ಣಮಾಚಾರ್ಯರು ನೂರಾರು ಕೀರ್ತನೆಗಳನ್ನು ತೆಲುಗಿನಲ್ಲಿ ರಚಿಸಿದ್ದಾರೆ (ಈಗಿನ ತಿರುಪತಿ).

ವಿಜಯನಗರದ ಆಳ್ವಿಕೆಯಲ್ಲಿ ಕವಿಗಳು, ವಿದ್ವಾಂಸರು ಮತ್ತು ತತ್ವಜ್ಞಾನಿಗಳು ಕನ್ನಡ, ತೆಲುಗು, ಸಂಸ್ಕೃತ ದಲ್ಲಿ (ಕೆಲವರು ಅವರ ಸ್ಥಳೀಯ ಭಾಷೆ ತಮಿಳಿನಲ್ಲೂ ಬರೆದರು) ಧರ್ಮ, ಜೀವನ ಚರಿತ್ರೆ, ಪ್ರಬಂಧ, ಸಂಗೀತ, ವ್ಯಾಕರಣ, ಕಾವ್ಯ, ಔಷಧ ಮತ್ತು ಗಣಿತಶಾಸ್ತ್ರದ ಬಗ್ಗೆ ಬರೆದರು. ಹಲವಾರು ರಾಜರುಗಳು ಖುದ್ದು ಒಳ್ಳೆಯ ಬರಹಗಾರರಾಗಿದ್ದರು. ಕೃಷ್ಣದೇವರಾಯರ “ಜಾಂಬವತಿ ಕಲ್ಯಾಣ” ಕಾವ್ಯಾತ್ಮಕ ಮತ್ತು ನಾಟಕ ಕೌಶಲ್ಯವನ್ನು ಹೊಂದಿತ್ತು. ಕುಮಾರವ್ಯಾಸ ಗದುಗಿನ ಭಾರತವನ್ನು (ಮಹಾಭಾರತದ ಅನುವಾದ) ಬರೆದರು. ಇದರೊಂದಿಗೆ ಹಳೆಯ ಕನ್ನಡದಿಂದ  ಆಧುನಿಕ ಕನ್ನಡದ ಸಾಹಿತ್ಯ ಪರಿವರ್ತನೆಯನ್ನು ಕಾಣಬಹುದು. ಚಾಮರಸ ಅವರ “ಪ್ರಭುಲಿಂಗ ಲೀಲೆ” (ಅಲ್ಲಮ ಪ್ರಭುವಿನ ಕುರಿತು) ತಮಿಳು ಮತ್ತು ತೆಲುಗಿಗೆ ಭಾಷಾಂತರಗೊಂಡಿತು. ಕೃಷ್ಣದೇವರಾಯರ ಆಸ್ಥಾನದಲ್ಲಿ ೮ ಪ್ರಸಿದ್ದ ವಿದ್ವಾಂಸರಿದ್ದು ಅವರು  ಅಷ್ಟದಿಗ್ಗಜರೆಂದು ಪ್ರಖ್ಯಾತಿಗಳಿಸಿದ್ದರು. ಇವರುಗಳಲ್ಲಿ ಅಲ್ಲಸಾನಿ ಪೆದ್ದನ್ನ (ಆಂಧ್ರಕವಿತಪಿತಾಮಹ) ಮತ್ತು ತೆನಾಲಿ ರಾಮಕೃಷ್ಣ ಪ್ರಸಿದ್ದರೆನಿಸಿದವರು. ಇತರ ೬ ಕವಿಗಳೆಂದರೆ ನಂದಿ ತಿಮ್ಮಣ್ಣ, ರಾಮಭದ್ರ, ಮಲ್ಲಣ್ಣ, ರಾಮರಾಜ ಭೂಷಣ,ಪಿಂಗಾಲಿ ಸುರಣ್ಣ, ಮತ್ತು ದುರ್ಗತಿ. ಎಲ್ಲ ಕವಿಗಳಲ್ಲಿ ಮಹಾನ ಎನಿಸಿಕೊಂಡ ಶ್ರೀನಾಥ ರನ್ನು ದೇವರಾಯ-೨  ಪೋಷಿಸಿದರಲ್ಲದೆ ಅವರಿಗೆ ಮಂತ್ರಿಗಳ ಸಮಾನವಾಗಿ ಗೌರವವನ್ನು ಕೊಡಲಾಗುತ್ತಿತ್ತು.

ವಿಜಯನಗರ ವಾಸ್ತುಶೈಲಿಯು  ಚಾಲುಕ್ಯರ, ಹೊಯ್ಸಳರ , ಪಾಂಡ್ಯ ಮತ್ತು ಚೋಳರ ಶೈಲಿಗಳ ಒಂದು ರೋಮಾಂಚಕ ಸಂಯೋಜನೆಯಾಗಿದೆ. ಇವರ ಶೈಲಿಯ ಲಕ್ಷಣಗಳನ್ನು ಕಲ್ಯಾಣಮಂಟಪ, ವಸಂತಮಂಟಪ ಮತ್ತು ರಾಯಗೋಪುರಗಳಲ್ಲಿ ಕಾಣಬಹುದು. ರಾಜ್ಯವು ಯಾವಾಗಲು ಆಕ್ರಮಣಕ್ಕೆ ತುತ್ತಾಗುವ ಸನ್ನಿವೇಶಗಳು ಇದ್ದಿದುದರಿಂದ ಕಾರ್ಮಿಕರು ಗಟ್ಟಿ ಗ್ರಾನೈಟ್ ಕಲ್ಲುಗಳನ್ನು ಉಪಯೋಗಿಸುತ್ತಿದ್ದರು. ಸಾಮ್ರಾಜ್ಯದ ಸ್ಮಾರಕಗಳು ದಕ್ಷಿಣ ಭಾರತದೆಲ್ಲ ಸಂಪೂರ್ಣ ಹರಡಿದ್ದರು ರಾಜಧಾನಿ ವಿಜಯನಗರದಲ್ಲಿರುವ ಮುಕ್ತ ರಂಗಭೂಮಿಯದೆ ಒಂದು ಮೇಲುಗೈ. (UNESCO ವಿಶ್ವ ಪರಂಪರೆಯ ತಾಣ). ಪ್ರಸನ್ನ ವಿರೂಪಾಕ್ಷ ದೇವಸ್ಥಾನ (ಬುಕ್ಕ), ಹಜಾರೆ ರಾಮಮಂದಿರ (ದೇವರಾಯ) ಗಳೆರಡು ಡೆಕ್ಕನ್ ವಾಸ್ತುಶಿಲ್ಪಗಳನ್ನು ಬಿಂಬಿಸುತ್ತವೆ. ವಿಜಯನಗರ ಕಲೆಯ ಒಂದು ಭವ್ಯ ಮಾದರಿಯಾದ ವಿಜಯವಿಠ್ಠಲ ದೇಗುಲ ಕಟ್ಟಿಸಲು ದಶಕಗಳೇ ಹಿಡಿದವು.

ವಿಜಯನಗರ ಶೈಲಿಯ ಮತ್ತೊಂದು ಉದಾಹರಣೆಯೆಂದರೆ ದೊಡ್ಡ ಏಕಶಿಲೆಗಳಲ್ಲಿ ಕೆತ್ತಲ್ಪಟ್ಟ ಸಾಸಿವೆಕಾಳು ಮತ್ತು ಕಡಲೆಕಾಳಿನ ಗಣೇಶ,ವೇಣುರು ಮತ್ತು ಕಾರ್ಕಳದ ಗೊಮ್ಮಟೇಶ್ವರ, ಲೇಪಾಕ್ಷಿಯ ನಂದಿ. ವಿಜಯನಗರ ಶೈಲಿಯ ದೇವಸ್ಥಾನಗಳನ್ನು ಕರ್ನಾಟಕದಲ್ಲಿ ಕೋಲಾರ, ಶೃಂಗೇರಿ, ಕನಕಗಿರಿ ಮತ್ತು ಇತರ ಸ್ಥಳಗಳಲ್ಲಿ; ಆಂಧ್ರಪ್ರದೇಶದಲ್ಲಿ ಲೇಪಾಕ್ಷಿ, ಅಹೋಬಲ, ಶ್ರೀಕಾಳಹಸ್ತಿ, ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿ, ತಮಿಳುನಾಡಿನಲ್ಲಿ ವೆಲ್ಲೊರು, ಕುಂಬಕೊಣಂ, ಕಾಂಚಿ ಮತ್ತು ಶ್ರೀರಂಗಂ ನಲ್ಲಿ ಕಾಣಬಹುದು. ವಿಜಯನಗರ ಕಲೆಗಳಲ್ಲಿ ಒಂದಾದ ಗೋಡೆ ಚಿತ್ರಕಲೆ ಯನ್ನು ವಿರೂಪಾಕ್ಷ ದೇವಸ್ಥಾನದಲ್ಲಿ (ದಶಾವತಾರ ಮತ್ತು ಗಿರಿಜಾಕಲ್ಯಾಣ), ವೀರಭದ್ರ ದೇವಸ್ಥಾನದಲ್ಲಿ (ಶಿವಪುರಾಣ) ಮತ್ತು ಕಂಚಿಯ ಕಾಮಾಕ್ಷಿ ಮತ್ತು ವರದರಾಜ ದೇವಸ್ಥಾನಗಳಲ್ಲಿ ಕಾಣಬಹುದು. ದೇವಾಲಯವು  ಪ್ರಸಿದ್ಧ ಸಂಗೀತ ಕಂಬಗಳು ಹೊಂದಿದ್ದು ಬ್ರಿಟಿಷರು ಇದರ ಗುಟ್ಟನ್ನು ತಿಳಿಯಲು ಕಂಬಗಳನ್ನು ಎರಡು ಹೋಳಾಗಿಸಿದರೂ ಅದರ ಗುಟ್ಟನ್ನು ಅರಿಯದಾದರು ಮತ್ತು ಆ ಕಂಬಗಳು ಇಂದಿಗೂ ಅಲ್ಲಿ ಕಾಣಬಹುದಾಗಿದೆ.

ಸುಮಾರು ೭೦೦೦ ಶಾಸನಗಳು, ೩೦೦ ತಾಮ್ರಶಾಸನಗಳು ದೊರಕಿದ್ದು ಅರ್ಧದಷ್ಟು ಕನ್ನಡದಲ್ಲಿ ಇವೆ ಮತ್ತು ಉಳಿದವು ತೆಲುಗು, ತಮಿಳು ಮತ್ತು ಸಂಸ್ಕೃತದಲ್ಲಿ ಇವೆ. ನಾಣ್ಯಗಳನ್ನು (ಚಿನ್ನ, ಬೆಳ್ಳಿ, ತಾಮ್ರ) ಹಂಪಿ, ಪೆನುಕೊಂಡ ಮತ್ತು ತಿರುಪತಿಯಲ್ಲಿ ಟಂಕಿಸುತ್ತಿದ್ದರು/ ಮುದ್ರಿಸುತ್ತಿದ್ದರು ಮತ್ತು ಅವುಗಳ ಮೇಲೆ ರಾಜನ ಹೆಸರನ್ನು ನಾಗರಿ, ಕನ್ನಡ, ತೆಲುಗಿನ ಲಿಪಿಯನ್ನು ಉಪಯೋಗಿಸುತ್ತಿದ್ದರು. ಪ್ರಾಚೀನ ನಾಣ್ಯಗಳಲ್ಲಿ  ಹನುಮಂತ  ಮತ್ತು ಗರುಡ , ವಿಷ್ಣುವಿನ ವಾಹನದ ಚಿತ್ರಗಳನ್ನು ಹೊಂದಿರುತ್ತವೆ. ಕನ್ನಡ ಮತ್ತು ತೆಲುಗಿನಲ್ಲಿ ಬರೆದ ಶಾಸನಗಳಲ್ಲಿನ ಗೂಡಾರ್ಥವನ್ನು ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯ ದ ಇತಿಹಾಸಕಾರರು ದಾಖಲಿಸಿದ್ದಾರೆ.

ವಿಜಯನಗರಕ್ಕೆ ಭೇಟಿ ಕೊಟ್ಟಿದ್ದ ಡೋಮಿಗು ಪೇಸ್ ವಿಜಯನಗರನ್ನು  ಹೀಗೆ ವರ್ಣಿಸಿದ್ದಾನೆ:

” ಈ ಪಟ್ಟಣದ ವಿಸ್ತಾರವನ್ನು ನಾನು ಏನೆಂದು ಬಣ್ಣಿಸಲಿ! ಒಮ್ಮೆಯೇ ಇಡಿ ಪಟ್ಟಣವನ್ನು ಕಂಡರಷ್ಟೇ, ಇದನ್ನು ನಾನು ಚೆನ್ನಾಗಿ ಬಣ್ಣಿಸಲಾದೀತು! ಅದರೂ ನಾನು ಒಂದು ಗುಡ್ಡವನ್ನೇರಿ ನೋಡಿದೆನು.ಆಗ ನನ್ನ ಕಣ್ಣಿಗೆ ಬಿದ್ದ ಭಾಗವೇ ರೋಮ್ ಪಟ್ಟಣದಷ್ಟು  ವಿಶಾಲವೂ ಅತ್ಯಂತ ಮನೋಹರವು ಆಗಿದೆ. ಅಲ್ಲಿ ನಿಬಿಡವಾದ ಗಿಡಗಳ ಸಾಲುಗಳು ಅಂದವಾಗಿ ಕಂಡವು . ಅಲ್ಲಲ್ಲಿ ಅನೇಕ ಸರೋವರಗಳು ಕಂಗೊಳಿಸುತ್ತವೆ. ಅರಮನೆಯ ಸಮೀಪದಲ್ಲಿಯೇ ತೆಂಗಿನ ಬನಗಳೂ ಫಲ ಭರಿತವಾದ ತೋಟಗಳು ತುಂಬಿವೆ. ಅಲ್ಲ್ಲಲ್ಲಿಗೆ ನಿರ್ಮಲವಾಗಿ ಹರಿಯುವ ತೊರೆಗಳಿಂದಲೂ ,  ಹಸರು ಬಳ್ಳಿಗಳಿಂದಲೂ , ಲಿಂಬಿ,ದ್ರಾಕ್ಷೆ, ಕಿತ್ತಳೆ ಅಂಜೀರು  ಮುಂತಾದ ಫಲ ವೃಕ್ಷಗಳಿಂದಲೂ ಪಟ್ಟಣವು ಶೋಭಾಯಮಾನವಾಗಿದೆ. ಈ ಪಟ್ಟಣದಲ್ಲಿ ಜನಸಂಖ್ಯೆಯು ಅಪರಿಮಿತವಾಗಿದೆ. ವರ್ತಕರು ಮುತ್ತು , ರತ್ನ -ಹವಳ – ಮಾಣಿಕ್ಯ – ವಜ್ರಗಳ ವ್ಯಾಪಾರವನ್ನು ಮಿತಿಮೀರಿ ಮಾಡುತ್ತಾರೆ. ಪ್ರತಿ ಶುಕ್ರವಾರಕ್ಕೊಮ್ಮೆ ಸಂತೆಯಾಗುತ್ತದೆ. ಆದರೆ ಪ್ರತಿಯೊಂದು ದಿನವೂ ಬೇರೆ ಬೇರೆ ಬೀದಿಗಳಲ್ಲಿ  ದೊಡ್ಡ ಸಂತೆಗಳು ಕೊಡಿಯೇ ಕೊಡುತ್ತವೆ . ಈ ಪಟ್ಟಣದಲ್ಲಿ ಇಂಥ ಸರಕುಗಳು ಸಿಕ್ಕುವುದಿಲ್ಲವೆಂದಿಲ್ಲ. ಹಣ್ಣು ಹಂಪಲ ಕಾಯಿಪಲ್ಯಗಳ ರಾಶಿಯನ್ನು ನೋಡಿದರೆ ಕಣ್ಣು ತಿರುಗುತ್ತವೆ. ಅಂಗಡಿ ಮುಂತಾದವುಗಳಲ್ಲದೆ, ಜನರು ವಾಸಿಸುವ ಮನೆಗಳೇ ಈ ಪಟ್ಟಣದಲ್ಲಿ ಒಂದು ಲಕ್ಷ ಇವೆ. ಈ ರಾಯನು 20 ಲಕ್ಷ ಸೈನ್ಯವನ್ನು ಕೊಡಿಸಬಲ್ಲನು. ಇವನ ಸೈನಿಕರನ್ನು ನಾನು ನೋಡಿದೆನು . ಆ ಸೈನಿಕರಲ್ಲಿ ಹೇಡಿಯೊಬ್ಬನೂ ನಂಗೆ ಕಾಣಬರಲಿಲ್ಲ .”

ಭಾರತ ಖಂಡವೇ ಅತಂತ್ರವಾಗಿ ಪರಕೀಯರ ದಾಳಿಗೆ ತುತ್ತಾದಾಗ  ಧರ್ಮ ಮತ್ತು ದೇಶವನ್ನು ರಕ್ಷಿಸಿದ್ದು ವಿಜಯನಗರ ಸಾಮ್ರಾಜ್ಯ. ಕನ್ನಡಿಗರು ದೇಶ ಮತ್ತು ಧರ್ಮ ರಕ್ಷಣೆಗೆ ಎಂದಿಗೂ ಸಿದ್ಧ ಎಂದು ವಿಶ್ವಕ್ಕೆ ಸಂದೇಶ ನೀಡಿದ್ದು ಸಹ ನಮ್ಮ ವಿಜಯನಗರ ಸಾಮ್ರಾಜ್ಯ.

ದೇವಗಿರಿಯ ಸೇವುಣರು

ದೇವಗಿರಿಯ ಸೇವುಣರುದೇವಗಿರಿಯ ಸೇವುಣರು (೮೫೦ -೧೩೩೪) ಉತ್ತರ ಕರ್ನಾಟಕ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶವನ್ನು ೯ ರಿಂದ ೧೪ ನೆ ಶತಮಾನದವರೆಗೆ ಆಳಿದ ರಾಜವಂಶ. ಇವರನ್ನು ದೇವಗಿರಿಯ ಯಾದವರು ಎಂದು ಕರೆಯುತ್ತಿದ್ದರು ಶ್ರೀನಿವಾಸ ಮೂರ್ತಿ ಮತ್ತು ಶ್ರೀನಿವಾಸ ರಿಟ್ಟಿ ಅವರ ಸಂಶೋಧನೆಯಲ್ಲಿ ಇವರು ಕರ್ನಾಟಕದ ರಾಜವಂಶವೆಂದು ರುಜುವಾತಾಗಿದೆ. ಈ ರಾಜವಂಶದ ರಾಜರ ಹೆಸರುಗಳು ಮತ್ತು ಅವರಿಂದ ಸ್ಥಾಪಿಸಲಾದ ಹೆಚ್ಚಿನ ಶಾಸನಗಳು ಕನ್ನಡದಲ್ಲಿದೆ.  ಭಿಲ್ಲಮ ೫ (೧೧೭೩ – ೯೨) ಸೇವುಣ ರಾಜ್ಯವನ್ನು ಸ್ವತಂತ್ರ ರಾಜ್ಯವಾಗಿ ಸ್ಥಾಪಿಸಿದನು.

ಭಿಲ್ಲಮ ೫ ನನ್ನು ಸೇವುಣರಲ್ಲಿ ಪ್ರಮುಖ ರಾಜನೆಂದು ಪರಿಗಣಿಸಲಾಗಿದೆ. ದೇವಗಿರಿಯನ್ನು ರಾಜಧಾನಿಯಾಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಮತ್ತು ಇದನ್ನು ಮೊಹಮ್ಮದ್ ಬಿನ್ ತುಘಲಕ್ ದೌಲತಬಾದ್ ಎಂದು ಮರುನಾಮಕರಣ ಮಾಡಿದನು.

ಇವರ ಆಡಳಿತಾತ್ಮಕ ಮಾದರಿ ಚಾಲುಕ್ಯರನ್ನು ಹೋಲುತ್ತಿದ್ದು, ರಾಜ್ಯವು ವಿಷಯ, ನಾಡು ಮತ್ತು ಕಂಪನ ಗಳಾಗಿ ವಿಂಗಡಿಸಲಾಗಿತ್ತು. ನಾಡಪ್ರಭು, ನಾಡಗೌಡ, ನಾಡ ಹೆಗ್ಗಡೆ ಮತ್ತು ಸೇನಾ ಬೋವ ದಂತಹ ಕಛೇರಿ/ ಅಧಿಕಾರಿಗಳು ಅಸ್ತಿತ್ವದಲ್ಲಿದ್ದರು.

ಸೇವುಣ ರಾಜವಂಶಕ್ಕೆ ಸೇರಿದ ಸುಮಾರು ೬೦೦ ಶಾಸನಗಳನ್ನು  ಕರ್ನಾಟಕ,ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ವಿವಿಧ ಭಾಗಗಳಲ್ಲಿ ಕಾಣಬಹುದು. ಅವುಗಳು ರಾಜರ ಯುದ್ಧ ಮತ್ತು ಗೆಲವುಗಳು, ಪ್ರಚಲಿತ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ವ್ಯವಸ್ಥೆಗಳ ಬಗ್ಗೆ ಅಗಾಧ  ಮಾಹಿತಿಯನ್ನು ನೀಡುತ್ತವೆ. ಅವುಗಳಲ್ಲಿ ಕೆಲವು ಸಾಹಿತ್ಯಕ ಮಹತ್ವ ಹೊಂದಿದ್ದು, ಒಂದರಲ್ಲಿ ಸಿದ್ದರಾಮನ ವಚನವನ್ನು ಸಂಸ್ಕೃತಕ್ಕೆ ಭಾಷಾಂತರಿಸಿದ್ದನ್ನು ಕಾಣಬಹುದಾಗಿದೆ. ಭಿಲ್ಲಮ ೫, ಸಿಂಘಣ ೨, ಕೃಷ್ಣ ಮತ್ತು ಮಹಾದೇವರಿಂದ “ಪದ್ಮ ಟಂಕೆ” ಶೈಲಿಯಲ್ಲಿ ಮುದ್ರಿಸಲಾದ ಕೆಲವು ಚಿನ್ನದ ಮತ್ತು ಬೆಳ್ಳಿ ನಾಣ್ಯಗಳು ದೊರಕಿವೆ. ಅವುಗಳಲ್ಲಿ ಕನ್ನಡ ಮತ್ತು ನಾಗರಿ ಲಿಪಿಗಳನ್ನು ಕಾಣಬಹುದು.

ದೇವಗಿರಿಯ ಕೋಟೆ ಮತ್ತು ನಾಸಿಕ್ ಜಿಲ್ಲೆಯ ಸಿನ್ನರದಲ್ಲಿನ ಗೊಂಡೆಶ್ವರ ದೇವಸ್ಥಾನವು ನೋಡತಕ್ಕಂತಹವು. ಸೇವುಣರು ಹಲವಾರು ಸ್ಥಳಗಳಲ್ಲಿ ಸಣ್ಣ ದೇವಸ್ಥಾನಗಳು, ಕೋಟೆಗಳು, ಮಠಗಳು ಮತ್ತು ಧರ್ಮಶಾಲೆಗಳನ್ನು ನಿರ್ಮಿಸಿದ್ದಾರೆ.

ಮೈಸೂರಿನ ಒಡೆಯರು

ಮೈಸೂರಿನ ಒಡೆಯರು  (೧೩೯೯ – ೧೯೪೭):  ದಕ್ಷಿಣ ಭಾರತದಲ್ಲಿ ಆಳ್ವಿಕೆ ನಡೆಸಿದ ಒಂದು ಸಾಮ್ರಾಜ್ಯ, ಒಡೆಯರ್ ಕುಟುಂಬದಿಂದ ಆಳ್ವಿಕೆಗೆ ಒಳಪಟ್ಟಿದ್ದ ಇವರು ವಿಜಯನಗರ ಸಾಮ್ರಾಜ್ಯಕ್ಕೆ ಸಾಮಂತರಂತೆ ಕಾರ್ಯನಿರ್ವಹಿಸಿದರು. ವಿಜಯನಗರ ಸಾಮ್ರಾಜ್ಯ (೧೫೬೫) ಪತನದೊಂದಿಗೆ ಈ  ಸಾಮ್ರಾಜ್ಯವು  ಸ್ವತಂತ್ರವಾಯಿತು. ೧೭  ನೇ ಶತಮಾನದಲ್ಲಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತ, ನರಸರಾಜ ಒಡೆಯರ್-೧ ಮತ್ತು ಚಿಕ್ಕ ದೇವರಾಜ ಒಡೆಯರ್ ಅವರ ಆಳ್ವಿಕೆಯಲ್ಲಿ, ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡಿನ ಭಾಗಗಳನ್ನು ವಶಪಡಿಸಿಕೊಳ್ಳುತ್ತ ಪ್ರಬಲ ರಾಜ್ಯವಾಯಿತು.

ಸಾಮ್ರಾಜ್ಯದ ಇತಿಹಾಸ ಮೂಲಗಳು, ಅನೇಕ ಉಪಲಬ್ಧ ಕಲ್ಲಿನ ಮತ್ತು ತಾಮ್ರದ ತಟ್ಟೆಯ ಶಾಸನಗಳಲ್ಲಿ, ಮೈಸೂರು ಅರಮನೆ ಮತ್ತು ಸಮಕಾಲೀನ ಸಾಹಿತ್ಯ,ಕನ್ನಡ, ಪರ್ಷಿಯನ್ ಮತ್ತು ಇತರ ಭಾಷೆಗಳ ದಾಖಲೆಗಳಲ್ಲಿ ಕಾಣಬಹುದು. ಸಾಂಪ್ರದಾಯಿಕ ದಾಖಲೆಗಳ ಪ್ರಕಾರ, ಮೈಸೂರು ಸಾಮ್ರಾಜ್ಯವು ಒಂದು ಸಣ್ಣ ರಾಜ್ಯವಾಗಿ ಹುಟ್ಟಿಕೊಂಡಿತು ಮತ್ತು ಇಬ್ಬರು ಸಹೋದರರು, ಯದುರಾಯ(ವಿಜಯ ಎಂದೂ ಕರೆಯಲಾಗುತ್ತಿತ್ತು) ಮತ್ತು ಕೃಷ್ಣರಾಯ ಸ್ಥಾಪಿಸಿದರು. ಯದುರಾಯ  ಸ್ಥಳೀಯ ರಾಜಕುಮಾರಿ, ಚಿಕ್ಕದೇವರಸಿಯನ್ನು ವಿವಾಹವಾಗಿ, ರಾಜ್ಯವನ್ನು ಉಳಿಸಿ ಒಡೆಯರ್ ಎಂಬ ಬಿರುದನ್ನು ಗಳಿಸಿದರು. ಒಡೆಯರ್ ಕುಟುಂಬದ ಬಗ್ಗೆ ಮೊದಲ ಮಾತುಗಳು ವಿಜಯನಗರದ ರಾಜ ಅಚ್ಯುತ ದೇವ ರಾಯನ ಕಾಲದ (೧೬ ನೆ ಶತಮಾನ)  ಕನ್ನಡ ಸಾಹಿತ್ಯದಲ್ಲಿ ಕಂಡು ಬಂದಿದೆ.

ಚಿಕ್ಕ ದೇವರಾಜ ಒಡೆಯರ್ ಅವರು ಬೇರೆ ರಾಜ್ಯಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದಲ್ಲದೆ ರಾಜ್ಯವನ್ನು ವಿಸ್ತರಿಸಿದರು. ಸಾಮ್ರಾಜ್ಯವು ಶೀಗ್ರದಲ್ಲೇ  ಪೂರ್ವದಲ್ಲಿ ಸೇಲಂ ಮತ್ತು ಬೆಂಗಳೂರು,  ಪಶ್ಚಿಮದಲ್ಲಿ ಹಾಸನ, ಉತ್ತರಕ್ಕೆ ಚಿಕ್ಕಮಗಳೂರು ಮತ್ತು ತುಮಕೂರು ಮತ್ತು ದಕ್ಷಿಣದ ಉಳಿದ ಭಾಗದಲ್ಲಿ ಕೊಯಮತ್ತುರ್ ವಶಪಡಿಸಿಕೊಂಡಿತು.

ಅನಕ್ಷರಸ್ಥನಾದರೂ, ಹೈದರ್ ಅಲಿ ತನ್ನ ಹೋರಾಟ ಕೌಶಲ್ಯ ಮತ್ತು ಆಡಳಿತ ಕುಶಾಗ್ರಮತಿಯಿಂದಾಗಿ ಕರ್ನಾಟಕದ ಇತಿಹಾಸದಲ್ಲಿ ಪ್ರಮುಖ ಸ್ಥಾನ ಗಳಿಸಿದ್ದಾರೆ. ಹೈದರ್ ಅಲಿಯ ಉನ್ನತಿಯನ್ನು ಸಹಿಸದ ಬ್ರಿಟಿಷರು ಮರಾಠರು ಮತ್ತು ಗೊಲ್ಕೊಂಡಾ ನಿಜಾಮ್ ಜತೆ ಮೈತ್ರಿ ಮಾಡಿಕೊಂಡು ಹೈದರ್ ಅಲಿಯ ಮೇಲೆ ಯುದ್ಧ ಸಾರಿದರು ( ಮೊದಲ  ಆಂಗ್ಲೋ ಮೈಸೂರು ಯುದ್ಧ ೧೭೬೭). ಚೆಂಗಮ್ ಮತ್ತು ತಿರುವಣ್ಣಮಲೈ ಯುದ್ಧಗಳಲ್ಲಿ ಹೈದರ್ ಅಲಿ ಸೋಲನ್ನು ಅನುಭವಿಸಿದರು. ೧೭೭೦ ರಲ್ಲಿ, ಮಾಧವರಾವ್ ಪೇಶ್ವರ ಮರಾಠಾ ಸೇನೆಯ ಮೈಸೂರು ಮೇಲೆ ದಾಳಿ ನಡೆಸಿತು (೧೭೬೪ -೧೭೭೨ ಸಮಯದಲ್ಲಿ ೩ ಯುದ್ಧಗಳು ನಡೆದಿದ್ದು ಹೈದರ್ ಅಲಿ ಸೋಲನ್ನು ಕಂಡರು) ಹೈದರ್ ೧೭೬೯  ಒಪ್ಪಂದದ ಪ್ರಕಾರ ಬ್ರಿಟಿಷರ ಬೆಂಬಲ ನಿರೀಕ್ಷಿಸಿದ್ದರಾದರು ಬ್ರಿಟಿಷರು ಬೆಂಬಲವನ್ನು ಕೊಡದೆ ದ್ರೋಹವೆಸೆಗಿದರು. ಬ್ರಿಟಿಷರ ಈ ದ್ರೋಹದಿಂದ ಯುದ್ಧಗಳನ್ನು ಹೈದರ್ ಅಲಿ ಯುದ್ದಗಳನ್ನು ಸೋತರು ಮತ್ತು ಅವರ ಮೇಲೆ ಅಪನಂಬಿಕೆ ಟಿಪ್ಪುಸುಲ್ತಾನ ಕೂಡ ಬೆಳೆಸಿಕೊಂಡಿದ್ದರು.

ಕೃಷ್ಣರಾಜ -೪, ಹನ್ನೊಂದು ವರುಷದ ಹುಡುಗ,  ೧೮೯೫  ರಲ್ಲಿ ಸಿಂಹಾಸನವನ್ನು ಏರಿದರು. ಅವರು ದೊಡ್ಡವರಾಗುವ ತನಕ ಅವರ ತಾಯಿ ಕೆಂಪರಾಜಮ್ಮಣ್ಣಿಯವರು ಆಳ್ವಿಕೆ ನಡೆಸಿದರು. ಇವರ ಆಳ್ವಿಕೆಯಲ್ಲಿ ವಿಶ್ವೇಶ್ವರಯ್ಯನವರು ದಿವಾನರಾಗಿದ್ದು ಮೈಸೂರನ್ನು  ಕೈಗಾರಿಕೆ, ಶಿಕ್ಷಣ, ಕೃಷಿ ಮತ್ತು ಕಲೆಯಲ್ಲಿ, ಪ್ರಗತಿಪರ ಮತ್ತು ಆಧುನಿಕ ರಾಜ್ಯವಾಗಿ ಪರಿವರ್ತಿಸಿದರು. ಗಾಂಧೀಜಿ ಅವರು ಇವರನ್ನು ರಾಜರ್ಷಿ ಎಂದು ಕರೆಯುತ್ತಿದ್ದರು. ಮಹಾರಾಜ ಸ್ವತಃ ನಿಪುಣ ಸಂಗೀತಗಾರರಾಗಿದ್ದು, ತಮ್ಮ ಹಿರಿಯರಂತೆ,  ಲಲಿತಕಲೆಗಳ ಅಭಿವೃದ್ಧಿಗೆ  ಆಶ್ರಯ ನೀಡಿದರು

ಚಿಕ್ಕ ದೇವರಾಜರ ಆಳ್ವಿಕೆಯು  ಅನೇಕ ಸುಧಾರಣೆಗಳನ್ನು ತಂದಿತು. ಆಂತರಿಕ ಆಡಳಿತ  ಬೆಳೆಯುತ್ತಿರುವ ಅಗತ್ಯಗಳಿಗೆ ಸರಿಹೊಂದುವಂತೆ ನವೀಕರಿಸಿ ಹೆಚ್ಚು ಪರಿಣಾಮಕರಿಸಲಾಯಿತು ಮತ್ತು ಅಂಚೆ ವ್ಯವಸ್ಥೆಯನ್ನು  ಅಸ್ತಿತ್ವಕ್ಕೆ ತರಲಾಯಿತು. ಆರ್ಥಿಕ ಸುಧಾರಣೆಗಳನ್ನು ಕೂಡ ಪರಿಚಯಿಸಲಾಗಿ, ಆದಾಯದ ಸಂಗ್ರಹಣೆಯಲ್ಲಿ ವೈಯಕ್ತಿಕ ಆಸಕ್ತಿಯನ್ನು ರಾಜ ಹೊಂದಿದ್ದರು, ಖಜಾನೆ ೯೦, ೦೦, ೦೦೦ ಪಗೋಡಾಗಳಷ್ಟು ವೃದ್ಧಿಸಿದ್ದರಿಂದ ಅವರನ್ನು ನವಕೋಟಿ ನಾರಾಯಣ ಎಂಬ ಬಿರುದನ್ನಿಟ್ಟಿದ್ದರು

ಆಧುನಿಕ ಮೈಸೂರಿನ ಹರಿಕಾರ ಎಂದು ಕರೆಯಲ್ಪಡುವ ಸರ್ ಎಂ.  ವಿಶ್ವೇಶ್ವರಯ್ಯ ನವರು ಕರ್ನಾಟಕದ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾರೆ. ೧೯೦೯ ರಲ್ಲಿ ದಿವಾನರಾಗಿ ನೇಮಕಗೊಂಡರು. ಇವರ ಅವಧಿಯಲ್ಲಿ, ಮೈಸೂರು ವಿಧಾನಸಭೆಯ ಸದಸ್ಯತ್ವವನ್ನು  ೧೮ ರಿಂದ ೨೪ ಗೆ ಹೆಚ್ಚಿಸಲಾಯಿತು ಮತ್ತು ರಾಜ್ಯದ ಬಜೆಟ್ ಚರ್ಚೆಗಳಲ್ಲಿ ವಿಮರ್ಶಿಸುವ ಅಧಿಕಾರವನ್ನು ನೀಡಲಾಯಿತು. ಅವರ ಅವಧಿಯಲ್ಲಿ ಕಾರ್ಯಾರಂಭಗೊಂಡ  ಪ್ರಮುಖ ಯೋಜನೆಗಳೆಂದರೆ: ಕನ್ನಂಬಾಡಿ ಆಣೆಕಟ್ಟು ನಿರ್ಮಾಣ, ಭದ್ರಾವತಿಯಲ್ಲಿನ ಮೈಸೂರು ಐರನ್ ವರ್ಕ್ಸ್, ೧೯೧೬ ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಸ್ಥಾಪನೆ, ಮೈಸೂರು ರಾಜ್ಯದ ರೈಲ್ವೆ ಇಲಾಖೆ ಮತ್ತು ಮೈಸೂರಿನ ಹಲವಾರು ಕೈಗಾರಿಕೆಗಳ ಸ್ಥಾಪನೆ. ೧೯೫೫  ರಲ್ಲಿ,  ಭಾರತದ ಅತ್ಯುನ್ನತ ನಾಗರಿಕ ಗೌರವ  “ಭಾರತ ರತ್ನ” ಅವರಿಗೆ ನೀಡಲಾಯಿತು. ಸರ್ ಮಿರ್ಜಾ ಇಸ್ಮಾಯಿಲ್ ೧೯೨೬ ರಲ್ಲಿ ದಿವಾನರಾಗಿ ಅಧಿಕಾರ ವಹಿಸಿಕೊಂಡರು. ಅವರ ಕೊಡುಗೆಗಳೆಂದರೆ: ಭದ್ರಾವತಿಯಲ್ಲಿನ ಐರನ್ ವರ್ಕ್ಸ್ ನ ವಿಸ್ತರಣೆ, ಭದ್ರಾವತಿಯಲ್ಲಿ ಒಂದು ಸಿಮೆಂಟ್ ಮತ್ತು ಕಾಗದ ಕಾರ್ಖಾನೆ ಸ್ಥಾಪನೆ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಆರಂಭಿಸುವಿಕೆ.

೧೮೯೪ ರಲ್ಲಿ, ರಾಜ್ಯವು ಎಂಟು ವರ್ಷಕ್ಕಿಂತ ಕೆಳಗಿನ ಹುಡುಗಿಯರ ಮದುವೆಯನ್ನು  ನಿಷೇಧಿಸುವಂತ ಕಾನೂನುಗಳನ್ನು ಜಾರಿಗೆ ತಂದಿತು. ನಿರ್ಗತಿಕ ಮಹಿಳೆಯರು, ವಿಧವೆ ಮಹಿಳೆಯರ ಮರುಮದುವೆ ಪ್ರೇರೇಪಿಸಿದರು, ಮತ್ತು ೧೯೨೩  ರಲ್ಲಿ, ಕೆಲವು ಮಹಿಳೆಯರು ಚುನಾವಣೆಗಳಲ್ಲಿ ತಮ್ಮಹಕ್ಕನ್ನು ಚಲಾಯಿಸುವ ಅಧಿಕಾರವನ್ನು ನೀಡಿದರು. ಪ್ರಾಚೀನ ಮತ್ತು ಸಮಕಾಲೀನ ಕನ್ನಡ ಪುಸ್ತಕಗಳ ಪ್ರಕಟಣೆ (ಪಂಪ ಭಾರತ ಮತ್ತು ಜೈಮಿನಿ ಭಾರತ) , ಕನ್ನಡ ಸಮಾಚಾರ ಎಂಬ  ಕನ್ನಡ ದಿನಪತ್ರಿಕೆ ಮತ್ತು ದ್ವಿಭಾಷಾ ನಿಘಂಟು.

ಮೈಸೂರು ಸಾಮ್ರಾಜ್ಯದ ಕಾಲವು  ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿತು ಮತ್ತು ಸ್ವತಃ ರಾಜರುಗಳೇ ಲಲಿತಕಲೆಗಳಲ್ಲಿ ಪಾರಂಗತರಾಗಿದ್ದರು. ತತ್ವಶಾಸ್ತ್ರ ಮತ್ತು ಧರ್ಮಶಾಸ್ತ್ರ ಸಾಂಪ್ರದಾಯಿಕ ಸಾಹಿತ್ಯದಲ್ಲಿ ಜನಪ್ರಿಯ ಉಳಿಸಿಕೊಂಡಿದ್ದು;  ಜೀವನಚರಿತ್ರೆ, ಇತಿಹಾಸ, ವಿಶ್ವಕೋಶ, ಕಾದಂಬರಿ, ನಾಟಕ, ಮತ್ತು ಸಂಗೀತ ಗ್ರಂಥಗಳ  ಹೊಸ ಪ್ರಕಾರಗಳ ಬರಹಗಳು ಜನಪ್ರಿಯವಾದವು. ಶ್ರೀರಂಗಪಟ್ಟಣದ ಗೋವಿಂದ ವೈದ್ಯ, ಕಂಠೀರವ ನರಸರಾಜ ವಿಜಯ ಬರೆದರು. ಲಕ್ಷ್ಮೀಶ ಮತ್ತು ಸರ್ವಜ್ಞ ರು ಕನ್ನಡ ಮಾತಾಡುವ ಪ್ರದೇಶಗಳಲ್ಲಿ ತಮ್ಮ ಛಾಪನ್ನು ಮೂಡಿಸಿದರು. ಕವಿಯಿತ್ರಗಳಾದ ಚೆಲುವಾಂಬೆ, ಹೆಳವನಕಟ್ಟೆ ಗಿರಿಯಮ್ಮ, ಶ್ರೀ ರಂಗಮ್ಮ, ಮತ್ತು ಸಾಂಚಿ ಹೊನ್ನಮ್ಮ ಸಾಹಿತ್ಯದ  ಬೆಳವಣಿಗೆಗಳಲ್ಲಿ ತಮ್ಮ ಪಾತ್ರ ನಿರ್ವಹಿಸಿದರು.” ಅಭಿನವ ಭೋಜ” ಬಿರುದಾಂಕಿತ ಮಹಾರಾಜ ಕೃಷ್ಣರಾಜ-೩  ನಲವತ್ತು ಬರಹಗಳನ್ನು ನೀಡಿದ್ದಾರೆ. (ಶ್ರೀ ತತ್ವನಿಧಿ, ಸೌಗಂಧಿಕ ಪರಿಣಯ). ಮುದ್ದಣ್ಣನವರ  ಐತಿಹಾಸಿಕ  ಪ್ರಮುಖ ಬರಹಗಳಾದ ಅದ್ಭುತ ರಾಮಾಯಣ (೧೮೯೫) ಮತ್ತು ರಾಮಾಶ್ವಮೇಧಂ (೧೮೯೮)  ನಿಂದ ಸಾಹಿತ್ಯಕ್ಕೆ ದೊಡ್ಡ ತಿರುವು ಬಂದಿತು. ಮಹಾರಾಜ ಕೃಷ್ಣರಾಜ-೩ ಮತ್ತು ಚಾಮರಾಜ-೯ ಆಶ್ರದಲ್ಲಿದ್ದ ಬಸವಪ್ಪ ಶಾಸ್ತ್ರಿ ಅವರನ್ನು ಕನ್ನಡ ನಾಟಕ ಪಿತಾಮಹ ಎಂದು ಕರೆಯುತ್ತಾರೆ. ಅವರ ಹಲವಾರು ಅನುವಾದಗಳಲ್ಲಿ ಕಾಳಿದಾಸ, ಅಭಿಜ್ಞಾನ ಶಾಕುಂತಲ ಜನಪ್ರಿಯವಾದವು.

ಮಹಾರಾಜ ಕೃಷ್ಣರಾಜ -೩,  ಸ್ವತಃ ಸಂಗೀತಗಾರರಾಗಿದ್ದು, ಜವಳಿಗಳನ್ನು (ಲಘು  ಸಾಹಿತ್ಯ) ಮತ್ತು ಕನ್ನಡ ಭಕ್ತಿ ಗೀತೆಗಳನ್ನು ಸಂಯೋಜಿಸಿದ್ದರು. ಮಹಾರಾಜ ಚಾಮರಾಜ-೯  ಆಸ್ಥಾನದಲ್ಲಿದ್ದ ವೀಣೆ ಶೇಷಣ್ಣ ನವರನ್ನು  ವೀಣಾ ಶ್ರೇಷ್ಠ ಪ್ರತಿಪಾದಕ ಒಂದು ಪರಿಗಣಿಸಲಾಗುತ್ತದೆ. ಮಹಾರಾಜ ಕೃಷ್ಣರಾಜ ಒಡೆಯರ್ ಅವರಿಗೆ ವೈಣಿಕ ಶಿಖಾಮಣಿ ಎಂದು ಬಿರುದನ್ನು ನೀಡಿದರು. ಮೈಸೂರು ವಾಸುದೇವಾಚಾರ್ಯ, ಮುತ್ತಯ್ಯ ಭಾಗವತರ್, ಚೌಡಯ್ಯ (ಸಂಗೀತ ರತ್ನ, ಸಂಗೀತ ಕಲಾನಿಧಿ) ಆಸ್ಥಾನದ ಶೋಭೆಗಳಾಗಿದ್ದರು.

ಮೈಸೂರು ರಾಜಮನೆತನದ ಅರಮನೆಗಳಿಗೆ  ಹೆಸರುವಾಸಿಯಾಗಿದ್ದು ಅದನ್ನು  “ಅರಮನೆಗಳ ನಗರ” ಎಂದೂ ಕರೆಯಲಾಗುತ್ತದೆ. ನಗರದ ಮೈಸೂರ ಅರಮನೆ, “ಅಂಬ ವಿಲಾಸ” ( ಮೊದಲಿನ ಅರಮನೆ ಬೆಂಕಿಯಲ್ಲಿ ಸುಟ್ಟು ಹೆನ್ರಿ ಇರ್ವಿನ್ ೧೮೯೭ ವಿನ್ಯಾಸಗೊಳಿಸಿದರು) ಮತ್ತು “ಜಗಮೋಹನ ಅರಮನೆ” ಗಳು ( ಈಗ ಚಾಮರಾಜೇಂದ್ರ ಆರ್ಟ್ ಗ್ಯಾಲೆರಿ) ನೋಡ ತಕ್ಕವು.

ಕಿತ್ತೂರಿನ ದೇಸಾಯಿಗಳು

ಕಿತ್ತೂರಿನ ದೇಸಾಯಿಗಳುಕಿತ್ತೂರಿನ ದೇಸಾಯಿಗಳು(೧೫೮೫ -೧೮೨೪): ಕಿತ್ತೂರಿನ ಇತಿಹಾಸವು ಕ್ರಿ.ಶ. ೧೫೮೬ರಿಂದಲೇ ಆರಂಭವಾಗುತ್ತದೆ. ಮೂಲತಃ ಮಲೆನಾಡಿನ ಗೌಡ ಮನೆತನದಿಂದ ಬಂದ ಮಲ್ಲ ಹೆಸರಿನ ಸೋದರರಿಬ್ಬರು ವಿಜಾಪುರದ ಆದಿಲಶಾಹಿ ಸೈನ್ಯದಲ್ಲಿ ಸೇರಿಕೊಂಡಿದ್ದರು. ಈ ಸೋದರರಲ್ಲಿ ಹಿರಿಯ ಮಲ್ಲನಿಗೆ “ ಶಮಶೇರ ಜಂಗಬಹಾದ್ದೂರ ” ಎನ್ನುವ ಬಿರುದನ್ನು ಹಾಗೂ ಹುಬ್ಬಳ್ಳಿ ವಿಭಾಗದ ಸರದೇಶಮುಖಿಯನ್ನು ನೀಡಲಾಗಿತ್ತು.  ವಿಜಾಪುರದ ಪತನದ ನಂತರ ಕಿತ್ತೂರು ದೇಸಾಯಿಗಳು ತಮ್ಮ ರಕ್ಷಣೆಗಾಗಿ ಅನೇಕ ಕಾಳಗಗಳನ್ನು ಎದುರಿಸಬೇಕಾಯಿತು. ಬ್ರಿಟಿಷರು ಭಾರತದಲ್ಲಿ ಕಾಲೂರುವ ಸಮಯದಲ್ಲಿ ಇಲ್ಲಿಯ ರಾಜಕೀಯ ಪರಿಸ್ಥಿತಿ ಬಹಳ ವಿಲಕ್ಷಣವಾಗಿತ್ತು. ಉತ್ತರ ಹಿಂದುಸ್ತಾನದಲ್ಲಿ ಮೊಘಲ್ ಬಾದಶಾಹಿ ನಿರ್ಬಲವಾಗಿತ್ತು.ದಕ್ಷಿಣದಲ್ಲಿ ಸ್ವರಾಜದ ವಿಸ್ತರಣೆಗಾಗಿ ಹೋರಾಡುತ್ತಿದ್ದ ಪೇಶವಾಯಿ, ಆಕ್ರಮಣಕಾರಿ ಧೋರಣೆಯ ಹೈದರಾಬಾದಿನ ನಿಜಾಮಶಾಹಿ ಹಾಗು ಮೈಸೂರಿನ ಹೈದರ್ ಅಲಿ ಇವರೆಲ್ಲರ ನಡುವೆ ತಮ್ಮ ಉಳಿವಿಗಾಗಿ ಹೋರಾಡುತ್ತಿದ್ದ ಚಿಕ್ಕ ಪುಟ್ಟ ಪಾಳೆಯಗಾರರು. ಇಂತಹ ರಾಜಕೀಯ ಪರಿಸ್ಥಿತಿ ಧೂರ್ತ ಧೋರಣೆಯ ಬ್ರಿಟಿಷ ಈಸ್ಟ ಇಂಡಿಯಾ ಕಂಪನಿಗೆ ಸುವರ್ಣಾವಕಾಶವನ್ನು ಒದಗಿಸಿತ್ತು.

ಚೆನ್ನಮ್ಮ ಹುಟ್ಟಿದ್ದು ೧೭೭೮ರಲ್ಲಿ. ಬೆಳಗಾವಿಯಿಂದ ಉತ್ತರಕ್ಕೆ ಸುಮಾರು ೬ ಕಿ.ಮಿ. ದೂರದಲ್ಲಿರುವ ಕಾಕತಿ ಅವಳ ಹುಟ್ಟೂರು. ತಂದೆ ಕಾಕತಿಯ ದೇಸಾಯಿ ಧೂಳಪ್ಪಗೌಡರು. ಚನ್ನಮ್ಮ ಎಳೆ ವಯಸ್ಸಿನಲ್ಲಿಯೆ ಕುದುರೆ ಸವಾರಿ ಹಾಗು ಬಿಲ್ಲುವಿದ್ಯೆಗಳನ್ನು ಕರಗತ ಮಾಡಿಕೊಂಡಿದ್ದಳು. ಈ ಕಠಿಣ ಪರಿಸ್ಥಿತಿಯಲ್ಲಿ ಎದೆಗುಂದದೆ ಅವಳು ರಾಜನಿಷ್ಠರಾದ ಗುರುಸಿದ್ದಪ್ಪ, ಹಿಮ್ಮತಸಿಂಗ, ನರಸಿಂಗರಾವ , ಗುರುಪುತ್ರ ಮತ್ತು ಇತರ ಬೆಂಬಲಿಗರ ನೆರವಿನಿಂದ ತನ್ನ ದತ್ತಕ ಮೊಮ್ಮಗನಿಗೆ ಪಟ್ಟಗಟ್ಟಿದಳು.

ಇಂತಹ ಸಮಯದಲ್ಲಿ ಮಲ್ಲಸರ್ಜನ ದೊರೆಯನ್ನು ಟಿಪ್ಪು ಸುಲ್ತಾನನು ಸೆರೆ ಹಿಡಿದು ಕಪಾಲದುರ್ಗದಲ್ಲಿ ಸೆರೆಯಿಟ್ಟಿದ್ದನು. ಉಪಾಯದಿಂದ ತಪ್ಪಿಸಿಕೊಂಡ ದೊರೆ ೧೮೦೩ರಲ್ಲಿ ವೆಲ್ಲೆಸ್ಲಿಗೆ ನೆರವು ನೀಡಿ ಕಿತ್ತೂರನ್ನು ಭದ್ರಗೊಳಿಸಿದ್ದನು. ೧೮೦೯ರಲ್ಲಿ ಪೇಶವೆಯವರಿಗೆ ರೂ.೧,೭೫,೦೦೦ ಕೊಟ್ಟು, ಅವರ ಸ್ಥಾನಿಕ ಕಾವಲು ಸೈನ್ಯದ ಖರ್ಚನ್ನು ನೀಡಿ ಅವರಿಂದ ಸನದು ಪಡೆದಿದ್ದನು. ಆದರೆ ಪೇಶ್ವೆಯವರು ವಿಶ್ವಾಸಘಾತ ಮಾಡಿ ಮಲ್ಲಸರ್ಜನನ್ನು ಸೆರೆ ಹಿಡಿದು ೩ ವರ್ಷ ಕಾಲ ಪುಣೆಯಲ್ಲಿಟ್ಟರು. ೧೮೧೬ರಲ್ಲಿ ಬಿಡುಗಡೆ ಹೊಂದಿ ಮರಳುವಾಗ ದಾರಿಯಲ್ಲಿಯೆ ಮಲ್ಲಸರ್ಜನು ಕೊನೆಯುಸಿರನ್ನೆಳೆದ. ಅವನ ಮಗ ಶಿವಲಿಂಗ ರುದ್ರಸರ್ಜನು ಮರಾಠಾ ಹಾಗು ಟಿಪ್ಪು ಸುಲ್ತಾನ ಇವರ ಕಿರಿಕಿರಿ ತಪ್ಪಿಸಲು ಬ್ರಿಟಿಶರ ಜೊತೆಗೆ ಸ್ನೇಹದಿಂದಿದ್ದ. ಆದರೆ ಅದೆಂತಹ ಸ್ನೇಹ! ಪ್ರತಿ ವರ್ಷ ರೂ. ೧,೭೦,೦೦೦ ಕಾಣಿಕೆ ಕೊಡುವ ಕರಾರಿನ ಮೇಲೆ ಬ್ರಿಟಿಷರು ಈ ದೊರೆಗೆ ಸನ್ನದು ನೀಡಿದರು.

ದತ್ತು ತಗೆದು ಕೊಂಡಿದ್ದನ್ನು ಧಾರವಾಡದ ಕಲೆಕ್ಟರ್ ಆಗಿದ್ದ ಆಂಗ್ಲ ಅಧಿಕಾರಿ ಥ್ಯಾಕರೆ ನಿರಾಕರಿಸಿ. ಕಿತ್ತೂರು ಸಂಸ್ಥಾನವನ್ನು ಆಂಗ್ಲರ ಸುಪರ್ದಿಗೆ ವಹಿಸುವಂತೆ ಒತ್ತಡ ಹೇರಿದ. ಆಗ ಚೆನ್ನಮ್ಮಳು ದತ್ತು ತಗೆದು ಕೊಳ್ಳುವುದು ರಾಜರಿಗೆ ಸಂಬಂಧ ಪಟ್ಟ ವಿಷಯ ಇದಕ್ಕೂ ಅಂಗ್ಲರಿಗೂ ಏನು ಸಂಬಂಧ ಎಂದು ದಿಕ್ಕರಿಸಿದಳು. ರಾಣಿ ದಿಕ್ಕರಿಸಿದ್ದನ್ನು ಕಂಡ ಥ್ಯಾಕರೆ ಕೆಂಡಮಂಡಲವಾದ, ಅಶಾಂತಿಯ ನೆಪವೊಡ್ಡಿ ಕಿತ್ತೂರಿನ ಅರಮನೆಯ ಭಂಡಾರಕ್ಕೆ ಬೀಗ ಹಾಕಿ , ಉಸ್ತುವಾರಿಗೆ ಮಲ್ಲಪ್ಪ ಶೆಟ್ಟಿ ಮತ್ತು ವೆಂಕಟರಾಯ ಎಂಬ ಅಧಿಕಾರಿಗಳನ್ನ್ನು ನೇಮಿಸಿದ.

ಥ್ಯಾಕರೆಯ ವರ್ತನೆಯನ್ನು ಸಹಿಸಿದ ಸ್ವತಂತ್ರಪ್ರಿಯೆ , ಸ್ವಾಭಿಮಾನಿ ಮತ್ತು ಧೀರ ಮಹಿಳೆ ತನ್ನ ಪ್ರಜೆಗಳನ್ನು ಕರೆದು ” ಇಡಿಗಾಳಾದರೆ ಬದುಕವೆವು, ಬಿಡಿಗಾಳಾದರೆ ಸಾಯುವೆವು ” ಎಂದು ಒಗ್ಗಟ್ಟಿನ ಮಂತ್ರ ಬೋಧಿಸಿದಳು.ಆಗ ಕಿತ್ತೂರು ಒಂದಾಯಿತು ಎಲ್ಲರೂ ನಾಡಿಗಾಗಿ ಸರ್ವ ತ್ಯಾಗಕ್ಕೂ ಸಿದ್ದರಾದರು. ಥ್ಯಾಕರೆ ತನ್ನ ಸೈನ್ಯವನ್ನು ತಗೆದುಕೊಂಡು ಕಿತ್ತೂರು ಕೋಟೆಗೆ ಮುತ್ತಿಗೆ ಹಾಕಿದ . ಥ್ಯಾಕರೆ ” ಕೋಟೆಯ ಹೆಬ್ಬಾಗಿಲನ್ನು ಇಪ್ಪತ್ತು ನಿಮಿಷದಲ್ಲಿ ತೆರೆಯಿರಿ , ಇಲ್ಲದಿದ್ದರೆ ಕಿತ್ತೂರನ್ನು ಸುಟ್ಟು ಬಿಡುತ್ತೇವೆ ” ಎಂದು ಹೇಳಿದನು. ಕನ್ನಡಿಗರ ಸ್ವಾಭಿಮಾನ ಕೆರಳಿಸಿತು. ಸಂಗೊಳ್ಳಿ ರಾಯಣ್ಣ, ಬಾಳಪ್ಪ, ಗುರುಸಿದ್ದಪ್ಪ ಮತ್ತು ಹಲವು ಯುವಕರು ಎಲ್ಲರೂ ಸೇರಿ ಸಮಾಲೋಚನೆ ಮಾಡಿ ” ಹೆಬ್ಬಾಗಿಲನ್ನು ತೆರೆಯಿರಿ ,ಎಲ್ಲರನ್ನು ನುಚ್ಚು ನೂರು ಮಾಡೋಣ” ಎಂದು ಕಂಕಣ ಬದ್ದರಾದರು. ಕೋಟೆಯ ಬಾಗಿಲು ತೆಗೆಯುತ್ತಿದ್ದಂತೆ ಚೆನ್ನಮ್ಮನ ಸೈನ್ಯ ಆಂಗ್ಲರ ಮೇಲೆ ಮಿಂಚಿನ ವೇಗದಲ್ಲಿ  ನುಗ್ಗಿ ಸದೆಬಡಿಯಿತು.  ಚೆನ್ನಮ್ಮ ಖಡ್ಗ ಹಿಡಿದು ತಾನೆ ಮುನ್ನಡೆಸಿದಳು.  ಆಂಗ್ಲರ ಮದ್ದು ಗುಂಡುಗಳು, ತುಪಾಕಿಗಳು ಕಿತ್ತೂರಿನ ಪಾಲಾದವು. ಥ್ಯಾಕರೆ ತನ್ನ ಆತ್ಮ ರಕ್ಷಣೆಗಾಗಿ ಬಂದೂಕನ್ನು ಹಿಡಿದು ಕುದುರೆಯನ್ನೇರಿ ಕೋಟೆಯ ಬಾಗಿಲ ಕಡೆ ನುಗ್ಗಿ ಚೆನ್ನಮ್ಮನು ಇರುವಲ್ಲಿಗೆ ಬರುತ್ತಿದ್ದದನ್ನು ಕಂಡ ಬಾಳಪ್ಪನು ಅಪಾಯವನ್ನರಿತು ಥ್ಯಾಕರೆಯ ಮೇಲೆ ಗುಂಡು ಹಾರಿಸಿದನು. ಉಳಿದ ಆಂಗ್ಲ ಅಧಿಕಾರಿಗಳನ್ನು ಕೊಲ್ಲದೆ ಬಂಧಿಸಿ ಕಾರಾಗೃಹದಲ್ಲಿರಿಸಿದರು.

ಮೊದಲ ಸೋಲಿನಿಂದ ಆಂಗ್ಲರಿಗಾದ ಅವಮಾನದಿಂದ ಆಂಗ್ಲರು ಕುದಿಯ ತೊಡಗಿದರು ಪ್ರತಿಕಾರಕ್ಕೆ ತಮ್ಮಲ್ಲೇ ಸಜ್ಜು ಮಾಡಿಕೊಳ್ಳ ತೊಡಗಿದರು. ಮೊದಲಿಗೆ ಯುದ್ದದಲ್ಲಿ ಸೆರೆ ಸಿಕ್ಕ ಆಂಗ್ಲ ಖೈದಿಗಳನ್ನು ಬಿಡುವಂತೆ ಚೆನ್ನಮ್ಮನಿಗೆ ತಿಳಿಸಿದರು. “ನೀವು ಕಿತ್ತೂರಿನ ತಂಟೆಗೆ ಬರುವುದಿಲ್ಲವೆಂದು ಮಾತು ಕೊಟ್ಟಲ್ಲಿ ಮಾತ್ರ ನಿಮ್ಮ ಅಧಿಕಾರಿಗಳನ್ನು ಬಿಡುತ್ತೇವೆ ” ಎಂದು ಕಡ್ಡಿ ತುಂಡು ಮಾಡಿದಂತೆ ಉತ್ತರವಿತ್ತಳು.

ಇದನ್ನು ಕೇಳಿದ ಆಂಗ್ಲ ಸರ್ಕಾರ ಮತ್ತಷ್ಟು ಹಗೆ ಸಾಧಿಸ ತೊಡಗಿತು ಕಿತ್ತೂರನ್ನು ಸಂಪೂರ್ಣ ನಿರ್ನಾಮ ಮಾಡಬೇಕೆಂದು ಪಣ ತೊಟ್ಟಿತು. ಬೆಳಗಾವಿಯಲ್ಲಿದ್ದ  ಆಂಗ್ಲರ ಸೈನ್ಯದಿಂದ ಕಿತ್ತೂರನ್ನು ಗೆಲ್ಲುವುದ ಅಸಾಧ್ಯವೆಂದು ಅರಿತ ಆಂಗ್ಲ ಸರ್ಕಾರ  ” ಕೂಡಲೇ ಕಿತ್ತೂರು ಕಡೆಗೆ ಸೈನ್ಯ ಕಳಿಸಿ, ಇಲ್ಲದಿದ್ದರೆ ಅದು ದೊಡ್ಡ ಪ್ರಮಾದವಾಗುತ್ತದೆ. ನಾವೆಲ್ಲ ದೊಡ್ಡ ಗಂಡಾಂತರದಲ್ಲಿ ಸಿಕ್ಕಿ ಹಾಕಿಕೊಳ್ಳ ಬೇಕಾಗುತ್ತದೆ ” ಎಂದು ಪತ್ರ ಬರೆದರು.ಇದರ ಜೊತೆಗೆ ಕಿತ್ತೂರ ದ್ರೋಹಿಗಳನ್ನು ಸಹ ಆಂಗ್ಲ ಸರಕಾರ ಪ್ರಚೋದಿಸಿ, ಕಿತ್ತೂರಿನ ವಿರುದ್ಧ ಮಹಾಸಮರಕ್ಕೆ ವೇದಿಕೆ ಸಿದ್ಧ ಮಾಡಿದರು. ಕಡೆಗೆ ಕಿತ್ತೂರು ಅಂಗ್ಲರ ಮಹಾ ಸೈನ್ಯ ಮುಂದೆ ಸೆಣಸುವುದೆಂದು ತೀರ್ಮಾನವಾಯಿತು. ಕಿತ್ತೂರಿಗೆ ಕಿತ್ತೂರೆ ಒಗ್ಗೂಡಿತು. ಇಂತಹ ಸಮಯದಲ್ಲಿ ಕೆಲವು ದ್ರೋಹಿಗಳು ಕಿತ್ತೂರು ಸಂಸ್ಥಾನದ ಕೆಲವು ರಹಸ್ಯಗಳನ್ನು ಅಂಗ್ಲ ಸೇನೆಗೆ ನೀಡಿ ಮತ್ತು ತಾವು ಯುದ್ಧದಲ್ಲಿ ಸಹಾಯ ಮಾಡುವುದೆಂದು ಭಾಷೆ ನೀಡಿದರು. ಚೆನ್ನಮ್ಮನಿಗೆ ಯುದ್ಧ ಬೇಕಿರಲಿಲ್ಲ ಮತ್ತೆ ಸಂಧಾನಕ್ಕೆ ಯತ್ನಿಸಿದಳು., ಹಿಂದಿನ ಯುದ್ಧದ ಖೈದಿಗಳನ್ನು ಬಿಡುಗಡೆ ಮಾಡಿದಳು. ಕಡೆಗೆ ಆಂಗ್ಲ ಅಧಿಕಾರಿ ಚಾಪ್ಲಿನ್ನ ಸೈನ್ಯ  ಕೋಟೆಯನ್ನು ಸುತ್ತುವರಿದು ರಾಣಿಗೆ ಶರಣಾಗುವಂತೆ ಸೂಚಿಸಿದರು. ಆಂಗ್ಲರು ಕೋಟೆಯ ಮೇಲೆ ದಾಳಿ ಮಾಡಿದರು. ಕಿತ್ತೂರಿನ ದ್ರೋಹಿಗಳು ಮದ್ದಿನ ಉಗ್ರಾಣದಲ್ಲಿ ಮದ್ದಿಗೆ ಸಗಣಿ ನೀರು ಬೆರೆಸಿ ಮದ್ದು ಗುಂಡುಗಳು ಉಪಯೋಗಕ್ಕೆ ಬಾರದಂತೆ ಮಾಡಿದ್ದರು. ಘೋರ ಯುದ್ಧ ನಡೆಯಿತು. ಚೆನ್ನಮ್ಮನ ಮೇಲೆ ಸೇಡು ತೀರಿಸಿಕೊಳ್ಳುವ ಹಂಬಲ ಇರುವುದನ್ನು ಅರಿತ ಮಿತ್ರರು  ಚೆನ್ನಮ್ಮ ಯಾವುದೇ ಕಾರಣಕ್ಕೂ ಆಂಗ್ಲರಿಗೆ ಸಿಗಬಾರದೆಂದು ತಪ್ಪಿಸಿಕೊಳ್ಳುವುದಕ್ಕೆ ಹೇಳಿದರು. ಕಿತ್ತೂರು ಕೋಟೆ ಆಂಗ್ಲರ ವಶವಾಯಿತು. ಚೆನ್ನಮ್ಮ ತಪ್ಪಿಸಿಕೊಂಡು ಹೋಗಿ ಮತ್ತೆ ಸೇನೆ ಸಂಘಟನೆ ಮಾಡುವುದೆಂದು ತಿರ್ಮಾನಿಸಿ ಗುಪ್ತ ಮಾರ್ಗದಲ್ಲಿ ಹೋಗುತ್ತಿರುವಾಗಲೇ ಆಂಗ್ಲರು ಬಂಧಿಸಿ ಬೈಲಹೊಂಗಲದ ಸೆರೆ ಮನೆಯಲ್ಲಿ ಇಟ್ಟರು. ನಾಲ್ಕು ವರ್ಷಗಳ ನಂತರ ಬಂಧನದಲ್ಲಿ ಇರುವಾಗ  ಅನಾರೋಗ್ಯದಿಂದ ಚೆನ್ನಮ್ಮ  ಭಾರತ ಮಾತೆಯ ಮಡಿಲು ಸೇರಿದಳು.

೨೫೦ ವರ್ಷಗಳ ಆಂಗ್ಲರ ಆಳ್ವಿಕೆಯಲ್ಲಿ ಆಂಗ್ಲರ ವಿರುದ್ದ ಭಾರತೀಯರಿಗೆ ಸಿಕ್ಕ ಏಕೈಕ ಜಯ ಸಹ ಕನ್ನಡಿಗರದು.  ಇದೆ ಮುಂದೆ ಸ್ವತಂತ್ರ ಸಂಗ್ರಾಮಕ್ಕೆ ಮುನ್ನುಡಿ ಬರೆಯಿತು.

ಯಲಹಂಕ ನಾಡಪ್ರಭುಗಳು

ಯಲಹಂಕ ನಾಡಪ್ರಭುಗಳುಯಲಹಂಕ ನಾಡಪ್ರಭುಗಳು (೧೪೧೮ – ೧೭೨೮): ಬೆಂಗಳೂರು ೧೦೧ ವರ್ಷಗಳ (೧೫೩೭ ರಿಂದ ೧೬೩೮ ರವರೆಗೆ) ಕಾಲ ಯಲಹಂಕ ನಾಡಪ್ರಭುಗಳ ರಾಜಧಾನಿಯಾಗಿತ್ತು. ಕೆಂಪೆಗೌಡರು  ಮಹಾನ್ ದಾರ್ಶನಿಕ, ಉತ್ಸಾಹೀ ಮತ್ತು ಶಕ್ತಿಯುತ ರಾಜನಾಗಿದ್ದರು. ಕಾದಾಡುತ್ತಿದ್ದ ಹತ್ತಿರದ ರಾಜರನ್ನು ವಶಪಡಿಸಿಕೊಂಡು ಜನತೆಯಲ್ಲಿ ಶಾಂತಿ ಹಾಗು ಏಳಿಗೆಯನ್ನು ತಂದರು. ಕೆಂಪೆಗೌಡ- ೨ ೪೮ ವರುಷ ಆಳ್ವಿಕೆ ನಡೆಸಿದರು (೧೫೮೫ – ೧೬೩೩) ಮತ್ತು ಅವರ ತಾತ ನಂತೆ  ಒಬ್ಬ ಕೆಚ್ಚೆದೆಯ ಯೋಧ ಮತ್ತು ದೊಡ್ಡ ನಿರ್ಮಾಣಕಾರರಾಗಿದ್ದರು. ಬಳೆಪೇಟೆಯ ರಂಗನಾಥಸ್ವಾಮಿ ದೇವಸ್ಥಾನ, ಮಾಗಡಿ ಮತ್ತು ಸಾವನದುರ್ಗದ ಕೋಟೆಗಳ ನಿರ್ಮಾಣದಿಂದ ಪ್ರಸಿದ್ಧರಾಗಿದ್ದಾರೆ. ಲಾಲಭಾಗ್, ಕೆಂಪಾಬುಧಿ  ಕೆರೆ, ಹಲಸೂರು ಕೆರೆ ಮತ್ತು ಮೇಖ್ರಿ ಸರ್ಕಲ್ ಬಳಿಯಿರುವ ಗಡಿಯಾರದ ಗೋಪುರಗಳು ಕೆಂಪೆಗೌಡ ಗೋಪುರಗಳು ಎಂದು ಪ್ರಖ್ಯಾತವಾಗಿದೆ.

ಯಲಹಂಕ ನಾಡಪ್ರಭುಗಳ ಸಮೃದ್ಧಿಯನ್ನು ಕಂಡು ಅಸೂಯೆಗೊಂಡ ಇತರ ಮುಖಂಡರು ಜಂಟಿಯಾಗಿ ಸಂಚು ಹೂಡಿ ಬೆಂಗಳೂರು ವಶಪಡಿಸಿಕೊಳ್ಳಲು ತಮ್ಮ  ಸೇನೆಯನ್ನು ಕಳುಹಿಸಲು ಬಿಜಾಪುರದ ಆದಿಲ್ ಶಾಹನನ್ನು ವಿನಂತಿಸಿದರು. ಆದಿಲ್ ಶಾಹ್ ತನ್ನ ದಂಡನಾಯಕ ರಣಾದುಲ್ಲ ಖಾನ್ ಮತ್ತು ಉಪ ದಂಡನಾಯಕ ಶಹಾಜಿ ಭೋಂಸ್ಲೆ ಜೊತೆಗೂಡಿ ಬೆಂಗಳೂರನ್ನು ಮೂರು ದಿನಗಳಲ್ಲಿ ವಶಪಡಿಸಿಕೊಂಡರು. ಕೆಂಪೆಗೌಡ ೩, ೧೬೩೮ ರಲ್ಲಿ ಮಾಗಡಿಗೆ  ಸರಿದು ಮಾಗಡಿ ಕೆಂಪೆಗೌಡ ಎಂದು ಹೆಸರುಪಡೆದುಕೊಂಡರು. ಕೆಂಪೆಗೌಡ ಅವರ ಸಂತತಿಯವರು ೧೭೨೮ ರವರೆಗೆ ಮಾಗಡಿಯಿಂದ ಆಳ್ವಿಕೆ ಮಾಡಿದರು ಮತ್ತು ಇದರೊಂದಿಗೆ ಯಲಹಂಕ ನಾಡಪ್ರಭುಗಳ ಆಳ್ವಿಕೆ ಕೊನೆಗೊಂಡಿತ್ತು.

ಕೆಂಪೇ ಗೌಡರ ವಿದ್ಯಾಭ್ಯಾಸದ ಕಡೆಯ ದಿನ,  ಮಾಧವ ಭಟ್ಟರು  ಕೆಂಪೇ ಗೌಡ ರು ಅಧಿಕಾರವಹಿಸಿ ಕೊಳ್ಳುವ ಮೊದಲು ದೇಶ ಸುತ್ತಬೇಕೆಂದು, ಒಮ್ಮೆ ವಿಜಯನಗರದ ದರ್ಶನ ಮಾಡಬೇಕೆಂದು ಹಾಗು ಅದೇ ರೀತಿಯ ರಾಜಧಾನಿಯನ್ನು ಕಟ್ಟುವಂತೆ ಕೆಂಪೇಗೌಡರಿಗೆ  ಹರಿಸಿದರು. ಗುರುಗಳ ಆದೇಶದಂತೆ ಕೆಂಪೇಗೌಡರು ವಿಜಯನಗರದ ದರ್ಶನ ಮಾಡಿ  ಗುರುಗಳ ಇಚ್ಚೆಯಂತೆ ಲಕ್ಷ್ಮಿ ಮತ್ತು  ಸರಸ್ವತಿಯರು ನೆಲೆವೊರಿದ ನಮ್ಮ ಬೆಂಗಳೂರನ್ನು ಕಟ್ಟಿದರು

“ಮೈಸೂರ ರಾಜಪತ್ರ” (೧೮೮೭) ದಲ್ಲಿ ಬೆಂಜಮಿನ್ ಲೆವಿಸ್ ರೈಸ್ ದೇವಸ್ಥಾನದ ಪ್ರತಿಷ್ಠಾಪನೆಯ ಹಿಂದಿನ ದಂತಕಥೆಯನ್ನು ವಿವರಿಸಿದ್ದಾರೆ. ಕೆಂಪೇಗೌಡರು ಬೇಟೆ ಗೆಂದು ರಾಜಧಾನಿ ಯಲಹಂಕ ದೂರ ಬಂದಾಗ ಸುಸ್ತಾಗಿ ಮರದ ಕೆಳಗೆ ನಿದ್ದೆ ಹೋದರು. ಸ್ಥಳೀಯ ದೇವತೆಗೆ ಸೋಮೇಶ್ವರರು ಕನಸಿನಲ್ಲಿ ಬಂದು ಹುದುಗಿರುವ ನಿಧಿಯ ಬಗ್ಗೆ ಹೇಳಿ ಅದರಿಂದ ತನಗೆ ಒಂದು ದೇವಸ್ಥಾನವನ್ನು ಕಟ್ಟಿಸಲು ಹೇಳಿದರು. ಕನಸಿನಲ್ಲಿ ಹೇಳಿದಂತೆ ನಿಧಿ ಸಿಗಲು ರಾಜನು ದೇವಸ್ಥಾನವನ್ನು ಕಟ್ಟಿ ತನ್ನ ಕರ್ತವ್ಯ ನಿರ್ವಹಿಸಿದನು. ಇನ್ನೊಂದು ದಂತಕಥೆಯ ಪ್ರಕಾರ ರಾಜ ಜಯಪ್ಪ ಗೌಡರು ಹಲಸೂರಿನ ಕಾಡಿನಲ್ಲಿ ಬೇಟೆಗೆಂದು ಬಂದಾಗ ಸುಸ್ತಾಗಿ ನಿದ್ದೆ ಹೋಗಲು ಕನಸಿನಲ್ಲಿ ತಾವು ಮಲಗಿದ ಜಾಗದಲ್ಲಿ ಲಿಂಗವಿದೆ ಎಂದು ಒಬ್ಬ ಮನುಷ್ಯ ಹೇಳಲು ರಾಜನು ಆ ಜಾಗವನ್ನು ಅಗೆಸಿ  ಸಿಕ್ಕಿದ  ನಿಧಿಯಿಂದ  ದೇವಸ್ಥಾನವನ್ನು ಕಟ್ಟಿಸಿದರು. ಮತ್ತೊಂದು ದಂತಕಥೆಯ ಪ್ರಕಾರ ಇದನ್ನು ಚೋಳರು ಕಟ್ಟಿಸಿದರು ಮತ್ತು ಯಲಹಂಕ ನಾಡಪ್ರಭುಗಳು ಜೀರ್ಣೋದ್ದಾರ ಮಾಡಿಸಿದರು ಎನ್ನಲಾಗಿದೆ.

ಹಲವಾರು ಶಿಲ್ಪಗಳು ಮತ್ತು ಅಲಂಕಾರಿಕ ವೈಶಿಷ್ಟ್ಯಗಳನ್ನು ದೇವಸ್ಥಾನದಲ್ಲಿ ಕಾಣಬಹುದು. ದೇವಸ್ಥಾನದ ಪ್ರವೇಶ ದ್ವಾರದ ಎದುರು ಒಂದು ನಂದಿ ಕಂಭವನ್ನು ಕಾಣಬಹುದಾಗಿದ್ದು ಸ್ವತಃ ಗೋಪುರವು ಹಿಂದೂ ಪುರಾಣದ ದೇವ ದೇವತೆಯರ ಕೆತ್ತನೆಗಳಿಂದ ಕಂಗೊಳಿಸುತ್ತದೆ. ತೆರೆದ ಮಂಟಪದಲ್ಲಿ ೪೮ ಕಂಬಗಳಿದ್ದು ಅವುಗಳಲ್ಲಿ ದೇವತೆಗಳ ಕೆತ್ತನೆಯನ್ನು ಅಲಂಕಾರಿಕಪಟ್ಟಿ ಶೈಲಿಯಲ್ಲಿ ಕಾಣಬಹುದು. ಉತ್ತರದಲ್ಲಿ ನವಗ್ರಹ ದೇವಸ್ಥಾನವಿದ್ದು  ಅದರಲ್ಲಿ ಹನ್ನೆರಡು ಕಂಬಗಳಿವೆ (ಪ್ರತಿಯೊಂದು ಕಂಬವೂ ಒಂದೊಂದು ರಾಶಿಯನ್ನು ಪ್ರತಿನಿಧಿಸುತ್ತದೆ). ಪ್ರವೇಶದ್ವಾರದಲ್ಲಿ ಎರಡು ದ್ವಾರಪಾಲಕರ ಪ್ರತಿಮೆಗಳಿವೆ. ಇತರ ಗಮನಾರ್ಹ ಶಿಲ್ಪಗಳೆಂದರೆ ರಾವಣನು ಶಿವನನ್ನು ಸಂಪ್ರೀತಿಗೊಳಿಸಲು ಕೈಲಾಸ  ಪರ್ವತವನ್ನು ಎತ್ತುತಿರುವುದು, ಮಹಿಷಾಸುರನನ್ನು ಕೊಲ್ಲುತ್ತಿರುವ ದುರ್ಗೆ, ಗಿರಿಜಾ ಕಲ್ಯಾಣ  ಚಿತ್ರಣಗಳು ಮತ್ತು ಸಪ್ತ ಋಷಿಗಳು. ದೇವಾಲಯದ ಸ್ಥಳದಲ್ಲಿನ ಇತ್ತೀಚಿನ ಉತ್ಖನನಗಳಲ್ಲಿ ಬಹುಷಃ ೧೨೦೦ ವರುಷದಷ್ಟು ಹಳೆಯದೆಂದು ಅಂದಾಜಿಸಲಾದ ಕಲ್ಯಾಣಿ ಇರುವಿಕೆಯ ಕುರುಹುಗಳು ಸಿಕ್ಕಿವೆ.

ಚಿತ್ರದುರ್ಗದ ನಾಯಕರು

ಚಿತ್ರದುರ್ಗದ ನಾಯಕರು(೧೩೦೦ – ೧೭೭೯):  ಚಿತ್ರದುರ್ಗದ ನಾಯಕರು ಪೂರ್ವ ಕರ್ನಾಟಕದ ಭಾಗಗಳನ್ನು ಆಳಿದರು. ಹೊಯ್ಸಳ ಮತ್ತು ವಿಜಯನಗರ ಸಾಮ್ರಾಜ್ಯಗಳ ಆಳ್ವಿಕೆ ಕಾಲದಲ್ಲಿ ಇವರು ಅವರು ಸಾಮಂತ ರಾಜರಾಗಿ ಕಾರ್ಯನಿರ್ವಹಿಸಿದರು. ವಿಜಯನಗರ ಸಾಮ್ರಾಜ್ಯದ ಪತನದ ನಂತರ ಇವರ ಕೆಲವು ಕಾಲ ಸ್ವತಂತ್ರವಾಗಿ ಮತ್ತು ಕೆಲವು ಬಾರಿ ಮೈಸೂರು, ಮೊಘಲರು ಮತ್ತು ಮರಾಠರಿಗೆ ಸಾಮಂತರಾದರು.

ಸ್ಥಳೀಯ ಮುಖ್ಯಸ್ಥರಾಗಿ (ದಂಡನಾಯಕ) ಹೊಯ್ಸಳ ರಾಜ್ಯದಲ್ಲಿದ್ದ ಇವರು ತಮ್ಮ ಶೌರ್ಯದಿಂದ ವಿಜಯನಗರದ ರಾಜರ ಮನಸ್ಸನ್ನು ಗೆದ್ದು ಸಾಮಂತರಾಗಿ ನೇಮಕಗೊಂಡು ಆಳ್ವಿಕೆ ನಡೆಸಿದರು. ಕೆಲವು ದಾಖಲೆಗಳ ಪ್ರಕಾರ ಇವರು ಕರ್ನಾಟಕದ ದಾವಣಗೆರೆ ಜಿಲ್ಲೆಯವರು. ಚಿತ್ರದುರ್ಗ ಅಭೇದ್ಯವಾದ ಕೋಟೆಯಾಗಿದ್ದು ರಾಜ್ಯದ ಹೃದಯದಂತಿತ್ತು.

ಚಿತ್ರದುರ್ಗದ ಮಹಾನ್ ನಾಯಕರಲ್ಲಿ ಒಬ್ಬರಾದ ಬಿಳಿಚೋಡಿನ ಬಿಚ್ಚುಗತ್ತಿ ಬರಮಣ್ಣ ನಾಯಕರು (೧೬೮೯- ೧೭೨೧) ಮರಾಠರ ಮೈತ್ರಿಯೊಂದಿಗೆ ದೊಡ್ಡೇರಿ ಯುದ್ದದಲ್ಲಿ ತೊಡಗಿದ್ದರೂ ಕೂಡ ಮುಂದೆ ಮೊಘಲರಿಗೆ ಗೌರವ ಕೊಡಬೇಕಾಯಿತು. ಅವರು ಮೊಘಲರ ವಿರುದ್ಧ ಅನೇಕ ಯುದ್ಧಗಳಲ್ಲಿ ಹೋರಾಡಿದರು ಮತ್ತು ಅನೇಕ ದೇವಾಲಯಗಳು ಮತ್ತು ನೀರಾವರಿ ಕೆರೆಗಳನ್ನು ನಿರ್ಮಾಣಮಾಡಿದ್ದಾರೆ.

ಮದಕರಿ ನಾಯಕ (೧೭೫೮-೧೭೭೯) ಒಬ್ಬ ಕೆಚ್ಚೆದೆಯ ಯೋಧ ಮತ್ತು ಜೊತೆಗೆ ಒಂದು ಪ್ರಬಲವಾದ ನಿರ್ವಾಹಕರಾಗಿದ್ದರು. ಇವರ ಸಮಯದಲ್ಲಿ ಹೈದರ್ ಅಲಿ ದಾಳಿ ನಡೆಸಿದ್ದು ಮತ್ತು “ಒನಕೆ ಓಬವ್ವ” ನ ಸಾಹಸಕ್ಕೆ ನಾಂದಿಯಾಗಿದ್ದು ಈಗ ಚರಿತರೆಯ ಪುಟಗಳಲ್ಲಿ ಕಾಣಬಹುದು. ನಂತರ ಮರಾಠರು ಮತ್ತು ಕೆಲವು ಸ್ಥಳೀಯ ಅಧಿಕಾರಿಗಳ ದ್ರೋಹದಿಂದಾಗಿ ಇವರು ಹೈದರ್ ಆಲಿಯಿಂದ ಸೋಲಲ್ಪಟ್ಟು, ಸೆರೆಹಿಡಿದು ಕೊಲ್ಲಲ್ಪಟ್ಟರು. ಚಿತ್ರದುರ್ಗ ನಾಯಕರು ಕನ್ನಡ ಜಾನಪದದ  ಅವಿಭಾಜ್ಯ ಅಂಗವಾಗಿದ್ದಾರೆ. ಚಂದವಿಕ್ರಮರಾಯ, ಗಾದ್ರಿಮೇಲೆ ಹೆಬ್ಬುಲಿ ಮತ್ತು ಹಿಂದೂ ಪಾಳೆಯಗಾರರ ಗಂಡು ಇವರ ಬಿರುದುಗಳಾಗಿವೆ.

ಚಿತ್ರದುರ್ಗದ ಕೋಟೆ:

ಚಿತ್ರದುರ್ಗದ ಕೋಟೆ ಕಲ್ಲಿನ ಕೋಟೆ, ಉಕ್ಕಿನ ಕೋಟೆ, ಏಳು ಸುತ್ತಿನ ಕೋಟೆ ಎಂದು ಪ್ರಸಿದ್ಧವಾಗಿದೆ. ಹದಿನೆಂಟು ಪುರಾತನ ದೇವಾಲಯಗಳನ್ನು  ಕೋಟೆಯ ಒಳಗೆ ಕಾಣಬಹುದು. ಈ ಅಭೇದ್ಯ ಕೋಟೆಯಲ್ಲಿ ೧೯ ದ್ವಾರಗಳು, ೩೮ ಹಿಂಭಾಗದ ದ್ವಾರಗಳು, ಅರಮನೆ, ಮಸೀದಿ, ಗೋದಾಮುಗಳು, ತೈಲ ಹೊಂಡ, ನಾಲ್ಕು ರಹಸ್ಯ ಪ್ರವೇಶದ್ವಾರಗಳು ಮತ್ತು ನೀರಿನ ಹೊಂಡಗಳನ್ನು ಇವೆ. ಅನೇಕ ಪ್ರವೇಶಗಳನ್ನು ಈ ಕೋಟೆಯು ಹೊಂದಿದ್ದು ಅವುಗಳಲ್ಲಿ ಪ್ರಮುಖವಾದವು ರಂಗಯ್ಯನ ಬಾಗಿಲು, ಸಿದ್ದಯ್ಯನ ಬಾಗಿಲು, ಉಚ್ಚಂಗಿ ಬಾಗಿಲು, ಕಾಮನ ಬಾಗಿಲು, ಲಾಲ್ ಕೋಟೆ ಬಾಗಿಲು, ಶೃಂಗಾರದ ಬಾಗಿಲು ಮತ್ತು ಗಾರೆ ಬಾಗಿಲು. ಕೋಟೆಗೆ ೧೯ ದ್ವಾರಗಳು ಮತ್ತು ಕನಿಷ್ಠ ೩೮ ಪ್ರವೇಶಗಳು ಇವೆ ಎಂದು ಹೇಳಲಾಗಿದೆ.

ಮಹಾಭಾರತದ ಮಹಾಕಾವ್ಯದಲ್ಲಿನ ಕಥೆಯ ಪ್ರಕಾರ ನರಭಕ್ಷಕ ಬಕಾಸುರ ಚಿತ್ರದುರ್ಗದಲ್ಲಿ ವಾಸವಾಗಿದ್ದು ಎಲ್ಲರ ಭಯಕ್ಕೆ ಕಾರಣವಾಗಿದ್ದ. ಪಾಂಡವರು ವನವಾಸದ ಸಮಯದಲ್ಲಿ ತಾಯಿ ಕುಂತಿಯೊಡನೆ ಇಲ್ಲಿಗೆ ಬಂದಾಗ ಭೀಮ ಬಕಾಸುರನ  ಜೊತೆ ಹೋರಾಡಿ ಅವನನ್ನು ಕೊಂದುಹಾಕಿದನು. ದಂತಕಥೆಯ ಪ್ರಕಾರ ಈ ಬಂಡೆಗಳು  ಹೋರಾಟದಲ್ಲಿ  ಉಪಯೋಗಿಸಲ್ಪಟ್ಟವು.

ಮದಕರಿ ನಾಯಕ ಆಳ್ವಿಕೆಯಲ್ಲಿ, ಚಿತ್ರದುರ್ಗ ನಗರವು ಹೈದರಾಲಿಯ  ಸೈನ್ಯದಿಂದ ಮುತ್ತಲ್ಪಟ್ಟಿತ್ತು. ಒಬ್ಬ ಹೆಂಗಸು ಕೋಟೆಯನ್ನು ಕಂದಕದ ಮೂಲಕ ಪ್ರವೇಶಿಸುವುದನ್ನು ಕಂಡು ಹೈದರಾಲಿ ಒಂದು ಯೋಜನೆಯನ್ನು ರೂಪಿಸಿದನು. ಆ ಕಿಂಡಿಯ ಹತ್ತಿರವಿರುವ ಕರ್ತವ್ಯ ಸಿಬ್ಬಂಧಿ ಊಟಕ್ಕೆ ಮನೆಗೆ ಹೋಗಿದ್ದಾಗ ಅವನ ಹೆಂಡತಿ ಓಬವ್ವ ಕಾವಲು ಕಾಯುತ್ತಿದ್ದಳು. ಇಂತಹ ಸಮಯದಲ್ಲಿ ನುಸುಳುತ್ತಿದ್ದ ಹೈದರಾಲಿ ಸೈನಿಕರನ್ನು ಕಂಡು ಓಬವ್ವ ತನ್ನಲ್ಲಿದ್ದ ಒನಕೆಯಿಂದ ಒಬ್ಬೊಬ್ಬರನ್ನಾಗಿ ಕೊಂದು ಹಾಕಿದಳು. ಓಬವ್ವನ ಪತಿ ಊಟದಿಂದ ಹಿಂದಿರುಗಿ ರಕ್ತ ಸಿಕ್ತ ಒನಕೆಯೊಂದಿಗೆ ಓಬವ್ವನ ಕಂಡು ಆಘಾತಕ್ಕೊಳಗಾದನು. ಬಂಡೆಗಳಲ್ಲಿನ ಕಿಂಡಿಗಳು/ ರಂದ್ರಗಳು  ಕಥೆಗೆ  ಒಂದು ಐತಿಹಾಸಿಕ ಸಾಕ್ಷಿಗಳಾಗಿವೆ. (ತಣ್ಣೀರ ಹೋಂಡ, ವರ್ಷ ಪೂರ್ತಿ ತಣ್ಣೀರಿನ ಸಂಗ್ರಹವಿರುತ್ತದೆ. ಕರ್ನಾಟಕದ ಮಹಿಳೆಯರಿಗೆ ಓಬವ್ವ, ಕಿತ್ತೂರ ರಾಣಿ ಚೆನ್ನಮ್ಮನಂತೆ, ಒಂದು ದಂತ ಕಥೆಯಾಗಿದ್ದಾಳೆ.

ಚಿತ್ರದುರ್ಗ ಪ್ರಸಿದ್ಧತೆಗೆ ಮತ್ತು ಕಥೆಗಳ ಅಮರತ್ವಕ್ಕೆ ಒಬ್ಬರು (ಬಹುಶ್ಯ ಇತಿಹಾಸ ಕಾರಣಪುರಷರಿಕ್ಕಿಂತ) ಕಾರಣಕರ್ತರಾಗಿದ್ದಾರೆ . ಅವರೇ ತಳಕು ರಾಮಸ್ವಾಮಿ ಸುಬ್ಬ ರಾವ್ (ತಾರಾಸು). ಕನ್ನಡ ಸಾಹಿತ್ಯವನ್ನು ಲವಲೆಶದಷ್ಟಾದರು ಓದಿದ್ದರೆ ಅವರ ಮೇರುಕೃತಿ ದುರ್ಗಾಸ್ತಮಾನ ( ಮದಕರಿ ನಾಯಕನ ಕೊನೆಯ ಸಮಯ ಮತ್ತು ಚಿತ್ರದುರ್ಗವು ಕೊನೆಯಲ್ಲಿ ಹೈದರಾಲಿಯ ಕೈವಶವಾಗುವುದನ್ನು ವಿವರಿಸಿದ್ದಾರೆ)

ಪುಸ್ತಕಕ್ಕೆ ಕಡಿಮೆ ಒಲವಿದ್ದವರು ಸಂಗೀತಗಾರ ವೆಂಕಟಸುಬ್ಬಯ್ಯ (ತಾರಾಸು ಅವರ ಅದೇ ಹೆಸರಿನ ಪುಸ್ತಕ) ಅವರನ್ನು ಆಧರಿಸಿ ಚಿತ್ರದುರ್ಗದ ಹಿನ್ನಲೆಯುಳ್ಳ ಚಲನಚಿತ್ರವನ್ನು ನೋಡಿರಬಹುದು (ಜಿ. ವಿ. ಐಯರ್ ಅವರ ನಿರ್ದೇಶನ, ಬಾಲಮುರಳಿಕೃಷ್ಣ ಅವರ ಹಾಡಿಗೆ ಅನಂತನಾಗ್ ಅವರ ಅಭಿನಯ). ಈ ಸಿನಿಮಾ ಹಿಂದಿಯ ಚಲನಚಿತ್ರ ಬಸಂತ್ ಬಹಾರ್ ಗೆ ಪ್ರೇರಣೆಯಾಗಿತ್ತು.

ಕೆಳದಿ ರಾಜವಂಶ

ಕೆಳದಿ ರಾಜವಂಶಸಮಸ್ತ ಉತ್ತರ ಭಾರತವನ್ನು ತನ್ನ ತೆಕ್ಕೆಗೆ ತಗೆದುಕೊಂಡು, ಜಗತ್ತನ್ನು ಗೆದ್ದವನು  ಅರ್ಥಾತ್  “ಅಲಂಗಿರ್ ” ಎಂಬ ಬಿರುದನ್ನು ತಾನೆ ದಯಪಾಲಿಸಿಕೊಂಡು, ರಾಜ್ಯದಾಹದ ಆಸೆ ಈಡೇರಿಸಿಕೊಳ್ಳುವ ಸಲುವಾಗಿ ಶಿವಾಜಿ ಮಗನಾದ ರಾಜಾರಾಮನಿಗೆ ಆಶ್ರಯ ಕೊಟ್ಟರೆಂಬ  ಕಾರಣಕ್ಕೆ  ತನ್ನ ಬಲಿಷ್ಠ ಸೇನೆಯನ್ನು ಮುನ್ನುಗ್ಗಿಸಿ  ಕನ್ನಡದ ಮಲೆನಾಡಿನ ಚಿಕ್ಕ ಸಂಸ್ಥಾನದ ಮೇಲೆ ಯುದ್ದ ಸಾರಿದನು  ” ಔರಂಗಜೇಬ್ “. ಆದರೂ ಕನ್ನಡದ ಕೆಚ್ಚಿನ ಕಲಿಗಳು ಅವನನ್ನು ತಡೆಯುವಲ್ಲಿ ಯಶಸ್ವಿಯಾಗಿ ಕಡೆಗೆ ಮೊಗಲರ ಸೈನ್ಯ ಸಂಧಾನ ಮಾಡಿಕೊಂಡು ಹಿಂತಿರುಗಿತು. ಆ ಚಿಕ್ಕ ಸಂಸ್ಥಾನ ಯಾವುದು ಗೊತ್ತೇ, ಯುದ್ದದಲ್ಲಿ ಮುನ್ನೆಡಿಸಿ ಮೊಗಲರಿಗೆ ಸೋಲಿನ ರುಚಿ ತೋರಿಸಿದ ಕನ್ನಡ ರತ್ನ ಯಾವುದು ಗೊತ್ತೇ ?

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ದದಾದ ಮಲೆನಾಡಿನ ಕೆಳದಿಯೇ ಆ ಸಂಸ್ಥಾನ. ಯುದ್ದದಲ್ಲಿ ಮುನ್ನೆಡಿಸಿ ೨೫ ವರ್ಷ ಶಾಂತಿ , ನ್ಯಾಯ ಮತ್ತು ನೀತಿಯಿಂದ ರಾಜ್ಯಭಾರ ಮಾಡಿ ಪ್ರಜೆಗಳನ್ನು ಸ್ವಂತ ಮಕ್ಕಳಂತೆ ನೋಡಿಕೊಂಡ  ರತ್ನ ” ಚೆನ್ನಮ್ಮ”

ಕೆಳದಿ ರಾಜ ವಂಶ (೧೪೯೯-೧೭೬೩)  ಕರ್ನಾಟಕ ರಾಜ್ಯವನ್ನಾಳಿದ ಒಂದು ಪ್ರಮುಖ ರಾಜವಂಶ. ಅವರು ಆರಂಭದಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಂತರಂತೆ  ಆಳ್ವಿಕೆ ಆರಂಭಿಸಿದರು. ೧೫೬೫ ರಲ್ಲಿ ವಿಜಯನಗರ ಸಾಮ್ರಾಜ್ಯದ ಪತನದ ನಂತರ  ದಕ್ಷಿಣ ಭಾರತದಲ್ಲಿ ಉದ್ಭವಿಸಿದ ಗೊಂದಲದ ಸಮಯದಲ್ಲಿ ಇವರು ಕರ್ನಾಟಕದ ಇತಿಹಾಸದಲ್ಲೇ ಪ್ರಮುಖ ಪಾತ್ರವಹಿಸಿ, ಶಿವಮೊಗ್ಗ ಸೇರಿದಂತೆ ಕರ್ನಾಟಕದ ಪ್ರಮುಖ ಭಾಗಗಳಲ್ಲಿ ಆಳ್ವಿಕೆ ನಡೆಸಿದರು (ಶಿವಮೊಗ್ಗ, ಕರಾವಳಿಯ ಎಲ್ಲಾ ಜಿಲ್ಲೆಗಳು, ಮಧ್ಯ ಭಾಗದ ಕೆಲವು ಜಿಲ್ಲೆಗಳು).

ಚೌಡಪ್ಪ ನಾಯಕ (೧೪೯೯–೧೫೩೦) ಕೆಳದಿಯನ್ನು ಆಳಿದ ಮೊದಲ ಮುಖ್ಯಸ್ಥ.  ಸದಾಶಿವ ನಾಯಕ (೧೫೩೦–೧೫೬೬) ವಿಜಯನಗರ ಸಾಮ್ರಾಜ್ಯದಲ್ಲಿ ಒಬ್ಬ ಪ್ರಮುಖ ಮುಖ್ಯಸ್ತನಾಗಿದ್ದು, ಕಲ್ಯಾಣಿ ಯುದ್ಧದಲ್ಲಿ ತೋರಿದ ಶೌರ್ಯತನದಿಂದಾಗಿ ಚಕ್ರವರ್ತಿ ಅಳಿಯ ರಾಮರಾಯರಿಂದ ಕೋಟೆಕೋಲಾಹಲ ಎಂಬ ಬಿರುದನ್ನು ಪಡೆದಿದ್ದರು. ಕರ್ನಾಟಕದ ಕರಾವಳಿ ಪ್ರಾಂತ್ಯಗಳು ಅವರ ನೇರ ಆಳ್ವಿಕೆಗೆ ಒಳಪಟ್ಟಿದ್ದು ರಾಜಧಾನಿಯನ್ನು ಕೆಳದಿಯಿಂದ ಇಕ್ಕೇರಿಗೆ ಸ್ಥಳಾಂತರಿಸಿದರು.

ಹಿರಿಯ ವೆಂಕಟಪ್ಪ ನಾಯಕ (೧೫೮೬ –೧೬೨೯ ):  ೧೬೨೩ ರಲ್ಲಿ ಅವರ ರಾಜ್ಯವನ್ನು ಭೇಟಿ ನೀಡಿದ್ದ ಇಟಾಲಿಯನ್ ಪ್ರವಾಸಿ ಪಿಯಟ್ರೊ ಡೆಲ್ಲ ವಲ್ಲೆ, ಅವರನ್ನು ಸಮರ್ಥ ಯೋಧ ಮತ್ತು ನಿರ್ವಾಹಕರು ಎಂದು ಕರೆದಿದ್ದಾರೆ. ಇವರ ಆಳ್ವಿಕೆಯಲ್ಲಿ ರಾಜ್ಯವು ವಿಸ್ತರಿಸಿ ಕರಾವಳಿ, ಮಲ್ನಾಡು ಮತ್ತು ಪಶ್ಚಿಮ ಘಟ್ಟಗಳ ಪೂರ್ವ ಜಾಗಗಳನ್ನು ಹೊಂದಿತು. ಹಾನಗಲ್ಲಿನಲ್ಲಿ ಬಿಜಾಪುರದ ಆದಿಲ್ ಶಾಹಿಗಳನ್ನು ಸೋಲಿಸಿದ್ದರು. ಮೂಲತಃ ವೀರಶೈವರಾಗಿದ್ದರೂ ವೈಷ್ಣವರಿಗೆ ಮತ್ತು ಜೈನರಿಗೆ ದೇವಾಲಯಗಳನ್ನು ಮತ್ತು ಮುಸಲ್ಮಾನರಿಗೆ ಮಸೀದಿಯನ್ನು ಕಟ್ಟಿಸಿಕೊಟ್ಟರು.

ಶಿವಪ್ಪ ನಾಯಕ (೧೬೪೫ –೧೬೬೦) ಕೆಳದಿ ದೊರೆಗಳಲ್ಲಿ ಶ್ರೇಷ್ಟನೆಂದು ಪರಿಗಣಿಸಲಾಗಿದೆ. ಬಿಜಾಪುರದ ಸುಲ್ತಾನರು, ಪೋರ್ಚುಗೀಸರು ಮತ್ತು ಇತರ ಹತ್ತಿರದ ರಾಜರುಗಳ ವಿರುದ್ಧ  ಅವರ ಸಮರ್ಥ ಹೋರಾಟ ಮತ್ತು ವಿಜಯಗಳಿಂದ ಈಗಿನ ಕರ್ನಾಟಕದ ಬಹುತೇಕ ರಾಜ್ಯಗಳನ್ನು ಪಡೆದುಕೊಂಡಿದ್ದರು. ಅವರು ಕೃಷಿಗೆ ಪ್ರಾಮುಖ್ಯತೆಯನ್ನು ನೀಡಿದರು ಮತ್ತು ತೆರಿಗೆ-ಆದಾಯದ ಸಂಗ್ರಹಕ್ಕಾಗಿ ಹೊಸ ಯೋಜನೆಳನ್ನು ಅಭಿವೃದ್ಧಿ ಪಡಿಸಿ ನಂತರ ಬ್ರಿಟಿಷರು ಕೂಡ ಅವರನ್ನು ಕೊಂಡಾಡುವಂತೆ ಪ್ರಸಿದ್ಧಿ ಗಳಿಸಿದರು. ಅವರ ಪುತ್ಥಳಿ ಮತ್ತು ಅವರು ಕಟ್ಟಿಸಿದ ಅರಮನೆ, ಅವರ ಕಾಲದ ಅನೇಕ ಕಲಾಕೃತಿಗಳನ್ನು ಜನರು ಉಳಿಸಿಕೊಂಡು ಬಂದಿದ್ದು ಈಗಿನ ಕಾಲದ ಜನರು ಅವರ ಮೇಲೆ ಇಟ್ಟಿರುವ ಗೌರವಕ್ಕೆ ಸಾಕ್ಷಿಯಾಗಿದೆ.

ಮರಾಠಾ ಶಿವಾಜಿ ಮತ್ತು ನಂತರದಲ್ಲಿ ಅವರ ಮಗ ಸಂಭಾಜಿ ಜೊತೆ ಗೆಳೆತನ ಬೆಳೆಸಿ ಸಿಂಹಾಸನಕ್ಕಿದ್ದ ಎಲ್ಲಾ ಪ್ರತಿಸ್ಪರ್ಧಿ ವಾರಸುದಾರರನ್ನು ಸೋಲಿಸಿದರು ಎಂದು ಹಲವಾರು ವಿದ್ವಾಂಸರು ಹೇಳಿದ್ದಾರೆ. ಕೆಳದಿಯ ಚೆನ್ನಮ್ಮನನ್ನು ಮತ್ತು ಅವರ ಶೌರ್ಯ ಕಥೆಗಳನ್ನು ಸ್ಥಳೀಯ ಜನ ನೆನೆಸಿಕೊಳ್ಳುತ್ತಾರೆ. ಕದಂಬ, ಹೊಯ್ಸಳ, ವಿಜಯನಗರ ಮತ್ತು ದ್ರಾವಿಡ ಶೈಲಿಗಳನ್ನು ಮೇಳೈಸಿ ಇಕ್ಕೇರಿ ಮತ್ತು ಕೆಳದಿಯಲ್ಲಿ ಸುಂದರ ದೇವಾಲಯಗಳನ್ನು ಕಟ್ಟಿಸಿದ್ದಾರೆ. ಇಕ್ಕೇರಿಯ ಅಘೋರೇಶ್ವರ ದೇವಾಲಯ ಮತ್ತು ಕೆಳದಿಯ ರಾಮೇಶ್ವರ ದೇವಸ್ಥಾನಗಳು ನಾಯಕ ಶೈಲಿಗಳ ಉದಾಹರಣೆಗಳು. ವಿಜಯನಗರ ಶೈಲಿಯ ಕಂಬಗಳು ಯಾಳಿಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಗಂಡಬೇರುಂಡ, ಕರ್ನಾಟಕದ ಪೌರಾಣಿಕ ಎರಡು ತಲೆಯ ಹಕ್ಕಿಯನ್ನು ಚಿತ್ರಿಸುವ ಒಂದು ಶಿಲ್ಪವನ್ನು  ಕೆಳದಿಯಲ್ಲಿ ನೋಡಬಹುದು.

ಖಾಜಿ ಮೊಹಮ್ಮದ್ ನನ್ನು ಭಟ್ಕಳದಲ್ಲಿ ನೆಲೆಸುವಂತೆ ಕೆಳದಿಯ ನಾಯಕರು ಆಹ್ವಾನಿಸಿದರು. ತೆಂಗಿನಗುಂಡಿ ಗ್ರಾಮದ ಆದಾಯವನ್ನು ಕಾಜಿ ಮಹಮ್ಮದ್ ಗೆ ಕೊಡುಗೆಯಾಗಿ ನೀಡಲಾಯಿತು.ಅನೇಕ ನವಾಯತ ಮುಸ್ಲಿಮರನ್ನು ಆಡಳಿತಾತ್ಮಕ ಸ್ಥಾನಗಳಲ್ಲಿ ನೇಮಕ ಮಾಡಲಾಯಿತು. ಈ ಕುಟುಂಬದ ಹಲವಾರು ನವಾಯತರು ಈಗಲು ಇಕ್ಕೇರಿ ಎಂಬ ಉಪನಾಮವನ್ನು ಬಳಿಸುತ್ತಿದ್ದಾರೆ ಮತ್ತು ಭಟ್ಕಳದ ಸುತ್ತ ಮುತ್ತಲಿನ ಪ್ರದೇಶದಲ್ಲಿ ನೆಲೆಸಿದ್ದಾರೆ. ಭಟ್ಕಳದ ಜಾಮಿಯಾ ಮಸೀದಿ ಮೇಲಿರುವ ಚಿನ್ನದ ಕಳಶವು (ಚಿನ್ನದ ಪಳ್ಳಿ) ಕೆಳದಿಯ ರಾಜರ ಕೊಡುಗೆಯಾಗಿದೆ.




ಆರ್ಯ ಮತ್ತು ದ್ರಾವಿಡ ನಡುವಿನ ವ್ಯತ್ಯಾಸವೇನು?

  ಮೊದಲಿಗೆ ಈ ಪದಗಳ ಪರಿಚಯ ನೋಡೋಣ. ಆರ್ಯ  ಅನ್ನೋದು ಉತ್ತಮ/ದೊಡ್ಡವರು ಎಂಬ ಅರ್ಥ ನೀಡುತ್ತದೆ  ಅಷ್ಟೇ.  ಉತ್ತಮ ಕುಲದಲ್ಲಿ ಹುಟ್ಟಿದವನು, ಯಜಮಾನ, ಹಿಡಿದ ಕೆಲಸವನ್ನು ಬಿಡ...