Wednesday, June 3, 2020

ಗೋವಾ ರಾಜ್ಯ ಅಸ್ತಿತ್ವಕ್ಕೆ ಬಂದ ದಿನ

ಮೇ 30, 2020 ರಂದು ಗೋವಾ ರಾಜ್ಯ ಅಸ್ತಿತ್ವಕ್ಕೆ ಬಂದ ದಿನವನ್ನು ಆಚರಿಸಿತು.  
* ಭಾರತದ ಒಕ್ಕೂಟಕ್ಕೆ ಸೇರ್ಪಡೆಯಾದ 25 ನೇ ರಾಜ್ಯವಾಗಿ.

● ಇತಿಹಾಸ

# ಆಗಸ್ಟ್ 15, 1947 ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಪೋರ್ಚುಗೀಸರು ತಮ್ಮ ಅಧೀನದಲ್ಲಿರುವ ಭೂಪ್ರದೇಶವನ್ನು ಬಿಟ್ಟುಕೊಡಲು ನಿರಾಕರಿಸಿದರು.  
* 1961 ರಲ್ಲಿ ಭಾರತ ಸರ್ಕಾರವು ಆಪರೇಷನ್ ವಿಜಯ್ ಎಂಬ ಭಾರತಿ ಸೀರಿಯಲ್ ಕಾರ್ಯಚರಣೆ ಮೂಲಕ ಪೋರ್ಚುಗೀಸರಿಂದ - ದಿಯು ದಮನ್ ಮತ್ತು ಗೋವುವನ್ನು ವಶಪಡಿಸಿಕೊಂಡಿತು.
ನಂತರ ದಿಯು ದಮನ್ ಮತ್ತು ಗೋವು ಕೇಂದ್ರಾಡಳಿತ ಪ್ರದೇಶವಾಗಿದ್ದುವು.

# ಮೇ 30, 1987 ರಂದು ಈ ಪ್ರದೇಶವನ್ನು ವಿಭಜಿಸುವುದರ ಮೂಲಕ ಗೋವವು ಭಾರತದ 25 ನೇ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದಿತು.
* ದಿಯು ಮತ್ತು ದಾಮನ್ ಕೇಂದ್ರಾಡಳಿತ ಪ್ರದೇಶವಾಗಿ ಉಳಿಯಿತು.

★ ವಿವಾದ

# ಗೋವಾ ರಚನೆಯಾದಂತೆ ಗೋವಾವನ್ನು ಮಹಾರಾಷ್ಟ್ರ ಅಥವಾ ಮೈಸೂರಿನೊಂದಿಗೆ ವಿಲೀನಗೊಳಿಸಬೇಕು ಎಂಬ ವಿವಾದಗಳು ಹುಟ್ಟಿಕೊಂಡವು.  
* ನಂತರ 1967 ರಲ್ಲಿ ಜನರ ಅಭಿಪ್ರಾಯ ಸಂಗ್ರಹವನ್ನು ನಡೆಸಲಾಯಿತು ಜನರ ಅಭಿಪ್ರಾಯದಂತೆ ಗೋವನ್ನು ರಾಜ್ಯವಾಗಿ, ದಿಯು ಮತ್ತು ದಾಮನ್ ಕೇಂದ್ರದ ಪ್ರದೇಶವಾಗಿ ರಚಿಸಲಾಯಿತು. 

★ ಇತಿಹಾಸದಲ್ಲಿ ಗೋವಾದ ಪಾತ್ರ

# ಗೋವಾ 1370 ರಲ್ಲಿ ವಿಜಯನಗರ ಸಾಮ್ರಾಜ್ಯದ ಒಂದು ಭಾಗವಾಗಿತ್ತು ಮತ್ತು ನಂತರ ಬಿಜಾಪುರ ಸುಲ್ತಾನರ ಭಾಗವಾಗಿತ್ತು.

★ ಗೋವಾದಲ್ಲಿ ಪೋರ್ಚುಗೀಸ್

# ಪೋರ್ಚುಗೀಸರು 1510 ರಲ್ಲಿ ಅಫೊನ್ಸೊ ಡಿ ಅಲ್ಬುಕರ್ಕ್ ನೇತೃತ್ವದಲ್ಲಿ ಗೋವಾವನ್ನು ವಶಪಡಿಸಿಕೊಂಡರು.  
* ಅವರು ಗೋವಾವನ್ನು ವಶಪಡಿಸಿಕೊಂಡಂತೆ, ಅವರು ಮಸಾಲೆ ವ್ಯಾಪಾರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು.

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...