Friday, July 21, 2023

ಕಂಪ್ಯೂಟರ್ ಡ್ರೈವ್ ಗಳನ್ನು ಈಗಲೂ ಯಾಕೆ 'C' ನಿಂದಲೇ ಪ್ರಾರಂಭಿಸುತ್ತಾರೆ? C, D, E ಡ್ರೈವ್ ಗಳನ್ನು A, B, C ಡ್ರೈವ್ ಗಳಾಗಿ ಬದಲಾಯಿಸಬಹುದೆ?

 ಹಳೆಯ ಕಂಪ್ಯೂಟರ್‌ಗಳಲ್ಲಿ ಹಾರ್ಡ್ ಡಿಸ್ಕ್ ಇರುತ್ತಿರಲಿಲ್ಲ. ಇದರ ಬದಲಾಗಿ ಡೇಟಾ ಶೇಖರಿಸಿಡಲು ಫ್ಲಾ಼ಪಿ ಡಿಸ್ಕ್‌ಗಳಿದ್ದವು. ಓ‌ಎಸ್‌ ಅನ್ನು ನೇರವಾಗಿ ಫ್ಲಾ಼ಪಿ ಡಿಸ್ಕಿನಿಂದ ಲೋಡ್ ಮಾಡಲಾಗುತ್ತಿತ್ತು. ಮೂರುವರೆ ಇಂಚ್ ಮತ್ತು ಐದೂವರೆ ಇಂಚ್ ಗಾತ್ರದ ಫ್ಲಾ಼ಪಿ ಡಿಸ್ಕನ್ನು ಹಾಕಲು ಎರಡು ಫ್ಲಾ಼ಪಿ ಡಿಸ್ಕ್ ಡ್ರೈವ್‌ಗಳು ಇದ್ದವು. ಈ ಫ್ಲಾ಼ಪಿ ಡ್ರೈವ್‌ಗಳನ್ನು ಸೂಚಿಸಲು A ಮತ್ತು B ಅಕ್ಷರವನ್ನು ಬಳಸುತ್ತಿದ್ದರು.

ಹಾರ್ಡ್ ಡಿಸ್ಕ್ ಬಂದಮೇಲೆ ಹಾರ್ಡ್ ಡಿಸ್ಕ್ ಡ್ರೈವ್‌ಗಳಿಗೆ C, D, E... ಅಕ್ಷರಗಳ ಹೆಸರಿಡುವುದು ರೂಢಿಗೆ ಬಂತು. ಹಾರ್ಡ್ ಡಿಸ್ಕಿನ ಮೊದಲ ಪಾರ್ಟಿಷನ್ ಅಥವಾ ಓಎಸ್ ಇರುವ ಸಿಸ್ಟಮ್ ಪಾರ್ಟಿಷನ್ C ಡ್ರೈವ್ ಆಗಿರುತ್ತದೆ. ಉಳಿದ ಪಾರ್ಟಿಷನ್ ಮತ್ತು ಡ್ರೈವ್‌ಗಳು D, E, F ಮುಂತಾದವು ಆಗಿರುತ್ತದೆ.

೧೯೯೦ ದಶಕದ ಕೊನೆಯಿಂದ ಫ್ಲಾ಼ಪಿ ಡಿಸ್ಕಿನ ಬಳಕೆಯು ಕಡಿಮೆಯಾಗುತ್ತಾ ಹೋಗಿ, ಕ್ರಮೇಣ ನಿಂತುಹೋಗುತ್ತದೆ. ೨೦೦೫ರಿಂದ ನಿರ್ಮಿಸಲಾದ ಬಹುತೇಕ ಎಲ್ಲಾ ಕಂಪ್ಯೂಟರ್‌ಗಳಲ್ಲಿ ಫ್ಲಾ಼ಪಿ ಡ್ರೈವ್ ‌ಇಲ್ಲ. ಇದರಿಂದಾಗಿ ಹೊಸ ಕಂಪ್ಯೂಟರ್‌ಗಳಲ್ಲಿ A ಮತ್ತು B ಡ್ರೈವ್ ಅಕ್ಷರಗಳು ಬಳಕೆಯಲ್ಲಿಲ್ಲ. ಆದರೂ ಕೂಡ ಹಿಂದಿನಂತೆ ಡ್ರೈವ್ ಹೆಸರನ್ನು C ಅಕ್ಷರದಿಂದ ಪ್ರಾರಂಭಿಸುವ ಪದ್ಧತಿಯು ಮುಂದುವರೆದಿದೆ.

D, E, F ಮುಂತಾದ ಪೂರ್ವನಿಯೋಜಿತ ಡ್ರೈವ್ ಅಕ್ಷರವನ್ನು A, B ಸೇರಿದಂತೆ ನಿಮಗೆ ಬೇಕಾದ (ಬೇರೆ ಡ್ರೈವ್ ಬಳಕೆಯಲ್ಲಿಲ್ಲದ) ಅಕ್ಷರಕ್ಕೆ ಬದಲಾಯಿಸಬಹುದು. ಆದರೆ C ಡ್ರೈವ್ ಅಕ್ಷರವನ್ನು ಬದಲಾಯಿಸುವುದು ಒಳ್ಳೆಯದಲ್ಲ. ಏಕೆಂದರೆ ಓಎಸ್ C ಡ್ರೈವ್‌ನಲ್ಲೇ ಇದೆ ಅಂದುಕೊಂಡು ಬಹಳಷ್ಟು ಡ್ರೈವರ್ ಮತ್ತು ತಂತ್ರಾಂಶಗಳನ್ನು ಕೋಡ್ ಮಾಡಲಾಗಿದೆ. C ಡ್ರೈವ್ ಅಕ್ಷರವನ್ನು ಬದಲಾಯಿಸಿದರೆ ಇವು ಸರಿಯಾಗಿ ಓಡದೇ ತೊಂದರೆ ಉಂಟಾಗುತ್ತದೆ.

ಡ್ರೈವ್ ಅಕ್ಷರವನ್ನು ಬದಲಾಯಿಸಬೇಕೆಂದರೆ ವಿಂಡೋಸ್‌ನಲ್ಲೆ ಇರುವ ಡಿಸ್ಕ್ ಮ್ಯಾನೇಜ್ಮೆಂಟ್ ಅಥವಾ ಯಾವುದೇ ಪಾರ್ಟಿಷನ್ ಮ್ಯಾನೇಜ್ಮೆಂಟ್ ತಂತ್ರಾಂಶವನ್ನು ಬಳಸಿ ಬದಲಾಯಿಸಬಹುದು.

ಕ್ಲೌಡ್ ಕಂಪ್ಯೂಟಿಂಗ್ ಎಂದರೇನು?

 ಕ್ಲೌಡ್ ಕಂಪ್ಯೂಟಿಂಗ್ ಎಂದರೆ ಗಣಕಯಂತ್ರದ ಸಂಪನ್ಮೂಲಗಳನ್ನು ಒಂದು ನೆಟ್ ವರ್ಕ್ ಮೂಲಕ ಸಾಮಾನ್ಯವಾಗಿ ಅಂತರ್ಜಾಲದಲ್ಲಿ ಸೇವೆಯಾಗಿ ಒದಗಿಸುವುದು ಎನ್ನಬಹುದು, ಏಕೆಂದರೆ ಇದರ ಮೂಲಕ ನೀವು ಗಣಕಯಂತ್ರದ ಸಂಪನ್ಮೂಲಗಳನ್ನು ಭೌತಿಕವಾಗಿ ನಿಮ್ಮ ಸ್ಥಳದಲ್ಲಿ ಹೊಂದುವ ಅಗತ್ಯವಿಲ್ಲದೆ ಪಾವತಿಯ ಸೇವೆಯಾಗಿ ಬಳಸಬಹುದು.

ಕ್ಲೌಡ್ ಕಂಪ್ಯೂಟಿಂಗ್ ಎನ್ನುವುದು ಅಂತರ್ಜಾಲದಲ್ಲಿ ಡೇಟಾವನ್ನು ಸಂಗ್ರಹಿಸಲು ಮತ್ತು ಪಡೆದುಕೊಳ್ಳಲು ಬಳಸಲಾಗುತ್ತದೆ. ಇದು ನಿಮ್ಮ ವೈಯಕ್ತಿಕ ಗಣಕಯಂತ್ರದ ಹಾರ್ಡ್ ಡಿಸ್ಕ್ನಲ್ಲಿ ಯಾವುದೇ ಡೇಟಾವನ್ನು ಸಂಗ್ರಹಿಸುವುದಿಲ್ಲ. ಕ್ಲೌಡ್ ಕಂಪ್ಯೂಟಿಂಗ್‌ನಲ್ಲಿ, ನೀವು ದೂರದ ಸರ್ವರ್‌ನಿಂದ ಡೇಟಾವನ್ನು ಸಂಪರ್ಕಿಸಬಹುದು.

ಉದಾಹರಣೆ: AWS, Azure, Google ಕ್ಲೌಡ್ ಇತ್ಯಾದಿ.

ಸರಳವಾಗಿ ಹೇಳುವುದಾದರೆ, ಒಂದು ಅಂಗಡಿಯಿಂದ ಬಾಡಿಗೆಗೆ ಒಂದು ಯಾವುದೊ ‘ವಸ್ತುವನ್ನು’ ತೆಗೆದುಕೊಂಡು ಬಂದಿರಿ ಎಂದು ಭಾವಿಸಿ , ಇಲ್ಲಿ ನೀವು ಆ ‘ವಸ್ತುವನ್ನು’ ಸೇವೆ (service)ಎಂದು ,ಬಾಡಿಗೆಗೆ ಕೊಟ್ಟವ್ನನ್ನು ಸೇವೆ ಒದಗಿಸುವವರು (service provider) ಎಂದು ಪರಿಗಣಿಸಬಹುದು. ನೀವು ಆ ವಸ್ತುವನ್ನು ಎಲ್ಲಿ ಬೇಕಾದರೂ ಹೇಗೆ ಬೇಕಾದರೂ ಉಪಯೋಗ ಮಾಡಿಕೊಂಡು ನಂತರ ಆ ‘ವಸ್ತುವನ್ನು’ ಅಂಗಡಿಗೆ ಹಿಂದಿರುಗಿಸಬೇಕಾಗುತ್ತದೆ ಅಂದರೆ ಇಲ್ಲಿ ನೀವು ‘ವಸ್ತುವಿಗೆ’ ನಿಜವಾದ ಬೆಲೆಯನ್ನು ಪಾವತಿಸುವುದಿಲ್ಲ ಬದಲಾಗಿ ಬಾಡಿಗೆಗೆ ಪಡೆದ ದಿನಗಳಿಗೆ ಕನಿಷ್ಠ ಮೊತ್ತವನ್ನು ಮಾತ್ರ ಪಾವತಿಸಬೇಕಾಗುತ್ತದೆ.

ಕ್ಲೌಡ್ (ಮೇಘ) ಎಂಬ ಪದವು ನೆಟ್‌ವರ್ಕ್ ವಿನ್ಯಾಸದಿಂದ ಬಂದಿದ್ದು, ಇದನ್ನು ನೆಟ್‌ವರ್ಕ್ ಎಂಜಿನಿಯರ್‌ಗಳು ವಿವಿಧ ನೆಟ್‌ವರ್ಕ್ ಸಾಧನಗಳ ಸ್ಥಳ ಮತ್ತು ಅವುಗಳ ಪರಸ್ಪರ ಸಂಪರ್ಕವನ್ನು ಪ್ರತಿನಿಧಿಸಲು ಬಳಸುತ್ತಿದ್ದರು. ಈ ನೆಟ್‌ವರ್ಕ್ ವಿನ್ಯಾಸದ ಆಕಾರವು ಮೋಡದಂತೆಯೇ ಇತ್ತು ಆ ಕಾರಣದಿಂದ ಕ್ಲೌಡ್ ಎಂಬ ಹೆಸರು ಬಂತು.

ಕ್ಲೌಡ್ ಕಂಪ್ಯೂಟಿಂಗ್‌ನ ಅನುಕೂಲಗಳು

  • ನೀವು ಬಳಸುವದಕ್ಕೆ ಮಾತ್ರ ಪಾವತಿಸಿ, ಆದ್ದರಿಂದ ನೀವು ಅಗತ್ಯವಿದ್ದಾಗ ಮಾತ್ರ ಬೇಡಿಕೆಯನ್ನು ಹೆಚ್ಚಿಸಿ ಅನಗತ್ಯ ಹೂಡಿಕೆಯನ್ನು ತಡೆಯಬಹುದು.
  • ಕ್ಲೌಡ್ ಬಹುತೇಕ ಮಿತಿಯಿಲ್ಲದ ಶೇಖರಣಾ ಸಾಮರ್ಥ್ಯವನ್ನು ನೀಡುತ್ತದೆ. ಯಾವುದೇ ಸಮಯದಲ್ಲಿ ನೀವು ಬಹಳ ಕಡಿಮೆ ಮಾಸಿಕ ಶುಲ್ಕದೊಂದಿಗೆ ನಿಮ್ಮ ಸಂಗ್ರಹ ಸಾಮರ್ಥ್ಯವನ್ನು ತ್ವರಿತವಾಗಿ ವಿಸ್ತರಿಸಬಹುದು.
  • ಸರ್ವರ್‌ಗಳನ್ನು ನಿರ್ವಹಿಸಲು ಯಾವುದೇ ಸ್ಥಳ ಮತ್ತು ಹೂಡಿಕೆ ಅಗತ್ಯವಿಲ್ಲ.
  • ಸೇವೆ ಒದಗಿಸುವವರು ತಮ್ಮ ಸಂಪನ್ಮೂಲಗಳೊಂದಿಗೆ ಅದನ್ನು ನೋಡಿಕೊಳ್ಳುವುದರಿಂದ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ನಿರ್ವಹಣೆಗೆ ಯಾವುದೇ ತಜ್ಞರ ಅಗತ್ಯವಿಲ್ಲ.
  • ದತ್ತಾಂಶದ ಸುರಕ್ಷತೆಯ ಉತ್ತಮ ಭರವಸೆ ಇರುತ್ತದೆ.
  • ದತ್ತಾಂಶವನ್ನು ಕ್ಲೌಡ್ ಲ್ಲಿಸಂಗ್ರಹಿಸಿದ ನಂತರ ಅಂತರ್ಜಾಲದ ಮೂಲಕ ಎಲ್ಲಿ ಬೇಕಾದರೂ ಹಂಚಿಕೊಳ್ಳಬಹುದು ಮತ್ತು ಪಡೆದುಕೊಳ್ಳಬಹುದು, ಸಂಗ್ರಹಿಸಿದ ನಂತರ, ಅದರ ಬ್ಯಾಕಪ್ ಮತ್ತು ರಿಕವರಿ ಪಡೆಯುವುದು ಸುಲಭ.
  • ಸ್ವಯಂಚಾಲಿತ ಸಾಫ್ಟ್‌ವೇರ್ ನವೀಕರಣಗಳು.
  • ಕ್ಲೌಡ್ ಕಂಪ್ಯೂಟಿಂಗ್ ನಿಮ್ಮ ಸೇವೆಯನ್ನು ಕಡಿಮೆ ಸಮಯದಲ್ಲಿ ತ್ವರಿತವಾಗಿ ಮಾಡಲು ಸಹಾಯ ಮಾಡುತ್ತದೆ.

ಸೇವಾ ಮಾದರಿಗಳ ಪ್ರಕಾರಗಳು :

1.ತಂತ್ರಾಂಶ ಸೇವೆಯಾಗಿ(ಸಾಸ್)/ Software as a Service (SaaS):

ಇದು ಸಾಂಪ್ರದಾಯಿಕ ಆನ್-ಡಿವೈಸ್ ತಂತ್ರಾಂಶವನ್ನು ಚಂದಾದಾರಿಕೆ ಆಧಾರದ ಮೇಲೆ ಪರವಾನಗಿ ಪಡೆದ ತಂತ್ರಾಂಶದೊಂದಿಗೆ ಬದಲಾಯಿಸುತ್ತದೆ(ಪಿಸಿಯಲ್ಲಿ ಸ್ಥಾಪಿಸುವ ಅಗತ್ಯವಿಲ್ಲ). ಇದನ್ನು ಕ್ಲೌಡಲ್ಲಿ ಕೇಂದ್ರೀಯವಾಗಿ ಹೋಸ್ಟ್ ಮಾಡಲಾಗಿರುತ್ತದೆ , ಇದಕ್ಕೆ ಉತ್ತಮ ಉದಾಹರಣೆ ಸೇಲ್ಸ್‌ಫೋರ್ಸ್.ಕಾಮ್. ಯಾವುದೇ ಸಾಸ್‌(SaaS) ಅಪ್ಲಿಕೇಶನ್‌ಗಳನ್ನು ಯಾವುದೇ ಡೌನ್‌ಲೋಡ್‌ಗಳು ಅಥವಾ ಸ್ಥಾಪನೆಗಳಿಲ್ಲದೆ ವೆಬ್ ಬ್ರೌಸರ್‌ನಿಂದ ನೇರವಾಗಿ ಸಂಪರ್ಕಿಸಿ ಬಳಸಬಹುದು. ಆದಾಗ್ಯೂ, ಕೆಲವು ಸಾಸ್ ಅಪ್ಲಿಕೇಶನ್‌ಗಳಿಗೆ ಪ್ಲಗಿನ್‌ಗಳು ಬೇಕಾಗಬಹುದು.

2.ಪ್ಲಾಟ್‌ಫಾರ್ಮ್ ಸೇವೆಯಾಗಿ(ಪಾಸ್)/ Platform as a Service (PaaS):

ಇದು ಸಂಸ್ಥೆಗಳಿಗೆ ಐಟಿ ಮೂಲಸೌಕರ್ಯವಿಲ್ಲದೆ ಅಪ್ಲಿಕೇಶನ್‌ಗಳನ್ನು ನಿರ್ಮಿಸಲು, ಚಲಾಯಿಸಲು ಮತ್ತು ನಿರ್ವಹಿಸಲು ಸುಲಭವಾದ ದಾರಿ. ನಿಮಗೆ ಅಗತ್ಯವಿರುವ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸುವ ಅಗತ್ಯ ಪರಿಕರಗಳ ಜೊತೆಗೆ ಸೇವಾ ಪೂರೈಕೆದಾರರಿಂದ ಪ್ಲಾಟ್‌ಫಾರ್ಮ್ ಅನ್ನು ಬಾಡಿಗೆ ರೂಪದಲ್ಲಿ ಪಡೆಯಬಹುದು. ಪ್ರೋಗ್ರಾಮಿಂಗ್ ಭಾಷೆ + ಓಎಸ್ + ಸರ್ವರ್ + ಡೇಟಾಬೇಸ್ ಇದೆಲ್ಲ ಒಂದು ರೀತಿಯ ಪ್ಲಾಟ್ಫಾರ್ಮ್ ಆಗಿದೆ. ನೀವು ಈ ಪ್ಲಾಟ್‌ಫಾರ್ಮ್ ಗಳನ್ನು ಬಳಸಿ ಅಪ್ಲಿಕೇಶನ್‌ಗಳನ್ನು ನಿರ್ಮಿಸಬಹುದು, ಕಂಪೈಲ್ ಮಾಡಬಹುದು ಮತ್ತು ಚಲಾಯಿಸಬಹುದು. ಇದು ನಿಮ್ಮ ಸಂಸ್ಥೆಗಳ ನಿರ್ವಹಣೆಯನ್ನು ಮತ್ತು ವೆಚ್ಚವನ್ನು ಕಡಿಮೆ ಮಾಡುತ್ತದೆ. ನಿಮ್ಮ ಸೇವೆಗಳನ್ನು ಬೇಡಿಕೆಯ ಮೇರೆಗೆ ನವೀಕರಿಸಲು ಮತ್ತು ಅಳೆಯಲು ಪಾಸ್ ನಿಮಗೆ ಸುಲಭಗೊಳಿಸುತ್ತದೆ.

3.ಮೂಲಸೌಕರ್ಯ ಸೇವೆಯಾಗಿ(ಐಎಎಎಸ್)/ Infrastructure as a Service (IaaS):

ಉಪಯುಕ್ತತೆಗಳ ವಿಷಯದಲ್ಲಿ ಇದು ಅತ್ಯಂತ ಮೂಲಭೂತವಾದದ್ದು, ಐಟಿ ನಿರ್ವಾಹಕರು ಸೇವೆಯಲ್ಲಿರುವ ಎಲ್ಲದರ ಬಗ್ಗೆ ಕಾಳಜಿ ವಹಿಸಬೇಕು. ಇದು ಕಂಪ್ಯೂಟಿಂಗ್ ಮೂಲಸೌಕರ್ಯವನ್ನು ಒದಗಿಸುತ್ತದೆ. ಡೇಟಾ + ಸಂಗ್ರಹಣೆ + ವರ್ಚುವಲೈಸೇಶನ್ + ಸರ್ವರ್‌ಗಳು + ನೆಟ್‌ವರ್ಕಿಂಗ್ ಎನ್ನುವುದು ಮೂಲಸೌಕರ್ಯವಾಗಿದ್ದು ಅದನ್ನು ಮಾರಾಟಗಾರರಿಂದ ನಿರ್ವಹಿಸಲಾಗುತ್ತದೆ. ಬಳಕೆದಾರರು ಡೇಟಾ ಮತ್ತು ಮಿಡಲ್ವೇರ್ ಅನ್ನು ನಿರ್ವಹಿಸುತ್ತಾರೆ.ಅಮೆಜಾನ್ ವೆಬ್ ಸೇವೆಗಳು, ಮೈಕ್ರೋಸಾಫ್ಟ್ ಅಜೂರ್ ಅಥವಾ ಗೂಗಲ್‌ನಂತಹ ಮೂರನೇ ವ್ಯಕ್ತಿಯು ಹೋಸ್ಟ್ ಮಾಡಿದ ಅಂತರ್ಜಾಲದಲ್ಲಿ ಐಎಎಎಸ್ ವರ್ಚುವಲೈಸ್ಡ್ ಕಂಪ್ಯೂಟಿಂಗ್ ಸಂಪನ್ಮೂಲಗಳನ್ನು ಒದಗಿಸುತ್ತದೆ. ಯಂತ್ರಾಂಶವನ್ನು ಖರೀದಿಸುವ ಬದಲು, ಕಂಪನಿಗಳು ಬಳಕೆಯ ಮಾದರಿಯನ್ನು ಆಧರಿಸಿ ಐಎಎಸ್ ಅನ್ನು ಖರೀದಿಸುತ್ತವೆ. ಅನೇಕ ಐಟಿ ಸಂಸ್ಥೆಗಳು ಐಎಎಎಸ್ ಅನ್ನು ಹೆಚ್ಚು ಅವಲಂಬಿಸಿವೆ.

ನಿಯೋಜನೆ ಮಾದರಿಗಳ ಪ್ರಕಾರಗಳು

1.ಖಾಸಗಿ ಕ್ಲೌಡ್ / Private Cloud:

ಈ ಮಾದರಿಯು ಪ್ರತ್ಯೇಕವಾಗಿ ಒಂದೇ ಸಂಸ್ಥೆಗಳು ಬಳಸುತ್ತವೆ. ಇದು ಸುರಕ್ಷತೆಯ ಮೇಲೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತದೆ. ಹೆಚ್ಚಿನ ಸುರಕ್ಷತೆಯ ಅವಶ್ಯಕತೆಗಳು, ಹೆಚ್ಚಿನ ನಿರ್ವಹಣಾ ಬೇಡಿಕೆಗಳು ಮತ್ತು ಲಭ್ಯತೆಯ ಅವಶ್ಯಕತೆಗಳನ್ನು ಹೊಂದಿರುವ ಸಂಸ್ಥೆಗಳಿಗೆ ಖಾಸಗಿ ಕ್ಲೌಡ್ ಸೂಕ್ತವಾಗಿವೆ. ಉದಾಹರಣೆ: VMware

2.ಸಾರ್ವಜನಿಕ ಕ್ಲೌಡ್ / Public Cloud:

ಈ ರೀತಿಯ ಕ್ಲೌಡ್ ಸೇವೆಗಳನ್ನು ಸಾರ್ವಜನಿಕ ಬಳಕೆಗಾಗಿ ನೆಟ್‌ವರ್ಕ್‌ನಲ್ಲಿ ಒದಗಿಸುತ್ತಾರೆ. ಮೂಲಸೌಕರ್ಯದ ಸ್ಥಳದ ಮೇಲೆ ಗ್ರಾಹಕರಿಗೆ ಯಾವುದೇ ನಿಯಂತ್ರಣವಿಲ್ಲ. ಇದು ಎಲ್ಲಾ ಬಳಕೆದಾರರಿಗೆ ಹಂಚಿದ ವೆಚ್ಚದ ಮಾದರಿಯನ್ನು ಆಧರಿಸಿದೆ ಅಥವಾ ಪ್ರತಿ ಬಳಕೆದಾರರಿಗೆ ಪಾವತಿಸುವಂತಹ ಪರವಾನಗಿ ನೀತಿಯ ರೂಪದಲ್ಲಿರುತ್ತದೆ. ಬೆಳೆಯುತ್ತಿರುವ ಮತ್ತು ಏರಿಳಿತದ ಬೇಡಿಕೆಗಳನ್ನು ಹೊಂದಿರುವ ಸಂಸ್ಥೆಗಳಿಗೆ ಮೋಡದಲ್ಲಿ ಸಾರ್ವಜನಿಕ ನಿಯೋಜನೆ ಮಾದರಿಗಳು ಸೂಕ್ತವಾಗಿವೆ. ಅವರ ವೆಬ್ ಅಪ್ಲಿಕೇಶನ್‌ಗಳು, ವೆಬ್‌ಮೇಲ್ ಮತ್ತು ಸೂಕ್ಷ್ಮವಲ್ಲದ ಡೇಟಾದ ಸಂಗ್ರಹಣೆಗಾಗಿ ಇದು ಎಲ್ಲಾ ಗಾತ್ರದ ವ್ಯವಹಾರಗಳಲ್ಲಿ ಜನಪ್ರಿಯವಾಗಿದೆ.

3.ಸಮುದಾಯ ಕ್ಲೌಡ್ / Community Cloud:

ಈ ಮಾದರಿಯು ಬ್ಯಾಂಕುಗಳು, ಸರ್ಕಾರಿ ಸಂಸ್ಥೆಗಳು ಅಥವಾ ವಾಣಿಜ್ಯ ಉದ್ಯಮಗಳಂತಹ ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಸಂಸ್ಥೆಗಳ ನಡುವೆ ಪರಸ್ಪರ ಹಂಚಿಕೆಯ ಮಾದರಿಯಾಗಿದೆ. ಸಮುದಾಯದ ಸದಸ್ಯರು ಸಾಮಾನ್ಯವಾಗಿ ಗೌಪ್ಯತೆ,ಕಾರ್ಯಕ್ಷಮತೆ ಮತ್ತು ಸುರಕ್ಷತೆಯ ರೀತಿಯ ಸಮಸ್ಯೆಗಳನ್ನು ಹಂಚಿಕೊಳ್ಳುತ್ತಾರೆ. ಕ್ಲೌಡ್ ಕಂಪ್ಯೂಟಿಂಗ್‌ನ ಈ ರೀತಿಯ ನಿಯೋಜನಾ ಮಾದರಿಯನ್ನು ಆಂತರಿಕವಾಗಿ ಅಥವಾ ಮೂರನೇ ವ್ಯಕ್ತಿಯ ಮಾರಾಟಗಾರರಿಂದ ನಿರ್ವಹಿಸಲಾಗುತ್ತದೆ ಮತ್ತು ಹೋಸ್ಟ್ ಮಾಡಲಾಗುತ್ತದೆ.

4.ಹೈಬ್ರಿಡ್ ಕ್ಲೌಡ್ / Hybrid Cloud:

ಈ ಮಾದರಿಯು ಖಾಸಗಿ ಮತ್ತು ಸಾರ್ವಜನಿಕ ಕ್ಲೌಡ್ಗಳಲ್ಲಿ ಅತ್ಯುತ್ತಮವಾದದ್ದನ್ನು ಸಂಯೋಜಿಸುತ್ತದೆ, ಆದರೆ ಪ್ರತಿಯೊಂದೂ ಪ್ರತ್ಯೇಕ ಘಟಕಗಳಾಗಿ ಉಳಿಯಬಹುದು. ಇದಲ್ಲದೆ, ಕ್ಲೌಡ್ ಕಂಪ್ಯೂಟಿಂಗ್ ಮಾದರಿಯ ಈ ನಿಯೋಜನೆಯ ಭಾಗವಾಗಿ, ಆಂತರಿಕ ಅಥವಾ ಬಾಹ್ಯ ಪೂರೈಕೆದಾರರು ಸಂಪನ್ಮೂಲಗಳನ್ನು ಒದಗಿಸಬಹುದು. ಸ್ಕೇಲೆಬಿಲಿಟಿ, ನಮ್ಯತೆ ಮತ್ತು ಸುರಕ್ಷತೆಗೆ ಹೈಬ್ರಿಡ್ ಕ್ಲೌಡ್ ಸೂಕ್ತವಾಗಿದೆ. ಕೆಲವು ಸಂಸ್ಥೆ ಗಳು ಖಾಸಗಿ ಕ್ಲೌಡ್ ಅನ್ನು ತಮ್ಮ ಡೇಟಾವನ್ನು ಸುರಕ್ಷಿತಗೊಳಿಸಲು ಬಳಸಿ ಮತ್ತು ಸಾರ್ವಜನಿಕ ಕ್ಲೌಡ್ ಅನ್ನು ಬಳಸಿಕೊಂಡು ತನ್ನ ಗ್ರಾಹಕರೊಂದಿಗೆ ಸಂವಹನ ನಡೆಸುತ್ತವೆ ಈ ಮಾದರಿಯು ಇದಕ್ಕೆ ಉತ್ತಮವಾಗಿದೆ.

ಆಪರೇಟಿಂಗ್ ಸಿಸ್ಟಮ್ ಎಂದರೇನು?

 ಆಪರೇಟಿಂಗ್ ಸಿಸ್ಟಮ್ (ಓಎಸ್) ಏನು ಎಂದು ಅರ್ಥ ಮಾಡಿಕೊಳ್ಳಲು ಮೊಬೈಲಿನ ಆಂಡ್ರಾಯ್ಡ್ ಅಥವಾ ಐಓಎಸ್ ಆಪರೇಟಿಂಗ್ ಸಿಸ್ಟಮ್ ಅನ್ನು ಅರ್ಥ ಮಾಡಿಕೊಂಡರೆ ಅನುಕೂಲ.

ಒಂದು ಹೊಸ ಮೊಬೈಲಿನಲ್ಲಿ ಯಾವುದೇ ಆಪ್ ಡೌನ್ಲೋಡ್ ಮಾಡದೆ ಏನೇನು ಕೆಲಸಗಳನ್ನು ಮಾಡಬಹುದೋ ಅವೆಲ್ಲವೂ ಆಪರೇಟಿಂಗ್ ಸಿಸ್ಟಮ್ ಎಂದು ಕರೆಯಲ್ಪಡುವ ಸಾಫ್ಟ್ವೇರ್ ಮಾಡುವ ಕೆಲಸಗಳು.

ಅಷ್ಟೇ ಅಲ್ಲ, ಆಪ್ ಡೌನ್ಲೋಡ್ ಮಾಡಲು ಆಮೇಲೆ ಅವುಗಳನ್ನು ನಡೆಸಲು ಸಹಾಯ ಮಾಡುವುದೂ ಕೂಡಾ ಇದೇ ಓಎಸ್.

ಮೊಬೈಲ್ ಓಎಸ್ ಏನೆಲ್ಲಾ ಮಾಡುತ್ತದೆ ನೋಡೋಣ:

  1. ಓಎಸ್ ಎಂಬುದು ಮೊಬೈಲ್ ಮತ್ತು ಬಳಕೆದಾರನ ಮಧ್ಯೆ ಇರುವ ಏಜೆಂಟ್. ಒಂದು ಲಾಡ್ಜ್ ಗೆ ಹೋದರೆ ರಿಸೆಪ್ಷನಿಸ್ಟ್ ಸ್ವಾಗತ ಮಾಡುತ್ತಾಳೆ. ನಿಮ್ಮ ವಿವರಗಳನ್ನು ಮತ್ತು ಅಗತ್ಯಗಳನ್ನು ತಿಳಿದುಕೊಂಡು ರೂಂ ಮತ್ತು ಊಟದ ವ್ಯವಸ್ಥೆ ಮಾಡುತ್ತಾಳೆ. ಓ ಎಸ್ ಕೂಡ ಡಿವೈಸಿನ ಸ್ಕ್ರೀನನ್ನು ಬಳಕೆದಾರನಿಗೆ ಆಕರ್ಷಕವಾಗಿ ಮತ್ತು ಅನುಕೂಲಕರವಾಗಿ ಇಡುತ್ತದೆ.
  2. ಎಸ್ ಎಂ ಎಸ್, ಎಂ ಎಂ ಎಸ್ ಗಳನ್ನು ಕಳಿಸುವ ಮತ್ತು ಸ್ವೀಕರಿಸುವ ಕೆಲಸವನ್ನು ಓಎಸ್ ಮಾಡುತ್ತದೆ.
  3. ಇಂಟರ್ನೆಟ್ ಜಾಲಾಡಲು ವೆಬ್ ಬ್ರೌಸರುಗಳನ್ನು ಉಪಯೋಗಿಸಲು ಓಎಸ್ ಅನುವು ಮಾಡುತ್ತದೆ.
  4. ಇತರ ಮೊಬೈಲು ಅಥವಾ ಟಿವಿ ಅಥವಾ ಕಂಪ್ಯೂಟರ್ ಗಳ ಜತೆ ಸಂಪರ್ಕ ಸಾಧಿಸಲು ಬ್ಲೂಟೂತ್, ವೈಫೈ ಮುಂತಾದ ಸೇವೆಗಳನ್ನು ಓಎಸ್ ದೊರಕಿಸುತ್ತದೆ.
  5. ಮೆಸೇಜುಗಳನ್ನು, ಹಾಡುಗಳನ್ನು, ಬರಹಗಳನ್ನು, ಪುಸ್ತಕಗಳನ್ನು ಸಂಗ್ರಹ ಮಾಡಲು ಓಎಸ್ ಒಬ್ಬ ಮ್ಯಾನೇಜರ್ ಕೆಲಸ ಮಾಡುತ್ತದೆ.
  6. ಒಟ್ಟಿಗೆ ಎರಡು ಮೂರು ಕೆಲಸಗಳನ್ನು ಮಾಡಲೂ ಓಎಸ್ ಬೇಕು.
  7. ಹಲವು ಭಾಷೆಗಳಲ್ಲಿ ಸಂವಹನ ನಡೆಸಲು ಓ ಎಸ್ ಸಹಾಯ ಮಾಡುತ್ತದೆ.
  8. ಇವಲ್ಲದೆ ನೂರಾರು ತರಹದ ಆಪ್ ಗಳನ್ನು ನಡೆಸಲು ಓಎಸ್ ಬೇಕೇ ಬೇಕು.

ಕಂಪ್ಯೂಟರ್ ಗಳ ಓ ಎಸ್ ಕೂಡ ಹೀಗೆಯೇ ಹಾರ್ಡ್ವೇರ್ ಮತ್ತು ಬಳಕೆದಾರರ ಮಧ್ಯೆ ಇರುವ ಅತ್ಯಾವಶ್ಯಕ ಸಾಫ್ಟ್ವೇರ್.

ಪ್ರಮುಖವಾದ ಪರ್ಸನಲ್ ಕಂಪ್ಯೂಟರ್ ಗಳ ಓಎಸ್ ಯಾವುವೆಂದರೆ ಮೈಕ್ರೋಸಾಫ್ಟ್ ವಿಂಡೋಸ್, ಆಪಲ್ ಮ್ಯಾಕ್ ಓಎಸ್, ಗೂಗಲ್ ನ ಕ್ರೋಂ ಓಎಸ್ ಮತ್ತು ಲೀನಕ್ಸ್.

ಒಂದು ಕಂಪ್ಯೂಟರ್ ಆಗಲೀ, ಮೊಬೈಲ್ ಆಗಲೀ, ಸರ್ವರ್ ಆಗಲೀ ಓ ಎಸ್ ಅನ್ನು ಈ ಕೆಳಗಿನ ಚಿತ್ರದಂತೆ ತೋರಿಸಬಹುದು.

ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮತ್ತು ಮಷೀನ್ ಲರ್ನಿಂಗ್ ನಡುವಿನ ಮುಖ್ಯ ವ್ಯತ್ಯಾಸಗಳು ಯಾವುವು?

 ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಅಥವ ಕೃತಕ ಬುದ್ಧಿಮತ್ತೆ ಎಂಬ ವಿಷಯವು ಬುದ್ಧಿ ಇರುವ ಯಂತ್ರಗಳ ತಯಾರಿಕೆ, ಉಪಯೋಗಗಳ ಬಗ್ಗೆ ಅಭ್ಯಾಸ ಮಾಡಿಸುತ್ತದೆ. ಅಂತಹ ಯಂತ್ರಗಳನ್ನು ತಯಾರಿಸಲು ಹಲವರು ಹಲವು ವಿಧಾನಗಳಲ್ಲಿ ಪ್ರಯತ್ನಿಸಿದ್ದಾರೆ. ಅದರಲ್ಲಿ ಮಷೀನ್ ಲರ್ನಿಂಗ್ (ML) ಅಥವಾ ಯಂತ್ರ (ಸ್ವ-) ಕಲಿಕೆ ಒಂದು ವಿಧಾನ. ಈ ಶತಮಾನದ ಹಿಂದಿನ ಹಾಗೂ ಇಂದಿನ ದಶಮಾನದಲ್ಲಿ ಯಂತ್ರ ಕಲಿಕೆ ವಿಧಾನವು ತುಂಬಾ ಫಲಕಾರಿಯಾಗಿದೆ.

ಏನಿದು ಯಂತ್ರ ಕಲಿಕೆ ಅಂದರೆ ಅಥವಾ ಅದನ್ನು ಯಾಕೆ ಹಾಗೆ ಕರೆಯುತ್ತಾರೆ ಅಂತಾ ಯೋಚಿಸುತ್ತಿದ್ದೀರಾ? ಉತ್ತರಕ್ಕಾಗಿ ಒಂದಷ್ಟು ಇತಿಹಾಸದ ಪುಟಗಳನ್ನು ತಿರುಗಿಸೋಣ ಬನ್ನಿ.

ಅಲನ್ ಟೂರಿಂಗ್ ಎಂಬ ಬ್ರಿಟಿಷ್ ಗಣಿತಜ್ಞನು ಎರಡನೇ ಮಹಾಯುದ್ಧದ ಸಮಯದಲ್ಲಿ ಜರ್ಮನಿ ಸೇನಾಪಡೆಯ ಸಂದೇಶಗಳನ್ನು ಆಲಿಸಲು ಡಿಜಿಟಲ್ ಗಣಕಯಂತ್ರವನ್ನು ಕಂಡು ಹಿಡಿದ. ಮುಂದೆ ಒಂದು ದಿನ ಗಣಕ ಯಂತ್ರವು ಮನುಷ್ಯನಷ್ಟು ಬುದ್ಧಿಮತ್ತೆಯನ್ನು ಪಡೆಯುತ್ತದೆ ಎಂದು ಕನಸು ಕಂಡ. ನಂತರ ಬಂದ ಮುಂದಿನ ತಲೆಮಾರಿನ ಗಣಿತಜ್ಞರು ಹಾಗೂ ಗಣಕ ವಿಜ್ಞಾನಿಗಳು ಗಣಕ ಯಂತ್ರಗಳಿಗೆ ಬುದ್ಧಿಮತ್ತೆ ಕೊಡುವ ಸಲುವಾಗಿ ಹಲವು ಬಗೆಯ ಪ್ರಯತ್ನಗಳನ್ನು ಮಾಡುತ್ತಾ ಬಂದಿದ್ದಾರೆ ಹಾಗೂ ಮಾಡುತ್ತಲೂ ಇದ್ದಾರೆ.

ಸುಮಾರು 1950-1980 ರವರೆಗೂ ರೂಲ್ಸ್ ಗಳನ್ನು ಬರೆಯುವುದರ ಮೂಲಕ ಪ್ರಯತ್ನಿಸಿದರು. ಅದನ್ನು ನಾವು ಸಿಂಬಾಲಿಕ್ ಅಥವಾ ಸಾಂಕೇತಿಕ AI ಅಂತ ಕರೆಯುತ್ತೇವೆ. ಬುದ್ಧಿಮತ್ತೆಯನ್ನು ಸಂಕೇತಗಳು ಮತ್ತು ರೂಲ್ಸ್ ಗಳಾಗಿ ಬರೆದು ಪ್ರಯತ್ನಿಸಿದರು. ಈ ವಿಧಾನದಲ್ಲಿ ಒಂದಷ್ಟು ಸುಲಭ ಕಾರ್ಯಗಳನ್ನು ಮಾಡುವಲ್ಲಿ ಯಶಸ್ವಿಯಾದರು. ಆದರೆ ಹಲವು ಕಷ್ಟದ ಕಾರ್ಯಗಳಿಗೆ ಆ ವಿಧಾನದಲ್ಲಿ ಅವಶ್ಯಕವಾದ ಸಂಕೇತಗಳು ಹಾಗೂ ರೂಲ್ಸ್ ಮನುಷ್ಯರಿಂದ ಮಾಡಲಾಗದಷ್ಟು ಕಠಿಣವಾಯಿತು. ಹಾಗಾಗಿ ಇನ್ನೊಂದು ಬೇರೆಯ ವಿಧಾನ ಅವಶ್ಯಕವಾಗಿತ್ತು. ಈ ವಿಧಾನದಲ್ಲಿ ಯಂತ್ರವು ತಾನೇ ಕಲಿಯುವಂತೆ ಮಾಡಿದರು. ಯಂತ್ರಕ್ಕೆ ನಾವು ಮನುಷ್ಯರು ಒಂದಷ್ಟು ಉದಾಹರಣೆಗಳನ್ನು ಕೊಟ್ಟರೆ ಯಂತ್ರ ತನ್ನಷ್ಟಕ್ಕೆ ತಾನೆ ಆ ಉದಾಹರಣೆಗಳಿಂದ ಬೇಕಾದ ಕಾರ್ಯವನ್ನು ಕಲಿಯುತ್ತದೆ. ಇದರಲ್ಲಿ ನಾವು ಯಂತ್ರಕ್ಕೆ ರೂಲ್ಸ್ ಗಳನ್ನು ಕೊಡುವ ಅವಶ್ಯಕತೆ ಇರುವುದಿಲ್ಲ. ನಾವು ಮನುಷ್ಯರು ಕೊಡುವ ಉದಾಹರಣೆಗಳಿಂದ ಯಂತ್ರವು ಕಲಿತು ಕೊಳ್ಳುವುದಕ್ಕೆ ಯಂತ್ರಕಲಿಕೆ ಎಂದು ಕರೆಯುತ್ತೇವೆ.

ಮಷೀನ್ ಲರ್ನಿಂಗ್ನ ಅತ್ಯಂತ ಪ್ರಾಯೋಗಿಕ ಅಪ್ಲಿಕೇಶನ್ ಯಾವುದು?

 ಮಷೀನ್ ಲರ್ನಿಂಗ್ ನ ಅತ್ಯಂತ ಪ್ರಾಯೋಗಿಕ ಹಾಗೂ ಹೆಚ್ಚಾಗಿ ಎಲ್ಲಾ ಕಡೆ ಬಳಸುತ್ತಿರುವ ಉಪಯೋಗ(ಅಪ್ಲಿಕೇಶನ್) ಎಂದರೆ ಶಿಫಾರಸ್ಸು ಯಂತ್ರ(recommendation engine) ಎನ್ನಬಹುದು.

ಮೇಲಿನದು ಕೇಳಿದ ಪ್ರಶ್ನೆಗೆ ಸರಳವಾದ ಉತ್ತರ.ತಮಾಷೆಗೆ ಹೇಳುವುದಾದರೆ ಒಂದು ಅಂಕದ ಪ್ರಶ್ನೆಗೆ ಮೇಲಿನದು ಸಾಕು.ನಾನು ಇದನ್ನು ೧೦ ಅಂಕಗಳಿಗೆ ಕೇಳಿದ್ದಾರೆ ಎಂದು ಭಾವಿಸಿ ವಿಸ್ತಾರವಾಗಿ ಅರ್ಥವಾಗುವ ಭಾಷೆಯಲ್ಲಿ ಕಥೆ ಪುರಾಣಗಳ ಸಹಿತವಾಗಿ ವಿವರಿಸಲು ಪ್ರಯತ್ನಿಸುತ್ತೇನೆ.

ನೀವು quora ದಲ್ಲೋ, ಯೌಟ್ಯೂಬ್ ನಲ್ಲೋ, ನೆಟ್ ಫ್ಲಿಕ್ಸ್ ನಲ್ಲೋ ,ಅಮೇಜಾನ್ ನಲ್ಲೋ ಒಂದು ವಿಷಯದ ಬಗ್ಗೆ ಓದಿ/ನೋಡಿ ಮುಗಿಸುವಷ್ಟರಲ್ಲಿ ಇನ್ನೊಂದು ವಿಷಯ ಹಾಜರಾಗಿ ಕೂತಿರುತ್ತದೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ನಾವು ಅದರ ಮೇಲೆ click ಮಾಡುತ್ತೇವೆ ಕೂಡ. ಹಾಗಾದರೆ ಈ ಶಿಫಾರಸ್ಸು ಯಂತ್ರಗಳು ಹೇಗೆ ಕಾರ್ಯನಿರ್ವಹಿಸುತ್ತವೆ,ನಮಗೆ ಬೇಕಾದುದನ್ನೇ ಹೇಗೆ ತಂದು ನಮ್ಮ ಮುಂದಿಡುತ್ತದೆ ಎನ್ನುವುದನ್ನು ನೋಡೋಣ.

ಇವುಗಳಲ್ಲಿ ಮುಖ್ಯವಾಗಿ ೩ ವಿಧಗಳಿವೆ.

೧.ವಿಷಯ ಆಧಾರಿತ ಶಿಫಾರಸ್ಸು(content based recommendation)

ಇಲ್ಲಿ ನಾವು ಹಿಂದೆ ನೋಡಿದ ಅಥವಾ ಓದಿದ ವಿಷಯಗಳನ್ನು,ನಾವು ನೀಡಿದ ರೇಟಿಂಗ್ ಅನ್ನು, ಇಲ್ಲ ಅದನ್ನು ಇಷ್ಟಪಟ್ಟೆವೋ ಇಲ್ಲವೋ( ಲೈಕ್ ಅಥವಾ ಡಿಸಲೈಕ್) ಎಂಬಿತ್ಯಾದಿಗಳನ್ನು ಆಧಾರವಾಗಿಟ್ಟುಕೊಂಡು ಶಿಫಾರಸ್ಸು ಮಾಡಲಾಗುತ್ತದೆ. ಇಲ್ಲಿ ಓದುತ್ತಿರುವ ವಿಷಯ/ನೋಡುತ್ತಿರುವ ವಿಡಿಯೋ ಯಾವ ರೀತಿಯದ್ದು ಎನ್ನುವುದು ಪ್ರಮುಖ ಪಾತ್ರವಹಿಸುತ್ತದೆ.ಇದಕ್ಕೆ ಕೆಳಗಿನ ಉದಾಹರಣೆಗಳನ್ನು ನೀಡಬಹುದು.

  • Quora ವನ್ನು ನೀವು ಸೂಕ್ಷ್ಮವಾಗಿ ಗಮನಿಸಿದರೆ ಇದು ಕೂಡ ಈ ಮಾರ್ಗವನ್ನು ಬಳಸುತ್ತದೆ.ನಾನು ಮೊದಲು ಇಂಗ್ಲಿಷ್ quora ದಲ್ಲಿ ಬೋರ್ ಆದಾಗ ಮನರಂಜನೆಯ ದೃಷ್ಟಿಯಿಂದ "ಬೆಸ್ಟ್ ಸ್ಕ್ರೀನ್ಸ್ ಶೊಟ್ಸ್"(what are the best screenshots saved in your cellphone) ವಿಷಯವನ್ನು ಜಾಸ್ತಿ ಓದುತ್ತಿದ್ದೆ ಮತ್ತೆ upvote ಮಾಡುತ್ತಿದ್ದೆ. ಕೊನೆಗೆ ಈ ಶಿಫಾರಸ್ಸು ಎಲ್ಲಿಗೆ ತಲುಪಿತು ಎಂದರೆ ನನ್ನ ಮುಖಪುಟದ ತುಂಬೆಲ್ಲಾ ಅದೇ ಸ್ಕ್ರೀನ್ಸ್ ಶೊಟ್ಸ್ ಸಂಬಂಧಿತ ಪ್ರಶ್ನೆಗಳೇ ತುಂಬಿಹೋಗಿದ್ದವು. ಆಮೇಲೆ ಅಂತಹ ವಿಷಯಗಳನ್ನು ಓದುವುದು ಸ್ವಲ್ಪ ಕಡಿಮೆ ಮಾಡಿ,ಉದ್ದೇಶಪೂರ್ವಕವಾಗಿ ಅವುಗಳನ್ನು ನಿರ್ಲಕ್ಷಿಸಿ ಇತರ ವಿಷಯಗಳನ್ನು ಹುಡುಕಿ ಓದಲು ಪ್ರಾರಂಭಿಸಿದ ಮೇಲೆ ಸರಿ ಆಯಿತು.
  • ಇನ್ನು ಯೌಟ್ಯೂಬ್,ಅಮೇಜಾನ್ ಪ್ರೈಮ್ ನಂತಹ ವಿಡಿಯೋ ಪ್ರವಹಿಸುವ(video streaming) ಆಪ್ಲಿಕೇಶನ್ ಗಳಲ್ಲಿ ಇದನ್ನು ಸಾಧಾರಣವಾಗಿ ಬಳಸುತ್ತಾರೆ."movies we think you will like" ಅಥವಾ "recommended for you" ಎನ್ನುವ ಶೀರ್ಷಿಕೆ ಅಡಿ ನೀವು ನೋಡಬಹುದು. ಇಲ್ಲಿ ಶಿಫಾರಸ್ಸು ಮಾಡುತ್ತಿರುವ ವಿಷಯಗಳು ನೀವು ನೋಡುತ್ತಿರುವ ವಿಷಯದ ರೀತಿಯಲ್ಲಿ ಇರಬಹುದು ಇಲ್ಲವೇ ಆ ಚಲನಚಿತ್ರದ ಪಾತ್ರಧಾರಿಗಳ ಇತರೆ ಚಿತ್ರವಾಗಿರಬಹುದು ಅಥವಾ ಆ ವಾಹಿನಿಯ(channel) ವಾರಸುದಾರರಿಂದ ಪ್ರಕಟಿತವಾದ ಇತರೆ ವಿಡಿಯೋ ಆಗಿರಬಹುದು.
  • ಅಮೇಜಾನ್ ಸಾಮಾನು ಕೊಳ್ಳುವಿಕೆಯ ಆಪ್ಲಿಕೇಶನ್(Amazon shopping) ನೀವು ಒಂದು ಮೊಬೈಲ್ ಅನ್ನು ಖರೀದಿ ಮಾಡಿದ್ದೀರಿ ಅಂದುಕೊಳ್ಳಿ,ಆಮೇಲೆ ನಿಮಗೆ "ನಿಮಗೆ ಶಿಫಾರಸ್ಸುಗಳು (recommended for you)" ಎನ್ನುವ ಶೀರ್ಷಿಕೆ ಅಡಿಯಲ್ಲಿ ಫೋನ್ ನ ಹಿಂದಿನ ರಕ್ಷಣಾ ಕವಚ(back cover) ಇಲ್ಲ ಸ್ಕ್ರೀನ್ ಗಾರ್ಡ್ ಇತ್ಯಾದಿಗಳು ಬಂದು ಕೂತಿರುತ್ತವೆ. ಇನ್ನು "ಇದರ ಜೊತೆ ಹೆಚ್ಚಾಗಿ ಕೊಂಡದ್ದು (frequently bought together)","ಇದೇ ತರಹದ ವಸ್ತುಗಳೊಂದಿಗೆ ಹೋಲಿಸಿ(compare with similar items)" ಅವುಗಳೆಲ್ಲದರಲ್ಲೂ ಈ ವಿಷಯ ಆಧಾರಿತ ಶಿಫಾರಸ್ಸನ್ನು ಉಪಯೋಗಿಸುತ್ತಾರೆ.
  • ಇನ್ನು ಗೂಗಲ್ನಲ್ಲಿ ನೀವು ಏನಾದರೂ ಹುಡುಕಾಡುತ್ತಿರುವಾಗ ಬರುವ ಜಾಹಿರಾತುಗಳು ಕೂಡ ನಿಮ್ಮ ಹಿಂದಿನ ಚಟುವಟಿಕೆಯ ಮೇಲೆ ಅವಲಂಬಿತವಾಗಿರುತ್ತವೆ. ನಾವು ಹುಡುಕಾಡುವ ವಿಷಯಗಳಿಂದ ನಮ್ಮ ಅಭಿರುಚಿಗಳನ್ನು ಅಂದಾಜಿಸುವುದು ಗೂಗಲ್ ಗೆ ಕಠಿಣವೇನಲ್ಲ.

೨. ಸಹಭಾಗಿತ್ವದ ಆಧಾರದ ಮೇಲೆ ಶಿಫಾರಸ್ಸು(Collaborative Filtering):

ಮೇಲಿನದು ಸರಿಯಾದ ಕನ್ನಡ ಪದವೋ ಅಲ್ಲವೋ ಎನ್ನುವುದು ನನಗೆ ಗೊತ್ತಿಲ್ಲ ಆದರೆ ಇದನ್ನು ಸರಳವಾಗಿ ವಿವರಿಸುತ್ತೇನೆ. ಈ ರೀತಿಯ ಶಿಫಾರಸ್ಸುಗಳಲ್ಲಿ ನಿಮ್ಮ ಅಭಿರುಚಿಗೆ ಸಮಾನ ಅಭಿರುಚಿಗಳನ್ನು ಹೊಂದಿರುವ ವ್ಯಕ್ತಿಯನ್ನು ಆಧಾರವಾಗಿ ಇಟ್ಟುಕೊಳ್ಳಲಾಗುತ್ತದೆ. ಇನ್ನೂ ಸರಳವಾಗಿ ಹೇಳುವುದಾದರೆ ನೀವು ತಮಾಷೆಯ ಚಲನಚಿತ್ರಗಳನ್ನು ಹೆಚ್ಚಾಗಿ ನೋಡುತ್ತೀರ ಎಂದಿಟ್ಟುಕೊಳ್ಳಿ. ನಿಮ್ಮ ಹಾಗೆ ಇನ್ನೊಂದು ವ್ಯಕ್ತಿ ಕೂಡ ಈ ವರ್ಗದ ಚಿತ್ರಗಳನ್ನು ನೋಡುತ್ತಾನೆ. ನೀವಿಬ್ಬರೂ A ,B ಎನ್ನುವ ಎರಡು ಚಿತ್ರಗಳನ್ನು ನೋಡಿದ್ದೀರಿ. ನಿಮ್ಮ ಹಾಗೆಯೇ ಅಭಿರುಚಿಯುಳ್ಳ ಆ ವ್ಯಕ್ತಿ C ಎನ್ನುವ ಚಿತ್ರ ನೋಡಿದ್ದಾನೆ ಮತ್ತು ಇಷ್ಟಪಟ್ಟಿದ್ದಾನೆ ಕೂಡ. ಈಗ ನೀವು ಮುಂದಿನ ಚಲನಚಿತ್ರಕ್ಕಾಗಿ ಹುಡುಕಾಡುತ್ತಿದ್ದರೆ, ಶಿಫಾರಸ್ಸು ಯಂತ್ರ ಈ C ಚಿತ್ರವನ್ನು ನಿಮ್ಮ ಮುಂದಿರುಸುತ್ತದೆ.ಇದಕ್ಕೆ ಕೆಳಗಿನ ಉದಾಹರಣೆಗಳನ್ನು ಕೊಡಬಹುದು.

  • ಯೌಟ್ಯೂಬ್ ನಲ್ಲಿ ನನಗೆ ಗೊತ್ತಿರುವ ಹಾಗೆ ಕಂಡುಬರುವ " NDTV ವೀಕ್ಷಿಸುವವರು ಈ ವಾಹಿನಿಯನ್ನು ಕೂಡ ವೀಕ್ಷಿಸುತ್ತಾರೆ (NDTV viewers also watch this channel)" ಎನ್ನುವ ರೀತಿಯಲ್ಲಿ ಬರುವ ಶಿಫಾರಸ್ಸುಗಳು ಈ ವರ್ಗಕ್ಕೆ ಸೇರುತ್ತವೆ. ನೀವು ಚಂದಾದಾರರಾಗಿರುವ ವಾಹಿನಿಗೆ ಚಂದಾದಾರರಾಗಿರುವ ಇತರರು ಇನ್ಯಾವ ವಾಹಿನಿಯನ್ನು ವೀಕ್ಷಿಸುತ್ತಾರೆ ಎನ್ನುವುದರ ಆಧಾರದ ಇದು ನಿಂತಿದೆ.
  • ಇನ್ನು ಅಮೆಜಾನ್ ಶಾಪಿಂಗ್ ಅಪ್ಲಿಕೇಶನ್ ನಲ್ಲಿ ಬರುವ "ಈ ವಸ್ತುವನ್ನು ಕೊಂಡಿರುವವರು ಇದನ್ನೂ ಕೊಂಡಿದ್ದಾರೆ (people who bought this also bought)" ಎನ್ನುವ ರೀತಿಯಲ್ಲಿ ಬರುವ ಶಿಫಾರಸ್ಸುಗಳು ಈ ವರ್ಗಕ್ಕೆ ಸೇರುತ್ತವೆ. ಇಲ್ಲಿ ಮೊದಲು ನೀವು ಯಾವ ವಸ್ತುವನ್ನು ಕೊಂಡಿದ್ದೀರಿ ಎಂಬುದನ್ನು ನೋಡುತ್ತಾರೆ,ಆಮೇಲೆ ಅದೇ ವಸ್ತುವನ್ನು ಇನ್ಯಾರು ಕೊಂಡಿದ್ದಾರೆ ಎಂಬುದನ್ನು ಲೆಕ್ಕ ಹಾಕುತ್ತಾರೆ. ಇತರರು ಈ ವಸ್ತುವನ್ನು ಕೊಂಡ ನಂತರದ ದಿನಗಳಲ್ಲಿ ಇನ್ಯಾವ ವಸ್ತುವನ್ನು ಕೊಂಡಿದ್ದಾರೆ ಎಂಬುದನ್ನೆಲ್ಲಾ ಬಳಸಿ ನಿಮಗೆ ಶಿಫಾರಸ್ಸು ಮಾಡಲಾಗುತ್ತದೆ.

೩. ಮಿಶ್ರಿತ ಶಿಫಾರಸ್ಸು ಯಂತ್ರ (Hybrid recommendation engine)

ಇದು ಮೇಲಿನ ಎರಡು ವರ್ಗಗಳನ್ನು ಒಟ್ಟುಗೂಡಿಸಿ ಶಿಫಾರಸ್ಸು ಮಾಡುವ ವಿಧಾನ. ಮೇಲಿನ ಎರಡು ವಿಧಗಳಲ್ಲಿ ಅದರದ್ದೇ ಆದ ನೂನ್ಯತೆಗಳಿವೆ.ಎರಡರಲ್ಲಿರುವ ಒಳ್ಳೆಯ ಅಂಶಗಳನ್ನು ಕೂಡಿಸಿ ಶಿಫಾರಸ್ಸು ಮಾಡಿದರೆ ಗ್ರಾಹಕರಿಗೆ ಒಳ್ಳೆಯ ಅನುಭವ ದೊರೆಯುತ್ತದೆ ಎನ್ನುವ ಉದ್ದೇಶ ಇಲ್ಲಿ. ಸಾಮಾನ್ಯವಾಗಿ ನೆಟ್ ಪ್ಲಿಕ್ಸ್ ಈ ವಿಧಾನವನ್ನು ಬಳಸುತ್ತದೆ.

ಮೇಲಿನವು ಪ್ರಮುಖವಾದ ವಿಧಗಳು.ಇವುಗಳಲ್ಲದೆ ,ಕೆಳಗಿನ ಶಿಫಾರಸ್ಸು ವಿಧಾನಗಳೂ ಇವೆ.

೪. ಜನಸಂಖ್ಯಾಶಾಸ್ತ್ರದ ಆಧಾರಿತ ಶಿಫಾರಸ್ಸು(Demographic based recommendation) - ಇಲ್ಲಿ ಗ್ರಾಹಕನ ಗುಣಲಕ್ಷಣಗಳನ್ನು (ವಯಸ್ಸು,ಹುಡುಗ /ಹುಡುಗಿ ಇತ್ಯಾದಿ ) ಆಧರಿಸಿ ವಿಷಯಗಳ ಶಿಫಾರಸ್ಸು .

೫. ಉಪಯುಕ್ತತೆಯ ಆಧಾರದ ಮೇಲೆ ಶಿಫಾರಸ್ಸು (utility based recommendation ) - ಕ್ರಮಾವಳಿಯನ್ನು(algorithm) ಬಳಸಿ ವಸ್ತುವಿನ ಸ್ಥಾನ ನಿರ್ಧರಿಸಿ ಅದರ ಆಧಾರದ ಮೇಲೆ ಶಿಫಾರಸ್ಸು .

೬. ಜ್ಞಾನದ ಆಧಾರದ ಮೇಲೆ ಶಿಫಾರಸ್ಸು( knowledge based recommendation) - ಇಲ್ಲಿ ಶಿಫಾರಸ್ಸು ಮಾಡಿದ ವಸ್ತು/ವಿಷಯ ಗ್ರಾಹಕನ ಬೇಡಿಕೆಗೆ ಅನುಕೂಲವಾಯಿತೇ ಎನ್ನುವುದು ಮುಖ್ಯ.

ಫಾಸ್ಟ್ಯಾಗ್ ಎಂದರೇನು? ಇದನ್ನು ಅಳವಡಿಸಿಕೊಳ್ಳುವುದು ಹೇಗೆ?

 FASTag ಅಂದರೆ ಏನು?

FASTag ಅನ್ನುವುದು ಒಂದು ರೇಡಿಯೋ ತರಂಗಾಂತರದ ಮೂಲಕ ಓದಬಹುದಾದ, ಸೆನ್ಸರ್ ಮತ್ತು ಕೋಡ್ ಗಳನ್ನೊಳಗೊಂಡ ಒಂದು ಸ್ಟಿಕ್ಕರ್.

ಈಗಾಗಲೇ ತಿಳಿದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಗಳಲ್ಲಿ ಶುಲ್ಕ ಪಾವತಿಸಲು ಇದು ಅವಶ್ಯಕ.

ಸರಕಾರದ ಆದೇಶದ ಪ್ರಕಾರ ಡಿಸೆಂಬರ್ ಒಂದರ ನಂತರ FASTag ಇಲ್ಲದ ವಾಹನ ಗಳು ದುಪ್ಪಟ್ಟು ಟೋಲ್ ಶುಲ್ಕ ಪಾವತಿಸಬೇಕಾಗುತ್ತದೆ.

ಇದನ್ನ ಯಾರು ಪಡೆಯಬೇಕು?

ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನ ಹೊರತು ಪಡಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಪ್ರತಿಯೊಂದು ವಾಹನಗಳಿಗೂ ಇದು ಕಡ್ಡಾಯ.

ವಾಹನದ ಗಾತ್ರ ಮತ್ತು ತೂಕಗಳ ಮೇಲೆ ಬೇರೆ ಬೇರೆ ಟ್ಯಾಗ್ ಪಡೆಯಬೇಕಾಗುತ್ತದೆ.

ಒಂದು ಟ್ಯಾಗ್ ಅನ್ನ ಇನ್ನೊಂದು ವಾಹನಕ್ಕೆ ಬಳಸುವಂತಿಲ್ಲ.

ಎರಡು ಕಾರ್ ಗಳಿದ್ದರೆ ಎರಡು ಬೇರೆ ಬೇರೆ ಟ್ಯಾಗ್ ಗಳನ್ನ ಪಡೆಯಬೇಕು.

ಸದ್ಯಕ್ಕೆ ಟ್ಯಾಗ್ ಯಾವುದೇ ಶುಲ್ಕ ವಿಲ್ಲದೆ ದೊರೆಯುತ್ತಿದೆ.

250.00 ರೂಪಾಯಿ ಗಳನ್ನ ಡೆಪಾಸಿಟ್ ರೂಪದಲ್ಲಿ ಪಡೆಯುತ್ತಾರೆ. ಕನಿಷ್ಠ 150.00 ರೂಪಾಯಿ ಗಳನ್ನ ವಾಲೆಟ್ ಗೆ ಭರಿಸಬೇಕು.

ಈ ಚಾರ್ಜ್ ಗಳು ಸ್ವಲ್ಪ ಹೆಚ್ಚು ಕಡಿಮೆ ಇರಬಹುದು.

ವಾಲೆಟ್ ನಲ್ಲಿ ಹಣವಿಲ್ಲದೆ ಟೋಲ್ ಪ್ರವೇಶಿಸಿದರೆ, ಆ ಟ್ಯಾಗ್ ಅನ್ನ ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಅನ್ನುವ ಮಾಹಿತಿ ಕೂಡಾ ಇದೆ.

ಇದನ್ನ ಹೇಗೆ ಮತ್ತು ಎಲ್ಲಿ ಪಡೆಯಬಹುದು ?

ಇದನ್ನ ಪಡೆಯುವುದು ತುಂಬಾ ಸುಲಭ.

1#

ಅಂತರ್ಜಾಲದ ಮೂಲಕ ಮತ್ತು ನೇರವಾಗಿ ಸರಕಾರ ಗೊತ್ತುಮಾಡಿದ ಅಧಿಕೃತ ವಿತರಣಾ ಕೇಂದ್ರಕ್ಕೆ ಹೋಗಿ ಪಡೆಯಬಹುದು.

ಸರಕಾರ ಸುಮಾರು 24 ಸಂಸ್ಥೆಗಳನ್ನ ಈ ಕೆಲಸಕ್ಕೆ ಗೊತ್ತುಮಾಡಿದೆ , ಅವುಗಳೆಂದರೆ,

1 Axis Bank

2 ICICI Bank

3 IDFC Bank

4 State Bank of India

5 HDFC Bank

6 Karur Vysya Bank

7 EQUITAS Small Finance Bank

8 PayTM Payments Bank Ltd

9 Kotak Mahindra Bank

10 Syndicate Bank

11 Federal Bank

12 South Indian Bank

13 Punjab National Bank

14 Punjab & Maharashtra Co-op Bank

15 Saraswat Bank

16 Fino Payments Bank

17 City Union Bank

18 Bank of Baroda

19 IndusInd Bank

20 Yes Bank

21 Union Bank

22 Nagpur Nagarik Sahakari Bank Ltd

23 Airtel payment bank

24 Amezan paywallet

ಆನ್ ಲೈನ್ ಅಥವಾ ಆಫ್ ಲೈನ್ ಎರಡೂ ಮಾದರಿಯಲ್ಲಿ ಇದನ್ನ ಒಡೆಯಬಹುದು.

2#

ಮೊಬೈಲ್ ಅಪ್ಲಿಕೇಶನ್ ಸ್ಟೋರ್ ನಿಂದ My Fastag ಅನ್ನುವ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು, ಅದರ ಮೂಲಕ ಪಡೆದುಕೊಳ್ಳಬಹುದು.

3#

ನೇರವಾಗಿ ಹತ್ತಿರದ ಟೋಲ್ ಪ್ಲಾಜಾ ಗೆ ಭೆಟ್ಟಿ ಕೊಟ್ಟು ಕೂಡಾ ಪಡೆಯಬಹುದು.

ದಾಖಲಾತಿಗಳೇನು ಬೇಕು?

  • ವಾಹನದ RC ಬುಕ್ ಅಥವಾ ಕಾರ್ಡ್ ನ ಕಾಪಿ , ಎರಡೂ ಬದಿಯದ್ದು.
  • ವಾಹನ ಮಾಲಿಕರ ಎರಡು ಪಾಸ್ ಪೋರ್ಟ್ ಸೈಜಿನ ಭಾವಚಿತ್ರ.
  • ವಾಹನ ಮಾಲಿಕರ ಗುರುತಿನ ಪತ್ರದ ಕಾಪಿ.
  • ಬ್ಯಾಂಕ್ ಅಥವಾ ಯಾವುದೇ ಆನ್ಲೈನ್ ವಾಲೆಟ್ ವಿವರ.
  • ಆನ್ ಲೈನ್ ನಲ್ಲಾದರೆ ಎಲ್ಲ ದಾಖಲಾತಿಗಳನ್ನ ಅಪ್ಲೋಡ್ ಮಾಡಬೇಕು. ಎಲ್ಲವೂ ಸರಿಯಾಗಿದ್ದರೆ, ನಿಗದಿತ ಶುಲ್ಕ ಪಾವತಿಸಬೇಕು.

ಒಂದು ವಾರದ ಒಳಗೆ ನಮ್ಮ ಫಾಸ್ಟ್ಯಾಗ್ ಸ್ಟಿಕ್ಕರ್ ಮನೆಗೆ ಬಂದು ತಲುಪುತ್ತದೆ.

ಇಲ್ಲವಾದರೆ,

  • ನೇರವಾಗಿ ಎಲ್ಲ ದಾಖಲಾತಿಗಳ ಕಾಪಿಗಳನ್ನ ಖುದ್ದು ಕೊಟ್ಟು ಫಾಸ್ಟ್ಯಾಗ್ ಸ್ಟಿಕ್ಕರ್ ಅನ್ನು ತಕ್ಷಣ ಪಡೆಯಬಹುದು.

ಅಯೋಟಾ (i) ಎಂದರೇನು?

 ಅಯೋಟಾವನ್ನು ಅರ್ಥ ಮಾಡಿಕೊಳ್ಳಲು ನಂಬರ್ ಲೈನ್ ಬಗ್ಗೆ ಸ್ವಲ್ಪ ನೆನಪು ಮಾಡಿಕೊಂಡರೆ ಅನುಕೂಲ.

ಇದು ನಂಬರ್ ಲೈನ್.

ಸೊನ್ನೆಯಿಂದ ಬಲಕ್ಕೆ ಪಾಸಿಟಿವ್ ಅಂಕೆಗಳು ಮತ್ತು ಎಡಕ್ಕೆ ನೆಗೆಟಿವ್ ಅಂಕೆಗಳಿವೆ.

ಪಾಸಿಟಿವ್ ಅಂಕೆಯನ್ನು ಪಾಸಿಟಿವ್ ಅಂಕೆಯಿಂದ ಗುಣಿಸಿದರೆ ಅಂಕೆ ಬಲದಿಕ್ಕಿನಲ್ಲಿ ಮುಂದೆ ಹೋಗುತ್ತದೆ; ನೆಗೆಟಿವ್ ಅಂಕೆಯಿಂದ ಗುಣಿಸಿದರೆ ಅಂಕೆ ಎಡದಿಕ್ಕಿನಲ್ಲಿ ಹಿಂದೆ ಹೋಗುತ್ತದೆ.

ನೆಗೆಟಿವ್ ಅಂಕೆಯನ್ನು ಪಾಸಿಟಿವ್ ಅಂಕೆಯಿಂದ ಗುಣಿಸಿದರೆ ಅಂಕೆ ಎಡದಿಕ್ಕಿನಲ್ಲಿ ಹಿಂದೆದೆ ಹೋಗುತ್ತದೆ; ನೆಗೆಟಿವ್ ಅಂಕೆಯಿಂದ ಗುಣಿಸಿದರೆ ಅಂಕೆ ಬಲದಿಕ್ಕಿನಲ್ಲಿ ಮುಂದೆ ಹೋಗುತ್ತದೆ.

ಯಾವುದಾದರೂ ವಿಶೇಷ ರೀತಿಯ ಅಂಕಿ ಇದ್ದು ಅದರಿಂದ ನಮ್ಮ ಸಾಮಾನ್ಯ ಪಾಸಿಟಿವ್ ಅಂಕೆಯನ್ನು ಗುಣಿಸಿದರೆ ಅಂಕಿ 90 ಡಿಗ್ರಿ ತಿರುಗಿ ಬೇರೆ ದಿಕ್ಕಿನಲ್ಲಿ ಹೋದರೆ ಎಷ್ಟು ಚೆಂದ ಅಲ್ಲವೇ! ಆ ತರಹದ ವಿಶೇಷ ರೀತಿಯ ಅಂಕಿಯೇ ಅಯೋಟಾ. ಇದನ್ನು i ಎಂದು ಬರೆಯುತ್ತೇವೆ.

***

ಬೇರೆ ಶಬ್ದಗಳಲ್ಲಿ ಹೇಳಬೇಕೆಂದರೆ ಪಾಸಿಟಿವ್ ಅಂಕಿಗಳನ್ನು i ಇಂದ ಗುಣಿಸಿದರೆ 90 ಡಿಗ್ರಿ ಎಡಕ್ಕೆ ತಿರುಗಿ y ಅಕ್ಷದ ಮೇಲೆ ಉತ್ತರ ದಿಕ್ಕಿನ ಅಂಕಿಗಳನ್ನು ತೋರಿಸುತ್ತದೆ. ಉದಾಹರಣೆಗೆ 1i , 2i, 3i...

***

ಈ ಅಂಕಿಗಳನ್ನು ಮತ್ತೆ i ಇಂದ ಗುಣಿಸಿದರೆ ಮತ್ತೆ 90 ಡಿಗ್ರಿ ಎಡಕ್ಕೆ ತಿರುಗಿ x ಅಕ್ಷದ ಎಡಗಡೆಗೆ (ಪಶ್ಚಿಮ ದಿಕ್ಕಿಗೆ) ನೆಗೆಟಿವ್ ಅಂಕಿಗಳನ್ನು ತೋರಿಸುತ್ತದೆ. ಉದಾಹರಣೆಗೆ 1i^2, 2i^2, 3i^2,...

ಇದರ ಅರ್ಥ 1i^2 = -1 (ಅಂದರೆ i^2 = -1)

2i^2 = -2

3i^2 = -3

ಇತ್ಯಾದಿ.

i^2 ಇಂದ ಗುಣಿಸುವುದೆಂದರೆ -1 ಇಂದ ಗುಣಿಸಿದ ಹಾಗೆ. ಬೇರೆ ಶಬ್ದಗಳಲ್ಲಿ i^2 = -1. ಆದ್ದರಿಂದ i = √-1.

***

ನೆಗೆಟಿವ್ ಅಂಕಿಗಳನ್ನು i ಇಂದ ಗುಣಿಸಿದರೆ 90 ಡಿಗ್ರಿ ಎಡಕ್ಕೆ ತಿರುಗಿ ಅಂದರೆ y ಅಕ್ಷದ ಕೆಳಗಡೆಗೆ ದಕ್ಷಿಣ ದಿಕ್ಕಿನ ಅಂಕಿಗಳನ್ನು ತೋರಿಸುತ್ತದೆ. ಉದಾಹರಣೆಗೆ 1i^3, 2i^3, 3i^3,...

ಇದರ ಅರ್ಥ 1i^3 = -1i

2i^3 = -2i

3i^3 = -3i

ಇತ್ಯಾದಿ.

i^3 ಇಂದ ಗುಣಿಸುವುದು ಮತ್ತು -i ಇಂದ ಗುಣಿಸುವುದು ಎರಡೂ ಒಂದೇ. ಎರಡರ ಪರಿಣಾಮವೂ ಸಂಖ್ಯೆಯನ್ನು 270 ಡಿಗ್ರಿಯ ಅಪ್ರದಕ್ಷಿಣೆ ಅಥವಾ 90 ಡಿಗ್ರಿಯ ಪ್ರದಕ್ಷಿಣೆ ಮಾಡಿಸಿದ ಹಾಗೆ.

-1i ತರಹದ ಅಂಕಿಗಳನ್ನು ಮತ್ತೆ i ಇಂದ ಗುಣಿಸಿದರೆ ಮತ್ತೆ 90 ಡಿಗ್ರಿ ಎಡಕ್ಕೆ ತಿರುಗಿ x ಅಕ್ಷದ ಬಲಗಡೆಗೆ ಪೂರ್ವ ದಿಕ್ಕಿನ ಪಾಸಿಟಿವ್ ಅಂಕಿಗಳನ್ನು ತೋರಿಸುತ್ತದೆ.

1i^3 * i = (-1i)*i = -1 * -1 = +1

2i^3 * i = -2i*i = -2 * -1 = +2

3i^3 * i = -3i*i = -3 * -1 = +3

ಇತ್ಯಾದಿ.

ಅಯೋಟಾ ಇರುವಂತಹ ಸಂಖ್ಯೆಗಳು ಸಾಮಾನ್ಯ(ರಿಯಲ್) ಸಂಖ್ಯೆಗಳು ಎಷ್ಟು ಸತ್ಯವೋ ಅಷ್ಟೇ ಸತ್ಯ. ಆದರೆ ಹಿಂದಿನ ಕಾಲದಲ್ಲಿ ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಇಂತಹ ಸಂಖ್ಯೆಗಳನ್ನು ಇಮ್ಯಾಜಿನರಿ (ಕಾಲ್ಪನಿಕ) ಸಂಖ್ಯೆಗಳು ಎಂದು ಕರೆದರು. ಆ ತಪ್ಪು ಹೆಸರೇ ಈಗಲೂ ಉಳಿದುಕೊಂಡು ಬಿಟ್ಟಿದೆ.

ಸಾಮಾನ್ಯ ಸಂಖ್ಯೆ ಮತ್ತು ಇಮ್ಯಾಜಿನರಿ ಸಂಖ್ಯೆಗಳನ್ನು ಕೂಡಿಸಿದರೆ ಬರುವ ಸಂಖ್ಯೆಗಳನ್ನು ಕಾಂಪ್ಲೆಕ್ಸ್ ಸಂಖ್ಯೆಗಳೆಂದು ಕರೆಯುತ್ತಾರೆ.

ಉದಾಹರಣೆಗೆ 1+2i, 3+I, 5–7i, a+bi ಇತ್ಯಾದಿ.

1+1i, 2+2i, 3+3i ಮುಂತಾದ ಸಂಖ್ಯೆಗಳು 45 ಡಿಗ್ರಿ ರೇಖೆಯಲ್ಲಿ ಇರುತ್ತವೆ.

a+bi ಕಾಂಪ್ಲೆಕ್ಸ್ ಸಂಖ್ಯೆ ಎಷ್ಟು ಡಿಗ್ರಿಯ ರೇಖೆಯ ಮೇಲೆ ಇದೆ ಎಂಬುದು a ಮತ್ತು b ನಡುವಿನ ಅನುಪಾತದ ಮೇಲೆ ಅವಲಂಬಿಸಿರುತ್ತದೆ.

Thursday, March 16, 2023

ಭಾರತದ ಅತ್ಯಂತ ದುಬಾರಿ ಮನೆಗಳು ಯಾವುವು?

 ಭಾರತದ ಟಾಪ್ 5 ಅತ್ಯಂತ ದುಬಾರಿ ಮನೆಗಳು:

  1. ಆಂಟಿಲಿಯಾ - ಮುಖೇಶ್ ಅಂಬಾನಿ

ಇದನ್ನು ನೀವು ಸರಿಯಾಗಿಯೇ ಊಹಿಸಿರಬೇಕು. ಆಂಟಿಲಿಯಾ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಅತ್ಯಂತ ದುಬಾರಿ ಮನೆ. ಆಂಟಿಲಿಯಾವನ್ನು ಚಿಕಾಗೊ ಮೂಲದ ವಾಸ್ತುಶಿಲ್ಪಿಗಳಾದ ಪರ್ಕಿನ್ಸ್ ಮತ್ತು ವಿಲ್ ವಿನ್ಯಾಸಗೊಳಿಸಿದ್ದು, ಆಸ್ಟ್ರೇಲಿಯಾ ಮೂಲದ ನಿರ್ಮಾಣ ಸಂಸ್ಥೆ ಲೈಟನ್ ಹೋಲ್ಡಿಂಗ್ಸ್ ಇದರ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿದೆ. ಒಟ್ಟಾಗಿ ಅವರು ಅಂತಹ ಒಂದು ಮೇರುಕೃತಿಯನ್ನು ರಚಿಸಿದರು. ಆಂಟಿಲಿಯಾ 27 ಮಹಡಿಗಳನ್ನು ಅತ್ಯಂತ ಅತಿರಂಜಿತ ಸೌಕರ್ಯಗಳೊಂದಿಗೆ ಒಳಗೊಂಡಿದೆ - ಒಂದು ಸಲೂನ್, ಮೂವಿ ಥಿಯೇಟರ್, ಐಸ್ ಕ್ರೀಮ್ ಪಾರ್ಲರ್, ಇತರ ಸೌಲಭ್ಯಗಳಲ್ಲಿ (ಈಜುಕೊಳ, ಜಿಮ್, ನಿಮಗೆ ತಿಳಿದಿದೆ). ಬಿಸಿನೆಸ್ ಇನ್ಸೈಡರ್ ಪ್ರಕಾರ ಆಂಟಿಲಿಯಾ ಮೌಲ್ಯ 10,000 ಕೋಟಿ ರೂ.

2. ಜೆಕೆ ಹೌಸ್ - ಗೌತಮ್ ಸಂಗಾನಿಯಾ

ದಕ್ಷಿಣ ಮುಂಬಯಿಯಲ್ಲಿರುವ ಎತ್ತರದ, ಅಲಂಕಾರಿತ, ಐಷಾರಾಮಿ ಕಟ್ಟಡವೆಂದರೆ ರೇಮಂಡ್ ಮಾಲೀಕ ಗೌತಮ್ ಸಂಘಾನಿಯಾ ಅವರ ಜೆಕೆ ಮನೆ. ಸುಮಾರು 6000 ಕೋಟಿ ರೂ.ಗಳ ಮೌಲ್ಯವಿದೆ ಎಂದು ಹೇಳಲಾದ ಈ ಆಸ್ತಿ ಆಂಟಿಲಿಯಾ ನಂತರ ಭಾರತದ ಎರಡನೇ ಅತಿ ಎತ್ತರದ ಖಾಸಗಿ ಕಟ್ಟಡವಾಗಿದೆ. ಇದು 16,000 ಚದರ ಅಡಿ ವಿಸ್ತೀರ್ಣದಲ್ಲಿದೆ ಮತ್ತು ಪಟ್ಟಣದ ಉನ್ನತ ಕಾರುಗಳನ್ನು ನಿಲುಗಡೆ ಮಾಡಲು ಮಾತ್ರ ವಸತಿ ಸ್ಥಳ, ಕಚೇರಿ ಸ್ಥಳ ಮತ್ತು ಐದು ಮಹಡಿಗಳನ್ನು ಒಳಗೊಂಡಿದೆ. ದುಬಾರಿ ಮನೆಯಲ್ಲಿ ಸ್ಪಾ, ಎರಡು ಖಾಸಗಿ ಈಜುಕೊಳಗಳು, ಜಿಮ್, ಮನರಂಜನಾ ಪ್ರದೇಶ ಮತ್ತು ತನ್ನದೇ ಆದ ಹೆಲಿಪ್ಯಾಡ್ ಸಹ ಇದೆ.

3. ಅಬೋಡ್ - ಅನಿಲ್ ಅಂಬಾನಿ

ದಿವಾಳಿಯಾಗಿದ್ದರೂ, ಅನಿಲ್ ಅಂಬಾನಿಯವರ ಮನೆ ತುಂಬಾ ಹಿಂದುಳಿದಿಲ್ಲ. ಎತ್ತರದ ಕಟ್ಟಡವು ಅಲಂಕಾರಿತ ಹೆಲಿಪ್ಯಾಡ್ ಮತ್ತು ಅದರ ಮೇಲೆ ಕೆಲವು ಹೆಲಿಕಾಪ್ಟರ್‌ಗಳೊಂದಿಗೆ ಪೂರ್ಣಗೊಂಡಿದೆ. ಈ ಕಟ್ಟಡವು 16,000 ಚದರ ಅಡಿ ವಿಸ್ತೀರ್ಣದಲ್ಲಿದೆ ಮತ್ತು ಸುಮಾರು 70 ಮೀಟರ್ ಎತ್ತರವಿದೆ. ಇದು ಮನೆಯಲ್ಲಿ ಒಬ್ಬರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ ಮತ್ತು 5000 ಕೋಟಿ ರೂ.ಗಳಿಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿದೆ (ಬಿಸಿನೆಸ್ ಇನ್ಸೈಡರ್ ವರದಿ ಮಾಡಿದೆ).

ಕೆಎಂ ಬಿರ್ಲಾ ಒಡೆತನದ ಜಟಿಯಾ ಹೌಸ್ 30,000 ಚದರ ಅಡಿಯ ಐಷಾರಾಮಿ ಮನೆ. ಇದರ ಸುತ್ತಲೂ ಹಚ್ಚ ಹಸಿರಿನಿಂದ ಕೂಡಿದ ಹುಲ್ಲು ಮತ್ತು ಕೊಳವಿದೆ, ಇದು ಚಲನಚಿತ್ರಗಳಿಂದ ತಂದು ಇಟ್ಟಂತಿದೆ. ವಾಲ್ ಕ್ಲಾಡಿಂಗ್ ಮತ್ತು ಬರ್ಮ ತೇಗದ ಮರದಿಂದ ಮಾಡಿದ ಛಾವಣಿಯೊಂದಿಗೆ, ಇದು 20 ಮಲಗುವ ಕೋಣೆಗಳನ್ನು ಒಳಗೊಂಡಿದೆ. ಇದು ಕೇಂದ್ರ ಪ್ರಾಂಗಣ ಮತ್ತು ಉದ್ಯಾನವನದ ಕೊಳವನ್ನು ಒಳಗೊಡಿರುತ್ತದೆ. ಇತರ ಐದು ಬಿಡ್ಡುಗಳನ್ನು ಮೀರಿಸಿ 10% ಟೋಕನ್ ಅನ್ನು ಸ್ಥಳದಲ್ಲೇ ನೀಡಿದ ನಂತರ ಕೆಎಂ ಬಿರ್ಲಾ 2015 ರಲ್ಲಿ 425 ಕೋಟಿ ರೂ. ಭಾರತವು ನೋಡಿದ ಅತಿದೊಡ್ಡ ರಿಯಲ್ ಎಸ್ಟೇಟ್ ವ್ಯವಹಾರವೂ ಆಗಿತ್ತು.

5. ಮನ್ನತ್ - ಶಾಹ್ ರುಖ್ ಖಾನ್

ಶಾಹ್ ರುಖ್ ಖಾನ್ ದೇಶದ ಪ್ರಮುಖ ಆಸ್ತಿಗಳನ್ನು ಹೊಂದಿದ್ದಾರೆ. ಬಂಗಲೆಗೆ ಭೇಟಿ ನೀಡುವ ಮತ್ತು ಬಾಗಿಲಿನಿಂದ ಚಿತ್ರಗಳನ್ನು ತೆಗೆದುಕೊಳ್ಳುವ ಜನರ ಸಂಖ್ಯೆಯಿಂದ ಇದನ್ನು ಪ್ರವಾಸಿ ತಾಣವೆಂದು ಸುಲಭವಾಗಿ ಟ್ಯಾಗ್ ಮಾಡಬಹುದು. ಹೆಚ್ಚಿನ ಅಭಿಮಾನಿಗಳು ಅಥವಾ ಸಂದರ್ಶಕರು ಸ್ನೀಕ್ ಪೀಕ್ ಹೊಂದಿಲ್ಲವಾದರೂ, 200 ಕೋಟಿ ರೂ. ಬೆಲೆ ಐಷಾರಾಮದ ಖಾತರಿ ನೀಡುತ್ತದೆ. ಬಂಗಲೆ ಅರೇಬಿಯನ್ ಸಮುದ್ರದ ಸುಂದರ ನೋಟವನ್ನು ಹೊಂದಿದೆ ಮತ್ತು ಇದು ಮುಂಬೈನ ಬಾಂದ್ರಾದಲ್ಲಿ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿದೆ.

ಬಂಗ್ಲೋನ ಒಳಾಂಗಣವು ಕಡಿಮೆಯಿಲ್ಲ.

ಮನ್ನತ್ ಅವರ ಈಜುಕೊಳ.

ದೊಡ್ಡ ಡ್ರಾಯಿಂಗ್ ರೂಮ್

ಊಟದ ಕೋಣೆ

ಈ ಮನೆಯ ಮೊದಲ ಹೆಸರು ಅವರು ಅದನ್ನು ಖರೀದಿಸಿದಾಗ ‘ವಿಲ್ಲಾ ವಿಯೆನ್ನಾ’. ಅವರು ಅದನ್ನು "ಜನ್ನತ್" ಎಂದು ಹೆಸರಿಸಲು ಯೋಚಿಸಿದರು ಮತ್ತು ನಂತರ ಅವರು "ಮನ್ನತ್" ಎಂದು ಹೆಸರಿಸಿದರು, ಏಕೆಂದರೆ ಅವರ ಎಲ್ಲಾ ಆಶಯಗಳು ಹಿಂದಕ್ಕೆ ಹಿಂದಕ್ಕೆ ಈಡೇರುತ್ತಿವೆ ಮತ್ತು ಅವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದರು. ‘ಮನ್ನತ್’ ಅಂದರೆ ‘ದೇವರಿಗೆ ಪ್ರತಿಜ್ಞೆ’.

ಆರ್ಯ ಮತ್ತು ದ್ರಾವಿಡ ನಡುವಿನ ವ್ಯತ್ಯಾಸವೇನು?

  ಮೊದಲಿಗೆ ಈ ಪದಗಳ ಪರಿಚಯ ನೋಡೋಣ. ಆರ್ಯ  ಅನ್ನೋದು ಉತ್ತಮ/ದೊಡ್ಡವರು ಎಂಬ ಅರ್ಥ ನೀಡುತ್ತದೆ  ಅಷ್ಟೇ.  ಉತ್ತಮ ಕುಲದಲ್ಲಿ ಹುಟ್ಟಿದವನು, ಯಜಮಾನ, ಹಿಡಿದ ಕೆಲಸವನ್ನು ಬಿಡ...