Showing posts with label Motivational. Show all posts
Showing posts with label Motivational. Show all posts

Friday, July 24, 2020

12 ಆಧ್ಯಾತ್ಮಿಕ ನಿಯಮಗಳು

1.ಬೃಹತ ನಿಯಮ.
ನಾವು ಪ್ರಪಂಚಕ್ಕೆ ಏನನ್ನು ಕೊಡುತ್ತೇವೆಯೋ ಅದೇ ನಮಗೆ ಹಿಂತಿರುಗಿ ಬರುತ್ತದೆ. ನಾವು ಬೇರೆಯವರಿಗೆ ಒಳ್ಳೆಯದನ್ನು ಮಾಡಿದರೆ ನಮಗೂ ಒಳ್ಳೆಯದೇ ಆಗುತ್ತದೆ, ಕೆಟ್ಟದ್ದನ್ನು ಮಾಡಿದರೆ ಕೆಟ್ಟದ್ದೇ ಆಗುತ್ತದೆ.

2.ಸೃಷ್ಟಿಯ ನಿಯಮ.
ಜಗತ್ತಿನಲ್ಲಿ ತಾನಾಗಿ ತಾನೇ ಯಶಸ್ಸು ಸಿಗುವುದಿಲ್ಲ ಅಥವಾ ಬರುವುದಿಲ್ಲ, ಪ್ರತಿಯೊಂದು ಯಶಸ್ಸು ನಮ್ಮ ಪರಿಶ್ರಮದಿಂದಲೇ ಸಿಗುವುದು.

3.ನಮ್ರತೆಯ ನಿಯಮ.
ಮೊದಲು ನಾವು ನಮ್ಮ ತಪ್ಪನ್ನು ತಿದ್ದಿಕೊಂಡರೆ ಮಾತ್ರ ಪರಿವರ್ತನೆಯಾಗಲು ಸಾಧ್ಯ.

4.ಅಭಿವೃದ್ಧಿಯ ನಿಯಮ.
ನಮ್ಮನ್ನು ನಾವು ಬದಲಾಯಿಸಿಕೊಂಡರೆ ಮಾತ್ರ ನಮ್ಮ ಜೀವನವು ಅಭಿವೃದ್ಧಿಯೆಡೆಗೆ ಸಾಗುತ್ತದೆ.ಶ್ರಮ ಪಟ್ಟು ಕೆಲಸ ಮಾಡಬೇಕು, ಸೋಮಾರಿಗಳಾಗಬಾರದು.

5.ಜವಾಬ್ದಾರಿಯ ನಿಯಮ.
ನಮ್ಮ ಜೀವನಕ್ಕೆ ನಾವೇ ಹೊಣೆ,ಬೇರೆಯವರನ್ನು ದೂಷಿಸುವುದು ಸರಿಯಲ್ಲ.

6.ಸಂಪರ್ಕ ನಿಯಮ.
ನಮ್ಮ ಜೀವನದ ಭೂತ, ವರ್ತಮಾನ ಮತ್ತು ಭವಿಷ್ಯ ಎಲ್ಲವೂ ಸದಾ ಸಂಪರ್ಕದಲ್ಲಿರುತ್ತದೆ.ನಮ್ಮ ನಿನ್ನೆಯ ಕರ್ಮಗಳು ಇಂದು, ಮತ್ತು ಇಂದಿನ ಕರ್ಮಗಳು ನಾಳೆ ಅನುಭವಿಸುತ್ತಿರುತ್ತೇವೆ.

7.ಗಮನದ ನಿಯಮ.
ನಾವು ಎರಡೆರೆಡು ಕೆಲಸಗಳ ಮೇಲೆ ಗಮನ ವಹಿಸುವುದು ವ್ಯರ್ಥ. ಮಾಡುವ ಒಂದು ಕೆಲಸ ಅಥವಾ ಕಾರ್ಯದಲ್ಲಿ ಗಮನವಿರಲಿ.

8.ಅತಿಥ್ಯದ ನಿಯಮ.
ನಮ್ಮ ನೆಡವಳಿಕೆ , ನಮ್ಮ ಆಚಾರ , ವಿಚಾರ ಹಾಗೂ ಚಿಂತನೆಗೆ ಕನ್ನಡಿ ಇದ್ದಂತೆ.

9.ಇಂದು ಮತ್ತು ಈಗಿನ ನಿಯಮ.
ವರ್ತಮಾನದ ಬಗ್ಗೆ ಹೆಚ್ಚು ಗಮನವಿರಬೇಕು ಭೂತ -ಭವಿಷ್ಯದ ಬಗ್ಗೆ ಅಲ್ಲ.

10.ಪರಿವರ್ತನೆಯ ನಿಯಮ.
ಹಿಂದಿನ ಕರ್ಮಗಳು ಮತ್ತೆ ಮತ್ತೆ ಮರುಕಳಿಸುತ್ತದೆ. ನಾವು ಪರಿವರ್ತನೆಯಾಗಲು ಪ್ರಯತ್ನಿಸಿದರೆ ಮಾತ್ರ ಪರಿವರ್ತನೆ ಸಾಧ್ಯ.

11.ತಾಳ್ಮೆಯ ನಿಯಮ.
ತಾಳ್ಮೆ ,ಸಹನೆ ಮತ್ತು ಛಲದಿಂದ ಏನನ್ನು ಬೇಕಾದರೂ ಸಾಧಿಸಬಹುದು.ಇವು ಜೀವನದಲ್ಲಿ ಬಹಳ ಮುಖ್ಯ.

12.ಯಶಸ್ಸಿನ ನಿಯಮ.
ಯಶಸ್ಸು ನಾವು ಹಾಕುವ ಪರಿಶ್ರಮದಷ್ಟೇ ದೊಡ್ಡದಾಗಿ ಕಾಣುತ್ತದೆ.ನಾವು ಜೀವನದಲ್ಲಿ ಯಶಸ್ಸನ್ನು ಒಮ್ಮೆ ಗಳಿಸಲು ಪ್ರಾರಂಭಿಸಿದರೆ ನಮ್ಮ ಪರಿಶ್ರಮ ಲೆಕ್ಕಕ್ಕೆ ಬರುವುದಿಲ್ಲ.ಆ ಯಶಸ್ಸಿನ ಖುಷಿಯ ಮುಂದೆ ಎಲ್ಲ ಪರಿಶ್ರಮವೂ ,ಅದರ ನೋವು, ನಾವು ಪಟ್ಟ ಕಷ್ಟ ಎಲ್ಲವೂ ಮರೆತು ಹೋಗುತ್ತದೆ .

Tuesday, July 21, 2020

Change Your Limiting beliefs

"I can't"
"I am not"
"It's too hard"
"It's too late"
"I will fail"
"Nobody wants me"
"It won't sell"
"I don't know how"
"Money is difficult to make"
"Life is hard"
" I can't succeed here"
"I am not smart enough"
These,and many more limiting beliefs will immobilize, stagnate and limit your life. They will keep you in a rut. Your experiences will justify them. And that will keep you in a circle of failure.
Change them today.
Begin by thinking positive thoughts. Replace all your negative thoughts with positive ones☝️ 
For instance if you think 'You can't' replace it with 'I can' If you think 'making money is hard' replace it with ' It's easy to make money. I am easily making lots of money. I'm a money magnet!'
Verbalize positive thoughts. Say it out. I am good. I am intelligent. I am a celebrity. I can do all things through God that strengthens me😇 I am a multi-billionaire. I am smart.
Start re-configuring your mind with empowering thoughts and you will see a new you emerging! You were born to do great things in life!

Say YES to Life!🤓

It's in you

Monday, June 29, 2020

ಬದುಕು (ಜೀವನ) ಎಂದರೇನು?



“ಯದ್ಭಾವಂ ತದ್ಭವತಿ’

ಬುದ್ಧ ಹೇಳುತ್ತಾನೆ, "ಪ್ರೀತಿ ಮತ್ತು ಶಾಂತಿ".

ದುರ್ಯೋಧನ ಹೇಳುತ್ತಾನೆ, "ಹಠ ಮತ್ತು ಛಲ".

ಏಕಲವ್ಯ ಹೇಳುತ್ತಾನೆ, "ಗುರಿ".

ಯುಧಿಷ್ಠಿರ ಹೇಳುತ್ತಾನೆ, "ಧರ್ಮ".

ಭೀಷ್ಮ ಹೇಳುತ್ತಾನೆ, "ಪ್ರತಿಜ್ಞೆ".

ಒಬ್ಬ ಸಂತ ಹೇಳುತ್ತಾನೆ, "ಭಕ್ತಿ".

ಒಬ್ಬ ಸನ್ಯಾಸಿ ಹೇಳುತ್ತಾನೆ, "ವೈರಾಗ್ಯ".

ಅಲೆಕ್ಸಾಂಡರ್ ಹೇಳುತ್ತಾನೆ, "ಯುದ್ಧ".

ಶ್ರೀಮಂತ ಹೇಳುತ್ತಾನೆ, "ಮೋಜು ಮತ್ತು ಮಸ್ತಿ".

ಮಧ್ಯಮ ವರ್ಗದವನು ಹೇಳುತ್ತಾನೆ, "ಉದ್ಯೋಗ".

ಹಸಿದವನು ಹೇಳುತ್ತಾನೆ, "ತನ್ನ ಪಾಲಿನ ಅರ್ಧ ರೊಟ್ಟಿ".

ಹೀಗೆ ಒಬ್ಬೊಬರಿಗೆ ಒಂದೊಂದು ರೀತಿ ಬದುಕು ಕಾಣುತ್ತದೆ. ಅವರವರ ಆಲೋಚನೆಯಂತೆ ಅವರವರು  ಬದುಕನ್ನು ಸಮರ್ಥಿಸುತ್ತಾರೆ.

ಬದುಕೆನ್ನುವುದು  ಸುಂದರವಾದ ಅನುಭವ.  ಪ್ರತಿದಿನ, ಪ್ರತಿ ಗಂಟೆ, ಪ್ರತಿ ನಿಮಿಷ  ಎಲ್ಲವೂ ಅಮೂಲ್ಯ.  ಈ ಯಾವುದೂ ಹಿಂತಿರುಗಿ ಬರುವುದಿಲ್ಲ.  ಒಮ್ಮೆ ಕಳೆದರೆ ಮುಗಿಯಿತು .  ಆದ್ದರಿಂದಲೇ ಪ್ರತಿ ಕ್ಷಣದ ಬದುಕು ನವ ನವೀನ.  ಹೀಗೆಯೇ  ನಮ್ಮ ಬದುಕು  ಅನಿಶ್ಚಿತ ಕೂಡಾ.  ಮುಂದಿನ ಕ್ಷಣ ಏನೆಂದು ಯಾರಿಗೂ  ತಿಳಿಯದು.  ಈ ಕ್ಷಣವೇ ಪರಮ ಪವಿತ್ರ.  ಈ ಕ್ಷಣವನ್ನು ಸಂಪೂರ್ಣ  ಅನುಭವಿಸುವುದೇ  ಬದುಕು.     ಸಂಘರ್ಷ, ಮನಸ್ತಾಪ, ಕೋಪ, ದ್ವೇಷ  ಇವುಗಳನ್ನು ಕಡಿಮೆ ಮಾಡುತ್ತಾ  ಪ್ರೀತಿ, ಸೌಹಾರ್ದ, ಸಹಾಯ, ಕಾರುಣ್ಯ, ಮತ್ತು ಹಸನ್ಮುಖದ ನಡುವೆ ಬದುಕುವುದೇ ಸಾರ್ಥಕ ಜೀವನ.    ನಮ್ಮ ಚಿಂತನೆ ಸಕಾರಾತ್ಮಕವಾಗಿದ್ದರೆ ಆ ಕ್ಷಣದಲ್ಲಿ ಒಂದಷ್ಟು ಚೈತನ್ಯ ಮೂಡುತ್ತದೆ. ಇಲ್ಲವಾದರೆ ನಿರಾಸೆ ನಮ್ಮದಾಗುತ್ತದೆ.

ಕಷ್ಟ, ನೋವು, ನಿರಾಸೆ, ದುಃಖ ಎಲ್ಲವು ಎಲ್ಲರಿಗೂ ಇದೆ. ಆದರೆ, ಅವುಗಳ  ಮಧ್ಯೆ ಸಂತೋಷದಿಂದ , ತೃಪ್ತಿಯಿಂದ  ಬದುಕುವುದೇ  ಜೀವನ.  ಧನ್ಯವಾದಗಳು

Monday, May 25, 2020

ಪ್ರಣಾಮ/ ನಮಸ್ಕಾರದ ಪ್ರಾಮುಖ್ಯತೆ

ಮಹಾಭಾರತದ ಯುದ್ಧ ನಡೆಯುತ್ತಿತ್ತು. ಒಂದು ದಿನ, ದುರ್ಯೋಧನನ ವಿಡಂಬನೆ, ಅವಮಾನದಿಂದ  ನೊಂದಿರುವ ಭೀಷ್ಮ ಪಿತಾಮಹ ಹೀಗೆ ಘೋಷಿಸುತ್ತಾರೆ: "ನಾನು ನಾಳೆ ಪಾಂಡವರನ್ನು ಕೊಲ್ಲುತ್ತೇನೆ"

ಭೀಷ್ಮರ ಘೋಷಣೆ ವಿಚಾರ ತಿಳಿದ ಪಾಂಡವರ ಶಿಬಿರದಲ್ಲಿ ಆತಂಕ ಮನೆಮಾಡಿತ್ತು.

ಭೀಷ್ಮನ ಸಾಮರ್ಥ್ಯಗಳ ಬಗ್ಗೆ ಎಲ್ಲರಿಗೂ ತಿಳಿದಿತ್ತು. ಆದ್ದರಿಂದ ಪ್ರತಿಯೊಬ್ಬರೂ ಅತ್ಯಂತ ಕೆಟ್ಟ ಭವಿಷ್ಯದ ಬಗ್ಗೆಯೇ ಚಿಂತೆ ಮಾಡುತ್ತಿದ್ಧರು. 

ನಂತರ ಶ್ರೀ ಕೃಷ್ಣ ದ್ರೌಪದಿಗೆ, ಈಗ ನನ್ನೊಂದಿಗೆ ಬಾ  ಎಂದು ನೇರವಾಗಿ ಭೀಷ್ಮ ಪಿತಾಮಹನ ಶಿಬಿರಕ್ಕೆ ಕರಕೊಂಡು ಹೋದ.

ಶಿಬಿರದ ಹೊರಗೆ ನಿಂತು ದ್ರೌಪದಿಗೆ – “ಒಳಗೆ ಹೋಗಿ ಅಜ್ಜನಿಗೆ ನಮಸ್ಕರಿಸು.” ಎಂದು ಹೇಳಿದ.

ದ್ರೌಪದಿ ಒಳಗೆ ಹೋಗಿ ಪಿತಾಮಹ ಭೀಷ್ಮನಿಗೆ ನಮಸ್ಕರಿಸಿದಾಗ ಅವರು -    "ಅಖಂಡ ಸೌಭಾಗ್ಯವತಿಭವ" ಎಂದು ಆಶೀರ್ವದಿಸಿ, ನಂತರ ದ್ರೌಪದಿಯನ್ನು ಕೇಳಿದರು !!

"ಮಗಳೇ, ಇಂತಹ ಅಪರಾತ್ರಿಯಲ್ಲಿ ನೀನು ಏಕಾಂಗಿಯಾಗಿ ಇಲ್ಲಿಗೆ ಹೇಗೆ ಬಂದಿದ್ದೀ? ಶ್ರೀ ಕೃಷ್ಣ ನಿನ್ನನ್ನು ಇಲ್ಲಿಗೆ  ಕರೆತಂದರಾ"? 

ಆಗ ದ್ರೌಪದಿ ಹೀಗೆ ಹೇಳಿದಳು - "ಹೌದು. ಅವರು ಶಿಬಿರದ ಹೊರಗೆ ನಿಂತಿದ್ದಾರೆ" 

ನಂತರ ಭೀಷ್ಮನು ಸಹ ಕೋಣೆಯಿಂದ ಹೊರಬಂದನು ಮತ್ತು ಇಬ್ಬರೂ ಪರಸ್ಪರ ನಮಸ್ಕರಿಸಿದರು. 

"ನನ್ನ ಒಂದು ವಚನವನ್ನು ನನ್ನ ಇತರ ವಚನಗಳಿಂದ  ಕತ್ತರಿಸಲು ಶ್ರೀ ಕೃಷ್ಣನಿಗೆ ಮಾತ್ರ ಸಾಧ್ಯ!"

ಶಿಬಿರದಿಂದ ಹಿಂದಿರುಗುವಾಗ, ಶ್ರೀ ಕೃಷ್ಣನು ದ್ರೌಪದಿಗೆ ಹೀಗೆ ಹೇಳಿದನು - "ಒಮ್ಮೆ ನೀನು ಹೋಗಿ ಅಜ್ಜನಿಗೆ ಗೌರವ ಸಲ್ಲಿಸಿದರೆ, ನಿನ್ನ ಗಂಡಂದಿರಿಗೆ ಜೀವದಾನ ಸಿಕ್ಕಿತು. ನೀನು ಧೃತರಾಷ್ಟ್ರ, ದ್ರೋಣಾಚಾರ್ಯ ಎಲ್ಲರಿಗೂ ನಮಸ್ಕಾರ ಮಾಡುತ್ತಿದ್ದರೆ, ಮತ್ತು ದುರ್ಯೋಧನ - ದುಶ್ಯಾಸನ ಇತ್ಯಾದಿಯವರ ಪತ್ನಿಯರು ಸಹ ಪಾಂಡವರಿಗೆ ನಮಸ್ಕಾರ ಮಾಡುತ್ತಿದ್ದರೆ, ಬಹುಶಃ ಈ ಯುದ್ಧವೇ ಆಗುತ್ತಿರಲಿಲ್ಲ".

..... ಅಂದರೆ ...... 

ಪ್ರಸ್ತುತ ನಮ್ಮ ಮನೆಗಳಲ್ಲಿ ಅನೇಕ ಸಮಸ್ಯೆಗಳಿಗೆ ಮೂಲ ಕಾರಣವೆಂದರೆ -
"ತಿಳಿಯದೆ ಆಗಾಗ್ಗೆ ಮನೆಯ ಹಿರಿಯರನ್ನು ಕಡೆಗಣಿಸಲಾಗುತ್ತದೆ"

"ಮನೆಯ ಮಕ್ಕಳು ಮತ್ತು ಸೊಸೆಯಂದಿರು ಪ್ರತಿದಿನ ಮನೆಯ ಎಲ್ಲ ಹಿರಿಯರಿಗೆ ನಮಸ್ಕರಿಸಿ ಅವರ ಆಶೀರ್ವಾದವನ್ನು ತೆಗೆದುಕೊಂಡರೆ, ಯಾವುದೇ ಮನೆಯಲ್ಲಿ ಎಂದಿಗೂ ಕ್ಲೇಶಗಳು ಉಂಟಾಗುವುದಿಲ್ಲ"

ಹಿರಿಯರು ನೀಡಿದ ಆಶೀರ್ವಾದಗಳು ರಕ್ಷಾಕವಚವಾಗಿ ಕಾರ್ಯನಿರ್ವಹಿಸುತ್ತವೆ; ಯಾವುದೇ "ಆಯುಧ" ಭೇದಿಸಲು ಸಾಧ್ಯವಿಲ್ಲ.

"ವಿನಂತಿಸಿ, ಪ್ರತಿಯೊಬ್ಬರೂ ಈ ಸಂಸ್ಕೃತಿಯನ್ನು ಅಳವಡಿಸಿದರೆ, ನಿಯಮ ಬದ್ಧವಾಗಿ ಮಾಡಿದರೆ 
ಮನೆ ಸ್ವರ್ಗವಾಗುತ್ತದೆ."

ಏಕೆಂದರೆ: -
ನಮಸ್ಕಾರ ಪ್ರೀತಿ.
ನಮಸ್ಕಾರಗಳು ಶಿಸ್ತು.
ನಮಸ್ಕಾರ ಶೀತಲತೆ.
ನಮಸ್ಕಾರ ಗೌರವವನ್ನು ಕಲಿಸುತ್ತವೆ.
ನಮಸ್ಕಾರದಿಂದ ಸುವಿಚಾರ ಬರುತ್ತದೆ.
ನಮಸ್ಕಾರ ಬಾಗುವುದನ್ನು ಕಲಿಸುತ್ತದೆ.
ನಮಸ್ಕಾರ ಕೋಪವನ್ನು ಅಳಿಸುತ್ತದೆ.
ನಮಸ್ಕಾರ ಅಹಂನ್ನು ಅಳಿಸುತ್ತದೆ.
ನಮಸ್ಕಾರ ನಮ್ಮ ಸಂಸ್ಕೃತಿ.!! 

ಅಬ್ಬಬ್ಬಾ ಎಷ್ಟು ಸಮೃದ್ಧವಾಗಿದೆ ನನ್ನ ಹೆಮ್ಮೆಯ ಭಾರತ..!! ಧನ್ಯೋಸ್ಮಿ..!!*🙏❤️🙏*