Sunday, October 25, 2020

ಪ್ರಚಲಿತ ವಿದ್ಯಮಾನ

🌷 ವೀಕ್ಷಣೆಗೆ ಲಭ್ಯ ವಿಶ್ವದ ಬೃಹತ್ ಗ್ರಹ : 'ಗುರು'ವನ್ನೇ ಮೀರಿಸಿದ ಈ ಗ್ರಹ ಇರುವುದಾದರೂ ಎಲ್ಲಿ?
================
ನಕ್ಷತ್ರಗಳ ಮಡಿಲಲ್ಲಿ ನೆಲೆ ಕಂಡುಕೊಳ್ಳುವ ಗ್ರಹಗಳು, ಒಂದು ನಿರ್ದಿಷ್ಟ ಪಥದಲ್ಲಿ ತನ್ನ ಮಾತೃ ನಕ್ಷತ್ರವನ್ನು ಸುತ್ತುತ್ತಿರುತ್ತವೆ. ತನ್ನ ಮಾತೃ ನಕ್ಷತ್ರದಿಂದ ಇರುವ ದೂರವನ್ನು ಆಧರಿಸಿ ಈ ಗ್ರಹಗಳ ರಚನೆ, ವಾತಾವರಣಗಳು ನಿರ್ಧಾರವಾಗುತ್ತವೆ ಅದರಂತೆ ಬ್ರಹ್ಮಾಂಡ ದಲ್ಲಿ ಲೆಕ್ಕಕ್ಕೂ ಸಿಗದಷ್ಟು ಗ್ರಹಕಾಯಗಳಿವೆ.
=============
ಇಂತಹ ಕೋಟ್ಯಂತರ ಗ್ರಹಗಳ ಪೈಕಿ ನಮ್ಮ ಭೂಮಿಯೂ ಒಂದು. ಸೂರ್ಯನಿಂದ ನಿರ್ದಿಷ್ಟ ದೂರಲದಲ್ಲಿರುವ ಭೂಮಿ, ಇದುವರೆಗೂ ನಮಗೆ ಗೊತ್ತಿರುವ ಜೀವಸಂಕುಲವನ್ನು ಹೊಂದಿರುವ ಏಕೈಕ ಗ್ರಹ.
=====
ಈ ಮೊದಲೇ ಹೇಳಿದಂತೆ ವೀಕ್ಷಣೆಗೆ ಲಭ್ಯ ವಿಶ್ವದಲ್ಲಿ ಕೋಟ್ಯಂತರ ಗ್ರಹಗಳಿವೆ. ಇವುಗಳ ಪೈಕಿ ಭೂಮಿಯನ್ನು ಹೊರತುಪಡಿಸಿ ಮತ್ತೊಂದು ಗ್ರಹದಲ್ಲಿ ಜೀವಸಂಕುಲ ಇರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
=====
ಗಾತ್ರ, ರಚನೆ, ಆಕಾರಗಳಲ್ಲಿ ಭಿನ್ನವಾಗಿರುವ ಈ ಗ್ರಹಗಳು ನಮ್ಮ ಭೂಮಿಗಿಂತಲೂ ಹಲವು ಪಟ್ಟು ದೊಡ್ಡದಿರುವುನ್ನೂ ಕೂಡ ನಾವು ಕಂಡುಕೊಂಡ ಸಂಗತಿ. ಅದರಂತೆ ವೀಕ್ಷಣೆಗೆ ಲಭ್ಯ ವಿಶ್ವದ ಅತ್ಯಂತ ಬೃಹತ್ ಗ್ರಹ ದ ಕುರಿತು ನಾವಬು ಮಾಹಿತಿ ಪಡೆಯೋಣ.
=====
👉 TrES-4b
======
2006ರಲ್ಲಿ ಮೊದಲ ಬಾರಿಗೆ ಪತ್ತೆಯಾದ  TrEs-4b ಗ್ರಹ,ಸೌರಮಂಡಲದಾಚೆ(ಎಕ್ಸೋಪ್ಲ್ಯಾನೆಟ್) ನಾವು ಇದುವರೆಗೂ ಕಂಡುಹಿಡಿದಿರುವ ಅತ್ಯಂತ ದೊಡ್ಡ ಗ್ರಹ 2007ರಲ್ಲಿ ಇದರ ಅಸ್ತಿತ್ವವನ್ನು ಅಧಿಕೃತವಾಗಿ ಘೋಷಣೆ ಮಾಡಲಾಯಿತು
=========
ಟ್ರಾನ್ಸ್-ಅಟ್ಲಾಂಟಿಕ್ ಎಕ್ಸೋಪ್ಲಾನೆಟ್ ಸಮೀಕ್ಷೆಯ ಸಹಾಯದಿಂದ TrES-4b ಗ್ರಹವನ್ನು ಪತ್ತೆ ಮಾಡಲಾಯಿತು GSC 02620-00648 ಎಂಬ ನಕ್ಷತ್ರ ವನ್ನು ಸುತ್ತುತ್ತಿರುವ ಈ ಗ್ರಹ ಭೂಮಿಯಿಂದ ಬರೋಬ್ಬರಿ 1,400 ಜ್ಯೋತಿರ್ವರ್ಷ ದೂರದಲ್ಲಿದೆ.
=======
TrES-4b ಗ್ರಹ ತನ್ನ ಮಾತೃ ನಕ್ಷತ್ರವನ್ನು ಪ್ರತಿ 3.543 ದಿನಗಳಿಗೊಮ್ಮೆ ಒಂದು ಸುತ್ತು ಸುತ್ತುತ್ತದೆ ನಮ್ಮ ಭೂಮಿ ಸೂರ್ಯನನ್ನು ಒಂದು ಸುತ್ತಲು ಕೇವಲ 365 ದಿನಗಳನ್ನು ತೆಗೆದುಕೊಳ್ಳುತ್ತದೆ
======
👉 ಗ್ರಹ ರಚನೆ
======
TrES-4b ಗ್ರಹ ನಮ್ಮ ಸೌರಮಂಡಲದ ಅತ್ಯಂತ ದೊಡ್ಡ ಗ್ರಹವಾದ ಗುರುಗ್ರಹಕ್ಕಿಂತ 0.919 ಪಟ್ಟು ದೊಡ್ಡದಾಗಿದೆ. ಅಲ್ಲದೇ ಗುರುಗ್ರಹಕ್ಕಿಂತ ಒಟ್ಟು ವ್ಯಾಸದ 1.799 ಪಟ್ಟು ಹೆಚ್ಚು ವ್ಯಾಸವನ್ನು ಹೊಂದಿದೆ.
=======
TrES-4b ಗ್ರಹದ ಮೇಲ್ಮೈ ಉಷ್ಣಾಂಶ 1,782 ಕೆಲ್ವಿನ್‌ ನಷ್ಟಿದ್ದು, ತನ್ನ ಪೋಷಕ ನಕ್ಷತ್ರವಾದ GSC 02620-00648 ಸೂರ್ಯನಿಗಿಂತ 3-4 ಪಟ್ಟು ಹೆಚ್ಚು ಸಮೀಪ ದಲ್ಲಿರುವುದರಿಂದ ಈ ಗ್ರಹದಲ್ಲಿ ಇಷ್ಟೊಂದು ಉಷ್ಣಾಂಶ ಇದೆ ಎಂದು ಅಂದಾಜಿಸಲಾಗಿದೆ.
==========
👉 ಬ್ರಹ್ಮಾಂಡದ ಇತ ದೈತ್ಯ ಗ್ರಹಗಳು
=======
> WASP-12b
> WASP-17b
> GQ Lupi b
==========
ಗ್ರಹಗಳು ಎರಡು ಬಗೆಯವು. 
> ಒಂದು ಘನ ಮೇಲ್ಮೈ(ರಾಕಿ ಪ್ಲ್ಯಾನೆಟ್ಸ್)ಯನ್ನು ಹೊಂದಿರುವ ಗ್ರಹಗಳಾಗಿದ್ದರೆ
> ಅನಿಲ ಮೋಡಗಳಿಂದ(ಗ್ಯಾಸ್ ಜೈಂಟ್ಸ್) ರಚನೆಯಾಗಿರುತ್ತವೆ
========
👉 TOI-849b
========
TOI-849b ನಾವು ಇದುವರೆಗೂ ಕಂಡುಹಿಡಿದ ವೀಕ್ಷಣೆಗೆ ಲಭ್ಯ ವಿಶ್ವದ ಅತ್ಯಂತ ಬೃಹತ್ ರಾಕಿ ಪ್ಲ್ಯಾನೆಟ್ ಎಂಬುದು ವಿಶೇಷ. ಈ ಗ್ರಹ ನಮ್ಮ ಭೂಮಿಗಿಂತ ಬರೋಬ್ಬರಿ 40 ಪಟ್ಟು ಹೆಚ್ಚು ಗಾತ್ರವನ್ನು ಹೊಂದಿದೆ. TOI-849b ಗ್ರಹ ಭುಮಿಯಿಂದ ಕೇವಲ 730 ಜ್ಯೋತಿರ್ವರ್ಷ ದೂರದಲ್ಲಿದೆ
========

Saturday, October 24, 2020

ಹಣದ ಪರಿಚಯ ಮತ್ತು ವಷ೯

🌐"ಹಣದ ಪರಿಚಯ ಮತ್ತು ವಷ೯"          
 *ಆರ್ ಬಿ ಏ ಸ್ಥಾಪನೆ1935         
   *ನೋಟೆ ಮುದ್ರಣ ಪ್ರಥಮ ಭಾರಿಗೆ1938🌐

₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹
   
🗂"ವಷ೯". 💸"ನೋಟು"
}}}}}}}}}}}}}}}}} {{{{{{{{{{{{{{{{{{
📫1864 【10】₹

🖊1872 【5】₹

💼1899 【10,000】₹

🗄1905&2017 【50】₹

🗝1909 【1000】₹

📏1917 &2016 【500】₹   

📐1917 【1&2೧/೨】₹

🗃1900 【100】₹

🏹1970 【2&20】₹

🧲2016 【2000】₹

🔭2017 【 200】₹

 🌻" ಮಹಾತ್ಮ ಗಾಂಧಿ ಚಿತ್ರವಿರುವ ನೋಟುಗಳನ್ನು
🗿1996ರಲ್ಲಿ ಬಿಡುಗಡೆ ಮಾಡಲಾಯಿತು"

Wednesday, October 21, 2020

ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿರ್ಮಾಪಕರು

 ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿರ್ಮಾಪಕರು :
(Famous Ancient Historical Inscriptions in India)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಪ್ರಾಚೀನ ಕರ್ನಾಟಕದ ಇತಿಹಾಸ
(Ancient Indian History)

— ಶಾಸನಗಳು ಒಂದು ರಾಷ್ಟ್ರದ, ರಾಜ್ಯದ ರಾಜಕೀಯ, ಸಾಮಾಜಿಕ, ಧಾರ್ಮಿಕ, ಆರ್ಥಿಕ, ಸಾಂಸ್ಕೃತಿಕ ವಿಷಯಗಳ ಬಗ್ಗೆ ಅಮೂಲ್ಯ ಮಾಹಿತಿಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿಶೇಷವಾಗಿ ನಮ್ಮ ನಾಡಿನ ರಾಜಕೀಯ ಇತಿಹಾಸವು ಮುಖ್ಯವಾಗಿ ಶಾಸನಗಳನ್ನು ಆಧರಿಸಿ ರಚನೆಯಾಗಿದೆ. ಪ್ರಸ್ತುತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಶಾಸನಗಳಿಗೆ ಸಂಬಂಧಪಟ್ಟಂತೆ ಹಲವು ಪ್ರಶ್ನೆಗಳನ್ನು ಕೇಳುವುದು ಸಾಮಾನ್ಯವಾಗಿದೆ. ಆ ನಿಟ್ಟಿನಲ್ಲಿ 'ಸ್ಪರ್ಧಾಲೋಕ'ದಲ್ಲಿ ಕೆಲವು ಮಹತ್ವದ ಶಾಸನಗಳ ಕುರಿತು ವಿವರಗಳನ್ನು ನಿಮ್ಮ ಮುಂದೆ ಇಡಲು ಪ್ರಯತ್ನಿಸಲಾಗಿದೆ.

■. ದಕ್ಷಿಣ ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು :
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•
●. ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ ••┈┈┈┈• ಹರಿಷೇಣ
●. ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ಸಂಭೋದಿಸಿದ ಶಾಸನ ••┈┈┈┈• ಅಲಹಾ ಬಾದ್ ಸ್ತಂಭ ಶಾಸನ
●. ಅಲಹಾಬಾದ್ ಸ್ತಂಭ ಶಾಸನ ಮೊದಲು ಇದ್ದ ಪ್ರದೇಶ ••┈┈┈┈• ಕೌಸಂಬಿ
●. ಅಲಹಾಬಾದ್ ಸ್ತಂಭ ಶಾಸನವನ್ನು ಕೌಸಂಬಿಯಿಂದ ಅಲಹಾಬಾದಿಗೆ ಸಾಗಿಸಿದ ತುಘಲಕ್ ದೊರೆ ••┈┈┈┈• ಫೀರೋಜ್ ಷಾ ತುಘಲಕ್
●. ದೆಹಲಿಯಲ್ಲಿರುವ ಗುಪ್ತರ ಕಾಲದ ಸ್ತಂಭ ಶಾಸನ ••┈┈┈┈• ಮೆಹ್ರೋಲಿ ಕಂಬ್ಬಿಣದ ಸ್ತಂಭ ಶಾಸನ
●. ಫಿರೋಜ್ ಷಾ ತುಘಲಕ್, ದೆಹಲಿಗೆ ರವಾನಿಸಿದ ಅಶೋಕನ ಶಿಲಾಶಾಸನಗಳು ••┈┈┈┈• ಮಿರತ್ ಶಾಸನ ಹಾಗೂ ತೋಪ್ರ ಶಾಸನ
●. ಗ್ರೀಕ್ ಹಾಗೂ ಅರೇಬಿಕ್ ಭಾಷೆಗಳಲ್ಲಿರುವ ಅಶೋಕನ ಶಾಸನಗಳು ಇರುವ ಪ್ರದೇಶ ••┈┈┈┈• ಕಂದಾಹಾರ್
●. ಗಿರ್ನಾರ್ ಹಾಗೂ ಜುನಾಗಡ್ ಶಾಸನದ ಕರ್ತೃ ••┈┈┈┈• ರುದ್ರದಾಮನ್
●. ಸುದರ್ಶನ ಕೆರೆಯ ಇತಾಹಾಸದ ಮೇಲೆ ಬೆಳಕು ಚೆಲ್ಲುವ ಶಾಸನಗಳು ••┈┈┈┈• ರುದ್ರದಾಮನ್ ಹಾಗೂ ಸ್ಕಂದ ಗುಪ್ತನ ಶಾಸನಗಳು
●. ತೆಲುಗಿನ ಪ್ರಥಮ ಶಾಸನ ••┈┈┈┈• ಕಲಿಮಲ್ಲ ಶಾಸನ
●. ತಮಿಳಿನ ಪ್ರಥಮ ಶಾಸನ ••┈┈┈┈• ಮಾಂಗುಳಂ ಶಾಸನ
●. ಶಾಸನಗಳ ಪಿತಾಮಹಾ ಶಾಸನಗಳ ರಾಜ. ಸ್ವಕಥನಗಾರ ಎಂದು ಖ್ಯಾತಿವೆತ್ತ ಮೌರ್ಯ ಅರಸ ••┈┈┈┈• ಅಶೋಕ
●. ಅಶೋಕನ ಶಾಸನಗಳು ಈ ಲಿಪಿಯಗಳಲ್ಲಿ ಲಭ್ಯವಾಗಿದೆ ••┈┈┈┈• ಬ್ರಾಹ್ಮಿ ಹಾಗೂ ಖರೋಷ್ಠಿ
●. ಕಳಿಂಗ ಯುದ್ಧದ ಬಗೆಗೆ ಬೆಳಕು ಚೆಲ್ಲುವ ಅಶೋಕನ ಶಾಸನ ••┈┈┈┈•13 ನೇ ಶಿಲಾ ಶಾಸನ
●. ಅಸೋಕನ ಶಾಸನವನ್ನು ಮೊಟ್ಟ ಮೊದಲು ಓದಿದವರು ••┈┈┈┈•1837 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಜೇಮ್ಸ್ ಪ್ರಿನ್ಸಸ್
●. ಅಶೋಕನನ್ನು ಪ್ರಿಯದರ್ಶಿ ಅಶೋಕ ಎಂದು ಸಂಭೋದಿಸಿಲಾದ ಶಾಸನ ••┈┈┈┈• ಮಸ್ಕಿ ಶಾಸನ
●. ಮಸ್ಕಿ ಶಾಸನ ಪ್ರಸ್ತುತ ಈ ಜಿಲ್ಲೆಯಲ್ಲಿದೆ ••┈┈┈┈• ಕೊಪ್ಪಳ
●. ಅಶೋಕನನ್ನು ರಾಜ ಅಶೋಕ , ದೇವನಾಂಪ್ರಿಯ ಎಂಬ ಹೆಸರುಗಳಿಂದ ಸಂಭೋಧಿಸಲಾದ ಶಾಸನ ••┈┈┈┈• ಬಳ್ಳಾರಿ ಜಿಲ್ಲೆಯ ನಿಟ್ಟೂರು ಶಾಸನ
●. ನಿಟ್ಟೂರಿನ ಶಾಸನದ ರಚನಾಕಾರ ••┈┈┈┈• ಉಪಗುಪ್ತ
●. ನಿಟ್ಟೂರಿನ ಶಾಸನದ ಲಿಪಿಕಾರ ••┈┈┈┈• ಚಡಪ
●. ಸಾರಾನಾಥದ ಅಶೋಕನ ಸ್ತಂಭವನ್ನು ಭಾರತ ಸರ್ಕಾರ ರಾಷ್ಟ್ರೀಯ ಲಾಂಛನವನ್ನಾಗಿ ಅಳವಡಿಸಿಕೊಂಡ ವರ್ಷ ••┈┈┈┈• 1950 ರಲ್ಲಿ
●. ಸಾರಾನಾಥದ ಸ್ಥೂಪದ ಕೆಳಭಾಗದಲ್ಲಿ ಸತ್ಯ ಮೇವ ಜಯತೆ ಎಂಬ ಹೇಳಿಕೆಯನ್ನು ಈ ಲಿಪಿಯಲ್ಲಿ ಬರೆಯಲಾಗಿದೆ ••┈┈┈┈• ದೇವನಾಗರಿ
●. ಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿದ ಪರಿಯನ್ನು ತಿಳಿಸುವ ಶಾಸನ ••┈┈┈┈• ಬಬ್ರುಶಾಸನ
●. ಮೊಟ್ಟ ಮೊದಲ ಭಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದ ರಾಜ ••┈┈┈┈• ಶಕರ ಪ್ರಸಿದ್ದ ಅರಸ ರುದ್ರಧಮನ
●. ಅಮೋಘವರ್ಷನು ಕೊಲ್ಲಾಪುರದ ಮಹಾಲಕ್ಷ್ಮೀಗೆ ತನ್ನ ಎಡಗೈ ಬೆರಳನ್ನು ಕತ್ತರಿಸಿ ಸಮರ್ಪಿಸಿದ ಬಗ್ಗೆ ತಿಳಿಸುವ ಶಾಸನ ••┈┈┈┈• ಸಂಜಾನ್ ದತ್ತಿ ಶಾಸನ
●. ದಂತಿದುರ್ಗ ••┈┈┈┈• ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ
●. ಒಂದನೇ ಕೃಷ್ಣ ••┈┈┈┈• ಭಾಂಡ್ಕ ಮತ್ತು ತಾಳೇಗಾಂ ಶಾಸನ
●. ಧೃವ ••┈┈┈┈• ಜೆಟ್ಟಾಯಿ ಶಾಸನ
●. ಅಮೋಘವರ್ಷ ••┈┈┈┈• ಸಂಜಾನ್ ತಾಮ್ರ ಶಾಸನ 
●. ಬಾದಾಮಿ ಶಾಸನದ ಕರ್ತೃ ••┈┈┈┈• 1 ನೇ ಪುಲಿಕೇಶಿ
●. ಮಹಾಕೂಟ ಸ್ತಂಭ ಶಾಸನದ ಕರ್ತೃ ••┈┈┈┈• ಮಂಗಳೇಶ
●. ಮಹಾಕೂಟ ಸ್ತಂಭ ಶಾಸನ ••┈┈┈┈• ಬಾದಾಮಿಯ ಮಹಾಕೂಟೇಶ್ವರ ದೇವಲಾಯದಲ್ಲಿದೆ
ರವಿ ಕೀರ್ತೀ ••┈┈┈┈• ಐಹೋಳೆ ಶಾಸನ
●. ಐಹೋಳೆ ಶಾಸನ ••┈┈┈┈• ಮೇಗುತಿ ಜಿನ ದೇವಾಲಯದಲ್ಲಿ ಕೆತ್ತಲಾಗಿದೆ
●. ಚಂದ್ರವಳ್ಳಿ ಶಾಸನದ ಕರ್ತೃ ••┈┈┈┈• ಮಯೂರವರ್ಮ (ಚಿತ್ರದುರ್ಗ)
●. ಬ್ರಾಹ್ಮಿಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ ••┈┈┈┈• ಚಂದ್ರವಳ್ಳಿ ಶಾಸನ.
●. ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ ••┈┈┈┈• ಚಂದ್ರವಳ್ಳಿ ಶಾಸನ
●. ಕನ್ನಡದ ಮೊಟ್ಟ ಮೊದಲ ಶಾಸನ ••┈┈┈┈• ಹಲ್ಮಿಡಿ ಶಾಸನ.
●. ಹಲ್ಮಿಡಿ ಶಾಸನ ಇಲ್ಲಿ ಇರುವುದು ••┈┈┈┈• ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮ
●. ಹಲ್ಮಿಡಿ ಶಾಸನದ ಕರ್ತೃ ••┈┈┈┈• ಕಾಕುಸ್ಥವರ್ಮ .
●. ತಾಳಗುಂದ ಶಾಸನದ ಕರ್ತೃ ••┈┈┈┈• ಕವಿ ಕುಬ್ಜ 
●. ತಾಳಗುಂದ ಶಾಸನವನ್ನು ಬರೆಯಿಸಿದವರು ••┈┈┈┈• ಶಾಂತಿ ವರ್ಮ (ಶಿವಮೊಗ್ಗ ದಲ್ಲಿದೆ)
●. ಮಹಿಪವೊಲು ತಾಮ್ರ ಶಾಸನದ ಕರ್ತೃ ••┈┈┈┈• ಶಿವಸ್ಕಂದ ವರ್ಮ .
●. ವಾಯಲೂರು ಸ್ತಂಭ ಶಾಸನದ ಕರ್ತೃ ••┈┈┈┈• ರಾಜ ಸಿಂಹ .
●. ಕರ್ನಾಟಕದ ಸಂಗೀತವನ್ನು ತಿಳಿಸುವ ಮೊಟ್ಟ ಮೊದಲ ಶಾಸನ ••┈┈┈┈• 1ನೇ ಮಹೇಂದ್ರ ಮರ್ಮನ್ ನ “ಕುಡಿಮಿಯಾ ಮಲೈ ಶಾಸನ .”
●. ನಾನಾ ಘಾಟ್ ಶಾಸನದ ಕರ್ತೃ ••┈┈┈┈• ನಾಗನೀಕ .
●. ಗುಹಾಂತರ ನಾಸಿಕ್ ಶಾಸನದ ಕರ್ತೃ ••┈┈┈┈• ಗೌತಮೀ ಬಾಲಾಶ್ರೀ
●. ವೆಳ್ವಕುಡಿ ತಾಮ್ರ ಶಾಸನದ ಕರ್ತೃ ••┈┈┈┈• ಪರಾಂತಕ ಚೋಳ.

ಪ್ರತಿರೋಧವೇ ತೋರದ ವಿದ್ಯುತ್ ವಾಹಕ

ಪ್ರಚಲಿತ

👉 ಪ್ರತಿರೋಧವೇ ತೋರದ ವಿದ್ಯುತ್ ವಾಹಕ, ವಿಶ್ವದ ಮೊಟ್ಟಮೊದಲ ಸಂಶೋಧನೆ
===================
ವಿದ್ಯುತ್ ಸೋರಿಕೆಯೆಂಬುದು ಜಾಗತಿಕ ಸಮಸ್ಯೆ. ಪ್ರಸರಣೆಯಲ್ಲಿ ತಂತಿಗಳು ತೋರುವ ಪ್ರತಿರೋಧದಿಂದ (ರೆಸಿಸ್ಟೆನ್ಸ್) ಅಮೆರಿಕದಲ್ಲಿ ಪ್ರತಿಶತ 5 ರಷ್ಟು ವಿದ್ಯುತ್ ಸೋರಿಕೆಯಾದರೆ ಭಾರತದಲ್ಲಿ ಇದರ ಪ್ರಮಾಣ ಪ್ರತಿಶತ 8 ರಷ್ಟಿದೆ. ಪ್ರತಿರೋಧವೇ ಇಲ್ಲದ ತಂತಿಗಳ ಮೂಲಕ ವಿದ್ಯುತ್ ಪ್ರಸರಣೆ ಸಾಧ್ಯವಾದಲ್ಲಿ ಕೇವಲ ಹಣವನ್ನಷ್ಟೇ ಉಳಿಸುವುದಲ್ಲ, ವಿದ್ಯುತ್ ಅನ್ನೂ ಭಾರಿ ಪ್ರಮಾಣದಲ್ಲಿ ಉಳಿಸಬಹುದು. ಹರಿದಾಟದ ಸಮಯದಲ್ಲಿ ಕಿಂಚಿತ್ತೂ ಪ್ರತಿರೋಧ ತೋರದ ವಾಹಕಗಳನ್ನು ‘ಸೂಪರ್ ಕಂಡಕ್ಟರ್’ ಅಥವಾ ‘ಸೂಪರ್ ವಾಹಕ’ಗಳೆಂದು ವಿಜ್ಞಾನಿಗಳು ಕರೆಯುತ್ತಾರೆ.
=======
ಇದುವರೆಗೂ ಶೋಧಗೊಂಡ ಇಂಥ ‘ಸೂಪರ್ ವಾಹಕ’ಗಳು ಅತಿ ಶೀತಲ ವಾತಾವರಣದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ಅಂಥ ವಾತಾವರಣವನ್ನು ನಿರ್ವಹಿಸಲೇ ಸಾಕಷ್ಟು ವಿದ್ಯುತ್ ಖರ್ಚಾಗುತ್ತಿದ್ದ ಕಾರಣ, ಹೆಚ್ಚಿನ ಉಪಯೋಗವಾಗುತ್ತಿರಲಿಲ್ಲ. ಅತ್ಯಧಿಕ ವೇಗದಲ್ಲಿ ಚಲಿಸುವ ರೈಲುಗಳು ‘ಮ್ಯಾಗ್ನೆಟಿಕ್ ಲೆವಿಟೇಶನ್’ ಎಂಬ ತತ್ವದಲ್ಲಿ ಓಡುವುದು ನಿಮಗೆ ಗೊತ್ತಿರಬಹುದು. ರೈಲು ಹಳಿಗಳು ಹಾಗೂ ಬಂಡಿಯ ಚಕ್ರಗಳು ಪರಸ್ಪರ ತಾಗದೆಯೇ, ಆಯಸ್ಕಾಂತೀಯ ಬಲದ ಮೂಲಕ ತೇಲಿಹೋಗುತ್ತವೆ. ಆ ಮೂಲಕ ಹಳಿಗಳು ಹಾಗೂ ಚಕ್ರಗಳ ನಡುವಿನ ಘರ್ಷಣೆ ತಪ್ಪಿ, ಅತಿ ವೇಗದಲ್ಲಿ ಹಾಗೂ ಕಡಿಮೆ ನೂಕುಬಲದಲ್ಲಿ ರೈಲು ಮುಂದೆ ಧಾವಿಸುತ್ತದೆ. ಅಕ್ಷರಶಃ ನಿರ್ದಿಷ್ಟವಾಗಿ ಗುರುತಿಸಿದ ಮಾರ್ಗದಲ್ಲಿಯೇ ರೈಲು ತೇಲಿಹೋಗುತ್ತದೆ. ಇಂಥ ವ್ಯವಸ್ಥೆಯನ್ನು ರೂಪಿಸುವಾಗಲೂ ಕಡಿಮೆ ಪ್ರತಿರೋಧ ತೋರುವ ವಿದ್ಯುತ್ ವಾಹಕಗಳು ಅಗತ್ಯ. ಕಾರಣ, ಪ್ರಬಲವಾದ ಆಯಸ್ಕಾಂತೀಯ ಬಲವನ್ನು ಸೃಷ್ಠಿಸಲು ಅಪಾರ ಪ್ರಮಾಣದಲ್ಲಿ ವಿದ್ಯುತ್ ಶಕ್ತಿ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಪ್ರಸರಣೆಯಾಗುವಾಗ ಕಿಂಚಿತ್ತೂ ಪ್ರತಿರೋಧ ತೋರದ ‘ಸೂಪರ್ ಕಂಡಕ್ಟರ್’ಗಳ ಕುರಿತಂತೆ ಸುದ್ದಿ ಸದಾ ರೋಮಾಂಚಕ. ಕಳೆದ ಬುಧವಾರ ಪ್ರತಿಷ್ಠಿತ ವಿಜ್ಞಾನ ಪತ್ರಿಕೆ ‘ನೇಚರ್’ ಪ್ರಕಟಿಸಿರುವಂತೆ ಅಮೆರಿಕದ ರೋಚೆಸ್ಟರ್ ಯೂನಿವರ್ಸಿಟಿಯ ಸಂಶೋಧಕರು ಸಾಮಾನ್ಯ ತಾಪಮಾನದಲ್ಲಿ ‘ಸೂಪರ್ ವಾಹಕತ್ವ’ ಪ್ರದರ್ಶಿಸಬಲ್ಲ ಸಾಮಗ್ರಿಯ ಪರೀಕ್ಷೆ ಮಾಡಿದ್ದಾರೆ. ತಮ್ಮ ಯತ್ನದಲ್ಲಿ ಕೊಂಚ ಗೆಲುವನ್ನೂ ಸಾಧಿಸಿದ್ದಾರೆಂಬ ಸುದ್ದಿ ಬಂದಿದೆ.
====≠===
ಏನಿದು, ಸಾಮಾನ್ಯ ತಾಪಮಾನದ ‘ಸೂಪರ್ ವಾಹಕತ್ವ’? ಎಂಬ ನಿಮ್ಮ ಪ್ರಶ್ನೆಗೆ ಉತ್ತರವಿಲ್ಲಿದೆ. ಅತ್ಯಂತ ಶುದ್ಧರೂಪದಲ್ಲಿ ಸೀಸ, ತವರ, ವೆನೆಡಿಯಂನಂಥ ಲೋಹಗಳಿಗೆ ಸೂಪರ್ ವಾಹಕ ಗುಣಗಳಿವೆಯೆಂಬುದು ಎಂದೋ ಪತ್ತೆಯಾಗಿತ್ತು. ಆದರೆ ಶೂನ್ಯ ಡಿಗ್ರಿ ಸೆಲ್ಶಿಯಸ್‌ಗಿಂತ ಅತ್ಯಂತ ಕಡಿಮೆ ತಾಪಮಾನದಲ್ಲಿ ಮಾತ್ರ ಈ ಲೋಹಗಳು ಸೂಪರ್ ವಾಹಕ ಗುಣಗಳನ್ನು ಪ್ರದರ್ಶಿಸುತ್ತಿದ್ದವು. ‘ಸೂಪರ್ ಕಂಡಕ್ಟರ್’ಗಳು ಅತಿ ಶೀತಲ ತಾಪಮಾನದಲ್ಲಿ ಮಾತ್ರ ಕಾರ್ಯನಿರ್ವಹಿಸುವುದು ಹೇಗೆ? ವಿದ್ಯುತ್ ಪ್ರಸರಣೆಗೆ ಬಳಸುವ ಶುದ್ಧ ವಾಹಕದಲ್ಲಿ ಲೋಹದ ಪರಮಾಣುಗಳು ಶಿಸ್ತುಬದ್ಧ ಸಿಪಾಯಿಗಳಂತೆ ಅಂದರೆ ಒಂದರ ಪಕ್ಕದಲ್ಲೊಂದು, ಒಂದರ ಹಿಂದೆ ಮತ್ತೊಂದು ಜೋಡಣೆಯಾಗಿರುತ್ತವೆ. ಎಲ್ಲವೂ ಎಣಿಕೆಯಂತೆ ನಡೆದಿದ್ದರೆ ಈ ಶಿಸ್ತಿನ ಪರಮಾಣುಗಳ ನಡುವೆ ವಿದ್ಯುತ್ ಕೂಡಾ ಶಿಸ್ತಿನಿಂದಲೇ ಪ್ರವಹಿಸಿರುತ್ತಿತ್ತು. ಪ್ರಸರಣೆಯ ಸಮಯದಲ್ಲಿ ಪ್ರತಿರೋಧವೆಂಬುದೇ ಇರುತ್ತಿರಲಿಲ್ಲ. ವಿದ್ಯುತ್ ನಷ್ಟವಾಗುತ್ತಿರಲಿಲ್ಲ. ಆದರೆ ನಿರ್ಮಾಣದ ಸಮಯದಲ್ಲಿಯೇ ಲೋಹ ವಾಹಕದ ಹರಳುಗಳಲ್ಲಿ ಅಲ್ಪ-ಸ್ವಲ್ಪ ವ್ಯತ್ಯಯಗಳಿರುತ್ತವೆ. ಇದರಿಂದಾಗಿ ಅವು ಶಿಸ್ತನ್ನು ಪರಿಪಾಲಿಸಲಾಗುವುದಿಲ್ಲ. ನಿಮಗೆ ಗೊತ್ತಿರುವಂತೆ ನಮ್ಮ ರಸ್ತೆಗಳಲ್ಲಿಯೂ ಎಲ್ಲ ಚಾಲಕರು ಶಿಸ್ತಾಗಿ ನಿಯಮಗಳನ್ನು ಪಾಲಿಸಿಕೊಂಡು ತಮ್ಮ ವಾಹನಗಳನ್ನು ಚಲಿಸುತ್ತಾ ಹೋದಲ್ಲಿ, ಟ್ರಾಫಿಕ್ ಜ್ಯಾಮ್‌ಗಳಿರುವುದಿಲ್ಲ, ಆ್ಯಕ್ಸಿಡೆಂಟುಗಳಿರುವುದಿಲ್ಲ. ಆದರೆ ಕೆಲವೊಂದು ಪೋಕರಿ ಚಾಲಕರು ನಿಯಮಗಳನ್ನು ಪರಿಪಾಲಿಸದೆಯೆ ಅಥವಾ ತಾವು ಸೇವಿಸಿದ ಮದ್ದಿನ ಪ್ರಭಾವದಿಂದ ನಿಯಮಬದ್ಧ ಚಾಲಕರಿಗೆ ಅಡ್ಡಿಮಾಡುತ್ತಾರಲ್ಲವೆ? ಒಮ್ಮೊಮ್ಮೆ ತಾವು ಎಲ್ಲಿಗೆ ಹೋಗಬೇಕೆಂಬುದನ್ನರಿಯದೆ ಅವರು ಎಲ್ಲೆಲ್ಲೋ ಸಾಗುತ್ತಾರೆ.
========
. ಈ ‘ಸೂಪರ್ ಕಂಡಕ್ಟರ್’ಗಳ ಕುರಿತಂತೆ ಮೊದಲ ಶೋಧ ನಡೆದದ್ದು 1911ರಲ್ಲಿ. ಪಾದರಸದ ತಂತಿಯನ್ನು ನಿರಪೇಕ್ಷ ಶೂನ್ಯ ತಾಪಮಾನಕ್ಕೂ ಕೊಂಚ ಮೇಲಿನ 4.2 ಡಿಗ್ರಿ ಸೆಲ್ಶಿಯಸ್ ತಾಪಮಾನದಲ್ಲಿ ಇಟ್ಟಾಗ ಅದು ‘ಸೂಪರ್ ವಾಹಕ’ ಗುಣವನ್ನು ಪ್ರದರ್ಶಿಸಬಲ್ಲದೆಂದು ಡಚ್ ಭೌತವಿಜ್ಞಾನಿ ಹೇಯ್ಕ್ ಒನ್ನೆಸ್ ತೋರಿಸಿದ್ದರು. ಈ ನಿರಪೇಕ್ಷ ಶೂನ್ಯ ತಾಪಮಾನವೆಂದರೆ ಸೊನ್ನೆ ಡಿಗ್ರಿಗಿಂತಲೂ ಸೆಲ್ಶಿಯಸ್‌ಗಿಂತಲೂ 273 ಡಿಗ್ರಿ ಕೆಳಗಿನ ಅತಿ ಶೀತಲ ತಾಪಮಾನ. 1986ರ ಹೊತ್ತಿಗೆ ನಿರಪೇಕ್ಷ ತಾಪಮಾನಕ್ಕಿಂತಲೂ 30 ಡಿಗ್ರಿ ಸೆಲ್ಶಿಯಸ್ ಮೇಲ್ಮಟ್ಟದ ತಾಪಮಾನದಲ್ಲಿಟ್ಟ (ಮೈನಸ್ 243 ಡಿಗ್ರಿ ಸೆಲ್ಶಿಯಸ್) ಕಾಪರ್ ಆಕ್ಸೈಡ್ ಸಿರಾಮಿಕ್ಸ್’ನಂಥ ಸಾಮಗ್ರಿಯಲ್ಲೂ ‘ಸೂಪರ್ ವಾಹಕ’ ಗುಣವನ್ನು ವಿಜ್ಞಾನಿಗಳು ಕಂಡುಕೊಂಡರು. ಪಾದರಸ-ಆಧರಿತ ಕಾಪರ್ ಆಕ್ಸೈಡ್ ಅನ್ನು ಒತ್ತಡದಲ್ಲಿಟ್ಟಾಗ ಮೈನಸ್ 109 ಡಿಗ್ರಿ ಸೆಲ್ಶಿಯಸ್ ತಾಪಮಾನದಲ್ಲಿ ಇದೇ ಗುಣ ಪ್ರದರ್ಶಿತವಾಯಿತು. ಎಷ್ಟೇ ಹರಸಾಹಸ ಪಟ್ಟರೂ ಸಾಮಾನ್ಯ ತಾಪಮಾನದಲ್ಲಿ (20 ಡಿಗ್ರಿ ಸೆಲ್ಶಿಯಸ್) ಸೂಪರ್ ವಾಹಕತ್ವ ತೋರಬಲ್ಲ ಸಾಮಗ್ರಿ ಲಭ್ಯವಾಗಲಿಲ್ಲ.
==
ನಮ್ಮ ದೇಶದ ಹೆಮ್ಮೆಯ ವಿಜ್ಞಾನಿ ಹಾಗೂ ಭಾರತರತ್ನ ಪುರಸ್ಕೃತ ಡಾ. ಸಿ.ಎನ್.ಆರ್. ರಾವ್ ಬೆಂಗಳೂರಿನ ‘ಭಾರತೀಯ ವಿಜ್ಞಾನ ಮಂದಿರ - ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್’ನ ನಿರ್ದೇಶಕರಾಗಿದ್ದರು. ಅವರ ನೇತೃತ್ವದಲ್ಲಿ ‘ಸೂಪರ್ ಕಂಡಕ್ಟರ್’ಗಳ ಕುರಿತಂತೆ ಉನ್ನತ ಮಟ್ಟದ ಸಂಶೋಧನೆಗಳು ನಡೆದಿದ್ದವು. ಆ ಸಮಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಪತ್ರಿಕೆಗಳಲ್ಲಿ ‘ಸೂಪರ್ ಕಂಡಕ್ಟರ್’ಗಳ ಬಗೆಗಿನ ಸಂಶೋಧನೆಗಳಿಗೇ ಅಗ್ರ ಸ್ಥಾನವಿತ್ತು. ಅವರ ನೇತೃತ್ವದಲ್ಲಿ ಜರುಗಿದ ಸಂಶೋಧನೆಗಳು ಮೈನಸ್ 153 ಡಿಗ್ರಿ ಸೆಲ್ಶಿಯಸ್ ತಾಪಮಾನದಲ್ಲಿ ಸೂಪರ್ ವಾಹಕತ್ವ ಪ್ರದರ್ಶಿಸುವ ಸಾಮಗ್ರಿಗಳನ್ನು ಗುರುತಿಸಿದವು. ನಂತರದ ದಿನಗಳಲ್ಲಿ ಸಿ.ಎನ್.ಆರ್.ರಾವ್ ಅವರ ಆಸಕ್ತ ಕ್ಷೇತ್ರ ‘ನ್ಯಾನೊ ತಂತ್ರಜ್ಞಾನ’ಕ್ಕೆ ಬದಲಾಯಿತು

Saturday, October 17, 2020

"ನಿಮಗಿದು ತಿಳಿದಿರಲಿ"

 ನ.1ರಿಂದ ಬದಲಾಗುತ್ತಿದೆ ಎಲ್‌ಪಿಜಿ ಹೋಮ್‌ ಡೆಲಿವರಿ ವಿಧಾನ: ಏನಿದು ಹೊಸ ವ್ಯವಸ್ಥೆ?
================
ಮುಂದಿನ ತಿಂಗಳಿಂದ ಎಲ್‌ಪಿಜಿ ಸಿಲಿಂಡರ್‌ ಹೋಮ್‌ ಡೆಲಿವರಿಗೆ ಸಂಬಂಧಿಸಿದಂತೆ ನಿಯಮಗಳು ಬದಲಾಗಲಿವೆ. ಹೊಸ ನಿಯಮಗಳು ನವೆಂಬರ್ 1 ರಿಂದಲೇ ಜಾರಿಗೆ ಬರಲಿದ್ದು, ಹೊಸದಾಗಿ ಗ್ಯಾಸ್‌ ಸಿಲಿಂಡರ್ ಬುಕ್‌ ಮಾಡುವವರು ಹೊಸ ನಿಯಮಗಳ ಕುರಿತು ತಿಳಿಯುವುದು ಅವಶ್ಯವಾಗಿದೆ.
===============
ಎಲ್‌ಪಿಜಿ ಸಿಲಿಂಡರ್ ಹೋಮ್ ಡೆಲಿವರಿಯ (Home Delivery) ವ್ಯವಸ್ಥೆಯು ಈಗ ಸಂಪೂರ್ಣವಾಗಿ ಬದಲಾಗಲಿದೆ. ಸರಕಾರಿ ತೈಲ ಕಂಪನಿಗಳು ಈಗಾಗಲೇ ಈ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಂಡಿವೆ. ನವೆಂಬರ್‌ 1ರಿಂದಲೇ ಹೊಸ ವಿತರಣ ವ್ಯವಸ್ಥೆ ಜಾರಿಗೆ ಬರಲಿದೆ. ಎಲ್‌ಪಿಜಿ ಸಿಲಿಂಡರ್‌ ಹೋಮ್‌ ಡೆಲಿವರಿ ಕುರಿತಂತೆ ಯಾವೆಲ್ಲ ಬದಲಾವಣೆಗಳಾಗಲಿವೆ? ಇನ್ಮುಂದೆ ಸಿಲಿಂಡರ್‌ ಪಡೆಯಲು ಯಾವೆಲ್ಲ ವಿಧಾನ ಅನುಸರಿಸಬೇಕು? ಈ ಕುರಿತ ಮಾಹಿತಿ ಇಲ್ಲಿದೆ.
======
👉 ಡೆಲಿವರಿ ವ್ಯವಸ್ಥೆ ಬದಲಾವಣೆಯ ಉದ್ದೇಶವೇನು?
==========
ಸಿಲಿಂಡರ್‌ನಿಂದ ಅನಿಲ ಕದಿಯುವುದನ್ನು ತಡೆಯಲು ಮತ್ತು ಸರಿಯಾದ ಗ್ರಾಹಕರನ್ನು ಗುರುತಿಸುವ ಮುಖ್ಯ ಉದ್ದೇಶಗಳೊಂದಿಗೆ ಸಿಲಿಂಡರ್ ಹೋಂ ಡೆಲಿವರಿಯಲ್ಲಿ ಹೊಸ ವ್ಯವಸ್ಥೆ ಪರಿಚಯಿಸಲಾಗುತ್ತಿದೆ. ತೈಲ ಕಂಪನಿಗಳು ಎಲ್‌ಪಿಜಿ (LPG) ಸಿಲಿಂಡರ್‌ಗಳ ಹೊಸ ವಿತರಣಾ ವ್ಯವಸ್ಥೆ ಜಾರಿ ಮಾಡಿದ ನಂತರ, ಸಿಲಿಂಡರ್‌ ಪಡೆಯಲು ಕೇವಲ ಗ್ಯಾಸ್‌ ಬುಕ್‌ ಮಾಡಿದರಷ್ಟೇ ಸಾಲದು. ಸಿಲಿಂಡರ್‌ ಪಡೆಯುವಾಗಲೂ ಕೆಲವು ನಿಯಮಗಳನ್ನು ಅನುಸರಿಸಬೇಕು.
==========
👉ಏನಿದು ಹೊಸ ವ್ಯವಸ್ಥೆ?
====
ಹೊಸ ಡೆಲಿವರಿ ವ್ಯವಸ್ಥೆಯನ್ನು ಆರಂಭಿಕವಾಗಿ ದೇಶದ 100 ಸ್ಮಾರ್ಟ್‌ ಸಿಟಿಗಳಲ್ಲಿ ಜಾರಿಗೆ ತರಲಾಗುತ್ತಿದೆ. ಈಗಾಗಲೇ ರಾಜಸ್ಥಾನದ ಜೈಪುರದಲ್ಲಿ ಪ್ರಾಯೋಗಿಕವಾಗಿ ಜಾರಿಯಾಗಿದೆ. ಹೊಸ ವ್ಯವಸ್ಥೆಯಲ್ಲಿ 'ವಿತರಣಾ ದೃಢೀಕರಣ ಕೋಡ್ (ಡಿಎಸಿ) ವಿಧಾನವನ್ನು ಪರಿಚಯಿಸಿದೆ. ಅಂದರೆ ಸಿಲಿಂಡರ್ ಸಿಲಿಂಡರ್‌ ಬುಕ್‌ ಮಾಡಿದ ನಂತರ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಂದು ಕೋಡ್ ಅನ್ನು ರವಾನಿಸಲಾಗುತ್ತದೆ. ಸಿಲಿಂಡರ್ ವಿತರಣೆಯ ಸಮಯದಲ್ಲಿ ಈ ಕೋಡ್ ಅನ್ನು ಡೆಲಿವರಿ ಹುಡುಗನಿಗೆ ನೀಡಬೇಕಾಗುತ್ತದೆ. ಈ ಕೋಡ್ ಅನ್ನು ತೋರಿಸದ ಹೊರತು ವಿತರಣೆಯು ಪೂರ್ಣಗೊಳ್ಳುವುದಿಲ್ಲ ಮತ್ತು ಸಿಲಿಂಡರ್‌ ಡೆಲಿವರಿ ಸ್ಟೇಟಸ್ ಬಾಕಿ ಉಳಿಯುತ್ತದೆ.
===============
👉 ಮೊಬೈಲ್ ಸಂಖ್ಯೆ ನವೀಕರಿಸಬಹುದು
======
ನೀವು ಪ್ರಸ್ತುತ ಬಳಸುತ್ತಿರುವ ಮೊಬೈಲ್‌ ಸಂಖ್ಯೆ ಹಾಗೂ ಗ್ಯಾಸ್‌ ಏಜೆನ್ಸಿಗೆ ನೀಡಿರುವ ಮೊಬೈಲ್‌ ಸಂಖ್ಯೆಯಲ್ಲಿ ವ್ಯತ್ಯಾಸವಾಗಿದ್ದರೆ, ನಿಮ್ಮ ಮೊಬೈಲ್ ಸಂಖ್ಯೆಯನ್ನು ವಿತರಣೆಯ ಸಮಯದಲ್ಲಿ ನವೀಕರಿಸಲು ಸಾಧ್ಯವಿದೆ. ಇದಕ್ಕಾಗಿ ಡೆಲಿವರಿ ಹುಡುಗನಿಗೆ ಅಪ್ಲಿಕೇಶನ್ ಒದಗಿಸಲಾಗುವುದು. ವಿತರಣೆಯ ಸಮಯದಲ್ಲಿ ಆ ಅಪ್ಲಿಕೇಶನ್‌ನ ಸಹಾಯದಿಂದ ನಿಮ್ಮ ಮೊಬೈಲ್ ಸಂಖ್ಯೆಯನ್ನು ಡೆಲಿವರಿ ಬಾಯ್ ಬಳಿ ನವೀಕರಿಸಬಹುದು. ಅಪ್ಲಿಕೇಶನ್ ಮೂಲಕ ಮೊಬೈಲ್ ಸಂಖ್ಯೆಯನ್ನು ರಿಯಲ್‌ ಟೈಮ್‌ ಆಧಾರದಲ್ಲಿ ನವೀಕರಿಸಲಾಗುತ್ತದೆ. ಇದರ ನಂತರ ಒಂದೇ ಸಂಖ್ಯೆಯಿಂದ ಕೋಡ್ ಅನ್ನು ರಚಿಸುವ ಸೌಲಭ್ಯವಿರುತ್ತದೆ. ಒಂದು ವೇಳೆ ನೀವು ತಪ್ಪು ವಿಳಾಸ ಹಾಗೂ ಮೊಬೈಲ್‌ ಸಂಖ್ಯೆ ನೀಡಿದ್ದರೆ, ನಿಮ್ಮ ಸಿಲಿಂಡರ್‌ ಅನ್ನು ತಡೆಹಿಡಿಯಲಾಗುವುದು.
==============
👉 ಆರಂಭಿಕವಾಗಿ ಸ್ಮಾರ್ಟ್ ಸಿಟಿಗಳಲ್ಲಿ ಜಾರಿ
=======
ತೈಲ ಕಂಪನಿಗಳು ಮೊದಲು 100 ಸ್ಮಾರ್ಟ್ ಸಿಟಿಗಳಲ್ಲಿ ಈ ಹೊಸ ವಿತರಣಾ ವ್ಯವಸ್ಥೆಯನ್ನು ಜಾರಿಗೆ ತರಲಿವೆ. ಇದನ್ನು ಪ್ರಾಯೋಗಿಕ ಯೋಜನೆಯಾಗಿ ಮಾಡಲಾಗುತ್ತದೆ. ಕ್ರಮೇಣ ಅದೇ ವ್ಯವಸ್ಥೆಯನ್ನು ದೇಶದ ಇತರ ಭಾಗಗಳಲ್ಲಿ ಜಾರಿಗೆ ತರಲಾಗುವುದು.
========
ಪ್ರಸ್ತುತ ಈ ವ್ಯವಸ್ಥೆಯು ಎರಡು ನಗರಗಳಲ್ಲಿ ಪ್ರಾಯೋಗಿಕ ಯೋಜನೆಯಾಗಿ ಕಾರ್ಯನಿರ್ವಹಿಸುತ್ತಿದೆ. ಹೊಸ ವ್ಯವಸ್ಥೆಯು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ವಾಣಿಜ್ಯ ಸಿಲಿಂಡರ್‌ಗಳನ್ನು ಹೊಸ ವ್ಯವಸ್ಥೆಯಿಂದ ಹೊರಗಿಡಲಾಗಿದೆ.
========

Wednesday, October 14, 2020

💐🙏🏻 *ಸುಪ್ರಭಾತ* 🙏🏻💐


*ಎಲ್ಲಿಯವರೆಗೆ ಒಂದು ಹಡಗು*
*ಸಮುದ್ರದ*
*ನೀರನ್ನು ತನ್ನಲ್ಲಿ ನುಗ್ಗಲು ಬಿಡುವುದಿಲ್ಲವೋ ಅಲ್ಲಿಯವರೆಗೂ ಇಡೀ ಸಮುದ್ರದ*
 *ನೀರು ಆ ಹಡುಗವನ್ನು ಮುಳುಗಿಸಲು ಸಾಧ್ಯವಾಗುವುದಿಲ್ಲ.....! ಅದೇ ರೀತಿ* 
*ಎಲ್ಲಿಯವರೆಗೂ ನಾವು ನಕಾರಾತ್ಮಕ* 
*ಚಿಂತನೆಗಳಿಗೆ ನಮ್ಮಲ್ಲಿ ಪ್ರವೇಶಿಸಲು ಅನುಮತಿ ಕೊಡುವುದಿಲ್ಲವೋ ಅಲ್ಲಿಯವರೆಗೆ*
 *ನಾವು ಜೀವನದಲ್ಲಿ ಸೋಲುವುದಿಲ್ಲ*...!! 

  *🙏🏻ಶುಭೋದಯ🙏🏻*

Wednesday, October 7, 2020

NOBEL PRIZE WINNER 2020

🏆 NOBEL PRIZE WINNER 2020 🏆

🎖 AWARDED FOR
🔹 Outstanding contributions for humanity in Chemistry, Literature, Peace, Physics, and Physiology or Medicine.
🌀 First Awarded : 1901

🎖 COUNTRY
🔹 Sweden (all prizes except the Peace Prize)
🔹 Norway (Peace Prize only)

🎖REWARD
🔹Prize money of 9 million

         =•=•=•=•=•=•=•=•=•=•=•=•=•=

🏆 NOBEL PRIZE IN PHYSIOLOGY OR MEDICINE 2020
◾ Harvey J. Alter (USA)
◾ Michael Houghton (UK)
◾ Charles M. Rice (USA)

🏆 NOBEL PRIZE IN PHYSICS 2020
◾ Roger Penrose (UK)
◾ Reinhard Genzel (GERMANY)
◾ Andrea Ghez (USA)

🏆 NOBEL PRIZE IN CHEMISTRY 2020
◾Emmanuelle Charpentier (France) 
◾Jennifer A. Doudna (USA)

Current Affairs

ಪ್ರಚಲಿತ

🌷 ಇಬ್ಬರು ಮಹಿಳಾ ವಿಜ್ಞಾನಿಗಳಿಗೆ ರಸಾಯನಶಾಸ್ತ್ರ ವಿಭಾಗದ ನೊಬೆಲ್ ಪುರಸ್ಕಾರ
======================
ರಸಾಯನಶಾಸ್ತ್ರದಲ್ಲಿ ವಿಶೇಷ ಸಂಶೋಧನೆ ನಡೆಸಿದ ಇಬ್ಬರು ಮಹಿಳಾ ವಿಜ್ಞಾನಿಗಳಿಗೆ 2020ನೇ ಸಾಲಿನ ನೊಬೆಲ್ ಪುರಸ್ಕಾರ ಲಭಿಸಿದೆ.
============
ಜೀನೋಮ್‌ ಎಡಿಟಿಂಗ್‌ ವಿಧಾನದ ಅಭಿವೃದ್ಧಿಗಾಗಿ ಎಮ್ಯಾನುಯೆಲ್ ಚಾರ್ಪೆಂಟಿಯರ್ ಮತ್ತು ಜೆನಿಫರ್‌ ಎ.ಡೌಡ್ನ ಅವರನ್ನು ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
=============
ಎಮಾನ್ಯುಯೆಲ್‌ ಅವರು ಜರ್ಮನಿಯ ಬರ್ಲಿನ್‌ನ ಮ್ಯಾಕ್ಸ್‌ ಬ್ಲ್ಯಾಂಕ್‌ ಯೂನಿಟ್‌ ಫಾರ್‌ ದಿ ಸೈನ್ಸ್‌ ಆಫ್‌ ಪ್ಯಾಥೊಜೆನ್ಸ್‌ನ ವಿಭಾಗದ ನಿರ್ದೇಶಕಿಯಾಗಿದ್ದಾರೆ. ಜೆನಿಫರ್‌ ಎ.ಡೌಡ್ನ ಅಮೆರಿಕದ ಬರ್ಕ್ಲಿಯ ಯೂನಿವರ್ಸಿಟಿ ಆಫ್‌ ಕ್ಯಾಲಿಫೋರ್ನಿಯಾದಲ್ಲಿ ಪ್ರೊಫೆಸರ್‌ ಆಗಿದ್ದಾರೆ.
=============
ತಳಿಗುಣ(ಜೀನ್‌) ತಂತ್ರಜ್ಞಾನದಲ್ಲಿ ಅತ್ಯಂತ ತೀಕ್ಷ್ಣವಾದ ತಂತ್ರಗಳ(ಟೂಲ್ಸ್‌) ಅನ್ವೇಷಣೆಯನ್ನು ಎಮಾನ್ಯುಯೆಲ್‌ ಮತ್ತು ಜೆನಿಫರ್‌ ಮಾಡಿದ್ದಾರೆ. ತಳಿಗುಣ ತಿದ್ದುಪಡಿಗೆ ಬಳಸಲಾಗುವ ಅತ್ಯಂತ ಸೂಕ್ಷ್ಮ ಕ್ರಿಸ್‌ಪರ್‌(CRISPR/Cas9) ಕತ್ತರಿಗಳನ್ನು (ಜೆನೆಟಿಕ್‌ ಸಿಸರ್ಸ್) ಈ ಇಬ್ಬರು ಮಹಿಳೆಯರು ಅಭಿವೃದ್ಧಿ ಪಡಿಸಿದ್ದಾರೆ.
===============
👉 The Nobel Prize in Chemistry 2020 was awarded jointly to Emmanuelle Charpentier and Jennifer A. Doudna "for the development of a method for genome editing."
=============
🌷 Did you know?
===============
> 112 Nobel Prizes in Chemistry have been awarded between 1901 and 2019.

> 63 Chemistry Prizes have been given to one Laureate only.

> 7 women have been awarded the Chemistry Prize so far.

> 1 person, Frederick Sanger, has been awarded the Chemistry Prize twice, in 1958 and in 1980.

> 35 years was the age of the youngest Chemistry Laureate ever, Frédéric Joliot, who was awarded the Nobel Prize in 1935.

> 97 is the age of the oldest Chemistry Laureate, and oldest laureate ever, John B. Goodenough.
==========

Nobel 2020: Award for three scientists in physics

ಪ್ರಚಲಿತ

🌷 ನೊಬೆಲ್‌ 2020: ಭೌತವಿಜ್ಞಾನ ವಿಭಾಗದಲ್ಲಿ ಮೂವರು ವಿಜ್ಞಾನಿಗಳಿಗೆ ಪ್ರಶಸ್ತಿ
Nobel 2020: Award for three scientists in physics
====================
ಮೂವರು ವಿಜ್ಞಾನಿಗಳಿಗೆ 2020ನೇ ಸಾಲಿನ ಭೌತಶಾಸ್ತ್ರ ನೊಬೆಲ್‌ ಪ್ರಶಸ್ತಿ ಘೋಷಣೆಯಾಗಿದೆ. ಕಪ್ಪು ಕುಳಿಗೆ (black hole) ಸಂಬಂಧಿಸಿದ ಮಹತ್ವದ ಸಂಶೋಧನೆಗಳಿಗಾಗಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
==========
ಪ್ರಶಸ್ತಿಯ ಅರ್ಧ ಮೊತ್ತ ರೋಜರ್‌ ಪೆನ್ರೋಸ್‌ ಹಾಗೂ ಉಳಿದ ಅರ್ಧ ಭಾಗವನ್ನು ರೀನ್‌ಹಾರ್ಡ್ ಗೆಂಜೆಲ್‌ ಮತ್ತು ಆ್ಯಂಡ್ರಿಯಾ ಘೆಂಜ್ ಅವರಿಗೆ ಹಂಚಿಕೆಯಾಗಲಿದೆ
==============
🌷 The 2020 Physics Laureates
=================
The Royal Swedish Academy of Sciences has decided to award the Nobel Prize in Physics 2020 with one half to Roger Penrose “for the discovery that black hole formation is a robust prediction of the general theory of relativity" and and the other half jointly to Reinhard Genzel and Andrea Ghez "for the discovery of a supermassive compact object at the centre of our galaxy".
====================
🌷 Did you know?
==========
> 114 Nobel Prizes in Physics have been awarded between 1901 and 2020.

> 47 Physics Prizes have been given to one Laureate only.

> 4 women have been awarded the Physics Prize so far: Marie Curie in 1903, Maria Goeppert-Mayer in 1963, Donna Strickland in 2018 and Andrea Ghez in 2020.

> 1 person, John Bardeen, has been awarded the Physics Prize twice.

> 25 years was the age of the youngest Physics Laureate ever, Lawrence Bragg, when he was awarded the 1915 Physics Prize together with his father.

> 96 years is the age of the oldest Physics Laureate, Arthur Ashkin
===========
👉 Andrea Ghez
===============
> Andrea Ghez
The Nobel Prize in Physics 2020
> Born: 1965, New York, NY, USA
> Affiliation at the time of the award: University of California, Los Angeles, CA, USA
> Prize motivation: "for the discovery of a supermassive compact object at the centre of our galaxy."
===========
👉 Roger Penrose
=================
> Roger Penrose
The Nobel Prize in Physics 2020
> Born: 1931, Colchester, United Kingdom
> Affiliation at the time of the award: University of Oxford, Oxford, United Kingdom
> Prize motivation: "for the discovery that black hole formation is a robust prediction of the general theory of relativity."
=========
👉 Reinhard Genzel
==============
> Reinhard Genzel
The Nobel Prize in Physics 2020
> Born: 24 March 1952, Bad Homburg vor der Höhe, Germany
> Affiliation at the time of the award: University of California, Berkeley, CA, USA, Max Planck Institute for Extraterrestrial Physics, Garching, Germany
> Prize motivation: "for the discovery of a supermassive compact object at the centre of our galaxy."
=========

ಆರ್ಯ ಮತ್ತು ದ್ರಾವಿಡ ನಡುವಿನ ವ್ಯತ್ಯಾಸವೇನು?

  ಮೊದಲಿಗೆ ಈ ಪದಗಳ ಪರಿಚಯ ನೋಡೋಣ. ಆರ್ಯ  ಅನ್ನೋದು ಉತ್ತಮ/ದೊಡ್ಡವರು ಎಂಬ ಅರ್ಥ ನೀಡುತ್ತದೆ  ಅಷ್ಟೇ.  ಉತ್ತಮ ಕುಲದಲ್ಲಿ ಹುಟ್ಟಿದವನು, ಯಜಮಾನ, ಹಿಡಿದ ಕೆಲಸವನ್ನು ಬಿಡ...