Saturday, January 27, 2024

ಆರ್ಯ ಮತ್ತು ದ್ರಾವಿಡ ನಡುವಿನ ವ್ಯತ್ಯಾಸವೇನು?

 ಮೊದಲಿಗೆ ಈ ಪದಗಳ ಪರಿಚಯ ನೋಡೋಣ.

ಆರ್ಯ ಅನ್ನೋದು ಉತ್ತಮ/ದೊಡ್ಡವರು ಎಂಬ ಅರ್ಥ ನೀಡುತ್ತದೆ ಅಷ್ಟೇ. ಉತ್ತಮ ಕುಲದಲ್ಲಿ ಹುಟ್ಟಿದವನು, ಯಜಮಾನ, ಹಿಡಿದ ಕೆಲಸವನ್ನು ಬಿಡದೆ ಮಾಡುವನು.. ಇತ್ಯಾದಿ

ಉದಾಹರಣೆಗೆ:

1. ಕಂಬಳದಲ್ಲಿ ಓಡೋ ಕೋಣಗಳಿಗೆ ಆರ್ಯ ಕೋಣ ಅಂತಾರೆ

2. ರಾಮಾಯಣದಲ್ಲಿ ಮಂಡೋದರಿ ರಾವಣನನ್ನು ಆರ್ಯ ಪುತ್ರ ಅಂತಾಳೆ.

ನಾವಿಂದು ಸುಲಭವಾಗಿ ಬಳಸುವ ಪದ ಅಯ್ಯ ಇದರಿಂದಲೇ ಬಂದದ್ದು.

ಇನ್ನೂ ದ್ರಾವಿಡ ,ಇದು ಪ್ರದೇಶ ಸೂಚಕ ಪದ. ದ್ರವ್ಯ ಅನ್ನೋದು ಸಂಪತ್ತು, ಹಾಗೆ ದ್ರಾವಿಡ ಅನ್ನೋದು ಸಂಪನ್ನಭರಿತ(ವನ್ಯ, ಸಸ್ಯ.. ಇತ್ಯಾದಿ) ಪ್ರದೇಶ ಅಂತ. ವ್ಯಾಕರಣ ಅನ್ವಯ ಗಿಣಿ ಹೇಗೆ ಗಿಳಿ ಆಗುತ್ತದೆಯೋ, ದ್ರಾವಿಡ ->ದ್ರಮಿಳ->ತಮಿಳ/ತಮಿಳು ಆಗಿದೆ. ತಮಿಳಿಗರು ಅಕ್ಷರಗಳನ್ನ ಅದಲು ಬದಲು ಜಾಸ್ತಿ ಮಾಡ್ತಾರೆ, ಪ್ರಸಾದ್ ->ಪ್ರಸಾತ್.

ಉದಾಹರಣೆಗೆ:

1. ಆಚಾರ್ಯ(ಇಲ್ಲೂ ಆರ್ಯ ಶಬ್ದ ಇದೆ) ಶಂಕರರು ಕಾಶ್ಮೀರದಲ್ಲಿ ನಾನು ದ್ರಾವಿಡ ಶಿಶು ಎಂದೇ ಪರಿಚಯಿಸಿಕೊಂಡರು.

2. ನಮ್ಮ ರಾಷ್ಟ್ರಗೀತೆಯಲ್ಲಿ ದ್ರಾವಿಡ, ಉತ್ಕಳ ವಂಗ..

ಇವೆರೆಡು ಜನಾಂಗೀಯ ಅಥವಾ ಜಾತಿ ಸೂಚಕ ಪದಗಳಲ್ಲ...!!

ಆರ್ಯರ ಆಗಮನ(1900 BC ಅಂತೆ)? Aryan Migration Theory

ಬಿಳಿ ಚರ್ಮದ ಪರಂಗಿಗಳಿಗೆ ಒಂದು ತೆವಲು. ಈ ಜಗತ್ತಿನಲ್ಲಿ ಶ್ರೇಷ್ಠವಾದ ಏನೇ ಇದ್ದರೂ ಅದು ನಮ್ಮಿಂದಲೇ ಆಗಿರಬೇಕು ಅಥವಾ ನಮ್ಮಲ್ಲಿ ಇರಬೇಕು..!! (ಈಗಲೂ ಬೇಡವಾದ ವಸ್ತುಗಳಿಗೆ ಕೋಟಿ ಕೊಟ್ಟು ಇಟ್ಕೋತಾರೆ).

1746ರಲ್ಲಿ ವಿಲಿಯಂ ಜೋನ್ಸ್ ಸಂಸ್ಕೃತದಿಂದ ಒಂದಿಷ್ಟು ಪುಸ್ತಕಗಳನ್ನ ಆಂಗ್ಲಕ್ಕೆ ಅನುವಾದ ಮಾಡಿ. ಸಂಸ್ಕೃತ ಭಾಷೆಯನ್ನ ಹೊಗಳಿದ. ಅಷ್ಟೇ ಸಾಕಿತ್ತು, 1857ರಲ್ಲಿ ಸಂಸ್ಕೃತ ಬಾರದ, ಭಾರತಕ್ಕೆ ಎಂದೂ ಬಾರದ ಕಡೆಗೆ ಆಂಗ್ಲವೂ ಬಾರದ ಮಹಾ ವಿದ್ವಾಂಸ ಮ್ಯಾಕ್ಸ್ ಮುಲ್ಲರ್ sacred texts of east ಬರೀತಿನಿ ಮುಂದೆ ಬಂದ.

ಅದು ಹೇಗೆ ಭಾರತದವರು ನಮಗಿಂತ ಮುಂದೆ ಇರೋಕೆ ಸಾಧ್ಯ ಅಂತ ಅವನೇ ಶುರು ಮಾಡಿದ ಕಥೆ ಇದು. ಉತ್ತರ ಭಾರತದವರು ಆರ್ಯರು ನಮ್ಮ ತರ, ದಕ್ಷಿಣದವರು ದ್ರಾವಿಡರು ಅಂತ..!!..

ಆರ್ಯರು ದ್ರಾವಿಡರನ್ನ ಹೊಡೆದು ಓಡಿಸಿದರು..!!, ಅಲ್ಲ ಓಡಿ ಬಂದೋರು ಅಷ್ಟೊಂದು ದುರ್ಬಲರ..? ಅಂದಿನ ಅಪಾರ ಜ್ಞಾನ ರಾಶಿಯನ್ನ ಅಲ್ಲೇ ಬಿಟ್ಟು ಬಂದ್ರ..?

ಜೊತೆಗೆ ಬಿಷಪ್ ಕಾಲ್ದವೆಲ್ "comparitive study of Dravidian linguistics" ಬರೆದ. ಬರೀ ತಮಾಷೆ ಪುಸ್ತಕ ಇದು. ಹಾಲಿಗೆ ಪದವಿದೆ, ಬೆಣ್ಣೆಗಿಲ್ಲ..!! ಈತನ ಪುಸ್ತಕದ ಮೊದಲ ಮುದ್ರಣದ ಅರಿಕೆಯಲ್ಲಿ ತನ್ನ ದೋಷಗಳನ್ನು ಹೇಳಿದ್ದಾನೆ..!! ತಮಿಳುನಾಡು DMK ಅದನ್ನ ಇರದ ಹಾಗೆ 1970ರಲ್ಲೇ ಮಾಡಿದೆ.!

ಹಾಗಿದ್ರೆ ಗ್ರೀಕ್/ಲ್ಯಾಟಿನ್ ಪುರಾಣ ಕಥೆ ನಮಗೇಕೆ ಹೋಲುತ್ತದೆ..?

ಮಹಾಭಾರತದ ಮೊದಲ ಕಥೆಯೇ ಯಯಾತಿಯ(ಗಿರೀಶ್ ಕಾರ್ನಾಡ್ ಪುಸ್ತಕ ಓದಬೇಡಿ) 5 ಮಕ್ಕಳೂ ಹೇಗೆ ಹಂಚಿ ಹೋದರೆಂದು. ಆನು ಗ್ರೀಕರಲ್ಲಿ ಅಯೋನಿಯನ್ ಆದರು, ದೃಹ್ಯು ಡೇರಿಯಸ್ ಆದರು, ಪುರು ಇಲ್ಲೇ ಉಳಿದ, ತುರ್ವಶ ಮಧ್ಯಪ್ರಾಚ್ಯ, ಯದು ಯಾದವರು.. ಹೀಗೆ.

ಹೊರಗಿನಿಂದ ಯಾರೋ ಬಂದು ಇಲ್ಲಿ ಉದ್ದಾರ ಮಾಡಿಲ್ಲ, ಬಂದೋರು/ಹೋದೋರು ಉದ್ದಾರ ಆಗಿದ್ದಾರೆ..!!.

ಇನ್ನೂ ಇವರ ನಡುವೆ ವ್ಯತ್ಯಾಸ ಇದೆಯೇ..?

2013ರಲ್ಲಿ ಹೈದರಾಬಾದಿನ Centre for Cellular and Molecular Biology (CCMB) ಸಂಸ್ಥೆ ಹಾಗೂ ಹಾರ್ವರ್ಡ್ ವಿಶ್ವವಿದ್ಯಾಲಯ ಒಟ್ಟಿಗೆ ಕೈಗೊಂಡ ಒಂದು ಅಧ್ಯಯನದಲ್ಲಿ ಕಂಡು ಬಂದಿದ್ದೇನಂದರೆ ಕ್ರಿ. ಶ. ಪೂ 2200ರಿಂದ ಕ್ರಿ. ಶ 100 ರವರೆಗೆ ಭಾರತದ ಎಲ್ಲಾ ಜಾತಿಗಳ ಮಧ್ಯ ರಕ್ತ ಸಂಭಂಧ ಅವಿರತವಾಗಿ ನಡೆಯುತ್ತಲೇ ಇತ್ತು.

ಶಿವಲಿಂಗವನ್ನು ಪೂಜಿಸುವ ಸಮಯದಲ್ಲಿ ಬಳಸಬಾರದ ವಸ್ತುಗಳು ಯಾವುದು ಗೊತ್ತೆ..?

 ಶಿವಲಿಂಗವನ್ನು ಪೂಜಿಸುವಾಗ ಬಳಸಬಹುದಾದ ಮತ್ತು ಬಳಸಬಾರದ ವಸ್ತುಗಳ ಕುರಿತು ತಿಳಿದುಕೊಳ್ಳೊಣ

1. ಶ್ರಾವಣ ಸೋಮವಾರ ಉಪಾವಾಸ ಮಾಡಿ ಶಿವನನ್ನು ಆರಾಧಿಸಬೇಕು. ನಂತರ ಪಾರ್ವತಿ ದೇವಿಗೆ ಕುಂಕುಮ ಪೂಜೆ ಮಾಡಬೇಕು. ಹೀಗೆ ಮಾಡುವುದರಿಂದ ವಿವಾಹಿತ ಸ್ತ್ರೀಯರಿಗೆ ಒಳ್ಳೆಯದಾಗುತ್ತೆಂದು ನಂಬಿಕೆ ಇದೆ.

2. ಪುರಾಣಗಳು ಹೇಳುವಂತೆ ತುಲಸಿ ಪತಿಯಾದ ಶಂಕಾಸುರ ಎಂಬ ರಾಕ್ಷಸನನ್ನು ಶಿವ ಸಂಹರಿಸಿದ. ಅಂದಿನಿಂದ ತುಲಸಿ ಎಲೆಗಳಿಂದ ಶಿವನನ್ನು ಪೂಜಿಸುವುದು ನಿಲ್ಲಿಸಲಾಯಿತು. ಇಂದಿಗೂ ಮುಂದುವರೆದಿದೆ. ತುಳಸಿ ಎಲೆಗಳಿಂದ ಶಿವನಿಗೆ ಪೂಜೆ ಮಾಡಿದವರಿಗೆ ಕಷ್ಟಗಳು ಎದುರಾಗುತ್ತವೆ. ಆದ್ದರಿಂದ ಶಿವನಿಗೆ ತುಲಸಿ ಎಲೆಗಳಿಂದ ಪೂಜೆ ಮಾಡಬಾರದು.

3. ಸಾವಿರಾರು ವರ್ಷಗಳ ಹಿಂದೆ ಬೃಹತ್ ಶಿವಲಿಂಗ ಸೃಷ್ಠಿಯಾಯಿತು. ಅದಕ್ಕೆ ಆರಂಭ-ಅಂತ್ಯ ಇರಲಿಲ್ಲ. ಅದನ್ನು ಕಂಡು ಹಿಡಿಯಲು ಬ್ರಹ್ಮ, ವಿಷ್ಣು ದ್ವಯರು ಶಿವನ ಆಜ್ಞೆ ಪಡೆದು ಹೋದರು. ಲಿಂಗದ ಆರಂಭ ತಿಳಿಯಲು ವಿಷ್ಣು, ಅಂತ್ಯ ಕಂಡು ಹಿಡಿಯಲು ಬ್ರಹ್ಮ ತಲಾ ಒಂದು ದಿಕ್ಕಿಗೆ ಹೋದರು. ಲಿಂಗದ ಆರಂಭ ಕಂಡು ಹಿಡಿಯಲು ಸಾಧ್ಯವಾಗದಿದ್ದರಿಂದ ವಿಷ್ಣು ವಾಪಸ್ ಆಗುತ್ತಾನೆ. ಆದರೆ ಬ್ರಹ್ಮ ದೇವ ತಾನು ಅಂತ್ಯ ನೋಡಿದ್ದೇನೆ ಎಂದು ಶಿವನ ಮುಂದೆ ಸುಳ್ಳು ಹೇಳುತ್ತಾನೆ. ಆದ್ದರಿಂದ ಬ್ರಹ್ಮ ಹೂವು ಶಿವನ ಪೂಜೆಯಲ್ಲಿ ಸ್ಥಾನ ಕಳೆದುಕೊಂಡಿತು. ಶಿವ ಪೂಜೆಯಲ್ಲಿ ಬ್ರಹ್ಮಹೂವು ಮಾತ್ರ ಬಳಸಬಾರದು.

4. ಅರಿಶಿಣವನ್ನು ನಾವು ಪೂಜೆಗಳಲ್ಲಿ ಬಳಸುತ್ತೇವೆ. ಆದರೆ ಶಿವನ ಪೂಜೆಯಲ್ಲಿ ಮಾತ್ರ ಅರಿಶಿಣ ಬಳಸಬಾರದಂತೆ. ಏಕೆಂದರೆ ಶಿವಲಿಂಗ ಎರಡು ಭಾಗಗಳಲ್ಲಿಇರುತ್ತದೆ. ಒಂದು ಲಿಂಗ ಮತ್ತೊಂದು ಜಲಧಾರೆ. ಲಿಂಗ ಶಿವನನ್ನು ಸೂಚಿಸಿದರೆ, ಜಲಧಾರೆ ಪಾರ್ವತಿಯನ್ನು ಸೂಚಿಸುತ್ತದೆ. ಆದ್ದರಿಂದ ಅರಿಶಿಣದಿಂದ ಲಿಂಗವನ್ನು ಪೂಜಿಸಬಾರದು. ಅದರ ಬದಲು ಜಲಧಾರೆಯನ್ನು ಪೂಜಿಸಬೇಕು.

Tuesday, January 16, 2024

ಎಜ್ ಕಂಪ್ಯೂಟಿಂಗ್ ಎಂದರೇನು?

 ನಮ್ಮ ನಗರದಲ್ಲಿ ಒಂದೇ ಒಂದು ಡಾಮಿನೋ ಪೀಟ್ಸಾ ಪಾರ್ಲರ್ ಇದೆ ಎಂದಿಟ್ಟುಕೊಳ್ಳಿ. ಗಂಟೆಗೆ ನೂರಾರು ಆರ್ಡರ್ ಗಳು ಬಂದರೆ ಮನೆಮನೆಗೂ ಅರ್ಧ ಗಂಟೆಯ ಒಳಗೆ ತಲುಪಿಸುವುದು ಕಷ್ಟಸಾಧ್ಯ. ಒಂದೇ ಪಾರ್ಲರ್ ಬದಲು ಪ್ರತಿ ಬಡಾವಣೆಯಲ್ಲೂ ಒಂದೊಂದು ಪೀಟ್ಸಾ ಪಾರ್ಲರ್ ಇದ್ದರೆ ಎಲ್ಲ ಗ್ರಾಹಕರಿಗೂ ಬೇಗ ಬೇಗ ಪೀಟ್ಸಾ ಸಿಗುವುದರಿಂದ ಎಲ್ಲರಿಗೂ ಖುಷಿಯಾಗುತ್ತದೆ.

ಎಜ್ ಕಂಪ್ಯೂಟಿಂಗ್ ಉದ್ದೇಶವೂ ಅದೇ. ಎಲ್ಲಿ ಡೇಟಾ (ಅಂಕಿಅಂಶಗಳು ಅಥವಾ ಇನ್ಸ್ಟ್ರುಮೆಂಟ್ ರೀಡಿಂಗುಗಳು) ಉತ್ಪತ್ತಿಯಾಗುತ್ತೋ ಅದನ್ನು ದೂರದ ಸರ್ವರ್ ಗೆ ಕಳಿಸಿ ಅಲ್ಲಿ ಅದರ ವಿಶ್ಲೇಷಣೆ ಮಾಡಿಸಿ ಅಲ್ಲಿಂದ ಫಲಿತಾಂಶವನ್ನು ಪಡೆಯುವುದು ನಿಧಾನದ ಕೆಲಸ. ಡೇಟಾದಿಂದ ಪಡೆಯುವ ತೀರ್ಮಾನ ಕೂಡಲೇ ಬೇಕಾಗಿದ್ದರೆ ಡೇಟಾದ ವಿಶ್ಲೇಷಣೆ ಹತ್ತಿರದಲ್ಲೇ ಮಾಡುವುದು ವಿವೇಕದ ಕೆಲಸ. ಇದನ್ನೇ ಎಜ್ ಕಂಪ್ಯೂಟಿಂಗ್ ಎಂದು ಕರೆಯುತ್ತಾರೆ.

ದೂರದ ಸರ್ವರಿನಲ್ಲಿ ಡೇಟಾ ಪ್ರಾಸೆಸಿಂಗ್ ಮಾಡುವುದು ಕ್ಲೌಡ್ ಕಂಪ್ಯೂಟಿಂಗ್ ಎನಿಸಿಕೊಳ್ಳುತ್ತದೆ.

ಸ್ಥಳೀಯ ನೆಟ್ವರ್ಕ್ ನಲ್ಲಿ ಡೇಟಾ ಪ್ರಾಸೆಸಿಂಗ್ ಮಾಡುವುದು ಫಾಗ್ ಕಂಪ್ಯೂಟಿಂಗ್ ಎನಿಸಿಕೊಳ್ಳುತ್ತದೆ.

ಡೇಟಾ ಉತ್ಪತ್ತಿ ಮಾಡುವ ಯಂತ್ರದಲ್ಲೇ ಡೇಟಾ ಪ್ರಾಸೆಸಿಂಗ್ ಮಾಡುವುದು ಎಜ್ ಕಂಪ್ಯೂಟಿಂಗ್ ಎನಿಸಿಕೊಳ್ಳುತ್ತದೆ.

ರಿವರ್ಸ್ ಸರ್ಚ್ ಎಂದರೇನು? ಅತ್ಯಂತ ಪರಿಣಾಮಕಾರಿಯಾಗಿ ರಿವರ್ಸ್ ಸರ್ಚ್ ಮಾಡುವುದು ಹೇಗೆ?

 ರಿವರ್ಸ್ ಸರ್ಚ್ (reverse search) ಎಂದರೆ ಸಾಧಾರಣವಾಗಿ ಚಿತ್ರ (image/picture/photo) ವನ್ನು ಉಪಯೋಗಿಸಿ ಅಂತರ್ಜಾಲದಲ್ಲಿ ಅದರ ಬಗ್ಗೆ ಹೆಚ್ಚಿನ ಮಾಹಿತಿ ಹುಡುಕುವುದು. ಇದರಲ್ಲಿ AI (artificial intelligence) ಕೂಡ ಬಳಕೆಯಾಗುತ್ತದೆ. ಇದರ ಉಪಯೋಗಗಳು ಹಲವಾರು...

  • ಯಾವುದೇ ಒಂದು ಚಿತ್ರದ ಮೂಲವನ್ನು ಹುಡುಕುವುದು.
  • ಚಿತ್ರದ ಕಲಾವಿದನನ್ನು ಪತ್ತೆಹಚ್ಚುವುದು.
  • ಒಂದು ಚಿತ್ರವನ್ನು ಎಲ್ಲೆಲ್ಲಿ ಬಳಕೆ ಮಾಡಿದ್ದಾರೆ ಎಂದು ಕಂಡು ಹಿಡಿಯುವುದು.
  • ಒಂದು ಚಿತ್ರದ ವಿಭಿನ್ನ ರೂಪಗಳನ್ನು ಪತ್ತೆಹಚ್ಚುವುದು.
  • ಚಿತ್ರದಲ್ಲಿರುವ ವ್ಯಕ್ತಿ, ವಸ್ತು ಅಥವಾ ಸ್ಥಳದ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುವುದು.

ಗೂಗಲ್ ಇಮೇಜ್ ಸರ್ಚ್ (Google image search) ನಲ್ಲಿ ಇದನ್ನು ಈ ರೀತಿ ಬಳಸಬಹುದು. ಅದರಲ್ಲಿರುವ ಕ್ಯಾಮೆರಾ ಚಿತ್ರ (camera icon) ದ ಮೇಲೆ ಕ್ಲಿಕ್ (click) ಮಾಡಿದರೆ Search by image ಎಂಬ ಆಯ್ಕೆ ಕಾಣುತ್ತದೆ. ಇದರಲ್ಲಿ ಹುಡುಕಬೇಕಾದ ಚಿತ್ರದ ಮಾಹಿತಿಯನ್ನು ಎರಡು ರೀತಿಯಾಗಿ ನೀಡಬಹುದು. ಮೊದಲನೆಯದಾಗಿ ಆ ಚಿತ್ರ ಅಂತರ್ಜಾಲದಲ್ಲಿ ಇದ್ದರೆ, ಚಿತ್ರದ ಲಿಂಕ್ (web link/URL) ಅನ್ನು ಉಪಯೋಗಿಸಿ ಹುಡುಕಬಹುದು. ಎರಡನೆಯದಾಗಿ ಆ ಚಿತ್ರ ನಮ್ಮ ಕಂಪ್ಯೂಟರ್ ನಲ್ಲಿ ಇದ್ದರೆ ಅದನ್ನು ನೇರವಾಗಿ ಅಪ್ಲೋಡ್ (upload) ಮಾಡಿ ಹುಡುಕಬಹುದು.

ಈ ಸೌಲಭ್ಯವನ್ನು ನೀಡುವ ಇತರ ವೆಬ್ ಸೈಟ್ (website) ಗಳು ಕೂಡ ಇವೆ. ಇವುಗಳಲ್ಲಿ TinEye, Pixsy ಮುಖ್ಯವಾದವು. ಇವುಗಳನ್ನು ಸಾಧಾರಣವಾಗಿ ಕಾಪಿರೈಟ್ (copyright) ಆದ ಚಿತ್ರಗಳನ್ನು ಅನುಮತಿ ಇಲ್ಲದೆ ಬಳಕೆ ಮಾಡಿರುವುದನ್ನು ಪತ್ತೆಹಚ್ಚಲು ಉಪಯೋಗಿಸುತ್ತಾರೆ.

ಇತ್ತೀಚೆಗೆ ರಿವರ್ಸ್ ಸರ್ಚ್ ಅನ್ನು ವಿಡಿಯೋ (video) ಗಳನ್ನು ಉಪಯೋಗಿಸಿ ಅವುಗಳ ಮೂಲವನ್ನು ಹುಡುಕಲು ಸಹ ಅಭಿವೃದ್ಧಿಪಡಿಸಲಾಗುತ್ತಿದೆ.

ಆರ್ಯ ಮತ್ತು ದ್ರಾವಿಡ ನಡುವಿನ ವ್ಯತ್ಯಾಸವೇನು?

  ಮೊದಲಿಗೆ ಈ ಪದಗಳ ಪರಿಚಯ ನೋಡೋಣ. ಆರ್ಯ  ಅನ್ನೋದು ಉತ್ತಮ/ದೊಡ್ಡವರು ಎಂಬ ಅರ್ಥ ನೀಡುತ್ತದೆ  ಅಷ್ಟೇ.  ಉತ್ತಮ ಕುಲದಲ್ಲಿ ಹುಟ್ಟಿದವನು, ಯಜಮಾನ, ಹಿಡಿದ ಕೆಲಸವನ್ನು ಬಿಡ...