Wednesday, June 3, 2020

ರಾಷ್ಟ್ರೀಯ ದಿನಾಚರಣೆ ಮತ್ತು ಮಹತ್ವ

1.ಜನವರಿ - 24 : "ರಾಷ್ಟ್ರೀಯ ಹೆಣ್ಣು ಮಗುವಿನ ದಿನ" 
# ಜನವರಿ 24, 1966 ಭಾರತದ ಪ್ರಥಮ ಮಹಿಳಾ ಪ್ರಧಾನಮಂತ್ರಿ ಇಂದಿರಾಗಾಂಧಿ ಅಧಿಕಾರ ವಹಿಸಿಕೊಂಡ ದಿನದ ಸ್ಮರಣಾರ್ಥ ಯು.ಪಿ.ಎ. ಸರ್ಕಾರ 2009 ರಿಂದ ಈ ದಿನವನ್ನು ಆಚರಿಸುತ್ತಿದೆ.

2. ಫೆಬ್ರವರಿ - 28 : "ರಾಷ್ಟ್ರೀಯ ವಿಜ್ಞಾನ ದಿನಾಚರಣೆ" 
# ಸರ್. ಸಿ.ವಿ. ರಾಮನ್ ನೊಬೆಲ್ ಪ್ರಶಸ್ತಿ ಗಳಿಸಿದ ತಮ್ಮ ಸಂಶೋಧನೆಯನ್ನು ಮೊಟ್ಟ ಮೊದಲ ಬಾರಿಗೆ ಜಗತ್ತಿಗೆ ಪ್ರಸ್ತುತಪಡಿಸಿದ ದಿನದ ನೆನಪಿಗಾಗಿ ರಾಷ್ಟ್ರೀಯ ವಿಜ್ಞಾನ ದಿನದ ಆಚರಣೆ.
* ಇದನ್ನು ಫೆಬ್ರವರಿ 28, 1928 ರಂದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಆವರಣದಲ್ಲಿ ಪ್ರಸ್ತುತಪಡಿಸಿದ್ದರು. 
* ನಂತರ 1930 ರಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ಇವರಿಗೆ ನೊಬೆಲ್ ಪ್ರಶಸ್ತಿ ದೊರೆಯಿತು. 
* ಈ ಸಂಶೋಧನೆಗೆ ರಾಮನ್ ಪರಿಣಾಮ ಅಥವಾ ಬೆಳಕಿನ ಚದುರುವಿಕೆ ಎನ್ನುವರು. 

3.ಜುಲೈ -1: "ವೈದ್ಯರ ದಿನಾಚರಣೆ"
# ಡಾ. ಬಿಧಾನ್‌ ಚಂದ್ರರಾಯ್ ಗೌರವಾರ್ಧ ಈ ದಿನವನ್ನು ಆಚರಿಸಲಾಗುತ್ತದೆ.
#  ವೃತ್ತಿಯಲ್ಲಿ ಮಹಾನ್ ಸಾಧನೆ ಮಾಡಿದ ಬಿ.ಸಿ. ರಾಯ್ 1882 ಜುಲೈ 1 ಜನನ
* ಇವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸ್ವಾತಂತ್ರ್ಯ ಹೋರಾಟಗಾರರಾಗಿ ಸೇವೆ ಸಲ್ಲಿಸಿದ್ದಾರೆ. 

4.ಜೂನ್ - 29 : "ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನ"
# ಭಾರತದ ಸಂಖ್ಯಾಶಾಸ್ತ್ರ ಪಿತಾಮಹ ದಿ ಪ್ರಶಾಂತ್ ಚಂದ್ರ ಮಹಾಲನೋಬಿಸ್ ಅವರ ಜನ್ಮದಿನಾಚರಣೆ ಪ್ರಯುಕ್ತ ಕೇಂದ್ರ ಸರ್ಕಾರದ ಕೇಂದ್ರ ಸಂಖ್ಯಾಶಾಸ್ತ್ರ ಮತ್ತು ಯೋಜನಾ ಅನುಷ್ಠಾನ ಇಲಾಖೆ ರಾಷ್ಟ್ರೀಯ ಸಂಖ್ಯಾ ದಿನಾಚರಣೆಯಾಗಿ ಆಚರಣೆ ನಡೆಸುತ್ತಿದೆ . 

5. ಡಿಸೆಂಬರ್ - 22 : "ರಾಷ್ಟ್ರೀಯ ಗಣಿತ ದಿನಾಚರಣೆ" 
# ಖ್ಯಾತ ಗಣಿತಶಾಸ್ತ್ರಜ್ಞರಾದ ಶ್ರೀ ಶ್ರೀನಿವಾಸ ರಾಮಾನುಜಂರವರ 125 ನೇ ಜನ್ಮದಿನಾಚರಣೆ ( ಡಿ . 22 , 2011 ) ನೆನಪಿಗಾಗಿ ರಾಷ್ಟ್ರೀಯ ಗಣಿತ ದಿನವಾಗಿ ಡಿಸೆಂಬರ್ - 22 ನ್ನು ಆಚರಿಸಲಾಗುತ್ತಿದೆ ಮತ್ತು 2012 ನ್ನು ರಾಷ್ಟ್ರೀಯ ಗಣಿತ ವರ್ಷಾಚರಣೆ ಎಂದು ಆಚರಿಸಲಾಗುತ್ತಿದೆ.

No comments:

ಶ್ರೀ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ತಿಳಿಸಿ?

  ಶ್ರೀಮನು ಶ್ರೀಮಂನ್ ಮಹಾರಾಜಾಧಿರಾಜ ರಾಜಪರಮೇಶ್ವರ ಶ್ರೀ ವೀರಪ್ರತಾಪ ಶ್ರೀ ವೀರ ಕೃಷ್ಣರಾಯ ಮಹಾರಾಯರ ಆಸ್ಥಾನದಲ್ಲಿದ್ದ ಅಧಿಕಾರಿಗಳ ಹೆಸರುಗಳು ಶಾಸನಗಳಲ್ಲಿ ದೊರಕುತ್ತವೆ...