Monday, June 29, 2020

ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನ - ಜೂನ್ 29

# ಪ್ರತಿ ವರ್ಷ ಜೂನ್ 29 ಒಂದು ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನವನ್ನು ಆಚರಿಸಲಾಗುತ್ತದೆ.  
# ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ವ್ಯವಸ್ಥೆಯನ್ನು ಸ್ಥಾಪಿಸುವಲ್ಲಿ ಪ್ರೊ.ಪ್ರಸಂತ ಚಂದ್ರ ಮಹಾಲನೋಬಿಸ್ ನೀಡಿದ ಅಮೂಲ್ಯ ಕೊಡುಗೆಯನ್ನು ಸ್ಮರಿಸಲು ಜೂನ್ 29 ರಂದು ಈ ದಿನವನ್ನು ಆಚರಿಸಲಾಗುತ್ತದೆ. 
* ಜೂನ್ 29 - ಪ್ರೊ.ಪಿ.ಸಿ ಮಹಾಲನೋಬಿಸ್ ಅವರ ಜನ್ಮದಿನ.

# ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನವನ್ನು ಮೊದಲು 2007 ರಲ್ಲಿ ಆಚರಿಸಲಾಯಿತು. 
* ವಿಶ್ವ ಸಂಖ್ಯಾಶಾಸ್ತ್ರ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 20 ರಂದು ಆಚರಿಸಲಾಗುತ್ತದೆ.

● 2020 ರ ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನದ ಧ್ಯೇಯ ವಾಕ್ಯ (theme)
      __ SDG- 3 (Ensure healthy lives and promote well-being for all at all ages) & SDG- 5 (Achieve gender equality and empower all women and girls)

 ● ಪ್ರೊ. ಪಿ ಸಿ ಮಹಾಲನೋಬಿಸ್

 # ಸಂಖ್ಯಾಶಾಸ್ತ್ರ ಕ್ಷೇತ್ರದಲ್ಲಿ ಪ್ರೊ.ಪಿ.ಸಿ ಮಹಾಲನೋಬಿಸ್ ಅವರ ಕೊಡುಗೆ ಪ್ರಪಂಚದಾದ್ಯಂತ ಗುರುತಿಸಲ್ಪಟ್ಟಿದೆ.  
* ಅವರು 1947 ರಿಂದ 1951 ರವರೆಗೆ ಸಂಖ್ಯಾಶಾಸ್ತ್ರೀಯ ಮಾದರಿಗಳ ವಿಶ್ವಸಂಸ್ಥೆಯ ಉಪ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
* ಎರಡನೇ ಪಂಚವಾರ್ಷಿಕ ಯೋಜನೆಯ ಮಹಾಲನೋಬಿಸ್ ಮಾದರಿ ಯನ್ನು ಒಳಗೊಂಡಿದೆ.
* ಇವರು 1948ರಲ್ಲಿ ರಾಷ್ಟ್ರೀಯ ವರಮಾನ ಸಮಿತಿಯನ್ನು ಸ್ಥಾಪಿಸಿದರು ಮತ್ತು ಇದರ ಮೊದಲ ಅಧ್ಯಕ್ಷರು ಕೂಡ ಇವರು.
* 1968 ರಲ್ಲಿ ಇವರಿಗೆ ಭಾರತ ಸರ್ಕಾರವು ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 

ಬದುಕು ಎಂದರೇನು? ಒಬ್ಬೊಬ್ಬರದು ಒಂದೊಂದು ರೀತಿ

  “ಯದ್ಭಾವಂ ತದ್ಭವತಿ’
ಬುದ್ಧ ಹೇಳುತ್ತಾನೆ, "ಪ್ರೀತಿ ಮತ್ತು ಶಾಂತಿ".
ದುರ್ಯೋಧನ ಹೇಳುತ್ತಾನೆ, "ಹಠ ಮತ್ತು ಛಲ".
ಏಕಲವ್ಯ ಹೇಳುತ್ತಾನೆ, "ಗುರಿ".
ಯುಧಿಷ್ಠಿರ ಹೇಳುತ್ತಾನೆ, "ಧರ್ಮ".
ಭೀಷ್ಮ ಹೇಳುತ್ತಾನೆ, "ಪ್ರತಿಜ್ಞೆ".
ಒಬ್ಬ ಸಂತ ಹೇಳುತ್ತಾನೆ, "ಭಕ್ತಿ".
ಒಬ್ಬ ಸನ್ಯಾಸಿ ಹೇಳುತ್ತಾನೆ, "ವೈರಾಗ್ಯ".
ಅಲೆಕ್ಸಾಂಡರ್ ಹೇಳುತ್ತಾನೆ, "ಯುದ್ಧ".
ಶ್ರೀಮಂತ ಹೇಳುತ್ತಾನೆ, "ಮೋಜು ಮತ್ತು ಮಸ್ತಿ".
ಮಧ್ಯಮ ವರ್ಗದವನು ಹೇಳುತ್ತಾನೆ, "ಉದ್ಯೋಗ".
ಹಸಿದವನು ಹೇಳುತ್ತಾನೆ, "ತನ್ನ ಪಾಲಿನ ಅರ್ಧ ರೊಟ್ಟಿ".
ಹೀಗೆ ಒಬ್ಬೊಬರಿಗೆ ಒಂದೊಂದು ರೀತಿ ಬದುಕು ಕಾಣುತ್ತದೆ. ಅವರವರ ಆಲೋಚನೆಯಂತೆ ಅವರವರು  ಬದುಕನ್ನು ಸಮರ್ಥಿಸುತ್ತಾರೆ.
ಬದುಕೆನ್ನುವುದು  ಸುಂದರವಾದ ಅನುಭವ.  ಪ್ರತಿದಿನ, ಪ್ರತಿ ಗಂಟೆ, ಪ್ರತಿ ನಿಮಿಷ  ಎಲ್ಲವೂ ಅಮೂಲ್ಯ.  ಈ ಯಾವುದೂ ಹಿಂತಿರುಗಿ ಬರುವುದಿಲ್ಲ.  ಒಮ್ಮೆ ಕಳೆದರೆ ಮುಗಿಯಿತು .  ಆದ್ದರಿಂದಲೇ ಪ್ರತಿ ಕ್ಷಣದ ಬದುಕು ನವ ನವೀನ.  ಹೀಗೆಯೇ  ನಮ್ಮ ಬದುಕು  ಅನಿಶ್ಚಿತ ಕೂಡಾ.  ಮುಂದಿನ ಕ್ಷಣ ಏನೆಂದು ಯಾರಿಗೂ  ತಿಳಿಯದು.  ಈ ಕ್ಷಣವೇ ಪರಮ ಪವಿತ್ರ.  ಈ ಕ್ಷಣವನ್ನು ಸಂಪೂರ್ಣ  ಅನುಭವಿಸುವುದೇ  ಬದುಕು.     ಸಂಘರ್ಷ, ಮನಸ್ತಾಪ, ಕೋಪ, ದ್ವೇಷ  ಇವುಗಳನ್ನು ಕಡಿಮೆ ಮಾಡುತ್ತಾ  ಪ್ರೀತಿ, ಸೌಹಾರ್ದ, ಸಹಾಯ, ಕಾರುಣ್ಯ, ಮತ್ತು ಹಸನ್ಮುಖದ ನಡುವೆ ಬದುಕುವುದೇ ಸಾರ್ಥಕ ಜೀವನ.    ನಮ್ಮ ಚಿಂತನೆ ಸಕಾರಾತ್ಮಕವಾಗಿದ್ದರೆ ಆ ಕ್ಷಣದಲ್ಲಿ ಒಂದಷ್ಟು ಚೈತನ್ಯ ಮೂಡುತ್ತದೆ. ಇಲ್ಲವಾದರೆ ನಿರಾಸೆ ನಮ್ಮದಾಗುತ್ತದೆ.
ಕಷ್ಟ, ನೋವು, ನಿರಾಸೆ, ದುಃಖ ಎಲ್ಲವು ಎಲ್ಲರಿಗೂ ಇದೆ. ಆದರೆ, ಅವುಗಳ  ಮಧ್ಯೆ ಸಂತೋಷದಿಂದ , ತೃಪ್ತಿಯಿಂದ  ಬದುಕುವುದೇ  ಜೀವನ.  ಧನ್ಯವಾದಗಳು
 
 ಕೃಷ್ಣಾರ್ಪಣಮಸ್ತು
🙏🙏🙏🙏🙏💐

ದ್ರಾವಿಡ ಭಾಷೆಗಳ ಪಟ್ಟಿ

ದಕ್ಷಿಣ ದ್ರಾವಿಡ ಭಾಷೆಗಳ ಉಪ ಕುಟುಂಬ:
ತುಳು
ಕನ್ನಡ
ತಮಿಳು
ಮಲಯಾಳಂ
ಬಡಗ
ಕೊಡವ ಥಕ್
ಕುರುಂಬ
ಪಳಿಯನ್
ಕೋಟ
ಬೆಳ್ಳಾರಿ

ಮಧ್ಯ ದಕ್ಷಿಣ ದ್ರಾವಿಡ ಭಾಷೆಗಳ ಉಪ ಕುಟುಂಬ:
ತೆಲುಗು
ಗೊಂಡಿ
ಮರಿಯ

ಉತ್ತರ ದ್ರಾವಿಡ ಭಾಷೆಗಳ ಉಪ ಕುಟುಂಬ:
ಬ್ರಾಹುಯಿ
ಮಾಲ್ತೊ
ಕುರುಖ್

ಮಧ್ಯ ದ್ರಾವಿಡ ಭಾಷೆಗಳ ಉಪ ಕುಟುಂಬ:
ಕೊಲಮಿ-ನಾಯ್ಕಿ
ಪರ್ಜಿ-ಗಡಬ
(ಡಾ.ಎಂ.ಕೆ.ಮಂಜುನಾಥ್) 

Thursday, June 25, 2020

ಸಕ್ಕರೆ ಬದಲಿಗೆ ಬಳಸಬಹುದಾದ 7 ನೈಸರ್ಗಿಕ ಸಿಹಿ ಪದಾರ್ಥಗಳು

ಸಕ್ಕರೆ ಬಾಯಿಗೆ ತುಂಬಾ ಸಿಹಿ ಆದರೆ ಆರೋಗ್ಯಕ್ಕಲ್ಲ, ಸಕ್ಕರೆ ತಿನ್ನದೇ ಇದ್ದಷ್ಟೂ ಆರೋಗ್ಯಕ್ಕೆ ಒಳ್ಳೆಯದು, ಆದರೆ ಟೀ , ಕಾಫಿ, ಜ್ಯೂಸ್ ಇವುಗಳನ್ನು ಸೇವಿಸುವಾಗ ಸಪ್ಪೆ ಇದ್ದರೆ ಇಷ್ಟವಾಗಲ್ಲ, ನಾಲಗೆಗೆ ಸಿಹಿ ತಾಗಿದರೆ ಮಾತ್ರ ರುಚಿ ಅನಿಸುವುದು.

ಸಕ್ಕರೆ ಹೆಚ್ಚಾಗಿ ತಿನ್ನುವುದರಿಂದ ಒಬೆಸಿಟಿ (ಸ್ಥೂಲಕಾಯ), ಅತ್ಯಧಿಕ ರಕ್ತದೊತ್ತಡ, ಮಧುಮೇಹವಿದ್ದವರ ಆರೋಗ್ಯದಲ್ಲಿ ಏರುಪೇರು, ಲಿವರ್‌ಗೆ ಸಂಬಂಧಿಸಿದ ಕಾಯಿಲೆ ಹೀಗೆ ಮುಂತಾದ ಸಮಸ್ಯೆ ಕಾಡುವುದು.

ಸಕ್ಕರೆ ಬದಲಿಗೆ ಇಲ್ಲಿ ನಾವು ಹೇಳಿರುವ ಸಿಹಿ ವಸ್ತುಗಳನ್ನು ಬಳಸಿದರೆ ಬಾಯಿಗೂ ಸಿಹಿ, ಆರೋಗ್ಯವೂ ಚೆನ್ನಾಗಿರುತ್ತದೆ.
ತೂಕ ನಿಯಂತ್ರಣದಲ್ಲಿರಬೇಕೆಂದರೆ ಈ ವಿಧಾನಗಳನ್ನು ಅನುಸರಿಸುವುದು ಒಳ್ಳೆಯದು:

1. ಜೇನು
ಜೇನು ನೈಸರ್ಗಿಕವಾದ ಸಿಹಿ ಪದಾರ್ಥವಾಗಿದೆ. ಇದು ಸಿಹಿಯಾಗಿರುವುದು ಮಾತ್ರವಲ್ಲ ಕಾರ್ಬ್ಸ್, ವಿಟಮಿನ್ಸ್, ಖನಿಜಾಣಶಗಳು, ಅಮೈನೋ ಆಮ್ಲ ಮುಂತಾದ ವಸ್ತುಗಳನ್ನು ಒಳಗೊಂಡಿರುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಇದು ಮಧುಮೇಹ, ಉಸಿರಾಟದ ತೊಂದರೆ, ಹೃದಯ ಸಂಬಂಧಿ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.
ಜೇನನ್ನು ಟೀ, ಓಟ್ಸ್ ಇವುಗಳ ಜೊತೆ ಹಾಕಿ ಸವಿಯ ಬಹುದು. ಜೇನು ಬಿಸಿ ಮಾಡಬಾರದು, ಬಿಸಿ ಮಾಡಿದರೆ ಅದರ ಸತ್ವ ಹಾಳಾಗುವುದು.

2. ಮೇಪಲ್ ಸಿರಪ್
ಮೇಪಲ್ ಸಿರಪ್ ಕೂಡ ಸಕ್ಕರೆ ಬದಲಿಗೆ ಬಳಸಬಹುದಾದ ನೈಸರ್ಗಿಕವಾದ ಸಿಹಿಯಾಗಿದೆ. ಮೇಪಲೆ ಸಿರಪ್‌ನಲ್ಲಿ ಸುಕ್ರೋಸ್, ಪಾಲಿಸ್ಯಾಚರೈಡ್ಸ್, ಸಾವಯವ ಆಮ್ಲ, ಅಮೈನೋ ಆಮ್ಲ, ವಿಟಮಿನ್ಸ್ ಹಾಗೂ ಖನಿಜಾಂಶಗಳಿವೆ. ಇದು ಕ್ಯಾನ್ಸರ್, ಉರಿಯೂತ ಮುಂತಾದ ಸಮಸ್ಯೆಗಳನ್ನು ತಡೆಗಟ್ಟುತ್ತದೆ.
ಬಳಸುವುದು ಹೇಗೆ? ನೀವು ಸಿಹಿ ಪದಾರ್ಥಗಳನ್ನು ಮಾಡುವಾಗ ಪ್ಯಾನ್‌ಕೇಕ್, ಓಟ್ಸ್, ಸಲಾಡ್‌ ಡ್ರೆಸ್ಸಿಂಗ್‌, ಮೊಸರು, ಟೀ, ಕಾಫಿ, ಕೇಕ್‌ ಇವುಗಳಲ್ಲಿ ಬಳಸಬಹುದು.

3. ತೆಂಗಿನಕಾಯಿಯ ಸಕ್ಕರೆ
ತೆಂಗಿನಕಾಯಿಯಿಂದ ತಯಾರಿಸಿದ ಸಕ್ಕರೆ ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ವಿಟಮಿನ್ಸ್, ಖನಿಜಾಂಶ, ಆ್ಯಂಟಿ ಆಕ್ಸಿಡೆಂಟ್, ಅತ್ಯಧಿಕ ಫ್ರಕ್ಟೋಸ್ ಹಾಗೂ ಗ್ಲೋಕೋಸ್ ಹಾಗೂ ಕಡಿಮೆ ಪ್ರಮಾಣದಲ್ಲಿ ಸುಕ್ರೋಸ್‌ ಅಂಶವಿದೆ.
ಇದನ್ನು ಬಳಸುವುದು ಹೇಗೆ: ಎಲ್ಲಾ ರೀತಿಯ ಸಿಹಿ ಪದಾರ್ಥಗಳಲ್ಲಿ ಬಳಸಬಹುದು.


4. ಖರ್ಜೂರ
ಖರ್ಜೂರದಲ್ಲಿ ಕೂಡ ಸಿಹಿ ಅಂಶವಿದೆ. ಇದರಲ್ಲಿ ವಿಟಮಿನ್ ಸಿ, ವಿಮಟಿನ್ ಬಿ ಕಾಂಪ್ಲೆಕ್ಸ್, ಸೆಲೆನಿಯಮ್, ಪೊಟಾಷ್ಯಿಯಂ, ಸತು, ಮೆಗ್ನಿಷ್ಯಿಯಂ ಅಂದವಿದ್ದು ನಾರಿನಂಶ ಕೂಡ ಇದೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಹೆಚ್ಚಿದ್ದು, ಕಡಿಮೆ ಪ್ರಮಾಣ ಕೊಬ್ಬು ಹಾಗೂ ಪ್ರೊಟೀನ್ ಅಂಶವಿದೆ.
ಬಳಸುವುದು ಹೇಗೆ:ಇದನ್ನು ಪಾಯಸ ಮುಂತಾದ ಸಿಹಿ ಪದಾರ್ಥಗಳನ್ನು ಮಾಡುವಾಗ, ಸ್ಮೂತಿ ತಯಾರಿಸುವಾಗ ಅಲ್ಲದೆ ಸಿಹಿ ಪದಾರ್ಥಗಳನ್ನು ಮಾಡುವಾಗ ಬಳಸಬಹುದು. ಖರ್ಜೂರದ ಸಿರಪ್ ಮಾಡಿ ಸಕ್ಕರೆ ಬದಲಿಗೆ ಬಳಸಬಹುದು.

5. ಬಾಳೆಹಣ್ಣಿನ ರಸ
ಸಕ್ಕರೆ ಬದಲಿಗೆ ಬಳಸಬಹುದಾದ ಮತ್ತೊಂದು ಸಿಹಿ ಪದಾರ್ಥವೆಂದರೆ ಬಾಳೆಹಣ್ಣಿನ ರಸ. ಇದರಲ್ಲಿ ಪೊಟಾಷ್ಯಿಯಂ, ವಿಟಮಿನ್ ಸಿ, ಮೆಗ್ನಿಷ್ಯಿಯಂ, ನಾರಿನಂಶ, ವಿಟಮಿನ್ ಬಿ6, ತಾಮ್ರ ಹಾಗೂ ಮ್ಯಾಂಗನೀಸ್ ಅಂಶವಿದ್ದು ಇದನ್ನು ಕೂಡ ಸಕ್ಕರೆ ಬದಲಿಗೆ ಬಳಸಬಹುದು.
ಬಳಸುವುದು ಹೇಗೆ?
ಹಣ್ಣಾದ ಬಾಳೆಹಣ್ಣನ್ನು ಪೇಸ್ಟ್ ಮಾಡಿ ಅದನ್ನು ಚಪಾತಿ ಮತ್ತಿತರ ವಸ್ತುಗಳ ಜೊತೆ ಬಳಸಬಹುದು.

6. ಜೋನಿ ಬೆಲ್ಲ
ಕಬ್ಬಿನ ರಸವನ್ನು ಮೊದಲ ಬಾರಿಗೆ ಕುದಿಸಿದಾಗ ಅದರಿಂದ ಪಾಕ ತಯಾರಾಗುತ್ತದೆ, ಇದನ್ನು 3 ಬಾರಿ ಕುದಿಸಿದಾಗ ಕಪ್ಪು ಬಣ್ಣದ ಪಾಕ ತಯಾರಾಗುವುದು, ಇದೇ ಜೋನಿ ಬೆಲ್ಲ, ಈ ಪಾಕವನ್ನು ಸಕ್ಕರೆ ಬದಲಿಗೆ ಬಳಸುವುದು ಒಳ್ಳೆಯದು. ಇದನ್ನು ಬಳಸುವುದರಿಂದ ವಿಟಮಿನ್ ಬಿ ಕಾಂಪ್ಲೆಕ್ಸ್, ಕಬ್ಬಿಣದಂಶ, ಸತು, ಸೆಲೆನಿಯಮಂ, ಮೆಗ್ನಿಷ್ಯಿಯಂ, ಪೊಟಾಷ್ಯಿಯಂ ಅಂಶ ದೊರೆಯುತ್ತದೆ.
ಬಳಸುವುದು ಹೇಗೆ: ಈ ಜೋನಿ ಬೆಲ್ಲವನ್ನು ಟೀ, ಕಾಫಿ ಹಾಗೂ ಇತರ ಪದಾರ್ಥಗಳ ಜೊತೆ ಹಾಕಿ ಸವಿಯಬಹುದು.

7. ಫ್ರೂಟ್‌ ಜಾಮ್
ವಿವಿಧ ಹಣ್ಣುಗಳನ್ನು ಹಾಕಿ ಫ್ರೂಟ್‌ ಜಾಮ್ ಮಾಡಿ ತಿನ್ನುವುದರಿಂದ ಬಾಯಿ ಸಿಹಿ ಮಾತ್ರವಲ್ಲ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು.
ಮಕ್ಕಳಿಗೆ ಸಕ್ಕರೆ ಕೊಡುವ ಬದಲು ಮಕ್ಕಳಿಗೆ ಹಣ್ಣುಗಳಿಂದ ಮಾಡಿದ ಫ್ರೂಟ್‌ ಜಾಮ್ ಕೊಡಿ (ಫ್ರೂಟ್‌ ಜಾಮ್ ನೀವೇ ಮಾಡಿ ಕೊಡುವುದು ಉತ್ತಮ ಆಯ್ಕೆ).

ಪ್ರಮುಖ ಕೃತಿಗಳು

1.ಕಾನೂರು ಹೆಗ್ಗಡಿತಿ - ಕುವೆ೦ಪು
2.ಮಲೆಗಳಲ್ಲಿ ಮದುಮಗಳು - ಕುವೆ೦ಪು
3.ಮರಳಿ ಮಣ್ಣಿಗೆ - ಡಾ. ಕೆ. ಶಿವರಾಮ ಕಾರಂತ
4.ಚೋಮನ ದುಡಿ - ಡಾ. ಕೆ. ಶಿವರಾಮ ಕಾರಂತ
5.ಚಿಕವೀರ ರಾಜೇಂದ್ರ - ಮಾಸ್ತಿ ವೆಂಕಟೇಶ ಅಯ್ಯಂಗಾರ್
6.ಮೂಕಜ್ಜಿಯ ಕನಸುಗಳು - ಡಾ. ಕೆ. ಶಿವರಾಮ ಕಾರಂತ
7.ಬೆಟ್ಟದ ಜೀವ - ಡಾ. ಕೆ. ಶಿವರಾಮ ಕಾರಂತ
8.ಮಹಾಬ್ರಾಹ್ಮಣ - ದೇವುಡು ನರಸಿಂಹ ಶಾಸ್ತ್ರಿ
9.ಸಂಧ್ಯಾರಾಗ - ಅ.ನ. ಕೃಷ್ಣರಾಯ
10.ದುರ್ಗಾಸ್ತಮಾನ - ತ.ರಾ. ಸುಬ್ಬರಾವ್
11.ಗ್ರಾಮಾಯಣ - ರಾವ್ ಬಹದ್ದೂರ್
12.ಶಾಂತಲಾ - ಕೆ.ವಿ. ಅಯ್ಯರ್
13.ಸಂಸ್ಕಾರ - ಯು.ಆರ್. ಅನಂತಮೂರ್ತಿ
14.ಗಂಗವ್ವ ಮತ್ತು ಗಂಗಾಮಾಯಿ - ಶಂಕರ ಮೊಕಾಶಿ ಪುಣೇಕರ
15.ಗೃಹಭಂಗ - ಎಸ್.ಎಲ್. ಭೈರಪ್ಪ
16.ಮುಕ್ತಿ - ಶಾಂತಿನಾಥ ದೇಸಾಯಿ
17.ವೈಶಾಖ - ಚದುರಂಗ
18.ಮೃತ್ಯುಂಜಯ - ನಿರಂಜನ
19.ಚಿರಸ್ಮರಣೆ - ನಿರಂಜನ
20.ಶಿಕಾರಿ - ಯಶವಂತ ಚಿತ್ತಾಲ
21.ಮಾಡಿದ್ದುಣ್ಣೋ ಮಹಾರಾಯ - ಎಂ.ಎಸ್. ಪುಟ್ಟಣ್ಣಯ್ಯ
22.ಕಾಡು - ಶ್ರೀಕೃಷ್ಣ ಆಲನಹಳ್ಳಿ
23.ಕರ್ವಾಲೊ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
24.ಬಂಡಾಯ - ವ್ಯಾಸರಾಯ ಬಲ್ಲಾಳ
25.ತೇರು - ರಾಘವೇಂದ್ರ ಪಾಟೀಲ
26.ದ್ಯಾವನೂರು - ದೇವನೂರು ಮಹಾದೇವ
27.ಚಂದ್ರಗಿರಿಯ ತೀರದಲ್ಲಿ - ಸಾರಾ ಅಬೂಬಕ್ಕರ್
28.ಇಜ್ಜೋಡು - ವಿ.ಕೃ. ಗೋಕಾಕ್
29.ಬದುಕು - ಗೀತಾ ನಾಗಭೂಷಣ
30.ಮಾಧವ ಕರುಣಾ ವಿಲಾಸ - ಗಳಗನಾಥ
31.ಬೆಕ್ಕಿನ ಕಣ್ಣು - ತ್ರಿವೇಣಿ
32.ಮುಸ್ಸಂಜೆಯ ಕಥಾ ಪ್ರಸಂಗ - ಪಿ. ಲಂಕೇಶ
33.ಮಾಡಿ ಮಡಿದವರು - ಬಸವರಾಜ ಕಟ್ಟೀಮನಿ
34.ಅನ್ನ - ರ೦.ಶ್ರೀ.ಮುಗಳಿ
35.ಮೋಹಿನಿ - ವಿ. ಎಂ. ಇನಾಂದಾರ್
36.ಚಿದಂಬರ ರಹಸ್ಯ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ

ಕಥಾ ಸ೦ಕಲನಗಳು
37.ಮಾಸ್ತಿ ಅವರ ಸಮಗ್ರ ಕತೆಗಳು - ಮಾಸ್ತಿ ವೆಂಕಟೇಶ ಅಯ್ಯಂಗಾರ್
38.ನೇಮಿಚಂದ್ರರ ಕಥೆಗಳು - ನೇಮಿಚಂದ್ರ
39.ಕಲ್ಲು ಕರಗುವ ಸಮಯ - ಪಿ. ಲ೦ಕೇಶ
40.ಅಮೃತಬಳ್ಳಿ ಕಷಾಯ - ಜಯಂತ ಕಾಯ್ಕಿಣಿ
41.ಹುಲಿ ಸವಾರಿ - ವಿವೇಕ ಶಾನುಭಾಗ
42.ಬುಗುರಿ - ಮೊಗಳ್ಳಿ ಗಣೇಶ್
43.ತಮಂಧದ ಕೇಡು - ಅಮರೇಶ ನುಗುಡೋಣಿ
44.ಅನಂತಮೂರ್ತಿ: ಐದು ದಶಕದ ಕಥೆಗಳು - ಯು.ಆರ್. ಅನಂತಮೂರ್ತಿ
45.ಜಿ.ಎಸ್. ಸದಾಶಿವ: ಇದುವರೆಗಿನ ಕಥೆಗಳು
46.ಖಾಸನೀಸರ ಕಥೆಗಳು
47.ಕೆ. ಸದಾಶಿವ ಸಮಗ್ರ ಕತೆಗಳು
48.ಭಳಾರೆ ವಿಚಿತ್ರಂ - ಕುಂ.ವೀರಭದ್ರಪ್ಪ
49.ಪಾವೆಂ ಹೇಳಿದ ಕಥೆ - ರವಿ ಬೆಳಗೆರೆ
50.ಮಾಯಿಯ ಮುಖಗಳು - ರಾಘವೇಂದ್ರ ಪಾಟೀಲ
51.ಚಿತ್ತಾಲರ ಕತೆಗಳು - ಯಶವಂತ ಚಿತ್ತಾಲ
52.ದಜ್ಜಾಲ - ಫಕೀರ್ ಮುಹಮ್ಮದ್ ಕಟ್ಪಾಡಿ
53.ಕನ್ನಂಬಾಡಿ - ಡಾ. ಬೆಸಗರಹಳ್ಳಿ ರಾಮಣ್ಣ
54.ಅಮ್ಮಚ್ಚಿಯೆಂಬ ನೆನಪು - ವೈದೇಹಿ

ಕವನ ಸ೦ಕಲನಗಳು
55.ಔದುಂಬರಗಾಥೆ - ದ.ರಾ.ಬೇ೦ದ್ರೆ
56.ಸಮಗ್ರ ಕಾವ್ಯ - ಗೋಪಾಲಕೃಷ್ಣ ಅಡಿಗ
57.ಹೊ೦ಬೆಳಕು - ಚನ್ನವೀರ ಕಣವಿ
58.ಹಾಡು-ಹಸೆ: ಕೆ.ಎಸ್.ನರಸಿಂಹಸ್ವಾಮಿ ಆಯ್ದ ಕವಿತೆಗಳು
59.ಜಿ.ಎಸ್. ಶಿವರುದ್ರಪ್ಪ ಸಮಗ್ರ ಕಾವ್ಯ
60.ಕೆ.ಎಸ್. ನಿಸಾರ್ ಅಹಮದ್ ಸಮಗ್ರ ಕವಿತೆಗಳು
61.ಮೂವತ್ತು ಮಳೆಗಾಲ - ಎಚ್.ಎಸ್. ವೆಂಕಟೇಶಮೂರ್ತಿ
62.ಮೆರವಣಿಗೆ - ಡಾ. ಸಿದ್ಧಲಿಂಗಯ್ಯ
63.ಬೆಳ್ಳಕ್ಕಿ ಹಿಂಡು - ಸುಬ್ಬಣ ರಂಗನಾಥ ಎಕ್ಕುಂಡಿ
64.ತಟ್ಟು ಚಪ್ಪಾಳೆ ಪುಟ್ಟ ಮಗು - ಬೊಳುವಾರು ಮಹಮದ್ ಕುಂಞಿ
65.ಕುವೆಂಪು ಸಮಗ್ರ ಕಾವ್ಯ - ಕುವೆ೦ಪು
66.ಕ್ಯಾಮೆರಾ ಕಣ್ಣು : ಬಿ.ಆರ್.ಲಕ್ಷ್ಮಣ ರಾವ್ ಸಮಗ್ರ ಕಾವ್ಯ
67.ರತ್ನನ ಪದಗಳು,ನಾಗನ ಪದಗಳು - ಜಿ.ಪಿ. ರಾಜರತ್ನಂ
68.ಪಾಂಚಾಲಿ: ಆಯ್ದ ಕವನಗಳು - ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
69.ಹೊಂಗನಸು - ಬಿಎಂಶ್ರೀ
70.ನಾವು ಹುಡುಗಿಯರೇ ಹೀಗೆ - ಪ್ರತಿಭಾ ನಂದಕುಮಾರ್
71.ಗಜಲ್ ಮತ್ತು ದ್ವಿಪದಿಗಳು: ಶಾಂತರಸ
72.ಗೌರೀಶ್ ಕಾಯ್ಕಿಣಿ ಸಮಗ್ರ ಸಾಹಿತ್ಯ
73.ಮ೦ಕುತಿಮ್ಮನ ಕಗ್ಗ - ಡಿ.ವಿ.ಗು೦ಡಪ್ಪ
74.ಈವರೆಗಿನ ಹೇಳತೇನ ಕೇಳ - ಡಾ.ಚಂದ್ರಶೇಖರ ಕಂಬಾರ

ನಾಟಕಗಳು
75.ಪುತಿನ ಸಮಗ್ರ ಗೇಯ ಕಾವ್ಯ ನಾಟಕಗಳು - ಪು.ತಿ. ನರಸಿಂಹಾಚಾರ್
76.ಕೈಲಾಸಂ ಕನ್ನಡ ನಾಟಕಗಳು - ಟಿ.ಪಿ.ಕೈಲಾಸ೦
77.ಶೋಕಚಕ್ರ - ಶ್ರೀರ೦ಗ
78.ಕಾಕನಕೋಟೆ - ಮಾಸ್ತಿ ವೆಂಕಟೇಶ ಅಯ್ಯಂಗಾರ್
79.ಸತ್ತವರ ನೆರಳು - ಜಿ.ಬಿ. ಜೋಶಿ
80.ತುಘಲಕ್ - ಗಿರೀಶ ಕಾರ್ನಾಡ
81.ಸಂಸ ನಾಟಕಗಳು - ಸ೦ಸ
82.ಮಹಾಚೈತ್ರ - ಎಚ್. ಎಸ್. ಶಿವಪ್ರಕಾಶ
83.ಸಿರಿಸ೦ಪಿಗೆ - ಚ೦ದ್ರಶೇಖರ ಕ೦ಬಾರ
84.ಸಂಕ್ರಾಂತಿ - ಪಿ. ಲ೦ಕೇಶ

ಇತರೆ/ವ್ಯಕ್ತಿಚಿತ್ರಣ/ಆತ್ಮಚರಿತ್ರೆ/ವಿಜ್ಞಾನ/ಪ್ರವಾಸ ಕಥನ/ವಿಮರ್ಶೆ
85.ಜ್ಞಾಪಕ ಚಿತ್ರಶಾಲೆ - ಡಿ. ವಿ. ಗು೦ಡಪ್ಪ
86.ಮೂರು ತಲೆಮಾರು - ತ.ಸು. ಶಾಮರಾಯ
87.ಮರೆಯಲಾದೀತೆ? - ಬೆಳಗೆರೆ ಕೃಷ್ಣಶಾಸ್ತ್ರಿ
88.ದೇವರು - ಎ.ಎನ್. ಮೂರ್ತಿರಾವ್
89.ಇರುವುದೊಂದೇ ಭೂಮಿ - ನಾಗೇಶ ಹೆಗಡೆ
90.ಅಣ್ಣನ ನೆನಪು - ಕೆ.ಪಿ ಪೂರ್ಣಚ೦ದ್ರ ತೇಜಸ್ವಿ
91.ನಮ್ಮ ಊರಿನ ರಸಿಕರು - ಗೊರೂರು ರಾಮಸ್ವಾಮಿ ಅಯ್ಯಂಗಾರ್
92.ಹಸುರು ಹೊನ್ನು - ಬಿ.ಜಿ.ಎಲ್. ಸ್ವಾಮಿ
93.ಊರುಕೇರಿ - ಡಾ. ಸಿದ್ದಲಿಂಗಯ್ಯ
94.ಯಂತ್ರಗಳನ್ನು ಕಳಚೋಣ ಬನ್ನಿ - ಪ್ರಸನ್ನ
95.ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್ - ಕೆ.ಪಿ. ಪೂರ್ಣಚಂದ್ರ ತೇಜಸ್ವಿ
96.ಅರೆ ಶತಮಾನದ ಅಲೆ ಬರಹಗಳು - ಕೆ.ವಿ. ಸುಬ್ಬಣ್ಣ
97.ಶಕ್ತಿಶಾರದೆಯ ಮೇಳ - ಡಾ.ಡಿ.ಆರ್. ನಾಗರಾಜ
98.ಹುಳಿಮಾವಿನ ಮರ - ಪಿ. ಲಂಕೇಶ
99.ವಚನ ಭಾರತ - ಎ.ಆರ್. ಕೃಷ್ಣಶಾಸ್ತ್ರೀ
100.ಹುಚ್ಚು ಮನಸ್ಸಿನ ಹತ್ತು ಮುಖಗಳು - ಶಿವರಾಮ ಕಾರಂತ

Wednesday, June 24, 2020

International Olympic Day

📜 DATE :- 23 JUNE 2020

First Olympic Day was celebrated on 23 June 1948 in London

🚴‍♀The founder of the modern Olympic games, Pierre de Coubertin 

🚴‍♀Olympic rings 

🔵 Europe 🟡Asia ⚫Africa
🟢 Australia. 🔴 America

💎Venues💎

💎 Summer Olympic
2021- Tokyo Japan 
2024 - Paris France 
2028 - Los Angeles USA 

💎 Winter Olympic
2022 - Beijing China 
2026 - Milan & Cortina Italy

✍👇OLYMPICS NEWS

🚴‍♀ Narindra Batra designed as member from the Olympic Channel Commission

🚴‍♀Sourav Ganguly : Tokyo
 Olympics Goodwill Ambassador

🚴‍♂ Kiren rijiju Sports Minister will establish khelo india center of excellence sports facilities in  8 state of india to enhance Olympic performance

🚴‍♀2020 Tokyo Olympic motto :- United by emotion

🚴‍♂Canada has become first country to withdraw from Tokyo Olympics

🚴‍♂Total 9 number of indian 🥊 Boxer qualified to tokyo Olympics 2020

💐International Olympic Committee (IOC)
💥Lausanne, Switzerland

Tuesday, June 23, 2020

ಕಪ್ಪು vs ಹಸಿರು ಏಲಕ್ಕಿ, ಆರೋಗ್ಯದ ವಿಷಯದಲ್ಲಿ ಎರಡೂ ಎತ್ತಿದ ಕೈ

ಏಲಕ್ಕಿಯು ತುಂಬಾ ರುಚಿ ಹಾಗೂ ಸುವಾಸನೆ ಹೊಂದಿರುವ ಸಾಂಬಾರ ಪದಾರ್ಥ. ಇದು ಎರಡು ವಿಧದಲ್ಲಿ ಲಭ್ಯ. ಇದರ ಬಳಕೆಯಿಂದ ಯಾವ ಲಾಭಗಳಿವೆ ತಿಳಿಯಿರಿ.

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಮಾತಿದೆ. ಇದೇ ಮಾತು ಏಲಕ್ಕಿ ಅನ್ವಯ ವಾಗುವುದು. ಏಲಕ್ಕಿಯು ನೋಡಲು ತುಂಬಾ ಸಣ್ಣದಾದರೂ ಅದರ ರುಚಿ ಹಾಗೂ ಸುವಾಸನೆಗೆ ಸಾಟಿಯಿಲ್ಲ. ಇಂತಹ ಏಲಕ್ಕಿಯಲ್ಲಿ ಹಲವಾರು ವಿಧದ ಆರೋಗ್ಯ ಲಾಭಗಳು ಕೂಡ ಇವೆ. ಏಲಕ್ಕಿಯನ್ನು ಸಾಮಾನ್ಯವಾಗಿ ಚಾದಿಂದ ಹಿಡಿದು ಬಿರಿಯಾನಿ ತನಕ ಹೆಚ್ಚಿನ ಖಾದ್ಯಗಳಿಗೆ ಬಳಕೆ ಮಾಡಲಾಗುತ್ತದೆ.
ಈ ಸಾಂಬಾರ ಪದಾರ್ಥವು ಅತ್ಯಧಿಕ ರುಚಿ ಹಾಗೂ ಸುವಾಸನೆ ಹೊಂದಿದೆ. ಇಂತಹ ಏಲಕ್ಕಿಯಲ್ಲಿ ಎರಡು ವಿಧವಿದೆ. ಒಂದು ಕಪ್ಪು ಏಲಕ್ಕಿ ಮತ್ತು ಹಸಿರು ಏಲಕ್ಕಿ. ಇದೆರಡು ಏಲಕ್ಕಿಯೇ ಆದರೂ ಇದರ ಗುಣಗಳು ಹಾಗೂ ಆರೋಗ್ಯ ಲಾಭಗಳು ತುಂಬಾ ಭಿನ್ನವಾಗಿದೆ. ಕಪ್ಪು ಏಲಕ್ಕಿಯನ್ನು ಹೆಚ್ಚಾಗಿ ಸಿಕ್ಕಿಂ, ಪೂರ್ವ ನೇಪಾಳ ಮತ್ತು ಪಶ್ವಿಮ ಬಂಗಾಳದಲ್ಲಿ ಬೆಳೆಯಲಾಗುತ್ತದೆ.
ಏಲಕ್ಕಿ ನೋಡಲು ಚಿಕ್ಕದಾದರೂ, ಕಾರುಬಾರು ಮಾತ್ರ ದೊಡ್ಡದು!
ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು, ನಾರಿನಾಂಶ ಮತ್ತು ಎಣ್ಣೆಯಂಶವಿದೆ. ಇದನ್ನು ಹಲವಾರು ಕಾಯಿಲೆಗಳನ್ನು ನಿವಾರಣೆ ಮಾಡಲು ಬಳಸಲಾಗುತ್ತದೆ. ಕಪ್ಪು ಏಲಕ್ಕಿಯನ್ನು ನಿಯಮಿತವಾಗಿ ಸೇವಿಸಿದರೆ ಅದರಿಂದ ಆರೋಗ್ಯವು ಸುಧಾರಣೆ ಆಗುವುದು.

ಇದರಲ್ಲಿ ಉನ್ನತ ಮಟ್ಟದ ಆಂಟಿಆಕ್ಸಿಡೆಂಟ್, ವಿಟಮಿನ್ ಸಿ ಮತ್ತು ಪೊಟಾಶಿಯಂ ಇದೆ. ಈ ಎಲ್ಲಾ ಅಂಶಗಳು ದೇಹದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಹೊರಗೆ ಹಾಕುವುದು ಮತ್ತು ರಕ್ತ ಸಂಚಾರವು ಸುಗಮವಾಗುವಂತೆ ಮಾಡುವುದು. ಏಲಕ್ಕಿಯ ಪ್ರಮುಖ ಗುಣವೆಂದರೆ ಇದು ಚರ್ಮಕ್ಕೆ ತುಂಬಾ ಸಹಕಾರಿ ಆಗಿರುವುದು.

*ಕಪ್ಪು ಏಲಕ್ಕಿಯ ಲಾಭಗಳು*
ಕಪ್ಪು ಏಲಕ್ಕಿಯು ಹಲವಾರು ರೀತಿಯ ಉಸಿರಾಟದ ಸಮಸ್ಯೆಗೆ ನೆರವಾಗುವುದು. ಅಸ್ತಮಾ, ಶ್ವಾಸಕೋಶ ಕಟ್ಟುವಿಕೆ ಸಮಸ್ಯೆ ಇದ್ದರೆ ಆಗ ನೀವು ಕಪ್ಪು ಏಲಕ್ಕಿ ತಿಂದರೆ ತುಂಬಾ ಲಾಭಕಾರಿ ಆಗಿರುವುದು. ಇದು ಶೀತ ಮತ್ತು ಕೆಮ್ಮನ್ನು ನಿವಾರಣೆ ಮಾಡುವುದು.
ಕಪ್ಪು ಏಲಕ್ಕಿಯು ದೇಹದಿಂದ ವಿಷವನ್ನು ಹೊರಗೆ ಹಾಕುವುದು. ಬಾಯಿ ದುರ್ವಾಸನೆ ಬರುತ್ತಲಿದ್ದರೆ ಆಗ ನೀವು ಒಂದು ಕಪ್ಪು ಏಲಕ್ಕಿ ಜಗಿದರೆ ಸಾಕು. ಬಾಯಿಯಲ್ಲಿ ಹುಣ್ಣು ಮೂಡುತ್ತಲಿದ್ದರೂ ಇದನ್ನು ಬಳಸಬಹುದು. ಪದೇ ಪದೇ ತಲೆನೋವು ಕಂಡುಬರುತ್ತಲಿದ್ದರೆ ಆಗ ಕಪ್ಪು ಏಲಕ್ಕಿಯಿಂದ ಮಸಾಜ್ ಮಾಡಿದರೆ ಅದು ತುಂಬಾ ನೆರವಾಗಲಿದೆ.
ಕಪ್ಪು ಏಲಕ್ಕಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ. ಇದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವುದು. ಇದರಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಕ್ಯಾನ್ಸರ್ ಕೋಶಗಳು ಬೆಳೆಯದಂತೆ ತಡೆಯುವುದು.

*ಕಪ್ಪು ಏಲಕ್ಕಿ ಬಳಕೆ ಎಲ್ಲಿ ಮಾಡಲಾಗುವುದು?*
ತರಕಾರಿ, ಬಿರಿಯಾನಿ ಇತ್ಯಾದಿಗಳಲ್ಲಿ ಕಪ್ಪು ಏಲಕ್ಕಿಯನ್ನು ಬಳಸುವರು. ಕಪ್ಪು ಏಲಕ್ಕಿಯನ್ನು ಹೆಚ್ಚಾಗಿ ಗರಂ ಮಸಾಲಗಳಲ್ಲಿ ಬಳಕೆ ಮಾಡುವರು. ಇದರಲ್ಲಿ ಇರುವಂತಹ ಕೆಲವೊಂದು ಅಂಶಗಳು ಆರೋಗ್ಯಕ್ಕೆ ತುಮಬಾ ಒಳ್ಳೆಯದು.
ಕಪ್ಪು ಮತ್ತು ಹಸಿರು ಏಲಕ್ಕಿಯನ್ನು ಹಲವಾರು ಮನೆಮದ್ದುಗಳಲ್ಲಿ ಬಳಕೆ ಮಾಡುವರು. ಇದನ್ನು ಆಹಾರದ ರುಚಿ ಹೆಚ್ಚಿಸಲು ಬಳಸುವುದು ಮಾತ್ರವಲ್ಲದೆ, ಶೀತ, ಕೆಮ್ಮು ಮತ್ತು ಬಾಯಿಯ ದುರ್ವಾಸನೆ ನಿವಾರಣೆ ಮಾಡಲು ಬಳಸುವರು. ಕಪ್ಪು ಮತ್ತು ಹಸಿರು ಏಲಕ್ಕಿಯು ತುಂಬಾ ಲಾಭಕಾರಿ. ಅದರಲ್ಲೂ ಕಪ್ಪು ಏಲಕ್ಕಿಯು ಹೆಚ್ಚು ಲಾಭಕಾರಿ ಆಗಿದೆ.

ಹಸಿರು ಮತ್ತು ಕಪ್ಪು ಏಲಕ್ಕಿ ರುಚಿ
ಹಸಿರು ಏಲಕ್ಕಿಯನ್ನು ಕಪ್ಪು ಏಲಕ್ಕಿಗಿಂತ ಹೆಚ್ಚು ಬಳಕೆ ಮಾಡಲಾಗುತ್ತದೆ. ಆದರೆ ಕಪ್ಪು ಏಲಕ್ಕಿಯನ್ನು ಔಷಧಿ ಮತ್ತು ಅಡುಗೆಗೆ ಎರಡಕ್ಕೂ ಬಳಕೆ ಮಾಡುವರು. ಇದರಿಂದ ಆಹಾರಕ್ಕೆ ಒಳ್ಳೆಯ ಸುವಾಸನೆ ಮತ್ತು ರುಚಿ ಸಿಗುವುದು. ಕಪ್ಪು ಏಲಕ್ಕಿಯು ಮಿತ ಸುವಾಸನೆ ಹೊಂದಿದ್ದರೆ, ಹಸಿರು ಏಲಕ್ಕಿಯು ತೀವ್ರ ಸುವಾಸನೆ ಹೊಂದಿದೆ.

*ಹಸಿರು ಏಲಕ್ಕಿಯ ಲಾಭಗಳು*
ಹಸಿರು ಏಲಕ್ಕಿಯು ಶೀತ ಮತ್ತು ಶ್ವಾಸಕೋಶದ ಸಮಸ್ಯೆ ನಿವಾರಣೆ ಮಾಡಲು ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಹಸಿರು ಏಲಕ್ಕಿಯು ಗ್ಯಾಸ್, ಅಸಿಡಿಟಿ ಮತ್ತು ಹೊಟ್ಟೆಯ ಸಮಸ್ಯೆಗೆ ತುಂಬಾ ಪರಿಣಾಮಕಾರಿ.

ಹಸಿರು ಏಲಕ್ಕಿಯನ್ನು ಪ್ರತಿಯೊಬ್ಬರು ಬಳಕೆ ಮಾಡುವರು ಮತ್ತು ಇದು ಸಣ್ಣ ಏಲಕ್ಕಿಯ ಹೆಸರು ಎಂದು ಹೆಚ್ಚಿನವರಿಗೆ ತಿಳಿದಿದೆ. ಹಸಿರು ಏಲಕ್ಕಿಯನ್ನು ಉಪ್ಪು ಮತ್ತು ಸಿಹಿ ಎರಡರಲ್ಲೂ ಬಳಕೆ ಮಾಡುವರು. ಹಾಲಿನ ಖಾದ್ಯಗಳಿರುವಂತಹ ಪಾಯಸ, ಸಿಹಿ ತಿಂಡಿಗಳಲ್ಲಿ ಬಳಸುವರು. ಹಸಿರು ಏಲಕ್ಕಿಯನ್ನು ಟೀ ತಯಾರಿಕೆಗೂ ಬಳಕೆ ಮಾಡುವರು.

ದಿನಾ ಅಶ್ವಗಂಧ ಚಹಾ, ಕುಡಿದ್ರೆ, ರೋಗ ನಿರೋಧಕ ಶಕ್ತಿ ಹೆಚ್ಚುವುದು

ಹುಟ್ಟಿನಿಂದ ಸಾಯುವವರೆಗೂ ಮನುಷ್ಯನಿಗೆ ರೋಗ ನಿರೋಧಕ ವ್ಯವಸ್ಥೆ ಬಲವಾಗಿದ್ದರೆ ಆತ ದೀರ್ಘಾಯುಷಿ ಆಗಿ ಬಾಳಬಲ್ಲ ಎಂಬ ಮಾತಿದೆ. ಹಲವಾರು ಆಹಾರಗಳು ನೈಸರ್ಗಿಕವಾಗಿ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ತಮ್ಮ ಹೆಸರು ಉಳಿಸಿಕೊಂಡಿವೆ.
ದಿನಾ ಅಶ್ವಗಂಧ ಚಹಾ, ಕುಡಿದ್ರೆ, ರೋಗ ನಿರೋಧಕ ಶಕ್ತಿ ಹೆಚ್ಚುವುದು
   

ಮನುಷ್ಯನಿಗೆ ರೋಗ ನಿರೋಧಕ ವ್ಯವಸ್ಥೆ ಎನ್ನುವುದು ದೇಶ ಕಾಯುವ ಯೋಧ ಇದ್ದಂತೆ. ಯೋಧರು ಹೊರಗಿನ ಶತ್ರುಗಳನ್ನು ದೇಶದ ಗಡಿಯೊಳಗೆ ಬಿಡದೆ ಹೇಗೆ ತಮ್ಮ ಪ್ರಾಣ ಪಣಕ್ಕಿಟ್ಟು ನಮ್ಮನ್ನೆಲ್ಲಾ ಕಾಪಾಡುತ್ತಾರೋ, ಅದೇ ರೀತಿ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ದೇಹದ ಒಳಗಿನ ಅಂಗಾಂಗಗಳನ್ನು ಮತ್ತು ನಮ್ಮ ಆರೋಗ್ಯವನ್ನು ಯಾವುದೇ ಕಣ್ಣಿಗೆ ಕಾಣದ ಬ್ಯಾಕ್ಟೀರಿಯಾ ಅಥವಾ ವೈರಸ್ ಸೋಂಕಿನಿಂದ ರಕ್ಷಣೆ ಮಾಡುತ್ತದೆ. ಹುಟ್ಟಿನಿಂದ ಸಾಯುವವರೆಗೂ ಮನುಷ್ಯನಿಗೆ ರೋಗ ನಿರೋಧಕ ವ್ಯವಸ್ಥೆ ಬಲವಾಗಿದ್ದರೆ ಆತ ದೀರ್ಘಾಯುಷಿ ಆಗಿ ಬಾಳಬಲ್ಲ ಎಂಬ ಮಾತಿದೆ.

ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ

ಹಲವಾರು ಆಹಾರಗಳು ನೈಸರ್ಗಿಕವಾಗಿ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ತಮ್ಮ ಹೆಸರು ಉಳಿಸಿಕೊಂಡಿವೆ. ಅದರಲ್ಲಿ ಪುರಾತನ ಕಾಲದಿಂದ ನಮ್ಮ ಆಯುರ್ವೇದ ಪದ್ಧತಿಯಲ್ಲಿ ಸಾಕಷ್ಟು ಬಗೆಯ ಆರೋಗ್ಯ ಸಮಸ್ಯೆಗಳನ್ನು ಇನ್ನಿಲ್ಲದಂತೆ ಪರಿಹಾರ ಮಾಡಿರುವ ಅಶ್ವಗಂಧ ಕೂಡ ಒಂದು.

ಈಗಂತೂ ಅಂಗಡಿಗಳಲ್ಲಿ ಯಾವುದೇ ಬಗೆಯ ಗಿಡಮೂಲಿಕೆಗಳ ಬೇರುಗಳು ಪುಡಿ ಅಥವಾ ದ್ರವದ ರೂಪದಲ್ಲಿ ಸುಲಭವಾಗಿ ಲಭ್ಯವಾಗುತ್ತದೆ. ಹಿಂದಿನ ಕಾಲದ ರೀತಿ ಗಿಡದ ಬೇರುಗಳಿಗೆ ಕಾಡು ಮೇಡು ಅಲೆಯುವ ಅಗತ್ಯವಿಲ್ಲ.

ಅಶ್ವಗಂಧದ ಪುಡಿ

ಅಶ್ವಗಂಧ ಸಹ ಮರದ ಬೇರು ಎಂದು ಹೇಳಲಾಗುತ್ತದೆ. ಮಾರುಕಟ್ಟೆಯಲ್ಲಿ ಸುಲಭವಾಗಿ ನಮಗೆ ಇದು ಪುಡಿಯ ರೂಪದಲ್ಲಿ ಸಿಗುತ್ತದೆ. ಅಶ್ವಗಂಧ ಪುಡಿಯನ್ನು ಮನೆಗೆ ತಂದು ಚಹಾ ತಯಾರಿಸಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಕ್ರಮೇಣವಾಗಿ ದೇಹದ ರೋಗ ನಿರೋಧಕ ವ್ಯವಸ್ಥೆ ಬಲಗೊಳ್ಳುತ್ತಾ ಬರುತ್ತದೆ.

ಇದರಿಂದ ಹೊಸ ಬಗೆಯ ಸೋಂಕುಗಳ ವಿರುದ್ಧ ಹೋರಾಡುವ ಗುಣ ಲಕ್ಷಣದ ಜೊತೆಗೆ ಈಗಾಗಲೇ ದೇಹದಲ್ಲಿ ಸೇರಿರುವ ಹಲವಾರು ಬಗೆಯ ಸಣ್ಣ ಪುಟ್ಟ ಕಾಯಿಲೆಗಳು ನಿಧಾನವಾಗಿ ವಾಸಿಯಾಗುತ್ತಾ ಬರುತ್ತವೆ.

ಅಶ್ವಗಂಧದ ಆರೋಗ್ಯ ಪ್ರಯೋಜನಗಳು

ಅಶ್ವಗಂಧ ಕೇವಲ ರೋಗ ನಿರೋಧಕ ವ್ಯವಸ್ಥೆಯನ್ನು ಮಾತ್ರ ಉತ್ತಮ ಪಡಿಸಲು ಇರುವ ಒಂದು ಗಿಡ ಮೂಲಿಕೆ ಎಂದು ನೀವು ತಿಳಿದುಕೊಂಡರೆ, ಅದು ನಿಮ್ಮ ತಪ್ಪು ಭಾವನೆಯಲ್ಲದೆ ಮತ್ತೇನಲ್ಲ. ಮನುಷ್ಯನ ದೇಹಕ್ಕೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಅಶ್ವಗಂಧ ನೀಡುತ್ತದೆ. ಅದರಲ್ಲಿ ಪ್ರಮುಖವಾಗಿ ಈ ಕೆಳಗಿನ ವಿಚಾರಗಳಲ್ಲಿ ಸಹಾಯ ಮಾಡುತ್ತದೆ.

ದೇಹದ ತೂಕ ಕಡಿಮೆಮಾಡುವಲ್ಲ
ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡುವಲ್ಲ
ಮಾನಸಿಕ ಒತ್ತಡವನ್ನು ನಿವಾರಣೆ ಮಾಡುವಲ್ಲ
ಮಹಿಳೆಯರಲ್ಲಿ ಫಲವತ್ತತೆಯ ಪ್ರಯೋಜನವನ್ನು ತಂದುಕೊಡುವಲ್ಲ
ಕಬ್ಬಿಣದ ಅಂಶ ಕಡಿಮೆ ಇರುವ ವ್ಯಕ್ತಿಗಳಲ್ಲಿ ಅನಿಮಿಯ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ
ಇವು ಅಶ್ವಗಂಧ ಉಂಟು ಮಾಡುವ ಪ್ರಯೋಜನಗಳಲ್ಲಿ ಕೇವಲ ಕೆಲವು ಮಾತ್ರ. ಇದರಂತೆ ಇನ್ನು ಹತ್ತಾರು ಆರೋಗ್ಯ ಸಮಸ್ಯೆಗಳಿಗೆ ಅಶ್ವಗಂಧದಲ್ಲಿ ಉತ್ತರವಿದೆ. ಅಶ್ವಗಂಧವನ್ನು ನೇರವಾಗಿ ತಿನ್ನಲು ನಿಮಗೆ ಕಷ್ಟ ಎನಿಸಿದರೆ ಅಶ್ವಗಂಧ ಚಹಾ ಮಾಡಿ ಸೇವಿಸಬಹುದು
ಅಶ್ವಗಂಧವನ್ನು ನೇರವಾಗಿ ತಿನ್ನಲು ನಿಮಗೆ ಕಷ್ಟ ಎನಿಸಿದರೆ ಅಶ್ವಗಂಧ ಚಹಾ ಮಾಡಿ ಸೇವಿಸಬಹುದು

ಅಶ್ವಗಂಧ ಚಹಾ ತಯಾರಿಸುವುದು ಹೇಗೆ?

ಮೊದಲಿಗೆ ಅಶ್ವಗಂಧ ಟೀ ಬ್ಯಾಗ್ ಅನ್ನು ಬಿಸಿ ನೀರಿನಲ್ಲಿ ಕೆಲವು ನಿಮಿಷಗಳ ಕಾಲ ಅದ್ದಿರಿ. ನಂತರ ಇದು ಸ್ವಲ್ಪ ಬಿಸಿ ಇರುವಾಗಲೇ ಅಶ್ವಗಂಧ ಚಹಾ ಕುಡಿಯಿರಿ.

ಆದರೆ ತಾಜಾ ಅಶ್ವಗಂಧ ಬೇರು ತಂದು ಮಾಡುವ ಚಹಾಗೆ ಹೋಲಿಸಿದರೆ ಅಶ್ವಗಂಧ ಪುಡಿ ಬಳಕೆಯಿಂದ ಮಾಡಿದ ಚಹಾ ಅಷ್ಟಾಗಿ ಪರಿಣಾಮ ಬೀರುವುದಿಲ್ಲ ಎಂದು ಹೇಳುತ್ತಾರೆ.ಅಶ್ವಗಂಧ ಚಹಾ ತಯಾರು ಮಾಡಲು ಈ ಕೆಳಗಿನ ಆಹಾರ ಪದಾರ್ಥಗಳು ನಿಮ್ಮ ಬಳಿ ಇದ್ದರೆ ಸಾಕು ತಾಜಾ ಅಶ್ವಗಂಧ ಬೇರು ಅಥವಾ ಪುಡಿ ಜೇನುತುಪ್ಪ ತಾಜಾ ನಿಂಬೆಹಣ್ಣು

ಮೊದಲಿಗೆ ಒಂದು ಪ್ಯಾನ್ ನಲ್ಲಿ ಒಂದು ಗ್ಲಾಸ್ ನೀರು ತೆಗೆದುಕೊಂಡು ಚೆನ್ನಾಗಿ ಕುದಿಸಿ ಒಂದರಿಂದ ಎರಡು ಅಶ್ವಗಂಧ ಬೇರುಗಳನ್ನು ಹಾಕಿ ಸುಮಾರು 6 ರಿಂದ 8 ನಿಮಿಷಗಳು ಚೆನ್ನಾಗಿ ಕುದಿಯಲು ಬಿಡಬೇಕು.ಈಗ ಕುದಿಸಿದ ಅಶ್ವಗಂಧದ ನೀರನ್ನು ಉಗುರು ಬೆಚ್ಚಗಿನ ತಾಪಮಾನಕ್ಕೆ ಬರುವವರೆಗೂ ಚೆನ್ನಾಗಿ ಆರಿಸಿ.
ಅದಕ್ಕೆ ಸ್ವಲ್ಪ ತಾಜಾ ನಿಂಬೆ ಹಣ್ಣಿನ ರಸ ಮತ್ತು ಹಸಿ ಜೇನುತುಪ್ಪವನ್ನು ಹಾಕಿ ರುಚಿ ಹೆಚ್ಚಿಸಿಕೊಳ್ಳಿ. ಬೇಕೆಂದರೆ ಸ್ವಲ್ಪ ಬೆಲ್ಲವನ್ನೂ ಸೇರಿಸಿಕೊಳ್ಳಬಹುದು. ಈಗ ನಿಮ್ಮ ರೋಗನಿರೋಧಕ ವ್ಯವಸ್ಥೆಗೆ ಸ್ನೇಹಿಯಾಗಿರುವ ಅಶ್ವಗಂಧ ಚಹಾ ತಯಾರಾಗಿದೆ.

ಪ್ರತಿ ದಿನ ಎರಡು ಬಾರಿ ಅಂದರೆ ಬೆಳಗಿನ ಮತ್ತು ಸಂಜೆಯ ವೇಳೆ ಅಶ್ವಗಂಧ ಚಹಾ ಕುಡಿಯುವ ಅಭ್ಯಾಸ ಇಟ್ಟುಕೊಳ್ಳಬೇಕು. ಅಶ್ವಗಂಧ ಸಹ ಚಹಾ ನಿಜಕ್ಕೂ ರೋಗ ನಿರೋಧಕ ವ್ಯವಸ್ಥೆಯನ್ನು ಬಲ ಪಡಿಸುತ್ತದೆಯೇ ?
ಸಾಮಾನ್ಯವಾಗಿ ಆರೋಗ್ಯ ತಜ್ಞರ ಪ್ರಕಾರ ಈ ಕೆಳಗಿನ ಮೂರು ವಸ್ತುಗಳು ಮನುಷ್ಯನ ದೇಹದಲ್ಲಿ ರೋಗ ನಿರೋಧಕ ವ್ಯವಸ್ಥೆಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತವೆ ಎಂದು ಹೇಳುತ್ತಾರೆ ಮತ್ತು ಅಂತಹ ಮೂರು ಪದಾರ್ಥಗಳನ್ನು ಅಶ್ವಗಂಧ ಚಹಾ ತಯಾರಿಕೆಯಲ್ಲಿ ಈಗಾಗಲೇ ಬಳಕೆ ಮಾಡಲಾಗಿದೆ.

ಮನುಷ್ಯನ ಮಾನಸಿಕ ಒತ್ತಡ, ಆತಂಕ ಮತ್ತು ಉರಿಯೂತವನ್ನು ದೂರ ಮಾಡಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸುತ್ತದೆ ಮತ್ತು ದೇಹವನ್ನು ಯಾವುದೇ ಬಗೆಯ ಸೋಂಕುಗಳ ವಿರುದ್ಧ ಹೋರಾಡಲು ಸಜ್ಜುಗೊಳಿಸುತ್ತದೆ.

ನಿಂಬೆ ಹಣ್ಣಿನಲ್ಲಿ ಅತಿ ಮುಖ್ಯವಾಗಿ ವಿಟಮಿನ್ ' ಸಿ ' ಅಂಶ ಇದ್ದು, ಇದು ಬಹಳ ಹೇರಳವಾಗಿದೆ ಎಂದು ಹೇಳಬಹುದು. ಇದು ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಹೆಚ್ಚು ಮಾಡುವುದರಲ್ಲಿ ಸಾರ್ಥಕತೆ ಮೆರೆಯುತ್ತದೆ.

ಇದರ ಜೊತೆಗೆ ನಿಂಬೆ ಹಣ್ಣಿನಲ್ಲಿ ಆಂಟಿ - ಆಕ್ಸಿಡೆಂಟ್ ಮತ್ತು ಆಂಟಿ - ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳಿಂದ, ಇದು ದೇಹದ ಸಂಪೂರ್ಣ ಆರೋಗ್ಯ ರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳುತ್ತ

ಜೇನು ತುಪ್ಪ ನೈಸರ್ಗಿಕವಾದ ಒಂದು ಸಿಹಿ ಪದಾರ್ಥ ಆಗಿದ್ದು, ಇದರಲ್ಲಿರುವ ಆಂಟಿ - ಆಕ್ಸಿಡೆಂಟ್ ಮತ್ತು ಆಂಟಿ - ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳು, ಮನುಷ್ಯನ ದೇಹಕ್ಕೆ ರೋಗ ನಿರೋಧಕ ವ್ಯವಸ್ಥೆಯನ್ನು ಹೆಚ್ಚು ಮಾಡುವಲ್ಲಿ ಮುಂದಾಳತ್ವ ವಹಿಸಿ ಸಹಾಯ ಮಾಡುತ್ತವೆ.

ಬಾಗಲಕೋಟೆ ಜಿಲ್ಲೆ

🌸 ಬಾಗಲಕೋಟೆ ಜಿಲ್ಲೆಯ ವಿಜಯಪುರ ಜಿಲ್ಲೆಯಿಂದ 1997 ರಲ್ಲಿ ಪ್ರತ್ಯೇಕವಾಯಿತು
🌸 ಭಾರತದ 50ನೇಯ ಸ್ವಾತಂತ್ರ್ಯ ವರ್ಷಾಚರಣೆಯ ಸಂದರ್ಭದಲ್ಲಿ ಅಂದರೆ 1997 ರಲ್ಲಿ ಹೊಸ ಜಿಲ್ಲೆಯಾಗಿ ಅಸ್ಥಿತ್ವಕ್ಕೆ ಬಂದಿತು
🌸 1865 ರಲ್ಲಿ ಪುರಸಭೆಯಾಗಿ ಅಸ್ಥಿತ್ವಕ್ಕೆ ಬಂದಿತು. ಬಾಗಲಕೋಟೆಯು "ಸ್ವಾತಂತ್ರ್ಯ ಚಳುವಳಿ" ಮತ್ತು "ಕರ್ನಾಟಕ ಏಕೀಕರಣ ಚಳುವಳಿ"ಗಳಿಗೆ ಕೇಂದ್ರವಾಗಿತ್ತು 
🌸 ಜಿಲ್ಲೆಯ ಹನಗುಂದ ತಾಲ್ಲೂಕಿನ ಐಹೊಳೆ ಗ್ರಾಮದ ಮೇಗುತಿ ಎಂಬ ದೇವಾಲಯದಲ್ಲಿ ಇಮ್ಮಡಿ ಪುಲಿಕೇಶಿಯ ಆಸ್ಥಾನ ಕವಿ ರವಿಕೀರ್ತಿಯ 'ಐಹೊಳೆ ಶಾಸನ' ( ಸಂಸ್ಕೃತ ಭಾಷೆಯಲ್ಲಿ) ಇದೆ. ಈ ಶಾಸನವು 'ನರ್ಮದಾ ನದಿ' ಕದನಕ್ಕೆ ಸಂಬಂಧಿಸಿದೆ . ನರ್ಮದಾ ನದಿ ಕದನವು :- 'ಇಮ್ಮಡಿ ಪುಲಕೇಶಿ' ಮತ್ತು 'ಹರ್ಷವರ್ಧನ' ನಡುವೆ ನಡೆಯಿತು
 🌸 ಜಿಲ್ಲೆಯಲ್ಲಿ "ಕಪ್ಪೆ ಆರ್ಭಟ್ಟನ" ಶಾಸನವು ತ್ರಿಪದಿಯಲ್ಲಿದೆ ಈ ಶಾಸನದಲ್ಲಿ ಕನ್ನಡದ ಮೊಟ್ಟಮೂದಲ ತ್ರಿಪದಿಗಳು ದೊರೆಯುತ್ತವೆ 
ತ್ರಿಪದಿ ಅಂದರೆ ಮೂರು ಸಾಲಿನ ಪದ್ಯ , ಇದು ಅಚ್ಚಕನ್ನಡದೇಸೀಮಟ್ಟಿನ ಛಂದಸ್ಸಾಗಿದೆ.
🌸 ಜಿಲ್ಲೆಯ "ಇಳಕಲ್" ಸ್ಥಳವು ಪಿಂಕ್ ಗ್ರಾನೆಟ್ ಮತ್ತು ಸೀರೆಗಳಿಗೆ ಹೆಸರುವಾಸಿಯಾಗಿದೆ
🌸 ಮುಧೋಳ ತಾಲ್ಲೂಕಿನ ಹಗಲಿಗೆ ( ಊರಿ)ನಲ್ಲಿ 1857ರಲ್ಲಿ "ಬೇಡರ ಸಶಸ್ತ್ರ" ದಂಗೆ ನಡೆಯಿತು
🌸 ಮುಧೋಳದಲ್ಲಿ ಹುಂಡ್ಸ್ ಎಂಬ ನಾಯಿಯ ತಳಿಯು ಪ್ರಸಿದ್ಧಿ ಮತ್ತು ಇಲ್ಲಿ ರನ್ನ ಉತ್ಸವ ನಡೆಯುತ್ತದೆ
🌸 ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಎಂಬ ಹಳ್ಳಿಯ ಹೆಸರಾಂತ ವ್ಯಕ್ತಿ ಬಿ.ಡಿ.ಜತ್ತಿ ಅಥವಾ "ಬಸಪ್ಪ ದಾನಪ್ಪ ಜತ್ತಿ"
> ಇವರು ಉಪರಾಷ್ಟ್ರಪತಿಯಾದ ಏಕೈಕ ಕನ್ನಡಿಗರು
> ಹಂಗಾಮಿ ರಾಷ್ಟ್ರಪತಿಯಾದ ಏಕೈಕ ಕನ್ನಡಿಗರು
> ಒಡಿಸ್ಸಾ ರಾಜ್ಯದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ.
🌸 ಈ ಜಿಲ್ಲೆಯ 'ನವನಗರ' ಕರ್ನಾಟಕದ ಮೊದಲ ಯೋಜಿತ ನಗರವಾಗಿದೆ
🌸 ಬಾಗಲಕೋಟೆ ಜಿಲ್ಲೆಯ ಬಾದಾಮಿಯು ಚಾಲುಕ್ಯರು ರಾಜಧಾನಿಯಾಗಿತ್ತು, ಇಲ್ಲಿ "ಚಾಲುಕ್ಯ ಉತ್ಸವ" ನಡೆಯುತ್ತದೆ
🌸  ಈ ಜಿಲ್ಲೆಯಲ್ಲಿ ಕೃಷ್ಣ ಮತ್ತು ಮಲಪ್ರಭಾ ನದಿ ದಂಡೆಗಳ ಮೇಲೆ "ಕೂಡಲಸಂಗಮ" ಇದೆ
🌸 ಬಾದಾಮಿಯು ನವಶಿಲಾಯುಗದ ತಾಣವಾಗಿದ್ದು, ಪಟ್ಟದಕಲ್ಲಿನ ದೇವಾಲಯವು ಭಾರತದ ಸಂಸತ್ತಿನ( ಪಾರ್ಲಿಮೆಂಟ್) ಆಕಾರವನ್ನು ಹೊಂದಿದೆ.
🌸 ಬಾದಾಮಿ ಹಳೆಯ ಹೆಸರು :- ವಾತಾಪಿ
🌸 ಯಡಹಳ್ಳಿ ವನ್ಯಜೀವಿ ಧಾಮವು ಜಿಂಕಾರ ( ಇಂಡಿಯನ್ ಗೆಝೆಲ್ ) ಜಿಂಕೆಗಳಿಗೆ ಪ್ರಸಿದ್ಧಿಯಾಗಿದೆ. ಯಡಹಳ್ಳಿ ಚಿಂಕಾರ ವನ್ಯಧಾಮವಾಗಿ ರಾಜ್ಯ ಸರ್ಕಾರ 2015ರಲ್ಲಿ ಘೋಷಿಸಿತ್ತು 
🌸 ಬಾಗಲಕೋಟೆ ಜಿಲ್ಲೆಯ "ಪಟ್ಟದಕಲ್ಲು" 1987 ರಲ್ಲಿ ವಿಶ್ವಪರಂಪರೆ ಪಟ್ಟಿಗೆ ಸೇರಿದೆ

Friday, June 19, 2020

ಎಲ್ಲಾ ಪರಿಕ್ಷೆಗೂ ಬಹುಮುಖ್ಯವಾದವು

ಡೋಲ್ ಡ್ರಮ್ಸ್ ಎಂದರೆ- ಭೂಮಧ್ಯ ರೇಖೆಯುದ್ದಕ್ಕೂ ಇರುವ ಕಡಿಮೆ ಒತ್ತಡದ ಪ್ರದೇಶ 

ಹೊಗೇನಕಲ್ ವಿವಾದವು ಯಾವ ರಾಜ್ಯಗಳ ನಡುವೆ ನಡೆದಿತ್ತು-ಕರ್ನಾಟಕ ಮತ್ತು ತಮಿಳುನಾಡು

ಮ್ಯಾಂಗನೀಸ್ ಅದಿರು ವಿಫುಲವಾಗಿ ಕರ್ನಾಟಕದಲ್ಲಿ ದೊರೆಯುವ ಸ್ಥಳ-ಸಂಡೂರು

ಕರ್ನಾಟಕದಲ್ಲಿ ಈಶಾನ್ಯಕ್ಕೆ ಹರಿಯುವ ನದಿ- ತುಂಗಭದ್ರಾ

ನಮ್ಮ ಜಲಗೋಳದ ಅತೀ ದೊಡ್ಡ ಸಾಗರ -ಫೆಸಿಫಿಕ ಸಾಗರ

1999 ರಲ್ಲಿ ಭಾರತ ರತ್ನ ಪ್ರಶಸ್ತಿ ಇವರಿಗೆ ನೀಡಲಾಯಿತು -ಅಮರ್ತ್ಯ ಸೇನ್

ಉಸಿರಾಟ ಕ್ರಿಯೆಯಲ್ಲಿ ಶಕ್ತಿಯನ್ನು ಬಿಡುಗಡೆ ಮಾಡುವ ಕಣದಂಗ
-ಮೈಟೋಕಾಂಡ್ರಿಯಾ

ಮೊದಲ ಅಂತರರಾಷ್ಟ್ರೀಯ ಯೋಗ
ದಿನಾಚರಣೆ ಆಚರಿಸಿದ್ದು -
 ಜೂನ್ 21, 2015.

ಪ್ರಪಂಚದಲ್ಲಿ ಕುಟುಂಬ ಯೋಜನೆಯನ್ನು
ಸರ್ಕಾರದ ಆಧಿಕೃತ ಕಾರ್ಯಕ್ರಮವಾಗಿ ಸ್ವೀಕರಿಸಿದ
ಮೊದಲ -ಭಾರತ

ಭಾರತದಲ್ಲಿ ಮೊದಲು ಶಾಸ್ತ್ರೀಯ
ಸ್ಥಾನ ಪಡೆದ ಭಾಷೆ -
- ಸಂಸ್ಕೃತ.

ಈ ನಗರದಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗುತ್ತದೆ -ಓಸ್ಲೋ (ನಾರ್ವೆ)

ಪ್ರಥಮ ರಾಜೀವಗಾಂಧಿ ಖೇಲರತ್ನ ಪ್ರಶಸ್ತಿ ಪಡೆದವರು -ವಿಶ್ವನಾಥ ಆನಂದ (ಚೆಸ್)

ಭಾರತದಲ್ಲಿ ಎರಡು ರಾಜಧಾನಿಯನ್ನು
ಹೊಂದಿರುವ ರಾಜ್ಯ ಯಾವುದು?
- ಜಮ್ಮು-ಕಾಶ್ಮೀರ.

ತಾನಸೇನ್ ಸಮ್ಮಾನ್ ಪ್ರಶಸ್ತಿಯನ್ನು ಸ್ಥಾಪಿಸಿದ ಸರ್ಕಾರ -ಮಧ್ಯಪ್ರದೇಶ

ರೈಸ್ ಟೆಕ್ನಾಲಜಿ ಪಾರ್ಕ್ ಎಲ್ಲಿದೆ?
 ಸೋಮನಾಳ (ಕಾರಟಗಿ).(ತಾ:- ಗಂಗಾವತಿ,
ಜಿ:- ಕೊಪ್ಪಳ).

5000 ಕೋಟಿಗಿಂತ ಹೆಚ್ಚು ಬಂಡವಾಳ ಹೊಂದಿದ ಉದ್ದಿಮೆಗಳನ್ನು ------ ಎನ್ನುವರು?
ಮಹಾರತ್ನ ಉದ್ದಿಮೆಗಳು.

ಭಾರತದ ಭೌಗೋಳಿಕ ಕೇಂದ್ರ- ಮದ್ಯಪ್ರದೇಶದ ಜಬ್ಬಲಪುರ

"ಮೀನು ಸಾಕಾಣಿಕೆ" ಯಾವ ವಲಯಕ್ಕೆ ಉದಾಹರಣೆ?
  ಪ್ರಾಥಮಿಕ.

"ಕೋಸಿ" ಯಾವ ನದಿಯ ಉಪನದಿ?
* ಗಂಗಾ ನದಿ.

"ಚಕ್ರ" ಜಲವಿದ್ಯುತ್ ಉತ್ಪಾದನಾ ಕೇಂದ್ರ ಯಾವ ರಾಜ್ಯದಲ್ಲಿದೆ?(ಪ್ರವೀಣ ಹೆಳವರ)
 ಕರ್ನಾಟಕ.

ಒಲಂಪಿಕ್ ಪದಕವನ್ನು ಗೆದ್ದ ಮೊದಲ ಭಾರತೀಯ ಮಹಿಳೆ -ಕರ್ಣಂ ಮಲ್ಲೇಶ್ವರಿ

ವಿಲಿಯಂ ಕಪ್ ಪ್ರಶಸ್ತಿಯನ್ನು ಈ ಆಟಕ್ಕೆ ನೀಡಲಾಗುತ್ತದೆ -ಬಾಸ್ಕೆಟ್ ಬಾಲ್

ಕನ್ನಡದ ಮೊದಲ ಅಕ್ಷರಮಾಲೆ ಕೃತಿಯಾದ ಜಿನಾಕ್ಷರ ಮಾಲೆಯನ್ನು ರಚಿಸಿದವರು -ಪೊನ್ನ 

ಒಲಂಪಿಕ್ ಕ್ರಿಡಾಕೂಟದಲ್ಲಿ ಹಾಕಿ ತಂಡವು ತನ್ನ ಮೊದಲ ಪದಕ ಪಡೆಯಲಾದ ವರ್ಷ -1928

ಜಗತ್ತಿನ ದೊಡ್ಡ ಕರಾವಳಿ ರೇಖೆ ಹೊಂದಿದ ದೇಶ ಇದಾಗಿದೆ -ಕೆನಡಾ

ಟೆಬಲ್ ಟೆನಿಸ್ ಒಲಂಪಿಕ್ ಕ್ರೀಡೆಯಾಗಿ ಸೇರ್ಪಡೆಯಾದ ವರ್ಷ -1988

ಬಾಕ್ಸಿಂಗ್ ಕ್ರೀಡೆ ಒಲಂಪಿಕ್ ಕ್ರೀಡೆಯಾಗಿ ಸೇರ್ಪಡೆಯಾದ ವರ್ಷ -1908

ಕ್ರೀಡಾ ಇತಿಹಾಸದಲ್ಲೇ ವೈಯಕ್ತಿಕ ಒಲಂಪಿಕ ಚಿನ್ನದ ಪದಕವನ್ನು ಗಳಿಸಿದ ಮೊದಲ ಭಾರತೀಯ -ಅಭಿನವ ಬಿಂದ್ರಾ

ಕ್ರೀಡಾ ಕ್ಷೇತ್ರದಲ್ಲಿ ನೀಡುವ ಅರ್ಜುನ್ ಪ್ರಶಸ್ತಿ ಸ್ಥಾಪಿಸಲಾದ ವರ್ಷ -1961

ಕ್ರಿಕೆಟ್ ಆಟದಲ್ಲಿ ಬೌಲಿಂಗ್ ವೇಗವನ್ನು ಅಳೆಯುವ ಸಾಧನ -ಮ್ಯಾಕ್ರೋಮೀಟರ್

ಯಾವ ನದಿಯು ಸಮಭಾಜಕ ವೃತ್ತವನ್ನು ಎರಡು ಸಲ ಹಾದು ಹೋಗುತ್ತದೆ- ಕಾಂಗೊ

ಕರ್ನಾಟಕ ರಾಜ್ಯದ ಈ ಜಿಲ್ಲೆಯಲ್ಲಿ ಹೆದ್ದಾರಿ ಹಾದು ಹೋಗುವುದಿಲ್ಲ-ಕೊಡಗು

ಪ್ರಪಂಚದ ಅತ್ಯಂತ ವಿಸ್ತಾರವಾದ ದ್ವೀಪ/ದ್ವೀಪ ಸಮೂಹ-ಗ್ರೀನ್ ಲ್ಯಾಂಡ್

ಅಘನಾಶಿನಿ ಮತ್ತು ಶರಾವತಿ ನದಿಗಳ ಮಧ್ಯ ಇರುವ ಪಟ್ಟಣಗಳ ಜೋಡಿ- ಕುಮಟಾ ಮತ್ತು ಹೊನ್ನಾವರ

ಕರ್ನಾಟಕ ರಾಜ್ಯದಲ್ಲಿ ಕರಡಿಗಳಿಗಾಗಿ ಸ್ಥಾಪಿಸಿರುವ ರಕ್ಷಣಾಧಾಮ ಎಲ್ಲಿದೆ- ಬಳ್ಳಾರಿ(ಪ್ರವೀಣ ಹೆಳವರ)

ನಮ್ಮ ದೇಶದ ಮೊಟ್ಟಮೊದಲಿನ ಜಲವಿದ್ಯುಚ್ಛಕ್ತಿ ಉತ್ಪಾದನಾ ಯೋಜನೆ-ಶಿವನಸಮುದ್ರ ಜಲಪಾತ

ಮಾಗೋಡು ಜಲಪಾತವನ್ನು ಉಂಟು ಮಾಡುವ ನದಿ-ಬೇಡ್ತಿ

ಸ್ನೂಕರ್ ಪಂದ್ಯದ ಕೊನೆಯಲ್ಲಿ ಹೊಡೆಯುವ ಚೆಂಡು ಈ ಬಣ್ಣದ್ದಾಗಿರುತ್ತದೆ -ಕಪ್ಪುಬಣ್ಣ

ಏಷ್ಯನ್ ಗೇಮ್ಸನ್ ಜನಕನೆಂದು ಇವರನ್ನು ಕರೆಯುತ್ತಾರೆ -ಜೆ.ಡಿ.ಸೋಂಧಿ

 "ಭೂ ಚೇತನ ಕಾರ್ಯಕ್ರಮ" ಜಾರಿಗೆ ಬಂದದ್ದು-
 2010.

ಕರ್ನಾಟಕದ ಅತ್ಯಂತ ದೊಡ್ಡಕೆರೆ--
ಶಾಂತಿಸಾಗರ

ಗಾಂಧೀಜಿಯವರು ತಂಗಿದ್ದ ಕರ್ನಾಟಕದ ಗಿರಿಧಾಮ--ನಂದಿದುರ್ಗ.

ರಾಷ್ಟ್ರಪತಿ ಪ್ರಶಸ್ತಿ ಪಡೆದ ಪ್ರಥಮ ಕನ್ನಡದ ಗಾಯಕ--ಶಿವಮೊಗ್ಗ ಸುಬ್ಬಣ್ಣ.

ಶ್ರೀ ಚೈತನ್ಯರು ಯಾವ ರಾಜ್ಯದಲ್ಲಿ ಜನಿಸಿದ್ಧು?
ಪಶ್ಚಿಮ ಬಂಗಾಳ.

"ತಾನೂ ಅಲ್ಲಾ ಮತ್ತು ರಾಮನ ಶಿಶು" ಎಂಬುದಾಗಿ ಹೇಳಿದವರು 
 ಕಬೀರ್ ದಾಸ್.

ಗೋಲಗುಂಬಜವು ಜಗತ್ತಿನಲ್ಲಿಯೇ ಗಾತ್ರದಲ್ಲಿ ಎಷ್ಟನೇಯದು?
ನಾಲ್ಕನೆಯದು

ಯುರೋ ನಾಣ್ಯವನ್ನು ಇತ್ತೀಚೆಗೆ ಅಳವಡಿಸಿಕೊಂಡ ರಾಷ್ಟ್ರ 
 ಲಿಥುವೇನಿಯಾ.(೨೦೦೫)

ವಿದ್ಯಾಶಂಕರ ದೇವಾಲಯ ಎಲ್ಲಿದೆ?
ಶೃಂಗೇರಿ(ಪ್ರವೀಣ ಹೆಳವರ)

'ವ್ಯಾಟ್' ಜಾರಿಗೊಳಿಸಿದ ಮೊದಲ ದೇಶ 
 ಫ್ರಾನ್ಸ್ (1953).

Earn money from your mobile

https://earningtricks247.blogspot.com/2020/06/500-15000.html?m=1

ವಿಟಮಿನ್‌ಗಳೆಂದರೇನು?

ನಾವು ತಿನ್ನುವ ಆಹಾರದಲ್ಲಿ ಇರುವ ಅಂಶಗಳಲ್ಲಿ ವಿಟಮಿನ್‌ಗಳೂ ಸೇರಿವೆ. ಅವು ದೇಹಕ್ಕೆ ಅಗತ್ಯವಿರುವ ಸಾಮರ್ಥ್ಯ ನೀಡುತ್ತವೆ.

* ‘ವಿಟಮಿನ್ ಬಿ1’ ಅನ್ವೇಷಣೆಗೆ ಕಾರಣವಾದ ಪ್ರಯೋಗ ಯಾವುದು?
 1896ರಲ್ಲಿ ಡಚ್ ರೋಗತಜ್ಞ ಡಾ.ಕ್ರಿಸ್ಟಿಯನ್ ಈಜಿಕ್‌ಮನ್‌ ಜಾವಾದಲ್ಲಿ ‘ಬೆರಿಬೆರಿ’ ಎಂಬ ನರರೋಗದಿಂದ ನರಳುತ್ತಿದ್ದವರಿಗೆ ಚಿಕಿತ್ಸೆ ನೀಡುತ್ತಿದ್ದರು. ಆ ರೋಗಿಗಳಂತೆಯೇ ಕೆಲವು ಕೋಳಿಗಳು ಕುಂಟುವುದನ್ನು ಅವರು ಗಮನಿಸಿದರು. ಹಾಗೆ ಕುಂಟುತ್ತಿದ್ದ ಕೋಳಿಗಳಿಗೆ ಅವರು ಪಾಲಿಷ್ ಮಾಡಿದ ಅಕ್ಕಿ ತಿನ್ನಿಸಿದ್ದರು. ಪಾಲಿಷ್ ಮಾಡದ ಅಕ್ಕಿಯನ್ನು ತಿಂದಿದ್ದ ಕೋಳಿಗಳು ಆರೋಗ್ಯವಾಗಿಯೇ ಇದ್ದವು. ಪಾಲಿಷ್ ಮಾಡದ ಅಕ್ಕಿಯಲ್ಲಿ ಇದ್ದ, ಪೋಷಣೆಗೆ ಕಾರಣವಾಗುವ ಅಂಶವೇ ‘ವಿಟಮಿನ್ ಬಿ1’ ಅಥವಾ ‘ಥಯಮಿನ್’ ಎಂದು ಗೊತ್ತಾದದ್ದು ಕ್ರಿಸ್ಟಿಯನ್ ಪ್ರಯೋಗ ಮಾಡಿದ 30 ವರ್ಷಗಳ ನಂತರ.

* ಬ್ರಿಟಿಷ್ ಹಡಗುಗಳ ನಾವಿಕರನ್ನು ‘ಲೈಮೀಸ್’ ಎಂದೇಕೆ ಕರೆಯುತ್ತಿದ್ದರು?
 ಯಾಕೆಂದರೆ, ಅವರಿಗೆ ಕುಡಿಯಲು ಲಿಂಬು ಪಾನಿ ಕೊಡುತ್ತಿದ್ದರು. ಲಿಂಬು ಪಾನಿ ಅಥವಾ ನಿಂಬೆರಸವನ್ನು ಪ್ರತಿದಿನ ಸೇವಿಸುವುದರಿಂದ ‘ವಿಟಮಿನ್ ಸಿ’ ದೊರೆಯುತ್ತದೆ. ಇದರಿಂದ ರಕ್ತಪಿತ್ತ ವ್ಯಾಧಿ ಬಾರದು.

* ‘ಫಾಲಿಕ್ ಆಸಿಡ್’ ಕಂಡುಹಿಡಿದದ್ದು ಯಾರು?
 ಡಾ.ಯಲ್ಲಪ್ರಗಾದ ಸುಬ್ಬರಾವ್ ಹಾಗೂ ಅಮೆರಿಕದಲ್ಲಿನ ಅವರ ನೇತೃತ್ವದ ವಿಜ್ಞಾನಿಗಳ ತಂಡ ಕಂಡುಹಿಡಿಯಿತು.

* ‘ವಿಟಮಿನ್ ಡಿ’ ಅನ್ವೇಷಣೆಯಾದದ್ದು ಯಾವಾಗ?
 ಮಕ್ಕಳಿಗೆ ಮೆದುಮೂಳೆ ರೋಗ ಬರದೇ ಇರಲು ಪ್ರತಿದಿನ ಕಾಡ್ ಲಿವರ್ ಆಯಿಲ್ ಕುಡಿಯುವಂತೆ ಒತ್ತಾಯಿಸಲಾಗುತ್ತಿತ್ತು. 1919ರಲ್ಲಿ ಸರ್ ಎಡ್ವರ್ಡ್ ಮೆಲ್ಲಾನಿಬಿ ಕಾಡ್ ಲಿವರ್ ಆಯಿಲ್‌ನಲ್ಲಿ ಮೂಳೆ ಗಟ್ಟಿಯಾಗಲು ಇರುವ ಅಂಶವನ್ನು 1931ರಲ್ಲಿ ಪತ್ತೆಮಾಡಿದರು. ಅದೇ ‘ವಿಟಮಿನ್ ಡಿ’.

National Commission on Farmers: Swaminathan Committee

On 18th November, 2004, the Union government constituted this committee with MS Swaminathan as its chairman.

- The main aim of the committee was to come up with a sustainable farming system, make farm commodities cost-competitive and more profitable.

- The commission, in 2006, recommended that MSPs must be at least 50% more than the cost of production and recommended the C2 method for MSP calculation.

- However, the government calculates its MSP based on the A2+FL method.

Translated....
•• ರೈತರ ರಾಷ್ಟ್ರೀಯ ಆಯೋಗ:
ಸ್ವಾಮಿನಾಥನ್ ಸಮಿತಿ

- ನವೆಂಬರ್ 18, 2004 ರಂದು, ಕೇಂದ್ರ ಸರ್ಕಾರವು ಎಂ.ಎಸ್.ಸ್ವಾಮಿನಾಥನ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತು.

- ಸಮಿತಿಯ ಮುಖ್ಯ ಉದ್ದೇಶವೆಂದರೆ
ಸುಸ್ಥಿರ ಕೃಷಿ ಪದ್ಧತಿ,
ಕೃಷಿ ಸರಕುಗಳನ್ನು ವೆಚ್ಚ-ಸ್ಪರ್ಧಾತ್ಮಕ ಮತ್ತು ಹೆಚ್ಚು ಲಾಭದಾಯಕವಾಗಿಸುವುದು[make farm commodities cost-competitive and more profitable]

- ಆಯೋಗವು 2006 ರಲ್ಲಿ, MSPಗಳು ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ 50% ಹೆಚ್ಚಿರಬೇಕು ಎಂದು ಶಿಫಾರಸು ಮಾಡಿತು ಮತ್ತು MSP ಲೆಕ್ಕಾಚಾರಕ್ಕೆ C2 ವಿಧಾನವನ್ನು ಶಿಫಾರಸು ಮಾಡಿತು.

- ಆದಾಗ್ಯೂ, ಸರ್ಕಾರವು A2 + FL ವಿಧಾನವನ್ನು ಆಧರಿಸಿ ತನ್ನ MSPಯನ್ನು ಲೆಕ್ಕಾಚಾರ ಮಾಡುತ್ತದೆ.
#economics #SwaminathanCommittee #farmersProgrammes #nationalaffairs
@spardhaloka

•• MSP Calculation: 

- This MSP is usually estimated based on three types of calculation methods.
ಈ MSPಯನ್ನು ಸಾಮಾನ್ಯವಾಗಿ ಮೂರು ರೀತಿಯ ಲೆಕ್ಕಾಚಾರದ ವಿಧಾನಗಳ ಆಧಾರದ ಮೇಲೆ ಅಂದಾಜಿಸಲಾಗುತ್ತದೆ

- A2: Under this, MSP is set 50% higher than the amount farmers spend on farming including spending on seeds, fertilisers, pesticides, and labour.
A2: ಇದರ ಅಡಿಯಲ್ಲಿ, ಬೀಜಗಳು, ರಸಗೊಬ್ಬರಗಳು, ಕೀಟನಾಶಕಗಳು ಮತ್ತು ಕಾರ್ಮಿಕರ ಖರ್ಚು ಸೇರಿದಂತೆ ರೈತರು ಕೃಷಿಗೆ ಖರ್ಚು ಮಾಡುವ ಮೊತ್ತಕ್ಕಿಂತ 50% ಹೆಚ್ಚಾಗಿದೆ.

- A2+FL: It includes A2 plus an assigned value of unpaid family labour.
ಇದು A2 ಜೊತೆಗೆ ಪಾವತಿಸದ ಕುಟುಂಬ ಕಾರ್ಮಿಕರ ನಿಯೋಜಿತ ಮೌಲ್ಯವನ್ನು ಒಳಗೊಂಡಿದೆ

- C2: Under C2, the estimated land rent and the cost of interest on the money taken for farming are added on top of A2+FL.
C2 ಅಡಿಯಲ್ಲಿ, ಅಂದಾಜು ಭೂ ಬಾಡಿಗೆ ಮತ್ತು ಕೃಷಿಗೆ ತೆಗೆದುಕೊಂಡ ಹಣದ ಬಡ್ಡಿ ವೆಚ್ಚವನ್ನು A2 + FL ಮೇಲೆ ಸೇರಿಸಲಾಗುತ್ತದೆ.

-The Central government had set up the National Commission on Farmers (NCF) in 2004 to address the issues of farmers in India including that of calculation of MSP.
MSP ಲೆಕ್ಕಾಚಾರ ಸೇರಿದಂತೆ ಭಾರತದ ರೈತರ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರವು 2004 ರಲ್ಲಿ ರಾಷ್ಟ್ರೀಯ ರೈತರ ಆಯೋಗವನ್ನು (ಎನ್‌ಸಿಎಫ್) ರಚಿಸಿತ್ತು.

THOUGHT FOR THE DAY

What is the surest way to achieve the difficult task of taming our own ego? Bhagawan endearingly explains to us today!*

When someone suffers from stomach-ache, the best treatment will be salts or a hot water bag applied to the stomach, and not medicated collyrium for the eye. Suffering due to ignorance must be removed by acknowledging the universality of God and merging your individuality in the Universal. This first step is not as easy as it looks. Practice the attitude “I am yours.” Let the wave discover and acknowledge that it belongs to the sea. The wave takes a long time to recognise that indeed the vast sea beneath it gives it its existence. Its ego is so powerful that it will not permit it to be so humble, and bend before the sea. “I am Yours; You are the Master. I am a servant; You are sovereign. I am bound.” This mental attitude will tame the ego. This is the religious outlook named marjala-kishora - the attitude of the kitten to its mother, mewing plaintively for succour and sustenance, removing all trace of the ego.

Saturday, June 13, 2020

ಹೊತ್ತಿತೋ ಹೊತ್ತಿತು ಕನ್ನಡದ ದೀಪ.......

ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ
ಹೊತ್ತಿತೋ.. ಹೊತ್ತಿತು…ಕನ್ನಡದ ದೀಪ

ಕಣ್ಣು ಕುಕ್ಕಿಸುವಂತೆ ದೇದೀಪ್ಯಮಾನ
ಹರ್ಷ ಉಕ್ಕಿಸುವಂತೆ ಶೋಭಾಯಮಾನ
ಕನ್ನಡದ ಮನೆಯಾಗೇ ಜ್ಯೋತಿರ್ನಿಧಾನ
ಕನ್ನಡದ ಪ್ರಾಣ ಕನ್ನಡದ ಮಾನ

ಉರಿವವರು ಬೇಕಿನ್ನು ಇದರೆಣ್ಣೆಯಾಗಿ
ಸುಡುವವರು ಬೇಕಿನ್ನು ನಿಡುಬತ್ತಿಯಾಗಿ
ಧರಿಸುವವರು ಬೇಕಿನ್ನು ಸಿರಿಹಣತೆಯಾಗಿ
ನಮ್ಮೀ ಉಸಿರಾಗಿ ಧರ್ಮಕ್ಕೆ ಬಾಗಿ

ಚಿರಕಾಲ ಬೆಳಗಲಿ ಕನ್ನಡದ ದೀಪ
ಜನಕೆಲ್ಲ ಬೆಳಕಾಗಿ ಪುಣ್ಯ ಪ್ರದೀಪ
ಭಾರತಕೆ ಬಲವಾಗಿ ಭವ್ಯ ಪ್ರದೀಪ
ಕಳೆಯುತ್ತ ತಾಪ , ಬೆಳೆಸುತ್ತ ಸೈಪ

                                            - ಡಾ.ಸಿದ್ದಯ್ಯ ಪುರಾಣಿಕ  

ಕಟ್ಟುವೆವು ನಾವು......

ಕಟ್ಟುವೆವು ನಾವು ಹೊಸ ನಾಡೊಂದನು, - ರಸದ
                                              ಬೀಡೊಂದನು

ಹೊಸನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ,
ಹರೆಯದೀ ಮಾಂತ್ರಿಕನ ಮಾಟ ಮುಸುಳುವ ಮುನ್ನ,
ಉತ್ಸಾಹಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ಧ ಸಾಗರವು ಬತ್ತಿ ಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು!

                      ನಮ್ಮೆದೆಯ ಕನಸುಗಳೇ ಕಾಮಧೇನು
                      ಆದಾವು, ಕರೆದಾವು ವಾ೦ಛಿತವನು;
                      ಕರೆವ ಕೈಗಿಹುದೋ ಕನಸುಗಳ ಹರಕೆ;
                      ಗುರಿ ತಪ್ಪದೊಮ್ಮುಖದ ಬಯಕೆ ಬೆಂಬಲಕೆ!

ಜಾತಿ ಮತ ಭೇದಗಳ ಕಂದಕವು ಸುತ್ತಲೂ,
ದುರ್ಭೇದ್ಯವೆನೆ ಕೋಟೆಕೊತ್ತಲಗಳು;
ರೂಢಿರಾಕ್ಷಸನರಸುಗೈಯುವನು, ತೊಳ್ತಟ್ಟಿ
ತೊಡೆತಟ್ಟಿ, ಕರೆಯುವನು ಸಂಗ್ರಾಮಕೆ!

                      ನಾವು ಹಿಂದೆಗೆವೆವೇ? ವೀರ ತರುಣರು ನಾವು!
                      ಒಂದೆ ನೆಗೆತಕೆ ನೆಗೆವೆವೋ ಕಂದಕವನು,
                      ಕುಟ್ಟಿ ಪುಡಿಮಾಡುವೆವು ಕೋಟೆಗಳನು,
                      ಎದೆಯು ಮೆಟ್ಟಿ ಮುರಿಯುವೆವಸುರರಟ್ಟೆಗಳನು!

ಕೋಟೆಗೋಡೆಗೆ  ನಮ್ಮ  ಹೆಣಗಳೇ ಮೆಟ್ಟಿಲು,
ನಮ್ಮ ಸಾವೇ ನೋವೆ ಹೊಸ ನಾಡ ತೊಟ್ಟಿಲು
ಆದಾವು; ಅಂಜುವೆದೆ ನಮ್ಮದಲ್ಲ;
ಸೋಲುಬಗೆ ವೀರನಿಗೆ ಸಲ್ಲ, ಹೊಲ್ಲ!

                      ಎಡರುಗಳ ಕಡಲುಗಳನೀಸಿ ಬರುವೆವು, ಘೋರ
                      ನೈರಾಶ್ಯದಗ್ನಿಮುಖದಲ್ಲು ಕೂಡ
                      ಹೊಕ್ಕು ಹೊರಡುವೆವೆಲ್ಲ ತೊಡಕುಗಳ ಒಡಕುಗಳ
                      ಬಿಡಿಸಿ, ಇಡಿಗೊಳಿಸಿ ಕಟ್ಟುವೆವು ನಾಡ!

ಇಂದು ಬಾಳಿದು ಕೂಳ ಕಾಳಗವು; ಹೊಟ್ಟೆಯೇ
ಕೇಂದ್ರವಾಗಿದೆ ನರನ ಜೀವಿತಕ್ಕೆ;
ಅನ್ನದನ್ಯಾಯದಾವಾಗ್ನಿಯಲಿ ಕರಗುತಿದೆ
ನರತೆ, ಸಂಸ್ಕೃತಿ, ಪ್ರೀತಿ, ದಿವದ ಬಯಕೆ!

                      ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ
                      ಸಮಬಗೆಯ ಸಮಸುಖದ ಸಮದುಃಖದ
                      ಸಾಮರಸ್ಯದ ಸಾಮಗಾನಲಹರಿಯ ಮೇಲೆ
                      ತೇಲಿ ಬರಲಿದೆ ನೋಡು, ನಮ್ಮ ನಾಡು!

ಇಲ್ಲೇ ಈ ಎಡೆಯಲ್ಲೆ, ನಮ್ಮ ಮುಂಗಡೆಯಲ್ಲೆ,
ಅಳಲುಗಳ ಹೆಡೆಯಲ್ಲೆ,
ಸೋಲುಗಳ ತೊಡೆಯಲ್ಲೆ
ಅರಳೀತು ನಮ್ಮ ನಾಡು;
ನಮ್ಮೆದೆಯ ತುಂಬಿರುವ ಅದರ ನರುಗಂಪು ಹೊರ
ಹೊಮ್ಮುವುದ ಕಾದು ನೋಡು!

                      ಉತ್ಸಾಹ ಉದ್ವೇಗ ಉದ್ರೇಕಗಳ ವೀರ
                      ಯುವಜನದ ನಾಡ ಗುಡಿಯು;
                      ಅದರ ಹಾರಾಟಕ್ಕೆ ಬಾನೆ ಗಡಿಯು,
                      ಬರಲು ಬಿಡೆವೆಂದಿಗೂ ಅದಕೆ ತಡೆಯು!
                      ತಡೆವವರು ಬನ್ನಿರೋ, ಹೊಡೆವವರು ಬನ್ನಿರೋ
                      ಕೆಡೆನುಡಿವ ಕೆಡೆಬಗೆವ ಕೆಡುಕು ಜನರೇ ಬನ್ನಿ!
                      ಕೊಟ್ಟೆವಿದೋ ವೀಳೆಯವನು;
                      ನಿಮ್ಮೆಲರನು ತೊಡೆದು ನಿಮ್ಮ ಮಸಣದ ಮೇಲೆ
                      ಕಟ್ಟುವೆವು ನಾವು ಹೊಸ ನಾಡೊಂದನು, - ಸುಖದ
                                                                     ಬೀಡೊಂದನು

                                                            - ಮೊಗೇರಿ ಗೋಪಾಲಕೃಷ್ಣ ಅಡಿಗ  

ನಿನ್ನ ಕಂಗಳ ಕೊಳದಿ.....

ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ
ನನ್ನೆದೆಯ ಕಡಲೇಕೆ ಬೀಗುತಿಹುದು?
ಸೂಜಿಗಲ್ಲಾಗಿರುವೆ ಸೆಳೆದು ನಿನ್ನಯ ಕಡೆಗೆ
ಗರಿಗೆದರಿ ಕನಸುಗಳು ಕಾಡುತಿಹುದು.

ಎದೆಗೆ ತಾಪದ ಉಸಿರು
ತೀಡಿ ತರುತಿದೆ ಅಲರು
ನಿನ್ನ ಹುಣ್ಣಿಮೆ ನಗೆಯು ಛೇಡಿಸಿಹುದು
ಬಳಿಗೆ ಬಾರದೆ ನಿಂತೆ
ಹೃದಯ ತುಂಬಿದೆ ಚಿಂತೆ
ಜೀವ ನಿನ್ನಾಸರೆಗೆ ಕಾಯುತಿಹುದು.

ನಾನೊಂದು ದಡದಲ್ಲಿ
ನೀನೊಂದು ದಡದಲ್ಲಿ
ನಡುವೆ ಮೈಚಾಚಿರುವ ವಿರಹದಳಲು
ಯಾವ ದೋಣಿಯು ತೇಲಿ
ಎಂದು ಬರುವುದೋ ಕಾಣೆ
ನೀನಿರುವ ಬಳಿಯಲ್ಲಿ ನನ್ನ ಬಿಡಲು

                                        - ಎಮ್. ಎನ್. ವ್ಯಾಸ ರಾವ್  

ಬದುಕು ಮಾಯೆಯ ಮಾಟ

  ಬದುಕು ಮಾಯೆಯ ಮಾಟ
ಮಾತು ನೊರೆ-ತೆರೆಯಾಟ
ಜೀವ ಮೌನದ ತುಂಬ ಗುಂಬ ಮುನ್ನೀರು
ಕರುಣೋದಯದ ಕೂಡ
ಅರುಣೋದಯವು ಇರಲು
ಎದೆಯ ತುಂಬುತ್ತಲಿದೆ ಹೊಚ್ಚ ಹೊನ್ನೀರು

ನಿಜದಲ್ಲೆ ಒಲವಿರಲಿ
ಚೆಲುವಿನಲೆ ನಲಿವಿರಲಿ
ಒಳಿತಿನಲೆ ಬಲವಿರಲಿ ಜೀವಕೆಳೆಯಾ
ದೇವ ಜೀವನ ಕೇಂದ್ರ
ಒಬ್ಬೊಬ್ಬನು ಇಂದ್ರ
ಏನಿದ್ದರು ಎಲ್ಲ ಎಲ್ಲೆ ತಿಳಿಯಾ.

ಆತನಾಕೆಯೆ ನಮ್ಮ
ಜೀವನೌಕೆಯ ತಮ್ಮ
ಧ್ರುವ ಮರೆಯದಂತೆ ನಡೆಸುತ್ತಲಿರಲಿ
ಈ ನಾನು ಆ ನೀನು
ಒಂದೆ ತಾನಿನ ತಾನು
ತಾಳಲಯ ರಾಗಗಳು ಸಹಜ ಬರಲಿ

                                      - ಅಂಬಿಕಾತನಯದತ್ತ     

ಪಾತರಗಿತ್ತೀ ಪಕ್ಕಾ.......

ಪಾತರಗಿತ್ತೀ ಪಕ್ಕಾ
ನೋಡೀದೇನS  ಅಕ್ಕಾ!  ॥ ಪ ॥


ಹಸಿರು ಹಚ್ಚಿ ಚುಚ್ಚಿ
ಮೇಲSಕರಿಸಿಣ ಹಚ್ಚಿ,

ಹೊನ್ನ ಚಿಕ್ಕಿ ಚಿಕ್ಕಿ
ಇಟ್ಟು ಬೆಳ್ಳೀ ಅಕ್ಕಿ,

ಸುತ್ತೂ ಕುಂಕುಮದೆಳಿ
ಎಳೆದು ಕಾಡಿಗೆ ಸುಳಿ,

ಗಾಳೀ ಕೆನೀಲೇನS
ಮಾಡಿದ್ದಾರ ತಾನ!
೫  
ನೂರು ಆರು ಪಾರು
ಯಾರು ಮಾಡಿದ್ದಾರು!

ಏನು ಬಣ್ಣ ಬಣ್ಣ
ನಡುವೆ ನವಿಲಗಣ್ಣ!

ರೇಶಿಮೆ ಪಕ್ಕ ನಯ
ಮುಟ್ಟಲಾರೆ ಭಯ!

ಹೂವಿನ ಪಕಳಿಗಿಂತ
ತಿಳಿವು ತಿಳಿವು ಅಂತ?

ಹೂವಿಗೆ ಹೋಗಿ ತಾವ
ಗಲ್ಲಾ ತಿವಿತಾವ,
೧೦
ಬನ ಬನದಾಗ ಆಡಿ
ಪಕ್ಕಾ ಹುಡಿ ಹುಡಿ;
೧೧
ಹುಲ್ಲುಗಾವುಲದಾಗ
ಹಳ್ಳೀಹುಡುಗೀ ಹಾಂಗ -
೧೨
ಹುಡದೀ ಹುಡದೀ ಭಾಳ
ಆಟಕ್ಕಿಲ್ಲ ತಾಳ.
೧೩
ಕಿರೇ ಸೂರೇ ಪಾನ.
ದಲ್ಲಿ ಧೂಳಿಸ್ನಾನ.
೧೪
ತುರುಬಿ ತುಂಬಿ ತೋಟ -
ದಲ್ಲಿ ದಿನದ ಊಟ.
೧೫
ಕಳ್ಳಿ ಹೂವ ಕಡಿದು
ಹೂತುಟಿನೀರ ಕುಡಿದು;
೧೬
ನಾಯಿ ಛತ್ತರಿಗ್ಯಾಗ
ಕೂತು ಮೊಜಿನ್ಯಾಗ,
೧೭
ರುದ್ರಗಂಟಿ ಮೂಸಿ
ವಿಷ್ಣುಗಂಟಿ ಹಾಸಿ,
೧೮
ಹೇಸಿಗೆ ಹೂವ ಬಳಿಗೆ
ಹೋಗಿ ಒಂದSಗಳಿಗೆ,
೧೯
ಮದಗುಣಿಕಿಯ ಮದ್ದು 
ಹುರುಪಿಗಿಷ್ಟು ಮೆದ್ದು,
೨೦
ಕಾಡ ಗಿಡ ಗಂಟಿ
ಅಂಚಿಗಂಟಿ ಗಿಂಟಿ,
೨೧ 
ಸೀಗಿಬಳ್ಳಿ ತಾಗಿ 
ಪಕ್ಕಾ ಬೆಳ್ಳಗಾಗಿ,
೨೨  
ಗೊರಟಿಗೆಗೆ ಶರಣ 
ಮಾಡಿ ದೂರಿಂದSನ 
೨೩
ಮಾಲಿಂಗನ ಬಳ್ಳಿ 
ತೂಗೂ ಮಂಚದಲ್ಲಿ,
೨೪  
ತೂಗಿ ತೂಗಿ ತೂಗಿ 
ದಣಿದ್ಹಾಂಗ ಆಗಿ,
೨೫ 
ಬೇಲೀ ಬಳ್ಳಿಯೊಳಗ 
ಅದರ ನೆರಳ ತೆಳಗ 
೨೬ 
ನಿದ್ದಿಗುಳ್ಯಾಡಿ 
ಪಗಡಿ ಪಕ್ಕಾ ಆಡಿ,
೨೭  
ಗುಲಬಾಕ್ಷಿಯ ಹೂವ 
ಕುಶಲ ಕೇಳತಾವ;
೨೮ 
ಹುಡಿಯ ನೀರಿನ್ಯಾಗ 
ತುಳಕಿಸುತ್ತ ಬ್ಯಾಗ 
೨೯ 
ಹಡಿಯೆ ಬೀಜ ಗಂಡು 
ಹಾರಹರಿಕಿ ಅಂದು,
೩೦  
ಅಡವಿ ಮಲ್ಲಿಗಿ ಕಂಡು 
ಅದರ ಕಂಪನುಂಡು,
೩೧  
ಹುಲ್ಲ ಹೊಲಕ ಬಂದು 
ಗುಬ್ಬಿ ಬೆಳಸಿ ತಿಂದು,
೩೨ 
ಇಷ್ಟು ಎಲ್ಲಾ ಮಾಡಿ 
ಸಪ್ಪಳಿಲ್ಲದಾಡಿ,
೩೩ 
ತಾಳ ಚವ್ವ ಚಕ್ಕ 
ಕುಣಿತ ತಕ್ಕ ತಕ್ಕ;
೩೪ 
ಆಸಿ ಹಚ್ಚಿ ಹ್ಯಾಂಗ 
ಕಂಡು ಸಿಕ್ಕಧಾಂಗ 
೩೫ 
ಸಿಕ್ಕಲ್ಲೋಡತಾವ
ಅಲ್ಯೂ ಇಲ್ಯೂ ಅವS. 
೩೬ 
ಕಾಣದೆಲ್ಲೋ ಮೂಡಿ 
ಬಂದು ಗಾಳಿ ಗೂಡಿ,
೩೭ 
ಇನ್ನು ಎಲ್ಲಿಗೋಟ?
ನಂದನದ ತೋಟ!

                                                  - ಅಂಬಿಕಾತನಯದತ್ತ   

ಕೊಲ್ಲುವುದಾದರೆ ಕೊಂದುಬಿಡು......

ಕೊಲ್ಲುವುದಾದರೆ ಕೊಂದುಬಿಡು ಹೀಗೆ ಕಾಡಬೇಡ
ಗಾಯಗೊಂಡಿರುವ ಹೃದಯವಿದು ಚೆಲ್ಲಾಟವಾಡಬೇಡ.

ದುಂದಿಯು ಧಗ ಧಗ ಧಗ ಉರಿದಂತೆ
ಅಂದು ನಿನ್ನ ಪ್ರೀತಿ
ಹೆಪ್ಪುಗಟ್ಟಿರುವ ಹಿಮದಂತೆ
ಇಂದು ನಿನ್ನ ರೀತಿ.

ಕಾಳಾಗದೆ ನಿನ್ನಾಳದ ಪ್ರೀತಿ
ಆಯಿತೇ ಬರೀ ಜೊಳ್ಳು ಹೇಳು
ಪ್ರೀತಿಯ ಸೇತುವೆಯಂತೆ ತೋರಿ
ಮರೆಯಾಯಿತೆ ಮಳೆಬಿಲ್ಲು.

ಇನ್ನೂ ಏಕೀ ಮುಚ್ಹುಮರೆ
ತೆರೆಗಳ ನೀ ಸರಿಸು
ತೊರೆಯುವುದಾದರೆ ತೊರೆದುಬಿಡು
ಇಲ್ಲವೇ ಸ್ವೀಕರಿಸು.

                                            -  ಬಿ ಆರ್ ಲಕ್ಷ್ಮಣರಾವ್


ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ .....

ರಚನೆ; ಕೆ.ಸ್. ನಿಸಾರ್ ಅಹಮದ್ 


ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ........

ನಿನ್ನ ಜೊತೆಯಿಲ್ಲ,ದೆ ಮಾತಿಲ್ಲದೆ ಮನ ವಿಭ್ರಾಂತ.


ಕಣ್ಣನೆ ದಣಿಸುವ ಈ ಪಡುವಣ ಬಾನ್ ಬಣ್ಣಗಳು,

ಮಣ್ಣನೆ ಹೊನ್ನಿನ ಹಣ್ಣಾಗಿಸುವೀ ಕಿರಣಗಳು,

ಹಚ್ಚನೆ ಹಸುರಿಗೆ ಹಸೆಯಿಡುತಿರುವೀ ಖಗ ಗಾನ -

ಚಿನ್ನ, ನೀನಿಲ್ಲದೆ ಬಿಮ್ಮೆನ್ನುತಿದೆ ರಮ್ಯೋದ್ಯಾನ.


ಆಸೆಗಳ ಹಿಂಡಿನ ತುಳಿತಕ್ಕೆ ಹೊಲ ನನ್ನೀ ದೇಹ;  

ಬರುವೆಯೋ, ಬಾರೆಯೋ ನೀನೆನ್ನುತಿದೆ ಹಾ! ಸಂದೇಹ.

ಮುತ್ತಿದಾಲಸ್ಯವ ಬಿಗಿ ಮೌನವ ಹೊಡೆದೋಡಿಸು ಬಾ!

ಮತ್ತೆ ಆ ಸಮತೆಯ ಹಿರಿ ಬೇಲಿಯ ಸರಿ ನಿಲ್ಲಿಸು ಬಾ!


ಬಣ್ಣ ಕಳೆದೊಡವೆಯ ತೆರ ಮಾಸುತಲಿದೆ ಸೂರ್ಯಾಸ್ತ;

ನೋಡಗೋ! ತಿಮಿರದ ಬಲೆ ಬೀಸಿದ ಇರುಳಿನ ಬೆಸ್ತ.

ವೆಚ್ಚವಾಗುತ್ತಿದೆ ಸವಿ ಚಣಗಳ ಧನ ದುಂದಾಗಿ;

ನಲಿವಿನ ಗಳಿಕೆಗೆ ಬಳಸವುಗಳನೊಂದೊಂದಾಗಿ.


ನನ್ನ ನಲವಿನ ಬಳ್ಳಿ.....

ನನ್ನ ನಲವಿನ ಬಳ್ಳಿ ಮೈದುಂಬಿ ನಲಿವಾಗ
ಲೋಕವೆ, ಹೀರದಿರು ದುಂಬಿಯೊಲು ಹೂವ;
ಬಾಳಿನ ಕಷ್ಟಗಳ ಬಲು ಘೋರ ಪಯಣದಲಿ
ಚಣದೊಂದೆ ಕನಸಿದುವೆ, ಬೆರೆಸದಿರು ನೋವ.

                                          ನನ್ನ ನಲವಿನ ಬಳ್ಳಿ.....

ಸವಿ ಸುಖದೀ ಗಳಿಗೆ ಬಂದು ಮೆಲ್ಲಗೆ ಬಳಿಗೆ
ಪಲ್ಲವಿಸುತಿದೆ ಎದೆಯ ಚೈತ್ರದಂತೆ;
ಇಂದು ನಾ ಮೈ ಮರೆತು ಒಲೆಯುವೆ ಸೊಗ ಬೆರೆತು,
ಆಸೆಗಳ ಚಿವುಟದಿರು ಹಕ್ಕಿಯಂತೆ.

                                          ನನ್ನ ನಲವಿನ ಬಳ್ಳಿ.....

ಆಗಸಕೆ ಎಸೆದಿರುವ ಕಲ್ಲಿನಂತೇರುವೆನು,
ಗಾಳಿಯಲಿ ತೇಲುವೆನು - ಗಂಧದಂತೆ;
ಮತ್ತೆ ಬೀಳುವೆನಿಲ್ಲೆ, ಚಿಂತೆಗಳ ಕೆಸರಲ್ಲೆ -
ಬಿಟ್ಟುಬಿಡು ಈಗೆನ್ನ ಮುಕ್ತನಂತೆ.

                                          ನನ್ನ ನಲವಿನ ಬಳ್ಳಿ.....

                                                                                 - ಕೆ. ಎಸ್. ನಿಸಾರ್ ಅಹಮದ್ 


ಎಲ್ಲ ಮರೆತಿರುವಾಗ...

ಎಲ್ಲ ಮರೆತಿರುವಾಗ ಇಲ್ಲಸಲ್ಲದ ನೆವವ
ಹೂಡಿ ಬರದಿರು ಮತ್ತೆ ಹಳೆಯ ನೆನಪೇ
ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ
ರಾಡಿಗೊಳಿಸುವೆಯೇಕೆ ಮಧುರ ನೆನಪೇ

ಕಪ್ಪು ಕಣ್ಣಿನ ನೆಟ್ಟ ನೋಟದರೆಚಣದಲ್ಲಿ
ತೊಟ್ಟ ಬಾಣದ ಹಾಗೆ ಬಾರದಿರು ನೆನಪೇ
ಬಿರಿದ ತುಟಿಗಳ ತುಂಬು ನಗೆಯ ಕಾರಣವನ್ನ
ಹಿರಿದು ಕೊಲ್ಲಲು ಬಳಿಗೆ ಬಾರದಿರು ನೆನಪೇ ||

ಸತ್ತ ಭೂತವನೆತ್ತಿ ಹದ್ದಿನಂದದಿ ತಂದು
ನನ್ನ ಮನದಂಗಳಕೆ ಹಾಕದಿರು ನೆನಪೇ
ಭವ್ಯ ಭವಿತವ್ಯಕ್ಕೆ ಮೊಗ ಮಾಡಿ ನಿಂತಿರುವ
ಬೆನ್ನಲ್ಲೇ ಇರಿಯದಿರು ಓ ಜಾಣ ನೆನಪೇ ||

                                                    - ಕೆ. ಎಸ್. ನಿಸಾರ್ ಅಹಮದ್   

ನಿತ್ಯೋತ್ಸವ.....

ರಚನೆ; ಕೆ. ಸ್. ನಿಸಾರ್ ಅಹಮದ್ 

ಜೋಗದ ಸಿರಿ ಬೆಳಕಿನಲ್ಲಿ,

ತುಂಗೆಯ ತೆನೆ ಬಳುಕಿನಲ್ಲಿ,

ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ,

ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ,ನಿತ್ಯೋತ್ಸವ,

ತಾಯಿ, ನಿತ್ಯೋತ್ಸವ, ನಿನಗೆ......

ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ, 

ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ,

ಓಲೆಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲಿ 

ನಿತ್ಯೋತ್ಸವ, ತಾಯಿ, ನಿತ್ಯೋತ್ಸವ, ನಿನಗೆ......

 ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ,

ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ,

ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ

ನಿತ್ಯೋತ್ಸವ, ತಾಯಿ, ನಿತ್ಯೋತ್ಸವ, ನಿನಗೆ......    


ಎವರೆಸ್ಟ್ ಗೆಲುವಿನ ನೆನಪು

# ಜಗತ್ತಿನ ಮಹೋನ್ನತ ಶಿಖರ ಮೌಂಟ್ ಎವರೆಸ್ಟ್ ಅನ್ನು ಏರಿದ ದಿನ ಇಂದು.
* ಅರವತ್ತಆರು ವರ್ಷಗಳ ಹಿಂದೆ 1953ರ ಮೇ 29ರಂದು ನ್ಯೂಜಿಲೆಂಡಿನ ಎಡ್ಮಂಡ್ ಹಿಲರಿ ಹಾಗೂ ನೇಪಾಳ-ಭಾರತ ಎರಡೂ ದೇಶಕ್ಕೆ ಸೇರಿದ ಶೆರ್ಪಾ ತೇನ್‌ಸಿಂಗ್ ನೋರ್ಗೆ 29 ಸಾವಿರ ಅಡಿಗೂ ಹೆಚ್ಚು ಎತ್ತರವಿದ್ದ ಈ ಮಂಜಿನ ಪರ್ವತವನ್ನು ವಶಪಡಿಸಿಕೊಂಡರು.
* ಮನುಷ್ಯನ ಇಚ್ಛಾಶಕ್ತಿಯೆದುರು ಅಂದು ಮಣಿದ ಎವರೆಸ್ಟ್‌ನ ಕತೆ ಕ್ರೀಡಾ ಜಗತ್ತಿನ ಒಂದು ಮಹೋನ್ನತ ಸಾಹಸದ ಕಥನವೂ ಹೌದು.

★ ಮೌಂಟ್ ಎವರೆಸ್ಟ್

# ಮೌಂಟ್ ಎವರೆಸ್ಟ್ ಹಿಮಾಲಯದಲ್ಲಿರುವ ಮಹಾಲಂಗೂರ (Mahalangur) ಎನ್ನುವ ವಿಭಾಗದಲ್ಲಿದೆ.
* ಇದು ಚೀನಾ ಮತ್ತು ನೇಪಾಳ ಗಡಿಯಲ್ಲಿದ್ದು, ದಕ್ಷಿಣ ಚೀನಾ, ಮದ್ಯ ಟಿಬೇಟ್ ಮತ್ತು ಈಶಾನ್ಯ ನೇಪಾಳವನ್ನು ಪ್ರತ್ಯೇಕಿಸುತ್ತದೆ.

# ಮೌಂಟ್ ಎವರೆಸ್ಟ್ 60 ಮಿಲಿಯನ್ ವರ್ಷಗಳ ಹಿಂದೆಯೆ ಸೃಷ್ಠಿಯಾಗಿರಬಹುದೆಂದು ಅಂದಾಜಿಸಲಾಗಿದೆ.

# 1865 ಕ್ಕೂ ಮೊದಲು ಮೌಂಟ್ ಎವರೆಸ್ಟ್ ನ್ನು ಫೀಕ್ 15 (Peak 15) ಎಂದು ಕರೆಯಲಾಗುತ್ತಿತ್ತು.
# 1865 ರಲ್ಲಿ ಬ್ರಿಟೀಷ ಸರಕಾರ, ಭಾರತದ ಸರ್ವೇಯರ್ ಜನರಲ್ ಆಗಿದ್ದ ಜಾರ್ಜ್ ಎವರೆಸ್ಟ್ ಅವರ ಹೆಸರಿನಿಂದ ಈ ಪರ್ವತಕ್ಕೆ - ಮೌಂಟ್ ಎವರೆಸ್ಟ್ ಎಂದು ಮರುನಾಮಕರಣ ಮಾಡಲಾಯಿತು.
# ಮೌಂಟ್ ಎವರೆಸ್ಟ್ ನ್ನು ನೇಪಾಳದಲ್ಲಿ - “ ಸಾಗರ ಮಾಥಾ” ಎಂದು ಕರೆದರೆ ಟಿಬೇಟ್ ಭಾಗದಲ್ಲಿ ಜನರು ಇದನ್ನು - "ಚೋಮೋಲುಂಗ್ಮಾ" ಎಂದು ಕರೆಯುತ್ತಾರೆ.

# ಮೌಂಟ್ ಎವರೆಸ್ಟ್ ಭೂಮಿಯ ಮೇಲೆ ಸಮುದ್ರ ಮಟ್ಟದಿಂದ ಇರುವ ಅತ್ಯಂತ ಎತ್ತರದ ಪರ್ವತ ಶಿಖರ
ಇದರ ಎತ್ತರ - 8848 ಮೀಟರ್ (29,029 ಅಡಿ)

# 1855 ರಲ್ಲಿ ಎವರೆಸ್ಟ್‌ನ ಎತ್ತರವನ್ನು ಅಳೆಯಲಾಗಿತ್ತು.
* ಭಾರತೀಯ ಸರ್ವೇಕ್ಷಣಾ ಇಲಾಖೆ ಮಾತ್ರವಲ್ಲದೆ, ಇತರರು ಕೂಡಾ ಇದರ ಎತ್ತರ ಅಳೆದಿದ್ದರು.
* ಆದರೆ ಇಲಾಖೆಯ ಬಳಿಯಲ್ಲಿರುವ ಮಾಹಿತಿಯೇ ನಿಖರವಾಗಿದೆ.
* ಅದರ ಪ್ರಕಾರ ಎವರೆಸ್ಟ್‌ ಪರ್ವತ 8848 ಮೀಟರ್ (29,028 ಅಡಿ) ಎತ್ತರವಿದೆ ಎಂದು ತಿಳಿಸಿದ್ದಾರೆ.

# ಮೌಂಟ್​ ಎವರೆಸ್ಟ್ ಎತ್ತರವನ್ನು ಮತ್ತೊಮ್ಮೆ ಅಳತೆ ಮಾಡಲು ನೇಪಾಳ ನಿರ್ಧರಿಸಿದೆ.
* 2015ರಲ್ಲಿ ನೇಪಾಳದಲ್ಲಿ ಭೂಕಂಪ ಸಂಭವಿಸಿದ್ದರಿಂದ ​ ಎತ್ತರ ಕೊಂಚ ಕಡಿಮೆಯಾಗಿದೆ ಅಂತಾ ವಿಜ್ಞಾನಿಗಳು ಸಂಶಯ ವ್ಯಕ್ತಪಡಿಸಿದ್ದರು. ಹೀಗಾಗಿ ನೇಪಾಳ ಸರ್ಕಾರ ಎತ್ತರ ಅಳತೆ ಮಾಡಲು ನುರಿತ ಪರ್ವತಾರೋಹಿಗಳ ತಂಡವನ್ನು ನೇಮಿಸಿದೆ.

ಆರ್ಯ ಮತ್ತು ದ್ರಾವಿಡ ನಡುವಿನ ವ್ಯತ್ಯಾಸವೇನು?

  ಮೊದಲಿಗೆ ಈ ಪದಗಳ ಪರಿಚಯ ನೋಡೋಣ. ಆರ್ಯ  ಅನ್ನೋದು ಉತ್ತಮ/ದೊಡ್ಡವರು ಎಂಬ ಅರ್ಥ ನೀಡುತ್ತದೆ  ಅಷ್ಟೇ.  ಉತ್ತಮ ಕುಲದಲ್ಲಿ ಹುಟ್ಟಿದವನು, ಯಜಮಾನ, ಹಿಡಿದ ಕೆಲಸವನ್ನು ಬಿಡ...